ವ್ಯಾಲಂಟೈನ್ ವಿಶೇಷ ಸಹಜ ಪ್ರೇಮ ದೇವರಾಜ್ ಹುಣಸಿಕಟ್ಟಿ. ಅವಳದು ನನ್ನದು ಅಮರಪ್ರೇಮ ಅಲ್ಲವೇ ಅಲ್ಲ..ಕಾರಣ ಅವಳಿಗಾಗಿ ನಾನುಗೋರಿ ಕಟ್ಟಲಿಲ್ಲ..ವಿಷ ಉಣಿಸಲಿಲ್ಲ ಉಣ್ಣಲಿಲ್ಲ..ಇನ್ನು ಗೋಡೆ ಕಟ್ಟುವಬಾದಶಾಗಳು ಇರಲೇ ಇಲ್ಲಾ… ತಿಂಗಳಿಗೊಮ್ಮೆ ಅವಳಹೆಜ್ಜೆಗಳು ಭಾರವಾಗುತ್ತವೆ..ಆಗೆಲ್ಲ ಮನೆಯ ತುಂಬಾನನ್ನದೇ ಕಾರುಬಾರು..ಉಪ್ಪು ಹುಳಿ ಹೆಚ್ಚು ಕಡಿಮೆಆಗಿರುವ ಅನ್ನ ಸಾಂಬಾರು…ನನ್ನಂತಲ್ಲ ಅವಳು ಉಂಡು ಬಿಡುತ್ತಾಳೆತುಟಿಪಿಟಕ್ ಅನ್ನದೇ ಬಿಡದೇ ಚೂರು… ಮುನಿಸು ಬರುತ್ತೆ ಆಗಾಗ ಸಂತೆಯಲ್ಲಿಜೊತೆಯಾದ ಅಪರಿಚಿತ ಗೆಳೆಯನಂತೆಕಾರಣ ತುಸು ಹೊತ್ತಾಗಿ ರಾತ್ರಿ ಬಾರಿಂದ ಮರಳಿದ್ದು..ತುಸು ನಶೆ ಹೆಚ್ಚಾಗಿ ಪೆಚ್ಚುಪೆಚ್ಚಾಗಿ ಮಾತನಾಡಿದ್ದು..ತುಸು ಸಿಗರೇಟಿನ ಹೋಗೆಹೆಚ್ಚಾಗಿ ಉಸಿರಿದ್ದು….ಇದು ಹೆಚ್ಚೊತ್ತು ಇರದುಮತ್ತೆ ಅಪರಿಚಿತ ಗೆಳೆಯನಂತೆಯೇ ಕಾಣೆಯಾಗಿ ಬಿಡುತ್ತೆ ಸದ್ದಿಲ್ಲದಂತೆ… ಇರುಳು ಕಳೆದು ಹಗಲು ಹೊರಳುವಮುನ್ನ ಕರಗಿ ಮಂಜಿನಹನಿಯಂತೆ..ಮುಡಿಗೆ ಏರಿದ ಹಿಡಿ ಮಲ್ಲಿಗೆ…ಇಲ್ಲಾ ಒಂದ್ ಸಣ್ಣ ಬಿಗಿ ಅಪ್ಪುಗೆಸಾಕಿಷ್ಟೇ ಕಾರಣ ಅದಕೆ…ಅವಳು ಹೂವಾಗುತ್ತಾಳೆ ನಾನುದುಂಬಿ ಹೆಚ್ಚೇನು ಹೇಳಲಿ…ನಮ್ಮದು ಅಮರ ಪ್ರೇಮವಲ್ಲ..ಪ್ರೀತಿಯನೇ ಉಸಿರಾಡುವಂತೆಮಾಡಿದ್ದೇವೆ ಅಷ್ಟೇ…ಇಂಚಿಂಚು ತುಂಬಿದ್ದೇವೆ ಒಳಗೂ ಹೊರಗೂ ನಿಷ್ಠೆಯಿಂದ ಇಷ್ಟಿಷ್ಟೇ…ಹೊರಗೆ ಹೋಗಿ ಬರುವಾಗಲೆಲ್ಲ ಅವಳ ಕಂಗಳಲ್ಲಿಯ ಕಾಂತಿಯನ್ನೆ ಕನ್ನಡಿಯಾಗಿಸಿಕೊಂಡವ ನಾನುನನ್ನ ಮುಖಾರವಿಂದವನ್ನೇ ಮನೆಯ ಹೊಸ್ತಿಲ ಬೆಳೆದಿಂಗಳಾಗಿಸಿಕೊಂಡವಳು ಅವಳು..ಜೀವನದ ಸಂತೆಯಲಿ..ದಿನಗಳು ಸರಿದಿವೆ ಸದ್ದಿಲ್ಲದೆ ಮಗ್ಗುಲಲಿ…ಮತ್ತೆ ಹೇಳುತ್ತೇನೆ ನಮ್ಮದು ಅಮರ ಪ್ರೇಮವಲ್ಲ ಬಿಡಿ…ಒಂದಿಷ್ಟು ಪ್ರೀತಿ ಉಸಿರಿದ್ದೇವೆ ಹಗಲಿರುಳಿಡಿ… ನೆನಪಿದೆ ನನಗೆ ಮೊನ್ನೆ-ಮೊನ್ನೆ ಎನ್ನುವಹಾಗೆಆಗಸದ ಚಂದಿರನ ತಂದು ತೊಟ್ಟಿಲಲಿ ಇಟ್ಟಿದ್ದಾಳೆ…ನಕ್ಷತ್ರತಾರೆಗಳ ತೋರಿಸಿ ಉಣಿಸಿದ್ದಾಳೆ…ವಿಶ್ವ ವಿದ್ಯಾಲಯಗಳ ಮೀರಿದತಂದೆ ಎಂಬ ಪದವಿ ತಂದುನಿರಾಯಾಸವಾಗಿ ಮುಡಿಗೆರಿಸಿದ್ದಾಳೆ..ಅದಕ್ಕೆ ಅವಳು ವಿಶ್ವ ವಿದ್ಯಾಲಯನಾನು ನಿಷ್ಠೆಯ ವಿದ್ಯಾರ್ಥಿ…ಈಗಲೂ ಹೇಳುತ್ತೇನೆ ನಮ್ಮದುಅಮರ ಪ್ರೇಮ ಅಲ್ಲವೇ ಅಲ್ಲ….ಸಹಜ ಪ್ರೇಮ ಅಷ್ಟೇ..ನಾನು ಅವಳು ಬೆರೆತಿದ್ದೇವೆಎಷ್ಟೆಂದು ಗೊತ್ತೇ?ಹೆಚ್ಚೇನು ಅಲ್ಲ ಬರೀ ಒಂದಿಷ್ಟುಇಳಿ ಸಂಜೆಯಲಿಹಗಲು- ಇರುಳು ಬೆರೆತಂತೆ.. !!!ಕಣ್ಣು ರೆಪ್ಪೆಯನಗಲಿ ಇರದಂತೆ… !!!ಅಷ್ಟೇ ನಮ್ಮದು ಅಮರ ಪ್ರೇಮ ಅಲ್ಲವೇ ಅಲ್ಲ…ಪ್ರೀತಿಯನೆ ಉಸಿರಾಡಿದ್ದೇವೆ ಇಷ್ಟಿಷ್ಟೇ… ( ನಾವೂ ಹಿಂಗ್ ಅಂತಾ ಅನಿಸಿದ್ರೆ ಕವಿತೆ ಗೆದ್ದಂಗ್ ನೋಡ್ರಿ ) ದೇವರಾಜ್ ಹುಣಸಿಕಟ್ಟಿ.
ವ್ಯಾಲಂಟೈನ್ ವಿಶೇಷ ಪ್ರೇಮಾಂಕುರ ಮಾಜಾನ್ ಮಸ್ಕಿ ಜಗವೆಲ್ಲ ಪ್ರೇಮಲೋಕದಲ್ಲಿ ತೇಲಾಡಿದೆವರವೋ ಶಾಪವೋ ನಗು- ಅಳುವಿನಲಿ ನಲಿದಿದೆಯಾರಿಗೂ ಬಿಡದ ಬಾಧೆ ನೊಂದು ಬೆಂದಿದೆಪ್ರೇಮ ಬೆಂಕಿಯಲ್ಲಿ ಅರಳಿ ಹೂವಾಗಿದೆ ನಿನ್ನೊಲವ ಪೂಜೆಯೋಳು ಬೆರೆತುಪ್ರತಿನಿತ್ಯ ಶುಭ ಆಶಯ ಕೋರುತಪರಾಕಾಷ್ಠೆ ಮೀರಿ ಆಸೆ ಚಿಮ್ಮುತಪ್ರೇಮಿಗಳ ಕಾಯುವಿಕೆಗೆ ಹೆಮ್ಮೆ ಪಡುತ ಮೋಸದ ಸೋಂಕಿಲ್ಲದ ನಿಷ್ಕಾಮ ಆತ್ಮ ಸಂಗಾತನೇನಿನ್ನೊಲವ ಪೂಜೆಯೋಳು ಬೆರೆತೆಹೃದಯ ಚುಂಬಕ ಮಂದಾರ ಅರಳಿದೆತನು ಮನ ಬಿಗಿದಪ್ಪಿದ ಒಲವಿನಲಿ ಕೊನೆ ಉಸಿರ ಘಳಿಗೆಯಲ್ಲೂ ಬಯಸುತ್ತಿದೆನಿನ್ನೊಲವ ಸ್ಪರ್ಶ ಚೇತರಿಸಿದೆಹೃದಯ ಬಡಿತ ಕುಗ್ಗುತ್ತಿದೆನೀರಾಳತೆಯಲ್ಲಿ ಉಸಿರಾಡಬಾರದೇಕೆ….
ವ್ಯಾಲಂಟೈನ್ ವಿಶೇಷ ಗಜಲ್ ಭಾರತಿ ರವೀಂದ್ರ ಕವಿತೆ ಬರೆಯಲು ಹೊರಟುಕಥೆಯಾಗಿ ಬಂದೆಯಲ್ಲ ನೀನುಮಮತೆ ಮೆರೆಯಲು ಪ್ರೀತಿಯಸನಿಹಕೆ ತಂದೆಯಲ್ಲ ನೀನು ಚಳಿಯ ಗಾಳಿ ಬೀಸಲುಬಿಸಿ ಅಪ್ಪುಗೆ ಬೇಕಾಯಿತೆ ಹೇಳುಸ್ನೇಹದ ಛಾಯೆ ಆವರಿಸಿಮನದಲ್ಲಿ ಬೆಂದೆಯಲ್ಲ ನೀನು ರವಿಯು ಕಾಣುವ ಕನಸಿಗೆಮೋಡ ಅಡ್ಡಿಯಾಯಿತು ನೋಡುಕವಿಯ ಅಂತರಂಗದ ನಗೆಅರಳಿಸಿ ನಿಂದೆಯಲ್ಲ ನೀನು ಸಿಹಿ ಮಾತಿನ ಮೋಡಿಯುನೋವ ಹಗುರವಾಗಿಸಿದೆ ಗೆಳೆಯಹೊಸ ಆಸೆಯಗಳ ಹೊತ್ತುಕಹಿ ಕ್ಷಣವ ಕೊಂದೆಯಲ್ಲ ನೀನು ಸೂರ್ಯ ರಶ್ಮಿಯು ಹೊಂಬೆಳಕನುಮೂಡಿಸಿದೆ ನವ ಬಾಳಿಗೆಆರ್ಯ ಪುತ್ರನ ನೆನಪಿನಲ್ಲಿದಿನವೂ ಮಿಂದೆಯಲ್ಲ ನೀನು.









