ವಾಣಿ ಯಡಹಳ್ಳಿಮಠ ಗಜಲ್
ಕಾವ್ಯಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ನನ್ನ ರಾತ್ರಿಗಳಿಗೀಗ ನಿನ್ನನುಕನಸಾಗಿಸುವ ಖಯಾಲಿಯೇ ಇಲ್ಲಈ ಕಂಗಳಿಗೀಗ ಮಿಥ್ಯ ನೋಟಸವಿಯುವ ಖಯಾಲಿಯೇ ಇಲ್ಲ ನಿನ್ನನೇ ಬಯಸಿ ಬಡಿದುಕೊಳ್ಳುವಎದೆಯೊಂದಿತ್ತು ನನ್ನಲಿನನ್ನೀ ಉಸಿರಿಗೀಗ ನಿನ್ಹೆಸರುಉಸುರುವ ಖಯಾಲಿಯೇ ಇಲ್ಲ ಪ್ರತಿ ಪದ್ಯದಲ್ಲಿಯೂ ನೀಇಣುಕುತಿದ್ದುದು ನಿಜವೇ ಸಾಕಿನನ್ನಕ್ಷರಗಳಿಗೀಗ ಕರಗಿದ ಕಂಬನಿಕೊರೆಯುವ ಖಯಾಲಿಯೇ ಇಲ್ಲ ಹೃದಯದ ಮೂಲೆ ಮೂಲೆಯೂರೋಧಿಸಿ ನೆತ್ತರು ಹರಿಸುತಿದೆಮತ್ತೊಮ್ಮೆ ಮನಸ್ಸಿಗೀಗ ಒಡೆದುಚೂರಾಗುವ ಖಯಾಲಿಯೇ ಇಲ್ಲ ನೆನಪಿನಲಿ ಹಾಗೆಯೇ ನಿನ್ನನುನೇವರಿಸುತಿದ್ದಳು ‘ವಾಣಿ ‘,,ಸತ್ತ ಕ್ಷಣಗಳನ್ನೀಗ ಮರಳಿಸಿಂಗರಿಸುವ ಖಯಾಲಿಯೇ ಇಲ್ಲ … ———————– ವಾಣಿ ಯಡಹಳ್ಳಿಮಠ
ವಾಣಿ ಯಡಹಳ್ಳಿಮಠ ಗಜಲ್ Read Post »









