ಮನ್ಸೂರ್ ಮುಲ್ಕಿ ಮೋಡದ ಮಳೆ
ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ ಮೋಡದ ಮಳೆ ಕೋಗಿಲೆ ನೀನು ಹಾಡುವಾಗಮಾತುಗಳೆಲ್ಲ ಮೌನವುನವಿಲೇ ನೀನು ನಲಿಯುವಾಗರೆಪ್ಪೆಯು ಕೂಡ ಮುಚ್ಚದು. ಚಂದಿರನೇ ನೀನು ಕಾಣುವಾಗಸೂರ್ಯನು ಕೂಡ ನಾಚುವನುಬೆಳಕೆ ನೀನು ತೋರುವಾಗಕತ್ತಲೆ ಕೂಡ ಕರಗುವುದು. ಸರಸರ ಗಾಳಿಯು ಬೀಸುವಾಗತೇಲಿದ ಅನುಭವ ಆಗುವುದುಮೋಡದ ಮಳೆಯಲಿ ನೆನೆಯುವಾಗಕಿರುನಗೆ ಮನದಲಿ ಮೂಡುವುದು. ಸಂಜೆಯ ಸೂರ್ಯನು ಮುಳುಗುವಾಗಚುಕ್ಕಿಗಳೆಲ್ಲ ಹೊರಡುವುದುಲಂಗರು ಹಾಕಿದ ಹಡಗುಗಳೆಲ್ಲಪಳಪಳ ಹೊಳೆಯುತ ತೇಲುವುದು. ಮನ್ಸೂರ್ ಮುಲ್ಕಿ
ಮನ್ಸೂರ್ ಮುಲ್ಕಿ ಮೋಡದ ಮಳೆ Read Post »









