ಗಜಲ್
ಶ್ರೀರಾಮ ರಾವಣನನ್ನು ಸಂವಹರಿಸಿದ ದಿನ ಇದು
ಪೂರ್ವಜರನ್ನು ಮನೆ ಅಂಗಳಕ್ಕೆ ತರಿಸಿತು ಸಂಕ್ರಾಂತಿ
ಕಾವ್ಯ ಸಂಗಾತಿ ಉತ್ತರಾಯಣ ಡಾ. ನಿರ್ಮಲ ಬಟ್ಟಲ ಎಳ್ಳಷ್ಟು ಬಿಸಿ ತಾಪಏರಿಸಿನಿಂತರೂ ನೇಸರಈ ನಡು ಮಧ್ಯಾನದಲ್ಲಿಕೊರೆವ ಚಳಿಗೆನಿನ್ನ ಅಪ್ಪುಗೆಬೇಕೆನಿಸುತ್ತದೆ….! ಮರಕೆ ಹೊಸೆದುಕೊಂಡುಬಳ್ಳಿಯಂತೆ ಹೊಸೆದಬಿಸಿಯೂಸಿರಿನ ಬಿಸಿತಾಪವನೂ ಸೂರ್ಯನಿಗೂತಾಗಿಸಬೇಕೆನಿಸುತ್ತಿದೆ…..! ತುಟಿಗೆ ನೀನಿತ್ತ ಕುಸುರಿನಮುತ್ತುಗಳ ಸಿಹಿಯನುಎಳ್ಳುಬೆಲ್ಲದ ಜೊತೆಗೆ ಬೇರೆಸಿಸವಿಯಬೇಕೆನಿಸುತ್ತಿದೆ….! ಕಬ್ಬು ಕಡಲೆಯ ಬೀರಿಒಲವಿನ ನುಡಿಯಾಡಿಮುನಿಸ ಹೊರದೂಡಿತೆರೆದ ಬಾಹುಬಂಧದಿ ಸಂಬಂಧಗಳು ಅಪ್ಪಬೇಕೆನಿಸುತ್ತದೆ….! ಉತ್ತರಾಯಣಕೆ ಕಾಲಿಟ್ಟುಸೂರ್ಯ ನಮ್ಮಿಬ್ಬರನೂದೂರಮಾಡುವ ಮುನ್ನಚಳಿಯ ಸುಖವನುಕಂಬಳಿ ಹೊದ್ದುಅನುಭವಿಸಬೇಕಿದೆ…!
ಸಂಕ್ರಾಂತಿಗೊಂದು ಪ್ರಶ್ನೆ ದುಗುಡದ ಛಾಯೆ ಆವರಿಸಿದ ಚಿಂತೆಯ ಕಾವಳ ಹೊದ್ದ ಮನಕೆ ತರಬಹುದೇ ಸಂಕ್ರಾಂತಿ ನಿನ್ನಾಗಮನ ಹೊಸ ಚೈತನ್ಯದ ಶಾಖದ ಕಾವನು? ಜಡ್ಡು ಕಟ್ಟಿರುವ ಜೀವನ ಜಾಡ್ಯಕೆಋತು ಪರಿವರ್ತನೆಯ ಔಷಧಿಯೇ? ಹೇಮಂತನ ಮಬ್ಬು ಆಲಸ್ಯಕೆ ಮಾಗಿಯ ರೋಗಕೆ ನೀ ಮದ್ದೇ? ಪ್ರಕೃತಿಗಂತೂ ಈ ಭೂಮಿ ಪರಿಭ್ರಮಣೆನಿತ್ಯ ನೂತನ ಸಂಭ್ರಮ ತರುವ ಆವರ್ತನೆ ಏಕತಾನತೆಯ ಬೇಸರದ ಬದುಕಿಗೆ ನೀ ತರಬಹುದೇನು ಹೊಸ ಬದಲಾವಣೆ? ಬದುಕಿನಿಡೀ ನಡೆಯುತಿದೆ ಬವಣೆ ಕೃಷಿ ಬರಬಹುದೆ ಈಗ ಸಫಲತೆಯ ಸುಗ್ಗಿ? ಸಿಗುವುದೇ ಪರಿಶ್ರಮಕ್ಕೊಂದು ಬೆಲೆ ಬಾಳಪಯಣಕೊಂದು ಗಮ್ಯ ನೆಲೆ? ಕಾಯುತಲಿದೆ ಹೃದಯ ನೊಂದು ನಲುಗಿ ಮುದುಡಿ ಸೊರಗಿ ಬಳಲಿ ಬೆಂಡಾಗಿ ಮೊಗ್ಗಾದ ಭಾವಗಳ ಅರಳಿಸಬಹುದೇ ಎಂದು ಜರುಗಿ ನಿರೀಕ್ಷಿಸುತಲಿರುವ some ಕ್ರಾಂತಿ? ಸುಜಾತಾ ರವೀಶ್
ಸಂಕ್ರಾಂತಿಗೊಂದು ಪ್ರಶ್ನೆ Read Post »
ಗಜಲ್ ನೂರಅಹ್ಮದ ನಾಗನೂರ ಬೆಳ್ಳಿಯ ಮಂಜಿಗೆ ಚಿನ್ನದ ಜ್ವಾಲೆಗಳಿಂದ ವಿದಾಯ ಹೇಳುತ್ತೇನೆಗೋದಿಯ ಕಿವಿಯೋಲೆಗಳಿಂದ ಗದ್ದೆಯಲ್ಲಿ ಸಿಂಗರಿಸಿಕೊಳ್ಳುತ್ತೇನೆ ಮನದಲಿ ಶಾಂತಿ ನೆಲೆಸಿದೆ ಆಕಾಶದಲಿ ಸಂಕ್ರಾತಿ ಸಂಭ್ರಮಿಸಿದೆಮೂಡಗಾಳಿ ಹೊರಟಿದೆ ಗಾಳಿಪಟದೊಂದಿಗೆ ಹಕ್ಕಿ ಹಾರಿಸುತ್ತೇನೆ ಸೂರ್ಯನು ಉತ್ತರರಾಣಿ ಪೊಂಗಲ್ ಕಿಚಡಿ ದಕ್ಷಿಣಾದಿ ಭರಣಿನೆಲ ಜಲದಲಿ ಹರಿದು ಎಳ್ಳುಬೆಲ್ಲ ಹಸಿರಿನ ಕಾಂತಿ ತಿನಿಸುತ್ತೇನೆ ಹೂವುಗಳೊಂದಿಗಿನ ಗೆಳೆತನವು ಮುಳ್ಳುಗಳಿಗೆ ಶಿಕ್ಷೆಯಾಗಿಸಿದೆಭರವಸೆಯ ದೀಪವು ಬರುತಿರುವುದನ್ನು ನಾನು ನೋಡುತ್ತೇನೆ ದುಃಖದ ಹೃದಯಕೆ ಸುಖದೌಷಧ ಹೇಗಾದರೂ ತರಿಸಬಹುದುಬಿಸಿಲ ಹವೆಯಲ್ಲಿಯೂ ತಂಪ ಹವಾಗುಣದ ಸುಗ್ಗಿ ತರಿಸುತ್ತೇನೆ ನೂರ್ ಹೊಸಉತ್ಸಾಹ ತಂದಿತು ದೀಪೋತ್ಸವದ ಬೆಳಕು ಬೆಳಗಲಿಮೋಡವು ಹಾರಾಡುತಿವೆ ಸೌಂದರ್ಯದ ರಶ್ಮಿಗಳನು ತರುತ್ತೇನೆ
ಸಂಕ್ರಾಂತಿ ನಿರ್ಮಲಾ ಹೆಗಡೆ ದಿಶೆಯಿದೀ ಸಂಕ್ರಾಂತಿಯೊಸಗೆಯುಯಶವನೈತಂದಿರುತಿರೆ||ಕುಶದ ಅಂಚಿಗೆ ಮಿರುಗೆಯಿಬ್ಬನಿವಶಕೆ ಮರುಳಾಗೀ ಧರೆ|| ಪಥವ ಬದಲಿಸಿ ರವಿಯು ರಶ್ಮಿಯಗತಿಯ ಸಾರುವ ಭುವಿಯಲಿ|ಉತ್ತರಾಯಣ ಪರ್ವಕಾಲದಿಸುತ್ತ ಸಂತಸ ಸವಿಯಲಿ|| ನವ್ಯದೇಳಿಗೆ ಸಿರಿಯ ಸುಗ್ಗಿಯುದಿವ್ಯ ಷಡುರಸ ಧರಣಿಗೆ|ಭವ್ಯ ಬಾನಂಗಣದ ಚೆಲುವಿಕೆಕಾವ್ಯಸಂಚಯ ಭರಣಿಗೆ|| ಮಾಗಿ ಚಳಿಯನ್ನೋಡಿಸುವ ಬಗೆಬೀಗಿ ಸಂಭ್ರಮ ಮಕರಕೆ|ನೀಗಿ ಕಹಿಘಳಿಗೆಗಳ ಸಿಹಿಯನುಬಾಗಿ ಬಾಚುತ ಹಂಚಿಕೆ|| ತೂಗಿ ತೊನೆಯುವ ಹೊಂಗೆಗರಿಗಳುಕೋಗಿಲೆಯ ಸ್ವರದಿಂಚರ|ರಾಗದೊಲವಿಗೆ ತಾಳ ತಟ್ಟುವಭಾಗವಿದುವೇ ಸುಮಧುರ||
ಕಾವ್ಯ ಸಂಗಾತಿ ಹಾಯ್ಕುಗಳು ಸಂತೋಷ ಅಂಗಡಿ ನಿನ್ನುಸುರಿನ ಉಗಿತಾಗಿದ ಗಾಳಿಅಂಡಲೆಯುತಿದೆ ತಣ್ಣಗಾಗಲು ನೋವುಂಡಎದೆಗೆ ಸದ್ದಿಲ್ಲದೆಕಲ್ಲಾದ ಸಂಭ್ರಮ ವಿಷಾದದ ಕಣ್ಣುಗಳಲಿಸಂತ್ವಾನದಹನಿಗಳು ಹಾಡೊಂದುಜಾರಿತುಕಣ್ಣೊಳಗೆ ಕರಗಿ ಕಡಲ ದಂಡೆನಿನ್ನ ಒಲವುಅಲೆಯಾಗಿ ಅಪ್ಪಳಿಸುತಿದೆ ವಿರಹ ಕಲ್ಲಿನ ಬಂಡೆದುಬ್ಬದ ಮೇಲೆ ನಿದಾನಹೊತ್ತು ನಡೆಯುತ್ತಿದೆ ಆಮೆ ತೂಗು ಸೇತುವೆಯ ಕನಸುಕೆಳಗೆ ಹರಿಯುತಿರುನೀನು ನದಿಯಂತೆ ದುಗುಡವೆಲ್ಲಾ ದುಂಡುಗೂಡಿಸಿಬೊಗಸೆಯಲಿ ನುಂಗುವೆವಸಂತ ಬರಲಿ ಬಾಗಿಲಿಗೆ ಗರಿಕೆಯ ಮೊನಚಿಗೆತುಂಡಾಗದೆಅಪ್ಪಿದೆ ಇಬ್ಬನಿ ದಂಡೆಯಲಿತೆರೆಗಳ ಬುರುಗುಶಾಂತವೀಗ ಕಡಲು ಮತ್ತು ಒಡಲು.………………
ಕಾವ್ಯ ಸಂಗಾತಿ ಸವಿ ಸವಿ ಸಂಕ್ರಮಣ ಅರುಣಾ ರಾವ್ ಇರುವೆಗಳು ಸಾಲಾಗಿ ಬರುತಲಿವೆಯಿತ್ತಲೆಕಣದಲ್ಲಿ ಗೋಪುರದ ಬೆಳೆ ರಾಶಿಯತ್ತಲೇ ತಲೆ ಮೇಲೆ ಗಂಗಮ್ಮನ ಹೊತ್ತ ಭೂಮಿ ಒಕ್ಕಲುಕೋಲೆ ಬಸವಣ್ಣನನ್ನು ಹಿಡಿದಿರುವ ಹೈಕಳು ಕರಡಿಯನು ಬೀದಿಗಳಲಿ ಕುಣಿಸುತ್ತ ತಕತಕಬರುತಲಿದೆ ಸುಗ್ಗಿ ಕಾಲ ನಲಿವೀನ ಥೈತಕ ಕಣಿ ಹೇಳುವ ಕೊರವಂಜಿ ಬಾಗಿಲಲ್ಲಿ ನಿಂತಿರೆಬಳೆಗಾರ ಚೆನ್ನಯ್ಮ ಮಲ್ಹಾರವ ಇಳುಕಿರೆ ಕಣಗಳಲಿ ಕೋಲಾಟ ಬಯಲಾಟದ ಸಂಭ್ರಮಗೆಣಸು ಕಬ್ಬು ಸೊಗಡವರೆ ಕಂಪದು ಘಮಘಮ ಕಡಲೆ ಕಾಳು ಎಳ್ಳು ರಾಗಿ ಧಾನ್ಯಗಳ ರಾಶಿಪ್ರಸವದಲ್ಲೂ ನಗುವ ಇಳೆಯು ನಿತ್ಯ ಷೋಡಶಿ ಮನೆಗಳಿಗೆ ತೆರತೆರಳಿ ಎಳ್ಳುಬೆಲ್ಲ ಬೀರೊ ಕಾತರಕೋಪ ದ್ಚೇಷ ವೈಷಮ್ಯಗಳ ಓಡಿಸುವ ಸಡಗರ ಮೃಗಪಕ್ಷಿಗಳಿಗೂ ಕೂಢ ಬಂದಿತಿದೋ ಸಂಕ್ರಾಂತಿ ಸಮೃದ್ಧಿ ಸಂತೃಪ್ತಿ ಸಂಬಂಧ ಸಂಗಮದ ಉತ್ಕ್ರಾಂತಿ
You cannot copy content of this page