ಹುಳಿಯಾರ್ ಷಬ್ಬೀರ್-ಗಜಲ್
ಕಾವ್ಯ ಸಂಗಾತಿ ಗಜಲ್ ಹುಳಿಯಾರ್ ಷಬ್ಬೀರ್ ಎಷ್ಟೊಂದು ನೋವಿದ್ದರೂ ಅಮೃತ ನೀಡಿದೆ ಗಾಲಿಬ್ನೋವಲ್ಲೂ ನಲಿವಿನ ಹಿಮ್ಮತ್ ಬಂದಿದೆ ಗಾಲಿಬ್ ನೀ ನನ್ನೊಡನಿದ್ದರೆ ಗಜಲ್ ಗಳ ಮಳೆ ಬಂದಂತೆಪ್ರತಿ ಹನಿಯೂ ಖುದಾನ ದುವಾ ತಂದಿದೆ ಗಾಲಿಬ್ ನಿನ್ನ ಪ್ರತಿ ಪದವು ಸಾಕಿಯಂತೆ ನಶೆಯೇಬೆಹೋಶ್ ಆಗದೆ ಹೋಶ್ ನ ಜನ್ನತ್ ಸಿಕ್ಕಿದೆ ಗಾಲಿಬ್ ಇನ್ನೇನು ಬೇಕು ನನಗೆ ಆವಾಹಿಸಿಕೊಂಡಿರುವೆ ಹಾಗೆಬದುಕನ್ನು ಬದುಕಾಗಿಸಿ ಬದುಕುವ ಇಮಾನ್ ಬಂದಿದೆ ಗಾಲಿಬ್ ಷಬ್ಬೂವಿನ ಮನಸಿಗೊಂದು ಅಸ್ಮಿತೆಯ ಆಹ್ವಾನ ಸಿಕ್ಕಿದಂತೆಪ್ರತಿ ಶೇರಿಗೂ ಯಾದ್ನ ದಾದ್ ಮುಟ್ಟುತ್ತಲಿದೆ ಗಾಲಿಬ್.
ಹುಳಿಯಾರ್ ಷಬ್ಬೀರ್-ಗಜಲ್ Read Post »









