ತಾರಾ ಬಿ ಎನ್ ಧಾರವಾಡ ಅವರ ಕವಿತೆ “ಆತ್ಮ ಬೆಸುಗೆ”
ಕಾವ್ಯ ಸಂಗಾತಿ ತಾರಾ ಬಿ ಎನ್ ಧಾರವಾಡ “ಆತ್ಮ ಬೆಸುಗೆ” ಇರುವುದೆಲ್ಲವ ಬಿಟ್ಟುಇರದುದರ ಕಡೆಗೆ,ಹೊರಟ ಮನಸ್ಸು ಮೌನದ ನಡಿಗೆಗೆಒತ್ತು ನೀಡಿ ಕಾಣದಕನಸಿನ ಕಡೆಗೆ ಸಾಗಬಾರದುಹೃದಯದೊಳಗೆ ಕಹಿ ಭಾವತೊರೆಯಬೇಕುಹೊಸ ಹೊಳವು ತುಂಬಿಇರುವುದೇ ಸಾಕೆಂದುನಡೆಯಬೇಕುಇರದುದರಲ್ಲಿ ಹುಟ್ಟಿಸುಹೊಸ ಸ್ಪಂದನದ ಬಂಧುರವಹಳೆಯ ಸರಳುಗಳ ನೆರಳು,ಬಂಧನ ಮುರಿದು,ಹೊಸ ದಾರಿಯಕಡೆಗೆ ಜೀವ ಹರಿದು.ಇರುವುದರಲ್ಲಿ ನೆಮ್ಮದಿಹುಡುಕಬೇಕು.ಇರದುದರಲ್ಲಿ ಅರ್ಥವೇಹುಡುಕಬೇಕು,ಹುಟ್ಟಬೇಕು,ಕಳೆದುಹೋಗುವಭಯದ ಅಂಚಿನ ನೆಪ ಬೇಡ,ಧೈರ್ಯದ ನೆಲೆಯಲ್ಲಿಕನಸು ನಿಂತಿದೆ.ಇರುವುದೆಲ್ಲವ ಬಿಟ್ಟುಸಾಗುವ ದಾರಿ, ಸಂಕಟಕರ ಇದ್ದುದರಲ್ಲಿ ಬದುಕು ಸಂತಸಕರ,ಅದೇ ಜೀವನದ ನಿಜವಾದ ಸಾರಇರದುದರಲ್ಲಿ ಹುಡುಕುವಆಸೆಯೊಳಗೆ ಹರಿಯುವುದುಹೊಸ ಒಸಗೆನಮ್ಮಲ್ಲಿ ನಮ್ಮನ್ನೇಕಂಡುಕೊಳ್ಳುವಒಲವಿನ ಆತ್ಮ ಬೆಸುಗೆಬಂಧುರ ಸುಂದರ. ತಾರಾ ಬಿ ಎನ್ ಧಾರವಾಡ.
ತಾರಾ ಬಿ ಎನ್ ಧಾರವಾಡ ಅವರ ಕವಿತೆ “ಆತ್ಮ ಬೆಸುಗೆ” Read Post »









