ಉತ್ತರಾಯಣ
ಕಾವ್ಯ ಸಂಗಾತಿ ಉತ್ತರಾಯಣ ಡಾ. ನಿರ್ಮಲ ಬಟ್ಟಲ ಎಳ್ಳಷ್ಟು ಬಿಸಿ ತಾಪಏರಿಸಿನಿಂತರೂ ನೇಸರಈ ನಡು ಮಧ್ಯಾನದಲ್ಲಿಕೊರೆವ ಚಳಿಗೆನಿನ್ನ ಅಪ್ಪುಗೆಬೇಕೆನಿಸುತ್ತದೆ….! ಮರಕೆ ಹೊಸೆದುಕೊಂಡುಬಳ್ಳಿಯಂತೆ ಹೊಸೆದಬಿಸಿಯೂಸಿರಿನ ಬಿಸಿತಾಪವನೂ ಸೂರ್ಯನಿಗೂತಾಗಿಸಬೇಕೆನಿಸುತ್ತಿದೆ…..! ತುಟಿಗೆ ನೀನಿತ್ತ ಕುಸುರಿನಮುತ್ತುಗಳ ಸಿಹಿಯನುಎಳ್ಳುಬೆಲ್ಲದ ಜೊತೆಗೆ ಬೇರೆಸಿಸವಿಯಬೇಕೆನಿಸುತ್ತಿದೆ….! ಕಬ್ಬು ಕಡಲೆಯ ಬೀರಿಒಲವಿನ ನುಡಿಯಾಡಿಮುನಿಸ ಹೊರದೂಡಿತೆರೆದ ಬಾಹುಬಂಧದಿ ಸಂಬಂಧಗಳು ಅಪ್ಪಬೇಕೆನಿಸುತ್ತದೆ….! ಉತ್ತರಾಯಣಕೆ ಕಾಲಿಟ್ಟುಸೂರ್ಯ ನಮ್ಮಿಬ್ಬರನೂದೂರಮಾಡುವ ಮುನ್ನಚಳಿಯ ಸುಖವನುಕಂಬಳಿ ಹೊದ್ದುಅನುಭವಿಸಬೇಕಿದೆ…!









