ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಎಮ್ಮಾರ್ಕೆ ಕವಿತೆ”ಸದ್ದಿಲ್ಲದ ಬಂದೈತಿ”

ಕಾವ್ಯ ಸಂಗಾತಿ ಎಮ್ಮಾರ್ಕೆ “ಸದ್ದಿಲ್ಲದ ಬಂದೈತಿ” ಸದ್ದಿಲ್ಲದ ಬಂದೈತಿ ಈ ಸಂಕ್ರಾಂತಿತರಲಿ ಪ್ರತಿ ಜೀವಿಗೂ ಸುಖಶಾಂತಿಬನ್ನಿ ನೂಕೋಣ ನಮ್ಮೆಲ್ಲ ನೋವಪ್ರತಿ ಮನದಾಗೂ ಅರಳಲಿ ಹೂವ ಎಳ್ಳು ಬೆಲ್ಲವ ಸವಿಯೋಣ ಕೂಡಿನಾಕು ಒಳ್ಳೊಳ್ಳೆ ಮಾತುಗಳ ಆಡಿಸುಗ್ಗಿ ಮಾಡೋಣ ಹಿರಿ ಹಿರಿ ಹಿಗ್ಗಿಹೊಟ್ಟ್ತುಂಬ ಉಣ್ಣೋಣ ಹಾಲ್ಹುಗ್ಗಿ ನೇಸರ ಬದಲಿ ಮಾಡ್ಯಾನೋ ದಿಕ್ಕಬಲ್ಲವರಾರಯ್ಯ ಆ ದೇವರ ಲೆಕ್ಕಈ ಸಂಕ್ರಾಂತಿ ಕರಿಯ ಕಟ್ಟು ಹಬ್ಬನೋಡಬೇಕ ಮ್ಯಾಲೇರಿಸಿ ಹುಬ್ಬ ಹಳ್ಳಿಯ ಹಾದಿ-ಬೀದೆಲ್ಲ ಸಿಂಗಾರಬಿತ್ತಿ ಬೆಳೆದಾರೋ ಬಗಸಿ ಬಂಗಾರಮನಿ ಮುಂದ ಬಿಡಿಸಿ ರಂಗೋಲಿಮೈ ಮರೆತಾರ ಖುಷಿಯ ಗುಂಗಲ್ಲಿ ಬನ್ನಿ ಕುಣಿಯೋಣ ಮೈ ಚಳಿ ಬಿಟ್ಟಭಗವಂತನ ಮ್ಯಾಲ ನಂಬಿಕಿ ಇಟ್ಟನೋಡಲಾಕತ್ಯಾನು ಕುಂತ ಮ್ಯಾಲಅವಗ ಒಪ್ಪಿಸಿವ್ನಿ  ನನ್ನೆರಡು ಸಾಲ ಎಮ್ಮಾರ್ಕೆ

ಎಮ್ಮಾರ್ಕೆ ಕವಿತೆ”ಸದ್ದಿಲ್ಲದ ಬಂದೈತಿ” Read Post »

ಕಾವ್ಯಯಾನ

ಇಮಾಮ್ ಮದ್ಗಾರ “ಬಾಡದಿರಲಿ ಅನ್ನದಾತನ ಮುಖದ ಕಾಂತಿ”

ಕಾವ್ಯ ಸಂಗಾತಿ ಇಮಾಮ್ ಮದ್ಗಾರ “ಬಾಡದಿರಲಿ ಅನ್ನದಾತನ ಮುಖದ ಕಾಂತಿ” ಮೈ ನಡುಗುವ ತಂಪುಗಾಳಿಯುಕಂಪ ಸೂಸುತ್ತಿತ್ತು ಅದು…ನೀ ಮುಡಿದ ದುಂಡುಮಲ್ಲಿಗೆ ಘಮವೆಂದು ಮನಸು ಹೇಳುತ್ತಿತ್ತು. ಹಚ್ಚಹಸುರಿನ ಪಚ್ಚೆಪೈರಿನಬೆಳೆಯ ನೋಡುತ ಕೋಗಿಲೆಕೂಗುತ್ತಿತ್ತು. ಬರುವ ಸಂಕ್ರಾಂತಿಮುದತರಲಿ ರೈತರಿಗೆ ಎಂದು ಹಾಡುತ್ತಿತ್ತು. ಉಡಿತುಂಬಿದ ಧರೆಮುಡಿಗೇರಿದ ಫಸಲುಮುತ್ತಿಕ್ಕುವ ಚಳಿ ತಾ….ಮುನುಗುತ್ತಾ ಸುಗ್ಗಿಯಹಾಡಗುನುಗುತ್ತಾ.ಬರುವ ಸಂಕ್ರಾಂತಿಯಲಿ ಹಸನಾಗಿರಲಿ ಅನ್ನದಾತನ ಬದುಕುಎಂದು ದೇವರ ಬೇಡುತ್ತಿತ್ತು. ತಳಿರು ತೋರಣ ಕಟ್ಟುತಚಾಮರ ಬೀಸಿದೆ ಮಾಮರ.ಕರಗದಿರಲಿ ಅನ್ನದಾತನ ಕನಸುಈ ವರುಷ ಬರದೇ ಇರಲಿ ಬರ. ಹಸನಾಗಿರಲಿ ಅನ್ನದಾತನ ಮನಸುಹರಿದೋಗಿ ಬಿಡಲಿ ಈ ವರುಷ.ಸಾಲ ಸಾಲದ ಬಡ್ಡಿಮತ್ತೆಂದೂ ಕಾಡದಿರಲಿ ಸಾಲದ ಕನಸು. ಆ ಪಥ ಬದಲಿಸಿ ಈ ಪಥದಲಿಚಲಿಸಿ.ಆ ರಾಶಿ ಈ ರಾಶಿಯಲಿ ಸಾಗಿಕತ್ತೆ.ಕಪ್ಪೆ.ಗೋವು.ಮಾವುಯಾವುದೇ ವಾಹನ ಏರುಮಡಿವಾಳರ ಮನೆಯಲ್ಲೇ ವಾಸವಿರು  ಮಡಿಯುಳ್ಳವರ ಮನೆಯಲ್ಲೇ ಮಲಗು  ಒಟ್ಟಾರೆ ಅನ್ನದಾತನ ಮನೆಯಲ್ಲಿ ಅನವರತವಾಗಿರಲು ಬಂದುಬಿಡುಸಂಕ್ರಾಂತಿ ಬಾಡದಿರಲಿಅನ್ನದಾತನ ಮುಖದ ಕಾಂತಿ ಇಮಾಮ್ ಮದ್ಗಾರ

ಇಮಾಮ್ ಮದ್ಗಾರ “ಬಾಡದಿರಲಿ ಅನ್ನದಾತನ ಮುಖದ ಕಾಂತಿ” Read Post »

ಕಾವ್ಯಯಾನ

ಲತಾ ಎ ಆರ್ ಬಾಳೆಹೊನ್ನೂರು “ಸಂಕ್ರಾಂತಿ”

ಕಾವ್ಯ ಸಂಗಾತಿ ಲತಾ ಎ ಆರ್ ಬಾಳೆಹೊನ್ನೂರು “ಸಂಕ್ರಾಂತಿ” ಬಂದಿತೋ ಬಂದಿತು ಮೊದಲ ಹಬ್ಬಸರಿಸಿ ಎಲ್ಲರ ಮನದ ಮಬ್ಬಸವಿಯಲು ಕರೆಯಿತು ಸಿಹಿ ಕಬ್ಬಒಟ್ಟಿಗೆ ಆಡೋಣ ಎತ್ತರದ ದಿಬ್ಬ ದ್ವೇಷದ ಯೋಚನೆ ಎಂದಿಗೂ ಸಲ್ಲಒಟ್ಟಿಗೆ ಸವಿಯೋಣ ಎಳ್ಳು ಬೆಲ್ಲಸ್ನೇಹ ಸಂಪಾದಿಸೋಣ ಮೆಲ್ಲ ಮೆಲ್ಲಪ್ರೀತಿಯಲಿ ಸಿಹಿ ಮಾತಾಡೋಣ ಎಲ್ಲಾ ಉತ್ತರಾಯಣದ ಪುಣ್ಯಪರ್ವ ಕಾಲವಿದುಮಕರ ಸಂಕ್ರಮಣದ ಜ್ಯೋತಿಯಿದು.ಸೂರ್ಯದೇವನ ಕರುಣೆ ನಮಗೆಂದುಮನುಕುಲದ ಉನ್ನತಿಗೆ ಸಹಕರಿಸೆಂದು ಮಾನವರಲ್ಲಿ ತುಂಬಿರಲಿ ಪ್ರೀತಿ ಶಾಂತಿಮನದಿಂದ ದೂರಗಲಿ ಕಲ್ಮಶದ ಬ್ರಾಂತಿಸಾದಿಸಲು ಬೇಕಿದೆ ಸ್ವಲ್ಪ ಕ್ರಾಂತಿಅದಕಾಗಿ ಬಂದಿಹುದು ಮಕರ ಸಂ…..ಕ್ರಾಂತಿ. ದಬ್ಬಾಳಿಕೆ ಕಂಡರೆ ವಿರೋಧವಿರಲಿಲಂಚದ ಅಧಿಕಾರಕ್ಕೆ ತಲೆ ಬಾಗದಿರಲಿಪ್ರತಿ ಹೆಜ್ಜೆಯಲಿ ನಮ್ಮತನದ ದೃಢತನವಿರಲಿದಿಟ್ಟತನದ ಬದುಕು ಎಂದೆಂದೂ ಸಾಗುತಿರಲಿ. ಲತಾ ಎ ಆರ್ ಬಾಳೆಹೊನ್ನೂರು.

ಲತಾ ಎ ಆರ್ ಬಾಳೆಹೊನ್ನೂರು “ಸಂಕ್ರಾಂತಿ” Read Post »

ಕಾವ್ಯಯಾನ

ಗೀತಾ ಆರ್‌ ಅವರ ಕವಿತೆ “ಸುಗ್ಗಿ ಸಂಕ್ರಾಂತಿ”

ಕಾವ್ಯ ಸಂಗಾತಿ ಗೀತಾ ಆರ್‌ “ಸುಗ್ಗಿ ಸಂಕ್ರಾಂತಿ” ಹೊಸ ವರುಷದ ಹೊಸತುಬೆಳೆ ಹರುಷದಲಿ….ಸುಗ್ಗಿ ಸುಗ್ಗಿ ಸಂಭ್ರಮವುಮನೆಯಲಿ ಸಡಗರವು….ಕಷ್ಟವೆಂಬ ಕಹಿಎಳ್ಳು ಮರೆವಕಬ್ಬು ಬೆಲ್ಲದ ಸವಿಯಲಿ…ಸೂರ್ಯ ಪಥ ಬದಲಿಸುವಸಂಚಲನ ಕಾಲಚಕ್ರದಲಿ…ತುಂಬಿರಲಿ ಸುಖ ಸಂತೋಷಮಕರ ಸಂಕ್ರಾಂತಿಯಲಿ….ರಂಗೋಲಿಯ ಬಣ್ಣಗಳಲ್ಲಿಪಚ್ಚೆ ತಳಿರುತೋರಣದಲಿ…ಜೀವನದ ನೋವುಗಳೆಲ್ಲಾಮರೆವ ನಾವು ಬಾಳಿನಲ್ಲಿ….ಸ್ನೇಹ ಪ್ರೀತಿ ಸಂಬಂಧಗಳುಇರಲಿ ಸಾಮರಸ್ಯದಲಿ….ಆಯುಷ್ಯ ಆರೋಗ್ಯ ಆನಂದಪ್ರಾರ್ಥಿಸು ದೇವರಲಿ….ಧನ ಧಾನ್ಯ ಸಂಪತ್ತು ಸಮೃದ್ಧಿಏಲ್ಲಾರ ಬದುಕಿನಲಿ….ಸುಖ ಶಾಂತಿ ನೆಮ್ಮದಿ ಸಿಗಲಿಎಲ್ಲಾರಿಗೂ ಸುಗ್ಗಿಯಲಿ…ಸಂಭ್ರಮಿಸಿರಿ ಏಲ್ಲಾರೂಮಕರ ಸಂಕ್ರಾಂತಿಯಲಿ….  ಗೀತಾ ಆರ್.

ಗೀತಾ ಆರ್‌ ಅವರ ಕವಿತೆ “ಸುಗ್ಗಿ ಸಂಕ್ರಾಂತಿ” Read Post »

ಕಾವ್ಯಯಾನ

ಡಾ ತಾರಾ ಬಿ ಎನ್ ಅವರ ಕವಿತೆ,”ಸಂಕ್ರಾಂತಿ ಸಂಭ್ರಮ”

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ “ಸಂಕ್ರಾಂತಿ ಸಂಭ್ರಮ” ಭಾನು ಉದಯಿಸಿಕಿರಣ ಚೆಲ್ಲಿದ ದಿನಶೀತದ ನೆರಳು ಸರಿದುಹೊಸ ಕಾಲ ಅದುಬೆಳೆದು ನಿಂತ ಪೈರುಗಳು ನಗುವಿನ ಗೀತೆ ಮುಗುಳು ಮನೆ ಮನ ತುಂಬಿತುಸಂಕ್ರಾಂತಿಯ ಸಂಭ್ರಮ ಎಳ್ಳು–ಬೆಲ್ಲ ಹಂಚಿಹೃದಯ ಬೆಸೆಯುವಸಂಪ್ರದಾಯ,ಕಹಿ–ಸಿಹಿಯ ಸಂಗಮವೇಬದುಕಿನ ಸತ್ಯೋಪಾಯ,ಸಂಕ್ರಾಂತಿಯ ಸಂಭ್ರಮ “ಎಳ್ಳು ಬೆಲ್ಲ ತಿನ್ನಿಒಳ್ಳೇ ಮಾತಾಡಿ”  ಹಾರೈಕೆ,ಸ್ನೇಹದ ಬೀಜ ಬಿತ್ತುವಮಧುರ ಸಂಸ್ಕೃತಿಯ ಸಖ್ಯಹಸಿರು ಹೊಲಗಳಲ್ಲಿಕಂಗೊಳಿಸುವ ದವಸ,ಸಂಕ್ರಾಂತಿಯ ಸಂಭ್ರಮ ರೈತನ ಶ್ರಮಕ್ಕೆ  ಸಿಕ್ಕಿತುಸಾರ್ಥಕ ಉತ್ಸವ,ನೇಗಿಲು ಹಿಡಿದ ಕೈಗಳಿಗೆಗೌರವದ ನಮನ,ಅನ್ನದಾತನ ಬದುಕಿಗೆಬೆಳಕಿನ ಕಿರಣ.ಸಂಕ್ರಾಂತಿಯ ಸಂಭ್ರಮ ಗೋ  ಮಾತೆಗೂ ಹಬ್ಬ, ಕೊಂಬುಗಳಿಗೆ ಬಣ್ಣಗಂಟೆಯ ನಾದದಲ್ಲಿತುಂಬಿತು ಹಳ್ಳಿ–ಹಾಡುಉತ್ಸಾಹದ ಆಟ–ಪಾಠಸಂಕ್ರಾಂತಿ ತಂದಿತುಸಂಕ್ರಾಂತಿಯ ಸಂಭ್ರಮ ಸಂಭ್ರಮದ  ನೋಟ.ಆಕಾಶದಲ್ಲಿ ಗಾಳಿಪಟಬಣ್ಣದ ಬಣ್ಣದ  ಕೂಟಸಕ್ಕರೆ ಕಬ್ಬು ಕೈಯಲ್ಲಿಕನಸ  ಮನದಲ್ಲಿ,ಸಂತಸದ ಸಿಹಿ ಬೆಲ್ಲ ಎಲ್ಲರ ಬದುಕಿನಲ್ಲಿ.ಸಂಕ್ರಾಂತಿಯ ಸಂಭ್ರಮ ಸೂರ್ಯನಿಗೆ ನಮಿಸಿಹೊಸ ದಾರಿಗೆ ಪಯಣ ಭವಿಷ್ಯ ಕಟ್ಟುವೆವು, ಪಣಒಗ್ಗಟ್ಟಿನ ಸಂದೇಶ ಸಾರುವಪುಣ್ಯದ ಹಬ್ಬ,ಸಂಕ್ರಾಂತಿ , ಸಂಸ್ಕೃತಿ ಸಂಭ್ರಮ, ಸೌಭಾಗ್ಯಸಂಕ್ರಾಂತಿಯ ಸಂಭ್ರಮ. ಡಾ ತಾರಾ ಬಿ ಎನ್

ಡಾ ತಾರಾ ಬಿ ಎನ್ ಅವರ ಕವಿತೆ,”ಸಂಕ್ರಾಂತಿ ಸಂಭ್ರಮ” Read Post »

ಕಾವ್ಯಯಾನ

ಮಮತಾ ಜಾನೆ ಅವರ ಕವಿತೆ “ಹಸಿರು ಕಾಯುವ ರೈತ”

ಕಾವ್ಯ ಸಂಗಾತಿ ಮಮತಾ ಜಾನೆ “ಹಸಿರು ಕಾಯುವ ರೈತ” ನೇಗಿಲು ಹಿಡಿದು ಬೆವರನು ಸುರಿಸಿಮಣ್ಣಲಿ ಕನಸನು ಬಿತ್ತುವನುರಜೆಗಳ ಲೆಕ್ಕಿಸದ ರೈತನಾಡಿಗೆ ಅನ್ನವ ನೀಡುವನು ಮೌನದಲಿ ಕಾಯಕ ತೋರುತದೇಶ ಸೇವೆಯ ಮಾಡುವನುಬಿತ್ತುವ ಬೀಜಕ್ಕೆ ಜೀವವ ತುಂಬುತಭೂಮಿಯ ಹಸಿರನು ಕಾಯುವನು ಶ್ರಮವನ್ನು ಹರಿಸುತ ರೈತಬೆಳೆಯನು ಬೆಳೆದು ಅನ್ನವ ನೀಡುವನುದೇಶಕ್ಕೆ ಬೆನ್ನೆಲುಬು ಆಗಿರುವ ರೈತಸರ್ವರಿಗೂ ಅನ್ನದಾತನು ಆಗಿರುವನು ಮಮತಾ ಜಾನೆ

ಮಮತಾ ಜಾನೆ ಅವರ ಕವಿತೆ “ಹಸಿರು ಕಾಯುವ ರೈತ” Read Post »

ಕಾವ್ಯಯಾನ

ರಾಜೇಶ್ವರಿ ಎಸ್ ಹೆಗಡೆ “ಸಗ್ಗದ ಸಂಕ್ರಾಂತಿ”

ಕಾವ್ಯ ಸಂಗಾತಿ ರಾಜೇಶ್ವರಿ ಎಸ್ ಹೆಗಡೆ “ಸಗ್ಗದ ಸಂಕ್ರಾಂತಿ” ಮಾಗಿಯ ಚಳಿಯಲ್ಲಿಅಂಗಳಕೆ ನೀರೆರೆದುಚಿತ್ತಾರವ ಬಿಡಿಸುತ್ತಾಮಾಧವನ ನೆನೆನೆನೆದುಸುಗ್ಗಿ ಸಂಭ್ರಮದಿ ಮುಳುಗುವುದು. ವರುಷಕ್ಕೊಮ್ಮೆ ಹರುಷತರುವ ಸಂಕ್ರಮಣವುಎಳ್ಳಹೋಳಿಗೆ ಮಾದಲಿ ತಿನಿಸಿಭೂರಿಭೋಜನ ಉಣಿಸುವುದುಸಂಕ್ರಾಂತಿ ಸಂಭ್ರಮದಿ ಮುಳುಗುವುದು. ರೈತನ ಫಸಲಿಗೆ ಭಕ್ತಿಯಿಂ ನಮಿಸಿರಾಸುಗಳಿಗೆ ಗೆಜ್ಜೆಕಟ್ಟಿ ಸಿಂಗರಿಸಿಜನಪದ ಸೊಗಡ ಎಲ್ಲೆಡೆ ಬೀರಿಭೂತಾಯಿ ಪೂಜೆ ಮಾಡುವೆವುಸಂಕ್ರಾಂತಿ ಹರುಷದಿ ಮುಳುಗುವುದು ವರುಷದ ಮೊದಲ ಹಬ್ಬಉತ್ತರಾಯಣ ಆರಂಭಸೂರ್ಯನ ಪಥ ಸಂಚಲನಮಕರ ರಾಶಿಗೆ ಸಾಗುವ ನೇಸರಸಂಕ್ರಾಂತಿ ಹರುಷ ತುಂಬುವನು. ರವಿಯ ಕಾಂತಿ ಹೊಳೆಯಲುಮನಕೆ ಶಾಂತಿ ಮೂಡಲುಕ್ರಾಂತಿ ಬ್ರಾಂತಿ ಹೊರದೂಡಿಹೊಸತನದ ಕಳೆ ಕಾಣುವೆವುಮಕರ ಸಂಕ್ರಾಂತಿಲಿ ಮುಳುಗುವುದು. ಎಳ್ಳು ಬೆಲ್ಲದ ಸಿಹಿ ಜೆಗೆದುಕಬ್ಬಿನ ರಸವನು ಕುಡಿದುಹುಗ್ಗಿಯ ಸವಿ ಸವಿದುಹೊಲದಲಿ ಊಟ ಮಾಡುವೆವುಸಗ್ಗದ ಸಂಕ್ರಾಂತಿಲಿ ಮುಳುಗುವುದು.  ರಾಜೇಶ್ವರಿ ಎಸ್ ಹೆಗಡೆ.

ರಾಜೇಶ್ವರಿ ಎಸ್ ಹೆಗಡೆ “ಸಗ್ಗದ ಸಂಕ್ರಾಂತಿ” Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ ಕವಿತೆ,”ಮಕರ ಸಂಕ್ರಾಂತಿ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಮಕರ ಸಂಕ್ರಾಂತಿ” ಬೆಳಗುವ ಸೂರ್ಯಸಂತೋಷ ಸಮೃದ್ಧಿಬಾಳಲ್ಲಿ ತರಲಿಸುಖ ಶಾಂತಿ ಕರುಣಿಸಲಿಸಂಕ್ರಾಂತಿಯ ಸಂಭ್ರಮ ನಿತ್ಯ// ಸೂರ್ಯದೇವನುಉತ್ತರಾಯನ ಪಥಬದಲಿಸುವ ಹಾಗೆನಮ್ಮ ಜೀವನದದಾರಿ ಸಂತೋಷದಪಥದಲ್ಲಿ ಸಾಗಿಸೋಣ ನಿತ್ಯ// ಉದಯಿಸಲಿ ರವಿಬೆಳಕಿನ ಚಿಲುಮೆಯಂತೆಬಾಳು ಸಮೃದ್ಧಿಯಲಿದುಃಖವನ್ನು ಹಾರಿಬಿಟ್ಟುಎಳ್ಳಿನಲ್ಲಿ ಬೆಲ್ಲ ಬೆರತಂತೆ  ಸಂಬಂಧ ಬೆರೆಸೋಣ ನಿತ್ಯ// ಮಕರ ಸಂಕ್ರಾಂತಿನಮ್ಮ ನಿಮ್ಮಜೀವನದ ಹೊಸದೊಂದು ಕ್ರಾಂತಿಯನ್ನು ಮೂಡಿಸಲಿದೀಪ ಬೆಳಗಿಸಿಕಷ್ಟಕಾರ್ಪಣ್ಯವ ದೂರಮಾಡಿ ಯಶಸ್ಸಿನಸರಮಾಲೆಯನ್ನೇ ತರಲಿಸಂಕ್ರಾಂತಿ ಸಂಭ್ರಮ ನಿತ್ಯ//  ವಿಜಯಲಕ್ಷ್ಮಿ ಹಂಗರಗಿ

ವಿಜಯಲಕ್ಷ್ಮಿ ಹಂಗರಗಿ ಕವಿತೆ,”ಮಕರ ಸಂಕ್ರಾಂತಿ” Read Post »

ಕಾವ್ಯಯಾನ

ಡಾ ತಾರಾ  ಬಿ ಎನ್ ಧಾರವಾಡ ಅವರ ಕವಿತೆ,”ಅನುಬಂಧ”

ಕಾವ್ಯ ಸಂಗಾತಿ ಡಾ ತಾರಾ  ಬಿ ಎನ್ ಧಾರವಾಡ “ಅನುಬಂಧ” ಕಾಣದ ದಾರಿಯಲ್ಲಿಬೆಸೆದ ನಂಟು,ಹೆಸರಿಲ್ಲದರೂ ಹೃದಯಕ್ಕೆಪರಿಚಿತವಾದ ಬಂಧ…ಕಾಲದ ಹೊಳೆ ಹರಿದರೂಕಳೆಯದ ಗುರುತು, ಗಂಟುಅದು ಅನುಬಂಧ.ಮೌನದಲ್ಲೂ ಮಾತಾಡುವಸಂಬಂಧ, ಬಂಧ..ಕಣ್ಣಂಚಿನ ನೀರನ್ನೂಓದುತ್ತದೆ ಒರೆಸುತ್ತದೆ.ಹೃದಯ ಮುರಿದುನೊಂದ ಕ್ಷಣದಲ್ಲಿಅದೃಶ್ಯವಾಗಿ ಕೈಹಿಡಿದುಕೊಳ್ಳುತ್ತದೆ.ಮಣ್ಣಿನ ವಾಸನೆಯಂತೆಸಹಜ,ಬೆಳಗಿನ ಬೆಳಕಿನಂತೆಮೃದುವು.ನಗುವಿನಲ್ಲೂ, ನೋವಿನಲ್ಲೂಉಸಿರಾಡುವ ನಂಟು.ತಾಯಿ–ಮಗುವಿನಹಸಿರು ಪ್ರೀತಿಯಂತೆಸ್ನೇಹಿತರ ನಿಷ್ಕಪಟ ನಗು,ಗುರುವಿನ ಮಾರ್ಗದರ್ಶನ,ಅಸ್ಪಷ್ಟ ಮೌನಅನುಬಂಧದ ಬೇರೆ ಬೇರೆರೂಪಗಳು ಒಂದೇಕಾಲ ದೂರಸಿದರೂ,ಸ್ಮೃತಿ ಪಟದಲ್ಲಿ ಹತ್ತಿರ.ದೇಹಗಳು ದೂರವಾದರೂ,ಮನಗಳು ಒಡಲಿನಂತೆಬಿರುಗಾಳಿಯಲ್ಲಿ ಮರವನ್ನೆತ್ತಿದಬೇರುಗಳಂತೆ, ಗಟ್ಟಿಎತ್ತುವ ಶಕ್ತಿಯೇ ಅನುಬಂಧ.ಜಗತ್ತು ಕೈಬಿಟ್ಟ ಸಂದರ್ಭದಲ್ಲಿಉಳಿಸುವ ನಂಬಿಕೆ.ಅನುಬಂಧವೆಂದರೆಸಂಬಂಧವಲ್ಲ,ಬದುಕಿಗೆ ಅರ್ಥನೀಡುವ ಭಾವನೆ.ನಮ್ಮನ್ನು ನಾವುಗುರುತಿಸುವ ಕನ್ನಡಿ,ಜೀವನದ ದೀರ್ಘಪಯಣದಲ್ಲಿ ಜೊತೆಯಾದ ನೆರಳು.ಅರಿಯದಿದ್ದರೂ,ಮೌಲ್ಯ ಗೊತ್ತಾಗುವುದು.ಅದಕ್ಕಾಗಿಯೇ ಅನುಬಂಧ…ಹೃದಯದೊಳಗೆ ಮೌನವಾಗಿ ,ಹೂ ಬಿಡುವ ಅಮೂಲ್ಯ ವರ. ಡಾ ತಾರಾ ಬಿ ಎನ್ ಧಾರವಾಡ.

ಡಾ ತಾರಾ  ಬಿ ಎನ್ ಧಾರವಾಡ ಅವರ ಕವಿತೆ,”ಅನುಬಂಧ” Read Post »

ಕಾವ್ಯಯಾನ

ಸುಮತಿ ನಿರಂಜನ್‌ ಅವರ ಕವಿತೆ “ಪದ್ಯವೆಂದರೆ …. ಉತ್ಸವ !!!”

ಕಾವ್ಯ ಸಂಗಾತಿ ಸುಮತಿ ನಿರಂಜನ್‌ “ಪದ್ಯವೆಂದರೆ …. ಉತ್ಸವ !!!” The Hollow Men, The Waste Land ಬರೆದ ಮಹಾನ್ ಕವಿ ಟಿ.ಎಸ್. ಎಲಿಯಟ್ ಯಾವುದೋ ಲಹರಿಯಲ್ಲಿ ಹೇಳಿದನಂತೆ ಒಮ್ಮೆ – “Poetry is a mug’s game..”. ಪದ್ಯವೆಂದರೆಪದಗಳ ದೊಂಬರಾಟಅದು ಬರಿ ಹುಂಬರಾಟ !ಎಂದ ಪಶ್ಚಿಮದ ಕವಿಗೆಕಂಡದ್ದು ಬರಡುಬಂಜರು ಭೂಮಿಬೆಳೆವುದಲ್ಲಿ ಬರಿದೆಪಾಪಾಸುಕಳ್ಳಿ !ಬಟ್ಟೆ ತುಂಬಿಸಿಟ್ಟಬೆದರು ಬೊಂಬೆಗಳುತಲೆ ತುಂಬ ಬೈಹುಲ್ಲುಸುಮ್ಮ ಸುಮ್ಮನೆ ಗುಲ್ಲು … ಮೂಡಣ ಮನೆಯಮುತ್ತಿನ ನೀರುಕಾಣುವುದೇನುಪಡುವಣದಲ್ಲಿ ?ನುಣ್ಣನೆ ಎರಕದಬೆಳ್ಳಿಯ ಹೊಳೆ ಅದುಬರಿ ಬೆಳಗಲ್ಲೋ ಅಣ್ಣಾ !ಇದ ತಿಳಿಯಲು ಬಾರೋಸಾಧನಕೇರಿಗೆ ವಂದಿಸಿಬಾರೋ ಪಾಕಶಾಲೆಗೆಬೆಂದರೆ ಏನಾಗುವೆಯೋತಿಂದು ಹೇಳಲು ಬಾರೋ!,ಕರೆದೊಯ್ಯುವೆನುಕವಿಶೈಲಕೆ ನಿನ್ನಅನಿಕೇತನವೆಂದರೆಏನೆನ್ನಲಿ ಅಣ್ಣಾ !ಹಾಗೆಯೇ ಜೋಗದಸಿರಿ ಬೆಳಕಿನಲಿಕಾಣುವೆ ನೀನಿತ್ಯೋತ್ಸವ !ಪದಗಳ ಹುಂಬರಾಟವಲ್ಲೋಇದು ನಾದಬ್ರಹ್ಮೋತ್ಸವತಂತಿ ನಾಕು ವೇದಕಲರವ… ಸುಮತಿ ನಿರಂಜನ್

ಸುಮತಿ ನಿರಂಜನ್‌ ಅವರ ಕವಿತೆ “ಪದ್ಯವೆಂದರೆ …. ಉತ್ಸವ !!!” Read Post »

You cannot copy content of this page

Scroll to Top