ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅನುವಾದ

ತಕ್ಕ ಪಾಠ

ಅನುವಾದಿತ ಕವಿ ತಕ್ಕ ಪಾಠ ತೆಲುಗಿನಲ್ಲಿ: ಆದೋನಿ ಬಾಷಾ ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು. ರೈಲು ಚಲಿಸುತ್ತಿದ್ದ ಹಾಗೆ ಒಬ್ಬ ವ್ಯಕ್ತಿ ಬೇಗಬೇಗನೇ ನಾನಿದ್ದ ಡಬ್ಬಿಯೊಳಗೆ ಹತ್ತಿದ. ಅಲ್ಲಿಯವರೆಗೆ ಅದರಲ್ಲಿ ನಾನೊಬ್ಬನೇ ಪ್ರಯಾಣಿಕ. ಜೊತೆ ಸಿಕ್ಕಿತೆಂದು ಸ್ವಲ್ಪ ನಿರಂಬಳವಾಯಿತು. ಬೆಳೆಗ್ಗೆಯಿಂದ ಕುಂಭದ್ರೋಣ ಮಳೆ ! ಈ ಅಕಾಲ ಮಳೆಗಳಿಂದಾಗಿ ರೈಲುಗಳೆಲ್ಲಾ ಖಾಲಿಯಾಗಿ ತಿರುಗುತ್ತಿದ್ದವು. ನಾನೊಬ್ಬ ನಿವೃತ್ತ ಪೋಲೀಸ್ ಅಧಿಕಾರಿ. ಅನಂತಪುರದಲ್ಲಿ ನಿವೃತ್ತಿ ಪಡೆದು, ದೆಹಲಿಯಲ್ಲಿದ್ದ ನನ್ನ ಮಗನ ಹತ್ತಿರ ನನ್ನ ವಿಶ್ರಾಂತ ಜೀವನವನ್ನ ನಡೆಸುತ್ತಿದ್ದೇನೆ. ಪ್ರತೀ ವರ್ಷ ನಮ್ಮ ಕುಟುಂಬವೆಲ್ಲಾ ಕಾರಲ್ಲಿ ಹೊರಟು ವೈಷ್ಣೋದೇವಿಯ ದರ್ಶನ ಮಾಡಿಕೊಳ್ಳುತ್ತೇವೆ. ಈ ಸಲ ನನ್ನ ಹೆಂಡತಿ ಅನಾರೋಗ್ಯದಿಂದ ಬರಲಿಲ್ಲ. ಅವಳನ್ನ ನೋಡಿಕೊಳ್ಳಲು ನನ್ನ ಸೊಸೆ ಸಹ ಉಳಿದಳು. ನಾನು, ನನ್ನ ಮಗ ಮಾತ್ರ ಹೊರಟೆವು.ಕೆಲ ವರ್ಷಗಳ ಹಿಂದೆ ನನಗೆ ಲಕ್ವ ಹೊಡೆದಿದ್ದು ನನ್ನ ಕಾಲುಗಳೆರಡೂ ಸ್ವರ್ಶೆಯನ್ನು ಕಳೆದುಕೊಂಡಿದ್ದವು. ಗಾಲಿಕುರ್ಚಿಯಲ್ಲೇ ನನ್ನ ಓಡಾಟ. ಎಂದಿನ ಹಾಗೇ ಅದರೊಂದಿಗೆ ಕಾರಲ್ಲಿ ಹೊರಟಿದ್ದೆವು. ಪಲ್ಲಕಿಯಲ್ಲೇ ದೇವಿಯ ದರ್ಶನ ಮಾಡಿಕೊಂಡು ಮರು ಪ್ರಯಾಣದಲ್ಲಿ ಜಮ್ಮುವಿನಲ್ಲಿ ನನ್ನ ಮೊಮ್ಮಗನ ಸಲುವಾಗಿ ಕೆಲ ಆಟದ ವಸ್ತುಗಳನ್ನು ಕೊಂಡುಕೊಂಡೆವು. ಅಷ್ಟರಲ್ಲಿ ಮಳೆ ಶುರುವಾಗಿತ್ತು. ದಿನವಿಡೀ ಬೀಳುತ್ತಲೇ ಇತ್ತು. ಹಾದಿಯಲ್ಲಿ ನೆಲ ಜಾರಿಕೆಗಳಾಗಿವೆಯೆಂದು ತಿಳಿದು ಬಂದದ್ದರಿಂದ ಕಾರನ್ನ ಚಾಲಕನ ಸುಪರ್ದಿಗೆ ಒಪ್ಪಿಸಿ ನಾವಿಬ್ಬರೂ ರೈಲಿನಲ್ಲಿ ದೆಹಲಿ ಸೇರಬೇಕೆಂದಿದ್ದೆವು.ಜಮ್ಮು ನಿಲ್ದಾಣದಲ್ಲಿ ನನ್ನ ಮಗ ಮತ್ತು ಕಾರಿನ ಚಾಲಕ ಸೇರಿ ನನ್ನನ್ನ ನನ್ನ ಕುರ್ಚಿಯ ಸಮೇತ ಡಬ್ಬಿಯೊಳಕ್ಕೆ ಹತ್ತಿಸಿದರು. ಅವರಿಬ್ಬರೂ ಸಾಮಾನು ತರಲು ಹೊರಗಡೆಗೆ ಹೋದಾಗ ರೈಲು ಹೊರಟಿದ್ದು, ನನ್ನ ಮಗ ಬರುವ ವೇಳೆಗೆ ವೇಗ ತಳೆದಿತ್ತು. ಹಾಗಾಗಿ ಅವನು ರೈಲು ಹತ್ತಲಾಗಲಿಲ್ಲ. ನಾನು ಒಬ್ಬಂಟಿಗನಾಗಿ ಪ್ರಯಾಣಸ ಬೇಕಾಗಿ ಬಂದಿತ್ತು.ನಾನು ಡಬ್ಬಿಯ ಬಾಗಿಲ ಹತ್ತಿರ ನನ್ನ ಕುರ್ಚಿಯಲ್ಲಿ ಕೂತಿದ್ದೆ. ರೈಲು ಹತ್ತಿದ ವ್ಯಕ್ತಿ ನನ್ನ ಎದುರು ಸೀಟಿನಲ್ಲಿ ಕೂತ. ನಾನು ನನ್ನ ಸೀಟಿನಲ್ಲಿ ಕೂರಲು ಆತನ ಸಹಾಯ ಪಡೆಯಬೇಕೆಂದಿದ್ದೆ. ಅವನ ಕಡೆಗೆ ನೋಡಿದವನು ಬೆಚ್ಚಿಬಿದ್ದೆ.ಎಲ್ಲೋ ನೋಡಿದ ಮುಖ ! ಎಲ್ಲಿ ಅಂತ ನೆನಪು ಬರಲಿಲ್ಲ. ನನ್ನ ವೃತ್ತಿ ಜೀವನದಲ್ಲಿ ಎಷ್ಟೋ ಜನರನ್ನ ನೋಡಿದ್ದೇನೆ. ಅವರುಗಳಲ್ಲಿ ಕೆಲವರಂತೂ ಅಪರಾಧಿಗಳು. ನನ್ಗೆಲ್ಲೋ ಹುಚ್ಚು ! ದೇಶದ ಈ ಮೂಲೆಯಲ್ಲಿ ನನಗೆ ಗೊತ್ತಿರುವ ಮನುಷ್ಯ ಹೇಗೆ ಸಿಕ್ಕಿಯಾನು ? ಮನುಷ್ಯನನ್ನ ಹೋಲಿದ ಮನುಷ್ಯರಿರಬಹುದು ಅಥವಾ ನನ್ನ ಕಣ್ಣೇ ನನ್ನನ್ನು ಮೋಸಮಾಡುತ್ತಿರಬಹುದು. ಅಷ್ಟರಲ್ಲೇ ಆ ವ್ಯಕ್ತಿಯೇ ನನ್ನ ಗುರ್ತುಹಿಡಿದು ಮಾತಾಡಿದ. “ ಸಾರ್ ! ನೀವು ಇನಸ್ಪೆಕ್ಟರ್ ಚಂದ್ರ ಅವರಲ್ವಾ ? ನನ್ನ ಗುರ್ತು ಹಿಡಿದಿದೀರಾ ? ನಾನು ರಾಜೇಶ್ ಸಾರ್. ಇಪ್ಪತ್ತೈದು ವರ್ಷಗಳ ಹಿಂದೆ ಅನಂತಪುರದಲ್ಲಿ ನನ್ನ ಹೆಂಡತಿಯ ಕೊಲೆ ಕೇಸನ್ನ ನೀವೇ ಪತ್ತೇದಾರಿ ಮಾಡಿದ್ದು .” ಅಂದ. ಆದ್ರೂ ನನಗೆ ನೆನಪಿಗೆ ಬರಲಿಲ್ಲ. “ ನಿನ್ನ ಹೆಂಡತಿ ಹೆಸರೇನಪ್ಪಾ “ ಅಂತ ಕೇಳಿದೆ.“ ಆಶಾ “ ಅಂತ ಅವನು ಹೇಳಿದ ತಕ್ಶಣ ನನ್ನ ತಲೆಯಲ್ಲಿ ಒಂದು ತುಮುಲವೇ ಎದ್ದಿತು. ನೆನಪಿನ ಪೊರೆಗಳ ಕೆಳಗಿಂದ ಒಂದು ಸುಂದರವಾದ ಮತ್ತು ಮುಗ್ಧ ಮುಖ ಎಲ್ಲ ಪೊರೆಗಳನ್ನ ಸೀಳುತ್ತ ಮೇಲ್ಬಂದು ನನ್ನ ಕಣ್ಣ ಮುಂದೆ ನಿಂತಿತು. ಅವಳ ಆ ಮುಖವನ್ನು ನಾನು ಹೇಗೆ ಮರೆತೇನು ? ತುಂಬಾ ಧೈರ್ಯವಂತನೆಂದು ಬೀಗುತ್ತಿದ್ದ ನನ್ನನ್ನೇ ಅವಳ ಕೊಲೆ ಬೆಚ್ಚಿ ಬೇಳಿಸಿತ್ತು. ಎಷ್ಟೋ ವರ್ಷಗಳ ವರೆಗೆ ಅವಳ ಮುಖ ನನ್ನ ಕನಸಲ್ಲಿ ಬರುತ್ತಿತ್ತು. “ಅಂಕಲ್ ! ನನ್ನ ಕೊಂದ ಆ ಕೊಲೆಪಾತಕಿಯನ್ನ ಹಿಡಿಯಿರಿ ಪ್ಲೀಜ್ “ ಅಂತ ಬೇಡುತ್ತಿತ್ತು. ಆದರೇ ನಾನೆಷ್ಟು ಪ್ರಯತ್ನಿಸಿದರೂ ಆ ಕೊಲೆಗಾರ ಸಿಕ್ಕಿರಲಿಲ್ಲ. ನನ್ನ ಸರ್ವೀಸಿನಲ್ಲಿ ಕೊಲೆಗಾರನನ್ನು ಹಿಡಿಯದೇ ಉಳಿದ ಕೇಸು ಅದೊಂದೇ ಆಗಿತ್ತು. ಆಗಲೇ ರಾಜೇಶ್ ನನ್ನ ಕುರ್ಚಿಯನ್ನ ನೋಡಿದ. “ ನಿಮ್ಮ ಕಾಲಿಗೇನಾಗಿದೆ ಸಾರ್ “ ಅಂತ ಕೇಳಿದ.ನಾನು ನನ್ನ ವಿವರಗಳನ್ನು ಹೇಳಿದೆ. “ ಇನ್ನು ದೆಹಲಿಯಲ್ಲಿ ನನ್ನ ಸೊಸೆ ಬಂದು ನನ್ನ ಇಳಿಸಿಕೊಳ್ಳೂವವರೆಗೂ ನಂದು ಒಬ್ಬಂಟಿ ಪ್ರಯಾಣವೇ ! ಅದ್ಸರಿ. ಈ ಮೂಲೆಯಲ್ಲಿ ನೀನೇನ್ಮಾಡ್ತಿದ್ದೀಯಾ “ ಅಂತ ಕೇಳಿದೆ.“ ವ್ಯಾಪಾರದ ಸಂಬಂಧ ನಾನು ಇಡೀ ದೇಶ ಸುತ್ತುತ್ತಾ ಇರ್ತೇನೆ ಸಾರ್” ಎಂದ.ಅವನ ವ್ಯಾಪಾರದ ಬಗ್ಗೆ ಕೇಳಬೇಕೆನಿಸಿತು. ಆದರೇ ನಮ್ಮ ಮಾತು ಆಶಾಳ ಕೊಲೆಯ ಕಡೆಗೆ ತಿರುಗಿತು.“ ಸಾರ್ ! ನನ್ನ ಹೆಂಡತಿಯ ಕೊಲೆಗಾರ ಇನ್ನೂ ವರೆಗೆ ಸಿಕ್ಕಿಲ್ಲ. ಕೊನೆಗೆ ಆ ಕೊಲೆ ರಹಸ್ಯವಾಗೇ ಉಳಿದು ಹೋಯ್ತು.” ನಿರಾಶಾ ದನಿಯಲ್ಲಿ ಹೇಳಿದ ರಾಜೇಶ್.ಅವನ ಮಾತು ಕೇಳಿದ ನನಗೆ ಬೇಜಾರಾಯಿತು. ಹಾಗೇ ಕಣ್ಣು ಮುಚ್ಚಿಕೊಂಡೆ. ರೈಲು ಮುಂದೆ ಹೋಗುತ್ತಿತ್ತು. ನನ್ನ ಮೆದಳು ಹಿಂದಿನ ನೆನಪಿಗೆ ಮರಳಹತ್ತಿತು. ನಾನು ಅನಂತಪುರದಲ್ಲಿ ಸರ್ಕಲ್ ಇನ್ಸ್ಪೆಕ್ಟರನಾಗಿ ಕೆಲಸ ಮಾಡುತ್ತಿದ್ದ ದಿನಗಳವು. ನಮ್ಮ ಪಟ್ಟಣದಲ್ಲಿ ಇದ್ದಕ್ಕಿದ್ದಹಾಗೇ ಕಳ್ಳರ ತಂಡ ಒಂದು ತಲೆ ಎತ್ತಿತ್ತು. ಬೀಗ ಹಾಕಿದ ಮನೆಗಳು ಅಥವಾ ಒಬ್ಬಂಟಿಗರಾಗಿ ಯಾರಾದರೂ ಇದ್ದ ಮನೆಗಳನ್ನೇ ಗುರಿ ಮಾಡಿಕೊಂಡು ದರೋಡೆಗಳನ್ನ ಮಾಡುತ್ತಿದ್ದರು. ಕಾವಲಿಗೆ ನಾಯಿ ಇದ್ದರೇ ಅದಕ್ಕೆ ವಿಷ ಬೆರೆಸಿದ ಬಿಸ್ಕತ್ತುಗಳನ್ನ ತಿನಿಸಿ ಕೊಲ್ಲುತ್ತಿದ್ದರು. ಮುಂಜಾಗರೂಕತೆಯಾಗಿ ಟೆಲಿಫೋನ್ ವೈರುಗಳನ್ನೆಲ್ಲಾ ಕತ್ತರಿಸಿ ಹಾಕುತ್ತಿದ್ದರು. ಉಡ್ ಕಟ್ಟರಿನಿಂದ ಹಿಂಬಾಗಿಲಿಗೆ ತೂತು ಕೊರೆದು ಚಿಲಕ ತೆಗೆದು ಒಳಗೆ ನುಸುಳುತ್ತಿದ್ದರು. ಕುರುಹು ಕಾಣದ ಹಾಗೆ ಕೈಗಳಿಗೆ ಕೈಚೀಲ ಹಾಕಿ ದರೋಡೆ ಮಾಡುತ್ತಿದ್ದರು. ಒಂದು ವೇಳೆ ಮನೆಯಲ್ಲಿ ಯಾರಾದರೂ ಕಂಡಲ್ಲಿ ಅವರ ಕತ್ತಿಗೆ ಪ್ಲಾಸ್ಟಿಕ್ ವೈರ್ ಬಿಗಿಸಿ ಕೊಂದುಬಿಡುತ್ತಿದ್ದರು.ಪೋಲೀಸರಿಗೆ ಯಾವುದೇ ತರದ ಸಾಕ್ಷಾಧಾರಗಳು ಸಿಗದ ಹಾಗೆ ಕೆಲಸ ಮಾಡುತ್ತಿದ್ದರು. ನಾವು ಏನೇ ಪ್ರಯತ್ನ ಮಾಡಿದರೂ ಅವರುಗಳನ್ನು ಹಿಡಿಯಲಾಗಿರಲಿಲ್ಲ. ರಾತ್ರಿಯಲ್ಲಿ ನಾನೇ ಸ್ವತಃ ಗಸ್ತು ತಿರುಗುತ್ತಿದ್ದೆ. ಆದರೂ ಇಂಥ ಕಳ್ಳತನಗಳು ಕಮ್ಮಿಯಾಗಲಿಲ್ಲ. ವಾರದಲ್ಲಿ ಎಲ್ಲೋ ಒಂದುಕಡೆ ಕಳವು ನಡೆಯುತ್ತಿತ್ತು. ಒಂದು ದಿನ ಬೆಳಗಿನ ಜಾವದಲ್ಲಿ ಸ್ಟೇಷನ್ ನಿಂದ ಫೋನ್ ಬಂತು. ಊರ ಹೊರಗಿನ ಬಡಾವಣೆಯಲ್ಲಿಯ ಒಂದು ಮನೆಯಲ್ಲಿ ಒಬ್ಬಂಟಿಗಳಾಗಿದ್ದ ಆಶಾ ಎನ್ನುವ ಗೃಹಿಣಿಯನ್ನು ಕೊಂದು ಕಳ್ಳರು ಮನೆಯನ್ನು ಲೂಟಿ ಮಾಡಿದ್ದಾರೆ ಎಂದು ಡ್ಯೂಟಿಯಲ್ಲಿದ್ದ ಪೇದೆ ಹೇಳಿದ. ನಂಗೆ ತುಂಬಾ ಆಶ್ಚರ್ಯವಾಯಿತು. ಯಾಕೆ ಅಂದ್ರೆ, ಆಶಾ ನಂಗೆ ಗೊತ್ತಿದ್ದ ಹೆಂಗಸಾಗಿದ್ದಳು. ಕಳೆದ ವರ್ಷ ತನ್ನ ಮದುವೆಯಾಗುವ ವರೆಗೆ ನನ್ನ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಳು. ಒಳ್ಳೆಯ ಹುಡುಗಿ. ತಂದೆ ತಾಯಿ ಇಲ್ಲದ ಅನಾಥೆ. ಕಂದನಿರುವಾಗಲೇ ಅವರು ಅವಳನ್ನು ಗುಡಿಯಲ್ಲಿ ಬಿಟ್ಟಿದ್ದರಂತೆ. ಅನಾಥಾಶ್ರಮದಲ್ಲಿದ್ದುಕೊಂಡು ಬೆಳಿದಿದ್ದಳು. ಸ್ವಯಂಕೃಷಿಯಿಂದ ಚೆನ್ನಾಗಿ ಓದಿಕೊಂಡು ಊರಿನಲ್ಲಿನ ಒಂದು ಹೆಸರಾಂತ ಶಾಲೆಯಲ್ಲಿ ಅಧ್ಯಾಪಕಿಯಾಗಿ ಸೇರಿದ್ದಳು. ಒಳ್ಳೆ ಹೆಸರು ಗಳಿಸಿದ್ದಳು. ಅದಕ್ಕೇ ನನಗೆ ಅವಳೆಂದರೇ ತುಂಬಾ ಅಭಿಮಾನ. ನನ್ನ ಮಕ್ಕಳಿಬ್ಬರೂ ಅದೇ ಶಾಲೆಯಲ್ಲಿ ಕಲಿಯುತ್ತಿದ್ದರು. ಅವರು ಓದಿನ ಮೇಲೆ ಅಷ್ಟೇನೂ ಶ್ರದ್ಧೆ ತೋರಿಸುತ್ತಿರಲಿಲ್ಲ. ಹಾಗಾಗಿ ನಾನು ಆಶಾಳನ್ನ ನಮ್ಮ ಮನೆಗೆ ಬಂದು ಮಕ್ಕಳಿಗೆ ಪಾಠ ಹೇಳಿಕೊಡಲು ಕೇಳಿಕೊಂಡೆ. ಅವಳು ಒಪ್ಪಿ ಮನೆಗೆ ಸಂಜೆಗಳಲ್ಲಿ ಬಂದು ಪಾಠ ಹೇಳಿಕೊಡುತ್ತಿದ್ದಳು. ಅವಳು ಬಂದಮೇಲೆ ನನ್ನ ಮಕ್ಕಳ ಓದಿನಲ್ಲಿ ತುಂಬಾ ಸುಧಾರಣೆ ಕಂಡು ಬಂತು. ಅದಕ್ಕೆ ಕೃತಜ್ಞತೆಯಾಗಿ ನಾವು ಅವಳ ಮದುವೆಯಲ್ಲಿ ಒಂದು ಬಂಗಾರದ ಲಾಕೆಟ್ ಕೊಟ್ಟೆವು. ಅದನ್ನೋ ನೋಡಿ ಅವಳು, ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾ ಆ ಲಾಕೆಟ್ಟನ್ನ ತನ್ನ ಜೀವನವಿಡೀ ಜತನವಾಗಿ ಇಟ್ಟುಕೊಳ್ಳುತ್ತೇನೆ ಎಂದಿದ್ದಳು. ಆಶಾಳನ್ನು ಪ್ರೀತಿಸಿ ಮದುವೆಯಾದ ರಾಜೇಶ್ ಮುಂಚೆ ಕಾರುಗಳ ಮೆಕಾನಿಕ್ ಆಗಿ ಕೆಲಸಮಾಡುತ್ತಿದ್ದ. ಅವಳು ಕೆಲಸ ಮಾಡುತ್ತಿದ್ದ ಶಾಲೆಯ ಎದುರಲ್ಲೇ ಇತ್ತು ಅವನ ಷೆಡ್. ಒಂದು ದಿನ ಅವನಿಗೆ ಆಶಾಳ ಜೊತೆ ಪರಿಚಯವಾಯಿತು. ಅದು ಪ್ರೀತಿಯಾಯ್ತು. ನಂತರ ರಾಜೇಶ್ ಕಾರುಗಳ ಮಧ್ಯವರ್ತಿಕೆಯಲ್ಲಿ ತುಂಬಾ ಹಣ ಗಳಿಸಿದ. ನಂತರ ಆಶಾಳ ಕೆಲಸ ಬಿಡಿಸಿ ಅವಳನ್ನು ಮದುವೆಯಾದ. ಊರಿನ ಹೊರಗಡೆಯ ಬಡಾವಣೆಯಲ್ಲಿ ಮನೆ ಬಾಡಿಗೆಗೆ ಹಿಡಿದು ಸಂಸಾರ ಹೂಡಿದ್ದರು. ಆಶಾ ಅದೃಷ್ಟವಂತಳೆಂದು ನಾನು, ನನ್ನ ಹೆಂಡತಿ ಸಂತೋಷಪಟ್ಟೆವು. ಆದರೇ ಮದುವೆಯಾದ ಒಂದು ವರ್ಷದಲ್ಲಿ ಹೀಗೆ ಅವಳಿಗೆ ನೂರು ವರ್ಷ ತುಂಬುತ್ತದೆಂದು ನಾವು ಕನಸಿನಲ್ಲೂ ಎಣಿಸಿರಲಿಲ್ಲ.ಅವತ್ತು ನಾನು ಘಟನಾಸ್ಥಳಕ್ಕೆ ಸೇರುವ ಮೊದಲೇ ನನಗಿಂತಾ ಮುಂಚೆ ಬಂದ ಪೋಲೀಸ್ ತಂಡ ತಮ್ಮ ತನಿಖೆ ಶುರುಮಾಡಿತ್ತು. ಎಸ್ಸೈ,ಫೋಟೋಗ್ರಾಫರ್, ಬೆರಳಚ್ಚು ತಜ್ಞ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದರು. ಬೆಡ್ ರೂಮಿನಲ್ಲಿ ಆಶಾಳ ಹೆಣ ಇತ್ತು. ಅರಳಿದ ಅವಳ ಕಣ್ಣಲ್ಲಿ ಭಯ ಮತ್ತು ಆಶ್ಚರ್ಯಗಳ ಮಿಶ್ರಿತ ಭಾವಗಳಿದ್ದವು. ಆಕೆಯ ಕೊರಳ ಮೇಲೆ ಕಾಣಿಸಿದ ಕಲೆಗಳಿಂದ ಅವಳ ಕತ್ತಿಗೆ ಹಗ್ಗ ಬಿಗಿದು ಕೊಂದಿರುವರೆಂದು ತಿಳಿಯುತ್ತಿತ್ತು. ಆಕೆಯ ಮೈಮೇಲಿನ ಒಡವೆಗಳೂ ಸೇರಿ ಕಬ್ಬಿಣದ ಪೆಟ್ಟಿಗೆಯೊಳಗಿನ ಹಣವೆಲ್ಲಾ ಚೋರೀಯಾಗಿತ್ತು.ಹಿತ್ತಲಬಾಗಿಲ ಚಿಲಕ ಬಿಚ್ಚಿತ್ತು. ಅಲ್ಲಿ ಅವರು ಸಾಕಿದ ನಾಯಿ ಸತ್ತು ಬಿದ್ದಿತ್ತು. ಅದರ ಪಕ್ಕದಲ್ಲಿ ಬಿಸ್ಕತ್ತುಗಳ ತುಂಡುಗಳು ಬಿದ್ದಿದ್ದವು. ಟೆಲಿಫೋನ್ ವೈರುಗಳೆಲ್ಲಾ ಕತ್ತರಿಸಲ್ಪಟ್ಟಿದ್ದವು.ಕೊಲೆನಡೆದ ವಿಧಾನ ನೋಡಿದರೇ ಖಂಡಿತವಾಗಿ ಇದು ಆ ಕಳ್ಳರ ತಂಡದ ಕೆಲಸಾನೇ ಅನಿಸುತ್ತಿತ್ತು.ಮೃತದೇಹವನ್ನು ಮೊದಲು ನೋಡಿದ ಮನೆ ಕೆಲಸದವಳು ಕಾಂತಂಳನ್ನು ವಿಚಾರಿಸಿದಾಗ ಕಣ್ಣೊರೆಸಿಕೊಳ್ಳುತ್ತಾ ತಾನು ನೋಡಿದ್ದೆಲ್ಲಾ ಹೇಳಿದ್ದಳು.“ ಎಂದಿನಹಾಗೇ ನಾನು ಆರುಗಂಟೆಗೆ ಮನೆಕೆಲಸಕ್ಕೆ ಬಂದೆ. ಹಿತ್ತಲಲ್ಲಿ ಸತ್ತು ಬಿದ್ದಿದ್ದ ನಾಯಿ ನೋಡಿ ಭಯವಾಯಿತು. ರಂಗನಾಥ್ ಅಯ್ಯರವರನ್ನು ಕರೆತಂದೆ. ಬಾಗಿಲು ತೆಗೆದಿದ್ದರಿಂದ ಇಬ್ಬರೂ ಒಳಗೆ ಹೋಗಿ ನೋಡಿದೆವು. ಬೆಡ್ ರೂಮಿನಲ್ಲಿ ಅಮ್ಮ ಹೀಗೆ ಕಂಡರು. ನಾನಂತೂ ಭಯದಿಂದ ನಡುಗಿಹೋದೆ. ಇವರು ತಕ್ಷಣ ಪೋಲಿಸರಿಗೆ ಫೋನ್ ಮಾಡಿದರು “ ಎಂದಳು.ರಂಗನಾಥ್ ರವರು ಪಕ್ಕದ ಮನೆಯವರು. ಅವರು ಕಾಂತಂ ಮಾತುಗಳಿಗೆ ಪುಷ್ಟಿ ಕೊಡುತ್ತಾ “ ನೆನ್ನೆ ರಾತ್ರಿ ಹತ್ತು ಗಂಟೆಗೆ ನಾನು ಮನೆಗೆ ಬರುವಾಗ ರಾಜೇಶ್ ಕಾರಿನಲ್ಲಿ ಹೋಗ್ತಾ ಎದುರಾದರು. ನಾಳೆ ಹೈದರಾಬಾದಿನಲ್ಲಿ ನಡೆಯಲಿರುವ ಯಾವುದೋ ಹಳೇ ಕಾರುಗಳ ಲಿಲಾಮಿನಲ್ಲಿ ಭಾಗವಹಿಸಬೇಕು ಅಂತ ಹೇಳಿದರು. ಅವರು ಹೀಗೆ ತುಂಬಾಸರ್ತಿ ಹೈದರಾಬಾದ್ ಗೆ ಹೋಗ್ತಿರ್ತಾರೆ. ಅಲ್ಲ್ಲಿ ಪ್ಯಾರಡೈಜ್ ಲಾಡ್ಜಿನಲ್ಲಿ ಇಳ್ಕೊತಾರೆ. ಆ ಲಾಡ್ಜ್ ನ ಫೋನ್ ನಂಬರ್ ನನ್ನ ಹತ್ತಿರವಿದೆ. ಇಷ್ಟಕ್ಕೂ ಮುಂಚೆ ಎಸ್ಸೈನವರು ಅಲ್ಲಿಗೆ ಫೋನ್ ಮಾಡಿ ರಾಜೇಶ್ ಜೊತೆಗೆ ಮಾತಾಡಿದಾರೆ. ಅವರು ತಕ್ಷಣ ಹೊರಟಿದ್ದಾರೆ ಇಲ್ಲಿಗೆ ಬರಲು “ ಅಂದರು. “ ನೆನ್ನೆ ಅರ್ಧರಾತ್ರಿಯ ನಂತರ ನಿಮಗೆ ಈ ಮನೆಯಿಂದ ಏನಾದ್ರೂ ಶಬ್ದಗಳು, ಕೂಗಾಟ ಕೇಳಿಬಂತಾ ?” ಅಂತ ಕೇಳಿದೆ.“ ಇಲ್ಲ ಸಾರ್ ! ಆದರೇ ನಮ್ಮಿಬ್ಬರ ಮನೆಗಳಿಗೆ ತುಂಬಾ ದೂರವಿದೆ. ಶಬ್ದಗಳೆಲ್ಲ ಕೇಳಿಬರೋ ಅವಕಾಶ ಕಮ್ಮಿ “ ಎಂದರು ರಂಗನಾಥ್.ಪಂಚನಾಮೆ ಮುಗಿದನಂತರ ಹೆಣವನ್ನ ಮಾರ್ಚುರಿಗೆ ಕಳಿಸಿದೆ. ನಂತರ ನಂಗೊಂದು ಆಲೋಚನೆ ಬಂತು. ನೆನ್ನೆ ರಾತ್ರಿ ಆಶಾ ಒಬ್ಬಂಟಿಗಳಾಗಿದ್ದಾಳೆಂದು ಕಳ್ಳರಿಗೆ ಹೇಗೆ ಗೊತ್ತಾಯಿತು ? ಸಾಧಾರಣವಾಗಿ ಕಳ್ಳರಿಗೆ ಇಂಥ ಮಾಹಿತಿ ಸಿಗುವುದು ಮನೆ ಕೆಲಸದವರಿಂದಲೇ. ಅದಕ್ಕೆ ನಾನು ಕಾಂತಂಳ ಮೇಲೆ ನಿಗಾ ಇರಿಸಲು ಹೇಳಿದೆ.ಸಂಜೆ ಹೈದರಾಬಾದ್ ನಿಂದ ತಿರುಗಿಬಂದ ರಾಜೇಶ್ ಹೆಂಡತಿಯ ಹೆಣ ನೋಡಿ ಬಿಕ್ಕಿ ಬಿಕ್ಕಿ ಅತ್ತ. “ ನನ್ನ ಹೆಂಡತಿಗೆ ಕಳ್ಳರನ್ನು ಎದುರಿಸೋಷ್ಟು ಧೈರ್ಯವಿರಲಿಲ್ಲ. ಆದರೂ ಕಳ್ಳ್ರು ಅವಳನ್ನೇಕೆ ಕೊಂದರೋ ಅರ್ಥವಾಗುವುದಿಲ್ಲ.” ಅಂತ ಗೋಳಿಟ್ಟ.“ಆಶಾ ಅವರ ಮುಖಗಳನ್ನು ನೋಡಿರ್ತಾಳೆ. ಸಾಕ್ಷ್ಯವಿರಬಾರದೆಂದು ಅವಳನ್ನ ಮುಗಿಸಿದಾರೆ “ ಅಂತ ನಾನಂದೆ. ನಂತರ

ತಕ್ಕ ಪಾಠ Read Post »

ಅನುವಾದ

ಹೃದಯ ಭಾಷೆ

ಅನುವಾದಿತ ಕಥೆ ಹೃದಯ ಭಾಷೆ ತೆಲುಗು ಮೂಲ: ಕಳ್ಳೆ ವೆಂಕಟೇಶ್ವರ ಶಾಸ್ತ್ರಿ                               ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು ಬೆಳೆಗ್ಗೆ ಐದು ಗಂಟೆಗೆ ಆತ ತನ್ನ ಫ್ಲಾಟಿನಿಂದ ಹೊರಗಡೆ ಬಂದ. ಆತನ ಫ್ಲಾಟ್ ತುಂಬಾ ಚಿಕ್ಕದು. ಗ್ರೌಂಡ್ ಫ್ಲೋರ್ ನಲ್ಲಿತ್ತು. ಒಂದು ಹಾಲು, ಒಂದು ಮಲಗುವ ಕೋಣೆ, ಅಡುಗೆಮನೆ, ಬಾತ್ರೂಮ್ ಕಮ್ ಟಾಯ್ಲೆಟ್ ಇವು ಅದರ ಭಾಗಗಳು. ಬಾಗಿಲು ಮುಚ್ಚಿ, ಚಿಲಕವಿಟ್ಟು ಅದಕ್ಕೆ ಬೀಗ ಹಾಕಿದ. ಹೊರಗಡೆ ಇನ್ನೂ ಕತ್ತಲಿತ್ತು. ಬೆತ್ತದ ಆಸರೆಯಿಂದ ಸದ್ದಿಲ್ಲದೇ ಬೇಗಬೇಗ ನಡೆಯುತ್ತಿದ್ದ. ಆತನ ಹೆಗಲಿಗೆ ಕ್ಯಾನ್ವಾಸಿನ ಹೆಗಲು ಚೀಲ ನೇತಾಡುತ್ತಿತ್ತು. ಆತನ ಹೆಸರೇನು ಅಂತ ಅಲ್ಲಿರುವವರಿಗೆ ಗೊತ್ತಿರಲಿಲ್ಲ. ಆ ಫ್ಲಾಟ್ ಆತನ ಸ್ವಂತದ್ದೇ. ಹಾಗಾದರೇ, ಆತನನ್ನು ಏನಂತ ಕರೆಯುತ್ತಾರೆ ? ಆತನನ್ನು ಯಾರೂ ಕರೆಯುವುದಿಲ್ಲ. ಇನ್ನೂ ಹೇಳಬೇಕಾದರೆ ಆತನ ಬಗ್ಗೆ ಯಾರೂ ಚರ್ಚಿಸುವುದಿಲ್ಲ. ಇನ್ನುವರೆಗೂ ಆತನನ್ನು ಕರೆಯುವ ಅಗತ್ಯವೇ ಬಿದ್ದಿರಲಿಲ್ಲ ಅಲ್ಲಿ ವಾಸಿಸುವವರಿಗೆ. ಆತನ ವಯಸ್ಸು ಹೆಚ್ಚುಕಡಿಮೆ ಅರವತ್ತು ದಾಟಿ ಎಪ್ಪತ್ತರ ಒಳಗೆ ಇರಬಹುದು. ಆ ವಯಸ್ಸಿಗೆ ತಕ್ಕ ಹಾಗೆ, ಅತಿ ಸಾಧಾರಣವಾಗೇ ಇರುತ್ತಾನೆ ಆತ. ಆದರೇ…. ಯಾವಾಗಲೂ ಒಂದೇ ತರ ಇರುವುದಿಲ್ಲ . ಸ್ವಲ್ಪ ದಿವಸ ಮೀಸೆ ಇಟ್ಟಿದ್ದರೆ, ಮತ್ತೆ ಕೆಲದಿನ ತೆಗೆದಿರುತ್ತಾನೆ. ಒಂದು ದಿನ ಬೋಳಉತಲೆಯೊಂದಿಗೆ ಪ್ರತ್ಯಕ್ಷವಾದರೆ, ಮತ್ತೆ ಕೆಲ ದಿನ ಉದ್ದ ಕೂದಲಿನ ಸಾಧುವಿನ ತರ ಕಾಣಿಸಿಕೊಳ್ಳುತ್ತಾನೆ. ಆತನ ದಿರಿಸು ಬಹು ವಿಚಿತ್ರ. ಪೈಜಾಮಾ, ಜುಬ್ಬಾ ಧರಿಸಿದ್ದು, ತಲೆಗೆ ವಿದೇಶೀ ಟೋಪಿ ಇಡುತ್ತಾನೆ. ಒಮ್ಮೊಮ್ಮೆ ಪಂಚೆ ಉಟ್ಟು, ಮೇಲೆ ಶಲ್ಯ ಹಾಕಿ ತಿರುಗುತ್ತಾನೆ. ಮತ್ತೊಮ್ಮೆ ಯಾವುದೋ ನಾಮ ಹಣೆಯಮೇಲೆ ಧರಿಸಿರುತ್ತಾನೆ. ಸರಿ….. ಈಗ ಆತ ಎತ್ತ ಹೋಗುತ್ತಿದ್ದಾನೆ ? ನೇರ ಪಾರ್ಕಿನ ಕಡೆಗೆ ಹೋಗುತ್ತಿದ್ದಾನೆ. ಆ ದಾರಿಯಲ್ಲಿ ಆತನನ್ನು ನೋಡಿ ಬೊಗಳಲು ನಾಯಿಗಳಿಲ್ಲ. ಎಲ್ಲವನ್ನು ಮುನಿಸಿಪಾಲಿಟಿಯವರು ಎಲ್ಲೋ ಸಾಗಿಸಿದ್ದಾರೆ. ಆದರೆ ಅದು ಆತನ ದೂರುಗಳಿಂದಲೇ ಆದದ್ದು ಎಂದು ಅವರಿಗೆ ಗೊತ್ತಿಲ್ಲ. ಇದೋ…. ದಿನಾ ಬೆಳಗ್ಗೆ ಪತ್ರಿಕೆ ಹಾಕುವ ಹುಡುಗರು ವೇಗವಾಗಿ ಸೈಕಲ್ ತುಳಿಯುತ್ತ ಬರುತ್ತಿದ್ದಾರೆ. “ ಇವರುಗಳೆಲ್ಲ ಕನ್ನಡಿಗಳನ್ನು ತೊಗೊಂಡು ಹೋಗುತ್ತಿದ್ದಾರೆ. ಕನ್ನಡಿಯೊಳಗೆ ನೋಡಿಕೊಳ್ಳದಿದ್ದರೆ ಜನರಿಗೆ ಏನೂ ಅರ್ಥವಾಗುವುದಿಲ್ಲ, ಪಾಪ “ ಅಂದುಕೊಂಡ ಆತ. ಆತ ಅಷ್ಟೇ….. ದಿನಪತ್ರಿಕೆಯನ್ನು ’ ಕನ್ನಡಿ’ ಅಂತ ಕರೆಯುತ್ತಾನೆ. ಜನಗಳ ಮನೋಭಾವಗಳಿಗೆ ಕನ್ನಡಿ ಹಿಡಿಯುವುದು ಮತ್ತು ಜಗತ್ತಿನಲ್ಲಿ ನಡೆಯುವ ವಿಚಿತ್ರ ಘಟನೆಗಳನ್ನು ಕನ್ನಡಿಯಂತೆ ತೋರಿಸುವುದು ದಿನಪತ್ರಿಕೆಗಳೇ ಆದ ಕಾರಣ ಆತ ಅವುಗಳಿಗೆ ಆ ಹೆಸರು ಇಟ್ಟುಕೊಂಡಿದ್ದಾನೆ. ಆತನ ವ್ಯವಹಾರವೇ ಅಷ್ಟು ! ಎಲ್ಲಾ ಸಂಕೇತ ಭಾಷೆಯಲ್ಲಿರುತ್ತೆ. ಆತ ಬರೆದಿಟ್ಟುಕೊಳ್ಳುವ ದಿನಚರಿ ಸಹ ಅದೇ ಭಾಷೆಯಲ್ಲಿರುತ್ತದೆ. ಈ ಅಭ್ಯಾಸ ಆತನಿಗೆ ಹೇಗೆ ಬಂತೋ ಯಾರಿಗೂ ಗೊತ್ತಿಲ್ಲ. ಆತ ಸಂದಿಗಳಲ್ಲಿ ನಡೆಯುವುದಿಲ್ಲ. ಮುಖ್ಯರಸ್ತೆಯ ಮೇಲೇನೇ. ಅದೂ ಸಹ ಮಾರ್ನಿಂಗ್ ವಾಕ್ ಮತ್ತು ಜಾಗಿಂಗ್ ಗಳ ಸಮ್ಮಿಶ್ರಣವಾಗಿರುತ್ತೆ. ಆತ ಹೀಗೆ ಎಷ್ಟು ದಿನಳಿಂದ ಅಥವಾ ಎಷ್ಟು ವರ್ಷಗಳಿಂದ ಮಾಡುತ್ತಿದ್ದಾನೋ ಯಾರಿಗೂ ಗೊತ್ತಿಲ್ಲ. ಇದೀಗ ಆ ಮಸೀದಿ ಪಕ್ಕದ ಮುಖ್ಯರಸ್ತೆಯ ಮೇಲಿನ ಕಾಫೀ ಹೋಟಲ್ ತೆಗೀತಿದ್ದಾರೆ. ಅದೋ ತೆಗೆದರು…..! “ ಹೌದು. ಕಷಾಯ ಕುಡಿದು ತುಂಬಾ ದಿನ ಆಯ್ತು. ನಡಿ. ಅಂತರಾತ್ಮಕ್ಕೆ ಹೋಗಿ ಸ್ವಲ್ಪ ಗಂಟಲಿಗೆ ಹಾಕೋಣ.” ಅಂತ ಹೇಳಿತು ಅವನ ಒಳ ಮನಸ್ಸು. ಅಂತರಾತ್ಮ… ಇದು ಆತ ಹೊಟೆಲಿಗೆ ಇಟ್ಟುಕೊಂಡ ಹೆಸರು….. ಅದರಲ್ಲಿ ಹೋಗಿ ಕೂತ. ಮಾಣಿ ಬಂದ ತಕ್ಷಣ “ ಕಷಾಯ” ಅಂದ. ಅವನಿಗೆ ಕನ್ನಡ ಬರುವುದಿಲ್ಲ. ಏನು ? ಎನ್ನುವ ಹಾಗೆ ಕೈಯಿಂದ ಸನ್ನೆ ಮಾಡ್ದ. ಆತ ಗೋಡೆಯ ಮೇಲಿದ್ದ ಪದಾರ್ಥಗಳ ಪಟ್ಟಿಯ ಬಳಿಗೆ ಹೋಗಿ ಕಾಫಿ ಅಂತ ಇದ್ದ ಕಡೆಗೆ ಬೆಟ್ಟು ಮಾಡಿ ತೋರಿಸಿದ. “ ಓಹೋ ! ಕಾಫೀ ಕ್ಯಾ….” ಅಂತ ತನ್ನಲ್ಲೇ ನಗೆಯಾಡುತ್ತ ಹೋದ ಅವನು. ಕಾಫಿ ಕುಡಿದ ಮೇಲೆ “ ಕವಡೆ ” ಕೊಟ್ಟು ಹೊರಬಂದ. ಕವಡೆ ಎಂದರೆ ದುಡ್ಡು… ಕಿಸೆಯಲ್ಲಿ ಕವಡೆ ಕಾಸಿಲ್ಲ ಅಂತಾರಲ್ಲ…. ಅದಕ್ಕೆ ದುಡ್ಡಿಗೆ ಕವಡೆ ಅಂತ ಹೆಸರಿಟ್ಟುಕೊಂಡಿದ್ದಾನೆ ಆತ. ಮತ್ತೆ ನಡೆಯಲು ಮೊದಲಿಟ್ಟ .  ಕೆಲ ಯುವಕರು ಟೀ ಷರ್ಟ್ ಮತ್ತು ಷಾರ್ಟ್ ಧರಿಸಿ ಜಾಗಿಂಗ್ ಗೆ ಬರುತ್ತಿದ್ದರು. ತನ್ನಲ್ಲೇ ನಕ್ಕ ಆತ. ಯಾಕೆ ಅಂತ ಅವನಿಗೂ ಗೊತ್ತಿಲ್ಲ. ಬಹುಶಃ ಒಂದು ಕಾಲದಲ್ಲಿ ತಾನು ಸಹ ಇದೇ ರೀತಿ ಯೌವನದಲ್ಲಿ ತುಂಬಿ ತುಳುಕುತ್ತಾ ಹೋರಿಯ ತರ ಓಡುತ್ತಿದ್ದ, ಈಗ ’ ನೆರಳು ’ ಬಿದ್ದು ತನಗೆ ಸಾಧ್ಯವಾಗುತ್ತಿಲ್ಲ ಎನ್ನುವ ಭಾವ ವಿರಬಹುದು. ನೀವೆಲ್ಲರೂ ನಾಳೆ ಇದೇ ’ ನೆರಳು’ ನಿಮ್ಮಮೇಲೆ ಬೀಳುವಾಗ ನನ್ನ ಹಾಗೆ ಆಗುತ್ತೀರಿ ಎನ್ನುವ ಇನ್ನೊಂದು ಭಾವ ಸಹ ಇರಬಹುದು. ನೆರಳು ಎಂದರೆ ಮುಪ್ಪು ಅಂತ ಅವನರ್ಥ. ಪಾರ್ಕಿನೊಳಗೆ ಕಾಲಿಟ್ಟ. ಒಳಗೆ ಎಂಥಾ ಒಳ್ಳೆ ಸಂಗೀತ ! ಪಾರ್ಕಿನಲ್ಲಿ….. ಆ ಸಮಯದಲ್ಲಿ ಸಂಗೀತನಾ… ಅಂತ ನೀವು ಕೇಳಬಹುದು. ಪ್ರಶಾಂತತೆಗೆ ಆತನ ನಿಘಂಟುವಿನಲ್ಲಿಯ ಹೆಸರು ಸಂಗೀತ…… ಪ್ರಶಾಂತತೆಗಿಂತ ಮಿಗಿಲಾದ ಇಂಪಾದ ಸಂಗೀತ ಬೇರೇ ಇರಲಾರದು ಅಂತ ಆತನ ಅಚಲ ನಂಬಿಕೆ. ಹೂಗಿಡಗಳ ನಡುವೆ ಹಾಕಿದ ಬಂಡೆಗಳ ಮೇಲೆ ನಡೆಯುತ್ತಿದ್ದ. ಪಕ್ಕಕ್ಕೆ ನೋಡುತ್ತಾ “ ಈ ಹುಡುಗೀರು ಇನ್ನೂ ಏಳ್ಳಿಲ್ಲ ಅಂತ ಕಾಣತ್ತೆ….. ಮಲ್ಕೊಳ್ಳಿ.  ನಿದ್ರೆಮಾಡಿ.  ಸೊಗಸಾದ ಕನಸು ಕಾಣಿರಿ ಹಾಯಾಗಿ…. ನನ್ನ ಮುದ್ದು ಹುಡುಗಿಯರೇ “ ಅಂದ. ಹೌದು. ಮತ್ತೆ……ಆ ರಸಿಕನ ಹೃದಯದ ಭಾಷೆಯ ಪ್ರಕಾರ ಹೂಗಳು ಮತ್ತು ಹುಡುಗಿಯರೂ ಒಂದೇ….. ಹಾಗಾದರೆ ಹುಡುಗಿಯರಿಗೆ ಏನು ಹೆಸರಿಟ್ಟಿದ್ದಾನೋ ಅಂತ ನಿಮಗೆ ಸಂದೇಹವಾಗಬಹುದು ಅಲ್ಲವೇ ! ಅದೋ ನೋಡಿ…. ಸ್ವಲ್ಪ ದೂರದಲ್ಲಿ ಇಬ್ಬರು ಹುಡುಗೀರು ಸ್ಕಿಪ್ಪಿಂಗ್ ಮಾಡ್ತಾ ಇದ್ದರು. “ ಹಾಯ್ ಚಾಕ್ಲೆಟ್ಸ್ “ ಅಂತ ಸಂಬೋಧಿಸಿದ. ಅವರು ಸಣ್ಣಗೆ ನಕ್ಕರು. ಹುಡುಗೀರಿಗೆ ಚಾಕ್ಲೆಟ್ ಗಳೆಂದರೆ ಇಷ್ಟ ಅಲ್ಲವಾ ! ಅದಕ್ಕೆ ಅವರಿಗೆ ಆ ಹೆಸರು. ಅಲ್ಲಿಗೆ ಆತನಿಗೆ ನಡೆದು ನಡೆದು ಸಾಕಾಯಿತು. ಕಾಲು ಹರಿಯುತ್ತಿದೆ ಎನಿಸಿತು. ಒಂದು ಮಂಚದ ಮೇಲೆ ಕುಳಿತುಕೊಂಡ…. ಪಾರ್ಕಿನಲ್ಲಿಯ ಕಲ್ಲಿನ ಸೋಫಾಗಳೆಲ್ಲಾ ಆತನಿಗೆ ಮಂಚಗಳೇ. ಕಣ್ಣು ಮುಚ್ಚಿ ಸ್ವಲ್ಪ ಹೊತ್ತು ಧ್ಯಾನದಲ್ಲಿ ಮಗ್ನನಾದ. ಸಮಯ ಆರುಗಂಟೆಯಾಯಿತು. ಬೆಳಕಿನ ಕಿರಣಗಳು ಜಗತ್ತನ್ನು ಬೆಳಗಲು ಶುರುಮಾಡಿದ್ದವು. ಹತ್ತು ನಿಮಿಷದ ನಂತರ ಕಣ್ಣು ಬಿಟ್ಟು ಅಲ್ಲಿಂದ ಎದ್ದ. ಮತ್ತೆ ನಡಿಗೆ. ತೋಟದಲ್ಲಿ ಸುತ್ತಾಡುತ್ತಾ ಯಾವುದೋ ಹಾಡು ಹಾಡಿಕೊಳ್ಳುತ್ತಿದ್ದ. ಆತನ ಪಕ್ಕಕ್ಕೆ ನಡೆಯುತ್ತಿದ್ದ ಐವತ್ತರ ಪ್ರಾಯದ  ಹೆಂಗಸು ಆತನ ರಾಗವನ್ನು ಉತ್ಸುಕತೆಯಿಂದ ಆಲಿಸಿದಳು. ಏನೂ ಅರ್ಥವಾಗಲಿಲ್ಲ. ಯಾವುದೋ ಹಳೆಯ ಹಾಡಿನ ಅಣಕ ಅದು. ಆದರೇ ಪದಗಳು ಅರ್ಥವಾದಹಾಗೆ ಅನಿಸಲಿಲ್ಲ. ಅದು ಆತನ ಸಂಕೇತ ಭಾಷೆಯಲ್ಲಿತ್ತು. ಮೆಲ್ಲಗೆ ತನ್ನಲ್ಲಿ ತಾನೇ ನಕ್ಕು, ಸರಸರಾ ಆತನನ್ನ ದಾಟಿ ಹೋದಳು. ಸೌಂದರ್ಯ ಬೆಣ್ಣೆಯಹಾಗೆ… ಕರಗಿಹೋಗುತ್ತಿರುತ್ತೆ. ಆದರೆ ಆನಂದ ಪಾಯಸದ ತರ ಒಂದು ದಿವ್ಯ ಅನುಭವ. ಜೀವನ ಒಂದು ಪ್ರವಾಹ. ಇವೆಲ್ಲ ಸೇರಿಸಿ ಹಾಡಿದ ಅಣಕ ಹಾಡು ಯಾರಿಗೆ ತಾನೇ ಅರ್ಥವಾದೀತು ? ಬೆಳ್ಳನೆ ಬೆಳಗಾಯಿತು. ಚುರುಕಾಗಿ ನಡೆಯುತ್ತಿದ್ದ ಆತ ಒಂದು ಕ್ಷಣ ಶಾಕ್ ಹೊಡೆದವರ ಹಾಗೆ ಎದೆಯ ಮೇಲೆ ಕೈಯಿಟ್ಟುಕೊಂಡು ಕಲ್ಲಿನ ತರ ಹಾಗೇ ನಿಂತು ಬಿಟ್ಟ. ಎದೆಗೆ ಯಾರೋ ಮೊನಚಾದ ಭರ್ಜಿಯಿಂದಿ ತಿವಿದಹಾಗೆ ಅನಿಸಿತು. ಆತನಿಗೆ ಹೃದಯಾಘಾತವಾಗಿತ್ತು. ಅದು ಆತನಿಗೆ ಮೊದಲನೆಯಸಲ ಅನುಭವಕ್ಕೆ ಬಂದಿತ್ತು. ಹಣೆಯ ಮೇಲೆ ಬೆವರು ಮಡುಗಟ್ಟಿತು. ಮೈಯಲ್ಲೆಲ್ಲಾ ಛಳುಕು ಬಂದಂತಾಯಿತು. ದೇಹ ಬೆಂಡಾಗುತ್ತಿತ್ತು. ನೆಲಕ್ಕೆ ಕುಸಿದ. ಯಾರೋ ಆತನ ಮುಖಕ್ಕೆ ನೀರು ಚೆಲ್ಲಿ, ಎಬ್ಬಿಸಿ ಕೂರಿಸಿದರು. ಕಣ್ಣು ತೆಗೆದು ನೋಡಿ ಎದುರಲ್ಲಿ ಕಂಡ ಮಧ್ಯವಯಸ್ಸಿನ ವ್ಯಕ್ತಿಯನ್ನೊಮ್ಮೆ ಕೃತಜ್ಞತೆಯಿಂದ ನೋಡಿದ. “ ಧಾರೆ….ಧಾರೆ…. “ ಎಂದ. “ಏನಂದ್ರಿ ?” ಆ ಉಪಕಾರಿ ಕೇಳಿದ. ಅವನ ಕೈಲಿದ್ದ ಬಾಟಲಿಯ ಕಡೆಗೆ ನೋಡುತ್ತಾ ಆತ “ ಧಾರೆ “ ಎಂದ. ಅರ್ಥ ಮಾಡಿಕೊಂಡವನ ಹಾಗೆ ಅವನು ಆ ಬಾಟಲ್ ಎತ್ತಿ ನೀರು ಕುಡಿಸಿದ. ಗುಟುಕು ಹಾಕುತ್ತಾ ಕುಡಿದು ಚೇತರಿಸಿಕೊಂಡ. ತನ್ನ ಪ್ರಾಣ ಉಳಿಸಿದವನಿಗೆ ಕೈಯೆತ್ತಿ ನಮಸ್ಕರಿಸುತ್ತಾ “ ರತ್ನಗಳು “ ಎಂದ. ಕೃತಜ್ಞತೆಗಳು ರತ್ನದ ಹಾಗೆ ಅಂತ ಅವನಿಗೆ ಗೊತ್ತಾಗದೇ ಈತನನ್ನ ಹುಚ್ಚನನ್ನ ನೋಡುವ ಹಾಗೆ ನೋಡಿ ನಕ್ಕ ಅವನು. ನಮ್ಮ ಕತೆಯ ನಾಯಕ ತನ್ನ ಬೆತ್ತದ ಸಹಾಯದಿಂದ ಮೇಲೆದ್ದ. ಆ ಹೊಸಬ ಮುಂದಕ್ಕೆ ಸಾಗಿದ. ಮತ್ತೆ ನಡೆಯಲು ಮೊದಲು ಮಾಡಿದ. ಆದರೆ ತುಂಬಾ ಹೊತ್ತು ನಡೆಯಲಾಗಲಿಲ್ಲ ಆತನಿಗೆ. ಒಂದು ಆಟೋ ನಿಲ್ಲಿಸಿ, ಹತ್ತಿ “ ನಡೆ ” ಎನ್ನುವ ಹಾಗೆ ಸನ್ನೆ ಮಾಡಿದ. “ ಎಲ್ಲಿಗೆ ?” ತನ್ನ ಕಿಸೆಯಿಂದ ಒಂದು ವಿಜಿಟಿಂಗ್ ಕಾರ್ಡ್ ತೆಗೆದು ಅವನಿಗೆ ತೋರಿಸಿದ. ಅದರಲ್ಲಿ ಆತನ ಹೆಸರಿಲ್ಲ. ಅದು ನೀಲಿಮಾ ಟವರ್ಸಿನ ವಿಳಾಸವಿರುವ ಕಾರ್ಡ್. ಅದರ ಮೇಲಿನ ಒಂದು ಮೂಲೆಯಲ್ಲಿ ಪೆನ್ನಿನಿಂದ ೧೦೧ ಅಂತ ಬರೆದಿತ್ತು. ಹತ್ತು ನಿಮಿಷಗಳಲ್ಲಿ ಆಟೋ ಅಪಾರ್ಟ್ ಮೆಂಟಿನ ಮುಂದೆ ನಿಲ್ಲುತ್ತಲೇ, ಆತ ಹಣ ಕೊಟ್ಟು ತನ ಮನೆಗೆ ನಡೆದ. ಒಳಗೆ ಹೋಗಬೇಕೆನ್ನುವಷ್ಟರಲ್ಲಿ ಏನೋ ನೆನಪಾಗಿ ಹಿಂತಿರುಗಿದ. ಅಲ್ಲಿಗೆ ಸ್ವಲ್ಪ ದೂರದಲ್ಲಿದ್ದ ಟೀ ಹೋಟಲ್ ಕಡೆಗೆ ನಡೆದ. ಅದರ ಪಕ್ಕಕ್ಕೆ ಒಂದು ಟೆಲಿಫೋನ್ ಬೂತ್ ಇತ್ತು. ಗಾಜಿನ ಬಾಗಿಲು ತೆಗೆದು ಅದರಲ್ಲಿ ಹೋಗಿ ಕೂತ. ಮೈ ದಣಿವಿನಂದ ನಡುಗುತ್ತಿತ್ತು. ಕಿಸಿಗೆ ಕೈಹಾಕಿ ಯಾವುದೋ ಕಾಗದ ಹೊರಗೆ ತೆಗೆದ. ಅದರಲ್ಲಿಯ ಯಾವುದೋ ಫೋನ್ ನಂಬರ್ ನೋಡಿ ಅದನ್ನ ಅಲ್ಲಿ ಕುಳಿತಿದ್ದ ಹುಡುಗಿಗೆ ತೋರಿಸಿದ. ಆ ಹುಡುಗಿ ಆ ನಂಬರ್ ನ ತನ್ನ ಹತ್ತಿರವಿದ್ದ ಕಾಗದದ ಮೇಲೆ ಬರೆದುಕೊಂಡಳು. ಆತ ಏನೋ ನೆನಪಿಸಿಕೊಳ್ಳುವ ಹಾಗೆ ಪ್ರಯತ್ನಿಸಿದ. ಸಾಧ್ಯವಾಗಲಿಲ್ಲ ಅಂತ ಕಂಡಿತು. ತನ್ನ ಕಿಸೆಯಲ್ಲಿಯ ವಿಜಿಟಿಂಗ್ ಕಾರ್ಡ್ ತೆಗೆದು ಅವಳಿಗೆ ಕೊಟ್ಟು “ ಈ ವಿಳಾಸಕ್ಕೆ ಒಂಬತ್ತು ಗಂಟೆಗೆ ಬರಲಿಕ್ಕೆ ಹೇಳು” ಎನ್ನುವ ಹಾಗೆ ಸನ್ನೆ ಮಾಡಿದ. ಅವಳಿಗೆ ಅರ್ಥವಾಯಿತು. ಫೋನ್ ರಿಂಗಾಗುತ್ತಿತ್ತು. ನಿಮಿಷದ ನಂತರ “ ಹಲೋ “ ಎಂದಳು ಆ ಹುಡುಗಿ. ಆತ ಅವಳ ಕಡೆಗೇ ನೋಡುತ್ತಿದ್ದ. “ ಹಲೋ….. ಈ ನಂಬರ್ ಯಾರದು ಸರ್.  ಲಾಯರ್ ಪರಮಹಂಸ ಅವರದಾ ? ಇಲ್ಲಿ ನೀಲಿಮ ಟವರ್ಸಿನ  ೧೦೧ ನೇ ಫ್ಲಾಟಿನ ಯಾರೋ ಹಿರಿಯರು ಫೋನ್ ಮಾಡ್ತಾ ಇದಾರೆ. ನಿಮ್ಮನ್ನ ಅವರ ಮನೆಗೆ ಒಂಬತ್ತು ಗಂಟೆಗೆ ಬರಲು ಹೇಳ್ತಾ ಇದ್ದಾರೆ “ ಆಕಡೆಯಿಂದ “ ಆಯಿತು” ಅಂತ ಕೇಳಿಸುತ್ತಲೇ ಫೋನ್ ಇಟ್ಟು “ ಬರ್ತಾರಂತೆ” ಎಂದಳು. ಆತ ಹಣ ಆಕೆಯ ಕೈಯಲ್ಲಿಟ್ಟು “ ರತ್ನಗಳು, ವಜ್ರಗಳು “ ಅಂತ ಹೇಳಿ ಹೊರಬಂದ. ಆ ಹುಡುಗಿ ಸ್ವಲ್ಪ ವಿಚಿತ್ರವಾಗಿ, ಸ್ವಲ್ಪ ಭಯದಿಂದ, ಸ್ವಲ್ಪ ಮುಜುಗರದಿಂದ, ಆಸಕ್ತಿಯಿಂದ ನೋಡುತ್ತಲೇ ಇದ್ದಳು. ಆತ ಮನೆ ಸೇರಿ ಬೀಗ ತೆಗೆದು ಒಳಗೆ ಹೋಗಿ ಬಾಗಿಲು ಹಾಕಿಕೊಂಡ. ಲಾಯರ್ ತಪ್ಪದೇ ಬರುತ್ತಾರೆಂದು ಆತನಿಗೆ ಗೊತ್ತು. ಆತನಿಗೀಗ ನಿಜವಾಗ್ಲೂ ಆತಂಕ ಹೆಚ್ಚಿತ್ತು. ತನಗೆ ಮೊದಲನೆಯ

ಹೃದಯ ಭಾಷೆ Read Post »

ಅನುವಾದ

ಅನುವಾದಿತಕವಿತೆ ನನ್ನ ಗಾಂಧಿ ಕನ್ನಡಕ್ಕೆ: ಶೈಲಜಾ ಬಿ. ಇಂಗ್ಲೀಷಿಗೆ: ಸಮತಾ ಆರ್. ನನ್ನ ಗಾಂಧಿ ಬೋಳು ತಲೆ ಕಣ್ಣಲ್ಲಿ ಚಾಳೀಸುಕೈಯಲ್ಲಿ ಕೋಲುಮುಖದಲೊಂದು ಮಾಗಿದ ನಗೆಯಗಾಂಧಿ ನನ್ನೊಳಗೆ ನೀನುತಾತನಾಗಿ ಹುಟ್ಟಿದೆ ಹೆಡ್ ಮಾಸ್ತರರ ಕೋಣೆಯಗೋಡೆಯ ಮೇಲೆಪೋಟೋದಲ್ಲಿ ನೀನಿದ್ದೆವರುಷದಲ್ಲಿ ಮೂರು ಬಾರಿನನ್ನ ಕೈಗೂ ನಿಲುಕಿಚೌಕಟ್ಟು ತಿಕ್ಕಿ ಗಾಜು ಒರೆಸಿಹೂಮಾಲೆ ಹಾಕಿ ಜೈಕಾರ ಕೂಗಿಲಡ್ಡು ತಿನ್ನುವಾಗಬಾಯಿ ತುಂಬ ಸಿಹಿಮನದಲ್ಲಿ ಖುಷಿ ಬೆಳೆದಂತೆ ನಾನು ನೀನೂ ಬೆಳೆದೆತಾತ ಮಹಾತ್ಮನಾದೆಸರಳ ಸತ್ಯ ಅಹಿಂಸೆಗಳಸಾಕಾರ ಮೂರ್ತಿಯಾದೆಬೆಳಕಾದೆ ಧಮನಿಯಲಿ ಬಿಸುಪುಮನದಲ್ಲಿ ಹುರುಪುತುಂಬಿದ್ದ ಕಾಲದಲಿಹೊನಲಿಗೆದುರು ಈಜುವ ಕನಸಿತ್ತುಕಂಗಳಲಿ ನಿನ್ನ ಬಿಂಬವಿತ್ತು ನಿನ್ನ ಹಾಗೆ ಚಾಳೀಸುನನಗೂ ಬಂದಿದೆ ಈಗಕಚೇರಿಯ ನನ್ನ ಕುರ್ಚಿಯ ಹಿಂದೆನಿನ್ನ ಪಟ ತೂಗು ಹಾಕಿರುವೆ ಕಣ್ಣಾಡಿಸುವೆ ಹೆಣ್ಣಿನ ಮೇಲೆರಿಗಿದರಕ್ಕಸರ ಎಫ್ ಐ ಆರ್ಪ್ರತಿಗಳ ಮೇಲೆಪಾನಮತ್ತ ಪಿಶಾಚಿ ಪತಿಯಕತೆ ಹೇಳುವ ಡಿ ಐ ಆರ್ ನಪುಟಗಳ ಮೇಲೆಹತ್ತಿಕ್ಕುವೆ ಎದೆಯೊಳಗೆಭುಗಿಲೇಳುವ ಹೊನಲಅದು ಪಾದಮಸ್ತಕಾದಿಯಾಗಿ ಹರಿದುಪೆನ್ನಿನ ತುದಿಯಲ್ಲಿ ಸ್ತಬ್ದವಾಗುವುದು ಬಾಪೂ ನಿನ್ನ ಚರಿತೆಅರಿವುದೆಷ್ಟು ಸುಖವೋಆ ಹಾದಿಯ ತುಳಿವಸುಖವೂ ನನ್ನೀ ಆತ್ಮಕ್ಕಿರಲಿ My Gandhi.. Bald head,spectacled eyes,A stick in hands,A smile on ur wrinkled face,Gandhi you were born as aGrandpa in me. You were in a photoOn a wall of the chamberOf our headmaster.Even I could reach youThrice in a year. When we were eating a ladduAfter scrubbing the frame,Cleaning the glass,Decorating with a garland,And hailing a JaiSweetness in my mouth,And happiness filled my heart. You too grew along with me,Grandpa became a Mahatma,You became an embodimentOf simple truth,non violenceAnd lit our path. At a time when there wasWarmth in veins, spirit in the heart,Dreamt of swimming against the tide,Your image was in my eyes. Now I too have gotspectacles like you.Hanging a portrait of yoursOn the wall behind my chairIn my office. I am glancing the FIRsOf the devils who pouncedUpon the girls.DIR pages telling the storiesOf drunken demonic husbands. I Control the flamming riverIn my heart,that flows throughoutFrom head to toeand settles at the tip of the pen. Bapu, how cheerful I becomeknowing your story,Let the same happiness fill my soul,While treading your path. *******************************

Read Post »

ಅನುವಾದ

ಜಾನ್ ಮಿಲ್ಟನ್ ಕವಿತೆಯ ಅನುವಾದ

ಅಂಧಕಾರದೊಳಗಿಂದ ಇಂಗ್ಲೀಷ್ ಮೂಲ: ಜಾನ್ ಮಿಲ್ಟನ್ ಕನ್ನಡಕ್ಕೆ ವಿ.ಗಣೇಶ್ ನನ್ನ ಬದುಕಿನ ಬೆಳಕ ಹೇಗೆ ಸವಿದಿಹೆನೆಂದುಬಾಳ ಪುಟಗಳ ತಿರುವಿದರೆ ಬರಿ ಕತ್ತಲುಬೆಳಕು ಕತ್ತಲೆ ಮಧ್ಯೆ ಕಳೆದ ಬಾಳನು ಈಗಬೆಳಗಿಸಲು ಛಲ ಹೊತ್ತು ನಿಂತೆ ನಾನು ನನ್ನ ಭಕ್ತಿಗೆ ಮೆಚ್ಚಿ ನೀನಿತ್ತ ವರವೆನಗೆಕಾಣಿಕೆಯ ರೂಪದಲಿ ನಾನು ಪಡೆದಿರುವೆಅದನು ಬಳಸುವ ರೀತಿ ನನಗೆ ತಿಳಿದಿದೆ ಗುರುವೆಬೇರೆ ರೂಪದಿ ಕೊಡಲು ಮುಡುಪನಿಡುವೆ. `ಕಷ್ಟವೇನೇ ಇರಲಿ ಕಾಯಕವ ನೀ ಮಾಡುಅದಕೆ ಫಲ ನೀಡುವುದು ನನ್ನ ಇಚ್ಛೆ’ ಎಂದರಿತೂಅದನು ಮರೆತಿಹ ನಾನು ಬರಿದೆ ಕಾಲವ ಕಳೆದೆವ್ಯರ್ಥವಾಯಿತು ನನ್ನ ಬದುಕು ಹೀಗೆ ನೀನು ಪ್ರೀತಿಯಲಿತ್ತ ಆ ನಿನ್ನ ನೇಗಿಲನುಉಳುವ ಕಾರ್ಯಕೆ ಈಗ ಬಳಸುತಿರುವೆಇದಕಿಂತ ಮಿಗಿಲಾದ ನಿನ್ನ ಸೇರುವ ಮಾರ್ಗನನ್ನ ಮತಿಗೆಟುಕದದು ಕೇಳು ಪ್ರಭುವೆ ಕಾಯಕವೆ ಕೈಲಾಸ ಎಂಬ ಮಂತ್ರವನರಿತುನಿನ್ನ ಸೇವೆಯ ಮಾಡಲೆನ್ನನನುಗೊಳಿಸು ದೇವನಿನ್ನೊಲವಿನಾ ತೊರೆಯು ಶರಧಿಯೋಪಾದಿಯಲಿಹರಿವುದು ಎಲ್ಲೆಡೆಯಿಂದ ನನ್ನ ಕಡೆಗೆ. ********************************* On His Blindness: John Milton

ಜಾನ್ ಮಿಲ್ಟನ್ ಕವಿತೆಯ ಅನುವಾದ Read Post »

ಅನುವಾದ

ಕವಲೊಡೆದ ದಾರಿ

ರಾಬರ್ಟ್ ಪ್ರಾಸ್ಟ್ ಅವರ ಕವಿತೆಯ ಕನ್ನಡಾನುವಾದ ಗಣೇಶ್ ವಿ. ಕವಲೊಡೆದ ದಾರಿ ಪಯಣಿಸುವ ದಾರಿಯಲಿ ಕವಲೆರಡು ಒಡೆದಿತ್ತುಒಂಟಿ ಪಯಣಿಗ ನಾನು ನೋಡುತ್ತ ನಿಂತೆನಾನೆರಡು ದಾರಿಯ ಚಲಿಸುವಂತಿರಲಿಲ್ಲತುದಿಕಾಣದಾ ಆ ಪಥವು ಓಡುತ್ತಲಿತ್ತುಅನತಿ ದೂರದವರೆಗೆ ಅದು ಮಿಂಚುತ್ತಲಿತ್ತು ಮತ್ತೊಂದು ಮಾರ್ಗವನು ತುಳಿಯುತ್ತ ನಾ ಹೊರಟೆಬದುಕಿನೊಳಗೊಂದು ಹೊಸತನವ ಕಾಣಲುತುಸು ತುಳಿದ ಪಥವೆಂದೆಣಿಸುತ್ತ ನಾ ಚಲಿಸಿದರೆನಡೆಯುತ್ತ ನಡೆಯುತ್ತ ಸತ್ಯವೊಂದನು ಅರಿತೆಎಲ್ಲಾ ಪಯಣದೊಳಗಿರುವ ತಿರುಳೊಂದೇ ಎಂದು. ಅಂದು ಬೆಳಗಿನ ಝಾಮ ಕವಲೊಡೆದ ಹಾದಿಯಲಿಮೊದಲನೆಯ ಮಾರ್ಗವನು ಮತ್ತೊಂದು ದಿನಕುಳಿಸಿಎರಡನೆಯ ಮಾರ್ಗವನು ತುಳಿಯುತ್ತ ನಾ ಬಂದೆಹಾದಿಗೆ ಹಾದಿ ಯೇ ಹಾದಿ ತೋರುತ ಹೊರಟಾಗ`ಮರಳಿ ಬರಲೇ?’ ಎಂದು ಮನವು ತವಕಿಸುತಲಿತ್ತು ಇಷ್ಟು ವರುಷದ ಬಳಿಕ ದುಗುಡದಿಂದಲೆ ನುಡಿವೆಬದುಕಿನ ಹಾದಿಯಲಿ ಕವಲೆರಡು ಒಡೆದಿತ್ತುತುಸುತುಳಿದ ಪಥವೆಂದೇ ತುಳಿಯುತ್ತ ನಾ ಬಂದೆಅದುವೆ ಕಾರಣವಾಯ್ತು ಹೊಸಬಗೆಯ ಬದುಕಿಗೆ. *************************** Road not taken By Rober Frost

ಕವಲೊಡೆದ ದಾರಿ Read Post »

ಅನುವಾದ

ಸಾವೇ ನೀನು ಸಾಯಿ

ಅನುವಾದಿತ ಕವಿತೆ ಸಾವೇ ನೀನು ಸಾಯಿ ಇಂಗ್ಲೀಷ್ ಮೂಲ: ಜಾನ್ ಡನ್ ಕನ್ನಡಕ್ಕೆ: ಗಣೇಶ್ ವಿ. ಕೆಲರು ನಿನ್ನನಜೇಯ ಅತಿಪರಾಕ್ರಮಿ ಎಂದು ಪೆÇಗಳಬಹುದುಅದಕಾಗಿ ಬೀಗದಿರು ಆ ಗುಣಗಳನೇನೂ ನಾ ಕಾಣೆ ನಿನ್ನಲಿಸಾವಿನಲಿಲ್ಲದಾ ಅಸಾಮಾನ್ಯ ಶಕ್ತಿಗಳೇನೂ ನಿನ್ನೊಳಗಿನಿತಿಲ್ಲಬಗ್ಗುವವರನೆಲ್ಲರನೂ ಬಡಿದುರುಳಿಸಿರುವೆನೆಂದು ಭಾವಿಸಿರುವಿಅವರಾರೂ ಮಡಿದಿಲ್ಲ ಅಂತೆ ನನ್ನನೂ ನೀ ಸಾಯಿಸಲಸಾಧ್ಯವು ನಿನ್ನ ತುಳಿತಗಳಿಗೊಳಗಾಗಿ ಮಡಿದ ಬಡಪಾಯಿಗಳೆಷ್ಟೋಬಡವ ಬಲ್ಲಿದರ, ರಾಜ ಮಹರಾಜರ ದೀನ ದಲಿತರೆಲ್ಲರಕಾಯಿಲೆಯಲಿ ನರಳಿಸುತ, ಮುದಿತನದಲಿ ಬಳಲಾಡಿಸುತಶಾಶ್ವತದಿ ಮಲಗಿಸಿ ಹೇಳ ಹೆಸರಿಲ್ಲದಂತೆಲೆ ಮಾಡಿರುವೆ ಅದೆಷ್ಟೇ ಪ್ರಳಯಾಂತಕದಿ ನಿನ್ನ ಹೊಡೆತದಿ ಮಲಗಿದ್ದರೂಸುದೀರ್ಗ ನಿದ್ದೆಯಿಂದೆಚ್ಚೆತ್ತು ಅಮರರಾಗುವವರೆಲ್ಲ ಜಗದಲಿಎಚ್ಚೆತ್ತವರೆಲ್ಲ ಸಾವಿಲ್ಲದವರಾಗಿ ಶಾಶ್ವತದಿ ನೆಲೆಸುವರುಸಾವಿಲ್ಲದೆಂದೆಣಿಪ ಸಾವೇ, ನೀನೇ ಸಾಯುವೆ ಆ ಸಾವಿನಲಿ! *************************************

ಸಾವೇ ನೀನು ಸಾಯಿ Read Post »

honkal
ಅನುವಾದ

ಗಝಲ್

ಗಝಲ್ ಸಿದ್ಧರಾಮ ಹೊನ್ಕಲ್ ತರಹಿ ಗಜಲ್-೧೨೫ ಮಿಸ್ರಾ:-ಅವಳಿಂದ ಬೇರಾದ ಮೇಲೆ ಅವಳಂತೆ ಯಾರೂ ದೊರೆಯಲೇ ಇಲ್ಲ ಮೂಲ:-ಬಶೀರ್ ಬದ್ರ್ಕನ್ನಡಕ್ಕೆ:-ಡಾ.ಸಿದ್ಧರಾಮ ಹಿರೇಮಠ ಕೂಡ್ಲಿಗಿ ಮನ ಸಾಗರದಲ್ಲಿ ಮತ್ತೆ ಹುಡುಕಿದೆ ಇವಳಂತೆ ಯಾರೂ ದೊರೆಯಲೇ ಇಲ್ಲಅವಳಿಂದ ಬೇರಾದ ಮೇಲೆ ಅವಳಂತೆ ಯಾರೂ ದೊರೆಯಲೇ ಇಲ್ಲ ಆಡಿದ ಪಿಸು ಮಾತು ಮಧುರ ನೆನಪಾಗಿ ಕಾಡುವವು ಬೇರೆ ಬೇಕೆನಿಸುವದಿಲ್ಲನಾನಿಲ್ಲಿ ಅವಳಲ್ಲಿ ಏಕಾಂಗಿಭಾವ ಕಾಡುವುದಂತೆ ಯಾರು ದೊರೆಯಲೇ ಇಲ್ಲ ಈ ಪ್ರೀತಿಯಲಿ ಕಣ್ಣು ಮತ್ತು ಕರುಳುಗಳು ಅರಿತಷ್ಟು ಮತ್ತೆ ಯಾರು ಅರಿಯುವದಿಲ್ಲಕೆಲವರು ಬಂದು ಅವಳಿಗೂ ಇಷ್ಟವಾಗದೇ ಹೋದರಂತೆ ಯಾರೂ ದೊರೆಯಲೇ ಇಲ್ಲ ನಮ್ಮೀರ್ವರ ಆಯ್ಕೆಗಳು ಒಂದೇ ನೋವು ಒಂದೇ ಎಂದು ಸದಾ ಹಚ್ಚಿಕೊಂಡಿದ್ದಳುಬಿಟ್ಟಿರಲಾರೆ ಬದುಕುಪೂರ್ತಿ ಎಂದು ಮತ್ತೆ ಮರೆತಳಂತೆ ಯಾರೂ ದೊರೆಯಲೇ ಇಲ್ಲ ಪ್ರೀತಿ ಪ್ರೇಮದಿ ಬೆರೆತು ಸವಿಮಾತು ಖುಷಿ ಕ್ಷಣ ಹಂಚಿಕೊಂಡೆವು ಆ ಸುವರ್ಣಕಾಲಹೋಗುವ ಮುನ್ನ ಬಿಟ್ಟ ನೆನಪುಗಳು ಸದಾ ಜೊತೆಗಿಟ್ಟಂತೆ ಯಾರು ದೊರೆಯಲೇ ಇಲ್ಲ ಅವಳಿಗೆ ಬೇಕೆನಿಸಿದರೆ ಸಿಗಲಿ ನನಗೆ ಹಿಡಿಸುವಂತಹ ಯಾರು ಮತ್ತೆ ಸಿಗುವದೇ ಬೇಡಹೊನ್ನಸಿರಿ’ಕನಸಲಿ ಸಹ ಬಿಟ್ಟು ಕೊಳ್ಳಲಾರನಂತೆ ಯಾರು ದೊರೆಯಲೇ ಇಲ್ಲ ********************************

ಗಝಲ್ Read Post »

ಅನುವಾದ

ದೇವಾಲಯ ಮತ್ತು ನೀರ್ಗುದುರೆ

ಅನುವಾದಿತ ಕವಿತೆ ದೇವಾಲಯ ಮತ್ತು ನೀರ್ಗುದುರೆ Hippopotamus and the Church: T.S.Eliot ಕನ್ನಡಕ್ಕೆ: ವಿ.ಗಣೇಶ್ ವಿಶಾಲವಾದ ಬೆನ್ನಿನ ನೀರ್ಗುದುರೆ ತಾ ಆಗಾಗ್ಗೆಕೆಸರಿನಲಿ ನಿಲ್ಲುವುದು  ಹೊಟ್ಟೆಯನೂರತಲಿ ಭದ್ರವಾಗಿ ನಿಂತಂತೆಯೇ  ನಮಗೆ ಕಾಣುತಲಿದ್ದರೂ ಅಲ್ಲಿ ಕಾಣುವುದು ಬರಿ ರಕ್ತ ಮಾಂಸಗಳಷ್ಟೆ ಯೇ   ಮಾಂಸದ ಮುದ್ದೆ ಅದರ ಶಕ್ತಿಹೀನತೆ ಗುರುತುಎಲುಬು ಮೂಳೆಗಳಿಲ್ಲದೆ ಯೇ  ಕುಸಿಯುತಿರುವುದುದೇಗುಲದ ಕಟ್ಟಡವದೋ ಸ್ಥಿರವಾಗಿ ನಿಂತಿಹುದುತಳಪಾಯಕೆ ಹಾಕಿರುವ  ಬಂಡೆಗಳೆ ಜೊತೆಯಲಿ ನೀರ್ಗುದುರೆ ತಾ ನಡೆವಾಗ ಎಡವಲು ಬಹುದುಅನ್ನಾಹಾರಗಳ ಅದು ಹುಡುಕುತ್ತ ಹೊರಟಾಗದೇಗುಲವೇನೂ ಆಂತೆ ಎಡವಿ ಬೀಳಲಸದಳವು  ಕಪ್ಪ ಕಾಣಿಕೆ ಸಾಕಷ್ಟು ಬಂದು ಬೀಳುವುದರಿಂದ ಮಾವಿನ ತೋಪಿನ ಕಡೆ ಮಾವು ಹಣ್ಣಾದಾಗನೀರ್ಗುದುರೆ ಚಲಿಸುವುದು ಹಣ್ಣುಗಳ ತಿನ್ನಲುದೇಶವಿದೇಶದ ಜಾತಿ ಜಾತಿಯ ಹಣ್ಣುಗಳೆಲ್ಲಬಂದು ತಾ ಬೀಳುವುವು ಆ ದೇಗುಲದೊಳಗೆ ಪ್ರೇಯಸಿಯ ಜೊತೆಗೆ ತಾ ಕೂಡುವಾಗೆಲ್ಲಸಂತಸದಿ ಬೀಗುವುದು ಅದರ ಕಾಮವದನಅನುದಿನವು ದೇವರ ಪೂಜೆ ನಡೆಯುತ್ತಿದ್ದರೂದೇಗುಲದಲೆಂದೂ ಕಾಣೆವು ಅಂಥ ಸಂತಸವ ಹಗಲಿನ ವೇಳೆಯಲಿ ನಿದ್ರಿಸುವ ನೀರ್ಗುದುರೆರಾತ್ರಿಯಲಿ ಬೇಟೆಯ ಹುಡುಕುತ್ತಲಿರುವುದುನಿದ್ದೆಬುದ್ಧಿಗಳನೆಲ್ಲ ಒಟ್ಟಿಗೆ ಕೊಡುವಂತ ಆದೇಗುಲದ ಮಹಿಮೆಯ ಅರಿಯೆವು ಪಾಮರರು  ಗರಿಗೆದರಿ ಹಾರುವುದು ಅದು ತಾ ಗಗನದಲಿ ರೆಕ್ಕೆಪುಕ್ಕಗಳೆಲ್ಲ ಕೆಸರಲ್ಲಿ ಹೂತಿದ್ದರೂ ಸಹ ಗುಡಿಯೊಳಗೆ ಅಡಗಿರುವ ದೇವರ ಹೊಗಳಿ ಗಗನದಲಿ ಸುತ್ತುವರು ದೇವತೆಗಳ ದಂಡು ಮುದ್ದು ಕುರಿಮರಿ  ಪಾಪವನು ಕಳೆಕೊಳ್ಳುತತಾನೆ ಬಲಿಯಾಗುತ ಅವನ ಪಾದಗಳಿಗೆಸ್ವರ್ಗವನು ತಬ್ಬಿಕೊಳುವುದು ತೋಳಿನಲಿ ಸಂತರ ನಡುವೆ ಯೇ ತಾನೂ ಒಬ್ಬನಾಗುತಲಿ ಹಿಮದ ಬೆಟ್ಟದ ತರ ಕರಗಿ ನಿರಾಗುವುದದುದೇವ ಕನ್ಯೆಯರ ಮುತ್ತು ಮಳೆಗಳ ಕರೆಯುತನಿಜ ದೇಗುಲ ಕಲ್ಲುಗಳು ಕರಗದೇಯಿರುವುವುಸೂರ್ಯ ಚಂದ್ರರು ಅನುದಿನ ಉರಿಯುತಲಿದ್ದರು ***********************************

ದೇವಾಲಯ ಮತ್ತು ನೀರ್ಗುದುರೆ Read Post »

ಅನುವಾದ

ಮರ ಕಡಿಯುವಾ ನೋಟ

ಅನುವಾದಿತ ಕವಿತೆ ಮರ ಕಡಿಯುವಾ ನೋಟ ಇಂಗ್ಲೀಷ್ ಮೂಲ: Clifford Dymont ಕನ್ನಡಕ್ಕೆ: ಗಣೇಶ್ ವಿ. ನೂರಾರು ವರುಷಗಳ ಹಿರಿದಾದ ಮರವನ್ನುಕಡಿಯುತಿಹ ಕಟುಕನನು ನೋಡುತ್ತ ನಿಂತೆಥಳಥಳನೆ ಹೊಳೆಯುವ ಆ ಕತ್ತಿಯ ಅಲಗುಮರದ ಮರ್ಮಕ್ಕೆ ನಾಟಿತ್ತು ಕಡಿತದ ರಭಸಕ್ಕೆ ಗಡಗಡ ನಡುಗುವ ಮರದ ಬುಡದಿಂದಚಕ್ಕೆಗಳು ಚಿಮ್ಮಿದವು  ಸಕಲ ದಿಕ್ಕುಗಳಲಿಗಾಳಿಯಲಿ ತಿರುಗಿದವು ಬುಗುರಿಯಾಕಾರದಲಿಮರವು ರೋದಿಸುತಲಿತ್ತು ಸಾವಿನಾ ಸಮಯದಲಿ ಕಟುಕನಾ ಹೊಡೆತಕ್ಕೆ ಮರ ಉರುಳಿ ಬಿದ್ದಿತ್ತುಕೊಡಲಿಯಾ ಆರ್ಭಟಕೆ ಜಯಭೇರಿ ಎಂಬಂತೆನೋಡನೋಡುತಿರುವಂತೆ ಬೆಳೆದಿದ್ದ ಆ ಮರವುಜನಸಾಗರದಾ ನಡುವೆ ಹೆಣವಾಗಿ ಬಿದ್ದಿತ್ತು. ತೂಗಾಡುವಾ ಕತ್ತಿ ಜನರನ್ನು ಸೆಳೆಯುವುದುಮರ ಕಡಿಯುವಾ ನೋಟದ ಚೆಂದವ ನೋಡಲುನೂರಾರು ಜನರು ಬಂದು ಸೇರಿಕೊಳ್ಳುವರುತುಂಬಲಾರದ ನಷ್ಟ ಅರಿಯದಿಹ ಮೂರ್ಖರು ನಮ್ಮ ಹಿರಿಯರು ಬೆಳಸಿ ಉಳಿಸಿದ್ದ ನಾಡಸಿರಿಮುಂದಿನಾ ಪೀಳಿಗೆಗೆ ಹಸಿರಾಗಿ ಉಳಿಯಲಿಇದನರಿಯದಿರೆ ನಾವು ಮೂರ್ಖರಾಗುವೆವುನಮ್ಮ ಸಮಾದಿಯನು ನಾವೇ ಕಟ್ಟಿಕೊಂಡಂತೆ ********************** ಗಣೇಶ್.ವಿ

ಮರ ಕಡಿಯುವಾ ನೋಟ Read Post »

ಅನುವಾದ

ದ್ರೌಪದಿ ಶಸ್ತ್ರಧಾರಿಯಾಗು

ಅನುವಾದಿತ ಕವಿತೆ ದ್ರೌಪದಿ ಶಸ್ತ್ರಧಾರಿಯಾಗು ಕೆಲ ದಿನಗಳ ಹಿಂದೆ ಹಿಂದಿಯ ಹಾಸ್ಯ ನಟ ವೃಜೇಶ್ ಹೀರ್ಜಿ ಅವರು,  ತಮ್ಮ ಮಿತ್ರ  ಪುಷ್ಯಮಿತ್ರ ಉಪಾಧ್ಯಾಯ ಅವರ ಹಿಂದಿ ಕವಿತೆಯನ್ನು ಓದುವ ಒಂದು ವೀಡಿಯೋ ಫೇಸ್ ಬುಕ್ಕಿನಲ್ಲಿ ಕಾಣಿಸಿತ್ತು. ಅವರು ಭಾವಪೂರ್ಣವಾಗಿ ಓದಿದ್ದು ಅದನ್ನು ಪೂರ್ಣ ನೋಡುವಂತೆ ಮಾಡಿತು.  ಆ ಹಿಂದಿ ಕವಿತೆಯನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದೇನೆ. ನೂತನ ದೋಶೆಟ್ಟಿ ಕೈಗೆ ಮದರಂಗಿ ಹಾಕುತ್ತ ಕೂರುವ ಸಮಯವಿದಲ್ಲನಿನ್ನನ್ನು ನೀನು ಸಂಭಾಳಿಸಿಕೊಳ್ಳಬೇಕಾದ ಕಾಲನೀನೇ ನಿನ್ನ ಹುರಿದುಂಬಿಸಿಕೊಹಾಸು ಹಾಕಿ ಶಕುನಿ ಹೊಂಚಿ ಕುಳಿತಿದ್ದಾನೆಎಲ್ಲ ತಲೆಗಳೂ ಬಿಕರಿಯಾಗುತ್ತವೆಕೇಳು ದ್ರೌಪದಿ , ಶಸ್ತ್ರಧಾರಿಯಾಗುಈಗ ಗೋವಿಂದ ಬರುವುದಿಲ್ಲ ಚದುರಿ ಚಿಂದಿಯಾಗಿರುವ ಈ ಸುದ್ದಿ ಪತ್ರಿಕೆಗಳಿಂದ.ಇನ್ನೂ ಎಷ್ಟು ಕಾಲ ನಿರುಕಿಸುವಿ?ಈ ದುಶ್ಯಾಸನರ ದರ್ಬಾರಿನಲ್ಲಿಎಂಥ ರಕ್ಷಣೆಯ ಅಹವಾಲು?ಈ ದುಶ್ಯಾಸನ ಕಡು ದುಷ್ಟಕಡು ಲಜ್ಜಾಹೀನನೂಅವನಿಂದ ನಿನ್ನ ಶ್ರೀರಕ್ಷೆಯೇ?ಕೇಳು ದ್ರೌಪದಿ , ಶಸ್ತ್ರಧಾರಿಯಾಗುಈಗ ಗೋವಿಂದ ಬರುವುದಿಲ್ಲ ನಿನ್ನೆಯ ತನಕ ಕುರುಡಾಗಿದ್ದ ರಾಜಈಗ ಮೂಗನೂ, ಕಿವುಡನೂಪ್ರಜೆಗಳ ತುಟಿಯನ್ನು ಹೊಲಿದಿದ್ದಾನೆಜೊತೆಗೆ ಕಿವಿಯ ಮೇಲೆ ಬಿಗಿ ಪಹರೆನಿನ್ನ ಈ ಕಣ್ಣೀರುಯಾರನ್ನು ತಾನೆ ಕರಗಿಸಬಲ್ಲುದು ?ಕೇಳು ದ್ರೌಪದಿ , ಶಸ್ತ್ರಧಾರಿಯಾಗುಈಗ ಗೋವಿಂದ ಬರುವುದಿಲ್ಲ. *************************

ದ್ರೌಪದಿ ಶಸ್ತ್ರಧಾರಿಯಾಗು Read Post »

You cannot copy content of this page

Scroll to Top