ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

ಹಾಸ್ಯಬರಹ ಗೊರೂರು ಅನಂತರಾಜು ಅವರ ಲೇಖನಿಯಿಂದ “ನಿಮ್ಮಪ್ಪ ಏನಂತಾ ಕರೀತಾರೆ..ಈಡಿಯಟ್..ಸ್ಟುಪಿಡ್..!”

ಹಾಸ್ಯ ಸಂಗಾತಿ ಗೊರೂರು ಅನಂತರಾಜು “ನಿಮ್ಮಪ್ಪ ಏನಂತಾ ಕರೀತಾರೆ.. ಈಡಿಯಟ್..ಸ್ಟುಪಿಡ್..!” ಮುದ್ದಣ್ಣ: ಮನೋರಮೆ, ನೀನು ಯುಗಾದಿ ಹಬ್ಬಕ್ಕೆ ಮಾಡಿರುವ ಪಾಯಸ ತುಂಬಾ ರುಚಿಯಾಗಿದೆ ಕಣೆ.ಮನೋರಮೆ: ಅದಕ್ಕೆ ಬೆಕ್ಕು ಬಾಯಿ ಹಾಕಿರದೆ ಇದ್ದಿದ್ರೇ..ಚೆನ್ನಾಗಿರುತ್ತಿತ್ತು. ಮು: ರಾತ್ರಿ ಒಂಭತ್ತು ಗಂಟೇಲಿ ಎಲ್ಲಿಗ್ಹೊರಟೆ..?ಮ: ನರಕಕ್ಕೆ.. ಇಲ್ಲಿ ಮೂರ‍್ಹೊತ್ತು ನಿಮ್ಮತ್ರ ಜಗಳ ಆಡ್ಕೊಂಡು ಇರೋದಕ್ಕಿಂತ ಅಲ್ಲಿ ಇರೋದೆ ವಾಸಿ.ಮು: ನರಕದಲ್ಲಿರುವ ನಿನ್ನ ಅಮ್ಮನಿಗೆ ನನ್ನ ನಮಸ್ಕಾರ ತಿಳಿಸು. ಸದ್ಯ ಸರ್ಕಾರದ ಉಚಿತ ಬಸ್ಸಿನಲ್ಲಿಯೇ ಸಾವಕಾಶವಾಗಿ ಹೋಗಿ ಬಾ. ಮ: ರೀ, ನೀವು ಈ ರೀತಿ ಜಗಳ ಆಡ್ತಿದ್ರೆ ಅಕ್ಕಪಕ್ಕ ಮನೆಯವರಿಗೆ ಕೇಳಿಸುತ್ತೆ..ಮು: ಸರಿ ಹಾಗಾದ್ರೇ, ಬೇರೆ ಯಾವ ರೀತಿ ಜಗಳ ಆಡಬೇಕು ಅಂತ ನೀನೇ ಹೇಳು. ದಿನಾ ರಾತ್ರಿ ಬಿಗ್ ಬಾಸ್ ಹಾಕ್ಕೊಂಡು ನೋಡ್ತ ಇರ‍್ತಿಯಲ್ಲಾ.. ಅದು ಅಕ್ಕಪಕ್ಕ ಮನೆಗೆ ಹಾಗೇ ಕೇಳಿಸುತ್ತೇ ತಾನೇ.. ಮ: ರೀ, ನಾನು ಮುಂದೆ ದಪ್ಪ ಆದ್ರೂ ನೀವು ಇದೇ ರೀತಿ ಪ್ರೀತಿ ಮಾಡ್ತೀರಾ..?ಮು: ಅದ್ಹೇಗೆ ಸಾಧ್ಯ..?ಮ: ತಾಳಿ ಕಟ್ಟುವ ವೇಳೆ ಅಗ್ನಿಸಾಕ್ಷಿಯಾಗಿ ಪ್ರಮಾಣ ಮಾಡಿದ್ರಿ..!ಮು: ನಿನ್ನ ಕಷ್ಟಗಳಲ್ಲಿ ಭಾಗಿಯಾಗುತ್ತೇನೆ ಎಂದಷ್ಟೇ ಪ್ರಮಾಣ ಮಾಡಿದ್ದೇನೆ. ಆದರೆ ನೀನು ದಪ್ಪ ಆಗುವ ವಿಚಾರದಲ್ಲಿ ಮಾತು ಕೊಟ್ಟಿಲ್ಲ..ದಯವಿಟ್ಟು ಒಂದ್ಹೊತ್ತು ಊಟ ಬಿಟ್ಟು ಡಯಾಟ್ ಮಾಡು. ಐದು ವರ್ಷದಲ್ಲಿ ನೀನು ಗ್ಯಾರಂಟಿ ತೆಳ್ಳಗಾಗ್ತಿಯಾ.. ಮ: ರೀ, ನೀವು ಪಿಹೆಚ್‌ಡಿ ಮಾಡಿದ್ರಲ್ಲಾ. ನಿಮ್ಮನ್ನೀಗ ಡಾಕ್ಟರ್ ಅಂತ ಕರಿಲೋ ಫ್ರೊಫೆಸರ್ ಅಂತ್ಲೇ ಕರಿಲೋ..?ಮು: ನಿನ್ನಿಷ್ಟ ಬಂದಾಗೆ ಕರಿ..ಮ: ನಿಮ್ಮಪ್ಪ ಏನಂತ ಕರೀತಾರೆ..?ಮು: ಈಡಿಯಟ್.. ಸ್ಟುಪಿಡ್..! ಮ: ಏಳ್ರೀ ಹತ್ತು ಗಂಟೆಗ ಗೊರಕೆ ಹೊಡಿತ್ತಿದ್ದೀರಾ..ಮು: ಯಾಕೆ ನನ್ನನ್ನು ಎಬ್ಬಿಸಿದೆ..?ಮ: ರಾತ್ರಿ ಹತ್ತು ಗಂಟೆಗೆ ಸರಿಯಾಗಿ ನಿದ್ರೆ ಮಾತ್ರೆ ಕೊಡಿ ಅಂತ ಡಾಕ್ಟರ್ ಹೇಳಿದ್ರಲ್ಲಾ..! ಮು: ಇದೇ ತಿಂಗಳು ಇಪ್ಪತ್ತಕ್ಕೆ ನನ್ನ ಫ್ರೆಂಡ್ ಮಗನ ಮದುವೆ ಇದೆ. ನಾವಿಬ್ರೂ ಹೋಗಲೇಬೇಕು. ನನಗೆ ಅವರು ಆತ್ಮೀಯ ಮಿತ್ರರು. ಮರೆಯದೆ ನೆನಪು ಮಾಡು.ಮ: ಇವತ್ತು ತಾರೀಖು ಇಪ್ಪತ್ತೆರೆಡು..!ಮು: ಹಾಗಾದರೇ ನಾವು ಮದುವೆ ಫಂಕ್ಷನ್ ಮಿಸ್ ಮಾಡ್ಕೊಂಡ್ವಿ ಅಲ್ಲವಾ..?ಮ: ನೀವು ನಾನು ಮೊನ್ನೆ ಮದುವೆಗೆ ಹೋಗಿ ಗಡದ್ದಾಗಿ ತಿಂದು ಬಂದಿಲ್ವಾ..! ಮ: ಇದೇನ್ರೀ ಮನೆಗೆ ಇಷ್ಟು ಬೇಗ ಬಂದ್ರೀ..?ಮು: ನಮ್ಮ ಬಾಸ್ ನರಕಕ್ಕೆ ಹೋಗು ಅಂತ ಬೈದ್ರು.. ಅದಕ್ಕೆ ಇಲ್ಲಿಗೆ ಬಂದೆ. ಮ: ರೀ, ಒಂದು ನಿಮಿಷ ಬಂದು ಬಿಡ್ತಿನಿ. ಮನೇಲಿರಿ.ಮು: ಎಲ್ಲಿಗೆ ಹೋಗ್ತಿದ್ದಿಯಾ..?ಮ: ಪಕ್ಕದ್ಮನೆ ಪದ್ಮಕ್ಕನ ಮನೆಗೆ ಸಕ್ಕರೆ ಸಾಲ ತರ‍್ಲಿಕ್ಕೆ..ಮು: ಸಾಲ ಯಾಕೆ ತರಬೇಕು. ನಿನ್ನೆ ತಾನೇ ೨ ಕೆಜಿ ಸಕ್ಕರೆ ತಂದಿದ್ದೀನಲ್ಲ.ಮ: ಈಗ ನಾನು ಹೋಗ್ದೆ ಇದ್ರೇ ಅವಳೇ ಸಾಲ ಕೇಳ್ಕೊಂಡು ಇಲ್ಲಿಗೆ ಬಂದುಬಿಡ್ತಾಳೆ..! ಮ: ರೀ, ನೀವು ನನಗೆ ಮುತ್ತಿನ ಹಾರ ಕೊಡಿಸುತ್ತಿದ್ದಂತೆ ಕನಸು ಬಿತ್ತು.ಮು: ಹೌದಾ..! ಅದನ್ನು ಭದ್ರವಾಗಿ ಬೀರುನಲ್ಲಿ ಇಡು. ಮ: ರೀ, ನಮಗೆ ಮಕ್ಕಳಿಲ್ಲ. ಅದಕ್ಕೆ ನನ್ನ ತಾಯಿ ಮನೆಯಿಂದ ಕೊಟ್ಟ ಮನೆಯನ್ನು ಯಾರಾದ್ರೂ ಸನ್ಯಾಸಿಗೆ ಮಾರಿಬಿಡೋಣವೆಂದುಕೊಂಡಿದ್ದೇನೆ..ಮು: ಬಾಗಿಲು ತೆಗಿಮ: ಎಲ್ಲಿಗೆ ಹೋಗ್ತಿರಾ..?ಮು: ಸನ್ಯಾಸಿಯಾಗಲಿಕ್ಕೆ..! ಮ: ರೀ, ನಾಳೆ ನಿಮ್ಮ ಹ್ಯಾಪಿ ಬರ್ತಡೆ. ಏನ್ ಗಿಫ್ಟ್ ಕೊಡ್ಲಿ..?ಮು: ಡ್ಯೆವೋರ್ಸ್ ಕೊಟ್ಟುಬಿಡು.. ಗೊರೂರು ಅನಂತರಾಜು,

ಹಾಸ್ಯಬರಹ ಗೊರೂರು ಅನಂತರಾಜು ಅವರ ಲೇಖನಿಯಿಂದ “ನಿಮ್ಮಪ್ಪ ಏನಂತಾ ಕರೀತಾರೆ..ಈಡಿಯಟ್..ಸ್ಟುಪಿಡ್..!” Read Post »

ಇತರೆ, ಶಿಕ್ಷಣ

“ಪರೀಕ್ಷೆಗಳು ಕೇವಲ ಅಂಕ ಗಳಿಸುವ ಸಾಧನವಲ್ಲ” ನಾಗರತ್ನ. ಹೆಚ್ ಗಂಗಾವತಿ

ವಿದ್ಯಾರ್ಥಿ ಸಂಗಾತಿ ನಾಗರತ್ನ. ಹೆಚ್ ಗಂಗಾವತಿ “ಪರೀಕ್ಷೆಗಳು ಕೇವಲ ಅಂಕ ಗಳಿಸುವ ಸಾಧನವಲ್ಲ” ಪರೀಕ್ಷೆಗಳು ವಿದ್ಯಾರ್ಥಿಗಳ ಜ್ಞಾನ ಕೌಶಲ್ಯ ಮತ್ತು ವಿಷಯದ ಆಳವಾದ ತಿಳುವಳಿಕೆಯನ್ನು ಅಳೆಯುವ ಪ್ರಮುಖ ಶೈಕ್ಷಣಿಕ ಮೌಲ್ಯಮಾಪನ ಸಾಧನವಾಗಿದೆ ಇವು ಶಿಸ್ತು ,ಸಮಯ, ನಿರ್ವಹಣೆ ಮತ್ತು ಕಠಿಣ ಪರಿಶ್ರಮವನ್ನು ಉತ್ತೇಜಿಸುತ್ತವೆ. ವೈಯಕ್ತಿಕ ಬೆಳವಣಿಗೆಗೆ ಮತ್ತು ಮುಂದಿನ ಹಂತದ ಶಿಕ್ಷಣದ ಅಗತ್ಯವಾದ ತಾರ್ಕಿಕ ಚಿಂತನೆಗಳನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತವೆ ಅಷ್ಟೇ ಅಲ್ಲದೆ ಇದು ಕಲಿಕೆಯ ಪ್ರಕ್ರಿಯೆ ಪ್ರಮುಖ ಭಾಗವಾಗಿದೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಪ್ರಮುಖ ಸಾಧನವಾಗಿದೆ. ಪರೀಕ್ಷೆಗಳು ವಿದ್ಯಾರ್ಥಿ ಒಂದು ನಿರ್ದಿಷ್ಟ ಅವಧಿಯಲ್ಲಿ ಎಷ್ಟು ವಿಷಯವನ್ನು ಕಲಿತಿದ್ದಾನೆ ಮತ್ತು ವಿಷಯವನ್ನು ಎಷ್ಟರಮಟ್ಟಿಗೆ ಅರ್ಥಮಾಡಿಕೊಂಡಿದ್ದಾನೆ ಎಂಬುದನ್ನು ನಿರ್ಣಯಿಸುವುದು ಹಾಗೂ ಕೇವಲ ಅಂಕ ಗಳಿಗಾಗಿ ಅಲ್ಲ ಬದಲಿಗೆ ವಿಷಯದ ಮೇಲಿನ ಹಿಡಿತವನ್ನು ಪರೀಕ್ಷಿಸುತ್ತದೆ. ಹಾಗೂ ಪರೀಕ್ಷೆಗಳು ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವುದಷ್ಟೇ ಅಲ್ಲದೆ ಅವನ ಜ್ಞಾನವನ್ನು ಅಳೆಯುವಂತಹ ಒಂದು ಸಾಧನವು ಕೂಡ ಹೌದು. ಮತ್ತು ವಿದ್ಯಾರ್ಥಿಗೆ ಸಮಯವನ್ನು ಹಾಗೂ ಬರವಣಿಗೆ ಕೌಶಲ್ಯವನ್ನು ಯಾವ ರೀತಿ ಉಪಯೋಗ ಸುವಂತಹ ಕಲೆಯನ್ನ ಬಳಸುತ್ತದೆ ಮತ್ತು ಎಷ್ಟೇ ಸವಾಲುಗಳು ಇದ್ದರೂ ಸಹ ಪರೀಕ್ಷೆಯಲ್ಲಿ ಉತ್ತಮ ಬರೆಯಬೇಕು ಎಂಬ ಛಲವನ್ನ ಮೂಡಿಸುತ್ತದೆ. ಹಾಗೂ ವಿಷಯದ ಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ . ವೈಯಕ್ತಿಕ ಬೆಳವಣಿಗೆಗೆ ಮತ್ತು ಮುಂದಿನ ಹಂತದ ಶಿಕ್ಷಣಕ್ಕೆ ಅಗತ್ಯವಾದ ಜ್ಞಾನವನ್ನು ಬೆಳೆಸುತ್ತದೆ. ಕಲಿಕೆಯ ಗುಣಮಟ್ಟ ಮತ್ತು ವಿಷಯದ ಜ್ಞಾನದ ಮಟ್ಟವನ್ನು ಅರ್ಥ ಮಾಡಿಕೊಳ್ಳುವಲ್ಲಿ ಪರೀಕ್ಷೆಗಳು ಸಹಾಯ ಮಾಡುತ್ತವೆ. ಓದಲು ಮತ್ತು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸುವುದಷ್ಟೇ ಅಲ್ಲದೆ ಪ್ರೇರಣೆಯನ್ನು ಒದಗಿಸುತ್ತದೆ ಪರೀಕ್ಷೆಯು ಕೇವಲ ಅಂಕಗಳಿಗಾಗಿ ಅಲ್ಲ ಬದಲಾಗಿ ಜ್ಞಾನವನ್ನು ಅಭಿವೃದ್ಧಿಪಡಿಸುವ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಒಂದು ಪ್ರಕ್ರಿಯೆಯಾಗಿದೆ. ಹಾಗೂ ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವುದರಿಂದ ತಪ್ಪದೇ ಸಮಯಕ್ಕೆ ಸರಿಯಾಗಿ ಹಾಜರಾಗುವುದು ಅಷ್ಟೇ ಮುಖ್ಯವಾಗಿರುತ್ತದೆ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ ಹಾಗಾಗಿ ಪರೀಕ್ಷೆಗಳು ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದೆ ಹಾಗೂ ಪರೀಕ್ಷೆಗಳು ವಿದ್ಯಾರ್ಥಿಯ ಜೀವನದಲ್ಲಿ ಮಹತ್ವವಾದಗಳು *ಉದಾಹರಣೆಗೆ*ಶಿಕ್ಷಣ ಎಷ್ಟು ಮುಖ್ಯ ಎನ್ನುವುದನ್ನು ನೋಡುವುದಾದರೆ ಹೀಗೆ ಒಂದು ಊರಿನಲ್ಲಿ ಗಿರೀಶ ಮತ್ತು ಹರೀಶ್ ಎನ್ನುವ ಇಬ್ಬರು ಗೆಳೆಯರಿದ್ದರು.ಇಬ್ಬರೂ ಓದಿದಲ್ಲಿ ಅಷ್ಟೇ ಜಾಣನಿದ್ದರೂ ಕೂಡ ಗಿರೀಶನಿಗೆ ಅನಾರೋಗ್ಯದ ಕಾರಣದಿಂದ ಪರೀಕ್ಷೆಯಲ್ಲಿ ಹಾಜರಾಗದೆ ಹಿಂದುಳಿದ ತೊಡಗಿದ ಆಗ ಹರೀಶನು ಆತನಿಗೆ ಉತ್ತಮ ಅಂಕ ಗಳಿಸಲು ತನಗೆ ತಿಳಿದಂತಹ ಎಲ್ಲಾ ಸಲಹೆಗಳನ್ನು ನಿತ್ಯವೂ ಹೇಳುತ್ತಾ ಬಂದನು ಆಗ ಆತನು ಕೂಡ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಮತ್ತು ಅವರಿಬ್ಬರು ಕೂಡಿ ತಮ್ಮ ಗ್ರಾಮದಲ್ಲಿ ಇರುವಂತಹ ಅನಕ್ಷರಸ್ಥರನ್ನು ಸೇರಿಸಿನಿತ್ಯವೂ ಸಂಜೆ ಸಮಯದಲ್ಲಿ ಅವರುಗಳಿಗೆ ಉತ್ತಮ ಜ್ಞಾನವನ್ನು ನೀಡುತ್ತಾ ಬಂದರು ಆಗ ಊರಿಗೆ ಊರೇ ಸಾಕ್ಷರತಾ ಗ್ರಾಮವಾಗಿ ಪರಿವರ್ತನೆಗೊಂಡಿತು.ಅದಕ್ಕೆ ಹೇಳುವುದು *ವಿದ್ಯೆ ಕದಿಯಲಾರದ ಸಂಪತ್ತು*ಹೀಗೆ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಪರೀಕ್ಷೆಗಳು ಅವರ ಜೀವನವನ್ನೇ ಬದಲಾಯಿಸುವಂತಹ ಮಹತ್ವದ ಪಾತ್ರವನ್ನು ವಹಿಸುತ್ತವೆ ಹೀಗಾಗಿ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಕೇವಲ ಅಂಕಗಳಿಗಾಗಿ ಅಷ್ಟೇ ಅಲ್ಲದೆ ಜ್ಞಾನಕ್ಕಾಗಿ ಓದುವುದು ಅಷ್ಟೇ ಮುಖ್ಯ ಸಮಯವನ್ನು ವ್ಯರ್ಥ ಮಾಡದೆ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಪರೀಕ್ಷೆಗಳು ಪ್ರಮುಖ ಸಾಧನಗಳಾಗಿವೆ. ನಾಗರತ್ನ. ಹೆಚ್ ಗಂಗಾವತಿ

“ಪರೀಕ್ಷೆಗಳು ಕೇವಲ ಅಂಕ ಗಳಿಸುವ ಸಾಧನವಲ್ಲ” ನಾಗರತ್ನ. ಹೆಚ್ ಗಂಗಾವತಿ Read Post »

ಇತರೆ

“ವಿಶ್ವ  ಮಾತೃ ಭಾಷಾ ದಿನ” ಗಾಯತ್ರಿ ಸುಂಕದ

ಭಾಷಾ ಸಂಗಾತಿ “ವಿಶ್ವ  ಮಾತೃ ಭಾಷಾ ದಿನ” ಗಾಯತ್ರಿ ಸುಂಕದ ನಮ್ಮ ಜೀವನದಲ್ಲಿ  ತಾಯಿ, ತಾಯ್ನಾಡು, ಹೇಗೆ ಮುಖ್ಯವೋ ಹಾಗೆ ತಾಯಿ ನುಡಿ ಕೂಡ ಅಷ್ಟೇ ಮುಖ್ಯ.ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎನ್ನುವಂತೆ ನಮ್ಮ ಮಾತೃ ಭಾಷೆ ಶುರು ಆಗುವುದು ನಮ್ಮ ಮನೆಯಲ್ಲಿ.ಮಾತೃ ಭಾಷೆ ನಮ್ಮ ಭಾವನೆಗಳಿಗೆ ಕನ್ನಡಿ ಇದ್ದ ಹಾಗೆ.ನಾವು ಎಷ್ಟೇ ಬೇರೆ ಭಾಷೆಗಳಲ್ಲಿ ಪರಿಣಿತಿ ಇದ್ದರೂ. ನಮ್ಮ ಭಾವನೆಗಳು ಮಾತೃಭಾಷೆ ಮುಖಾಂತರ ಹೊರ ಬರುತ್ತವೆ.ನಮಗೆ ದುಃಖ ಬಂದಾಗ ಅಯ್ಯೋ ರಾಮ  ಅನ್ನುತ್ತವೆಯೋ ಹೊರತು ಬೇರೆ ಯಾವ ಶಬ್ದ ಗಳು ಬರುವುದಿಲ್ಲ.ನಾವು ಚಿಕ್ಕವರಿದ್ದಾಗ ನಮ್ಮ ಮನೆಯಲ್ಲಿ ದೇವರಿಗೆ ಬೇಡಿ ಕೊಳ್ಳಬೇಕಾದಾಗ. ಕೇವಲ ಮಾತೃಭಾಷೆಯಲ್ಲಿ ಬೇಡಿಕೊ, ದೇವರು ಒಲಿಯುತ್ತಾನೆ ಎನ್ನುತ್ತಿದ್ದರು. ಹೀಗಾಗಿಯೇ ಈಗಲೂ ದೇವರ ಮುಂದೆ ನಿಂತಾಗ ನಮ್ಮ ಪ್ರಾರ್ಥನೆಗಳು ನಮ್ಮ ಆಡು ಭಾಷೆಯಲ್ಲಿ ಹೊರ ಬರುತ್ತವೆ.ನಮ್ಮ ಮಾತೃಭಾಷೆ ನಮ್ಮನ್ನು ಪ್ರತಿನಿಧಿಸುತ್ತದೆ. ಲಂಬಾಣಿ ಭಾಷೆ, ಕೊಂಕಣಿ ಭಾಷೆ,  ತುಳು ಭಾಷೆ ಈಗಲೂ ಉಳಿಯಬೇಕಾದರೆ ಮುಖ್ಯ ಕಾರಣ ಎಂದರೆ ಅವು ಕೆಲ ಪ್ರದೇಶದ ಜನರ ಮಾತೃಭಾಷೆ  ಆಗಿವೆ. ಕೆಲವೊಂದು  ಮಾತೃ ಭಾಷೆಗಳು ಲಿಪಿ ಇಲ್ಲದೆ ಇದ್ದರೂ ಈಗಲೂ ತಮ್ಮ ಅಸ್ತಿತ್ವವನ್ನು ಉಳಿಸಿ ಕೊಂಡಿವೆ.ನಮಗೆ ಕೆಟ್ಟ  ಕನಸು ಬಿದ್ದರೆ ಅಮ್ಮ ಎಂದು ಕೂಗುತ್ತೇವೆ ಹೊರತು  ಬೇರೆ ಯಾವ. ಭಾಷೆ ನಮ್ಮನ್ನು ಕೈ ಹಿಡಿಯುವುದಿಲ್ಲ.ಬನ್ನಿಮಾತೃ ಭಾಷೆ ಯನ್ನೂ ಉಳಿಸಿ ಬೆಳೆಸೋಣ. ಗಾಯತ್ರಿ ಸುಂಕದ

“ವಿಶ್ವ  ಮಾತೃ ಭಾಷಾ ದಿನ” ಗಾಯತ್ರಿ ಸುಂಕದ Read Post »

ಇತರೆ, ಲಹರಿ

“ಒಡಲಿನ ನೋವಿಗೆ ಮಡಿಲಿನ  ಸಾಂತ್ವನ”        ಜಯಶ್ರೀ.ಜೆ.ಅಬ್ಬಿಗೇರಿ

ಲಹರಿ ಸಂಗಾತಿ “ಒಡಲಿನ ನೋವಿಗೆ ಮಡಿಲಿನ  ಸಾಂತ್ವನ”        ಜಯಶ್ರೀ.ಜೆ.ಅಬ್ಬಿಗೇರಿ  ಮೊನ್ನೆ ಪೇಟೆಯಲ್ಲಿ ಗೆಳತಿ ಸುಮತಿ ಬಹಳ ದಿನಗಳ ನಂತರ  ತನ್ನ ಮಗಳೊಂದಿಗೆ ಭೇಟಿಯಾದಳು. ಮುಖದಲ್ಲಿ ಮೊದಲಿದ್ದ ಗೆಲುವು ಕಾಣಲಿಲ್ಲ. ನಗೆಯೂ ಮುಖದಿಂದ ದೂರವೇ ಉಳಿದಿತ್ತು. ನಾನೇ ಒತ್ತಾಯಿಸಿ ಹೊಟೆಲ್ಲಿಗೆ ಕರೆದೊಯ್ದೆ. ಸದಾ ಉತ್ಸಾಹದ ಕಾರಂಜಿಯoತೆ ಚಿಮ್ಮುತ್ತಿದ್ದ ನೀನು ಇದೇಕೆ ಇಷ್ಟು ಸಪ್ಪಗಾಗಿ ಬಿಟ್ಟಿದ್ದಿಯಾ? ಎಂದಾಗ ಕಣ್ಣಂಚಿನಲ್ಲಿ ನೀರು ತಂದು ತನ್ನ ಪ್ರವರ ಬಿಚ್ಚಿಟ್ಟಳು. ಇಬ್ಬರೂ ದುಡಿತೀವಿ ಹೀಗಾಗಿ ಮನೆಯಲ್ಲಿ ಎಲ್ಲದಕ್ಕೂ ಆಳು. ಹಣಕ್ಕಂತೂ ಕೊರತೆಯಿಲ್ಲ.ಮುದ್ದಾದ ಮಗಳು ಮನೆಯಂಗಳದಲ್ಲಿ ನಲಿದಾಡ್ತಾಳೆ. ಇವರದೇ ಸಮಸ್ಯೆ ಆಗಿದೆ.ಎಂದಳು.  ಇಷ್ಟೆಲ್ಲಾ ಇರೋವಾಗ ನಿಮ್ಮ ಪತಿದೇವರದು ಏನು ಸಮಸ್ಯೆ  ಎಂದು ಕುತೂಹಲದಿಂದ ಪ್ರಶ್ನಿಸಿದೆ. ಅದಕ್ಕೆ ಸುಮತಿ,ಮೊದಲೆಲ್ಲ ಚೆನ್ನಾಗಿಯೇ ಇದ್ದ ರಮೇಶ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು  ಪಾರ್ಟಿ ಕ್ಲಬ್ ಪಬ್‌ನ್ನು ಮನರಂಜನೆಗೆoದು  ರೂಢಿಸಿಕೊಂಡು ಇತ್ತೀಚಿಗೆ ಅತಿಯೆನಿಸುವಷ್ಟು ಕುಡಿದು ಮನೆಗೆ ತಡರಾತ್ರಿ  ಬಂದು ಸುಮ್ಮನೆ ಮಲಗಿ ಬಿಡ್ತಾರೆ. ಮೊದಲೇ ಮಾತು ಕಮ್ಮಿ ಈಗಂತೂ ಮನೆಯಲ್ಲಿ ಮಾತಿಲ್ಲ ಕತೆಯಿಲ್ಲ.ದಿನಕ್ಕೆ ಒಂದೊ ಎರಡೊ ಮಾತನಾಡಿದರೆ ಹೆಚ್ಚು  ನಾನಾಗಲೇ ಮೇಲೆ ಬಿದ್ದು ಮಾತನಾಡಿಸಿದಾಗ ಹೂಂ ಹಾಂ ಅಷ್ಟೆ, ಸಿಟ್ಟಿಗೆದ್ದು ಜೋರಾಗಿ ಕಿರುಚಿದರೆ ಏನೂ ಪ್ರಯೋಜನವಿಲ್ಲ. ನನಗೇನಾಗಿಲ್ಲ ನಾನು ಇರೋದೆ ಹೀಗೆ ಮೊದಲಿನಿಂದ ಹೀಗೆ ಇದ್ದೀನಿ ನಿನಗೆ ಹಾಗೆನಿಸ್ತಿದೆ ಅಂತ ಹೇಳುತ್ತ ಜಾಗ ಖಾಲಿ ಮಾಡ್ತಾರೆ.ಸಂಬoಧಿಕರ ಮದುವೆ ಮುಂಜವಿಗoತೂ ಜಪ್ಪಯ್ಯ ಅಂದರೂ ಬರೋದಿಲ್ಲ.  ಮಗಳ ಜೊತೆ ಮಾತು ಅಷ್ಟಕ್ಕಷ್ಟೆ. ದೈಹಿಕ ಸುಖ ಬೇಕೆಂದಾಗ ಬಳಿ ಬರುತ್ತಾರೆ. ಇಂಥ ಮದುವೆಯಿಂದ ಪಡೆಯುತ್ತಿರುವದು ಏನೂ ಇಲ್ಲ. ನನ್ನಲ್ಲಿರುವ ಪ್ರೀತಿಯ ಭಾವನೆಗಳೆಲ್ಲ ಬತ್ತಿ ಹೋಗುತ್ತಿವೆ. ದಿನ ದಿನಕ್ಕೆ ಬದುಕು ಕ್ರೂರವೆನಿಸುತ್ತಿದೆ. ಏನು ಮಾಡಲೂ  ತೋಚುತ್ತಿಲ್ಲ. ಕೋರ್ಟ್ ಕಛೇರಿ ಮೆಟ್ಟಿಲು  ಹತ್ತಿದರೆ ಮನೆ ಮರ್ಯಾದೆ ಪ್ರಶ್ನೆ.ದಿನವೂ ವಿಷ ನುಂಗತಿದಿನಿ. ಮಗಳ ಮುಖ ನೋಡಿ ಅವರೊಂದಿಗೆ ದಿನ ದೂಡತಿದಿನಿ. ಎಂದಾಗ  ಮಗಳು ಸುಮತಿಯ ಕಣ್ಣೊರೆಸುತ್ತ ಅವ್ವಾ ,ಅಪ್ಪ ಮೊದಲಿನಿಂತೆ ಆಗ್ತಾರೆ ಬಿಡವ್ವ ನೀ ಆಳಬೇಡ ಎಂದಳು. ಸುಮತಿ ಮಗಳ ಕೆನ್ನೆಗೆ ಮುತ್ತಿಕ್ಕಿ ಕಿರುನಗೆ ಬೀರಿದಳು. ತಾಯಿಯ ಖಾಸಗಿ ಜಗತ್ತು ಹೆಣ್ಣುಮಕ್ಕಳಿಗೆ ಹೆಚ್ಚು ಅರ್ಥವಾಗುತ್ತದೆ.ತಾಯಿ ಮಗಳ  ನಡುವಿರುವ ಸಲುಗೆ, ಮುಕ್ತವಾಗಿ ಹಂಚಿಕೊಳ್ಳುವ ಮನದಾಳದ ಮಾತುಗಳು ಹೆಣ್ಣು ಹೆತ್ತ ತಾಯಂದಿರಿಗೆ ಅದರ ಸೌಖ್ಯ ತಿಳಿಯೋದು. ಹೆಣ್ಣು ಅಂದರೆ ಹುಣ್ಣು ಅಂತ ತಿಳಿಯೋ ಜನರೇ ಜಾಸ್ತಿ ಆದರೆ ಹೆಣ್ಣು ಮಕ್ಕಳು ತೋರುವ ಆತ್ಮೀಯತೆ ಆಪ್ತತೆ ಮನಸ್ಸಿಗೆ ಅತಿಯಾದ ಆನಂದ ಮತ್ತು ಹಿತ ನೀಡುವದಂತೂ ಖಚಿತ. ಎಷ್ಟೊ ಬಾರಿ ಗಂಡನೊoದಿಗೆ ಹಂಚಿಕೊಳ್ಳಲಾಗದ ಮನದ ದುಗುಡಗಳನ್ನುಅವ್ವನೊಂದಿಗೆ ಹಂಚಿಕೊoಡು ನಿರಾಳವಾಗಿ ಮತ್ತೆ ಜೀವನೋತ್ಸಾಹ ತುಂಬಿಕೊಳ್ಳುತ್ತಾಳೆ.  ರಶ್ಮಿಗೆ ತಾಯಿಯೇ ಜಗತ್ತು. ಮಗಳ ಬದುಕು ಹಸನಾಗಿರಲೆಂದು ಬಯಸುವ ತಾಯಿ ಮಗಳ ಬದುಕಿನಲ್ಲಿ ಸಣ್ಣ ಬಿರುಕು ಬಿಡುತ್ತಿದೆ ಎಂದು ತಿಳಿದರೆ ಎದೆ ಒಡೆದುಕೊಳ್ಳುತ್ತಾಳೆಂದು ರಶ್ಮಿ ಅತ್ತೆಯ ಮನೆಯಲ್ಲಿ ಕೊಡುವ ಕಿರುಕುಳಗಳನ್ನು ಗಂಡನ ವರ್ತನೆಯಲ್ಲಾದ ಬದಲಾವಣೆಯನ್ನು ಬಾಯಿಮುಚ್ಚಿ ಸಹಿಸಿಕೊಳ್ಳುತ್ತಿದ್ದಾಳೆ.ಕತ್ತಲ ಕೋಣೆಯಲ್ಲಿ ಕಣ್ಣಿರು ಹರಿಸುತ್ತಿದ್ದಾಳೆ. ಇದು ರಶ್ಮಿಯ ತಾಯಿಗೆ ತಿಳಿದಾಗ ದೇವರು ಒಳ್ಳೆಯವರನ್ನೇ ಪರೀಕ್ಷಿಸುತ್ತಾನೆ ಅಂತ ನೀನೇ ಹೇಳತಿದ್ದೆಲ್ಲವ್ವಾ ಈಗ ಕಷ್ಟದ ಕಾಲ ಮುಂದೊoದು ದಿನ ಸುಖ ಬಂದೇ ಬರುತ್ತದೆ. ಎಂದು ನೊಂದ ತಾಯಿಗೆ ಸಾಂತ್ವನದ ಮಾತುಗಳನ್ನಾಡುತ್ತ ಉಕ್ಕಿ ಬರುವ ದುಃಖವನ್ನು  ತಡೆಯುತ್ತಾಳೆ. ಹೆಣ್ಣಿಗೆ ತವರೆಂದರೆ ಪಂಚ ಪ್ರಾಣ ಅದರ ನಂಟನ್ನು ಕಳೆದುಕೊಳ್ಳಲು ಅವಳಿಷ್ಟ ಪಡುವದಿಲ್ಲ. ಮಗಳನ್ನು ತಮ್ಮನಿಗೋ ಅಣ್ಣನ ಮಗನಿಗೋ ಧಾರೆಯೆರೆದು ತವರನ್ನು ಉಳಿಸಿಕೊಳ್ಳಲು ಹಂಬಲಿಸುತ್ತಾಳೆ. ಹೀಗೆ ತವರನ್ನು ಉಳಿಸಿಕೊಳ್ಳಲು ಶಾಂತಮ್ಮ ಮಗಳನ್ನು ಅಣ್ಣನ ಮಗನಿಗೆ ಕೊಟ್ಟು ತನ್ನ ತವರನ್ನು ಉಳಿಸಿಕೊಳ್ಳುವಲ್ಲಿ ಗೆದ್ದಿದ್ದಳು. ಅಳಿಯ ಬೇರೊಬ್ಬಳೊಂದಿಗೆ ಅನೈತಿಕ ಸಂಬoಧದಲ್ಲಿ ತೊಡಗಿ ಮಗಳಿಗೆ ಕೊಡುವ ಚಿತ್ರ ಹಿಂಸೆ ಕಂಡು ಕಂಗಾಲಾಗಿದ್ದಾಳೆ. ತನ್ನ ಮಗಳ ಬಾಳನ್ನು ತಾನೇ ಹಾಳು ಮಾಡಿದನೆಂದು ನಿಂತ ನೆಲವೇ ಬಾಯಿ ಬಿಟ್ಟರೆ ಎಲ್ಲಿ ಹೋಗೋದು? ಎಂದು ಹಾಸಿಗೆ ಹಿಡಿದು ಕೊರಗುತ್ತಿರುವ ತಾಯಿಗೆ ಮದುವೆ ಅನ್ನೋದು ಸ್ವರ್ಗದಲ್ಲಾಗಿರುತ್ತದೆ ಇದರಲ್ಲಿ ನಿನ್ನದೇನು ತಪ್ಪಿಲ್ಲವ್ವಾ ಎಂದು ಶಾಂತಮ್ಮನಿಗೆ ಮಗಳು ಸವಿತಾ ತನ್ನ ದುಃಖವನ್ನೆಲ್ಲ ಮರೆಮಾಚಿ ಸುಖ ದುಃಖಗಳನ್ನು ಸಮನಾಗಿ ನೋಡಬೇಕೆಂದು, ಇಂದು  ದುಃಖವಾದರೆ ನಾಳೆ ಸುಖ ಎಂದು ತತ್ವಜ್ಞಾನಿಯಂತೆ ಮಾತನಾಡುತ್ತ ಬೇಗನೆ ಹುಷಾರಾಗುವಂತೆ ಸೂಚಿಸುತ್ತಾಳೆ. ಒಬ್ಬಳೇ ಮಗಳೆಂದು ತುಂಬಾ ಪ್ರೀತಿಯಿಂದ ಸಾಕಿ ಸಲುಹಿ ಮದುವೆ ಮಾಡಿ ಅಳಿಯನನ್ನು ಮನೆಗೆ ಕರೆ ತಂದ ರತ್ನಮ್ಮ ಅಳಿಯನಿಗೆ ದಿನನಿತ್ಯ ಹಾಲು ತುಪ್ಪ ಸುರಿದರೂ ಆತನ ದರ್ಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.ಮನೆಗೆ ಸಂಬoಧಿಕರು ಆಪ್ತ ಸ್ನೇಹಿತರು ಬಂದರoತೂ ದರ್ಪ ಅತಿರೇಕಕ್ಕೇರುತ್ತೆ. ಇದು  ಮಗಳಿಗೂ ನುಂಗಲಾರದ ತುತ್ತಾಗಿದೆ. ಎಷ್ಟೋಸಾರಿ ಆತನ ವರ್ತನೆಗೆ ತಾಯಿ ಮಗಳ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ. ಅಪ್ಪ ದುರ್ವ್ಯಸನದಲ್ಲಿ ಮುಳುಗಿರದಿದ್ದರೆ ಅಳಿಯನ ದರ್ಪಕ್ಕೆ ಕಡಿವಾಣ ಹಾಕಬಹುದಿತ್ತೆನೋ ಎಂದು ಮನದಲ್ಲೇ ಮರ ಮರ ಮರಗುತ್ತಾಳೆ. ತನ್ನ ಒಡಲಿನಲ್ಲಿ ಬೆಂಕಿ ಇಟ್ಟುಕೊಂಡು ಕತ್ತಲಾದ ಬಾಳಿಗೆ ಬೆಳಕು ಬಂದೇ ಬರುತ್ತದೆಯೆಂದು ಭರವಸೆಯ ಮಾತನಾಡಿ ಅವ್ವನಿಗೆ ಸಂತೈಸುತ್ತಾಳೆ. ಚೈನಿ ಚೆನ್ನಪ್ಪನ ಹಾಗೆ ಡ್ರೆಸ್ ಮಾಡಿಕೊಂಡು ಮೈ ತುಂಬ ಧಿಮಾಕು ತುಂಬಿಕೊoಡು ನಯಾಪೈಸೆ ದುಡಿದು ತರಲಾರದೆ ಹೆಂಡತಿ ಕೂಲಿ ಮಾಡಿ ತಂದ ಹಣವನ್ನು ಲಪಟಾಯಿಸಿ ತನ್ನ ಶೋಕಿಗೆ ಬಳಸುತ್ತಾನೆ. ಭೀಮಪ್ಪ. ಓದೋ ಮಕ್ಕಳಿಗೆ ಊರೆಲ್ಲ ಸಾಲ ಮಾಡಿ ಸಾಲ ತೀರಿಸೋ ಚಿಂತೆಗೆ ಗಂಗವ್ವನ ಕೈಯಲ್ಲಿ ಬಿರುಕು ಬಿಟ್ಟ ಗಾಯಗಳಾಗಿದ್ದರೂ ದಿನ ಬೆಳಗಾದರೆ ಕೂಲಿ ತಪ್ಪುವದಿಲ್ಲ. ಅವ್ವನ ಪಾಡು ಕಂಡು ಮಮ್ಮಲ ಮರಗುವ ಹದಿನಾಲ್ಕರ ಪೋರಿ ಗೌರಿ ನಾನು ಓದಿ ನಿನ್ನ ಕಷ್ಟವನ್ನು ನೀಗಿಸುತ್ತೇನೆಂದು ತಾಯಿಯ ಕಂಗಳಲ್ಲಿ ಆಶಾ ಕಿರಣ ಮೂಡಿಸಿ ಮುಖದಲ್ಲಿ ನಗು ತುಂಬುತ್ತಾಳೆ. ಇವು ಕೆಲವು ಉದಾಹರಣೆಗಳಷ್ಟೆ ಇಂಥ ಒಡಲಿನ ನೋವುಗಳು ಸಮಾಜದಲ್ಲಿ ಭರಪೂರ ಎನ್ನುವಂತೆ ತುಂಬಿವೆ. ತಾನುರಿದು ಇತರರಿಗೆ ಬೆಳಕು ನೀಡುವ  ದೀಪದಂತೆ ದುಃಖದ ಬೆಂಕಿಯನ್ನು ತನ್ನ ಸೆರಗಲ್ಲಿ ಕಟ್ಟಿಕೊಂಡು ಒಡಲಲ್ಲಿ ಹುಟ್ಟಿ ಮಡಿಲಲ್ಲಿ ಬೆಳೆದ ಮಗಳು ತಾಯಿಗೆ ತಾಯಿಯಾಗಿ ಸಂತೈಸುವ ಪರಿ ಮಾನವ ಕುಲದ ಮನ ಕಲುಕುವಂಥದ್ದು . ತನ್ನಲ್ಲಿ  ನೋವಿದ್ದರೂ ಒಡಲಿನ ನೋವಿಗೆ ಮಡಿಲಿನ ಸಾಂತ್ವನ ಹೇಳುತ್ತ  ನಲಿವಿನ ಸಂತಸದ ಭರವಸೆ ತುಂಬುವ ಪರಿ ಮೆಚ್ಚುವಂಥದ್ದು. ಜಯಶ್ರೀ.ಜೆ.ಅಬ್ಬಿಗೇರಿ

“ಒಡಲಿನ ನೋವಿಗೆ ಮಡಿಲಿನ  ಸಾಂತ್ವನ”        ಜಯಶ್ರೀ.ಜೆ.ಅಬ್ಬಿಗೇರಿ Read Post »

ಇತರೆ

“ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ”ಗೊರೂರು ಅನಂತರಾಜು

ಪ್ರವಾಸಿ ಸಂಗಾತಿ “ಗೊರೂರು ಅನಂತರಾಜು “ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ ನಾವು ಶಿರಸಿಯಿಂದ ಬನವಾಸಿ ಬಸ್ಸು ಹತ್ತಿದಾಗಲೇ ನಾಲ್ಕೂವರೆ ಆಗಿತ್ತು. ಶಾಲೆ ಬಿಡುವ ವೇಳೆ ಬಸ್ ರಷ್ ಆಗಿತ್ತು. ನುಗ್ಗಿ ಬಸ್ ಹತ್ತಿ  ಬನವಾಸಿಯಲ್ಲಿ ಇಳಿದಾಗ ಐದೂವರೆ ಆಗಿತ್ತು. ಕ್ಯಾಂಟಿನ್‌ನಲ್ಲಿ ಟೀ ಕುಡಿದು ಮೈಂಡ್ ಪ್ರೆಶ್ ಆಯಿತು. ಅಲ್ಲಿ ದೇವಾಲಯದ ದಾರಿ ಕೇಳಲು ನೀವು ಆಟೋದಲ್ಲಿ ಹೋಗಿ ಆರೂವರೆಗೆ ದೇವಸ್ಥಾನದ ಬಳಿಗೆಯೇ ಬಸ್ ಬರುತ್ತದೆ ಅಲ್ಲಿ ವಾಪಸ್ಸು ಹತ್ತಬಹುದು ಎಂದರು. ಎರಡು ಆಟೋದಲ್ಲಿ  ಮಧುಕೇಶ್ವರ ದೇವಸ್ಥಾನಕ್ಕೆ ಹೋದವು. ದೇವಸ್ಥಾನದ ಪ್ರವೇಶದ್ವಾರದಲ್ಲಿ ನಾವು ಐವರು ಎ.ಹೆಚ್.ಗಣೇಶ್, ಪುಟ್ಟಸ್ವಾಮಿಗೌಡರು, ಬೇಕ್ರೀ ರಾಜೇಗೌಡರು, ಪಟ್ನ ವೆಂಕಟೇಗೌಡರು ಪೋಟೋ ತೆಗೆಸಿಕೊಂಡವು.   ಅರ್ಚಕರು ನಿಮಗೆ ಗೈಡ್ ಬೇಕೆ ಎಂದರು. ಹೌದೆಂದು ಅವರಿಂದ ಅನೇಕ ಐತಿಹಾಸಿಕ ಮಾಹಿತಿ ಪಡೆದೆವು.  ಸಿರಸಿಯಿಂದ ಬನವಾಸಿಗೆ ೨೨ ಕಿ.ಮೀ. ದೂರದ ಪ್ರಯಣ. ನಾವು ಪ್ರಯಣಿಸಿದ್ದು ಸೊರಬ ರಸ್ತೆಯಲ್ಲಿ. ವರದಾ ನದಿ ದಂಡೆಯಲ್ಲಿ ಬನವಾಸಿ ಇದೆ. ಇದು ಶಿರಸಿ ತಾಲ್ಲೂಕಿಗೆ ಸೇರಿದೆ.  ಕ್ರಿ.ಶ. ೧ನೇ ಶತಮಾನದಲ್ಲಿ ಬಾರತಕ್ಕೆ ಬಂದಿದ್ದ ಗ್ರೀಕ್ ಪ್ರವಾಸಿ ಟಾಲೆಮಿ ಈ ಪಟ್ಟಣವನ್ನು ಬನೌಸಿ ಇಂದು ಕರೆದಿದ್ದಾನೆ. ಕ್ರಿ.ಶ.೪ನೇ ಶತಮಾನದಲ್ಲಿ ಜಯಂತಿಪುರ ಅಥವಾ ವೈಜಯಂತಿ ಎಂದು ಕರೆಯಲಾಗುತ್ತಿತ್ತು. ಪಾಂಡವರು ತಮ್ಮ ವನವಾಸದ ಕೆ¯ ಕಾಲ ಇಲ್ಲೇ ಕಳೆದರೆಂದೂ ಧರ್ಮರಾಜನ ಅಶ್ವಮೇಧಯಾಗದ ಸಂದರ್ಭ ಸಹದೇವ ದಕ್ಷಿಣ ಭಾರತದ ದಿಗ್ವಿಜಯ ಕಾಲದಲ್ಲಿ ವನವಾಸಕಾ ನಗರವನ್ನು ಗೆದ್ದನೆಂದೂ ಮಹಾಭಾರತದಲ್ಲಿ ಬನವಾಸಿಯನ್ನು ವನವಾಸಕ ಎಂಬ ಉಲ್ಲೇಖವಿದೆ. ವೈಜಯಂತಿ ಎಂದು ಹೆಸರಾದ ಈ ನಗರದಲ್ಲಿ ಮಧು ಕೈಟಭರೆಂಬ ದೈತ್ಯರನ್ನು ವಿಷ್ಣು ಕೊಂದನೆAದು, ಶಿವಭಕ್ತರಾದ ಈ ದೈತ್ಯರ ಹೆಸರಿನಲ್ಲಿ ಬನವಾಸಿಯಲ್ಲಿ ಮಧುಕೇಶ್ವರ ಮತ್ತು ನದಿಯ ಇನ್ನೊಂದು ದಂಡೆಯಲ್ಲಿರುವ ಅವನಟ್ಟಿ ಅಥವಾ ಕುಪ್ಪತ್ತೂರಿನಲ್ಲಿ ಕೈಟಭೇಶ್ವರ ದೇವಾಲಯ ನಿರ್ಮಿಸಲಾಗಿದೆ ಎಂದು ಹೇಳಲಾಗಿದ್ದರೂ ಈಗಿರುವಂತೆ ಆ ದೇವಾಲಯಗಳು ಅನಂತರ ಕಾಲದವು. ನಾನು ಹಾಸನದಲ್ಲಿ ನೋಡಿದ ದೇವಿ ಮಹಾತ್ಮೆ ನಾಟಕದಲ್ಲಿ ಈ ಎರಡು ಪಾತ್ರಗಳು ಬರುತ್ತವೆ. ಬೌದ್ಧ ಧರ್ಮ ಪ್ರಸಾರಕ್ಕಾಗಿ ಅಶೋಕ ಚಕ್ರವರ್ತಿ ಕಳುಹಿಸಿದ  ಬೌದ್ಧ ಭಿಕ್ಷÄ ರಖ್ಖಿತ ಬನವಾಸಿ ಪ್ರಾಂತ್ಯಕ್ಕೆ ಬಂದಿದ್ದನೆAದು ಮಹಾವಂಶ ಎಂಬ ಬೌದ್ಧಗ್ರಂಥ ತಿಳಿಸುತ್ತದೆ.  ನಾಗಾರ್ಜುನಕೊಂಡದ ಒಂದು ಶಾಸನದ ಪ್ರಕಾರ  ಸಿಂಹಳದ ಭೌದ್ಧ ಭಿಕ್ಷÄಗಳು ಧರ್ಮ ಪ್ರಸಾರಕ್ಕಾಗಿ ಬನವಾಸಿಗೆ ಬಂದಿದ್ದರAತೆ.  ಬನವಾಸಿ ಗೌತಮೀ ಪುತ್ರ ಸಾತಕರ್ಣಿಯ ನೇರ ಆಡಳಿತಕ್ಕೆ ಸೇರಿದ್ದು ಅವನು ತನ್ನ ಸೈನ್ಯದೊಡನೆ ವಿಜಯ ವೈಜಯಂತಿಯಲ್ಲಿ ಬೀಡುಬಿಟ್ಟಿದ್ದನೆಂದು ನಾಸಿಕದ ಶಾಸನ ಹೇಳುತ್ತದೆ.  ಬನವಾಸಿಯಲ್ಲಿ ದೊರಕಿದ ಸಾತವಾಹನ ದೊರೆ ವಾಸಿಷ್ಠೀ ಪುತ್ರ ಸಿವಸಿರಿ ಪುಳುಮಾವಿನ ಅನಂತರ ಬಂದ (ಕ್ರಿ.ಶ.೨ನೇ ಶತಮಾನ) ಶಿವಶ್ರೀ ಪುಳುಮಾವಿಯ ಶಾಸನ ಅವನ ರಾಣಿಯ ಸ್ಮಾರಕ ಶಿಲೆಯಾಗಿದ್ದು ಆ ಕಾಲದಲ್ಲಿ ಬನವಾಸಿಯ ಪ್ರಾಮುಖ್ಯವನ್ನು ಸೂಚಿಸುತ್ತದೆ. ಮುಂದೆ ಸಾತವಾಹನರ ಸಾಮಂತರೂ ಆ ವಂಶದ ಶಾಖೆಗೆ ಸೇರಿದವರೂ ಆದ ಚಟುಸಾತಕರ್ಣಿ ದೊರೆಗಳ ಕಾಲದಲ್ಲೂ ಬನವಾಸಿ ಪ್ರಮುಖ ನಗರವಾಗಿತ್ತು.  ಮಧುಕೇಶ್ವರ ದೇವಾಲಯದ ಕಂಬದಮೇಲೆ ರಾಷ್ಟçಕೂಟ, ಕಲ್ಯಾಣ ಚಾಳುಕ್ಯ, ವಿಜಯನಗರ ಮತ್ತು ಸೋದೆ ಅರಸರ ಹಲವಾರು ಶಾಸನಗಳು ದೇವಸ್ಥಾನದ ಜೀರ್ಣೋದ್ದಾರ ದಾನದತ್ತಿಗಳ ಬಗ್ಗೆ ತಿಳಿಸುತ್ತವೆ.  ಕನ್ನಡವನ್ನು ರಾಜ್ಯ ಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು.  ಈ ರಾಜ್ಯದ ಸ್ಥಾಪಕ ಮಯೂರಶರ್ಮ (ಕ್ರಿ.ಶ.೩೪೫-೩೬೫) ಈತನ ರಾಜಧಾನಿ ಬನವಾಸಿ. ರಾಜಾ ಕಾಕುಸ್ಥವರ್ಮನ ಕಾಲದಲ್ಲಿ (೪೩೫-೪೫೫) ಉಚ್ಛಾçಯ ಸ್ಥಿತಿಯಲ್ಲಿತ್ತು. ಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತ ಆರಂಕುಶವಿಟ್ಟೊಡA ನೆನೆವುದೆನ್ನ ಮನಂ ಬನವಾಸಿ ದೇಶಮಂ  ಎಂದಿದ್ದಾನೆ. ಬನ ಮತ್ತು ವಾಸಿ ಪದಗಳಿಂದ ಬನವಾಸಿ ಎಂಬ ಹೆಸರು ಬಂದಿದ್ದು ಕ್ರಮವಾಗಿ ಕಾಡು ಮತ್ತು ವಸಂತ ಎಂಬ ಅರ್ಥ ಕೊಡುತ್ತದೆ. ಬನವಾಸಿ ಕರ್ನಾಟಕದ ಹಳೆಯ ಪಟ್ಟಣಗಳಲ್ಲಿ ಒಂದು. ಕದಂಬರ ಕಾಲದ ಅನೇಕ ಬಾರಿ ನವೀಕರಿಸಿದ ಸುಂದರ ಮಧುಕೇಶ್ವರ ದೇವಾಲಯ ಪ್ರಾಚೀನ ಇತಿಹಾಸ ಮತ್ತು ಶಾಸನಗಳಿಂದ ಕೂಡಿದೆ. ಇದು ಶಿವನಿಗೆ ಸಮರ್ಪಿತವಾದ ದೇವಾಲಯ. ಗರ್ಭಗುಡಿಯಲ್ಲಿ ಜೇನು ಬಣ್ಣದ ಲಿಂಗವಿದೆ.  ಇಲ್ಲಿಯ ಕೋಟೆ ಬಹಳ ಪುರಾತನವಾದದ್ದು. ಚಾಲುಕ್ಯ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಲ್ಲಿ ಈ ಕೋಟೆಯ ಪ್ರಸ್ತಾಪವಿದೆ. ತಾಳಗುಂದ ಗುಂಡನೂರು ಚಂದ್ರವಳ್ಳಿ ಹಲಸಿ ಮತ್ತು ಹಲ್ಮಿಡಿ ಶಾಸನಗಳು ಈ ಕನ್ನಡ ವಂಶದ ಬಗ್ಗೆ ಬೆಳಕು ಚೆಲ್ಲುತ್ತವೆ.  ಕನ್ನಡದ  ಮೊಟ್ಟಮೊದಲ ಶಾಸನವೆಂದು ಹೆಸರಾಗಿರುವ ಹಲ್ಮಿಡಿ ಶಾಸನ (ಕ್ರಿ.ಶ.೪೫೦) ಬೇಲೂರು ತಾ. ಹಲ್ಮಿಡಿ ಗ್ರಾಮದಲ್ಲಿ ದೊರಕಿದೆ. ರಾಜಾ ಶಾಂತಿವರ್ಮನ (ಕ್ರಿ.ಶ.೪೫೦) ಕಾಲದ ತಾಳಗುಂದದ ಶಾಸನವು ಬನವಾಸಿ ಕದಂಬರ ಸಾಮ್ರಾಜ್ಯದ ಹುಟ್ಟಿನ ಸಂಭವನೀಯ ವಿವರ ನೀಡುತ್ತದೆ. ತಾಳಗುಂದದ ನಿವಾಸಿ ಮಯೂರವರ್ಮನು ತನ್ನ ಅಜ್ಜ ಮತ್ತು ಗುರು ವೀರವರ್ಮನೊಂದಿಗೆ  ವೈದಿಕ ವಿದ್ಯಾರ್ಜನೆಗಾಗಿ ಕಂಚಿಗೆ ಹೋಗುತ್ತಾನೆ. ಅಲ್ಲಿ ಪಲ್ಲವರ ಕಾವಲು ಭಟರೊಂದಿಗೆ ಮನಸ್ತಾಪವಾಗಿ ಅವರಿಂದ ಅವಮಾನಿತನಾಗುತ್ತಾನೆ. ಇದರಿಂದ ಕೋಪಿತನಾಗಿ ಪ್ರತೀಕಾರದ ಪ್ರತಿಜ್ಞೆಗೈದು ಕಂಚಿಯನ್ನು ಬಿಟ್ಟು ವಾಪಸ್ಸು ಬಂದು ಶಸ್ತಾçಭ್ಯಾಸ ಪ್ರಾರಂಭಿಸುತ್ತಾನೆ.  ಸೈನ್ಯ ಕಟ್ಟಿ ಪಲ್ಲವರೊಂದಿಗೆ ದೀರ್ಘಕಾಲದ ಯುದ್ಧ ನಂತರ ಕದಂಬರು ಸ್ವತಂತ್ರ ರಾಜ್ಯ ಘೋಷಿಸಿ ಕದಂಬರನ್ನು ಹತ್ತಿಕ್ಕಲಾರದೆ ಪಲ್ಲವರು ಅವರ ಸ್ವತಂತ್ರ ರಾಜ್ಯವನ್ನು ಒಪ್ಪಬೇಕಾಯಿತು. ಅಂತಿಮವಾಗಿ ಬಾದಾಮಿಯ ಚಾಲುಕ್ಯರಿಂದ ಈ ಸಾಮ್ರಾಜ್ಯ ಪತನವಾಯಿತು. ಅಲ್ಲಿಂದ ಮುಂದೆ ಬಾದಾಮಿ ಚಾಲುಕ್ಯರು ನಂತರ ರಾಷ್ಟçಕೂಟರ  ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಈ ವಂಶ ಮುಂದುವರಿಯಿತು.     ದೇವಸ್ಥಾನದ ಆವರಣದಲ್ಲಿ ಇರುವ ಫಲಕದಲ್ಲಿ ದೇವಸ್ಥಾನ ಕುರಿತ್ತಾದ ಕೆಲವು ಐತಿಹಾಸಿಕ ಮಾಹಿತಿಗಳಿವೆ. ಕದಂಬರ ಕಾಲದ ಮಧುಕೇಶ್ವರ ದೇವಾಲಯ ಕಲ್ಯಾಣ ಚಾಲುಕ್ಯರಿಂದ ಸೋಂದಾ ಅರಸರ ಕಾಲದವರೆಗೆ ಅನೇಕ ವಾಸ್ತು ಸೇರ್ಪಡೆ ಬದಲಾವಣೆಗಳನ್ನು ಮಾಡುತ್ತಾ ಬಂದಿರುವುದು ಇಲ್ಲಿನ ವಾಸ್ತುಶೈಲಿ  ಮತ್ತು ದೊರಕಿರುವ ೧೨ ಶಾಸನಗಳಿಂದ ತಿಳಿಯಬಹುದಾಗಿದೆ.  ಕದಂಬರು ಶಾತವಾಹನರ ಶಿಲ್ಪಕಲಾಶೈಲಿಯನ್ನು ಅಳವಡಿಸಿಕೊಂಡರು. ಪೂರ್ವಾಭಿಮುಖವಾಗಿ ಇರುವ ದೇವಾಲಯದ ಚೌಕಾಕಾರ ಗರ್ಭಗೃಹದ ಸುತ್ತಲೂ ಪ್ರದಕ್ಷಿಣಾ ಪಥವಿದೆ. ಗರ್ಭಗೃಹದಲ್ಲಿ ಪೀಠದ ಮೇಲೆ ಮಧುಕೇಶ್ವರ ಲಿಂಗವಿದೆ. ಲಿಂಗವು ಜೇನುತುಪ್ಪದ ಬಣ್ಣದಲ್ಲಿದೆ. ಎಡಭಾಗದಲ್ಲಿ ಪಾರ್ವತಿ ದೇವಾಲಯವಿದೆ. ಪೂರ್ವಭಾಗದ ಗೋಡೆಗೆ ಅಂಟಿಕೊAಡAತೆ ಇರುವ  ೨ ಉಪಗುಡಿಗಳಲ್ಲಿ ಮಹಿಷಮರ್ದಿನಿ ಗಣೇಶನ ಶಿಲ್ಪಗಳಿವೆ ಮತ್ತು ದೊಡ್ಡ ಕಂಬಗಳಿರುವ ವಿಶಾಲ ಮಂಟಪವಿದೆ. ಈ ಎಲ್ಲಾ ರಚನೆಗಳು ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದವುಗಳಾಗಿವೆ. ಈ ಮಂಟಪದ ಮುಂಭಾಗದಲ್ಲಿ ತಿರುಗಣಿ ಯಂತ್ರದಿAದ ರಚಿತವಾದ  ಅಲಂಕೃತ ಕಂಬಗಳಿರುವ ನವರಂಗವಿದೆ. ಅದರಲ್ಲಿ ಕುಳಿತ ನಂದಿಯ ಶಿಲ್ಪವಿದೆ. ನಂದಿಯ ಒಂದು ಕಣ್ಣು ಮಧುಕೇಶ್ವರನನ್ನು ಇನ್ನೊಂದು ಕಣ್ಣು ಪಾರ್ವತಿಯನ್ನು ನೋಡುತ್ತಿದೆ ನೋಡಿ ಎಂದರು ಅರ್ಚಕರು. ನವರಂಗದ ಸುತ್ತಲೂ ಕಕ್ಷಾಸನವಿದ್ದು ನವರಂಗಕ್ಕೆ ಮೂರು ಪ್ರವೇಶದ್ವಾರಗಳಿವೆ. ಇವುಗಳು ಸಹ ಕಲ್ಯಾಣ ಚಾಲುಕ್ಯರ ಕಾಲದ ನಿರ್ಮಿತಿಗಳಾಗಿವೆ. ದೇವಾಲಯದ ಒಳಭಾಗದಲ್ಲಿ ಪ್ರಾಚೀನ ಶಿಲ್ಪಶೈಲಿಯ ಲಕ್ಷಣಗಳಿರುವ  ಆದಿಮಾಧವ ಮತ್ತು ಕಾರ್ತಿಕೇಯನ ಶಿಲ್ಪಗಳಿವೆ. ದೇವಾಲಯಕ್ಕೆ ಈಗಿರುವ  ಶಿಖರವು ವಿಜಯನಗರ ಸೋಂದಾ ಅರಸರ ಕಾಲಕ್ಕೆ ಸೇರಿದ್ದು ಸುಖನಾಸಿಯನ್ನು ಹೊಂದಿರುವ ಕದಂಬ ನಾಗರ ಶಿಖರವು ಪಿರಮಿಡ್ಡು ಆಕಾರದಲ್ಲಿ ಮೇಲಕ್ಕೇರುತ್ತದೆ.  ನಾಲ್ಕು ಮೂಲೆಗಳಲ್ಲಿ ನಂದಿ ವಿಷ್ಣುವಿನ ದಶಾವತಾರ ೧೨ ಆದಿತ್ಯರು, ದಿಕ್ಪಾಲಕರು, ನಾಗಬಂಧ ಮತ್ತು ಇತರ ದೇವತೆಗಳ ಗಾರೆ ಶಿಲ್ಪಗಳಿಂದ ಶಿಖರವನ್ನು ಅಲಂಕರಿಸಲಾಗಿದೆ. ನವರಂಗದ ಛಾವಣಿಯ ಸಮತಟ್ಟಾಗಿ ಅದರ ಅಂಚು ಇಳಿಜಾರಿನಿಂದ ಕೂಡಿದೆ. ದೇವಾಲಯದ ಮುಂಭಾಗ ದ್ವಜ ಸ್ಥಂಭವಿದೆ. ಪ್ರಾಕಾರದಲ್ಲಿರುವ ಉಪ ಗುಡಿಗಳಲ್ಲಿ ಸೋಂದಾ ಅರಸರ ಕಾಲದ ದಿಕ್ಪಾಲರು ದುಂಡಿರಾಜ, ಗಣಪತಿ ಚಿಂತಾಮಣಿ ನರಸಿಂಹ ಮತ್ತಿತರ ಶಿಲ್ಪಗಳಿವೆ. ಶಾಸನ ಸಹಿತ ನಾಗಶಿಲ್ಪ ಮತ್ತು ಅಲಂಕೃತ ಶಿಲಾ ಮಂಟಪದAತಿರುವ ಮಂಟಪವು ದೇವಾಲಯದಲ್ಲಿರುವ ಮುಖ್ಯ ರಚನೆಗಳಾಗಿವೆ. ಆಯತಾಕಾರದ ತೆಳು ಶಿಲಾ ಫಲಕದ ಮಧ್ಯದಲ್ಲಿ ಸುತ್ತಿಕೊಂಡAತೆ ಇರುವ ೫ ಹೆಡಗಳುಳ್ಳ ನಾಗಶಿಲ್ಪವಿದೆ. ಶಿಲಾಫಲಕದ ಎರಡೂ ಬದಿಯ ಅಂಚಿನಲ್ಲಿ ಕ್ರಿ.ಶ.೨ನೇ ಶತಮಾನಕ್ಕೆ ಸೇರುವ ಬ್ರಾಹ್ಮಿ ಲಿಪಿಯ ಪ್ರಾಕೃತ ಶಾಸನವಿದೆ. ಅದು ಹರಿತಪುತ್ರ ವಿನುಕಡೆ ಚುಟುಕುಲಾನಂದ ಶಾಕಕರ್ಣಿಯ ೧೨ನೇ ಆಳ್ವಿಕೆಯ ವರ್ಷದಲ್ಲಿ ಅವನ ಪುತ್ರಿ ಶಿವಸ್ಕಂದ ನಾಗಶ್ರೀಯು ಒಂದು ಕೆರೆ ಹಾಗೂ ವಿಹಾರದೊಂದಿಗೆ ಈ ಕಲಾತ್ಮಕ ನಾಗಶಿಲ್ಪವನ್ನು ನಿರ್ಮಿಸಿ ಕೊಡುಗೆಯಾಗಿ ನೀಡಿದ್ದಾಗಿ ತಿಳಿಸುತ್ತದೆ. ಸಂಜಯAತಿಯ (ಬನವಾಸಿ) ನಿವಾಸಿ ಅಚಾರ್ಯ ದಾಮೋರಕನ ಶಿಷ್ಯ ನಾಟಕನೆಂಬ ಶಿಲ್ಪಿಯ ಈ ನಾಗಶಿಲ್ಪವನ್ನು ಕೆತ್ತಿದನೆಂದು ಶಾಸನವು ದಾಖಲಿಸಿದೆ.  ಸೋಂದಾ ಅರಸ ಸದಾಶಿವ ನಾಯಕನು (ಕ್ರಿ.ಶ.೧೬ನೇ ಶತಮಾನ) ನಿರ್ಮಿಸಿರುವ ಅತ್ಯಂತ ಸೂಕ್ಷö್ಮ ಕೆತ್ತನೆಗಳಿಂದ ಕೂಡಿದ ತ್ರಿಲೋಕ ಮಂಟಪವೆAದು ಕರೆಯಲಾಗುವ ಶಿಲೆಯು ನವರಂಗದಲ್ಲಿದೆ. ರಘುನಾಥ ನಾಯಕ (ಕ್ರಿ.ಶ.೧೬೨೮) ಕೊಡುಗೆಯಾಗಿ ನೀಡಿದ ಶಿಲಾಮಂಟಪದಲ್ಲಿ ಗಿಡ, ಬಳ್ಳಿ, ಪ್ರಾಣಿ  ಮತ್ತು ಜಾಮಿತಿಯ ಅಲಂಕರಣಿಗಳಿAದ ಕೂಡಿದ ಸೂಕ್ಷö್ಮ ಕೆತ್ತನೆಗಳಿವೆ. ಇಲ್ಲಿನ ಗಣೇಶನ ಅರ್ಧಬಾಗ ಮಾತ್ರ ಇರುವ ಮೂರ್ತಿ ಇದರ ಇನ್ನರ್ದ ವಾರಣಾಸಿಯಲ್ಲಿದೆಯಂತೆ.   ದೇವಾಲಯ ಸಮುಚ್ಛಯದ ಪೂರ್ವ ಭಾಗದಲ್ಲಿರುವ ಮುಖ್ಯ ಪ್ರವೇಶ ದ್ವಾರದಲ್ಲಿರುವ ಮೆಟ್ಟಿಲುಗಳ ಕೈಪಿಡಿ ಗೋಡೆಗಳನ್ನು ಎರಡು ಅಲಂಕೃತ ಆನೆಗಳ ಶಿಲ್ಪಗಳಿಂದ ಕೆತ್ತಲಾಗಿದೆ.  ಇಲ್ಲಿಯ ಕಲ್ಲಿನ ಮಂಚ ಪ್ರಧಾನ ಆಕರ್ಷಣೆಗಳಲ್ಲೊಂದು. ಬನವಾಸಿ ಪರಿಸರದಲ್ಲಿ ಸಾಮಾನ್ಯ ಅಲಂಕರಣೆಗಳ  ಆದಿಕದಂಬರೇಶ್ವರ, ಆದಿಮಧುಕೇಶ್ವರ, ಅಲ್ಲಮಪ್ರಭು  ದೇವಾಲಯಗಳಿವೆ. ನಾವು ದೇವಸ್ಥಾನದಿಂದ ಹೊರಬಂದಾಗ ಕತ್ತಲು ಆವರಿಸುತ್ತಿತ್ತು. ದೇವಾಲಯದ ಹೊರಬಾಗದಲ್ಲಿ ಎರಡು ರಥಗಳನ್ನು ಎತ್ತರಕ್ಕೆ ಮನೆ ನಿರ್ಮಿಸಿ ನಿಲ್ಲಿಸಲಾಗಿದೆ. ಈಗ ರಥೋತ್ಸವಕ್ಕೆ ಹೊಸ ರಥ ಬಳಸಲಾಗುತ್ತಿದ್ದು ಹಳೆಯ ರಥವನ್ನು ಸಂರಕ್ಷಿಸಲಾಗಿದೆ. ಹೊರಗಡೆ ಒಂದು  ಸುತ್ತು ಹಾಕಿ ನಡೆದುಕೊಂಡೆ ಬಸ್‌ಸ್ಟಾö್ಯಂಡ್‌ಗೆ  ಬಂದೆವು. ಕೆಲಹೊತ್ತಿಗೆ ಬಸ್ಸು ಬಂತು. ಹತ್ತಲು ಹೋದೆವು. ದೇವಸ್ಥಾನಕ್ಕೆ ಹೋಗಿ ಬರುತ್ತೇವೆ ಇಲ್ಲೇ ಇರಿ ಎಂದ ಕಂಡಕ್ಟರ್ ಮೇಡಂ ಹತ್ತಿಸಿಕೊಳ್ಳಲಿಲ್ಲ. ಕದಂಬ ಸೈನ್ಯ ಅಧ್ಯಕ್ಷರು ಬೇಕ್ರಿ ರಮೇಶ್ ನಮಗೆ ಬನವಾಸಿಯ ಗುತ್ಯಪ್ಪ ಮಾದರ್ ಕಪ್ಪಗೇರಿ ಅವರ ಪೋನ್ ನಂಬರ್ ನೀಡಿದ್ದರು. ನಾವು ಬಸ್ ಕಾಯುವಾಗ ಗುತ್ಯಪ್ಪರು ಪೋನ್ ಮಾಡಿ ನಮ್ಮನ್ನು ಗುರುತಿಸಿ   ಮಾತನಾಡಿಸಲು ಬಂದರು. ಅಷ್ಟರಲ್ಲಿ ದೇವಸ್ಥಾನದಿಂದ ಬಸ್ಸು ಬಂತು. ನಾಳೇ ಭುವನಗಿರಿಯಲ್ಲಿ ಭೇಟಿಯಾಗೋಣ ಎಂದು ಗುತ್ಯಪ್ಪರಿಗೆ ವಿಶ್ ಮಾಡಿ ಶಿರಸಿ ಬಸ್ಸು ಹತ್ತಿದವು. ಗೊರೂರು ಅನಂತರಾಜು, ಹಾಸನ.

“ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ”ಗೊರೂರು ಅನಂತರಾಜು Read Post »

ಇತರೆ, ಜೀವನ

“ಮಕ್ಕಳು…..ತಾಯಿಯ ಪ್ರತಿಬಿಂಬ” ವೀಣಾ ಹೇಮಂತ್‌ ಗೌಡ ಪಾಟೀಲ್

ಜೀವನ ಸಂಗಾತಿ “ಮಕ್ಕಳು…..ತಾಯಿಯ ಪ್ರತಿಬಿಂಬ” ವೀಣಾ ಹೇಮಂತ್‌ ಗೌಡ ಪಾಟೀಲ್ ಮಕ್ಕಳು…..ತಾಯಿಯ ಪ್ರತಿಬಿಂಬ  ಬದುಕಿನಲ್ಲಿ ಈ ವಿಷಯವನ್ನು ಎಂದೂ ಮರೆಯಬಾರದು. ಯಾವುದನ್ನು ನೀವು ನಿಮ್ಮ ಸ್ವಂತ ತಾಯಿಗೆ ಬದುಕಿನಲ್ಲಿ ಕೊಡಲು ಸಾಧ್ಯವಿಲ್ಲವೋ ಅದನ್ನು ನೀವು ಕೂಡ ಪಡೆಯಲು ಸಾಧ್ಯವಿಲ್ಲ. ನಿಮ್ಮ ತಾಯಿಯೊಂದಿಗೆ ನೀವು ವರ್ತಿಸುವ ರೀತಿಯಲ್ಲಿ ಬದುಕು ನಿಮ್ಮೊಂದಿಗೆ ವರ್ತಿಸುತ್ತದೆ. ನಿಮ್ಮನ್ನು ಪ್ರೀತಿಸಿದ ಮೊದಲ ಹೃದಯ ನಿಮ್ಮ ತಾಯಿಯದಾಗಿರುತ್ತದೆ. ತಾಯಿಯ ಪ್ರೀತಿ ಶರತ್ತುಗಳನ್ನು ಹೊಂದಿರುವುದಿಲ್ಲ ಆದ್ದರಿಂದ ಎಂದಿಗೂ ನಿಮ್ಮ ತಾಯಿಯನ್ನು ಎಂದೂ ನಿರ್ಣಯಾತ್ಮಕವಾಗಿ ನೋಡಬೇಡಿ.ನಿಮ್ಮ ತಾಯಿ ಬದುಕಿನ ಎಂತೆಂತಹ ಯುದ್ಧಗಳಲ್ಲಿ ಹೋರಾಡಿರುವಳು ಎಂಬುದರ ಅರಿವು ನಿಮಗಿಲ್ಲ. ಆಕೆ ಮೌನವಾಗಿ ಸಹಿಸಿದ ನೋವುಗಳ ಕುರಿತು ನಿಮಗೆ ಗೊತ್ತಿಲ್ಲ. ತನ್ನ ಗಂಟಲುಬ್ಬಿಸುವ ನೋವನ್ನು ನುಂಗಿ ಕಣ್ಣೀರನ್ನು ಅಲ್ಲಿಯೇ ಇಂಗಿಸಿ ಕಿರುನಗೆ ನಕ್ಕ ಆಕೆಯ ನಗುವಿನ ಹಿಂದಿನ ಆಳವಾದ ಸತ್ಯದ ಅರಿವು ನಿಮಗಿಲ್ಲ.ಆರದ ಅದೆಷ್ಟೋ ಗಾಯಗಳು ಆಕೆಯ ಮನದಲ್ಲಿ ವಾಸವಾಗಿವೆ ಎಂಬುದರ ಅರಿವು ನಿಮಗೆ ಇಲ್ಲ.ಆಕೆಯ ಯೌವನವೆಲ್ಲ ತನ್ನ ಪತಿಯ ಬೇಕು ಬೇಡಗಳಿಗೆ ಸ್ಪಂದಿಸುತ್ತಾ ಮಕ್ಕಳ ಅಗತ್ಯಗಳನ್ನು ಪೂರೈಸುತ್ತಾ ಸಾಗಿರುತ್ತದೆ.ಮಕ್ಕಳ ಭವಿಷ್ಯವನ್ನು ರೂಪಿಸಲು ಅತ್ಯಗತ್ಯವಾದ ಆರೋಗ್ಯ, ಸಂಸ್ಕಾರ, ಶಿಕ್ಷಣ, ದೈನಂದಿನ ಅವಶ್ಯಕತೆಗಳನ್ನು ಪೂರೈಸುತ್ತಾ ತನಗೂ ಕೂಡ ತನ್ನದೇ ಆದ ಬದುಕಿದೆ ಎಂಬುದನ್ನು ಆಕೆ ಮರೆತುಬಿಟ್ಟಿರುತ್ತಾಳೆ.ಯೌವನದ ದಿನಗಳನ್ನು ಆಕೆ ಭಯ, ನಿರಾಶೆ ಮತ್ತು ಆರ್ಥಿಕ ತೊಂದರೆಗಳಿಂದ ಕಳೆದಿರುತ್ತಾಳೆ. ಹೆಣ್ಣೆಂಬ ಒಂದೇ ಕಾರಣಕ್ಕೆ ಆಕೆಯನ್ನು ಯಾರೂ ಅಷ್ಟಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಆಕೆಯ ಮನದಾಳದ ಮಾತಿಗೆ ಕಿವಿಯಾಗುವುದಿಲ್ಲ ಆಕೆಯನ್ನು ಪೋಷಿಸುತ್ತಾರೆಯೇ ಹೊರತು ಆಕೆಯ ಭಾವನೆಗಳನ್ನು ಲಕ್ಷಿಸುವುದಿಲ್ಲ…. ಎಲ್ಲವನ್ನು ಮಾಡಿಯೂ ಕೂಡ ಆಕೆ ಏನನ್ನೂ ಬಯಸದೇ ಹೋದರೂ ಆಕೆಯನ್ನು ಪರಿಗಣಿಸುವುದೇ ಇಲ್ಲ. ನಿಮ್ಮ ಹುಟ್ಟಿನಿಂದ ಹಿಡಿದು ತಾನು ನಿಮ್ಮೊಂದಿಗೆ ಇರುವ ಹಾಗೂ ಬದುಕಿರುವ ಪ್ರತಿ ಕ್ಷಣವು ನಿಮ್ಮ ಮನದ ಮಾತುಗಳಿಗೆ ಆಸೆಗಳಿಗೆ ಆಕಾಂಕ್ಷೆಗಳಿಗೆಕಿವಿಗೊಡುವ, ಅದಕ್ಕಾಗಿ ಹೋರಾಡುವವರು ತಾಯಿ.,ಬದುಕಿನ ಹೋರಾಟದ ಎಲ್ಲಾ ಕಷ್ಟಗಳಿಗೆ ಗುರಾಣಿಯಂತೆ ನಿಮ್ಮನ್ನು ರಕ್ಷಿಸಿ ಬೆಳೆಸುವ ಆಕೆಗೆ ತನ್ನದೇ ಆದ ವೈಯಕ್ತಿಕ ಸುಖ ಸಂತೋಷಗಳು ಇಲ್ಲವೇ ಇಲ್ಲ ಎಂದಲ್ಲ… ಆದರೆ ಅವೆಲ್ಲವೂ ನಿಮ್ಮನ್ನು ಕಾಳಜಿ ಮಾಡುವ ಆಕೆಗೆ ಕುಟುಂಬದ ಸಂತಸದಲ್ಲಿಯೇ ಸಾರ್ಥಕತೆಯನ್ನು ಕಾಣುವ ಆಕೆಯ ವಿಶಾಲ ಹೃದಯದ ಮೂಲೆಯಲ್ಲಿ ಅಡಗಿ ಕುಳಿತಿರುತ್ತವೆ.ಆದ್ದರಿಂದ ನಿಮ್ಮ ತಾಯಿಯೊಂದಿಗೆ ಮಾತನಾಡಿ… ಆಕೆಯ ಮಾತುಗಳಿಗೆ ಕಿವಿಯಾಗಿ ಬದುಕಿನಲ್ಲಿ ಆಕೆ ಅನುಭವಿಸಿದ ನೋವು ಯಾತನೆಗಳನ್ನು ಆಕೆಯ ಮಾತುಗಳಲ್ಲಿ ಆಲಿಸಿ.ತಾಯಿಯ ಕುರಿತಾದ ಭಾವನಾತ್ಮಕ ಮಾತುಗಳನ್ನು ಮುಂದಿನ ದಿನಕ್ಕಾಗಿ ಉಳಿಸಿಕೊಳ್ಳದಿರಿ. ನಿಮ್ಮ ತಾಯಿಯ ತಾಳ್ಮೆ, ಸಹನೆ, ಸಿಟ್ಟು, ಸೆಡವು, ಅದ್ವಿತೀಯ ಕಾರ್ಯವೈಖರಿಯನ್ನು ಪ್ರಶಂಶಿಸುವುದಾದರೆ ಅದು ಇಂದೇ ಆಗಲಿ…ಯಾರಿಗೆ ಗೊತ್ತು ಮುಂದೊಂದು ದಿನ ನೀವು ಅದನ್ನೆಲ್ಲಾ ಹೇಳುವ ಹೊತ್ತಿಗೆ ಆಕೆಯೇ ಇಲ್ಲವಾಗಿರಬಹುದು…. ಇದ್ದಾಗ ಸಿಗದ ಗೌರವವನ್ನು ಸತ್ತ ಮೇಲೆ ಪಡೆಯುವುದರಲ್ಲಿ ಯಾವ ಪುರುಷಾರ್ಥವಿದೆ…. ನೀವೇ ಹೇಳಿ.ಬಹುಶಹ ಆಕೆಯ ಕಂಗಳಲ್ಲಿ ಇಡೀ ಜಗತ್ತಿನ ಸುಖ ಸೌಲಭ್ಯಗಳು ತಕ್ಕಡಿಯ ಒಂದು ತಟ್ಟೆಯಲ್ಲಿ ತೂಗಿದರೆ ನಿಮ್ಮ ಒಂದು ಅಕ್ಕರೆಯ, ಕಾಳಜಿಯ ಮಾತು ಮತ್ತೊಂದು ತಟ್ಟೆಯಲ್ಲಿ ತೂಗುತ್ತದೆನಿಮ್ಮ ತಾಯಿಯ ಕುರಿತಾದ ನಿಮ್ಮ ಪ್ರೀತಿ ಮತ್ತು ಗೌರವ ನಿಮಗೆ ಆಶೀರ್ವಾದವಾಗಿ ಮರಳಿ ದೊರೆಯುತ್ತದೆ. ಬಹುಶಹ ನಿಮ್ಮಿಂದ ಆಕೆ ನಿರೀಕ್ಷಿಸುವುದು ಕೂಡ ಅದನ್ನೇ. ಮುಂದಿನ ಬದುಕಿನಲ್ಲಿ ನೀವು ಆಕೆಗೆ ಈ ಎಲ್ಲವನ್ನು ಕೊಡಲಿ ಎಂದೇನೂ ಆಕೆ ಇದೆಲ್ಲವನ್ನು ಮಾಡಿರುವುದಿಲ್ಲ ನಿಜ. ಮಕ್ಕಳಾಗಿ ನಿಮ್ಮನ್ನು ಹಾಗೆ ಬೆಳೆಸುವುದು ತನ್ನ ಕರ್ತವ್ಯ ಎಂದು ಆಕೆ ಭಾವಿಸಿದ್ದರೆ ಅದು ಆಕೆಯ ತಪ್ಪಲ್ಲ…. ಆದರೆ ಆಕೆ ನಿಮಗೆ ಕೊಡ ಮಾಡುವ ಪ್ರೀತಿ, ಅಕ್ಕರೆ, ಕಾಳಜಿ, ಕಠಿಣತೆ, ಶಿಸ್ತುಗಳು ನಿಮ್ಮನ್ನು ನೀವು ಈಗಿರುವ ವ್ಯಕ್ತಿಯಾಗಿ ರೂಪಿಸುವಲ್ಲಿ ತನ್ನದೇ ಆದ ಪಾತ್ರವನ್ನು ವಹಿಸಿರುತ್ತದೆ.ಆಕೆಯ ಪ್ರೀತಿ, ಮಮತೆಗಳು ನಿಮ್ಮನ್ನು ಆರೋಗ್ಯಕರ ಕೌಟುಂಬಿಕ ವ್ಯಕ್ತಿಯನ್ನಾಗಿ ಬೆಳೆಸಿದರೆ ಕಠಿಣತೆಯ ಮುಖವಾಡವನ್ನು ಹೊಂದಿರುವ ಶಿಸ್ತು ಪಾಲನೆಯು ನಿಮ್ಮನ್ನು ಓರ್ವ ಸಭ್ಯ ಹಾಗೂ ಕ್ರಿಯಾಶೀಲ ವ್ಯಕ್ತಿಯನ್ನಾಗಿ ರೂಪಿಸಿರುತ್ತದೆ. ಆಕೆ ನಿಮಗೆ ತೋರುವ ಕಾಳಜಿಪೂರ್ವಕ ನಡವಳಿಕೆ ನಿಮ್ಮನ್ನು ಓರ್ವ ಸಾಮಾಜಿಕ ವ್ಯಕ್ತಿಯನ್ನಾಗಿ ರೂಪಿಸಿದರೆ ಆಕೆಯ ಧಾರ್ಮಿಕ ನಂಬಿಕೆಗಳು ನಿಮ್ಮಲ್ಲಿ ಓರ್ವ ಆಶಾವಾದಿಯನ್ನು, ಭರವಸೆಯ ನಾಯಕನನ್ನು ಸೃಷ್ಟಿಸುತ್ತವೆಆದ್ದರಿಂದ ಮಕ್ಕಳೇ…. ತಾಯಿಯ ಕುರಿತು ನಿಷ್ಕಾಳಜಿ ಬೇಡ ಆಕೆ ಭೌತಿಕವಾಗಿ ಇರಲಿ ಅಥವಾ ಇಲ್ಲದೇ ಇರಲಿ ಆಕೆಯ ಆಶೀರ್ವಾದ ಶಾಂತಿಯಾಗಿ ನಿಮ್ಮನ್ನು ಆವರಿಸುತ್ತದೆ. ಆಂತರಿಕ  ಶಕ್ತಿಯಾಗಿ ನಿಮ್ಮಲ್ಲಿ ತುಂಬಿಕೊಂಡು ನಿಮ್ಮನ್ನು ಗಟ್ಟಿಯಾಗಿಸುತ್ತದೆನಿಮಗೆ ಕೇವಲ ಒಬ್ಬ ತಾಯಿ ಮಾತ್ರ ದೊರೆಯುತ್ತಾಳೆ ಹಾಗೂ ಆಕೆಗೆ ನೀವು ಏನನ್ನು ಕೊಡುವಿರೋ ಅದನ್ನೇ ನೀವು ಬದುಕಿನಲ್ಲಿ ಪಡೆಯುವಿರಿ ಎಂಬುದನ್ನು ನೆನಪಿಟ್ಟುಕೊಂಡು ಬದುಕಿನಲ್ಲಿ ತಾಯಿಯನ್ನು ಪ್ರೀತಿಸಿ ಗೌರವಿಸಿ ಆರಾಧಿಸಿ…… ತಾಯಿ ಅದಕ್ಕೂ ಹೆಚ್ಚಿನದನ್ನು ನಿಮ್ಮಿಂದ ನಿರೀಕ್ಷಿಸುವುದಿಲ್ಲ. ಏನಂತೀರಾ ಸ್ನೇಹಿತರೇ??  ವೀಣಾ ಹೇಮಂತ್ ಗೌಡ ಪಾಟೀಲ್

“ಮಕ್ಕಳು…..ತಾಯಿಯ ಪ್ರತಿಬಿಂಬ” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಇತರೆ

“ವಿಜಯನಗರದ ರಾಣಿಯರು” ಡಾ.ತಾರಾ ಬಿ.ಎನ್. ಧಾರವಾಡ

ಇತಿಹಾಸ ಸಂಗಾತಿ ಡಾ.ತಾರಾ ಬಿ.ಎನ್. ಧಾರವಾಡ “ವಿಜಯನಗರದ ರಾಣಿಯರು” 1 ಪೀಠಿಕೆ            ವಿಜಯನಗರ ಸಾಮ್ರಾಜ್ಯ (ಕ್ರಿ.ಶ. 1336–1646) ದಕ್ಷಿಣ ಭಾರತದ ರಾಜಕೀಯ, ಸಾಂಸ್ಕೃತಿಕ ಹಾಗೂ ಆರ್ಥಿಕ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಹರಿಹರ ಮತ್ತು ಬುಕ್ಕರಾಯರು ಸ್ಥಾಪಿಸಿದ ಈ ಸಾಮ್ರಾಜ್ಯವು ಸಂಗಮ, ಸಾಲುವ, ತುಳು ಮತ್ತು ಅರವೀಡು ವಂಶಗಳ ಮೂಲಕ ಸುಮಾರು ಮೂರು ಶತಮಾನಗಳ ಕಾಲ ಆಳಿತು. ಸಾಮಾನ್ಯವಾಗಿ ರಾಜರ ಸಾಧನೆಗಳು, ಯುದ್ಧಗಳು ಮತ್ತು ಆಡಳಿತ ವ್ಯವಸ್ಥೆ ಕುರಿತಂತೆ ಹೆಚ್ಚಿನ ಅಧ್ಯಯನಗಳು ನಡೆದಿದ್ದರೂ, ವಿಜಯನಗರದ ರಾಣಿಯರ ಪಾತ್ರವೂ ಸಮಾನ ,ಗಮನಾರ್ಹವಾಗಿದೆ.ರಾಣಿಯರು ಕೇವಲ ರಾಜರ ಸಹಚರಲ್ಲ; ಅವರು ಧಾರ್ಮಿಕ ದಾನಿಗಳು, ಸಾಂಸ್ಕೃತಿಕ ಪ್ರೋತ್ಸಾಹಕರು, ಸಾಹಿತ್ಯ ಸೃಷ್ಟಿಕರ್ತರು ಮತ್ತು ಕೆಲ ಸಂದರ್ಭಗಳಲ್ಲಿ ಆಡಳಿತಾತ್ಮಕ ನಿರ್ಣಯಗಳಲ್ಲಿ ಪಾಲ್ಗೊಂಡವರಾಗಿದ್ದರು. ಶಾಸನಗಳು, ವಿದೇಶಿ ಪ್ರವಾಸಿಗರ ವರ್ಣನೆಗಳು ಮತ್ತು ಸಾಹಿತ್ಯಕೃತಿಗಳು ರಾಣಿಯರ ಪ್ರಭಾವವನ್ನು ಸ್ಪಷ್ಟಪಡಿಸುತ್ತವೆ.1. ಗಂಗಾದೇವಿ :- ಕುಮಾರ ಕಂಪಣನ ಪತ್ನಿ. ಪ್ರಸಿದ್ಧ ಕೃತಿ “ಮಧುರಾ ವಿಜಯಂ” ರಚಿಸಿದರು. ಈ ಕಾವ್ಯದಲ್ಲಿ ಮದುರೈ ಮೇಲೆ ವಿಜಯನಗರದ ವಿಜಯವನ್ನು ವರ್ಣಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆಯನ್ನು ಹೆಚ್ಚಿಸಿದರು. ಗಂಗಾದೇವಿ ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ರಾಣಿ ಹಾಗೂ ಕವಿ. ಅವರು ಕುಮಾರಕಂಪಣನ ಪತ್ನಿಯಾಗಿದ್ದರು. ಗಂಗಾದೇವಿಯ ಅತ್ಯಂತ ಪ್ರಸಿದ್ಧ ಕೃತಿ “ಮಧುರಾ ವಿಜಯಂ” (ಅಥವಾ ವೀರಕಂಪಣರಾಯ ಚರಿತೆ). ಈ ಕೃತಿಯಲ್ಲಿ ಅವರು ತಮ್ಮ ಪತಿಯ ಮದುರೈ ವಿಜಯವನ್ನು ವಿವರಿಸಿದ್ದಾರೆ. ಈ ಕಾವ್ಯವು ಕೇವಲ ಸಾಹಿತ್ಯಕೃತಿಯಷ್ಟೇ ಅಲ್ಲ; ಅದು ಇತಿಹಾಸದ ಮಹತ್ವದ ದಾಖಲೆ ಕೂಡ ಆಗಿದೆ. ಸಂಸ್ಕೃತದಲ್ಲಿ ರಚಿಸಲಾದ ಈ ಕೃತಿ ವಿಜಯನಗರ ಸಾಮ್ರಾಜ್ಯದ ರಾಜಕೀಯ ಮತ್ತು ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುತ್ತದೆ. ಮಹಿಳೆಯೊಬ್ಬಳು ಆ ಕಾಲದಲ್ಲಿ ಇಂತಹ ಮಹಾಕಾವ್ಯವನ್ನು ರಚಿಸಿರುವುದು ಮಹಿಳಾ ಶಿಕ್ಷಣ ಮತ್ತು ಬೌದ್ಧಿಕ ಶಕ್ತಿಯ ಸಾಕ್ಷಿಯಾಗಿದೆ.2. ತಿರುಮಲಾ ದೇವಿ :- ಶ್ರೀಕೃಷ್ಣದೇವರಾಯರ ಪ್ರಮುಖ ರಾಣಿ. ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ದೇವಾಲಯಗಳ ನಿರ್ಮಾಣ ಮತ್ತು ದೇಣಿಗೆಗಳಲ್ಲಿ ಪಾಲ್ಗೊಂಡರು. ರಾಜಕೀಯ ಕಾರ್ಯಗಳಲ್ಲಿ ರಾಜನಿಗೆ ಬೆಂಬಲ ನೀಡಿದರು. ತಿರುಮಲದೇವಿ ಶ್ರೀಕೃಷ್ಣದೇವರಾಯರ ಪ್ರಮುಖ ರಾಣಿಯರಲ್ಲಿ ಒಬ್ಬರು. ಅವರು ಧಾರ್ಮಿಕ ಕಾರ್ಯಗಳಲ್ಲಿ, ದಾನಧರ್ಮಗಳಲ್ಲಿ ಮತ್ತು ದೇವಾಲಯಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದರು. ತಿರುಮಲದೇವಿ ತಿರುಪತಿ ಹಾಗೂ ಇತರ ಪವಿತ್ರ ಕ್ಷೇತ್ರಗಳಿಗೆ ದೇಣಿಗೆಗಳನ್ನು ನೀಡಿದ್ದು ಶಾಸನಗಳಲ್ಲಿ ದಾಖಲಾಗಿದೆ. ಅವರು ರಾಜಕೀಯ ವಿಚಾರಗಳಲ್ಲಿಯೂ ರಾಜನಿಗೆ ಸಲಹೆಗಾರ್ತಿಯಾಗಿ ನೆರವಾದರು ಎಂಬ ಉಲ್ಲೇಖಗಳು ದೊರೆಯುತ್ತವೆ. ಅವರ ಪ್ರಭಾವದಿಂದ ಅರಮನೆಯಲ್ಲಿ ಸಂಸ್ಕೃತಿ, ಸಂಗೀತ ಮತ್ತು ಕಲೆಗಳಿಗೆ ಉತ್ತೇಜನ ದೊರೆಯಿತು.ಇತರ ವಿಜಯನಗರ ರಾಣಿಯರಾದ ಚಿನ್ನದೇವಿ, ಅಬ್ಬಕ್ಕದೇವಿ ಮುಂತಾದವರು ಸಹ ಧೈರ್ಯ, ಆಡಳಿತಪಾಟು ಮತ್ತು ಧಾರ್ಮಿಕ ಭಕ್ತಿಯ ಮೂಲಕ ಹೆಸರುವಾಸಿಯಾಗಿದ್ದರು. ರಾಣಿಯರು ದೇವಾಲಯಗಳ ನಿರ್ಮಾಣ, ಅನ್ನಸತ್ರಗಳ ಸ್ಥಾಪನೆ, ಬ್ರಾಹ್ಮಣರಿಗೆ ಹಾಗೂ ಪಂಡಿತರಿಗೆ ದಾನ ನೀಡುವ ಮೂಲಕ ಸಮಾಜದ ಕಲ್ಯಾಣಕ್ಕೆ ಸಹಕರಿಸಿದರು. ಕೆಲವರು ಯುದ್ಧಕಾಲದಲ್ಲಿ ರಾಜರಿಗೆ ಬೆಂಬಲವಾಗಿ ನಿಂತರು ಹಾಗೂ ಸಾಮ್ರಾಜ್ಯದ ಏಕತೆಯನ್ನು ಕಾಪಾಡಲು ನೆರವಾದರು.ಒಟ್ಟಿನಲ್ಲಿ ವಿಜಯನಗರ ರಾಣಿಯರು ಸಾಹಿತ್ಯ, ಧರ್ಮ, ಕಲೆ ಮತ್ತು ಆಡಳಿತ ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿದರು. ಅವರು ಮಹಿಳೆಯರು ಕೇವಲ ಕುಟುಂಬದ ಪಾತ್ರದಲ್ಲೇ ಸೀಮಿತರಲ್ಲ; ಸಮಾಜ ನಿರ್ಮಾಣದಲ್ಲಿ ಪ್ರಮುಖ ಶಕ್ತಿ ಎಂಬುದನ್ನು ಸಾಬೀತುಪಡಿಸಿದರು. ಅವರ ಸಾಧನೆಗಳು ಇಂದಿಗೂ ಇತಿಹಾಸದಲ್ಲಿ ಸ್ಮರಣೀಯವಾಗಿವೆ.3. ಚಿತ್ತಾದೇವಿ (ಚಿನ್ನದೇವಿ) :- ಶ್ರೀಕೃಷ್ಣದೇವರಾಯರ ಮತ್ತೊಬ್ಬ ರಾಣಿ. ಕಲಾ ಮತ್ತು ಸಂಗೀತಕ್ಕೆ ಪ್ರೋತ್ಸಾಹ ನೀಡಿದರು. ಹಲವಾರು ದಾನಧರ್ಮ ಕಾರ್ಯಗಳನ್ನು ನೆರವೇರಿಸಿದರು. ಚಿನ್ನದೇವಿ ಶ್ರೀಕೃಷ್ಣದೇವರಾಯರ ಮತ್ತೊಬ್ಬ ಪ್ರಮುಖ ರಾಣಿ. ಅವರು ದೇವಾಲಯಗಳಿಗೆ ಭೂದಾನ, ಆಭರಣ, ನಗದು ದೇಣಿಗೆಗಳನ್ನು ನೀಡಿದ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ. ತಿರುಪತಿ, ಕಂಚಿಪುರಂ ಮತ್ತು ಹಂಪಿಯ ದೇವಾಲಯಗಳ ಅಭಿವೃದ್ಧಿಗೆ ಅವರು ಸಹಕರಿಸಿದರು. ಧಾರ್ಮಿಕ ಆಚರಣೆಗಳು ಸರಿಯಾಗಿ ನಡೆಯುವಂತೆ ಆರ್ಥಿಕ ನೆರವು ನೀಡುವುದು ಅವರ ಪ್ರಮುಖ ಕಾರ್ಯವಾಗಿತ್ತು.4. ಅಬ್ಬಕ್ಕ ದೇವಿ (ಉಲ್ಲಾಳ ರಾಣಿ ಅಬ್ಬಕ್ಕ) :- ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿದ್ದ ಉಲ್ಲಾಳದ ರಾಣಿ. ಪೋರ್ಟುಗೀಸ್‌ರ ವಿರುದ್ಧ ಧೈರ್ಯವಾಗಿ ಹೋರಾಡಿದರು. ಸ್ವಾತಂತ್ರ್ಯ ಮತ್ತು ದೇಶಭಕ್ತಿಯ ಪ್ರತೀಕವಾಗಿ ಪರಿಗಣಿಸಲ್ಪಟ್ಟಿದ್ದಾರೆ.5. ವರದಾಂಬಿಕೆ :- ಅಚ್ಯುತದೇವರಾಯರ ರಾಣಿ. ಧಾರ್ಮಿಕ ಕಾರ್ಯಗಳು ಮತ್ತು ದೇಣಿಗೆಗಳಲ್ಲಿ ಪಾಲ್ಗೊಂಡರು. ಕೆಲ ಶಾಸನಗಳಲ್ಲಿ ಅವರ ಹೆಸರು ಉಲ್ಲೇಖವಾಗಿದೆ. ವರದಾಂಬಿಕಾ (Varadambika) ವರದಾಂಬಿಕಾ ಅಚ್ಯುತದೇವರಾಯರ ರಾಣಿ ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಅಚ್ಯುತದೇವರಾಯರು ಶ್ರೀಕೃಷ್ಣದೇವರಾಯರ ನಂತರ ವಿಜಯನಗರ ಸಿಂಹಾಸನಾರೂಢರಾದರು. ಅವರ ಕಾಲದಲ್ಲಿ ಸಾಮ್ರಾಜ್ಯವು ಆಂತರಿಕ ರಾಜಕೀಯ ಸವಾಲುಗಳನ್ನು ಎದುರಿಸುತ್ತಿತ್ತು. ಇಂತಹ ಸಂದರ್ಭದಲ್ಲಿ ವರದಾಂಬಿಕಾ ಅರಮನೆಯಲ್ಲಿ ಪ್ರಭಾವಶಾಲಿ ವ್ಯಕ್ತಿತ್ವವಾಗಿದ್ದರು. ಶಾಸನಗಳ ಪ್ರಕಾರ, ವರದಾಂಬಿಕಾ ದೇವಾಲಯಗಳಿಗೆ ದಾನ ನೀಡಿದ್ದು, ಧಾರ್ಮಿಕ ಆಚರಣೆಗಳನ್ನು ಉತ್ತೇಜಿಸಿದರು. ಅವರು ತಿರುಪತಿ ಹಾಗೂ ಇತರ ಪ್ರಮುಖ ಕ್ಷೇತ್ರಗಳಿಗೆ ಭೂಮಿ, ಹಣ ಮತ್ತು ಆಭರಣಗಳನ್ನು ಸಮರ್ಪಿಸಿದರೆಂದು ಉಲ್ಲೇಖಗಳಿವೆ. ಧಾರ್ಮಿಕ ಕಾರ್ಯಗಳ ಮೂಲಕ ಅವರು ರಾಜಮನೆತನದ ಭಕ್ತಿಭಾವವನ್ನು ವ್ಯಕ್ತಪಡಿಸಿದರು ಮತ್ತು ಜನರಲ್ಲಿ ವಿಶ್ವಾಸವನ್ನು ಬೆಳೆಸಿದರು. ವರದಾಂಬಿಕಾ ರಾಜಕೀಯವಾಗಿ ಕೂಡ ಪ್ರಭಾವ ಬೀರಿದ್ದರೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ರಾಜನಿಗೆ ಸಲಹೆ ನೀಡುವುದು, ಅರಮನೆ ವ್ಯವಹಾರಗಳನ್ನು ಸಮನ್ವಯಗೊಳಿಸುವುದು ಮತ್ತು ರಾಜಕುಮಾರರ ಶಿಕ್ಷಣದಲ್ಲಿ ಆಸಕ್ತಿ ತೋರಿರುವುದು ಅವರ ಪಾತ್ರವನ್ನು ತೋರಿಸುತ್ತದೆ. ಅವರ ನಡೆನುಡಿಗಳು ಸಾಮ್ರಾಜ್ಯದ ಆಂತರಿಕ ಶಾಂತಿಯನ್ನು ಕಾಪಾಡಲು ನೆರವಾದವು.6. ವಿತ್ತಲಾದೇವಿ (Vittaladevi / Vithalambika) :- ವಿತ್ತಲಾದೇವಿಯರು ವಿಜಯನಗರದ ಮತ್ತೊಬ್ಬ ಪ್ರಮುಖ ರಾಣಿ. ಕೆಲವು ಶಾಸನಗಳಲ್ಲಿ ಅವರನ್ನು ಅಚ್ಯುತದೇವರಾಯರ ಪತ್ನಿಯಾಗಿ ಉಲ್ಲೇಖಿಸಲಾಗಿದೆ. ವಿತ್ತಲಾದೇವಿಯರು ವಿಶೇಷವಾಗಿ ಧಾರ್ಮಿಕ ಹಾಗೂ ದಾನಧರ್ಮ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಅವರು ವೈಷ್ಣವ ಸಂಪ್ರದಾಯದ ಭಕ್ತೆಯಾಗಿದ್ದು, ವಿಷ್ಣು ದೇವಾಲಯಗಳ ಅಭಿವೃದ್ಧಿಗೆ ಸಹಕರಿಸಿದರು ಎಂಬ ದಾಖಲೆಗಳಿವೆ. ದೇವಾಲಯಗಳಿಗೆ ದೇಣಿಗೆ, ಉತ್ಸವUÀ¼À£ÀÄß K¥Àðr¸ÀĪÀ°è ªÀĺÀvÀézÀ PÁAiÀÄð ªÀiÁqÀÄwÛzÀÝgÀÄ.7. ಅನ್ನಪೂರ್ಣಾದೇವಿ :- (ಕೆಲವು ಶಾಸನಗಳಲ್ಲಿ ಉಲ್ಲೇಖ) ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದರು. ಅವರು ಅನ್ನಸತ್ರಗಳ ಸ್ಥಾಪನೆ, ಯಾತ್ರಿಕರಿಗೆ ವಸತಿ ವ್ಯವಸ್ಥೆ ಮತ್ತು ಬಡವರಿಗೆ ನೆರವು ನೀಡುವಂತಹ ಕಾರ್ಯಗಳನ್ನು ನಡೆಸಿದರು. ಇದು ಸಮಾಜದಲ್ಲಿ ರಾಣಿಯರ ಕಾಳಜಿ ಮತ್ತು ಮಾನವೀಯತೆಯನ್ನು ತೋರಿಸುತ್ತದೆ. ವಿತ್ತಲಾಂಬಿಕಾ (ಅಚ್ಯುತದೇವರಾಯರ ಪತ್ನಿ ಎಂದು ಹೇಳಲಾಗುತ್ತದೆ) ಧಾರ್ಮಿಕ ಕಾರ್ಯಗಳಲ್ಲಿ ಚುರುಕಾಗಿದ್ದರು. ಅವರು ವಿವಿಧ ದೇವಾಲಯಗಳಿಗೆ ದಾನ ನೀಡಿದ ಬಗ್ಗೆ ಉಲ್ಲೇಖಗಳಿವೆ. ಅವರ ಪ್ರಭಾವದಿಂದ ವೈಷ್ಣವ ಮತ್ತು ಶೈವ ಸಂಪ್ರದಾಯಗಳಿಗೆ ಉತ್ತೇಜನ ದೊರೆಯಿತು. ಕೆಲವು ರಾಣಿಯರು ರಾಜಕೀಯ ವಿಷಯಗಳಲ್ಲಿಯೂ ಪರೋಕ್ಷವಾಗಿ ಪ್ರಭಾವ ಬೀರಿದರು. ರಾಜನಿಗೆ ಸಲಹೆ ನೀಡುವುದು, ಉತ್ತರಾಧಿಕಾರ ಪ್ರಶ್ನೆಗಳಲ್ಲಿ ಸಮತೋಲನ ಸಾಧಿಸುವುದು, ರಾಜಕುಮಾರರ ಶಿಕ್ಷಣ ಮತ್ತು ತರಬೇತಿಯಲ್ಲಿ ಗಮನಹರಿಸುವುದು ಅವರ ಹೊಣೆಗಾರಿಕೆಯಾಗಿತ್ತು. ಇದರಿಂದ ಸಾಮ್ರಾಜ್ಯದ ಸ್ಥಿರತೆ ಕಾಪಾಡಲು ಸಹಾಯವಾಯಿತು. ರಾಣಿಯರು ಕಲೆ ಮತ್ತು ಸಂಸ್ಕೃತಿಯ ಪೋಷಕರಾಗಿದ್ದರು. ಸಂಗೀತ, ನೃತ್ಯ, ಸಾಹಿತ್ಯ ಮತ್ತು ಶಿಲ್ಪಕಲೆಗೆ ಆಶ್ರಯ ನೀಡಿದರು. ಅರಮನೆಗಳಲ್ಲಿ ಪಂಡಿತರು, ಕವಿಗಳು ಮತ್ತು ಕಲಾವಿದರು ನೆಲೆಸುವಂತೆ ನೆರವು ನೀಡಿದರು. ಇದರಿಂದ ವಿಜಯನಗರವು ಸಂಸ್ಕೃತಿಯ ಕೇಂದ್ರವಾಗಿತು.ಒಟ್ಟಿನಲ್ಲಿ ತೆರೆಮರೆಯಲ್ಲಿ ಕಾರ್ಯನಿರ್ವಹಿಸಿದ ವಿಜಯನಗರದ ರಾಣಿಯರು ಸಾಮ್ರಾಜ್ಯದ ಅಭಿವೃದ್ಧಿಗೆ ಮೌನಶಕ್ತಿ ಆಗಿದ್ದರು. ಅವರ ಧಾರ್ಮಿಕ ದಾನ, ಸಾಮಾಜಿಕ ಸೇವೆ, ರಾಜಕೀಯ ಪ್ರಭಾವ ಮತ್ತು ಸಾಂಸ್ಕೃತಿಕ ಆಶ್ರಯವು ವಿಜಯನಗರ ಸಾಮ್ರಾಜ್ಯವನ್ನು ಬಲಪಡಿಸಿತು. ಅವರ ಹೆಸರುಗಳು ಹೆಚ್ಚು ಪ್ರಸಿದ್ಧಿಯಾಗದಿದ್ದರೂ, ಅವರ ಸೇವೆ ಇತಿಹಾಸದಲ್ಲಿ ಮಹತ್ವಪೂರ್ಣವಾಗಿದೆ. ಮಹತ್ವ :-ವಿಜಯನಗರದ ರಾಣಿಯರು ಕೇವಲ ಅರಮನೆಯಲ್ಲೇ ಸೀಮಿತವಾಗಿರದೆ ಸಾಹಿತ್ಯ, ಧರ್ಮ, ಕಲೆ ಮತ್ತು ಆಡಳಿತ ಕ್ಷೇತ್ರಗಳಲ್ಲಿ ತಮ್ಮ ಗುರುತು ಮೂಡಿಸಿದ್ದಾರೆ. ಅವರು ದೇವಾಲಯಗಳ ನಿರ್ಮಾಣ, ದಾನಧರ್ಮ, ಸಾಹಿತ್ಯ ರಚನೆ ಹಾಗೂ ಶತ್ರುಗಳ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನೀವು ಬೇಕಾದರೆ ಈ ವಿಷಯವನ್ನು ಸಂಕ್ಷಿಪ್ತವಾಗಿ (5 ಅಂಕಗಳ ಉತ್ತರದಂತೆ) ಅಥವಾ ಪ್ರಬಂಧ ರೂಪದಲ್ಲಿ ಕೊಡಬಹುದು.ವಿಜಯನಗರದ ಆಡಳಿತ ವ್ಯವಸ್ಥೆ  :-ವಿಜಯನಗರ ಸಾಮ್ರಾಜ್ಯದ ಆಡಳಿತವು ಕೇಂದ್ರೀಕೃತ ರಾಜತಂತ್ರವಾಗಿತ್ತು. ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ರಾಣಿಯರ ಪಾಲುದಾರಿಕೆ (A4 ಗಾತ್ರದ ವಿವರವಾದ ಉತ್ತರ) ವಿಜಯನಗರ ಸಾಮ್ರಾಜ್ಯವು ದಕ್ಷಿಣ ಭಾರತದ ಅತ್ಯಂತ ಶಕ್ತಿಶಾಲಿ ಮತ್ತು ಸಮೃದ್ಧ ಸಾಮ್ರಾಜ್ಯವಾಗಿತ್ತು. ಈ ಸಾಮ್ರಾಜ್ಯದ ಸ್ಥಿರತೆ ಮತ್ತು ವೈಭವಕ್ಕೆ ರಾಜರು ಮಾತ್ರವಲ್ಲದೆ ರಾಣಿಯರೂ ಮಹತ್ವದ ಕೊಡುಗೆ ನೀಡಿದ್ದಾರೆ. ರಾಣಿಯರು ನೇರವಾಗಿ ಆಡಳಿತ ಹುದ್ದೆಗಳನ್ನು ವಹಿಸದಿದ್ದರೂ, ಅವರು ಪರೋಕ್ಷವಾಗಿ ಹಾಗೂ ಕೆಲವೊಮ್ಮೆ ನೇರವಾಗಿಯೂ ಆಡಳಿತ ವ್ಯವಸ್ಥೆಯಲ್ಲಿ ಪಾಲ್ಗೊಂಡಿದ್ದರು. ಅವರ ಪಾತ್ರ ರಾಜಕೀಯ, ಆರ್ಥಿಕ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.1. ರಾಜಕೀಯ ಸಲಹೆಗಾರ್ತಿಯರಾಗಿ :-ರಾಣಿಯರು ರಾಜನಿಗೆ ವಿಶ್ವಾಸಾರ್ಹ ಸಲಹೆಗಾರ್ತಿಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅರಮನೆಯ ಒಳರಾಜಕೀಯ, ಉತ್ತರಾಧಿಕಾರ ಪ್ರಶ್ನೆಗಳು ಮತ್ತು ಮಹತ್ವದ ನಿರ್ಧಾರಗಳ ಸಮಯದಲ್ಲಿ ರಾಣಿಯರ ಅಭಿಪ್ರಾಯಗಳಿಗೆ ಮಹತ್ವ ನೀಡಲಾಗುತ್ತಿತ್ತು. ವಿಶೇಷವಾಗಿ ಅಚ್ಯುತದೇವರಾಯರು ಮತ್ತು ಶ್ರೀಕೃಷ್ಣದೇವರಾಯರ ಕಾಲದಲ್ಲಿ ರಾಣಿಯರ ಪ್ರಭಾವ ಅರಮನೆ ವ್ಯವಹಾರಗಳಲ್ಲಿ ಕಾಣಿಸಿಕೊಂಡಿತ್ತು. ಇದು ಸಾಮ್ರಾಜ್ಯದ ಆಂತರಿಕ ಸ್ಥಿರತೆಗೆ ನೆರವಾಯಿತು.2. ಧಾರ್ಮಿಕ ಮತ್ತು ದೇವಾಲಯ ಆಡಳಿತ :-ವಿಜಯನಗರ ಆಡಳಿತದಲ್ಲಿ ದೇವಾಲಯಗಳು ಆರ್ಥಿಕ ಹಾಗೂ ಸಾಮಾಜಿಕ ಕೇಂದ್ರಗಳಾಗಿದ್ದವು. ಅನೇಕ ರಾಣಿಯರು ದೇವಾಲಯಗಳಿಗೆ ಭೂದಾನ, ಹಣ ಮತ್ತು ಆಭರಣಗಳನ್ನು ನೀಡುವುದರ ಮೂಲಕ ಅವುಗಳ ನಿರ್ವಹಣೆಯಲ್ಲಿ ಪಾಲ್ಗೊಂಡಿದ್ದರು. ದೇವಾಲಯಗಳ ಉತ್ಸವಗಳು, ಪೂಜೆಗಳು ಮತ್ತು ಅನ್ನಸತ್ರಗಳ ವ್ಯವಸ್ಥೆಗಾಗಿ ಅವರು ಆರ್ಥಿಕ ನೆರವು ಒದಗಿಸುತ್ತಿದ್ದರು. ಈ ಮೂಲಕ ಧಾರ್ಮಿಕ ಸಂಸ್ಥೆಗಳ ಆಡಳಿತದಲ್ಲಿ ರಾಣಿಯರು ಪ್ರಮುಖ ಪಾತ್ರವಹಿಸಿದರು.3. ಆರ್ಥಿಕ ವ್ಯವಹಾರಗಳಲ್ಲಿ ಪಾಲ್ಗೊಳ್ಳಿಕೆ :-ಶಾಸನಗಳ ಪ್ರಕಾರ, ಕೆಲ ರಾಣಿಯರು ತಮ್ಮ ಹೆಸರಿನಲ್ಲಿ ಭೂಮಿಗಳನ್ನು ಹೊಂದಿದ್ದು, ಆ ಭೂಮಿಗಳ ಆದಾಯವನ್ನು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಬಳಸುತ್ತಿದ್ದರು. ಇದು ಅವರಿಗೆ ಆರ್ಥಿಕ ಸ್ವಾಯತ್ತತೆ ಇತ್ತೆಂಬುದನ್ನು ತೋರಿಸುತ್ತದೆ. ಅವರ ದಾನಧರ್ಮಗಳು ಸಾಮ್ರಾಜ್ಯದ ಆರ್ಥಿಕ ವ್ಯವಸ್ಥೆಯ ಒಂದು ಭಾಗವಾಗಿದ್ದವು.ವಿಜಯನಗರದಲ್ಲಿ ಮಹಿಳೆಯರ ಸ್ಥಾನಮಾನ :-ವಿದೇಶಿ ಪ್ರವಾಸಿಗರ ವರದಿಗಳು ವಿಜಯನಗರದಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನಮಾನವಿದ್ದುದನ್ನು ಸೂಚಿಸುತ್ತವೆ. ಅಬ್ದುರ್ ರಜ್ಜಾಕ್ (1440ರ ದಶಕ) ಅವರು ವಿಜಯನಗರದ ಅರಮನೆಗಳಲ್ಲಿ ಮಹಿಳೆಯರು ಆಡಳಿತ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರೆಂದು ಉಲ್ಲೇಖಿಸಿದ್ದಾರೆ. ಡೊಮಿಂಗೊ ಪೈಸ್ ಮತ್ತು ಫರ್ನಾಂ ನುನಿಜ್ (16ನೇ ಶತಮಾನ) ಶ್ರೀಕೃಷ್ಣದೇವರಾಯರ ಕಾಲದ ವರ್ಣನೆಗಳಲ್ಲಿ ರಾಣಿಯರ ಧಾರ್ಮಿಕ ಮತ್ತು ರಾಜಕೀಯ ಪಾತ್ರ ಮಹತ್ವದ್ದಾಗಿದೆ, ರಾಣಿಯರ ಆಡಳಿತಾತ್ಮಕ ಪಾತ್ರ ªÀĺÀvÀézÁÝVzÉ. ಧಾರ್ಮಿಕ ದಾನ, ದೇವಾಲಯ ನಿರ್ಮಾಣ, ಬ್ರಾಹ್ಮಣರಿಗೆ ಭೂದಾನ, ಹಬ್ಬಗಳ ಆಯೋಜನೆ, ಆರ್ಥಿಕ ಪ್ರಭಾವ, ರಾಣಿಯರು ಸ್ವಂತ ಆಸ್ತಿ ಹೊಂದಿದ್ದು, ಅದನ್ನು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗೆ ಬಳಸುತ್ತಿದ್ದರು. ರಾಜಕೀಯ ಸಲಹೆಗಾರರು ಕೆಲ ಸಂದರ್ಭಗಳಲ್ಲಿ ರಾಜರ ನಿರ್ಣಯಗಳಲ್ಲಿ ರಾಣಿಯರ ಪ್ರಭಾವವಿತ್ತು. ಶಾಸನಾಧಾರಿತ ಸಾಕ್ಷ್ಯಗಳು ವಿಜಯನಗರ ಕಾಲದ ಹಲವಾರು ಶಾಸನಗಳಲ್ಲಿ ರಾಣಿಯರ ಹೆಸರುಗಳಿವೆ: ತಿರುಮಲಾದೇವಿಯ ದಾನಶಾಸನಗಳು. ದೇವಾಲಯಗಳಿಗೆ ನೀಡಿದ ಭೂದಾನ ದಾಖಲೆಗಳು.ರಾಜಮಾತೆಯರ ಉಲ್ಲೇಖಗಳು.(Epigraphia Indica; Epigraphia Carnatica)ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕೊಡುಗೆಸಂಗೀತ ಮತ್ತು ನೃತ್ಯ ಪ್ರೋತ್ಸಾಹ.ದೇವಾಲಯ ಶಿಲ್ಪಕಲೆ ಬೆಂಬಲ.Burton Stein (1989) ವಿಜಯನಗರವನ್ನು “Temple-centered polity” ಎಂದು ವರ್ಣಿಸಿದ್ದು, ರಾಣಿಯರ ಪಾತ್ರವನ್ನು ಇದರಲ್ಲಿ ಮುಖ್ಯವೆಂದು ಸೂಚಿಸುತ್ತಾರೆ. ವಿಜಯನಗರದ ಪತನ ಮತ್ತು ಮಹಿಳೆಯರ ಸ್ಥಿತಿ 1565ರ ತಾಳಿಕೋಟೆ ಯುದ್ಧದ ನಂತರ ರಾಜ ಕುಟುಂಬದ ಮಹಿಳೆಯರು ಸಂಕಷ್ಟ ಅನುಭವಿಸಿದರು. ಕೆಲವು ಅರಮನೆ ಮಹಿಳೆಯರು ಪ್ರಾಂತ್ಯಗಳಿಗೆ ಸ್ಥಳಾಂತರಗೊಂಡರು (Sewell, 1900). ಸಮಗ್ರ ವಿಶ್ಲೇಷಣೆ ವಿಜಯನಗರದ ರಾಣಿಯರು: ನೇರ ಆಡಳಿತ ಕಡಿಮೆ ನಡೆಸಿದರೂ, ಪರೋಕ್ಷ ರಾಜಕೀಯ ಪ್ರಭಾವ ಹೆಚ್ಚು ಹೊಂದಿದ್ದರು. ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರವಹಿಸಿದರು. ಶಾಸನಗಳು ಅವರ ಆರ್ಥಿಕ ಸ್ವಾಯತ್ತತೆಯನ್ನು ಸೂಚಿಸುತ್ತವೆ.ಉಪಸಂಹಾರ :-ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ರಾಣಿಯರ ಪಾತ್ರವು

“ವಿಜಯನಗರದ ರಾಣಿಯರು” ಡಾ.ತಾರಾ ಬಿ.ಎನ್. ಧಾರವಾಡ Read Post »

ಇತರೆ

“ಚಿತ್ತಾಪುರ ತಾಲೂಕಿನ ವೈಶಿಷ್ಟ್ಯಗಳು”ಡಾ. ಮಲ್ಲಿನಾಥ ಎಸ್. ತಳವಾರ

ಸ್ಥಳ ಸಂಗಾತಿ ಡಾ. ಮಲ್ಲಿನಾಥ ಎಸ್. ತಳವಾರ “ಚಿತ್ತಾಪುರ ತಾಲೂಕಿನ ವೈಶಿಷ್ಟ್ಯಗಳು” ಚಿತ್ತಾಪುರ ತಾಲೂಕಿನ ವೈಶಿಷ್ಟ್ಯಗಳು “If you don’t know where you are, you don’t know who you are.”— Wendell Berry        ‘ವೈಶಿಷ್ಟ್ಯ’ ಎಂಬ ಪದವು ಕೇವಲ ವಿಶೇಷತೆ ಎನ್ನುವ ಅರ್ಥವನ್ನಷ್ಟೇ ಹೊಂದಿಲ್ಲ; ಇದು ಒಂದು ಸ್ಥಳದ ಆತ್ಮ, ಅದರ ಇತಿಹಾಸದ ಧ್ವನಿ, ಸಂಸ್ಕೃತಿಯ ಸ್ಪಂದನೆ ಮತ್ತು ಜನಜೀವನದ ವೈವಿಧ್ಯಮಯ ರೂಪಗಳ ಒಕ್ಕೂಟವಾಗಿದೆ. ಒಂದು ಪ್ರದೇಶವನ್ನು ಇತರ ಪ್ರದೇಶಗಳಿಂದ ವಿಭಿನ್ನವಾಗಿ ಗುರುತಿಸುವ ಸ್ವಭಾವ, ಪರಂಪರೆ, ಸಾಧನೆಗಳು ಮತ್ತು ಜೀವನಪದ್ಧತಿಗಳ ಸಮಗ್ರ ರೂಪವೇ ಅದರ ವೈಶಿಷ್ಟ್ಯ. ಪ್ರತಿ ಭೂಭಾಗಕ್ಕೂ ತನ್ನದೇ ಆದ ಪ್ರಕೃತಿ ರಚನೆ, ಐತಿಹಾಸಿಕ ಪಾದಚಿಹ್ನೆಗಳು, ಧಾರ್ಮಿಕ ನಂಬಿಕೆಗಳು, ಭಾಷಾ-ಸಾಹಿತ್ಯ ಪರಂಪರೆ, ಜನಪದ ಆಚರಣೆಗಳು ಹಾಗೂ ಆರ್ಥಿಕ-ಸಾಮಾಜಿಕ ಜೀವನದ ರೂಪರೇಖೆಗಳಿವೆ. ಇವುಗಳ ಸಮನ್ವಯದಿಂದ ಆ ಪ್ರದೇಶದ ರೂಪುರೇಷೆ ನಿರ್ಮಾಣವಾಗುತ್ತದೆ. ಅದನ್ನು ಸ್ಪಷ್ಟವಾಗಿ ಗುರುತಿಸುವ ಲಕ್ಷಣಗಳೇ ವೈಶಿಷ್ಟ್ಯಗಳು. ವೈಶಿಷ್ಟ್ಯವು ಕೇವಲ ಭೌಗೋಳಿಕ ಅಥವಾ ಐತಿಹಾಸಿಕ ಅಂಶಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ; ಇದು ಮಾನವ ಸಂಬಂಧಗಳ ಉಷ್ಣತೆಯಲ್ಲಿ, ಆಚರಣೆಗಳ ಸರಳತೆಯಲ್ಲಿ, ನಂಬಿಕೆಗಳ ಆಳದಲ್ಲಿ ಮತ್ತು ಸೃಜನಶೀಲತೆಯ ಸ್ಪಂದನದಲ್ಲಿ ವ್ಯಕ್ತವಾಗುತ್ತದೆ. ಒಂದು ಸ್ಥಳದ ವೈಶಿಷ್ಟ್ಯವನ್ನು ಅರಿತುಕೊಳ್ಳುವುದು ಎಂದರೆ ಅದರ ಭೂತಕಾಲ, ವರ್ತಮಾನ ಮತ್ತು ಭವಿಷ್ಯದ ಸಂಧಿಬಿಂದುಗಳನ್ನು ಅರಿಯುವುದಾಗಿದೆ. ಈ ಹಿನ್ನೆಲೆಯಲ್ಲಿ “ಚಿತ್ತಾಪುರ ತಾಲೂಕಿನ ವೈಶಿಷ್ಟ್ಯಗಳು” ಎಂಬುದನ್ನು ಪರಿಗಣಿಸಿದಾಗ, ಇದು ಕೇವಲ ಸ್ಥಳೀಯ ಮಾಹಿತಿ ಸಂಗ್ರಹವಲ್ಲ; ಬದಲಿಗೆ ಚಿತ್ತಾಪುರದ ಭೌಗೋಳಿಕ ರೂಪರೇಖೆ, ಐತಿಹಾಸಿಕ ಪರಂಪರೆ, ಧಾರ್ಮಿಕ ಸೌಹಾರ್ದತೆ, ಸಾಹಿತ್ಯಿಕ ಚೈತನ್ಯ ಮತ್ತು ಜನಪದ ಸಂಸ್ಕೃತಿಯ ಅನನ್ಯತೆಗಳನ್ನು ಪರಿಚಯಿಸುವ ಪ್ರಯತ್ನವಾಗಿದೆ.       ಒಂದು ಸ್ಥಳದ ಹೆಸರಿನಲ್ಲಿ ಅದರ ಇತಿಹಾಸ ಮಾತ್ರವಲ್ಲ, ಅಲ್ಲಿಯ ಜನರ ಮನೋಭಾವ, ಧಾರ್ಮಿಕ ನಂಬಿಕೆಗಳು, ಜೀವನ ವಿಧಾನ ಮತ್ತು ತಾತ್ವಿಕ ಚಿಂತನೆಗಳು ಅಡಗಿರುತ್ತವೆ. “ಚಿತ್ತಾಪುರ”ವು ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ತಾಲೂಕು. ಇದನ್ನು ‘ಚಿತ್ತಾಪೂರ’ ಎಂತಲೂ ಕರೆಯಲಾಗುತ್ತದೆ. ಆಡಳಿತಾತ್ಮಕ/ಅಧಿಕೃತ ಬಳಕೆ, ಸರ್ಕಾರದ ದಾಖಲೆಗಳು, ತಾಲೂಕು ಹೆಸರು, ನಕ್ಷೆಗಳು … ಎಲ್ಲೆಡೆಯೂ ‘ಚಿತ್ತಾಪುರ’ ಎಂಬ ರೂಪವನ್ನೇ ಬಳಸಲಾಗುತ್ತದೆ. ಇನ್ನೂ ‘ಪೂರ’ (ಪೂರ್) ರೂಪವು ಕೆಲವು ಸಂದರ್ಭಗಳಲ್ಲಿ ಧ್ವನಿಮಾಧುರ್ಯಕ್ಕಾಗಿ ಸಾಹಿತ್ಯದಲ್ಲಿ ಬಳಸಲಾಗುತ್ತದೆ. ಅಂದರೆ ಅಧಿಕೃತ ಮತ್ತು ವ್ಯಾಕರಣಬದ್ಧವಾಗಿ ‘ಚಿತ್ತಾಪುರ’, ಸಾಹಿತ್ಯಿಕ ಪ್ರಯೋಗವಾಗಿ ‘ಚಿತ್ತಾಪೂರ’ವೆಂದು!          ‘ಚಿತ್ತಾಪುರ’ವನ್ನು ಪದದ ನಿಷ್ಪತ್ತಿಯ ಹಿನ್ನೆಲೆ ಗಮನಿಸಿದರೆ ಅದು ಚಿತ್ತ + ಪುರ ಎಂಬ ಎರಡು ಪದಗಳಿಂದ ಕೂಡಿರುವುದು ಮನದಟ್ಟಾಗುತ್ತದೆ. ‘ಚಿತ್ತ’ ಎಂಬುದು ಸಂಸ್ಕೃತ, ಪ್ರಾಕೃತ ಮತ್ತು ಪಾಲಿ ಭಾಷೆಗಳಲ್ಲಿ ಬಳಕೆಯಲ್ಲಿರುವ ಪದ. ಇದು ಮನಸ್ಸು, ಚೇತನ, ಭಾವ, ಜ್ಞಾನ, ಸ್ಮೃತಿ ಎಂಬ ಹಲವು ಅರ್ಥಗಳನ್ನು ಹೊಂದಿದೆ. ಇನ್ನೂ ‘ಪುರ’ ಎಂದರೆ ನಗರ, ವಸತಿ ಕೇಂದ್ರ, ಸಂಘಟಿತ ವಾಸಸ್ಥಳ ಎಂದೆಲ್ಲಾ ಅರ್ಥವನ್ನು ಹೊಂದಿದೆ. ಈ ನೆಲೆಯಲ್ಲಿ ವಿವೇಚಿಸಿದಾಗ ಇದು ‘ಮನಸ್ಸಿನ ನಗರ’ ಅಥವಾ ‘ಧಾರ್ಮಿಕ ಕೇಂದ್ರ’ವನ್ನು ಸೂಚಿಸುತ್ತದೆ.‌ ಇದನ್ನು ‘ಸ್ಥಳೀಯ ದೇವಾಲಯ ಅಥವಾ ಚಿತ್ರಕಲೆಗಳಿಂದ (ಚಿತ್ತಾರ) ಪ್ರಸಿದ್ಧ ನೆಲೆಯಾಗಿರಬಹುದು’ ಎಂದೂ ಅರ್ಥೈಸಿಕೊಳ್ಳಬಹುದಾಗಿದೆ. ಸ್ಥಳನಾಮಗಳು ಭೌಗೋಳಿಕ ಗುರುತುಗಳಷ್ಟೇ ಅಲ್ಲ; ಇವು ಒಂದು ಪ್ರದೇಶದ ಸ್ಮೃತಿ, ಸಂಸ್ಕೃತಿ ಮತ್ತು ಚೇತನದ ಭಾಷ್ಯಗಳು. ಇಂಥ ಭಾರತೀಯ ಸ್ಥಳನಾಮ ಪರಂಪರೆಯಲ್ಲಿ ‘ಪುರ’ ಎಂಬ ಪ್ರತ್ಯಯವು ಸಾಮಾನ್ಯವಾಗಿ ಸಾಂಸ್ಕೃತಿಕ ಅಥವಾ ರಾಜಕೀಯ ಕೇಂದ್ರಗಳಿಗೆ ಬಳಕೆಯಾಗಿದೆ. ಇದರಿಂದ ಚಿತ್ತಾಪುರವೂ ಕೇವಲ ಗ್ರಾಮವಲ್ಲದೆ, ಒಂದು ಕಾಲದಲ್ಲಿ ಸಾಂಸ್ಕೃತಿಕ ಕೇಂದ್ರವಾಗಿದ್ದ ಸೂಚನೆಯೂ ದೊರಕುತ್ತದೆ.           ಚಿತ್ತಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಸನ್ನತಿ (ಆಶೋಕ ಶಿಲಾಶಾಸನ), ಕನಗನಹಳ್ಳಿ (ಮಹಾಸ್ತುಪ) ಮತ್ತು ವಿಹಾರ ಸಂಸ್ಕೃತಿಯ ಅವಶೇಷಗಳ ಹಿನ್ನೆಲೆಯಲ್ಲಿ ‘ಚಿತ್ತ’ ಪದದ ಬೌದ್ಧ ತಾತ್ವಿಕ ಅರ್ಥವನ್ನು ಇನ್ನಷ್ಟು ದೃಢಪಡಿಸುತ್ತದೆ. ಬೌದ್ಧ ತತ್ವದಲ್ಲಿ ಚಿತ್ತ ಎಂದರೆ ‘ಎಲ್ಲದರ ಮೂಲ; ಶುದ್ಧವಾದರೆ ಮುಕ್ತಿ, ಅಶುದ್ಧವಾದರೆ ಬಂಧನ’ ಎಂದಾಗುತ್ತದೆ. ಇದರಿಂದ ‘ಚಿತ್ತಾಪುರ’ ಎಂಬ ಹೆಸರು ‘ಚಿತ್ತಶುದ್ಧಿಯ ಕೇಂದ್ರ’ ಎಂಬ ತಾತ್ವಿಕ ಸೂಚನೆಯಾಗಿ ಕಾಣುತ್ತದೆ. ಬೌದ್ಧ ಸಂಸ್ಕೃತಿಯ ಹಿನ್ನೆಲೆಯಲ್ಲಿ ‘ಚಿತ್ತಾಪುರ’ವು ಧ್ಯಾನಸ್ಥಳದ ರೂಪಕವಾಗಿಯೂ ಕಂಡುಬರುತ್ತದೆ. ಇಲ್ಲಿ ಶಬ್ದಕ್ಕಿಂತ ಮೌನ ಮುಖ್ಯವಾದ ನೆಲೆಯಾಗಿದ್ದು, ಇತಿಹಾಸವು ಮಾತಾಡುವುದಿಲ್ಲ; ಮೌನವಾಗಿ ಸೂಚಿಸುತ್ತದೆ. ಸಾಹಿತ್ಯದ ದೃಷ್ಟಿಯಲ್ಲಿ ಚಿತ್ತಾಪೂರ ಎಂದರೆ ‘ಮನಸ್ಸು ವಾಸಿಸುವ ಊರು’ ಎಂದಾಗುತ್ತದೆ. ಅಂತೆಯೇ ಊರುಗಳು ಕಲ್ಲಿನಿಂದ ಕಟ್ಟಲ್ಪಡುವುದಿಲ್ಲ; ಅವು ಚಿತ್ತದಿಂದ ನಿರ್ಮಾಣವಾಗುತ್ತವೆ. ಇಂತಹ ಚಿತ್ತದಿಂದ ಕಟ್ಟಲ್ಪಟ್ಟ ಊರೇ ‘ಚಿತ್ತಾಪೂರ’. ಇನ್ನೂ ‘ಚಿತ್ತಾಪುರ’ವನ್ನು ಒಂದು ಮಾನಸಿಕ, ಭೌಗೋಳಿಕ ರೂಪಕವಾಗಿ ನೋಡಿದರೆ, ‘ಚಿತ್ತಾಪುರ’ ಬರಿ ಒಂದು ತಾಲೂಕು ಅಲ್ಲ, ಒಂದು ಮನಸ್ಸಿನ ನಕ್ಷೆ. ಇಲ್ಲಿ ‘ಭೀಮಾ ನದಿ’ಯ ಚಿಂತನೆಯ ಪ್ರವಾಹ, ‘ಸನ್ನತಿ’ಯ ಶಾಂತಿಯ ತಟ ಹಾಗೂ ‘ಕನಗನಹಳ್ಳಿ’ಯ ಸ್ಮೃತಿಗಳ ಸ್ತೂಪ ಇವೆಲ್ಲವೂ ಸೇರಿ, ‘ಚಿತ್ತಾಪುರ’ವನ್ನು ಮಾನವ ಚಿತ್ತದ ಭೌಗೋಳಿಕ ರೂಪವಾಗಿಸಿವೆ.       ‘ಚಿತ್ತಾಪುರ’ವು ಕರ್ನಾಟಕದ ಕಲಬುರಗಿ ಜಿಲ್ಲೆಯ ದಕ್ಷಿಣ–ಪೂರ್ವ ಭಾಗದಲ್ಲಿರುವ ದಕ್ಕನ್ ಪೀಠಭೂಮಿಯ ಒಂದು ಪ್ರಮುಖ ಪ್ರದೇಶ. ಇದರ ಭೌಗೋಳಿಕ ಸ್ವರೂಪವು ಸಮತಟ್ಟು ಮತ್ತು ಸ್ವಲ್ಪ ಏರಿಳಿತಗಳಿರುವ ಭೂಪ್ರದೇಶದಿಂದ ಕೂಡಿದೆ. ಭೀಮಾ, ಕಾಗಿಣಾ, ಬೆಣ್ಣೆತೊರಾ, ಗಂಡೋರಿ ನಾಲಾ, ಮುಲ್ಲಾಮಾರಿ ನದಿಗಳು ತಾಲೂಕಿನ ಜೀವನಾಡಿಯಾಗಿವೆ. ಇಲ್ಲಿಯ ಆಲ್ಯೂವಿಯಲ್ ಮಣ್ಣು ಕೃಷಿಗೆ ಅನುಕೂಲಕರವಾಗಿದೆ. ಅಂದರೆ, ನದಿಗಳಿಂದ ತಂದು ಸೇರಿಸಲ್ಪಟ್ಟಿದ್ದು! ಈ ಪ್ರದೇಶದಲ್ಲಿ ಮುಖ್ಯವಾಗಿ ಕಪ್ಪು ಮಣ್ಣು ವ್ಯಾಪಕವಾಗಿದ್ದು ತೊಗರಿ, ಜೋಳ, ಗೋಧಿ, ಸಜ್ಜೆ, ಕುಸುಬೆ, ಕಡಲೆ ಮುಂತಾದ ಬೆಳೆಗಳಿಗೆ ಸೂಕ್ತವಾಗಿದೆ. ಇಲ್ಲಿಯ ಹವಾಮಾನ ಅರ್ಧಶುಷ್ಕ ಸ್ವಭಾವದ್ದು. ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ; ಮಳೆಗಾಲವಂತೂ ದಕ್ಷಿಣ–ಪಶ್ಚಿಮ ಮಾನ್ಸೂನ್‌ ಮೇಲೆ ಅವಲಂಬಿತವಾಗಿದೆ. ಸರಾಸರಿ ಮಳೆಯ ಪ್ರಮಾಣ ಮಧ್ಯಮ ಮಟ್ಟದಲ್ಲಿದೆ. ಭೂವೈಜ್ಞಾನಿಕವಾಗಿ ದಕ್ಕನ್ ಟ್ರಾಪ್ ಶಿಲಾಸಂರಚನೆ, ಸಾಲ್ಟ್ ಕಲ್ಲುಗಳು ಮತ್ತು ಚೂನಾಪತ್ರಿ ಪದರಗಳು ಕಂಡುಬರುತ್ತವೆ. ಸಸ್ಯಸಂಪತ್ತು ಮುಖ್ಯವಾಗಿ ಒಣಮೈದಾನ ಪ್ರಭೇದಕ್ಕೆ ಸೇರಿದೆ.        ಚಿತ್ತಾಪುರದ ಇತಿಹಾಸವು ಕೇವಲ ಆಡಳಿತ ಬದಲಾವಣೆಗಳ ಸರಣಿ ಅಲ್ಲ; ಧರ್ಮ, ಸಂಸ್ಕೃತಿ, ನದಿ ಮತ್ತು ಮಾನವ ವಸತಿಯ ನಿರಂತರ ಪ್ರವಾಹವಾಗಿದೆ. ಭೀಮಾ ನದಿ ತಟದಲ್ಲಿ ಆರಂಭವಾದ ಬೌದ್ಧ ಚೇತನದಿಂದ ಹಿಡಿದು ಆಧುನಿಕ ಕರ್ನಾಟಕದ ಭಾಗವಾಗುವವರೆಗೆ ಚಿತ್ತಾಪುರವು ದಕ್ಕನ್ ನೆಲದ ಐತಿಹಾಸಿಕ ಸ್ಮೃತಿ ಸಂಗ್ರಹವಾಗಿದೆ. ಇದು ಅನೇಕ ಮಹತ್ವದ ಸಾಮ್ರಾಜ್ಯಗಳ ಆಡಳಿತವನ್ನು ಅನುಭವಿಸಿದೆ. ಕ್ರಿ.ಪೂ. ೩ನೇ ಶತಮಾನ, ಅಶೋಕನ ಕಾಲದಲ್ಲಿ ಈ ಪ್ರದೇಶ ಮೌರ್ಯ ಸಾಮ್ರಾಜ್ಯಕ್ಕೆ ಸೇರಿತ್ತು; ಸನ್ನತಿಯ ಶಿಲಾಶಾಸನಗಳೇ ಇದಕ್ಕೆ ಸಾಕ್ಷಿ. ಮುಂದೆ ಬಂದ ಶಾತವಾಹನರು ಬೌದ್ಧ ಸಂಸ್ಕೃತಿ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಉತ್ತೇಜನ ನೀಡಿದರು. ಇನ್ನೂ ಚಾಲುಕ್ಯರು ಹಾಗೂ ರಾಷ್ಟ್ರಕೂಟರು ದಕ್ಕನ್ ಪ್ರದೇಶದ ರಾಜಕೀಯ–ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಂತರದ ಕಲ್ಯಾಣಿ ಚಾಲುಕ್ಯರು ಮತ್ತು ಯಾದವರು ದೇವಾಲಯ ಸಂಸ್ಕೃತಿ ಮತ್ತು ಕೃಷಿ ಆಧಾರಿತ ಆಡಳಿತ ವಿಸ್ತರಣೆ ಮಾಡಿದರು. ಬಹಮನಿ ಸುಲ್ತಾನರು ಮತ್ತು ಆದಿಲ್ ಶಾಹಿಗಳ ಕಾಲದಲ್ಲಿ ಇಸ್ಲಾಮೀಯ ವಾಸ್ತುಶೈಲಿ ಮತ್ತು ನಗರೀಕರಣದ ಪ್ರಭಾವವಿರುವುದು ಕಂಡುಬರುತ್ತದೆ. ಔರಂಗಜೇಬನ ಕಾಲದಲ್ಲಿ ಈ ದಕ್ಕನ್ ಪ್ರದೇಶವು ಮೊಘಲ್ ಆಳ್ವಿಕೆಗೆ ಸೇರಿತ್ತು. ಮುಂದೆ ಇದು ನಿಜಾಮ್ ರ ಆಳ್ವಿಕೆಯಿಂದಾಗಿ ಹೈದರಾಬಾದ್ ಸಂಸ್ಥಾನದ ಭಾಗವಾಗಿ, ೧೯೪೮ರಲ್ಲಿ ಹೈದರಾಬಾದ್ ವಿಮೋಚನೆಯೊಂದಿಗೆ ಭಾರತದ ಪ್ರಭುತ್ವಕ್ಕೆ ಸೇರಿತು. ೧೯೫೬ರ ಭಾಷಾವಾರು ಪ್ರಾಂತ್ಯಗಳ ನಂತರ ಕರ್ನಾಟಕ ರಾಜ್ಯದ ಭಾಗವಾಗಿ ತಾಲೂಕಾಗಿ ರೂಪುಗೊಂಡಿರುವುದು ನಮ್ಮ ಮುಂದಿನ ಇತಿಹಾಸವಾಗಿದೆ!         ಚಿತ್ತಾಪುರ ತಾಲೂಕಿನ ಶೈಕ್ಷಣಿಕ ಇತಿಹಾಸವು ಕೇವಲ ಶಾಲಾ–ಕಾಲೇಜುಗಳ ಬೆಳವಣಿಗೆಯ ಕಥೆಯಲ್ಲ; ಪ್ರಾಚೀನ ಜ್ಞಾನ ಪರಂಪರೆಯಿಂದ ಆಧುನಿಕ ವಿಶ್ವವಿದ್ಯಾಲಯ ಮಟ್ಟದ ಶಿಕ್ಷಣದವರೆಗೆ ಹರಡಿರುವ ನಿರಂತರ ಪ್ರವಾಹವಾಗಿದೆ. ಇಲ್ಲಿಯ ಶೈಕ್ಷಣಿಕ ಪರಂಪರೆ ಎಂದರೆಬೌದ್ಧ ಧ್ಯಾನ-ನಾಗಾವಿಯ ಶಾಸ್ತ್ರಪೀಠ-ಮಠ-ಮದರಸಾ ಶಿಕ್ಷಣ ಹಾಗೂ ಆಧುನಿಕ ಶಾಲಾ ವ್ಯವಸ್ಥೆ ಎಂಬ ನಿರಂತರ ಜ್ಞಾನಧಾರೆಯಾಗಿದೆ. ಸನ್ನತಿ–ಕನಗನಹಳ್ಳಿ ಪ್ರದೇಶಗಳಲ್ಲಿ ಕಂಡುಬರುವ ಬೌದ್ಧ ವಿಹಾರಗಳು ಇಲ್ಲಿ ಧ್ಯಾನ, ತತ್ವಚಿಂತನೆ ಮತ್ತು ಶಾಸ್ತ್ರಾಧ್ಯಯನ ನಡೆದಿದ್ದುದನ್ನು ಸೂಚಿಸುತ್ತವೆ. ಜ್ಞಾನವು ಧರ್ಮದೊಂದಿಗೆ ಬೆಸೆದುಕೊಂಡಿದ್ದ ಕಾಲದ ಪ್ರತಿಧ್ವನಿಯೇ ಇದು. ಇದಕ್ಕೆ ಮುಂದುವರಿದ ರೂಪವೇ ಚಾಲುಕ್ಯರ ಕಾಲದ ನಾಗಾವಿ ವಿದ್ಯಾಕೇಂದ್ರ. ಶಾಸನಗಳಲ್ಲಿ ಉಲ್ಲೇಖವಾಗಿರುವ ನಾಗಾವಿ “ವಿದ್ಯಾನಗರಿ”ಯಾಗಿ ಪ್ರಸಿದ್ಧವಾಗಿದ್ದು, ವೇದ, ವ್ಯಾಕರಣ, ತರ್ಕ, ಮೀಮಾಂಸೆ ಮೊದಲಾದ ಶಾಸ್ತ್ರಗಳ ಅಧ್ಯಯನ ನಡೆಯುತ್ತಿದ್ದ ಕೇಂದ್ರವಾಗಿತ್ತು. ಇದು ದಕ್ಕನ್ ಪ್ರದೇಶದ ಪ್ರಾಚೀನ ವಿಶ್ವವಿದ್ಯಾಲಯ ಸಮಾನವಾದ ಜ್ಞಾನಪೀಠ. ಮಧ್ಯಯುಗದಲ್ಲಿ ಮಠ–ದೇವಾಲಯ ಪಾಠಶಾಲೆಗಳು ಹಾಗೂ ಮದರಸಾ ಶಿಕ್ಷಣ ಜ್ಞಾನ ಪರಂಪರೆಯನ್ನು ಮುಂದುವರಿಸಿತು. ನಿಜಾಂ ಕಾಲದಲ್ಲಿ ಮೂಲಭೂತ ಶಾಲಾ ವ್ಯವಸ್ಥೆ ರೂಪುಗೊಂಡಿತು. ಸ್ವಾತಂತ್ರ್ಯಾನಂತರ ಕನ್ನಡ ಮಾಧ್ಯಮ ಶಿಕ್ಷಣ ವಿಸ್ತಾರಗೊಂಡು, ಇಂದು ಶಾಲೆ–ಕಾಲೇಜುಗಳ ಮೂಲಕ ಶಿಕ್ಷಣವು ವ್ಯಾಪಕಗೊಂಡಿದೆ. ಇದು ಕೇವಲ ಶಿಕ್ಷಣ ಸಂಸ್ಥೆಗಳ ಇತಿಹಾಸವಲ್ಲ; ಜ್ಞಾನವನ್ನು ಜೀವಂತ ಪರಂಪರೆಯಾಗಿ ಉಳಿಸಿಕೊಂಡ ನೆಲದ ಚೇತನವಾಗಿದೆ. ಇಲ್ಲಿಯ ಸಮಕಾಲೀನ ಶಿಕ್ಷಣ ವ್ಯವಸ್ಥೆ ಗ್ರಾಮೀಣ ನೆಲೆಯಲ್ಲೇ ವಿಸ್ತಾರಗೊಂಡ ಸಮಗ್ರ ಶೈಕ್ಷಣಿಕ ಜಾಲವಾಗಿದೆ. ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಹೆಚ್ಚಿನ ಗ್ರಾಮಗಳಿಗೆ ತಲುಪಿದ್ದು, ಮಧ್ಯಾಹ್ನ ಊಟ, ವಿದ್ಯಾರ್ಥಿವೇತನ ಹಾಗೂ ಉಚಿತ ಪಠ್ಯಪುಸ್ತಕಗಳಂತಹ ಯೋಜನೆಗಳು ದಾಖಲಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸಿವೆ. ಇವುಗಳೊಂದಿಗೆ ಹಲವಾರು ಶಿಕ್ಷಣ ಸಂಸ್ಥೆಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ. ಪಟ್ಟಣ ಮಟ್ಟದಲ್ಲಿ ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ಮೂಲಕ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಶಿಕ್ಷಣದ ಜೊತೆಗೆ ಉನ್ನತ ಹಾಗೂ ವೃತ್ತಿಪರ ಶಿಕ್ಷಣವೂ ಲಭ್ಯವಿದೆ. ಕಲ್ಯಾಣ ಕರ್ನಾಟಕ (೩೭೧J) ಸೌಲಭ್ಯಗಳಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಾತಿ ಮತ್ತು ಹಾಸ್ಟೆಲ್–ವಿದ್ಯಾರ್ಥಿವೇತನಗಳ ಮೂಲಕ ಶಿಕ್ಷಣ ಪ್ರವೇಶ ವಿಸ್ತರಿಸಿದೆ. ಜೊತೆಗೆ ಕೌಶಲ್ಯಾಭಿವೃದ್ಧಿ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳತ್ತ ಯುವಜನರ ಒಲವು ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.        ಚಿತ್ತಾಪುರವು ಕಲ್ಯಾಣ ಕರ್ನಾಟಕದ ಸಂಸ್ಕೃತಿ ಪ್ರವಾಹದಲ್ಲಿ ಬೆಳೆದ, ಬೆಳೆಯುತ್ತಿರುವ ತಾಲೂಕು. ಇಲ್ಲಿ ಜನಪದದ ಜೀವಂತಿಕೆ, ಭಕ್ತಿ ಸಾಹಿತ್ಯದ ಝರಿ, ಗ್ರಾಮೀಣ ಸಂಗೀತದ ಲಯ ಮತ್ತು ದೇವಾಲಯ–ದರ್ಗಾಗಳ ವಾಸ್ತುಸೌಂದರ್ಯ.. ಎಲ್ಲವೂ ಸೇರಿ ವಿಶಿಷ್ಟ ಸಾಂಸ್ಕೃತಿಕ ಸ್ವರೂಪವನ್ನು ನಿರ್ಮಿಸಿವೆ. ಡೊಳ್ಳು ಕುಣಿತ, ಕೋಲಾಟದಂತಹ ಜನಪದ ನೃತ್ಯಗಳು ಹಬ್ಬ–ಜಾತ್ರೆಗಳಲ್ಲಿ ಇನ್ನೂ ಜೀವಂತವಾಗಿವೆ. ಅಂತೆಯೇ ಜಾತ್ರೆಗಳು, ಊರಹಬ್ಬಗಳು ಜನಪದಕಲೆಯ ವೇದಿಕೆಗಳಾಗಿವೆ. ಡೊಳ್ಳು, ಚಂಡೆಮದ್ದಳೆ, ತಾಳಗಳ ಲಯ ಜನಪದ ಸಂಗೀತಕ್ಕೆ ಶಕ್ತಿ ನೀಡುತ್ತದೆ. ಭಜನಾ ಮಂಡಳಿಗಳು ಹಾಗೂ ದಾಸಪದಗಳ ಗಾಯನ ಭಕ್ತಿಭಾವವನ್ನು ಗಾಢಗೊಳಿಸಿದರೆ, ಸೂಫಿ ಪರಂಪರೆಯ ಕವ್ವಾಲಿ ಕಾರ್ಯಕ್ರಮಗಳು ಧರ್ಮಸೌಹಾರ್ದದ ಸಂಕೇತವಾಗಿವೆ. ಲಂಬಾಣಿ ಪರಂಪರೆ, ಕಸೂತಿ ಮತ್ತು ಗ್ರಾಮೀಣ ಕೈಗಾರಿಕೆಗಳು ಸ್ಥಳೀಯ ಸೌಂದರ್ಯವನ್ನು ಪ್ರತಿಬಿಂಬಿಸುತ್ತವೆ. ಇಲ್ಲಿಯ ಸಾಹಿತ್ಯದಲ್ಲಿ ವಚನ-ಭಕ್ತಿಧಾರೆಯ ಪ್ರಭಾವದಿಂದ ಶರಣ ಸಂವೇದನೆಗಳ ಛಾಯೆ ಎದ್ದು ಕಾಣುತ್ತದೆ. ಇನ್ನೂ ಜನಪದ ಗೀತೆಗಳು ಗ್ರಾಮಜೀವನದ ನೋವು, ನಲಿವುಗಳ ಪರಂಪರೆಗೆ ಕನ್ನಡಿ ಹಿಡಿಯುತ್ತಿವೆ. ಇತ್ತೀಚೆಗೆ ಸ್ಥಳೀಯ ಕವಿಗಳು, ಕಥೆಗಾರರು ಸಾಮಾಜಿಕ ಪ್ರಶ್ನೆಗಳನ್ನು ಕೇಂದ್ರವಾಗಿಟ್ಟುಕೊಂಡು ಬರವಣಿಗೆ ಮಾಡುತ್ತ, ಸಾಹಿತ್ಯಿಕ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರದೇಶದ ದೇವಾಲಯಗಳಲ್ಲಿ ಕಲ್ಯಾಣಿ ಚಾಲುಕ್ಯ–ದ್ರಾವಿಡ–ವಿಜಯನಗರ ಪ್ರಭಾವಗಳ ಮಿಶ್ರಣ ಕಾಣುತ್ತೇವೆ. ಈ ವಾಸ್ತುಶಿಲ್ಪದಲ್ಲಿ ಪ್ರದೇಶದ ಸಂಸ್ಕೃತಿ–ಸಾಮಾಜಿಕ ಸಂಧಿಯ ಜೀವಂತ ಚಿತ್ರಣ ಕಾಣುತ್ತದೆ. ಇವು ಗ್ರಾಮೀಣ ಭಕ್ತಿ, ಶಿಲ್ಪಸೌಂದರ್ಯ ಮತ್ತು ಇತಿಹಾಸದ ಗುರುತುಗಳನ್ನು ಒಟ್ಟುಗೂಡಿಸಿವೆ. ಇವುಗಳು ಕೇವಲ ಪೂಜಾಸ್ಥಳಗಳಲ್ಲ; ಇತಿಹಾಸದ ಕಲ್ಲುಬರಹ, ಭಕ್ತಿಯ ಸ್ಥಿರರೂಪ ಮತ್ತು ಶಿಲ್ಪಕಲೆಯ ಸಾಂದ್ರ ಸ್ಮೃತಿಯಾಗಿವೆ. ದರ್ಗಾ–ಮಸೀದಿಗಳಲ್ಲಿ ಇಸ್ಲಾಮಿಕ್ ಕಮಾನು–ಗುಂಭಜಗಳ ಸೌಂದರ್ಯ ನೋಡುಗರನ್ನು ಆಕರ್ಷಿಸುತ್ತವೆ.

“ಚಿತ್ತಾಪುರ ತಾಲೂಕಿನ ವೈಶಿಷ್ಟ್ಯಗಳು”ಡಾ. ಮಲ್ಲಿನಾಥ ಎಸ್. ತಳವಾರ Read Post »

ಇತರೆ

“ಬಣ್ಣಗಳ ಭಾವತರಂಗ” ವಿಶೇಷ ಲೇಖನ ಶ್ರೀದೇವಿ ಗುಮ್ಮಗೋಳ

ಬಣ್ಣಗಳ ಸಂಗಾತಿ ಶ್ರೀದೇವಿ ಗುಮ್ಮಗೋಳ “ಬಣ್ಣಗಳ ಭಾವತರಂಗ” ಹೋಳಿ ಹುಣ್ಣವಿ ಬಣ್ಣದ ಹಬ್ಬ. ಬಣ್ಣ-ಬಣ್ಣಗಳ ಚಿತ್ತಾರದ ಹಬ್ಬ. ಕಣ್ಣುಗಳಿಗೆ ಇಂಪು, ಬಿಸಿಲಿನ ಬೆಗೆಗೆ ಬೆಂದ ದೇಹಕ್ಕೆ ತಂಪೆರಚುವ ಹಬ್ಬ.  ಭಾವನೆಗಳ ಭಾವತರಂಗ-ಭಾವಂತರಂಗ.  ರಂಗುರಂಗಿನಲಿ ಕುಣಿದು ಕುಪ್ಪಳಿಸುವ ಹಬ್ಬ.          ಈ ಹಬ್ಬದಲ್ಲಿ ಪ್ರೀತಿಯ ಪ್ರತೀಕರಾದ ರತಿ ಮನ್ಮಥನನ್ನ ಕುಳ್ಳರಿಸಿ ಪೂಜೆ ಮಾಡುವದು ಐತಿಹಾಸಿಕ, ಧಾರ್ಮಿಕ ಹಿನ್ನಲೆಯುಳ್ಳದ್ದು  ಒಂದು ಕಡೆಯಾದರೆ ಮತ್ತೊಂದು ಕಡೆ ಒಬ್ಬರಿಗೊಬ್ಬರು ಬಣ್ಣ ಎರಚಿ ಆನಂದ ಪಡುವ ಹಬ್ಬ.      ಬಣ್ಣಗಳು ನಮ್ಮ ಭಾರತೀಯ ಧರ್ಮ, ಸಂಸ್ಕೃತಿ, ಸಂಪ್ರದಾಯಗಳಲ್ಲಿ ಬೇರೆ ಬೇರೆ ಸ್ಥಿತಿಗತಿಗಳಲ್ಲಿ ಬೆರೆತು ಹೋಗಿದೆ.  ನಮ್ಮ ದೇಶ ಬಟ್ಟೆಗಳ ವ್ಯಾಪಾರದಲ್ಲಿ ಬ್ರೀಟೀಷರ ಕಾಲಕ್ಕಿಂತಲೂ  ಮೊದಲು ಪ್ರಪಂಚದಲ್ಲಿಯೇ ಮುಂಚೂಣಿಯಲ್ಲಿತ್ತು.  ಅದರಲ್ಲೂ ವಿವಿಧ ರೀತಿಯ ಬಣ್ಣದ ಬಟ್ಟೆಗಳು ಪ್ರಪಂಚದಲ್ಲಿ ಎಲ್ಲಿಯೂ ಅಲ್ಲದೇ ನಮ್ಮ ದೇಶದಲ್ಲಿಯೇ ತಯಾರಾಗುತ್ತಿದ್ದವು. ಬಣ್ಣದ ಬಟ್ಟೆಗಳು ಇಲ್ಲಿಂದ ಪ್ರಪಂಚದ ಎಲ್ಲಡಗೆ ರಪ್ತಾಗುತ್ತಿದ್ದವು.     ಹೋಳಿ ಆಡುವ ವಿವಿಧ ಬಣ್ಣಗಳು ಮಾನವನ ಜೀವನದಲ್ಲಿ ರಂಗುರಂಗಿನ ವೈವಿದ್ಯಮಯ ಲೋಕವನ್ನ ಅನಾವರಣಗೊಳಿಸುತ್ತದೆ. ಬಣ್ಣಗಳು ಮಾನವನ ಪ್ರತಿಗಳಿಗೆಯಲ್ಲು ಹಾಸುಹೊಕ್ಕಾಗಿವೆ.  ಪ್ರತಿಯೊಂದು ಬಣ್ಣವು ವ್ಯಕ್ತಿ, ಕಾಯಕ, ಗುಣ-ಸ್ವಭಾವ ಸೂಚಕಗಳಾಗುವದರವ ಮೂಲಕ ಸಮಾಜದಲ್ಲಿ ಬೆರತುಹೋಗಿವೆ. ಇಂದ್ರಧನುಷ್ ದ ಬಣ್ಣಗಳಂತೆ ಬಣ್ಣ ವೈವಿದ್ದತೆಯನ್ನು, ಸಂಪತ್ತು, ಸಂಸಾರ, ಸಮೃದ್ಧಿಯ ಪ್ರತೀಕ.   ಪ್ರತಿಯೊಂದು ಬಣ್ಣದ ವಿಶೇಷತೆಯನ್ನ ತಿಳಿಯೋಣ ಬನ್ನಿ       ಕೆಂಪ ಕೆಸರಿ ಅಂತ ತಕ್ಷಣ ನೆನಪಾಗುದು ಒಂದಕಡೆ ರಕ್ತ ಆದರ ಇನ್ನೊಂದು ಕಡೆ  ಸನ್ಯಾಸಿಯ ಬಟ್ಟೆ, ದುರ್ಗಾ ಮೂರ್ತಿ‌.   ಒಂದ ಕಡೆ ಬೀಬತ್ಸ ಇನ್ನೊಂದು ತ್ಯಾಗ, ಭಕ್ತಿ, ಭಾವದ ಪರವಸೆ.  ಕೆಂಪು ಸನ್ಯಾಸಿಯ ವ್ಯಕ್ತಿಯ ಕಾಯಕದ ಸೂಚಕ. ದುರ್ಗಾ ಮಾತೆಗೆ ಉಡಿಸುವ ಕೆಂಪು ಸೀರೆ ಶಕ್ತಿ, ಶೌರ್ಯ ಹಾಗೂ ವಿಜಯದ ಸಂಕೇತ,  ತ್ಯಾಗ, ಭಕ್ತಿಯ ಗುಣಸೂಚಕವಾಗಿದೆ.  ಯುವಕ ಯುವತಿಯರು ಕೆಂಪು ಗುಲಾಬಿ ಹೂವನ್ನು ಕೊಟ್ಟು  ಪ್ರೀತಿ ವ್ಯಕ್ತ ಪಡಿಸುವ ಪ್ರೀತಿ ಭಾವ ಸೂಚಕವು ಹೌದು. ಮದುವೆಯ ಅಕ್ಷತೆಯಲ್ಲಿ ಮದುಮಗಳು ಉಡುವ ಕೆಂಪು ಸೀರೆ ಪ್ರೀತಿ, ಸಂಬಂದಗಳ ಬೆಸುಗೆ. ಮದುವೆಯಾದ ಹೆಣ್ಣು ಹಚ್ಚುವ ಕುಂಕುಮ ಸೌಭಾಗ್ಯದ ಪ್ರತೀಕ.   ಹಸಿರು ಅಂತ ತಕ್ಷಣ ಕಣ್ಣ ಮುಂದ ಬರುವದು ಹಚ್ಚ ಹಸಿರಿನ ಗಿಡಗಳು, ರೈತನ ಟವೆಲ್, ಹಸಿರು ತರಕಾರಿಗಳು.  ಹಸಿರು ರೈತನ ವ್ಯಕ್ತಿ ಮತ್ತು ಕಾಯಕ ಸೂಚಕವಾದರೆ,  ಸಮೃದ್ದಿ, ಸ್ವಾಸ್ಥ್ಯಗಳೆ ಹಸಿರಿನ ಗುಣ ಸೂಚಕದ ಉಸಿರು.  ಹೆಣ್ಣುಮಕ್ಕಳಿಗೆ ಮೈ ನೆರೆದಾಗ, ಸೀಮಂತದಲ್ಲಿ, ಹೊಸತಾಗಿ ಮದುವೆಯಾಗಿ ತವರ ಮನೆಗೆ ಕಾಲಿಡುವ ಸೊಸೆಗೆ ಉಡಿಸುವ ಹಸಿರು ಸೀರೆ, ಹಸಿರು ಬಳೆ ಫಲವಂತಿಕೆ ಪ್ರತೀಕ. ಮಳೆಯಾದ ಮೇಲೆ ಪ್ರಕೃತಿಯ ಬೆಟ್ಟ ಗುಡ್ಡ, ಹೊಲ ಗದ್ದೆ ಹಸಿರಿನಿಂದ ಕಂಗೋಳಿಸಿದಾಗ ಭೂತಾಯಿ ಹಸಿರು ಸೀರೆ ಉಟ್ಟು ನರ್ತಿಸುವಂತೆ ಭಾಸವಾಗುತ್ತದೆ.    ಕಪ್ಪು ಅಂದಾಗ ಕಣ್ಣ ಮುಂದೆ ರಾತ್ರಿಯ ಕರಾಳತೆ, ಅಂದಕಾರದ ಚಾಯೆ ಆವರಿಸಿಕೊಳ್ಳತ್ತದೆ. ಮುಸುಕುದಾರಿ ಉಗ್ರವಾದಿಗಳು, ಕಳ್ಳರು, ದರೋಡೆಕೊರ ವ್ಯಕ್ಯಿಯ ಕಪ್ಪು ಮುಖವಾಡಗಳು ನಮ್ಮನ್ನ ಬಯದ ಬಾವಕ್ಕೆ ತಳ್ಳುತ್ತವೆ.  ಇದು ಅಜ್ಞಾನ, ಅನೀತಿ, ಅನಾಚಾರದ ಗುಣ ಸೂಚಕ. ಮಕ್ಕಳಿಗೆ ಕರಿ ಬಟ್ಟೆ ದರಿಸಬಾರದು ಅಂತ ಹಿರಿಯರು ಹೇಳುವದನ್ನ ನಾವೆಲ್ಲಾ ಕೇಳಿದ್ದೇವೆ.  ಹಾಗೇಯೇ ಜನಪದದಲ್ಲಿ ‘ಕರಿ ಸಿರಿ ಉಡಬೇಡ ಕಡಿವಾಣ ಬಿಡಬೇಡ’ ಅಂತ ಹೆಣ್ಣಿಗೆ ಹೇಳುವದರ ಮೂಲಕ ಕಪ್ಪು ಬಣ್ಣ ಕೆಡುಕಿನ ಮೂಲ ಎಂದು ಸಲಹೆ ನೀಡುತ್ತದೆ. ಕಪ್ಪನ್ನ ಕಾಲಾ ಜಾದೂ, ಮಾಟ ಮಂತ್ರಗಳಲ್ಲೂ ಕೂಡ ಬಳಸಲಾಗುತ್ತದೆ. ಇಲ್ಲಿ ಕಪ್ಪು ನಕಾರಾತ್ಮಕದ ಸಂಕೇತ.  ಆದರೆ ವಕೀಲರು ತೊಡುವ ಕಪ್ಪು ಕೋಟು ಕಾಯಕದ ಸೂಚಕ.  ಸಮಾಜದಲ್ಲಿಯ ಅನ್ಯಾಯವನ್ನ ಅಳಿಸಿ ನ್ಯಾಯ ಒದಗಿಸುವದು ಈ ವಕೀಲ ವೃತ್ತಿಯ ಧರ್ಮ. ಅಯ್ಯಪ್ಪ ಸ್ವಾಮಿಗಳು ಧರಿಸುವ ಬಟ್ಟೆ ಕೂಡಾ ಕಪ್ಪು. ಇಲ್ಲಿ ಇದು ನಮ್ಮಲ್ಲಿರುವ ಕೆಟ್ಟು ಗುಣಗಳನ್ನ, ಕೆಟ್ಟ ಚಟಗಳನ್ನ ದೂರ ಮಾಡಿ ಸರಿ ದಾರಯೆಡೆಗೆ ನಡೆಸುವಂತೆ ಮಾಡಲು ತೊಡುವ ದೃಡಸಂಕಲ್ಪವಿದ್ದಂತೆ.   ಹೀಗಾಗಿ ಕಪ್ಪು ಇಲ್ಲಿ ನಕಾರಾತ್ಮಕ ಅಲ್ಲ ಸಕಾರಾತ್ಮಕದ ಸಂಕೇತ. ಒಂದು ಕಡೇ ರಾಧೆ ಕೃಷ್ಣನ ಕಪ್ಪು ಬಣ್ಣವನ್ನು ಚೇಡಿಸುವಾಗ ಕೃಷ್ಣ ಹೇಳುತ್ತಾನೆ “ನೀನು ಕಣ್ಣು ಮುಚ್ಚಿದಾಗ ಕಾಣುವದೆಲ್ಲಾ ಕಪ್ಪು. ಅದನ್ನ ಹೇಗೆ ತಪ್ಪಿಸುವೇ” ಎಂದು ಮರು ಪ್ರಶ್ನಿಸುವ ಮೂಲಕ. ಕಪ್ಪು ಅನ್ನುವದು ಎಲ್ಲವನ್ನು ಆಕರ್ಷಿಸುವ, ಒಳಗೊಂಡ ಕಬಂಧ ಬಾಹು ಎನ್ನುವದನ್ನ ಹೇಳ ಹೊರಟಿರುವನು. ಅದನ್ನೆ  ವಿಜ್ಞಾನ ಬ್ರಹ್ಮಾಂಡದಲ್ಲಿ ಕಪ್ಪು ಕುಳಿ ಇರುವದನ್ನ ಕಂಡು ಹಿಡಿದಿದೆ. ಇದು ಎಲ್ಲವನ್ನ ತನ್ನೊಳಗೆ ಆಕರ್ಸಿಸುತ್ತದೆ ಎಂದು ಹೇಳಿದ್ದಾರೆ.  ಬಿಳಿ ಬಣ್ಣ ನೆನಪಿಸುವದು ಸ್ಚಚ್ಚಂದ ಬಿಳಿ ಮೋಡಗಳು, ಬೆಳ್ಳನೆ ಹಾಲು, ಶ್ವೇತ ಹಂಸ ಹೀಗೆ ಬೆಳೆಯುತ್ತ ಹೋಗುತ್ತದೆ.  ವಿಧವೆ, ಸನ್ಯಾಸಿನಿಯರ  ವ್ಯಕ್ತಿ ಸೂಚಕವಾದ ಬಿಳಿ ಬಣ್ಣ ರಾಜಕೀಯದಲ್ಲಿ ಸಚಿವರುಗಳು ದರಿಸುವ ಬಿಳಿ ಜುಬ್ಬಾ ಕಾಯಕ ಸೂಚಕ.  ಬಿಳಿ ಸತ್ಯ, ಶಾಂತತೆ, ನಿರ್ಮಲತೆಯ, ಪವಿತ್ರತೆಯ ಸ್ವಭಾವ ಸೂಚಕ. ಇಂತಹ ಭಾವ ಸೂಚಕದ ಬಟ್ಟೆ ಧರಿಸಿದ ಎಷ್ಟು ರಾಜಕಾರಣಿಗಳು ಎಷ್ಟರ ಮಟ್ಟಿಗೆ ಆ ಗುಣಗಳನ್ನ ತಮ್ಮ ರಾಜಕೀಯದಲ್ಲಿ ಅಳವಡಿಸಿಕೊಂಡಿದ್ದಾರೆ ಅನ್ನುವದು ಎಲ್ಲರಿಗೂ ತಿಳಿದ ವಿಷಯ.  ಬಿಳಿ ಇದು ವ್ಯಕ್ತಿ ಮರಣ ಹೊಂದಿದಾಗ ಅವನ ಮೇಲೆ ಹೊದಿಸುವ ಬಟ್ಟೆ, ಅಂತ್ಯಕ್ರೀಯೇಯಲ್ಲಿ ಸಂಬಂಧಿಗಳು ಧರಿಸುವ ಬಟ್ಟೆ ಕೂಡ ಬಿಳಿಯದೆ.  ಇಲ್ಲಿ ಬಿಳಿ  ಮೌನದ ಸೂಚಕ ಒಂದು ಕಡೆಯಾದರೆ.  ಮಾನವನ ಬದುಕಿನ ಎಲ್ಲವು ಮುಗಿದ ಮೇಲೆ ಉಳಿಯುವ ಖಾಲಿತನದ,  ಪ್ರಾಣ ನೀಗಿ ಬಯಲಿನಲ್ಲಿ ಆತ್ಮ ಪರಮಾತ್ಮನಲ್ಲಿ ಲೀನವಾಗುವ ಅಗೋಚರತೆ, ಅಗಮ್ಯತೆಯ ಯಾಣ. ಕಪ್ಪು ತನ್ನೊಳಗೆ ಎಲ್ಲವನ್ನೂ ನುಂಗಿದರೆ.  ಬಿಳಿಯ ಬೆಳಕು ಎಲ್ಲವನ್ನು ಹೊರ ಚಾಚುತ್ತದೆ. ಪ್ರಕಾಶಿಸುತ್ತದೆ.    ಹಳದಿ ಬಣ್ಣ ಅರಿಷಣ, ಮದುವೆಯಲ್ಲಿ ವದು ವರರಿಗೆ ಅರಿಷಣದ ಲೇಪನ, ಜಾತ್ರೆ,  ಹಬ್ಬ- ಹರಿದಿನಗಳಲ್ಲಿ ಎರಚುವ ಹಳದಿ ಬಂಡಾರ ಮಂಗಲ, ಶುಭದ ಸಂಕೇತ.  ಹಳದಿ ಸ್ನೇಹದ ಸೂಚಕವು ಹೌದು.  ಹಳದಿ ಇದು ನಮ್ಮ ತಾಯಿ ಭುವನೇಶ್ವರಿ ಕೈಯಲ್ಲಿ ನಮ್ಮ ಕರ್ನಾಟಕದ ಬಾವುಟದಲ್ಲಿರುವ ಹಳದಿ ಬಣ್ಣ ಶಾಂತಿ, ಸಹನೆ ಮತ್ತು ಸ್ನೇಹದ ಸಂಕೇತ.    ನೀಲಿ ಅಂದಾಗ ಶುಬ್ರವಾದ ನೀಲಿ ಆಕಾಶ,‌ ನೀಲ ಕಡಲ ಕಣ್ಣ ಮುಂದೆ ಬರುತ್ತದೆ. ಶ್ರಮಿಕ ಅಂದರೆ ಜವಾನ, ಸ್ವೀಪರ್, ಕಾರ್ಮಿಕರು ಧರಿಸುವ ಬಟ್ಟೆ ನೆನಪಾಗುವದು.  ನಮ್ಮ ದೇಶದ ವಾಯು ಸೈನದಲ್ಲಿ ಸೈನಿಕರು ಧರಿಸುವ ಬಣ್ಣವು  ನೀಲಿಯೇ. ನಮ್ಮ ದೇಶದ ರಾಷ್ಟ್ರ ದ್ವಜದಲ್ಲಿ ಮದ್ಯದಲ್ಲಿ ಇರುವ ಚಕ್ರವು ನಿಲಿ ಬಣ್ಣದ್ದು.  ಈ ನೀಲಿ ಶ್ರಮಿಕ, ಸೈನಿಕನ ವ್ಯಕ್ತಿ ಸೂಚಕವಾದರೆ, ಇನ್ನೊಂದು ಕಡೆ ಆಕಾಶದ ಹಾಗೆ ವಿಶಾಲತೆ, ಚಲನೆಯ ಬದುಕನ್ನ ತೋರಿಸುಕೊಡುತ್ತದೆ. ಹಾಗೇಯೇ ಶ್ರಮಿಕನ ಕಾಯಕವೇ ಕೈಲಾಸ ಎಂಬ ಮಂತ್ರ, ಕಾಲ, ಸಮಯದ ಮಹತ್ವ ಸಾರುವ ಗುಣ ಸೂಚಕವು ಹೌದು.ಹೋಳಿ ಹುಣ್ಣವಿ ಬಣ್ಣದ ಹಬ್ಬ. ಬಣ್ಣ-ಬಣ್ಣಗಳ ಚಿತ್ತಾರದ ಹಬ್ಬ. ಕಣ್ಣುಗಳಿಗೆ ಇಂಪು, ಬಿಸಿಲಿನ ಬೆಗೆಗೆ ಬೆಂದ ದೇಹಕ್ಕೆ ತಂಪೆರಚುವ ಹಬ್ಬ.  ಭಾವನೆಗಳ ಭಾವತರಂಗ-ಭಾವಂತರಂಗ.  ರಂಗುರಂಗಿನಲಿ ಕುಣಿದು ಕುಪ್ಪಳಿಸುವ ಹಬ್ಬ.          ಈ ಹಬ್ಬದಲ್ಲಿ ಪ್ರೀತಿಯ ಪ್ರತೀಕರಾದ ರತಿ ಮನ್ಮಥನನ್ನ ಕುಳ್ಳರಿಸಿ ಪೂಜೆ ಮಾಡುವದು ಐತಿಹಾಸಿಕ, ಧಾರ್ಮಿಕ ಹಿನ್ನಲೆಯುಳ್ಳದ್ದು  ಒಂದು ಕಡೆಯಾದರೆ ಮತ್ತೊಂದು ಕಡೆ ಒಬ್ಬರಿಗೊಬ್ಬರು ಬಣ್ಣ ಎರಚಿ ಆನಂದ ಪಡುವ ಹಬ್ಬ.      ಬಣ್ಣಗಳು ನಮ್ಮ ಭಾರತೀಯ ಧರ್ಮ, ಸಂಸ್ಕೃತಿ, ಸಂಪ್ರದಾಯಗಳಲ್ಲಿ ಬೇರೆ ಬೇರೆ ಸ್ಥಿತಿಗತಿಗಳಲ್ಲಿ ಬೆರೆತು ಹೋಗಿದೆ.  ನಮ್ಮ ದೇಶ ಬಟ್ಟೆಗಳ ವ್ಯಾಪಾರದಲ್ಲಿ ಬ್ರೀಟೀಷರ ಕಾಲಕ್ಕಿಂತಲೂ  ಮೊದಲು ಪ್ರಪಂಚದಲ್ಲಿಯೇ ಮುಂಚೂಣಿಯಲ್ಲಿತ್ತು.  ಅದರಲ್ಲೂ ವಿವಿಧ ರೀತಿಯ ಬಣ್ಣದ ಬಟ್ಟೆಗಳು ಪ್ರಪಂಚದಲ್ಲಿ ಎಲ್ಲಿಯೂ ಅಲ್ಲದೇ ನಮ್ಮ ದೇಶದಲ್ಲಿಯೇ ತಯಾರಾಗುತ್ತಿದ್ದವು. ಬಣ್ಣದ ಬಟ್ಟೆಗಳು ಇಲ್ಲಿಂದ ಪ್ರಪಂಚದ ಎಲ್ಲಡಗೆ ರಪ್ತಾಗುತ್ತಿದ್ದವು.     ಹೋಳಿ ಆಡುವ ವಿವಿಧ ಬಣ್ಣಗಳು ಮಾನವನ ಜೀವನದಲ್ಲಿ ರಂಗುರಂಗಿನ ವೈವಿದ್ಯಮಯ ಲೋಕವನ್ನ ಅನಾವರಣಗೊಳಿಸುತ್ತದೆ. ಬಣ್ಣಗಳು ಮಾನವನ ಪ್ರತಿಗಳಿಗೆಯಲ್ಲು ಹಾಸುಹೊಕ್ಕಾಗಿವೆ.  ಪ್ರತಿಯೊಂದು ಬಣ್ಣವು ವ್ಯಕ್ತಿ, ಕಾಯಕ, ಗುಣ-ಸ್ವಭಾವ ಸೂಚಕಗಳಾಗುವದರವ ಮೂಲಕ ಸಮಾಜದಲ್ಲಿ ಬೆರತುಹೋಗಿವೆ. ಇಂದ್ರಧನುಷ್ ದ ಬಣ್ಣಗಳಂತೆ ಬಣ್ಣ ವೈವಿದ್ದತೆಯನ್ನು, ಸಂಪತ್ತು, ಸಂಸಾರ, ಸಮೃದ್ಧಿಯ ಪ್ರತೀಕ.   ಪ್ರತಿಯೊಂದು ಬಣ್ಣದ ವಿಶೇಷತೆಯನ್ನ ತಿಳಿಯೋಣ ಬನ್ನಿ       ಕೆಂಪ ಕೆಸರಿ ಅಂತ ತಕ್ಷಣ ನೆನಪಾಗುದು ಒಂದಕಡೆ ರಕ್ತ ಆದರ ಇನ್ನೊಂದು ಕಡೆ  ಸನ್ಯಾಸಿಯ ಬಟ್ಟೆ, ದುರ್ಗಾ ಮೂರ್ತಿ‌.   ಒಂದ ಕಡೆ ಬೀಬತ್ಸ ಇನ್ನೊಂದು ತ್ಯಾಗ, ಭಕ್ತಿ, ಭಾವದ ಪರವಸೆ.  ಕೆಂಪು ಸನ್ಯಾಸಿಯ ವ್ಯಕ್ತಿಯ ಕಾಯಕದ ಸೂಚಕ. ದುರ್ಗಾ ಮಾತೆಗೆ ಉಡಿಸುವ ಕೆಂಪು ಸೀರೆ ಶಕ್ತಿ, ಶೌರ್ಯ ಹಾಗೂ ವಿಜಯದ ಸಂಕೇತ,  ತ್ಯಾಗ, ಭಕ್ತಿಯ ಗುಣಸೂಚಕವಾಗಿದೆ.  ಯುವಕ ಯುವತಿಯರು ಕೆಂಪು ಗುಲಾಬಿ ಹೂವನ್ನು ಕೊಟ್ಟು  ಪ್ರೀತಿ ವ್ಯಕ್ತ ಪಡಿಸುವ ಪ್ರೀತಿ ಭಾವ ಸೂಚಕವು ಹೌದು. ಮದುವೆಯ ಅಕ್ಷತೆಯಲ್ಲಿ ಮದುಮಗಳು ಉಡುವ ಕೆಂಪು ಸೀರೆ ಪ್ರೀತಿ, ಸಂಬಂದಗಳ ಬೆಸುಗೆ. ಮದುವೆಯಾದ ಹೆಣ್ಣು ಹಚ್ಚುವ ಕುಂಕುಮ ಸೌಭಾಗ್ಯದ ಪ್ರತೀಕ.   ಹಸಿರು ಅಂತ ತಕ್ಷಣ ಕಣ್ಣ ಮುಂದ ಬರುವದು ಹಚ್ಚ ಹಸಿರಿನ ಗಿಡಗಳು, ರೈತನ ಟವೆಲ್, ಹಸಿರು ತರಕಾರಿಗಳು.  ಹಸಿರು ರೈತನ ವ್ಯಕ್ತಿ ಮತ್ತು ಕಾಯಕ ಸೂಚಕವಾದರೆ,  ಸಮೃದ್ದಿ, ಸ್ವಾಸ್ಥ್ಯಗಳೆ ಹಸಿರಿನ ಗುಣ ಸೂಚಕದ ಉಸಿರು.  ಹೆಣ್ಣುಮಕ್ಕಳಿಗೆ ಮೈ ನೆರೆದಾಗ, ಸೀಮಂತದಲ್ಲಿ, ಹೊಸತಾಗಿ ಮದುವೆಯಾಗಿ ತವರ ಮನೆಗೆ ಕಾಲಿಡುವ ಸೊಸೆಗೆ ಉಡಿಸುವ ಹಸಿರು ಸೀರೆ, ಹಸಿರು ಬಳೆ ಫಲವಂತಿಕೆ ಪ್ರತೀಕ. ಮಳೆಯಾದ ಮೇಲೆ ಪ್ರಕೃತಿಯ ಬೆಟ್ಟ ಗುಡ್ಡ, ಹೊಲ ಗದ್ದೆ ಹಸಿರಿನಿಂದ ಕಂಗೋಳಿಸಿದಾಗ ಭೂತಾಯಿ ಹಸಿರು ಸೀರೆ ಉಟ್ಟು ನರ್ತಿಸುವಂತೆ ಭಾಸವಾಗುತ್ತದೆ.    ಕಪ್ಪು ಅಂದಾಗ ಕಣ್ಣ ಮುಂದೆ ರಾತ್ರಿಯ ಕರಾಳತೆ, ಅಂದಕಾರದ ಚಾಯೆ ಆವರಿಸಿಕೊಳ್ಳತ್ತದೆ. ಮುಸುಕುದಾರಿ ಉಗ್ರವಾದಿಗಳು, ಕಳ್ಳರು, ದರೋಡೆಕೊರ ವ್ಯಕ್ಯಿಯ ಕಪ್ಪು ಮುಖವಾಡಗಳು ನಮ್ಮನ್ನ ಬಯದ ಬಾವಕ್ಕೆ ತಳ್ಳುತ್ತವೆ.  ಇದು ಅಜ್ಞಾನ, ಅನೀತಿ, ಅನಾಚಾರದ ಗುಣ ಸೂಚಕ. ಮಕ್ಕಳಿಗೆ ಕರಿ ಬಟ್ಟೆ ದರಿಸಬಾರದು ಅಂತ ಹಿರಿಯರು ಹೇಳುವದನ್ನ ನಾವೆಲ್ಲಾ ಕೇಳಿದ್ದೇವೆ.  ಹಾಗೇಯೇ ಜನಪದದಲ್ಲಿ ‘ಕರಿ ಸಿರಿ ಉಡಬೇಡ ಕಡಿವಾಣ ಬಿಡಬೇಡ’ ಅಂತ ಹೆಣ್ಣಿಗೆ ಹೇಳುವದರ ಮೂಲಕ ಕಪ್ಪು ಬಣ್ಣ ಕೆಡುಕಿನ ಮೂಲ ಎಂದು ಸಲಹೆ ನೀಡುತ್ತದೆ. ಕಪ್ಪನ್ನ ಕಾಲಾ ಜಾದೂ, ಮಾಟ ಮಂತ್ರಗಳಲ್ಲೂ ಕೂಡ ಬಳಸಲಾಗುತ್ತದೆ. ಇಲ್ಲಿ ಕಪ್ಪು ನಕಾರಾತ್ಮಕದ ಸಂಕೇತ.  ಆದರೆ ವಕೀಲರು ತೊಡುವ ಕಪ್ಪು ಕೋಟು ಕಾಯಕದ ಸೂಚಕ.  ಸಮಾಜದಲ್ಲಿಯ ಅನ್ಯಾಯವನ್ನ ಅಳಿಸಿ ನ್ಯಾಯ ಒದಗಿಸುವದು ಈ ವಕೀಲ ವೃತ್ತಿಯ ಧರ್ಮ. ಅಯ್ಯಪ್ಪ ಸ್ವಾಮಿಗಳು ಧರಿಸುವ ಬಟ್ಟೆ ಕೂಡಾ ಕಪ್ಪು. ಇಲ್ಲಿ ಇದು ನಮ್ಮಲ್ಲಿರುವ ಕೆಟ್ಟು ಗುಣಗಳನ್ನ, ಕೆಟ್ಟ ಚಟಗಳನ್ನ ದೂರ ಮಾಡಿ ಸರಿ ದಾರಯೆಡೆಗೆ ನಡೆಸುವಂತೆ ಮಾಡಲು ತೊಡುವ ದೃಡಸಂಕಲ್ಪವಿದ್ದಂತೆ.   ಹೀಗಾಗಿ ಕಪ್ಪು ಇಲ್ಲಿ ನಕಾರಾತ್ಮಕ ಅಲ್ಲ ಸಕಾರಾತ್ಮಕದ ಸಂಕೇತ. ಒಂದು ಕಡೇ ರಾಧೆ ಕೃಷ್ಣನ ಕಪ್ಪು ಬಣ್ಣವನ್ನು ಚೇಡಿಸುವಾಗ ಕೃಷ್ಣ ಹೇಳುತ್ತಾನೆ “ನೀನು ಕಣ್ಣು ಮುಚ್ಚಿದಾಗ ಕಾಣುವದೆಲ್ಲಾ ಕಪ್ಪು. ಅದನ್ನ ಹೇಗೆ ತಪ್ಪಿಸುವೇ” ಎಂದು ಮರು ಪ್ರಶ್ನಿಸುವ ಮೂಲಕ. ಕಪ್ಪು ಅನ್ನುವದು ಎಲ್ಲವನ್ನು ಆಕರ್ಷಿಸುವ, ಒಳಗೊಂಡ ಕಬಂಧ ಬಾಹು ಎನ್ನುವದನ್ನ ಹೇಳ ಹೊರಟಿರುವನು. ಅದನ್ನೆ  ವಿಜ್ಞಾನ ಬ್ರಹ್ಮಾಂಡದಲ್ಲಿ ಕಪ್ಪು

“ಬಣ್ಣಗಳ ಭಾವತರಂಗ” ವಿಶೇಷ ಲೇಖನ ಶ್ರೀದೇವಿ ಗುಮ್ಮಗೋಳ Read Post »

ಇತರೆ

“ಯಶಸ್ಸಿನ ಪಯಣದ ಹಾದಿ -1” ವೀಣಾ ಹೇಮಂತ್ ಗೌಡ ಪಾಟೀಲ್

ಯಶಸ್ಸಿನ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್ “ಯಶಸ್ಸಿನ ಪಯಣದ ಹಾದಿ -1” ಬದುಕಿನಲ್ಲಿ ಏನನ್ನಾದರೂ ಮಹತ್ತರವಾದದನ್ನು ಸಾಧಿಸಬೇಕು, ಯಶಸ್ವಿಯಾಗಬೇಕು, ಸಮಾಜದಲ್ಲಿ ಗಣ್ಯ ಸ್ಥಾನವನ್ನು ಹೊಂದಬೇಕು ಎಂದು ಯಾವ ವ್ಯಕ್ತಿ ಬಯಸುವುದಿಲ್ಲ ಹೇಳಿ? ಬಹುಷಃ ಪ್ರತಿಯೊಬ್ಬ ಮನುಷ್ಯನ ಅಂತರಾಳದಲ್ಲಿ ಈ ಒಂದು ಹಂಬಲ ಇದ್ದೇ ಇರುತ್ತದೆ. ಆದರೆ ಕೇವಲ ಹಂಬಲ ಇದ್ದರೆ ಸಾಲದು ಅದಕ್ಕೆ ತಕ್ಕ ಪ್ರಯತ್ನವು ಬೇಕು.ವ್ಯಾಯಾಮ ಮಾಡಿದರೆ ದೇಹ ಗಟ್ಟಿಮುಟ್ಟಾಗುತ್ತದೆ ಸ್ನಾಯುಗಳು ಬಲಶಾಲಿಯಾಗುತ್ತವೆ ಸರಳವಾಗಿ ರಕ್ತ ಪರಿಚಲನೆ ಆಗುತ್ತದೆ ಆರೋಗ್ಯ ಸುಧಾರಿಸುತ್ತದೆ ನಿಜ ಹಾಗೆಂದು ಆ ವ್ಯಾಯಾಮವನ್ನು ನಾವು ಮಾಡುವುದು ಬಿಟ್ಟು ನಮ್ಮ ಜೊತೆಗಿರುವವರಿಗೆ ಇಲ್ಲವೇ ಕೆಲಸದವರಿಗೆ ಸಂಬಳ ಕೊಟ್ಟು ವ್ಯಾಯಾಮ ಮಾಡಿಸಿದರೆ ನಮ್ಮ ದೇಹ ಗಟ್ಟಿಯಾಗುವುದಿಲ್ಲ ಅಲ್ವೇ ಸ್ನೇಹಿತರೆ ?ನಮ್ಮ ತನು ಮನಗಳು ಗಟ್ಟಿಯಾಗಲು ನಾವೇ ಕಸರತ್ತು ಮಾಡಬೇಕು ಹೊರತು ಬೇರೆಯವರಲ್ಲ ಅಂತೆಯೇ ನಮ್ಮ ಬದುಕಿನ ಯಶಸ್ಸಿಗೆ ನಾವುಗಳು ಪ್ರಯತ್ನ ಪಡಬೇಕೆ ಹೊರತು ಇನ್ನೊಬ್ಬರಲ್ಲ.ನಮ್ಮ ಪಾಲಕರು ನಮಗೆ ಜನ್ಮ ನೀಡಿರುತ್ತಾರೆ ಅವರ ಕನಸಿನ ಕೂಸುಗಳು ನಾವು ನಿಜ ಅವರು ನಮಗೆ ದಾರಿ ತೋರುತ್ತಾರೆ, ಆ ದಾರಿಯಲ್ಲಿ ನಡೆಯಲು ಪ್ರೇರೇಪಿಸುತ್ತಾರೆ ಹಾಗೂ ಆ ದಾರಿಯಲ್ಲಿ ಸಾಗಲು ಬೇಕಾಗುವ ಎಲ್ಲಾ ರೀತಿಯ ಸಹಾಯ, ಸಹಕಾರಗಳನ್ನು ಒದಗಿಸುತ್ತಾರೆ ಆದರೆ ಆ ದಾರಿಯನ್ನು ನಡೆಯಬೇಕಾದವರು ನಾವೇ ಹೊರತು ಬೇರೆಯವರಲ್ಲ.ಯಶಸ್ಸು ನಮ್ಮ ಕನಸಿನ ಕೂಸು. ಒಂದೊಮ್ಮೆ ಸತತ ಪರಿಶ್ರಮದ ನಂತರ ಅದನ್ನು ಪಡೆದ ವ್ಯಕ್ತಿ ಧನ್ಯತಾ ಭಾವದಿಂದ ನನ್ನ ಯಶಸ್ವಿಗೆ ನನ್ನ ಪಾಲಕರು, ಗುರುಗಳು, ಒಡಹುಟ್ಟಿದವರು, ಸ್ನೇಹಿತರು, ಬಂಧುಗಳು, ಸಂಗಾತಿ ಮಕ್ಕಳ ಸಹಕಾರ ಕಾರಣ ಎಂದು ಹೇಳಬಹುದು ಆದರೆ ಖುದ್ದು ಪ್ರಯತ್ನ ಪಟ್ಟಿರುವುದು ಮಾತ್ರ ಅವರೇ ಆಗಿರುತ್ತಾರಲ್ಲವೇ? ಯಶಸ್ಸಿಗೆ ನೂರಾರು ಜನ ಪಾಲುದಾರರು ಆದರೆ ಸೋಲು ಅನಾಥ, ಒಬ್ಬಂಟಿ, ತಬ್ಬಲಿ. ತಮ್ಮದೇ ಬದುಕಿನಲ್ಲಿ ತಾವು ಕೈಗೊಂಡ ನಿರ್ಧಾರಗಳ ಫಲವಾಗಿ ಅನುಭವಿಸುವ ಸೋಲನ್ನು ಯಾರೂ ಕೇವಲ ತಮ್ಮ ಆಯ್ಕೆಯ ಪರಿಣಾಮ ಎಂದು ಖಂಡಿತವಾಗಿಯೂ ಒಪ್ಪಿಕೊಳ್ಳುವುದಿಲ್ಲ…. ಬದಲಾಗಿ ತನ್ನ ಬದುಕಿನ ಎಲ್ಲಾ ಅವಘಡಗಳಿಗೆ ನಾನು ಹುಟ್ಟಿರುವ ದೇಶ ಸರಿ ಇಲ್ಲ, ಬದುಕುತ್ತಿರುವ ಪ್ರದೇಶದ ವ್ಯವಸ್ಥೆ ಸರಿಯಾಗಿಲ್ಲ ತನ್ನ ಹೆತ್ತವರು ತನಗೆ ಬೇಕಾದ ರೀತಿಯ ವ್ಯವಸ್ಥೆಗಳನ್ನು ಒದಗಿಸಿ ಕೊಡಲಿಲ್ಲ, ತನ್ನ ಸಹೋದ್ಯೋಗಿಗಳು, ಸಂಗಾತಿ ಕುಟುಂಬ ಹೀಗೆ ತನ್ನ ಸುತ್ತಲಿನ ಎಲ್ಲರೂ ತನಗೆ ಸಹಾಯ ಸಹಕಾರ ನೀಡಲಿಲ್ಲ ಮನೆಯಲ್ಲಿ ತಾವು ಬಯಸಿದ ಅನುಕೂಲತೆಗಳು ಇಲ್ಲ…. ಆದ್ದರಿಂದಲೇ ನನಗೆ ಗೆಲುವು ಅಸಾಧ್ಯವಾಯಿತು ಎಂದು ಹೇಳುತ್ತಾರೆ.ನನ್ನ ಸೋಲಿಗೆ ಬದುಕಿನಲ್ಲಿ ನನ್ನ ಆಯ್ಕೆಗಳೇ ಕಾರಣ ನನ್ನ ಯೋಜನೆಗಳು ಸರಿಯಾಗಿರಲಿಲ್ಲ. ಮಾಡಬೇಕಾದ ವಯಸ್ಸಿನಲ್ಲಿ ಮಾಡಬೇಕಾದ ಕೆಲಸ ಕಾರ್ಯಗಳನ್ನು ನಾನು ಮಾಡಲಿಲ್ಲ ಎಂದು ತಮಗೆ ತಾವೇ ಎಂದೂ ಹೇಳಿಕೊಳ್ಳುವುದಿಲ್ಲ…… ಇಲ್ಲಿಯೇ ಮನುಷ್ಯ ತಪ್ಪುವುದು.ಇಡೀ ಜಗತ್ತಿಗೆ ನಮ್ಮ ಸೋಲು ಗೆಲುವುಗಳ ಪರಿಭಾಷೆಯನ್ನು ನಾವು ಒತ್ತಿ ಹೇಳಬಹುದು. ಆದರೆ ನಮ್ಮದೇ ಆತ್ಮಕ್ಕೆ, ನಮ್ಮ ಮನಸ್ಸಿಗೆ ನಾವು ಸುಳ್ಳು ಹೇಳಲು, ತಪ್ಪು ಉತ್ತರ ಕೊಡಲು, ಸಮಜಾಯಿಷಿ ಕೊಡಲು ಸಾಧ್ಯವಾಗುತ್ತದೆಯೇ? ಒಂದೊಮ್ಮೆ  ಸಾಧ್ಯವಾಗುತ್ತದೆ ಎಂದಾದರೆ ಖಂಡಿತವಾಗಿಯೂ ನಾವು ಆತ್ಮ ವಂಚನೆ ಮಾಡಿಕೊಳ್ಳುತ್ತಿದ್ದೇವೆ ಎಂದೇ ಅರ್ಥ… ಏಕೆಂದರೆ ನಾವು ಇಡೀ ಜಗತ್ತನ್ನು ಮೋಸ ಮಾಡಬಹುದು, ವಂಚಿಸಬಹುದು ಆದರೆ ವೈಯಕ್ತಿಕವಾಗಿ ನಮ್ಮ ಅಂತರಾತ್ಮವನ್ನು ಎಂದಿಗೂ ವಂಚಿಸಲು ಸಾಧ್ಯವಿಲ್ಲ ಅಲ್ಲವೇ?ಆದ್ದರಿಂದ ಸ್ನೇಹಿತರೆ…ತಮ್ಮ ಸೋಲು ಗೆಲುವುಗಳಿಗೆ ನಾವೇ ಹೊಣೆಗಾರರಾಗೋಣ. ನಮ್ಮ ಬದುಕಿನಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಬದುಕಿನ ಮೇಲೆ ಪರಿಣಾಮ ಬೀರುತ್ತವೆ. ನಾವು ಹಾಕಿಕೊಳ್ಳುವ ಯೋಜನೆಗಳ ಸಾಧಕ ಬಾಧಕಗಳ ಅರಿವು ನಮಗೆ ಇರಬೇಕು. ನಮ್ಮ ಯೋಜನೆಗಳಲ್ಲಿ ಸತ್ವವಿದ್ದರೆ ಹಾಗೂ ನಮ್ಮ ಪ್ರಯತ್ನವನ್ನು ನಾವು 100 ಶೇಕಡ ಹಾಕಿದಲ್ಲಿ ಖಂಡಿತವಾಗಿಯೂ ಗೆಲುವು ನಮ್ಮದಾಗುತ್ತದೆ ಒಂದೊಮ್ಮೆ ಗೆಲ್ಲದಿದ್ದರೂ ಪರವಾಗಿಲ್ಲ ಸೋಲು ಕಲಿಸುವ ಅನುಭವದ ಪಾಠ ಅದಕ್ಕಿಂತ ದೊಡ್ಡದು. ಮತ್ತೊಂದು ಹೊಸ ಗೆಲುವಿಗೆ ಅದು ನಮ್ಮನ್ನು ತಯಾರು ಮಾಡುತ್ತದೆ… ಆದರೆ ಈ ಬಾರಿ ಹಿಂದಿನ ವಿಫಲತೆಯ ಕಾರಣಗಳು ನಮ್ಮನ್ನು ಜಾಗೃತಗೊಳಿಸಿಹಳೆಯ ತಪ್ಪುಗಳು ಮರುಕಳಿಸದಂತೆ ನಮ್ಮನ್ನು ಎಚ್ಚರಿಸುತ್ತಾ ಹೊಸ ಸಾದ್ಯತೆಗಳ ಕುರಿತು ನಮಗೆ ತಿಳುವಳಿಕೆ ಹೇಳುತ್ತಾ  ಹೊಸ ಗೆಲುವಿಗೆ ದಾರಿ ತೋರುತ್ತವೆ.ಎಷ್ಟೋ ಬಾರಿ ಬದುಕಿನ ಹಾದಿಯಲ್ಲಿ ಏನೆಲ್ಲ ಪ್ರಯತ್ನ ಮಾಡಿಯೂ ಕೂಡ ಯಶಸ್ಸು ದಕ್ಕುವುದಿಲ್ಲ… ಹಾಗೆಂದು ನಿರಾಶರಾಗುವುದು ಬೇಕಿಲ್ಲ. ಯಶಸ್ಸಿನ ಏಣಿಯನ್ನು ಏರುವುದು ಅಷ್ಟು ಸುಲಭವಲ್ಲ ಒಂದೇ ಒಂದು ಹಂತದ ಎಡವುವಿಕೆಯು ಕೂಡ ನಮ್ಮನ್ನು ಇನ್ನಿಲ್ಲದಂತೆ ಕೆಳಗೆ ತಳ್ಳುತ್ತದೆ…. ಆದ್ದರಿಂದ ಬದುಕಿನಲ್ಲಿ ಸದಾ ಜಾಗೃತ ಸ್ಥಿತಿ ನಮ್ಮದಾಗಿರಬೇಕು. ಮತ್ತೆ ಹೊಸ ಉತ್ಸಾಹದಿಂದ ಒಡಗೂಡಿ ಪ್ರಯತ್ನವನ್ನು ಮುಂದುವರಿಸಬೇಕು.ಬದುಕಿನಲ್ಲಿ ನಮಗೆ ಸದಾ ಎರಡು ಆಯ್ಕೆಗಳಿರುತ್ತವೆಮೊದಲನೆಯದ್ದು ಬದುಕು ಬರುವಂತೆಯೇ ಅದನ್ನು ಸ್ವೀಕರಿಸುವುದು ಎರಡನೆಯದ್ದು ಬದುಕಿನಲ್ಲಿ ನಮ್ಮದೇ ಆದ ಕೆಲವು ಗುರಿ ಮತ್ತು ಉದ್ದೇಶಗಳನ್ನು ಹೊಂದಿ ಅವುಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುವುದು.ಮೊದಲನೆಯದ್ದು ಅತ್ಯಂತ ಸುಲಭ.. ಬದುಕು ಬಂದ ರೀತಿಯಲ್ಲಿ ಅದನ್ನು ಸ್ವೀಕರಿಸುತ್ತಾ ಮುಂದೆ ಸಾಗುವುದು. ಬೇರೆ ಯಾವುದೇ ಆಯ್ಕೆಗಳು ಇಲ್ಲದೆ ಇದ್ದಾಗಲೂ ಕೂಡ ನಾವು ಮೊದಲ ಆಯ್ಕೆಯನ್ನು ನಮ್ಮದಾಗಿಸಿಕೊಳ್ಳುತ್ತೇವೆ. ಬದುಕಿನಲ್ಲಿ ಯಾವುದೇ ರೀತಿಯ ಏರಿಳಿತಗಳು ಬೇಡ ಎಂದಲ್ಲ ಅದೊಂದು ರೀತಿಯ ಸಂತೃಪ್ತ ಭಾವ ಎಂದು ತೋರಬಹುದು. ಇರುವುದರಿಂದಯೇ ತೃಪ್ತರಾಗುವುದು….ಆದರೆ ಅದೊಂದು ಏಕತಾನತೆಯನ್ನು ಹುಟ್ಟು ಹಾಕುವ ಭಾವ. ಬದುಕಿನ ಒಂದು ಹಂತದಲ್ಲಿ ಈ ರೀತಿಯ ಭಾವ ನಮ್ಮಲ್ಲಿ ನೀರಸತೆಯನ್ನು ಉಂಟು ಮಾಡಿ ನಮ್ಮ ಕುರಿತು ನಮಗೆ ಜಿಗುಪ್ಸೆಯನ್ನು ಹುಟ್ಟಿಸಬಹುದು.ಬದುಕಿನಲ್ಲಿ ನಾನೇನೂ ಮಾಡಲು ಸಾಧ್ಯವಾಗಲಿಲ್ಲ ಎಂದು ತೋರಬಹುದು ಇಲ್ಲವೇ ಬೇರೆಯವರು ತಮ್ಮ ಬದುಕಿನಲ್ಲಿ ಸಾಧಿಸಿದ್ದನ್ನು ಕಂಡು ಹೆಮ್ಮೆಪಡುವುದರ ಜೊತೆಗೆ ತಾವು ಪ್ರಯತ್ನ ಪಡಲಿಲ್ಲ ಎಂಬ ಕುರಿತು ಪಶ್ಚಾತಾಪವಾಗಬಹುದು ಇಲ್ಲವೇ ಅವರ ಕುರಿತು ಅಸೂಯೆ ಪಡುವಂತಾಗಬಹುದು ತಮ್ಮಿಂದ ಸಾಧ್ಯವಾಗದ್ದು ಬೇರೆಯವರಿಗೆ ಸಾಧ್ಯವಾಗಿದೆ ಎಂದಾದರೆ ಅವರು ವಾಮ ಮಾರ್ಗವನ್ನು ಅನುಸರಿಸಿದ್ದಾರೆ ಎಂಬ ಕುತ್ಸಿತ  ಮನೋಭಾವ ಉಂಟಾಗಬಹುದು….. ಇದನ್ನು ಬಿಟ್ಟರೆ ಇವರಲ್ಲಿ ಅಷ್ಟೇನೂ ದೊಡ್ಡ ಪ್ರಮಾದವಿಲ್ಲ.ನಿಜವಾಗಿಯೂ ನೀವು ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಆಶಿಸಿದ್ದರೆ ಸಾಧಿಸಲೇಬೇಕು ಎಂಬ ಹಂಬಲ ನಿಮಗಿದ್ದರೆ ನೀವು ಎರಡನೆಯ ಆಯ್ಕೆಯನ್ನು ನಿಮ್ಮದಾಗಿಸಿಕೊಳ್ಳುತ್ತೀರಿ ಅಂತಹ ಆಯ್ಕೆಯನ್ನು ಕೇವಲ ಬಾಯಿಮಾತಿನ ಇಲ್ಲವೇ ಆ ಕ್ಷಣದಲ್ಲಿ ನೀವು ಮಾಡಿದ ಕ್ಷಣಿಕ ನಿರ್ಧಾರವಾದರೆ ನೀವು ಸೋಲುತ್ತೀರಿ, ಹತಾಶರಾಗಿ ಬೇಗನೆ ಕೈ ಚೆಲ್ಲುತ್ತೀರಿ ಇಲ್ಲವೇ ನಿಮ್ಮ ನಿರ್ಧಾರವನ್ನು ಕೈಬಿಡುತ್ತೀರಿ. ಬದಲಾಗಿ ನಿಮ್ಮ ಗುರಿ ಹಾಗೂ ಉದ್ದೇಶ ನಿಮ್ಮ ಮನದಾಳದ ಭಾವನೆಯಾಗಿ ಪ್ರತಿಕ್ಷಣವೂ ನಿಮ್ಮನ್ನು ಆ ಉದ್ದೇಶಕ್ಕಾಗಿ ತುಡಿಯುವಂತೆ ಕಾರ್ಯಪ್ರವೃತ್ತರಾಗುವಂತೆ ಮಾಡಿದರೆ ಖಂಡಿತವಾಗಿಯೂ ನೀವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತೀರಿ. ಆ ಸಾಧನೆಗಾಗಿ ತುಡಿಯುವಂತೆ  ಕಾರ್ಯ ಪ್ರವೃತ್ತರಾಗುವಂತೆ ಸದಾ ನಿಮ್ಮನ್ನು ನೀವು ಹುರಿದುಂಬಿಸಿಕೊಳ್ಳುತ್ತೀರಿ.ಸೋಲುಗಳನ್ನು ಸವಾಲುಗಳಾಗಿ ಸ್ವೀಕರಿಸಿ ಬರುವ ಎಲ್ಲಾ ಎಡರು ತೊಡರುಗಳನ್ನು ಸಾಧನೆಯ ಹಾದಿಯ ಕಲ್ಲು ಮುಳ್ಳುಗಳು ಎಂಬಂತೆ ಸಕಾರಾತ್ಮಕವಾಗಿ ಭಾವಿಸಿ ಅವುಗಳನ್ನು ನಿವಾರಿಸಿಕೊಳ್ಳುತ್ತಾ ಮುಂದೆ ಸಾಗುವಿರಿ.ಗುರಿಯ ಉದ್ದೇಶ ಹಾಗೂ ಸಾಧನೆಗೆ ಕೇವಲ ಬಾಹ್ಯ ಚಟುವಟಿಕೆಗಳು ಮಾತ್ರ ಕಾರಣವಾಗುವುದಿಲ್ಲ ನಮ್ಮ ವೈಯುಕ್ತಿಕ ಬದುಕಿನಲ್ಲಿ ನಾವು ರೂಢಿಸಿಕೊಳ್ಳುವ ಕೆಲಸಗಳು ಕೂಡ ನಮ್ಮ ಯಶಸ್ಸಿನ ಬದುಕಿಗೆ ತಮ್ಮ ಪಾಲನ್ನು ಸಲ್ಲಿಸುತ್ತವೆ. (ಈ ಕುರಿತು ಮತ್ತಷ್ಟು ಮಾತುಕತೆಗಳು ಮುಂದಿನ ಲೇಖನದಲ್ಲಿ) ವೀಣಾ ಹೇಮಂತ್ ಗೌಡ ಪಾಟೀಲ್

“ಯಶಸ್ಸಿನ ಪಯಣದ ಹಾದಿ -1” ವೀಣಾ ಹೇಮಂತ್ ಗೌಡ ಪಾಟೀಲ್ Read Post »

You cannot copy content of this page

Scroll to Top