ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ರತ್ನರಾಯಮಲ್ಲ ಅವರ ಗಜಲ್

ಕಾವ್ಯ ಸಂಗಾತಿ ರತ್ನರಾಯಮಲ್ಲ ಗಜಲ್ ನೀ ಸಾಗಿದ ದಾರಿಯು ಸುಲಭವಾಗಿ ಇರಲಿಲ್ಲ ಗಾಲಿಬ್ನಿನ್ನ ಮನದ ತೊಳಲಾಟ ಸರಳವಾಗಿ ಇರಲಿಲ್ಲ ಗಾಲಿಬ್ ಕಂಬನಿಯಲೂ ಗಜಲ್ ರಚಿಸಿದ ಮಹಾ ಕಲಾಕಾರ ನೀನುಅಶಾಂತಿಯಲಿ ಬದುಕು ಸುಂದರವಾಗಿ ಇರಲಿಲ್ಲ ಗಾಲಿಬ್ ವ್ಯಥೆಯೊಳಗೆ ವ್ಯಂಗ್ಯವಿಟ್ಟು ನಕ್ಕ ಪರಿ ನಾ ಮರೆಯಲಿ ಹೇಗೆಹೊರ ಜಗತ್ತಿಗೆ ನಿನ್ನ ನಗು ಸಹಜವಾಗಿ ಇರಲಿಲ್ಲ ಗಾಲಿಬ್ ಮಲ್ಲಿಗೆಯ ಸುಮ ಕಾಯುತಲೆ ಇತ್ತು ಅವಸರ ಮಾಡಿದೆಎದೆಯಲಿ ನೀನಿಟ್ಟ ಹೆಜ್ಜೆ ನಿಧಾನವಾಗಿ ಇರಲಿಲ್ಲ ಗಾಲಿಬ್ ಮರಣವನ್ನೂ ಮೀರಿದ ಚಿರಂಜೀವಿ ನೀ ಮಲ್ಲಿ ಮನದಲಿನೀ ನಡೆಸಿದ ಹೋರಾಟ ಖಚಿತವಾಗಿ ಇರಲಿಲ್ಲ ಗಾಲಿಬ್ ರತ್ನರಾಯಮಲ್ಲ

ರತ್ನರಾಯಮಲ್ಲ ಅವರ ಗಜಲ್ Read Post »

ಕಾವ್ಯಯಾನ

ಸಂತೆಬೆನ್ನೂರು ಫೈಜ್ನಟ್ರಾಜ್ “ನನ್ನ ಶಿವ”

ಕಾವ್ಯ ಸಂಗಾತಿ ಸಂತೆಬೆನ್ನೂರು ಫೈಜ್ನಟ್ರಾಜ್ “ನನ್ನ ಶಿವ” ಹಸಿರು ಗರಿಕೆ ಮೇದುಬಿಳಿ ಹಾಲನೀವ ನನ್ನ ಶಿವ ರಟ್ಟೆ ಮುರಿದು ಬಂದಬೆವರ ಹನಿಯಲಿರುವ ನನ್ನ ಶಿವ ಮಂದಿರದಿ ನಡೆದು ಮಸೀದಿಯ ಮುಂದಿಂದಇಗರ್ಜಿಯತ್ತ ನಡೆದು ನಗುವ ನನ್ನ ಶಿವ ಕರಿ ಕಲ್ಲಿನ ಬಿಳಿ ನಗುಎಲ್ಲಾ ಬಣ್ಣದ ಕಾಮನಬಿಲ್ಲು ನನ್ನ ಶಿವ ಗುಡಿಸಲಿಗೂ, ಮಹಡಿಗೂಒಂದೇ ಬಿಸಲನೀವ ಸೂರ್ಯ ನನ್ನ ಶಿವ ಟಾಕೀಸು, ಶೌಚಾಲಯ, ಪಯಣಗಳಲಿಮಾತ್ರ ಎಲ್ಲರೊಂದಾಗೋ ಜನರಿಂದ ದೂರ ಈ ಶಿವ ಕಲ್ಲ ಕಪ್ಪೆ, ಬಾನ ಹದ್ದು, ಮಣ್ಣ ಹುಳಮತ್ತು ಮನುಜನ ಹೊಟ್ಟೆಗೆ ತಪ್ಪದೇ ಹಿಟ್ಟಿಡುವ ನನ್ನ ಶಿವ ಯೇಸುವ ಆಲಂಗಿಸಿ ಮಹಮದನಕೈ ಹಿಡಿದು ಪಳ್ಳಾರ ಹಂಚಿ ತಿನ್ನುವ ನನ್ನ ಶಿವ ಎದೆ ವಿಷವ ಕರಗಿಸಿ ಹೂ ಮಾತಲಿಮನುಜ ಮತವ ಜಗಕೆ ಸಾರುವ ಈ ನನ್ನ ಶಿವ…. ಸಂತೆಬೆನ್ನೂರು ಫೈಜ್ನಟ್ರಾಜ್

ಸಂತೆಬೆನ್ನೂರು ಫೈಜ್ನಟ್ರಾಜ್ “ನನ್ನ ಶಿವ” Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ “ಮಾನ್ಯಳ ಆತ್ಮದ ಅಳಲು”

ಕಾವ್ಯ ಸಂಗಾತ ಡಾ. ಹೆಚ್. ನಟರಾಜ್ ಆರ್ಯ “ಮಾನ್ಯಳ ಆತ್ಮದ ಅಳಲು” ನಾನುಕತ್ತಲಲ್ಲಿ ಸತ್ತವಳಲ್ಲ—ನನ್ನೊಳಗೆಒಂದು ಚಿಕ್ಕ ಬೆಳಕುಇನ್ನೂ ಉಸಿರಾಡುತ್ತಿತ್ತು. ನನ್ನ ಉಸಿರಲ್ಲಿಮತ್ತೊಂದು ಉಸಿರಿನ ನಡುಗು,ಹೃದಯದ ತಾಳದಲ್ಲಿನಾಳೆಯೊಂದುಭಯದಿಂದ ಕಂಪುತ್ತಿತ್ತು. ನನ್ನನ್ನು ಕೊಂದದ್ದುಕತ್ತಿಯಲ್ಲ—ಜಾತಿಯೆಂಬಮನಸ್ಸಿನ ಕಾಯಿಲೆ. ಅಪ್ಪಾ…ಪ್ರೀತಿ ತಪ್ಪೇ?ಮಾನವನಂತೆ ಬದುಕಲುಕನಸು ಕಾಣುವುದುಪಾಪವೇ?ನೀವು ಕೊಂದದ್ದುದೇಹವಲ್ಲ—ಗರ್ಭದ ಬೆಳಕು. ಅಲ್ಲಿಒಂದು ಬದುಕುಬೀಜವಾಗಿಯೇಕುಸಿದಿತ್ತು. ಹೇಳಿ—ಆ ಉಸಿರಿಗೆಯಾವ ಜಾತಿ?ಆ ಕನಸಿಗೆಯಾವ ಗೋಡೆ?ತಾಯಿಯ ಕಣ್ಣೀರಿಗೂನಿಯಮ ಇದೆಯೆ? ದೌರ್ಜನ್ಯಕ್ಷಣದ ಕೋಪವಲ್ಲ—ತಲೆತಲಾಂತರದಿಂದಹರಿದು ಬಂದಕತ್ತಲ ರಕ್ತ. ಇದಕ್ಕೆ ಔಷಧಿಕತ್ತಿಯಲ್ಲ—ಮನಸ್ಸು ಎಚ್ಚರಗೊಳ್ಳುವಜಾಗೃತಿ. ಮಾನ, ಧರ್ಮ, ಸಂಪ್ರದಾಯದ ಹೆಸರಿನಲ್ಲಿನಾವುಬಂಧನಗಳನ್ನೇಹಾರವೆಂದುಧರಿಸಿಕೊಂಡೆವು. ತಪ್ಪಿಗೆಕಾನೂನು ಇದೆ,ನ್ಯಾಯ ಇದೆ,ಶಿಕ್ಷೆ ಇದೆ—ಆದರೆಜೀವ ಕತ್ತರಿಸುವಅಧಿಕಾರಯಾರಿಗೂ ಇಲ್ಲ. ಅವಳ ಕಣ್ಣಲ್ಲಿನಿನ್ನ ಮಗಳ ಭಯ,ಅವನ ಉಸಿರಲ್ಲಿನಿನ್ನ ಮಗನನಾಳೆ. ನನಗೆ ನ್ಯಾಯ ಸಿಕ್ಕಿತು—ಆದರೆನನ್ನ ಮಗನಿಗೆಬೆಳಗ್ಗೆ ಬರಲಿಲ್ಲ.ಸೂರ್ಯೋದಯಕ್ಕೂಅನುಮತಿ ಬೇಕಾಯಿತೇ? ನನ್ನ ಆತ್ಮಕ್ಕೆ ಶಾಂತಿ ಸಿಗುವುದುಒಂದು ದಿನ—ಈ ಸಮಾಜಕನ್ನಡಿ ನೋಡಿಕೊಂಡುತನ್ನನ್ನೇ ಪ್ರಶ್ನಿಸಿದಾಗ. ಆ ದಿನನಮ್ಮಂಥ ಆತ್ಮಗಳುಕತ್ತಲಲ್ಲ—ಭಯದಲ್ಲಲ್ಲ—ಮಾನವೀಯತೆಯ ಬೆಳಕಿನಲ್ಲಿನಿಶ್ಶಬ್ದವಾಗಿಅಳದೆನಗುತ್ತೇವೆ.

ಡಾ. ಹೆಚ್. ನಟರಾಜ್ ಆರ್ಯ “ಮಾನ್ಯಳ ಆತ್ಮದ ಅಳಲು” Read Post »

ಕಾವ್ಯಯಾನ

ಅರುಣಾ ನರೇಂದ್ರ ಅವರ ಗಜಲ್

ಕಾವ್ಯ ಸಂಗಾತಿ ಅರುಣಾ ನರೇಂದ್ರ ಗಜಲ್ ದೇಹ ನಶ್ವರ ಆತ್ಮ ನಿಜದಲಿ ಕೆಡಬಹುದೇ ಕಣ್ಣು ಕಟ್ಟು ಕನಸು ಬಟ್ಟೆಯಲಿ ಕಟ್ಟಬಹುದೆ ಹುಣಿವೆ ಚಂದ್ರನ ಬೆಳಕು ಉಕ್ಕಿದೆ ಸಾಗರಬೆಳದಿಂಗಳ ಬೊಗಸೆಯಲಿ ತುಂಬಬಹುದೇ ಅರಳಿದ ಹೂ ಮುದದಿ ಮುಡಿಯುತ್ತೇನೆಗಂಧವನು ಬೆರಳಿನಲಿ ಹಿಡಿಯಬಹುದೇ ತೂಗಾಡುವ ಮರವ ಹಬ್ಬಿ ನಿಂತಿದೆ ಬಳ್ಳಿಗಾಳಿಯನು ತೋಳಿನಲಿ ತಬ್ಬಬಹುದೇ ಅರುಣಾಳ ಕೊಂದು ಖುಷಿಪಡಬಹುದುಅವಳ ಆಸೆಗಳ ಶಸ್ತ್ರದಿ ಕೊಲ್ಲಬಹುದೇ ಅರುಣಾ ನರೇಂದ್ರ

ಅರುಣಾ ನರೇಂದ್ರ ಅವರ ಗಜಲ್ Read Post »

ಕಾವ್ಯಯಾನ

ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ ಅವರ ಕವಿತೆ”ನಿನ್ನೊಳಿದೆ ನನ್ನ ಹೃದಯ”

ಕಾವ್ಯ ಸಂಗಾತಿ ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ “ನಿನ್ನೊಳಿದೆ ನನ್ನ ಹೃದಯ” ನಿನ್ನ ನೋಡದೆ ನಾ ಹೇಗಿರಲಿ,ನನ್ನೊಲವಿನ ಗೆಳತಿನಿನ್ನೊಳಿದೆ ನನ್ನ ಮನಸ್ಸು……..ಅರ್ಥವಾಗದಿಹದೇ ನಿನ್ನೊಲವಿನ ಗೆಳೆಯನಹೃದಯಾಂತರಾಳದ ವೇದನೆಯು ನಿನಗೆನಿನ್ನದೆ ಮಧುರ ನೆನಪು ಪ್ರತಿ ಕ್ಷಣ ಕ್ಷಣವುನನ್ನೆದೆಯ ವೀಣೆಯ ಮೀಟುತಿದೆ….. ಅಂದು ಹುಣ್ಣಿಮೆಯ ಬೆಳದಿಂಗಳ ರಾತ್ರಿಯಲ್ಲಿಚಂದ್ರಮುಖಿ ಚಕೋರಂಗೆಯೇ ನಾಚುವಂತೆಸಿಂಗರಿಸಿಕೊಂಡು ಬಳಿಬಂದು ಎನ್ನ ಬಳಸಿಎದೆಗಪ್ಪಿ ಚುಂಬಿಸಿ ಪ್ರೇಮಬಂಧನದಿ ಬಂಧಿಸಿದಆ ಘಳಿಗೆಯನ್ನು ಮರೆಯಲಾದೀತೆ ಗೆಳತಿಈ ಜನ್ಮದಿಂದ ಸಪ್ತಜನ್ಮದವರೆಗೂ….. ಕಾಯ ನನ್ನದು ಪ್ರಾಣ ನಿನ್ನದು ಒಲವೇಹೃದಯ ನನ್ನದು ಬಡಿತ ನಿನ್ನದೆ ಚಲುವೇದೂರವಾಗಬೇಡ ನೀ ತಾಳಲಾರೆನು ನಾಈ ಸುಡುವ ವಿರಹದೂರಿಯಿಂದದೂರವಾದರೆ ನೀನು ಬರಿದಾದ ಕಡಲಂತೆನನ್ನ ಬದುಕು…….. ನನ್ನ ಬದುಕು……. ನಾನು ಬಡವನಾದರೂ ಪ್ರೀತಿಗೆ ಬಡತನವಿಲ್ಲನನ್ನ ಮನದಿ ಪ್ರೇಮಸಿರಿಯೇ ಇರುವದುನೀನೀ ದೀನನ ಬಾಳಿನ ಜ್ಯೋತಿಯೆಂದುಹರುಷದಿ ಹಕ್ಕಿಯಂತೆ ಹಾರಾಡುತ್ತಿರುವೆಮರೆಯಾದರೆ ನೀ ಮಣ್ಣಲ್ಲಿ ಮಣ್ಣಾಗುವೆ ನಾನಿನ್ನೊಳಿದೆ ನನ್ನ ಹೃದಯ………. ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ

ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ ಅವರ ಕವಿತೆ”ನಿನ್ನೊಳಿದೆ ನನ್ನ ಹೃದಯ” Read Post »

ಕಾವ್ಯಯಾನ

ಭಾರತಿ‌ ಅಶೋಕ್ “ಆನು ಒಲಿದಂತೆ”

ಕಾವ್ಯ ಸಂಗಾತಿ ಭಾರತಿ‌ ಅಶೋಕ್ “ಆನು ಒಲಿದಂತೆ” ನೀನೊಲಿದಬೇಡನಿಗೆ ಹೊರತಲ್ಲ ಎನ್ನ ಬಕುತಿಮೂದಳದ ಬಿಲ್ವ ಎಲೆಗಳಹೊರತು ಕೊಡಲಿಲ್ಲ ಶಕುತಿ ಭವಣೆಯಲಿ  ಹಣ್ಣಾದ ಮನವುನೀನಿತ್ತ ಬದುಕಿಗೆ ಮಣಿದ ಕಾಯಕೊಡಲೇನಿದೆ ಉಸಿರುಸಿರಿಗು ಶಿವ’ನ ಹೊರತಾದ ಸೊಲ್ಲು ಅಲ್ಲೆಲ್ಲೊ ಗುಡಿಯೊಳಗೆಹುಡುಕುತಿಹ ಮಂದಿನೀನು ನನ್ನವರ ಜೊತೆ ಗುಡಿಸಲೊಳಗೆ ಬಂಧಿ.ಚಿಂದಿ ಕೌದಿಯೊಳಗೆ ದಿನವೂಏಕಾದಶಿಯ ಮಂದಿಕೊಡಲೇನಿದೆ  ಬಯಲ ಸೂರ್ಯನ ಹೊರತು ಇಂದು ಶಿವರಾತ್ರಿಕಣ್ಣ ಹನಿಗಳ ತುಂಬಾನಿನ್ನವೇ ಬಿಂಬಅಲ್ಲೇ ಅರ್ಚನೆಗೈವೆ,ಕಣ್ಣೀರಲೇ ಮಹಾ ಮಜ್ಜನಕೊಡಲೇನಿದೆ ಹಸಿವ ಬಿತ್ತಿಬದುಕ ಸುಟ್ಟ ಬೂದಿಯ ಹೊರತು ನನ್ನವರಕರುಳ ಕೂಗೇ ಮಹಾ ಮಂತ್ರಾರ್ಚನೆಕಂಗಳ ಗುಳಿಯಲಿ ಆಸೆಯ ಹೊಳಪಿತ್ತಕರುಳಿನ ಜೊತೆಗಾರ ನಿನಗೆಕೊಡಲೇನಿದೆ ಹಸಿವಿನ ಹೊರತು ಶಿವರಾತ್ರಿ ಭಾರತಿ ಅಶೋಕ್

ಭಾರತಿ‌ ಅಶೋಕ್ “ಆನು ಒಲಿದಂತೆ” Read Post »

ಕಾವ್ಯಯಾನ

ಪ್ರೊ. ರಾಜೇಶ್ವರಿ ಶೀಲವಂತ ಪುಣೆ ಅವರ ಕವಿತೆ “ಪ್ರೀತಿ”

ಕಾವ್ಯ ಸಂಗಾತಿ ಪ್ರೊ. ರಾಜೇಶ್ವರಿ ಶೀಲವಂತ ಪುಣೆ ಪ್ರೀತಿ ನನ್ನ ಪ್ರೀತಿಗಾಗಿಕಾಯಬೇಕಿಲ್ಲ ನೀನುಬೂದಿ ಮುಚ್ಚಿದ ಕೆಂಡನಿನ್ನ ನೆನಪಲ್ಲಿ ನಾನು ಯಾವುದೇ ಅಂತಸ್ತಿಲ್ಲವಯಸ್ಸಿನ ಬಂಧನವಿಲ್ಲಬಡತನ ಸಿರಿತನದ ಅರಿವಿಲ್ಲಉಚ್ಛ ನೀಚ ಭೇದವಿಲ್ಲ ಇಬ್ಬರ ಮನಗಳ ಬೆಸುಗೆಇದಕ್ಕೆ ಬೇಕಿಲ್ಲ ಒಪ್ಪಿಗೆಅವಿರತ ಭಾವನೆಗಳ ತೃಪ್ತಿಗೆಪರಸ್ಪರ ಕಾತರವೇ ಅಪ್ಪುಗೆ ಇರುವುದೆಲ್ಲ ಒಲುಮೆಭಾವಗಳ ಚಿಲುಮೆವಾತ್ಸಲ್ಯದ ಆರುಮೆತೋರಿಕೆಗಲ್ಲ ಈ ನಲುಮೆ ನಿನ್ನಯ ಅವ್ಯಕ್ತ ಪ್ರೀತಿನಿರಂತರ ಆಸರೆಯ ಆಸಕ್ತಿಆಶಿಸುವೆ ನಿನ್ನಿಂದ ನಾನೆಂದುಅಂದು ಇಂದೂ ಎಂದೆಂದು . ಪ್ರೊ. ರಾಜೇಶ್ವರಿ ಶೀಲವಂತ ಪುಣೆ.

ಪ್ರೊ. ರಾಜೇಶ್ವರಿ ಶೀಲವಂತ ಪುಣೆ ಅವರ ಕವಿತೆ “ಪ್ರೀತಿ” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರ ಕವಿತೆ”ಪ್ರೇಮಲೋಕ.”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಪ್ರೇಮಲೋಕ.” ಇವತ್ತು ಪ್ರೇಮಿಗಳ…ಪ್ರೇಮ ಲಹರಿ ಎಲ್ಲೆಡೆಯುಸಡಗರದ ಸಂಭ್ರಮೋತ್ಸವವು,! ಅದೇನೊ ಪ್ರೀತಿ…ಉಲ್ಲಾಸ ಯೌವನ ರಸಮಯಪ್ರೇಮ ಲೋಕದ ಸ್ನೇಹ ಸಾಗರವು,! ಪ್ರೇಮಾಂಕುರದಲಿ….ಅದೇ ಪ್ರೀತಿ, ವೇಷ, ಪೋಷಾಕುಕಾದಿರಲು ಬಯಸಿ ನಿನ್ನ ಆಗಮನವು,! ಕೈಯಲ್ಲೊಂದು ಗುಲಾಬಿ…ಬರುವಿಕೆಯ ದಾರಿ ನೋಡುತ್ತಕಾದಿರಲು ಪ್ರಿಯೆ,ಈ ತನುಮನವು,! ಬಂದು ಬಿಡು ಓ ಗೆಳತಿ…ಈ ದಿನವ ಅರ್ಥಪೂರ್ಣಗೊಳಿಸುಅಮರವಾಗಿರಲಿ ಪ್ರೀತಿ ಅನುದಿನವು.! ಹಮೀದ್ ಹಸನ್ ಮಾಡೂರು

ಹಮೀದ್ ಹಸನ್ ಮಾಡೂರು ಅವರ ಕವಿತೆ”ಪ್ರೇಮಲೋಕ.” Read Post »

ಕಾವ್ಯಯಾನ

ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ “ಒಲವಿನ ಗೆಳೆಯ”

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ಒಲವಿನ ಗೆಳೆಯ” ದತ್ತ ಪದ :- ಪ್ರಿಯಾ ನೀನಾರಿಗೂ ಆಗದಿರು ಇನಿಯ! ಒಲವಿನಿನಿಯಾ ನಿನ್ನ ಹೆಸರೆ ಮಧುರ ಗಾನಹೃದಯದೊಳಗೆ ಮೂಡುವ ಸುವಾಸನಬೆಳಗಿನ ಹೊನಲು ಕಿರಣದಂತೆ ನೀನುಕಂಡೆನೊಂದು ನಿನ್ನದೆ ಹೊಸ ಕನಸನು. ನಗುತ ಆಡುವ ಮೃದುವಾದ ಮಾತುಕೇಳಿದರೆ ಮರೆತೆನೆಲ್ಲ ಕಷ್ಟವನಂತುಮಳೆಯ ತಂಪಿನ ಹನಿಯಂತೆಬಿಸಿಲಿನಲಿ ಸಿಗುವ ನೆರಳಂತೆ. ಸ್ನೇಹದ ಸಾಗರದ ಮುತ್ತಿನಂತೆಪ್ರೀತಿಯ ಪಥಕೆ ನೀ ದೀಪದಂತೆಇನಿಯಾ ಎಂದರೆ ಮಧುರತೆಯ ಸಾರಜೀವನದಲಿ ತುಂಬುವೆ ಹರ್ಷಧಾರ. ಅವನ ಹೆಜ್ಜೆ ಚಿಗುರಿನ ಸವಿಅವನ ದೃಷ್ಟಿಯೆ ನನ್ನ ಕನಸಿನ ಕವಿಪ್ರಿಯಾ ನೀನಾರಿಗೂ ಆಗದಿರು ಇನಿಯಮನದೊಳಗೆ ಸದಾ ಉಳಿಯುವೆಯ. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ “ಒಲವಿನ ಗೆಳೆಯ” Read Post »

ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ “ಪ್ರೀತಿಸಲು ಉಂಟೆ”

ಕಾವ್ಯ ಸಂಗಾತಿ ಸವಿತಾ ದೇಶಮುಖ “ಪ್ರೀತಿಸಲು ಉಂಟೆ” *ಪ್ರೀತಿಸಲು ಉಂಟೆ * ಪ್ರಣಯ- ಪ್ರೀತಿ- ಪ್ರೇಮಇದೇಲ್ಲ ಹೃದಯ ಮರ್ಮಎರಡು ಆತ್ಮಒಂದಾಗುವ ಧರ್ಮ ಕೃಷ್ಣನು ಬೀಸಿದ ಬಾನಿನಗಾಳಿಯಲಿ ರಾಧೆ ಉಸಿರಿನಪ್ರೇಮ ಗೀತೆ -ಅಮರ ಕಥನ ಅಕ್ಕನ ಅರ್ಪಣೆ ಕಥನದಿಒಂದಾದಳು ಶಿವನ ಚರಣದಿಸಾವಿಲ್ಲದ ರೂಪಿಲ್ಲ ಗಂಡನಡಿ ಮೀರಾಳು ತ್ಯಜಿಸಿದ ನಡೆಹಾಡಿ ಹೊರಟಳು ಕೃಷ್ಣನಡೆವಿಷನುಂಗಿ ಮುಟ್ಟಿದ ಪ್ರೇಮದಡೆ ಶಿವನು ಪಾರ್ವತಿಗೆ ಅರ್ಪಿಸಿದ್ದೇತನುಮನ  ವರ್ಣಸಲಾದಿತ್ತೇಕಾಲ್ಪನಿಕ ಎನಿತು ಅನ್ನಲಾಗದು…. ಪ್ರೀತಿಸು ಪ್ರೀತಿಸು ಎನ್ನಲುಪ್ರೀತಿ ಹೇಳಿ ಕೇಳಿ ಹುಟ್ಟುಲು-ಅದು ಋಣಾನುಬಂಧ ಕಾಣು ಕೇಳಿದರೆ ಕೊಡುವ ಬೇಡಿದರೆನೀಡುವ ಪಡಿ ಪದಾರ್ಥವಾದರೆಪ್ರೇಮ ಭ್ರಮೆ ಪ್ರಮೇಯಾದರೆ  ಪ್ರೀತಿಯು ಹೇಳ ತಿರದ  ಅಂತರಂಗದೈಸಿರಿ  ಅಮೋಘ ಅನಂತಅಜಯ ಅಜರಾಮರ ಅನುಪಮ ಕೊಡುವುದೇ ಪ್ರೀತಿಯ ಧರ್ಮಮರಳಿ ಪಡೆಯುವ ಆಸೆ ಆರ್ಮಿಎಲ್ಲಾ ಸೀಮೆ ದಾಟಿ ನಿಸ್ಸೀಮ ಕರ್ಮ ಪ್ರೇಮ ತಿರುತುರುಗಿ ಸುತ್ತಿ ಸುಳಿದುಮತ್ತೆ ಅಲ್ಲೇ ಬಂದು ನಿಲುವ ಪ್ರೇಮಪ್ರೀತಿಸಿದ ಹೃದಯದತ  ಪಯಣವು ನಾವು ಮನಸಾರೆ ಪ್ರೇಮಿಸುವರುತಿರುಗಿ ಪ್ರೀತಿಸದಿರಲಿ ಬಿಡಲಿನಿಜ  ಪ್ರೇಮ ಅವರ ನೆರಳಲಿ ಬಲೆಯುತ ಬೆಳೆಯುತ ಪ್ರೇಮಿಸುತಅವರ ಖುಷಿಯಲಿ ತಾನು ಸಂತೈಸುತಅದೆಲ್ಲಿಯಾದರೂ  ನೀನು ಬಾಳು….  ನಾನು ಮಾತ್ರ ನನ್ನ ಹೃದಯದತಂಪು ಇಂಪಿನಲಿ ಹುದಿಗಿಹುದುಎನ್ನ ಮನ ಸಿಂಚನಗೊಂಡಿಹದು  ನಿನ್ನಲೇ .ನನ್ನ ಪ್ರಾಣ ಜೀವದ ಜೀವ ನೀನೇ ಎನ್ನ  ಆತ್ಮಕ್ಕೆ ಆಧಾರ ಜವನನ್ನ ಆಸ್ತಿ ಪಾಸ್ತಿ ಎಲ್ಲವೂ ನೀನೆ “ನನ್ನ ಅಸ್ತಿತ್ವಕ್ಕೆ ನೀನೇ ಕಾರಣನೀನೇ ವಿಮಲ ಪ್ರೀತಿಯ ದ್ಯೋತಕ” ಅಂತ ಯಾರಲ್ಲಿ ಅನ್ನಿಸುವುದು ಅದು ನಿಜವಾದ ಪ್ರೀತಿ ಸವಿತಾ ದೇಶಮುಖ

ಸವಿತಾ ದೇಶಮುಖ ಅವರ ಕವಿತೆ “ಪ್ರೀತಿಸಲು ಉಂಟೆ” Read Post »

You cannot copy content of this page

Scroll to Top