ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸವಿ ಸವಿ ಸಂಕ್ರಮಣ

ಕಾವ್ಯ ಸಂಗಾತಿ ಸವಿ ಸವಿ ಸಂಕ್ರಮಣ ಅರುಣಾ ರಾವ್ ಇರುವೆಗಳು ಸಾಲಾಗಿ ಬರುತಲಿವೆಯಿತ್ತಲೆಕಣದಲ್ಲಿ ಗೋಪುರದ ಬೆಳೆ ರಾಶಿಯತ್ತಲೇ ತಲೆ ಮೇಲೆ ಗಂಗಮ್ಮನ ಹೊತ್ತ ಭೂಮಿ ಒಕ್ಕಲುಕೋಲೆ ಬಸವಣ್ಣನನ್ನು ಹಿಡಿದಿರುವ ಹೈಕಳು ಕರಡಿಯನು ಬೀದಿಗಳಲಿ ಕುಣಿಸುತ್ತ ತಕತಕಬರುತಲಿದೆ ಸುಗ್ಗಿ ಕಾಲ ನಲಿವೀನ ಥೈತಕ ಕಣಿ ಹೇಳುವ ಕೊರವಂಜಿ ಬಾಗಿಲಲ್ಲಿ ನಿಂತಿರೆಬಳೆಗಾರ ಚೆನ್ನಯ್ಮ ಮಲ್ಹಾರವ ಇಳುಕಿರೆ ಕಣಗಳಲಿ ಕೋಲಾಟ ಬಯಲಾಟದ ಸಂಭ್ರಮಗೆಣಸು ಕಬ್ಬು ಸೊಗಡವರೆ ಕಂಪದು ಘಮಘಮ ಕಡಲೆ ಕಾಳು ಎಳ್ಳು ರಾಗಿ ಧಾನ್ಯಗಳ ರಾಶಿಪ್ರಸವದಲ್ಲೂ ನಗುವ ಇಳೆಯು ನಿತ್ಯ ಷೋಡಶಿ ಮನೆಗಳಿಗೆ ತೆರತೆರಳಿ ಎಳ್ಳುಬೆಲ್ಲ ಬೀರೊ ಕಾತರಕೋಪ ದ್ಚೇಷ ವೈಷಮ್ಯಗಳ ಓಡಿಸುವ ಸಡಗರ ಮೃಗಪಕ್ಷಿಗಳಿಗೂ ಕೂಢ ಬಂದಿತಿದೋ ಸಂಕ್ರಾಂತಿ ಸಮೃದ್ಧಿ ಸಂತೃಪ್ತಿ ಸಂಬಂಧ ಸಂಗಮದ ಉತ್ಕ್ರಾಂತಿ

ಸವಿ ಸವಿ ಸಂಕ್ರಮಣ Read Post »

ಕಾವ್ಯಯಾನ

ಬದುಕೊಂದು ಖಾಲಿ ಹಾಳೆ

ಕಾವ್ಯ ಸಂಗಾತಿ ಬದುಕೊಂದು ಖಾಲಿ ಹಾಳೆ ಒಲವು ಬದುಕೊಂದುಬರಿದೆ ಖಾಲಿ ಹಾಳೆಬರೆಯದೇ ಬಿಟ್ಟಖಾಲಿ ಹಾಳೆ ಇಷ್ಟದ ಹೂ ಒಂದನುಚಿತ್ರಸಬಹುದುಮೆಚ್ಚುಗೆಯ ಬಣ್ಣವನ್ನೇಅದರಕ್ಕೆ ತುಂಬಬಹುದು ಒಲವಿನ ಅಕ್ಷರಗಳನ್ನೇಪೋಣಿಸಬಹುದುಹಿಡಿಸಿದ ಕವಿತೆಗಳಿಗಷ್ಟೇಜೀವ ನೀಡಬಹುದು ನಿಲುವಿನ ದಾರಿಗಳಲ್ಲೇನಡೆಯಬಹುದುಬೇಕೆಂದ ಗುರಿಗಳಿಗಷ್ಟೇಗರಿ ಮೂಡಿಸಬಹುದು ಆದರಿಲ್ಲಿ,ಮಾಯಾವಿ ಚಿತ್ರವೊಂದುಮೈದಳೆಯಬಹುದುಬೇಡದ ಕವಿತೆಯೊಂದುಕಾಡಬಹುದುಕಾಣದ ದಾರಿಯೊಂದುಕೈ ಹಿಡಿಯಬಹುದು ಬದುಕೊಂದು ಬರಿದೆಖಾಲಿ ಹಾಳೆಬರೆಯದೇ ಬಿಟ್ಟಖಾಲಿ ಹಾಳೆ….

ಬದುಕೊಂದು ಖಾಲಿ ಹಾಳೆ Read Post »

ಕಾವ್ಯಯಾನ

ಭೂಸಿರಿಯು ಮುಗಿಲ ಮಾಳಿಗೆಯಲಿಮೋಡವೊಂದು ಗೂಡು ಕಟ್ಟಿದೆಭೂವನದಲಿ ಶೃಂಗಾರದಿಂದಲಿನವಿಲ ನಾಟ್ಯವು ಮುದವ ನೀಡಿದೆ ತುಂತುರು ಹನಿಯಲಿಘಮ್ಮನೆಂದಿದೆ ಭೂವಾಸನೆಗಂಡು ನವಿಲು ರೆಕ್ಕೆಯ ಬಿಚ್ಚಿತಾನು ಕುಣಿದಿದೆ ಕಾಮನೆ ಹಸಿರ ಮೈಸಿರಿಯು ಎಲ್ಲೆಡೆರಮ್ಯಕಾಲದ ವೈಭವಬಾನು ಭುವಿಯಲಿಎಂಥದಿದೋ ಆಕರ್ಷಣಾ ಚೈತ್ರ ಚಿಗುರಲಿ ಕೋಗಿಲೆಗಾನಮಾವು ತೆಂಗಿನ ರಸದೌತಣಪ್ರಕೃತಿ ಮಾತೆಯ ಮಡಿಲು ತುಂಬಿದೆವಿವಿಧ ಹೂಗಳು ಅರಳಿ ನಿಂತಿವೆ ಭೂಸಿರಿಯ ಒಡಲು ಮಾಗಿದೆಮೋಡದಂಚಿನ ಹನಿಗಳಿಂದಕಾವ್ಯರಸವು ಹರಿದಿದೆಹಸಿರ ವನದ ಸೆರಗಿನಿಂದ ದೀಪಿಕಾ ಚಾಟೆ

Read Post »

You cannot copy content of this page

Scroll to Top