ವ್ಯಾಸ ಜೋಶಿ ಅವರ ಚಳಿಗಾಲದ ತನಗಗಳು
ಕಾವ್ಯ ಸಂಗಾತಿ ವ್ಯಾಸ ಜೋಶಿ ಚಳಿಗಾಲದ ತನಗಗಳು ಚಳಿಯೇ ಚಳಿಯಲ್ಲಿ ಕಂಪಿಸಿ ನಡುಗಿದೆ. ಥಂಡೀ ತಾಳಲಾರದೆ ಸೂರ್ಯನ ಕರೆದಿದೆ. ಭೂಮಿಯೇ ನಡುಗಿದೆ ಈ ಪರಿಯ ಥಂಡಿಗೆ ಮನೆಗೇ ಹೊಚ್ಚಬೇಕುದೊಡ್ಡ ಕೌದಿ ಬೆಚ್ಚಗೆ. ಉರಿಯುವ ರವಿಗೆಬೈಯುವರು ‘ಮೇ’ನಲ್ಲಿ,ಕರೆವರಾದರದಿಹೇಮಂತ ಋತುವಲ್ಲಿ. ಇಷ್ಟು ವರ್ಷ ಬಂದ್ಹೊಯ್ತು ಎಷ್ಟೊಂದು ಚಳಿಗಾಲ, ಈ ಸಾರಿ ಬೆಚ್ಚಗಿದೆ ಎಂದನು ಮದುಮಗ. ನವದಂಪತಿಗಳುಗೆಲ್ಲಲು ಚಳಿಯನ್ನದೊಡ್ಡ ಕಂಬಳಿಗಿಂತಅಪ್ಪುಗೆ ವರದಾನ. ಎಷ್ಟೊಂದು ಚಳಿಯಲ್ಲೂಮಧುಚಂದ್ರದಿ ಜೋಡಿಗೆಲ್ಲುವರು ಚಳಿಯಸ್ಕೂಬಾ ಡೖವಿಂಗು ಮಾಡಿ. ಓ ಸೂರ್ಯ ಬಂದುಬಿಡು ಗೆಳೆಯನಂತೆ ಹತ್ರ, ಅದಕ್ಕೆ ನಿನಗೊಂದು ಅನ್ವರ್ಥನಾಮ ‘ಮಿತ್ರ’. ವ್ಯಾಸ ಜೋಶಿ
ವ್ಯಾಸ ಜೋಶಿ ಅವರ ಚಳಿಗಾಲದ ತನಗಗಳು Read Post »









