ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಅವರ “ಬಣ್ಣದ ಬದುಕು”
ಕಾವ್ಯ ಸಂಗಾತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ಬಣ್ಣದ ಬದುಕು” ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ಬಣ್ಣದ ಬದುಕು” ಕೆಲವುನಂಬಿಕೆಗಳೇ ಹಾಗೆಕಣ್ಣು ಮುಚ್ಚಿನಡೆದಾಗಲೆಲ್ಲಾ..ಜೊತೆಗಿದ್ದೇಹೃದಯದ ಬಡಿತವನ್ನೇಅಡವಿಡುವ ಹಾಗೆ! ಕೆಲವುಕಣ್ಣುಗಳೇ ಹಾಗೆನೋಡು-ನೋಡುತ್ತಲೇಆಂತರ್ಯವನು ತಿವಿದುಅಗಿಯುವ ಹಾಗೆ ಕೆಲವುಬಂಧಗಳೇ ಹಾಗೆಹೊರಗಿನಿಂದರೇಷ್ಮೆಯ ನೂಲಿನಂತೆ..ಆದರೆಒಳಗೊಳಗೆಉರುಳಾಗಿ ಕಾಡುವ ಹಾಗೆ! ಕೆಲವುನೆರಳುಗಳೇ ಹಾಗೆಬೆಳಕಿದ್ದಾಗಬೆನ್ನಿಗಂಟಿಕೊಂಡಿದ್ದು..ಕತ್ತಲಾಗುತ್ತಿದ್ದಂತೆಯೇಕಾಣದಂತೆ……. ಮಾಯವಾಗುವ ಹಾಗೆ! ಕೆಲವುಹಣ್ಣುಗಳೇ ಹಾಗೆಉಣ್ಣು-ಉಣ್ಣುವಾಗಲೇಒಂದು ಬದಿ ಸಿಹಿಮಗದೊಂದು ಬದಿ ಕಹಿಯ ಹಾಗೆ ಕೆಲವುಬಣ್ಣಗಳೇ ಹಾಗೆಮನದೊಳಗೆಕೊಳೆಯಿದ್ದರೂ ಹೊರಗೆನಗು-ನಗುತ್ತಲೇಪ್ರಪಾತಕ್ಕೆ ನೂಕುವ ಹಾಗೆ! ಕೆಲವುಹೆಣ್ಣುಗಳೇ ಹಾಗೆಮುದ್ದಿಸಿ ಮೈಮರೆಸುತ್ತಲೇನಿದ್ದೆಯಲ್ಲೇ ಮೆಲ್ಲಗೆಉಸಿರುಗಟ್ಟಿಸುವ ಹಾಗೆ! ಈ ಮಣ್ಣೂ ಸಹ ಹಾಗೆಯೇ…ತನಗೆ ಬೇಕೆಂದಾಗತಕ್ಷಣವೇ ಕರೆದುಅಪ್ಪಿಕೊಂಡು ಶಾಶ್ವತವಾಗಿಮಲಗಿಸಿಕೊಳ್ಳುವ ಹಾಗೆ! ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಅವರ “ಬಣ್ಣದ ಬದುಕು” Read Post »









