“ಸಗ್ಗ ಬಂದಿತು ಇಳೆಗೆ” ಡಾ. ಪಿ. ಜಿ. ಕೆಂಪಣ್ಣವರ
ಕಾವ್ಯ ಸಂಗಾತಿ ಡಾ. ಪಿ. ಜಿ. ಕೆಂಪಣ್ಣವರ “ಸಗ್ಗ ಬಂದಿತು ಇಳೆಗೆ” ಎರಳೆಗಂಗಳ ಚೆಲುವೆನಗುವ ಮೋಹಕ ತಾರೆನಿನ್ನ ನೋಡುತ ನಾನು ಮರುಳನಾದೆ!ಬರಿ ಚಣದ ಬದುಕಿನಲಿಒಲವ ಬಿತ್ತಿದ ನೀನುಬಾಳ ದಾರಿಗೆ ನಿತ್ಯ ದೀಪವಾದೆ ಬಿರಿದ ಮಲ್ಲಿಗೆ ದಂಡೆಮುಡಿದು ನೀ ಬರುತಿರಲುಪಿಕವು ಕೂಗಿತು ಅರಸಿ ಬಂದಳೆಂದು!ಬದುಕ ಬಂಡಿಗೆ ಎರಡುಗಾಲಿ ನಾವಿರುತಿರಲುಹದುಳ ತುಂಬುವುದಿಲ್ಲಿ ಬಳಿಗೆ ಬಂದು! ಬಾಳ ಪಯಣದ ತುಂಬಹಸಿರು ತುಂಬಿತು ನಲ್ಲೆನಿನ್ನ ಒಲುಮೆಯ ತೊರೆಯು ಹರಿಯುತಿರಲು!ಬಂದ ಜಂಜಡವೆಲ್ಲಕರಗಿ ಹೋಯಿತು ಸಖಿಯೇಸಗ್ಗ ಬಂದಿತು ಇಳೆಗೆ ನೀನು ನಗಲು! ಡಾ. ಪಿ. ಜಿ. ಕೆಂಪಣ್ಣವರ
“ಸಗ್ಗ ಬಂದಿತು ಇಳೆಗೆ” ಡಾ. ಪಿ. ಜಿ. ಕೆಂಪಣ್ಣವರ Read Post »









