ಚಿಕ್ಕುಡದಮ್ಮನ-ಗಿರಿ
ಕಾವ್ಯಯಾನ ಚಿಕ್ಕುಡದಮ್ಮನ-ಗಿರಿ ನೇತ್ರ ಪ್ರಕಾಶ್ ಹಲಗೇರಿ (ನನ್ನ ತವರೂರ ಬಳಿ ಇರುವ ಚಿಕ್ಕುಡದಮ್ಮನ ಗಿರಿಯ ಜೊತೆಗಿನ ಬಾಲ್ಯದ ನೆನಪುಗಳ ಮೆಲುಕು ಈ ಕವಿತೆ) ಅಂದು ಕಡೇ ಶ್ರಾವಣದ ಮಂಗಳವಾರಜಿಟಿ ಜಿಟಿ ಮುಸುಲಧಾರೆಯ ಹೊದಿಕೆಬದುಕಿಗೆ ವಿರಾಮ ಜನಸ್ತೋಮ ಆರಾಮಮಜ್ಜನ ಊರು- ಕೇರಿಯದು ಮಕ್ಕಳೊಂದಿಗೆ ಚಕ್ಕಡಿ, ಟ್ರೈಲರ್, ಟ್ರಾಕ್ಟರ್ ಅಲ್ಲಿಲ್ಲಿ ಕಾರುವ್ಯಾನ್ ಬೈಕ್ ಗಳು ಥರಾವರಿ ಒನಪು ಒಯ್ಯಾರಹೆಂಗೆಳೆಯರ ಒಗ್ಗಟ್ಟಿನ ರುಚಿಕಟ್ಟಿನಾ ಅಡುಗೆದನಕರು ಕಾಯುವ ಕಾವಲು ದೇವಿಯ ಹರಕೆಗೆ ಹರ್ಲಿಪುರ ಯೆಲೋದಳ್ಳಿ ಮದ್ಯೆ ಚಿಕ್ಕದೊಂದುಗಿರಿ ಸಾಲು ಅದರ ಮೇಲೊಂದು ಕಲ್ಲ ಗುಡಿಬಸವಾಪಟ್ನದಿಂದ ಯೆಕ್ನಳ್ಳಿವರೆಗೆ ಹಬ್ಬಿದ ಅರಾವಳಿಪರ್ವತ ನೆನಪಿಗೆ ತರುವ ತರುಲತೆಗಳ ಚಿಕ್ಕುಡ್ದ ಗುಡ್ಡವೆಂದರೂ ಬೆಟ್ಟದಂತೇ ಭಾವ ಅದಕ್ಕಾಗಿ ಏರಲೇಬೇಕು ತಾಯಿ ನೋಡಲು ಉಘೇ ಹಾಡಲುರಂಗು ರಂಗಿನ ಬಣ್ಣದುಡಿಗೆಗಳ ಚಿಟ್ಟೆಯೋಪಾದಿಯಲ್ಲಿಸಾಗುತಿರುವ ಸರದಿ ಮಂದಿ ಅಲ್ಲಿಲ್ಲ ಸಂದಿ ಗೊಂದಿ ಅಲ್ಲಿಂದ ಸುತ್ತಲೂ ವೀಕ್ಷಣೆ ಹಾಲಸ್ವಾಮಿ ದುರ್ಗಮ್ಮಪುಣ್ಯ ಸ್ಥಳದ ಗಿರಿವೃಂದ ಸೂಳೆಕೆರೆಯಿಂದ ಬರುವ ಥಳುಕುಬಳುಕಿನ ದೊಡ್ಡ ಚಾನಲ್ ಜೊತೆಗೆ ಮರಿ ಕಾಲುವೆ ಝರಿಸುತ್ತೆಲ್ಲ ಅಡಿಕೆ ಬಾಳೆ ತೆಂಗು ಕಂಗು ಭತ್ತ ಮುತ್ತುಗಳ ಐಸಿರಿ ಕೆಮ್ಮಣ್ಣಿನ ಕಾಲ್ದಾರಿಗಳ ಅಂಕುಡೊಂಕು ಬಳುಕು ಬೆಡಗಿಯಂತೆಅಕ್ಕಪಕ್ಕದ ಊರುಗಳ ವಿಹಂಗಮ ನೋಟ ಕಣ್ಮನ ಸೆಳೆತಸಾಲಾಗಿ ನಿಲ್ಲಿಸಿ ಮನುಷ್ಯರಿಗೆ ತೊಡಿಸಿದ ಬಿಳಿಯಂಗಿ ಕೆಂಪುಕರಿ ಟೋಪಿಯಂತೆ ಕಂಗೊಳಿಸುವ ವಿವಿಧ ಹೆಂಚಿನ ಮನೆಗಳು! ಗುಡ್ಡದ ತಪ್ಪಲಲ್ಲಿ ಖಾರಾ ಮಂಡಕ್ಕಿ ಮಿರ್ಚಿ ಬೋಂಡಾಒಗ್ಗರಣೆ ಘಮ ಇದರೊಂದಿಗೆ ಬೆಂಡು ಬತ್ತಾಸು ಜಿಲೇಬಿಮೈಸೂರು ಪಾಕ್ ರುಚಿ ಪೀಪಿ ಬಲೂನ್ ಬಾಲ್ ಕೊಳಲುಬಳೆ ಸರ ಕೇಣಿಯವರತ್ತ ಧಾಪುಗಾಲು ಅವನ್ನು ಬೇಗ ಕೊಳ್ಳಲು ದೇವಿ ದರ್ಶನ ಮುಗಿಸಿ ಹಿಂತಿರುಗುವಾಗ ಚಾನಲ್ ದಡದಲ್ಲಿಭೋಜನ ಅಲ್ಲಿ ಗಿಳಿ ಕೋಗಿಲೆಗಳ ಕೂಜನ ಜಿಬುರಿನ ಮಳೆಸ್ನಾನಬಾಳೆ ಎಲೆಯ ಆಸ್ವಾದ ರೊಟ್ಟಿ ಚಟ್ನಿ ಬುತ್ತಿ ಹಿಂಡಿ ಪಲ್ಯ ಪಚಡಿರವೆ ಉಂಡಿ ಕೇಸರಿಬಾತ್ ರಸದೌತಣ ಸುಖದೊರತೆಯ ಸಿಹಿ ತಾಣ… ***********************









