ಅಪ್ಪನೆಂಬೋ ಆಗಸ
ಕವಿತೆ ಅಪ್ಪನೆಂಬೋ ಆಗಸ ಯಾಕೊಳ್ಳಿ.ಯ.ಮಾ ಊರ ದೇವಿಯ ಆವಾಹಣೆಮೈಮೇಲೆ ಬಂದ ದಿನ ಊರಗೌಡರಿಗೆ,.ಯಜಮಾನರಿಗೆ,ಅಪ್ಪ‘ಏನರಲೆ ಮಕ್ಕಳ್ರಾ’ ಅಂತಿದ್ದದಿನವೆಲ್ಲಾ ಅವರ ಮುಂದೆಕೈಕಟ್ಟಿ ನಿಲ್ಲುತ್ತಿದ್ದ ಅಪ್ಪನ ,ದೇಹದೊಳಗೆಖಾಯಮ್ಮಾಗಿ ದೇವಿ ಬರಬಾರದೇಅಂದುಕೊಳ್ಳುತ್ತಿದ್ದೆ. ವಾದ್ಯಗ಼ಳ ಸಾಥು ನಡುವೆರಾಗ ತಗೆದುಹಾಡುತ್ತಿದ್ದಅಪ್ಪ, ಥೇಟ್ದೇವಲೋಕದ ಗಂಧರರ್ವನಂತೆಕಾಣಿಸುತ್ತಿದ್ದ ವರುಷವೆಲ್ಲಾ ಜೀತದಾಳಾಗಿದುಡಿವ ಅಪ್ಪ ಮನೆಗೆ ಬಂದೊಡನೆಮೈಮೇಲಿನ ಅರಿವೆಹೊರಗೆ ಕಳೆದು ನೀರಲ್ಲಿತೊಯ್ಯಿಸಿ ಒಳಗೆ ಬರುತ್ತಿದ್ದಆವರೆಗೆ ನಮ್ಮನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲಅರಿವೆ ಕಳೆದ ನಂತರ ನಮ್ಮಅಪ್ಪ ಅನಿಸುತ್ತಿತ್ತು ಕಾಣದೂರಿಗೆ ಅಕ್ಷರದ ಬಿಕ್ಷೆಎತ್ತಲು ನನ್ನ ಕಳಿಸಿ ಮಗಸಾಹೆಬನಾಗಿ ಬರುವಕನಸು ಕಾಣುತ್ತಿದ್ದ ಅಪ್ಪ ನನ್ನ ವಿದ್ಯೆಯ ಚಂದಾ ಕಟ್ಟಲುಕಂಡವರನ್ನೆಲ್ಲ ಹಣಕೇಳುತ್ತಿದ್ದುದನೆನಪಾಗಿ ಈಗ ಜೀವಜಲ್ಲೆನ್ನುತ್ತದೆ ನಾನು ಅಕ್ಷರದ ಅನ್ನ ಕಾಣುವಮೊದಲೇನಮ್ಮನ್ನು ಅನಾಥರನ್ನಾಗಿಸಿಅಪಗಪಕಾಣದೂರಿಗೆ ಪಯಣ ಬೆಳೆಸಿದುದುನೆನಪಾಗಿ ಕಣ್ಣುಹನಿಯೊಡೆಯುತ್ತವೆ








