ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ ಡೋ ನಾ ವೆಂಕಟೇಶ ಕವಿತೆ “ಚಂದ”

ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಚಂದ” ಮನಸಾರೆ ಕರೆದರೆ ಬರಬೇಕು ಪ್ರೀತಿರೀತಿಗಳ ಮರೆತರೆ ಅಂಜದಿರ ಬೇಕು ನೀನು ನಾನೇ ಆಗಿಮನಸು ನಿನ್ನದಾಗಿ ಒಲವುನಗುವ ಹೂ ಗುಚ್ಛವಾಗ ಬೇಕು ಬೆಳಗಿನ ರವಿಯಾಗ ಬೇಕುರಾತ್ರಿಯ ಹುಣ್ಣಿಮೆಯಬೆಳಕಾಗ ಬೇಕುಏ ಜೀವ, ನೀನಿರ ಬೇಕು.   ತುಡಿತವಾಗಿ ಮಿಡಿಯ ಬೇಕುಹೃದಯದ ಧಾರೆಯಾಗ ಬೇಕು    ಚೆಂದವಾಗಿ ಧುಮ್ಮಿಕ್ಕ ಬೇಕುಅನಂತ ಉಸಿರಾಗಿರ ಬೇಕು ಪ್ರೀತಿ  ನಲಿಯುತ್ತಿರ ಬೇಕು! ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ ಕವಿತೆ “ಚಂದ” Read Post »

ಕಾವ್ಯಯಾನ, ಗಝಲ್

ಜಯಂತಿ ಸುನಿಲ್ ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ ಸುನಿಲ್ ಗಜಲ್ ಕಾಲ ಎಲ್ಲವನ್ನೂ ಮರೆಸಿತು ನಿನ್ನ ನೆನಪೊಂದನು ಬಿಟ್ಟುಕಾಲ ಎಲ್ಲಾ ನೋವನ್ನು ಅಳಿಸಿತು ನೀ ಮಾಡಿದ ಗಾಯವೊಂದನು ಬಿಟ್ಟು..!! ಯುಗವುರಳಿ ಭಿನ್ನ ಮುಖ ಕಣ್ಣ ಮುಂದೆ ಚಲಿಸುತ್ತಿವೆ ಒಂದೊಂದೇಕಾಲ ಕಸದರಾಶಿಯಲೂ ಹೂ ಅರಳಿಸಿತು ನನ್ನ ಪಾಲಿನ ಹೂವೊಂದನು ಬಿಟ್ಟು!! ಮೊದಲಿಲ್ಲದ ಕೊನೆ,ಕೊನೆಯಿಲ್ಲದ ಮೊದಲು  ಒಂಟಿತನಕೆ ನಾಂದಿ ಬಯಸವುಕಾಲ ಎಲ್ಲಾ ಕಲಿಸಿತು ನನ್ನ ನೆರಳಿಗೆ ನಗಿಸುವುದೊಂದನು ಬಿಟ್ಟು!! ಈ ಶೋಕ ಒಂದು ಗಳಿಗೆಯದ್ದಲ್ಲಾ ಇಡೀ ಜೀವಮಾನದ್ದಾಯ್ತುಕಾಲ ಕಂಬನಿ ನಿಲ್ಲಿಸೆಂದಿತು ರಕ್ತ ಒಸರುವುದೊಂದನು ಬಿಟ್ಟು!! ಖಾಲಿತನದ ಹೆಜ್ಜೆ ಅನುಕಂಪದ ಪೆಟ್ಟಿಗೆಗೆ ಸರಿಯಬಹುದೆಂದುಕೊಂಡೆಕಾಲ ಛಿದ್ರ ಹಳಿಗಳನು ಒಂದುಗೂಡಿಸಿತು ಹಾದಿ ತಪ್ಪಿದ ಪ್ರೀತಿಯೊಂದನು ಬಿಟ್ಟು!! ಪ್ರೀತಿಯೆಂಬ ಪುಸ್ತಕದಿ ಉಳಿದಿದ್ದು ಹೆಸರೇ ಇಲ್ಲದ ನಾನು, ನೀನುಕಾಲ ಎಲ್ಲವನ್ನೂ ಉಳಿಸಿತು ನಿನ್ಹೆದೆಯಲಿ ನನ್ಹೆಸರೊಂದನು ಬಿಟ್ಟು!! ಕತ್ತಲು ಕನಸುಗಳ ನಡುವೆ ಮೌನ ಹೊದಿಕೆ ಹೊದ್ದು ಜಯವನ್ನು ಬೇಡಿದಾಗಕಾಲ ಕೊನೆಗೂ ಕನಿಕರಿಸಿತು ಸಾವೊಂದನು ಬಿಟ್ಟು!! ಜಯಂತಿ ಸುನಿಲ್

ಜಯಂತಿ ಸುನಿಲ್ ಅವರ ಗಜಲ್ Read Post »

ಕಾವ್ಯಯಾನ

ಜಯಂತಿ ಕೆ ವೈ ಕವಿತೆ “ಜಗದ ವ್ಯಾಪಾರ”

ಕಾವ್ಯ ಸಂಗಾತಿ ಜಯಂತಿ ಕೆ ವೈ ಕವಿತೆ “ಜಗದ ವ್ಯಾಪಾರ” ಬದುಕಿನ ಯಾವುದೋಮೂಲೆಯಲ್ಲಿ ಅಡಗಿದ್ದ ಸಂತಸಕ್ಕೆಹಿಗ್ಗೋ ಹಿಗ್ಗು!ಯಾರ ಕೈಗೂ ಸಿಗದ ಹಾಗೆಕದ್ದು ಕುಳಿತು ಬೀಗುತಿತ್ತು!ದುಃಖವೊಂದು ಸುಖವನರಸಿಹಿಂಬಾಲಿಸುತ್ತಿತ್ತುನಗುವಿಗೆ ನೋವಿನ ಕಡಿವಾಣವಿತ್ತುನಗುವ ಕಿತ್ತುಕೊಂಡ ನೋವಿಗೆಹಬ್ಬದ ಸಂಭ್ರಮ!ನೋವಿಗೆ ನಗುವಿನ ಬಯಕೆದುಃಖಕೆ ಸುಖದ ಕನಸುಬಿಟ್ಟೂ ಬಿಡಲಾಗದ ಸಖ್ಯ!!ಅವ್ಯಕ್ತ ಭಾವವೊಂದು ಸದಾಕಾಡುವಾಗ ನೆಮ್ಮದಿಗೆಲ್ಲಿ ತಾಣ?ಅಂತರಂಗದ ವೇದಿಕೆಯಲಿನೊವು-ನಲಿವು, ಸುಖ-ದುಃಖಗಳಭೂತದ ಕೋಲಗಳ ಕುಣಿತನಡುವೆಯೇ ಸಜ್ಜಾಯಿತುಜಗದ ವ್ಯಾಪಾರಕೆನಗುವಿನ ಮುಖವಾಡ! ಜಯಂತಿ ಕೆ ವೈ

ಜಯಂತಿ ಕೆ ವೈ ಕವಿತೆ “ಜಗದ ವ್ಯಾಪಾರ” Read Post »

ಕಾವ್ಯಯಾನ

ಮಧುಮಾಲತಿರುದ್ರೇಶ್ ಬೇಲೂರು ಅವರ ಟಂಕಗಳು

ಕಾವ್ಯ ಸಂಗಾತಿ ಮಧುಮಾಲತಿರುದ್ರೇಶ್ ಟಂಕಗಳು ಬಣ್ಣ ಬಣ್ಣದಚಿಟ್ಟೆಯಂತೆ ಮನವುಹೊಸತನಕೆಸದಾ ಹಾತೊರೆವುದುಇರಲೆಮಗೆ ತಾಳ್ಮೆ 2)ಸಂಪತ್ತು ನಗುಮೊಗವೇವ್ಯಕ್ತಿತ್ವದ ಸಂಪತ್ತುನಗುನಗುತನೋವು ನಲಿವ ನುಂಗಿಬದುಕಬೇಕು ನಾವು 3)ಸುಪ್ರಭಾತ ಬಾನಂಚಿನಲ್ಲಿರವಿಯ ಹೊಂಗಿರಣಉಷೆ ಮೂಡಲುಹಕ್ಕಿಗಳ ನಿನಾದಸುಪ್ರಭಾತ ಕಿವಿಗೆ 4)ತುಂಗಭದ್ರ ಕನ್ನಡ ನಾಡುನದಿಗಳ ಬೀಡಿದುತುಂಗಭದ್ರೆಯುಜೀವ ಜೀವದುಸಿರುಹಸಿರಧಾತೆ ಈಕೆ 5)ಸಂತೋಷ ಸ್ವಾರ್ಥ ದುರಾಸೆತೊರೆದರೆ ಮನುಜನಿತ್ಯ ಸಂತೋಷಿಆತ್ಮ ತೃಪ್ತಿಯೇ ಸುಖಬದುಕು ಬಂಗಾರವು ಮಧುಮಾಲತಿರುದ್ರೇಶ್

ಮಧುಮಾಲತಿರುದ್ರೇಶ್ ಬೇಲೂರು ಅವರ ಟಂಕಗಳು Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ‌ ಅವರ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ‌ ಗಜಲ್ ಪ್ರೇಮ ನಶೆಯ ಮದಿರೆ ಏರಿದರಲ್ಲೆಯ ನಿದಿರೆಒಲವಿನುಯ್ಯಾಲೆಯಲಿ ತೂಗುತಲಿದ್ದರೆಲ್ಲಿಯ ನಿದಿರೆ ಕಳವಳದಲ್ಲಿ ಜೀವ ಕುಸುಮ ಮಂಪರಿಸುತ ಕಂಪನಪ್ರೀತಿಯ ಮಾಯೆಯಲಿ ಮೈಮರೆತರೆಲ್ಲಿಯ ನಿದಿರಿ ಹಗಲಿರುಳು ಹಂಬಲದ ಕೊಳದಿ ಅಲೆಗಳ ನಿಲ್ಲದ ಶಬ್ದಅಪ್ಪುಗೆಯಾಲಿಂಗನಕೆ ಕಾಯುತದಲಿದ್ದರೆಲ್ಲಿಯ ನಿದಿರೆ ಬಿಸಿಯುಸಿರು ಧಗೆಯಲಿ ದೇಹ ಧಗಧಗಿಸುವ ನೋವುಕನಸುಗಳ ಹಾಸಿ ಹೊತ್ತು ಮಲಗಿದರೆಲ್ಲಿಯ ನಿದಿರೆ ನೆನಪಿನಲೆಯ ಕೋಲಾಹಲ ತಾಳಲಾರದ ಸಿಹಿ ಸಂಕಟಕಣ್ಣ ಕೊಳದಲಿ ನೆಟ್ಟ ಚಿತ್ರ ಮಾಸದಿರೆಲ್ಲಿಯ ನಿದಿರೆ ಮನ ಮಂದಾರ ಬಿರಿಯುವ ಸಂಕಟ ಕಾತುರದ ಕೌತುಕಜೀವ ಕುಸುಮ ರವಿಗಾಗಿ ಕಾಯುತಲ್ಲಿದ್ದರೆಲ್ಲಿಯ ನಿದಿರೆ ಅನುರಾಗದಲೆಯಲಿ ಅನು ಕೊಚ್ಚಿ ಹೋಗುತಿಹಳು ತಾಳದೇರಾಗಕೆ ತಾಳ ಬೆರೆಸಲು ದುಂಬಿ ಬರದಿದ್ದರೆಲ್ಲಿಯ ನಿದಿರೆ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ‌ ಅವರ ಗಜಲ್ Read Post »

ಕಾವ್ಯಯಾನ

ಡಾ. ದಾನಮ್ಮ ಝಳಕಿ “ಹೊಳೆಸಾಲು ಬಳ್ಳಿ”

ಕಾವ್ಯ ಸಂಗಾತಿ ಡಾ. ದಾನಮ್ಮ ಝಳಕಿ “ಹೊಳೆಸಾಲು ಬಳ್ಳಿ” ಹೊಳೆಸಾಲ ಬಳ್ಳಿ ಚೆಂದಹಳ್ಳಿಯ ನೆಲ ಅಂದಮಣ್ಣಿನ ವಾಸನೆಯ ಕಂಪುಬಲು ಚೆಂದ ಕೇಳವ್ವ ಹಸಿರು‌ ಬೊಟ್ಟಿನ ಸೀರೆಅಚ್ಚ ಕೆಂಪಿನ ಬಳೆತೊಟ್ಟಾಳ ನನ್ನವ್ವನಿಂತಾಳ ಬಳ್ಳಿಯಲಿ ಪುಂಡಿಯ ಪಲ್ಲೆಯಲಿಬಳ್ಳೊಳ್ಳಿ ಕಾರದಲಿಎಣ್ಣೆ  ಉಳ್ಳಾಗಡ್ಡಿ ರುಚಿ ಚೆಂದಹೊಳೆಸಾಲ ಬಳ್ಳಿಯಲಿ ಹೊಳೆಸಾಲ ಬಳ್ಳಿಯಲಿ ಬಣ್ಣಬಣ್ಣದ ಹೂಗಳುನಮ್ಮವ್ವ ಮುಡಿದ ಮಲ್ಲಿಗೆ ಹೂ ಚೆಂದಹಣಿಯಲಿ ವಿಭೂತಿ ಕೆಂಪುಬೊಟ್ಟಿನ ಗಂದಹೊಳೆಸಾಲದಬಳ್ಳಿಯಲಿ ನಮ್ಮವ್ವನ ಕಳೆ ಚೆಂದ ಡಾ. ದಾನಮ್ಮ ಝಳಕಿ

ಡಾ. ದಾನಮ್ಮ ಝಳಕಿ “ಹೊಳೆಸಾಲು ಬಳ್ಳಿ” Read Post »

ಕಾವ್ಯಯಾನ

ವೈ ಎಂ ಯಾಕೊಳ್ಳಿ ಅವರ ಕವಿತೆ “ಅರವತ್ತರಾಚೆಯವನ ತುಂಟ ಪದ್ಯಗಳು”

ಕಾವ್ಯ ಸಂಗಾತಿ ವೈ ಎಂ ಯಾಕೊಳ್ಳಿ “ಅರವತ್ತರಾಚೆಯವನ ತುಂಟ ಪದ್ಯಗಳು” ೧ಪ್ರೀತಿನಿನ್ನ ಹತ್ತರ ಎಷ್ಟರ ಐತಿಅಂತಾಳ ಆಕಿ !ಅಯ್ಯೋ ಮಾರಾಯಾಅದೆಲ್ಲಿ ಐತಿ ಅಂತಾಳ ಈಕಿ? ೨ಸಾಕು ಬಿಡು‌ ಮಾರಾಯ್ತಿಒಮ್ಮೆ‌ ಪ್ರೀತಿ‌ ಮಾಡಿದ್ನಿಮತ್ತ ಅದನ್ನ‌ ನೆನೆಸಿ‌ನೆನೆಸಿಈಗ್ಯಾಕ ಜೀಂವ ನೀ ತಿಂತಿದಿ ೩ಔಷದ ಇಲ್ಲದ ರೋಗಪ್ರೀತಿ,ಅದನ್ನು ತಿಳದೂ  ತಿಳದೂಮಾಡತೈತಲ್ಲ ಈ ಲೋಕಕ್ಕಎಂಥಾ ಹುಚ್ಚ ಹಿಡದೈತಿ! ೪ಹತ್ತಿರ ಬರಬೇಡ ಅಂತಆರನೂರ ಕೊಟ್ಟಗೋದ್ರೇಜ್ ಕೀಲಿ ಹಾಕಿನಿಕನಸನ್ಯಾಗ ಗೊತ್ತಿಲ್ಲದಾಂಗಕೀಲಿ‌ ಮುರದಾಳಏನ ಅನಬೇಕರಿ ಆಕಿಗಿ ೫ಬರಿ ಬ್ಯಾಡರಿ ಅಜ್ಜನಿವ್ ಮುದಕಾರಾಗಿರಿಅಂತ ಹುಡುಗರ ವರಾತಹೌದುಬರುದುಲ್ಲಲ್ಲ ನಮಗಇದನಬಿಟ್ಟ  ಬ್ಯಾರೆ  ಕವಿತಾ! ೬ನಾವು ಬರೆಯುವವರುಬರೆದು ಹುಚ್ಚ ರಾಗತೆವಿನಿವ್  ಅನುಭವಿಸಿತಿರಿಅನುಭವಿಸಿ ಧನ್ಯರಾಗತಿರಿ ೭ಹೆಂಡತಿ ಹತ್ತರ ಇದ್ದರಒಂದೆ ಸಮ ಬೈಗಳಬೇಜಾರಇವನ್ ಮನಸು ಇಲ್ಲೆ ಇಲ್ಲಿಅಂತಆಕಿದ ಒಂದ ತಕರಾರ ೮ಮುಗದ ಮಾತಿಗೆ ಯಾಕಅಳತೆರಿ ಸ್ವಾಮಿ ಇರೋದನ್ನುಚಂದಾಂಗಿ ಅನುಭವಿಸ್ರಿ !ನಿಮ್ಮನ್ನ ಬಿಟ್ಟ ಹೋದವರುಖಂಡಿತವಾಗೂ ಅಲ್ಲಿನೂ ಚಂದಅದಾರ್ರಿ!! ೯ಜೀವನ ಅಂದರಮೊದಮೊದಲ ಕಳಕೊಳ್ಳೊದುಪಡಕೋಳ್ಳೊದರಿ!ನಂತರ  ಎಲ್ಲಾನೂಬಿಟ್ಕೊತಹೋಗೂದರಿ!! ೧೦ಇದೆಂಥಾ ಕವಿತಾಒಂದ‌ ಲಯ ಇಲ್ಲ, ಪ್ರಾಸ ಇಲ್ಲಅಂತಾನ ವಿಮರ್ಶಕ!ನಿವ್ ಏನ್ ಚಂದ ಬರದಿರಿಅಂತಾಳ ವಿಮರ್ಶಕಿ!! ವೈ.ಎಂ.ಯಾಕೊಳ್ಳಿ ʼ

ವೈ ಎಂ ಯಾಕೊಳ್ಳಿ ಅವರ ಕವಿತೆ “ಅರವತ್ತರಾಚೆಯವನ ತುಂಟ ಪದ್ಯಗಳು” Read Post »

ಕಾವ್ಯಯಾನ

“ಹುತಾತ್ಮರ ದಿನ” ಡಾ ತಾರಾ ಬಿ ಎನ್ ಧಾರವಾಡ

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ ಧಾರವಾಡ “ಹುತಾತ್ಮರ ದಿನ” ಭವ್ಯ ಭಾರತದ ವೀರ ಯೋಧರನೆನಪುಗಳ  ಲಗ್ಗೆಹೃದಯಗಳಲ್ಲಿ ಹಚ್ಚಿದ ಜ್ಯೋತಿಮನಸ್ಸಿನ ಹೊನ್ನೆಳೆಯಿಂದ,ಭೂ ಮಾತೆಯ ಹೃದಯ ಕರುಣೆತನ್ನೋಡಲಿನಲ್ಲಿವೀರರ ರಕ್ತದ ಕಂಗುಳಿಯಿಂದ. ಮೂಕವಾಗಿ ರೋಧಿಸಿದ ಈ ಹದಿನಾಲ್ಕನೆಯ  ದಿನ,ಸ್ಮರಣೆಯ ಸುಗಂಧವೊಂದುಪಸರಿಸಿ ಹರಡಿಹುದುಹುತಾತ್ಮರ ಹೆಜ್ಜೆಯ ನೋವುಇನ್ನೂ ನಮ್ಮೊಳಗೇ ಗುನುಗುತ್ತಿದೆ. ಪುಲ್ವಾಮದ ಕರುಣ ಕಥೆಯಲಿವೀರರ ಉಸಿರಿನ ಉರಿಯೇ ಉಳಿದು,ಭಾರತ ತಾಯಿಯ ಮಡಿಲಲ್ಲಿಅಮರ ಗಾಥೆಯಾಗಿ ಮಿಂಚಿತು.ಆ ಆತಂಕದ ನೆಲದಲಿ ಸುರಿದ ರಕ್ತ ರಾಷ್ಟ್ರಧ್ವಜದ ಕೆಂಪು ಗಟ್ಟಿಯಾಗಿ,ಅಮರ ವೀರರ ತ್ಯಾಗ ಕಥೆಭಾರತೀಯರ ಹೃದಯದಲಿಬರೆಯಲ್ಪಟ್ಟ ಕಣ್ಣೀರ ವ್ಯಥೆವೀರರ ಶೌರ್ಯಗಾಥೆಗಗನಕೆ ಏರಿದ  ಗರ್ವದ ಗೀತೆ, ಜೀವ ಕೊಟ್ಟು ಜಗ ಕಾಯ್ದಸ್ವಾತಂತ್ರ್ಯದ ಪವಿತ್ರ ಪಾಠ.ವೀರಗತಿ ಭಾವನ ಪಟ್ಟಪ್ರತಿ ಗಾಳಿಯಲಿ ಉಸಿರು,ಪ್ರತಿ ಹೃದಯದ ತಾಳದಲಿ ಅವರ ಧೈರ್ಯದ  ಮಿಡಿತ ಭೂದೇವಿ  ಕಣ್ಣೀರಿನ ಹನಿಮುತ್ತಾಗಿ ಮಣ್ಣಿನಲಿ ಮಿನುಗಿ,ದೇಶಪ್ರೇಮದ ದೀಪ ಬೆಳಗಿಸಿಹೊಸ ಪೀಳಿಗೆಗೆ ದಾರಿ ತೋರಿತು. ಹುತಾತ್ಮರೆ! ನಿಮ್ಮ ತ್ಯಾಗದ ನೆನಪುನಮ್ಮ ಬದುಕಿನ ಬೆಳಕಾಗಲಿ,ನಿಮ್ಮ ಅಮರ ಆತ್ಮಶಕ್ತಿನಮ್ಮ ಸಂಕಲ್ಪದ ಶಕ್ತಿಯಾಗಲಿ.ಫೆಬ್ರವರಿ ಹದಿನಾಲ್ಕು ದಿನದಲಿನಮಿಸುವೆವು ನಮನಗಳ ಮಾಲೆ, ಭಾರತ ತಾಯಿಯ ವೀರಪುತ್ರರೇನಿಮ್ಮ ನೆನಪು ಶಾಶ್ವತನಿಮ್ಮ ತ್ಯಾಗ ಸೇವೆ ನಿಶ್ಚಿತನಿಮ್ಮ ಸೇವೆ  ಶ್ರೀದೇವಿಗೆ  ಹಿತನೀವೇ ಸದಾ ಎಲ್ಲರ ಪರಮಾಪ್ತನಿಮಗಿದೋ ಕೋಟಿ ವಂದನೆ.ಜೈ ಹಿಂದ್ ಡಾ ತಾರಾ ಬಿ ಎನ್ ಧಾರವಾಡ

“ಹುತಾತ್ಮರ ದಿನ” ಡಾ ತಾರಾ ಬಿ ಎನ್ ಧಾರವಾಡ Read Post »

ಕಾವ್ಯಯಾನ

ಪರವಿನಬಾನು ಯಲಿಗಾರ ಅವರ ಕವಿತೆ “ರವಿ …ಮೀಟ್ಸ್…. ಬಾನು”

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ “ರವಿ …ಮೀಟ್ಸ್…. ಬಾನು” ನೀ ಬರುವ ಸಮಯ ಕೆಂಪೇರುವುದುನನ್ನ ಮೂಡಣದ ಕೆನ್ನೆ ,ನೀ ಬರುವ ಸಂಭ್ರಮ ಹೇಳ ತೀರದು ,ನನ್ನ ಹರುಷದ ಬಾಗಿಲು ತೆರೆಯುವಕೀಲಿ ನೀನು, ಮೆಲ್ಲನೆ ಉಲಿಯಲೆ ನಲ್ಲ , ನಿನ್ನ ಹೆಸರು   ….ರವಿ ….ರವಿ…..ರವಿ….. ಮಂದ ಶೀತಲ ಗಾಳಿ ,ಇಬ್ಬನಿಯ ಮಣಿ ಮಾಲೆ ಹಸುರಿನ ಮೇಲೆ ,ಅರಳಿ ನಿಂತ ಹೊಸ ಕುಸುಮ ,ಹಕ್ಕಿಯ ಚಿಲಿ ಪಿಲಿ ನಾದ ,ನಿನ್ನ ಸ್ವಾಗತ ಕೊರುವವು ,ನೀ ತಂಪ ಸುಸುತ ,ಮಂದಹಾಸ ಬಿರುತ ,ಸ್ವರ್ಣ ವರ್ಣದ ತೇರ ಏರಿ  ಬರುವೆ ….. ತುಸು ಹೊತ್ತು ಸರಿಯುತ್ತಿರೆಅದೇನು ರೋಷವೊ ?ಅದೆಂಥಹ ಮೋಹವೊ ?ಕಾಯಿಸಿ , ಕಂಗೆಡಿಸಿ ,ಬೇಯಿಸಿ , ಬೇಂಡಾಗಿಸುವೆಅದೇನು ಹುಚ್ಚು ಪ್ರೇಮವೊ ನಿನ್ನದು ,ಇರುವ ಸ್ವಲ್ಪ ಹೊತ್ತಲ್ಲೆ ನನ್ನೊಡನೆಸರಸ , ವಿರಸ  ಮತ್ತೆ ಸರಸ…. ನೀ ಮರಳುವಾ ಸಮಯ ಕೆಂಪಾಗಿಸುವೆನನ್ನ ಪಡುವಣದ ಕೆನ್ನೆಇಡೀ ದಿನ ನನ್ನ ಗೋಳಾಡಿಸಿಹೋಗುವಾಗ ರಮಿಸಿ , ಮುದ್ದಿಸಿ ,ತಬ್ಬಿ ತಂಪನೆರೆಯುವೆನಿನ್ನ ಪ್ರೇಮದ ಪರಿಯ ನಾನರಿಯೆ ?ನೀ ನನ್ನವನೆಂಬ ಖುಷಿ ನನ್ನದುನೀ ನನಗಾಗೆ ಇರುವೆ ಎಂಬ ಜಂಭ ನನ್ನದುನಾ ನಿನ್ನ ಬೆಳಕಿನಲಿ ನಲಿಯುವೆ , ನಾ ನಿನ್ನವಳೆಂಬ ತೃಪ್ತಿ ನನ್ನದು…… ನೀ ಮರೆಯಾಗುವೆ ಇರುಳಿಗೆನಾ ಬೇಸರದಿ ಮುಖ ಕಪ್ಪು ಮಾಡಿಕೊಂಡುಮುದುರಿ ಮಂಕಾಗುವೆಮತ್ತೆ ನಾಳೆ ನಿನ್ನ  ಬರುವಿಕೆಗಾಗಿಕನವರಿಸಿ ಕಾಯುವ ನಾನು ನೀಲಿಬಾನು …ಬಾನು….ಬಾನು…. ಪರವಿನಬಾನು ಯಲಿಗಾರ  

ಪರವಿನಬಾನು ಯಲಿಗಾರ ಅವರ ಕವಿತೆ “ರವಿ …ಮೀಟ್ಸ್…. ಬಾನು” Read Post »

ಕಾವ್ಯಯಾನ

ಟಿ.ಪಿ.ಉಮೇಶ್ ಚಿತ್ರದುರ್ಗ ಅವರ ಕವಿತೆ “ನಾನು ಕವಿ! ನಿನ್ನ ಸೃಷ್ಟಿಕರ್ತ!!”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ ಚಿತ್ರದುರ್ಗ “ನಾನು ಕವಿ! ನಿನ್ನ ಸೃಷ್ಟಿಕರ್ತ!!” ಒಲವೇ ನಾನು ಕವಿನಿನ್ನ ಬದುಕಿನ ಕವಿತೆಗಳನ್ನು ಬರೆಯುವ ಲೇಖನಿ!ನಿನ್ನ ನಗುವಿನ ಅಮಲನ್ನೆಲ್ಲ ಹಿಡಿದಿಡುವ ಪ್ರೇಮಿ!ಅಕ್ಷರಗಳಿಗೆ ತಮ್ಮದೇ ಆದ ಪ್ರಿತಿಶಕ್ತಿ ಇದೆ;ಅದನ್ನೆಲ್ಲ ಒಟ್ಟುಗೂಡಿಸಿ ಅಂದದ ಎರಕ ಹೊಯ್ದು;ಒಲವಿನ ಮಿಂಚ ಪೂಸಿನೀ ಯುಗಯುಗಗಳಿಗು ಹೊಳೆಯುವಂತೆ ಮಾಡುವೆ!ಕಂಡವರೆಲ್ಲ ಯಾರ ಸೃಷ್ಟಿ ಅದ್ಭುತವಿದೆಂದು ಅಚ್ಚರಿಪಡುವರು!ಪದಗಳ ಮಾಂತ್ರಿಕತೆಯಲ್ಲಿ ನಿನ್ನ ಸಾಮಾನ್ಯ ಸೌಂದರ್ಯ ಅಸಾಮಾನ್ಯವಾಗುವುದು!ನಿನ್ನನ್ನು ಜಗತ್ತಿನೆಲ್ಲ ಸುಂದರ ಕಲಾಕೃತಿಗಳ ರೂಪಕವೆಂದು ಬಣ್ಣಿಸುವರು!ಇನ್ನು ಮುಂದೆ ನಿನ್ನ ಹೊರತು ಪ್ರೀತಿ ಮೀಮಾಂಸೆ ಅರ್ಥಪೂರ್ಣವಾಗದೆಂದು ಗುನುಗುವರು! ಒಲವೇನಾನು ನಿನಗೆ ಈ ಜಗತ್ತನ್ನೇ ತೋರಿಸಿದೆನೀನೇ ಜಗತ್ತಿನ ಬೇಳಕೆಂದು ಕಾಣಿಸಿದೆನಿನಗೆ ನಿನ್ನ ಪ್ರೀತಿಯ ಶಕ್ತಿ ತೋರಿಸಿದೆನಿನಗೆ ನಿನ್ನ ಜೀವನ ಔನ್ನತ್ಯ ಕಾಣಿಸಿದೆ ಆ ಮಳೆಬಿಲ್ಲ ಬಗ್ಗಿಸಿ ನಿನ್ನ ಹುಬ್ಬಾಗಿಸಿದೆನೀಲಾಗಸದ ಹೊಳಪ ನಿನ್ನ ರಂಗಾಗಿಸಿದೆಚಂದಿರನ ತಂಪ ನಿನ್ನ ಎದೆಗೂಡಾಗಿಸಿದೆನೇಸರನ ಬಿಸಿಯ ನಿನ್ನ ಚೈತನ್ಯವಾಗಿಸಿದೆನಕ್ಷತ್ರಗಳ ಜೋಡಿ ಕಣ್ಗಳಿಗಿಳಿಸಿ ಸಿಂಗರಿಸಿದೆಜಗದ ಮಧುರ ರಾಗಗಳ ತುಟಿಗಳಿಗಂಟಿಸಿದೆವಿಶ್ವದಿರುಳ ದೃಶ್ಯಕಾವ್ಯಗಳ ನಿನ್ನ ಹೆರಳಾಗಿಸಿದೆಇರುವೆಲ್ಲ ಮೃದುತ್ವ ತಂದಿಟ್ಟು ಹೃದ್ಯವಾಗಿಸಿದೆನಾನು ನಿನ್ನ ಪ್ರೇಮಿನಿನ್ನಂದವನ್ನೆಲ್ಲ ಕಾಪಿಡುವ ಧರ್ಮಿನಿನಗಾಗಿಯೆ ಮಿಡುಕಾಡುವ ಕರ್ಮಿ ಪ್ರಿಯೇನಾನು ನಿನ್ನ ಕವಿಯೆನಿನ್ನ ಹೃದಯದ ಬಡಿತ ಬಲ್ಲೆನಿನ್ನ ಉತ್ಸಾಹಗಳ ಎಲ್ಲೆ ಬಲ್ಲೆಮರೆವಿನ ನಿನ್ನ ಜೀವನ ಕಥನಗಳ ಬಲ್ಲೆಸ್ಮರಣೆಯ ಒಲವ ಹೆಜ್ಜೆಗಳನ್ನೆಲ್ಲ ಬಲ್ಲೆ ನಿನ್ನ ಪಿಸುಮಾತ ಸಪ್ಪಳ ನಾನಷ್ಟೆ ಕೇಳಿ ಬರೆದಿಡುವೆನಿನ್ನ ಕಣ್ರೆಪ್ಪೆಗಳ ಗುರಿ ನಾನಷ್ಟೆ ಹಿಡಿದು ಪಳಗಿಸುವೆಜಗದೆಲ್ಲ ನಂಬಿಕೆಗೆ ನಿನ್ನನ್ನೇ ಆಧಾರವಾಗಿಸಬಲ್ಲೆಜಗದೆಲ್ಲ ಪ್ರಾರ್ಥನೆಗಳಿಗೆ ಚುಂಬಕವಾಗಿಸಬಲ್ಲೆ ಹೇ ಮನವೇನಿನ್ನ ಭಯ ನಡುಕಗಳ ನಾನರಿಯಬಲ್ಲೆ;ನನ್ನ ಪದಗಳು ಅವನ್ನೆಲ್ಲ ತಣಿಸಿ ನಿವಾರಿಸವವು!ನಿನ್ನ ಅನುಕಂಪ ಅನುರಾಗಗಳ ಕಾಣಬಲ್ಲೆ;ನನ್ನ ಹಾಡುಗಳು ಅವುಗಳ ಅಂದವಾಗಿಸುವವು!ನಿನ್ನ ಬಯಕೆಗಳ ನರಳಿಕೆಗಳ ಅರ್ಥೈಸಬಲ್ಲೆ;ನನ್ನ ಸಾಲುಗಳು ಅವನ್ನೆಲ್ಲ ಸಾಕ್ಷಾತ್ಕರಿಸುವವು! ಪ್ರಿಯೆನನ್ನ ಮಾತು ಕೇಳು;ನಿನ್ನೆಲ್ಲ ಗುರಿಯಿರದ ನಡಿಗೆಗೆ ದಾರಿ ನಾನು!ನಿನ್ನೆಲ್ಲ ಜೀವನ ಶ್ರೇಷ್ಟತೆಗೆ ದುಡಿಮೆ ನಾನು!ನಿನ್ನೆಲ್ಲ ಪ್ರೀತಿ ಉಳಿತಾಯದ ಕೀಲಿಕೈ ನಾನು!ನಾನು ಕವಿನಿನನ್ನಷ್ಟೇ ಪ್ರೇಮಿಸುವೆನಿನ್ನನ್ನಷ್ಟೆ ಧ್ಯಾನಿಸುವೆನಿನ್ನನ್ನಷ್ಟೆ ಆಲಾಪಿಸುವೆನಿನ್ನಲ್ಲಷ್ಟೆ ಐಕ್ಯಗೊಳ್ಳುವೆ ಟಿ.ಪಿ.ಉಮೇಶ್ ಚಿತ್ರದುರ್ಗ

ಟಿ.ಪಿ.ಉಮೇಶ್ ಚಿತ್ರದುರ್ಗ ಅವರ ಕವಿತೆ “ನಾನು ಕವಿ! ನಿನ್ನ ಸೃಷ್ಟಿಕರ್ತ!!” Read Post »

You cannot copy content of this page

Scroll to Top