ಅನುರಾಧಾ ಶಿವಪ್ರಕಾಶ್ ಕವಿತೆ-ಕವಿತೆ ನಗುತ್ತದೆ
ಕಾವ್ಯಸಂಗಾತಿ ಕವಿತೆ ನಗುತ್ತದೆ ಅನುರಾಧಾ ಶಿವಪ್ರಕಾಶ್ . ಎದೆಯ ತುಂಬಿದ ಮಾತುಗಳುಭಾವಗಳು ಉಕ್ಕಿಸಿ ಹರಿದಾಗಖಾಲಿ ಹಾಳೆಯಲಿ ಪ್ರಸವಿಸಿಮಡಿಲ ಮಗುವ ಕಂಡಂತೆಗರ್ವ ಪಟ್ಟುಕೊಂಡಾಗಲೆಲ್ಲಾನನ್ನ ಕವಿತೆ ನಗುತ್ತದೆ ಯಾರದೋ ಗತ ಜೀವನ್ದ ಚರಿತ್ರೆಯಾರದೋ ನಿತ್ಯ ನೋವಿನ ಕತೆಇನ್ಯಾರದೋ ನಲಿವಿನ ಚಿಲುಮೆಸಾಲುಗಟ್ಟಲೆ ಬರೆದು ಎಸೆದಾಗಭಾವ ತುಂಬಿದೆನೆಂಬ ಹಮ್ಮಿನಲಿನನ್ನ ಕವಿತೆ ನಗುತ್ತದೆ ಭಾವ ಭಾರವನೆಲ್ಲಾಇಳಿಸಿ ಹಾಯಾಗಿಹಗುರಾಗಿ ಮನ ಹೂವಾಗಿಆನಂದದಮಲಿನಲಿ ತೇಲುತಿರೆಇನ್ಯಾರದೋ ನಾಲಿಗೆಗೆಅಗ್ಗದ ಸರಕಾದಾಗಲೂನನ್ನ ಕವಿತೆ ನಗುತ್ತದೆ ಕಟ್ಟೆಯೊಡದ ಭಾವಗಳೆಲ್ಲಾಕೊನೆಗೊಮ್ಮೆ ಮರಳಿ ಬಂದುಮತ್ತದೇ ನನ್ನದೇ ಲೇಖನಿಯಕೈಗೆತ್ತಿಕೊಂಡಾಗ …….ಆಹಾ!! ಅದೆಂತ ಅನುಭೂತಿ!!ನನ್ನದೇ ಭಾವಗಳು ಪದಕಿಳಿದಾಗನನ್ನದೇ ಕವಿತೆ ನನ್ನೊಡನೆ ನಗುತ್ತದೆ
ಅನುರಾಧಾ ಶಿವಪ್ರಕಾಶ್ ಕವಿತೆ-ಕವಿತೆ ನಗುತ್ತದೆ Read Post »









