“ಲಂಚದ ತುತ್ತು” ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ಕಾವ್ಯ ಸಂಗಾತಿ “ಲಂಚದ ತುತ್ತು” ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಒಬ್ಬ ಬಡವನ ಮನೆ ಮುಂದೆನಾನು-ಕಿರಿ ಕಿರಿ ಮಾಡಿದೆಅವನ ಹಸಿವಿನ ಶಾಪವುಲಂಚದ ರೂಪವುನನ್ನ ಕೈಸೇರಿತು ಯಾರದೋಬೆವರಿನ ಹಣಬೇಕರಿಯ ಮುಂದೆ ಕುಳಿತುಬನ್ನು ತಿನ್ನುತ್ತಿದ್ದೆಹಸಿದ ನಾಯಿಯೊಂದುಜೊಲ್ಲು ಸುರಿಸಿನೋಡುತ್ತಿತ್ತುಒಂದು ತುಂಡು ಬನ್ನು ಎಸೆದೆಗಬಕ್ಕನೆ ನುಂಗಿಬಾಲ ಅಲ್ಲಾಡಿಸಿತುಮತ್ತೊಂದು ತುಣುಕು ಹಾಕಿದೆಅದು-ಚಿರಪರಿಚಿತನಂತೆ ಹತ್ತಿರಬಂದುನನ್ನ ಕಾಲು ಮೂಸಿತುನನಗನಿಸಿತು….ನಾಯಿ ಪ್ರಾಣಿ ಹಸಿದುಮೂಕ ಭಾಷೆಯಲಿಬೇಡುತಿದೆಅದರ ತಪ್ಪಲ್ಲನಾನು ಮಾತ್ರ ಎಲ್ಲವೂಇದ್ದೂಕಸಿದುಕೊಳ್ಳುವಒಬ್ಬ ಭಿಕ್ಷುಕನೆ! ಯಾರಿಂದಲೋ ಪಡೆದೆಅವರ ದುಡಿಮೆಯ ಹಂಗುಯಾರಿಗೂ ನೀಡದೆಮನೆಗೆ ನಡೆದೆ ಹಿಂದೆ ತಿರುಗಿದೆಅದೇ ನಾಯಿ ಬೆನ್ನ ಹಿಂದೆಎಂತಹ ಕಕ್ಕುಲಾತಿ ಅದಕೆ?ಮತ್ತೆ ಬಾಲ ಅಲ್ಲಾಡಿಸಿತುಮೈಯ ಸವರಿದೆ ಅಂದಿನಿಂದ ಇಂದಿಗೂಎನ್ನ ಮನೆಯ ಕಾಯುತಿದೆತಿಂದ ಒಂದೇ ಅಗುಳಿಗೆತುತ್ತಿನ ಋಣ ತೀರಿಸಲು ಆದರೆ…….?ಈ ನರ ಪ್ರಾಣಿಯಾದ ನಾನುಯಾವ ಋಣವೂತೀರಿಸದೆಮಹಾ ಭಿಕ್ಷುಕ! ಆ ನಾಯಿಗಿರುವ ನಿಯತ್ತು ನನಗಿಲ್ಲಬಿಸಾಡಿದ ಬನ್ನುನನ್ನಲ್ಲದಿದ್ದರೂಅದು ಸಲ್ಲಿಸಿದಕೃತಜ್ಞತೆ ಮಾತ್ರಪರಮ ಸತ್ಯ ಕೊಟ್ಟವನು ಬಡವನಾದರೂಅವನೇ ಸಹೃದಯಿಶ್ರೀಮಂತತಿಂದವನು ನಾನಾದರೂನಾನಿಲ್ಲಿ ಬೇಡಿದವ ಅಯ್ಯೋವಿಪರ್ಯಾಸವೆ……ನಾಯಿಯೇ ಮೇಲುನರನಾಗಿನಾನೇ ಮಹಾ ಬಿಕ್ಷುಕ ————-ಶರಣಪ್ಪ ತಳ್ಳಿ ಕುಪ್ಪಿಗುಡ್ಡ
“ಲಂಚದ ತುತ್ತು” ಶರಣಪ್ಪ ತಳ್ಳಿ ಕುಪ್ಪಿಗುಡ್ಡ Read Post »









