ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ನಾನು ಕಸ್ತೂರ್ ಇತ್ತೀಚೆಗೆ ಲೋಕಾರ್ಪಣೆಗೊಂಡ ಡಾ. ಎಚ್.ಎಸ್.ಅನುಪಮಾ ಕೃತಿ. ಲಡಾಯಿ ಪ್ರಕಾಶನದಿಂದ ಪ್ರಕಟಿತ.. ಚಂದ್ರಪ್ರಭಾ ಬಿ. ಒಂದು ಒಳನೋಟು ಭಿನ್ನ ಆಲೋಚನೆ, ಭಿನ್ನ ನಿಲುವಿನ ಡಾ. ಎಚ್.ಎಸ್.ಅನುಪಮಾ ಏನು ಮಾಡಿದರೂ ಅದು ವಿಭಿನ್ನವೇ ಆಗಿರುತ್ತದೆ ಎಂಬ ಮಾತಿಗೆ ಕಸ್ತೂರ್ ಜೀವನ ಕಥನ ಒಂದು ಉದಾಹರಣೆ. ಮೈಸೂರಿನಲ್ಲಿ ಪುಸ್ತಕ ಲೋಕಾರ್ಪಣೆ ಮಾಡುತ್ತ ಮಮತಾ ಸಾಗರ್ ಹೇಳಿದ ಹಾಗೆ ಅನುಪಮಾ ಸ್ವತಃ ನಿವೇದಿಸಿದ ಪ್ರಸ್ತಾವನೆ ರೂಪದ ಬರಹವನ್ನು ಓದಿಯೇ ಪ್ರತಿ ಓದುಗ ಮುಂದೆ ಸಾಗಬೇಕು. ಕೃತಿ ರಚನೆಯ ಹಿನ್ನೆಲೆಯ ಜೊತೆಗೇ ಅದನ್ನು ಓದುವ ಕ್ರಮ ಹೇಗೆಲ್ಲ ಇರಬೇಕೆಂಬ ಸೂಕ್ಷ್ಮ ಸೂಚನೆ, ಸುಳಿವುಗಳು ಅಲ್ಲಿ ವಿಪುಲವಾಗಿ ಸಿಗುತ್ತವೆ. ಓದಿಗೆ ಒಂದು ದಿಕ್ಸೂಚಿ ದೊರಕುತ್ತದೆ. ಮೊದಲೊಮ್ಮೆ ಬರೆದು ಮುಗಿಸಿದ ಬಳಿಕ ಅದು ಕಸ್ತೂರ್ ಕಥನವಾಗುವ ಬದಲಾಗಿ ಗಾಂಧಿ ನೆರಳಾಗಿ ಕಸ್ತೂರ್ ಕಥನ ಹಿಂಬಾಲಿಸಿದ ವಿಸ್ಮಯ, ಅದನ್ನು ಅಳಿಸಿ ಹಾಕಿ ಬೇರೆಯದೇ ಮತ್ತೊಂದು ವಿಶಿಷ್ಟ ಕ್ರಮದಲ್ಲಿ, ವಿಶಿಷ್ಟ ಒಳನೋಟದಲ್ಲಿ ತಾವು ಈ ಕೃತಿ ರಚನೆ ಮಾಡಿದ್ದನ್ನು ಲೇಖಕಿ ಹಂಚಿಕೊಳ್ಳುತ್ತಾರೆ. ಅವರಿಗೆ ಈ ಕಥನದ ಅನನ್ಯತೆ ಕುರಿತ ಸ್ಪಷ್ಟ ಕಲ್ಪನೆ, ನಿರೀಕ್ಷೆಗಳಿದ್ದವು ಎಂಬುದಕ್ಕೆ ಈ ಮಾತು ಸಾಕ್ಷಿ. ಇಲ್ಲಿ ಮಾತನಾಡುವ ಎರಡು ಹೆಣ್ಣು ಜೀವಗಳಿವೆ.. ಒಂದು, ಜಗತ್ತೇ ತನ್ನತ್ತ ತಿರುಗಿ ನೋಡಿ ವಿಸ್ಮಯಪಡುವಾಗ ತನ್ನನ್ನು ತಾನು ಶೋಧನೆಗಳಿಗೆ ಒಡ್ಡಿಕೊಳ್ಳುತ್ತಲೇ ಸಾಗಿದ ಮಹಾನುಭಾವನ ಹೆಂಡತಿ ಎನಿಸಿಕೊಂಡಾಗಲೂ ಕೊನೆವರೆಗೂ ತನ್ನತನವನ್ನು ಕಾಪಿಟ್ಟುಕೊಂಡ ಸಮತೂಕದ ಜೀವ ಕಸ್ತೂರ್… ಮತ್ತೊಂದು ತಾನು ಮಾಡುವ ಪ್ರತಿಯೊಂದು ಕೆಲಸದಲ್ಲಿ, ಓದಿನಲ್ಲಿ, ಬರವಣಿಗೆಯಲ್ಲಿ ಯಾವುದರಲ್ಲೇ ಆಗಲಿ ಮನುಜ ಪ್ರೇಮ, ಸಮಷ್ಟಿ ಪ್ರಜ್ಞೆ, ಘನತೆಯ ಬದುಕನ್ನು ಮಿಡಿಯುವ, ಅವಕಾಶ ಸಿಕ್ಕಿದಲ್ಲೆಲ್ಲ ಪಿತೃ ಸಂಸ್ಕೃತಿಯನ್ನು ತರಿಯುತ್ತ ಸಾಗುವ ಸೂಕ್ಷ್ಮ ಸಂವೇದನೆಯ ಬರಹಗಾರ್ತಿ.. ಆಳದಲ್ಲಿ ಒಮ್ಮೊಮ್ಮೆ ‌ಅಖಂಡ ಹೆಣ್ಣು ಕುಲವೇ ಎದ್ದು ನಿಂತು ಪ್ರಶ್ನಿಸುತ್ತಿರುವಂತೆಯೂ ಭಾಸವಾಗುತ್ತದೆ. ನೇಯ್ಗೆಯ ಒಂದೊಂದು ಎಳೆಯೂ ಹೀಗೇ ಇರಬೇಕೆಂಬ ಲೇಖಕರ ಸಂವೇದನೆ ಸೂಕ್ಷ್ಮ ಓದಿಗೆ ದಕ್ಕುವ ಅಂಶವಾಗಿದೆ. ಒಬ್ಬ ಸಾಮಾನ್ಯ ಹೆಣ್ಣಿನ ರೂಪದಲ್ಲಿ ಕಸ್ತೂರ್ ತನ್ನನ್ನು ತಾನು ಬಿಡಿಸಿಡುತ್ತ ಹೋಗುವ ಕ್ರಮ ಲೇಖಕರ ಆಶಯಗಳ ಅನಾವರಣಕ್ಕೆ ವಿಸ್ತಾರವಾದ ಅವಕಾಶ ಒದಗಿಸುತ್ತ ಸಾಗುವ ರೀತಿಯೇ ಚಂದ. ಹೇಗಿದ್ದೀಯ ಮಗೂ ಎನ್ನುತ್ತ ಮಾತಿಗೆ ತೊಡಗುವ ಕಸ್ತೂರ್ “ಲೋಕದ ಮಾತು ಬಿಡು, ನಮ್ಮ ಪರಿಚಯ ನಮಗೇ ಇರಲ್ಲವಲ್ಲ..ನಮ್ಮ ಭಾಷೆ ಅಂಥದು” ಎಂದು ಬಿಡುತ್ತಾರೆ! ತವರ ಸೊಬಗನ್ನು, ಮೊರೆವ ಕಡಲನ್ನು ಬಣ್ಣಿಸುತ್ತಲೇ ಮದುವೆಯೆಂಬ ಆಟದ ನೆನಪುಗಳನ್ನು ಕೆದಕುತ್ತಾರೆ. ಮಗು ಹುಟ್ಟುತ್ತಲೂ ‘ಹರಿಯ ಅಪ್ಪ’ ದಕ್ಷಿಣ ಆಫ್ರಿಕೆಗೆ ಹೊರಟು ನಿಂತಾಗಿನ ಕಸ್ತೂರ್ ತಳಮಳ… ಸಂಗಾತಿಯನ್ನು ಮೋಕ ಸಂತೈಸುವ ರೀತಿಯಲ್ಲಿ ಯಾವುದೇ ಹೆಣ್ಣು ಜೀವ ತಾನು ಅನುಭವಿಸಲು ಬಯಸುವ ಆರ್ದ್ರ ಮಾಧುರ್ಯವನ್ನು ನಿರೂಪಿಸುವ ಸೊಗಸು ಆಪ್ತ. ಮಗುವಿಗೆ ಹಾಲೂಡುವ ಸೊಬಗಿನ ಜೊತೆಗೇ ತಾನು ಕಳೆದುಕೊಂಡ ಮೊದಲ ಮಗುವಿನ ನೆನಪಲ್ಲಿ ನಿದ್ರಿಸುವ ಈ ಮಗುವನ್ನು ಮುಟ್ಟಿ ಮುಟ್ಟಿ ನೋಡಲು ಬಯಸುವ ತಾಯಿಯ ವರ್ಣನೆಯಲ್ಲಿ ಓರ್ವ ವೈದ್ಯೆ, ತಾಯಿ ಇಬ್ಬರ ಬೆಚ್ಚಗಿನ ಭಾವಗಳೂ ಕಾಣಸಿಗುತ್ತವೆ. ತನ್ನ ಮೊದಲ ಕಡಲ ಯಾನದಲ್ಲಿ ತನಗೆ ಓದು,ಬರವಣಿಗೆ ಕಲಿಸುವ ಭಾಯಿ.. ಎರಡನೇ ಹೆರಿಗೆಯಲ್ಲಿ ಸ್ವತಃ ದಾದಿಯಾಗಿ ಸುಶ್ರೂಷೆಗೈಯುವ ಭಾಯಿ… ಸ್ವಚ್ಛತೆ, ಸರಳತೆ, ಸಮಾನತೆಯ ಪಾಠ ಹೇಳುವಾಗ ತನ್ನ ಮೋಕ ಭಾಯಿ ಆಗಿ ಬೆಳೆದ ಪರಿಗೆ ಕಸ್ತೂರ್ ಜೀವ ಹೆಮ್ಮೆ ಪಡುತ್ತದೆ. ಆದರೆ ಅದೇ ಭಾಯಿ ತಾನು ಪಂಚಮರ ಮಲದ ಕೊಡ ಎತ್ತಲು ನಿರಾಕರಿಸಿದಾಗ ಅಪರಿಚಿತ ನಾಡಿನಲ್ಲಿ ತನ್ನನ್ನು ‘ ಇರುವುದಾದರೆ ಇರು, ಇಲ್ಲದಿದ್ದರೆ ಹೊರಟು ಹೋಗು’ ಎಂದು ಬಿಡುವ ಮಾತಿನ ಕಟುತ್ವವನ್ನು ದಿಟ್ಟತನದಿಂದ ಎದುರಿಸಿದ ಗಳಿಗೆಯನ್ನು ತಣ್ಣಗೆ ನಿರೂಪಿಸುತ್ತಾರೆ. ಭಾಯಿ ಮೇಲೆ ಟಾಲ್ಸ್ಟಾಯ್ ಎಂಬ ‘ಋಷಿ’ಯ ಪ್ರಭಾವ.. ಅದರಿಂದ ಹೆಚ್ಚಿದ ಆಶ್ರಮವಾಸದ ತವಕ..ಸತ್ಯಾಗ್ರಹದ ಪರಿಕಲ್ಪನೆ.. ಎಲ್ಲದರ ಜಿಜ್ಞಾಸೆಗೆ ತೊಡಗುವ ಕಸ್ತೂರ್ ಮುಂದೆ ಗಾಂಧಿ ಆಗಿ ಹೊಮ್ಮಿದ ಭಾಯಿಯ ಶಕ್ತಿ ಇದ್ದುದು ಪ್ರಕೃತಿ ದತ್ತವಾಗಿ ಮನುಜರಿಗೆ ಪ್ರಾಪ್ತವಾದ ಸತ್ಯಕ್ಕಾಗಿ ಆಗ್ರಹಿಸುವ ಅವರ ನಿಲುವಿನಲ್ಲಿ ಎಂದು ಸ್ಪಷ್ಟವಾಗಿ ಗುರುತಿಸುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿ ಜತೆಗೂಡುವ ಮಿಲಿ, ಸೋನ್ಯಾರಂಥ ಹೆಣ್ಮಕ್ಕಳು ಹೆಣ್ಣುಗಳನ್ನು ಗೆಳತಿಯಾಗಿ ನೋಡದ ಭಾರತೀಯ ಪುರುಷ ಮನಸ್ಥಿತಿಯನ್ನು ಪದೇ ಪದೇ ಪ್ರಶ್ನಿಸುವಾಗ ಭಾಯಿ ಮೇಲೆ ಆದ ಪರಿಣಾಮ.. ಅನಂತರದ ಹೋರಾಟಗಳಲ್ಲಿ ಮಹಿಳೆಯರನ್ನು ಹೋರಾಟದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡ ಭಾಯಿ ಮೇಲೆ ಅವರ ಸುತ್ತ ಇದ್ದ ಹೆಣ್ಣು ಮಕ್ಕಳ ದೊಡ್ಡ ಪಾತ್ರವಿತ್ತು ಎಂದು ವಿವರಿಸುತ್ತಲೇ ಇದರಿಂದ ಗಾಂಧಿಯಲ್ಲಿ ಮೈದಳೆದ ಹೆಣ್ಣುತನ, ಅವರ ಮಾತಿನಲ್ಲಿ ಕರುಣೆ, ಕಳಕಳಿಯನ್ನು ತುಂಬಿದ ಈ ಹೆಣ್ಮಕ್ಕಳ ಕುರಿತು ಅಭಿಮಾನ ವ್ಯಕ್ತಪಡಿಸುತ್ತಾರೆ ಕಸ್ತೂರ್. ಸರಳ ಜೀವನದ ಸೂತ್ರಗಳಿಗೆ ಒಗ್ಗಿಕೊಳ್ಳುತ್ತಲೇ ತಾನು ಹೋರಾಟದ ದಾರಿ ತುಳಿಯುವ ಕಸ್ತೂರ್ ಭಾಯಿಯ ಸತ್ಯ ಶೋಧನೆಯ ದಾರಿಯಲ್ಲಿ ತನ್ನ ಆಂತರಿಕ ಹೊಯ್ದಾಟವನ್ನೂ ನಿರೂಪಿಸುತ್ತಾರೆ. ರೂಪಾಂತರಗೊಂಡ ತನಗೆ ಚರಕಾ ಎಂಬ ನಿತ್ಯ ಸಂಗಾತಿ ದೊರೆತ ಮೇಲೆ ಬದುಕಿನ ಗತಿಯೇ ಬದಲಾದುದನ್ನು ಬಣ್ಣಿಸುತ್ತಾರೆ.. “ನೂಲುವುದೆಂದರೆ ಧ್ಯಾನ.. ಚರಕಾ ತಿರುಗಿಸಿ ನೂಲು ತೆಗೆದಂತೆ ನಾವು ಸಹ ಹತ್ತಿಯಾಗಿ, ದಾರವಾಗಿ,ಲಡಿಯಾಗಿ,ಬಟ್ಟೆಯಾಗಿ ಬದುಕು ನಡೆಯುವುದು..” ಎಂಬ ಚರಕಾ ಫಿಲಾಸಫಿ ಮನಸ್ಸನ್ನು ಆರ್ದ್ರಗೊಳಿಸುತ್ತದೆ. ಈ ಮಾತಿಗೆ ಕಳಶವಿಟ್ಟಂತೆ ” ಮಣಿ ತಿರುಗಿಸುತ್ತ ಮಾಡುವ ಜಪಕ್ಕಿಂತ ನೂಲುವುದು ತುಂಬ ಒಳ್ಳೆಯ ಪೂಜೆ … ಜಡಗೊಂಡದ್ದೆಲ್ಲ, ಜಡಗೊಂಡವರೆಲ್ಲ ತಿರುಗುವಂತೆ ಮಾಡುವ ಶಕ್ತಿ ಆ ಪುಟ್ಟ ಚಕ್ರಕ್ಕೆ, ಆ ಎಳೆಗೆ ಇದೆ” ಎಂಬ ಒಳನೋಟ. ಸಬರಮತಿ ಆಶ್ರಮ… ಅಲ್ಲಿಂದ ಹೊರ ಬಂದ ನಂತರ ವರ್ಧಾ ಆಶ್ರಮ.. ಸೇಗಾಂವ್ ಎಂಬ ಕುಗ್ರಾಮದಲ್ಲಿ ಇಲ್ಲಗಳೆಲ್ಲ ಕಳೆದು ಇದೆ ಆಗುವ ವರೆಗಿನ ಕ್ರಮಣದಲ್ಲಿ ಭಾಯಿಗೆ ಜತೆಯಾದ ಎಳೆಯ ಜೀವಗಳು.. ಭಾಯಿಗೆ ಉಪವಾಸ ಕುರಿತು ಹೆಚ್ಚಿದ ನಂಬಿಕೆ.. ಹದಗೆಡತೊಡಗಿದ ತನ್ನ ಆರೋಗ್ಯ.. ಎಡೆಬಿಡದ ಭಾಯಿಯ ಪತ್ರ ವ್ಯವಹಾರ ಎಲ್ಲವೂ ಕಸ್ತೂರ್ ನೋಟಕ್ಕೆ ದಕ್ಕುತ್ತ ಸಾಗುತ್ತದೆ. ವಿನೋಬಾ, ರವೀಂದ್ರನಾಥ ಟಾಗೋರ್, ಬಾಬಾ ಸಾಹೇಬ್ ಅಂಬೇಡ್ಕರ್ ರಂಥವರೊಡನೆ ಭಾಯಿ ಒಡನಾಟದ ಸಂದರ್ಭ. ಬಾಬಾ ಸಾಹೇಬರ ಸಹವಾಸದಲ್ಲಿ ಅಸ್ಪೃಶ್ಯತೆ ಕುರಿತು ಅಮೂಲಾಗ್ರವಾಗಿ ಬದಲಾದ ತಮ್ಮ ಧೋರಣೆಯನ್ನು ನಿರೂಪಿಸುವ ಕಸ್ತೂರ್ ಹರಿಲಾಲ ಕುರಿತು ಹಂಚಿಕೊಳ್ಳುವ ನೋವು ಓದುಗರು ತಲ್ಲಣಿಸುವಂತೆ ಮಾಡಿ ಬಿಡುತ್ತದೆ. ಬಾಪು ಆಗಿ ಜಗತ್ತಿಗೇ ಮಾದರಿಯಾಗುವ ತನ್ನ ಭಾಯಿ ತಂದೆಯಾಗಿ‌ ಸೋತರೆಂದು ಕಸ್ತೂರ್ ಜೀವ ಮರುಗುತ್ತದೆ. ಹಾಗೆ ಹೇಳುವಾಗಲೂ ತಾಯಿಯಾಗಿ ತಾನು ನಿರ್ವಹಿಸಿದ ಪಾತ್ರದಲ್ಲೇ ಕೊರತೆ ಇತ್ತೇನೊ ಎಂದು ಕಳವಳಿಸುವ ಮಾತೃ ಹೃದಯದ ಹಿರಿಮೆಯೆದುರು ಲೋಕದ ಹಿರಿತನ ಮಂಡಿಯೂರುತ್ತದೆ. ಒಂದೊಂದಾಗಿ ಕಳಚಿಕೊಳ್ಳುತ್ತ ತಂದೆ ಸಾಗುವಾಗ ಮಗ ಎಲ್ಲ ಬಗೆಯ ವ್ಯಸನಗಳನ್ನೂ ಅಪ್ಪಿಕೊಳ್ಳುವುದು..ಮತಾಂತರ.. ನಿರುದ್ಯೋಗ.. ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ನಿರೂಪಿಸುವ ಕಸ್ತೂರ್ ‘ತಾಯಿ- ಹೆಂಡತಿ ಎರಡು ಪಾತ್ರಗಳ ನಡುವೆ ಸುಡುವ ಹೆಣ್ಣು ಜನ್ಮವೇ ಬೇಡ’ ಎಂದು ನಿಟ್ಟುಸಿರುಗರೆವಾಗ ‘ಮಾರು ಗೆಲ್ಲಬೇಕಾದವ ಮನೆಯಲ್ಲಿ ಸೋಲಲೇಬೇಕೆ’ ಎಂಬ ಪ್ರಶ್ನೆಯೊಂದು ವಾಚಕರನ್ನು ಕಾಡತೊಡಗುತ್ತದೆ. ಆಹಾರದಲ್ಲಿ ಸರಳತೆ ತರಲು ಹಂಬಲಿಸುವ ಭಾಯಿ ಅದನ್ನು ಒತ್ತಾಯಪೂರ್ವಕವಾಗಿ ಮಕ್ಕಳ ಮೇಲೆಯೂ ಹೇಳುವುದನ್ನು ಕಸ್ತೂರ್ ವಿರೋಧಿಸುತ್ತಾರೆ. ಅಷ್ಟೇ ಅಲ್ಲ ಹರಯ ಉಕ್ಕಿ ಹರಿಯುವ ಕಾಲದಲ್ಲಿ ಮಕ್ಕಳು ಸಹ ಬ್ರಹ್ಮಚರ್ಯ ಪಾಲಿಸಲಿ ಎಂದು ಬಯಸುವ ‘ಗಾಂಧಿಗಿರಿ’ ಅಸಹಜ ಎನಿಸಲಾರಂಭಿಸುತ್ತದೆ. ಯಾವುದೆಲ್ಲವನ್ನು ತಾನು ಅನುಭವಿಸಿ ಉಂಡ ಬಳಿಕ ನಿರಾಕರಿಸಲು ನಿರ್ಧರಿಸಿದರೊ ಅಂಥದೇ ಅವಕಾಶವನ್ನು ಎಳೆಯರಿಂದ ಕಸಿದುಕೊಳ್ಳುವ ಗಾಂಧಿ ನಿಲುವು ಅನುಚಿತ ಎನಿಸುತ್ತದೆ. ಉಪವಾಸಗಳ ಅಭಿಯಾನದ ಜೊತೆಗೇ ‘ಇನ್ನು ಮೇಲೆ ನಾವಿಬ್ಬರೂ ದೂರ ಇರೋಣ’ ಎಂದು ಘೋಷಿಸಿ ಬಿಡುವ ಗಾಂಧಿ ನಿರ್ಧಾರದ ಒಮ್ಮುಖತೆ… ತನ್ನ ಸಹಧರ್ಮಿಣಿಯ ಇಷ್ಟಾನಿಷ್ಟಗಳನ್ನು ಕೇಳುವ ಸೌಜನ್ಯವನ್ನೂ ತೋರದ ನಿರಂಕುಶತೆ… ಈ ಘಟನೆ ತನ್ನ ವ್ಯಕ್ತಿತ್ವಕ್ಕೆ ಎಸೆದ ಸವಾಲಿನಂತೆ ಎದುರಾದ ರೀತಿ… ಅದರೊಂದಿಗೆ ತಾನು ಹೊಂದಾಣಿಕೆ ಮಾಡಿಕೊಳ್ಳಲು ಹೆಣಗಾಡಿದ ಬಗೆ ಎಲ್ಲವೂ ಮನೋವೈಜ್ಞಾನಿಕ ಜಾಡಿನಲ್ಲಿ ಮೈದಳೆದು ವಾಚಕರು ಹಲವು ಬಗೆಯ ಪ್ರಶ್ನೆಗಳಿಗೆ ಮುಖಾಮುಖಿಯಾಗುವಂತೆ ಮಾಡುತ್ತದೆ. ಪ್ರೇಮ ಕಾಮಗಳನ್ನು ಬಾಪು ಬೇರೆ ಬೇರೆಯಾಗಿ ನೋಡಿದ್ದೇ ತಪ್ಪು.. ಅವು ಒಂದು ನಾಣ್ಯದ ಎರಡು ಮುಖಗಳು ಎಂಬ ನಿಲುವು ಒಂದರ ಇರುವಿಕೆಗೆ ಇನ್ನೊಂದರ ಅನಿವಾರ್ಯತೆಯನ್ನು ಒತ್ತಿ ಹೇಳುತ್ತದೆ. ಕಾಮವನ್ನು ಗೆಲ್ಲಲು ಹೊರಟಾತ ಸರಳಾದೇವಿ ಎಂಬ ರೂಪವತಿಗೆ ಮರುಳಾಗಿ ಅದರಿಂದ ಹೊರಬರಲು ಒದ್ದಾಡಿದ ಪರಿ ತತ್ವ ಆದರ್ಶಗಳ ಬೇರುಗಳನ್ನೇ ಅಲ್ಲಾಡಿಸುತ್ತದೆ. ಸತ್ಯ ಶೋಧನೆ, ಸರಳ ಜೀವನ, ಸತ್ಯಾಗ್ರಹ, ಚಳುವಳಿ, ಹೋರಾಟದ ಜೀವನದಲ್ಲಿ ಗಾಂಧಿ ಕಳೆದು ಹೋಗುವಾಗ ಎಲ್ಲಕ್ಕಿಂತ ಹೆಚ್ಚು ಅವರನ್ನು ಅವರ ಮಕ್ಕಳು ಕಳೆದುಕೊಂಡರು ಎಂದು ಕನವರಿಸುವ ತಾಯೊಡಲು ಎಲ್ಲರ ಬಾಪು ಆಗಲು ನನ್ನ ಮಕ್ಕಳ ಬಾಪು ಮಾಯವಾದರು ಎಂಬ ನೋವನ್ನು ತಣ್ಣಗೆ ಹಂಚಿಕೊಳ್ಳುತ್ತಾರೆ. ಬಾಪು ದೇಶಕ್ಕಾಗಿ ಎಲ್ಲವನ್ನೂ ಬಿಟ್ಟರು… ನಾನು ಬಾಪುವನ್ನೇ ಬಿಟ್ಟು ಕೊಟ್ಟೆ ಎಂದು ಕಸ್ತೂರ್ ಬಾಯಲ್ಲಿ ಹೇಳಿಸಿ ಕಸ್ತೂರ್ ಎಂಬ ಜೀವ ಬಾಪುವಿಗಿಂತ ಅದು ಹೇಗೆ ಮೇಲು ಎಂದು ಸಾಬೀತು ಪಡಿಸಲು ತೊಡಗುತ್ತಾರೆ ಲೇಖಕಿ. ಐತಿಹಾಸಿಕ ಘಟನೆಗಳನ್ನು ಕ್ರಮಬದ್ಧವಾಗಿ ಪೋಣಿಸುವಲ್ಲಿ ಲೇಖಕರು ತೋರಿಸುವ ಸೂಕ್ಷ್ಮತೆ ಅನನ್ಯ. ಸಹಜವಾಗಿ ರೂಪು ತಳೆಯುವ ರೂಪಕಗಳಂತೂ ಒಂದಕ್ಕಿಂತ ಒಂದು ಚಂದ. ‘ ಸಬರಮತಿ ನದಿಯ ನೀರು ಅವರ ಲೇಖನಿಯ ಶಾಯಿಯಾಗಿ ತುಂಬಿ ಅದು ಖಾಲಿಯೇ ಆಗುತ್ತಿಲ್ಲವೇನೊ ಎನಿಸುವಷ್ಟು ಪತ್ರಗಳನ್ನು ಬಾಪು ಬರೆಯುತ್ತಿದ್ದರು..’ ‘ತಂದೆ ಮಕ್ಕಳ ಸಂಬಂಧ ಅಳಿಸಿ ಬಿಡಲು ಸಾಧ್ಯವೇ? ಎಷ್ಟಿಲ್ಲ ಅಂದರೂ ಚರ್ಮದ ಹಾಗೆ ಅಂಟಿಕೊಂಡಿರುತ್ತದೆ..’ – ಒಂದೆರಡು ಝಲಕು ಇವು. ತನ್ನವನ ಹೆಜ್ಜೆಯಲಿ ಹೆಜ್ಜೆ ಇರಿಸುತ್ತಲೇ ಸಾಗುವಾಗಲೂ ಆತನ ಗುಣ ಅವಗುಣಗಳನ್ನು ಒರೆಗೆ ಹಚ್ಚುತ್ತದೆ ಕಸ್ತೂರ್ ಜೀವ. ಲೋಕ ಆತನನ್ನು ಮಹಾತ್ಮನೆನ್ನುವಾಗ ಆತನಲ್ಲಿನ್ನೂ ಅಳಿಯದೇ ಉಳಿದ ‘ನಾನು’ ಇತ್ತು ಎಂಬುದನ್ನು ಆ ಜೀವ ಗುರುತಿಸುತ್ತದೆ. ಇದೆಲ್ಲವೂ ಲೇಖಕಿ ತಮ್ಮ ನಿಲುವು,ನೋಟಗಳಿಗೆ ತೊಡಿಸುವ ಸುಂದರ ಹೊದಿಕೆ.‌ ಭೂಮಿಯ ಮೇಲೆ ಬೆಳೆದ ಮರದಂತೆ ಬಾಪು.. ನೆಲವನ್ನೇ ಆಶ್ರಯಿಸಿ ಬೆಳೆದ ಗರಿಕೆ ತಾನು..ಎರಡರ ಮಾಪನವೂ ಬೇರೆ.. ಎರಡರ ಸಾರ್ಥಕ್ಯ ಒಂದೇ ಎಂಬ ಷರಾದೊಂದಿಗೆ ಕಥನಕ್ಕೊಂದು ಪೂರ್ಣ ವಿರಾಮ ಇರಿಸುವ ಲೇಖಕಿ ಕೊನೆಯಲ್ಲಿ ಪ್ರಶ್ನೆಯೊಂದನ್ನು ತೂರಿ ಬಿಡುತ್ತಾರೆ – ‘ಯಾವೆಲ್ಲ ಪ್ರಯೋಗಗಳನ್ನು ಗಾಂಧಿ ಮಾಡಿದರೊ.. ಯಾವುದಕ್ಕೆಲ್ಲ ತಾನು ಉರಿವ ದೀಪದ ಬತ್ತಿಯಾಗಿ ಸುಟ್ಟುಕೊಂಡೆನೊ ಅದೇ ತಿರುವು ಮುರುವಾಗಿದ್ದರೆ!! ಗಾಂಧಿಯಾಗಿ ರೂಪಾಂತರಗೊಂಡ ಮೋಕ ತನ್ನನ್ನು ಅದೇ ಶ್ರದ್ಧೆ, ನಿಷ್ಠೆಯಿಂದ ತನ್ನನ್ನು ಹಿಂಬಾಲಿಸುತ್ತಿದ್ದರೇ? ‘ ಹೆಣ್ಣು ಕುಲ ಎಂದಿನಿಂದ ಕೇಳುತ್ತಲೇ ಬಂದಿರುವ, ನಿಶ್ಯಬ್ದವೇ ಉತ್ತರವಾಗಿರುವ ಪ್ರಶ್ನೆ ಅದು. ಇಡಿಯಾಗಿ ಕಥಾನಕ ಪ್ರಸ್ತಾವನೆಯಲ್ಲಿ ಲೇಖಕಿ ತಾವೇ ಹೇಳಿರುವಂತೆ ಮಹಿಳಾ ದೃಷ್ಟಿಕೋನ, ಸಬಾಲ್ಟ್ರನ್ ದೃಷ್ಟಿಕೋನ, ದಲಿತ ದೃಷ್ಟಿಕೋನ, ಧಾರ್ಮಿಕ – ಆಧುನಿಕ ದೃಷ್ಟಿಕೋನ ಒಂದೊಂದು ಕೋನದಲ್ಲಿಯೂ ಬಾಪುವನ್ನು ವಿಮರ್ಶಿಸುತ್ತ ಬಾ ಬದುಕನ್ನು ಅಸದೃಶ್ಯ ಬಗೆಯಲ್ಲಿ ಕಟ್ಟಿಕೊಡುವಲ್ಲಿ ಯಶಸ್ಸು ಸಾಧಿಸುತ್ತದೆ. ಬಾ ಬದುಕನ್ನು ಕಸ್ತೂರ್ ಬದುಕಾಗಿ ನೋಡುವ ನೋಟ, ನಿರೂಪಿಸುವ ಲೇಖನಿ ಎರಡರ ಹಿಂದೆಯೂ ಅದ್ವಿತೀಯ ಓದು, ಪೂರ್ವಾಗ್ರಹಗಳಿಂದ ಹೊರತಾದ ಮನೋಭೂಮಿಕೆ, ಕವಿ ಹೃದಯ, ಸಂಗೀತದ ಮೋಡಿ, ಹೆಂಗರುಳಿನ ಅದಮ್ಯ ತುಡಿತ, ಸಂವೇದನೆಗಳು ಹದವಾಗಿ ಬೆರೆತಿವೆ. ಈ ಕಥಾನಕ ಆದಷ್ಟು ಶೀಘ್ರ ಅನುವಾದಕರ ಕಣ್ಣಿಗೆ ಬೀಳಬೇಕು. ಹೆಚ್ಚೆಚ್ಚು ಜನರನ್ನು ತಲುಪಬೇಕು. ಗಾಂಧಿ ಎಂಬ ಪದ ಮಾರುಕಟ್ಟೆಯ ಸರಕಿನಂತಾಗಿರುವ ಈ ದುರಿತ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಕೃತಿ ಬಿಕರಿಗಿಟ್ಟ ಕನಸು-ಕಾವ್ಯ ಲೇಖಕರು: ದೇವು ಮಾಕೊಂಡ ಡಾ.ವಿಜಯಶ್ರೀ ಇಟ್ಟಣ್ಣವರ ಕವಿಯೊಬ್ಬ ಕಾವ್ಯ ನರ‍್ಮಿತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕೆಂದರೆ ಕಾವ್ಯ ಪ್ರತಿಭೆ ಅವಶ್ಯ. ಅದನ್ನೇ ಆಲಂಕಾರಿಕರು ‘ಕವಿತ್ವ ಬೀಜಂ ಪ್ರತಿಭಾನಂ’ ಎಂದಿದ್ದಾರೆ. ಹಾಗಾದರೆ ಕಾವ್ಯ ನರ‍್ಮಿತಿಗೆ ಪ್ರತಿಭೆಯೊಂದೇ ಸಾಕೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಲ್ಲ, ಪ್ರತಿಭೆಯ ಜೊತೆಗೆ ಬದುಕಿನ ವಿಭಿನ್ನ ಅನುಭವ, ಆಲೋಚನೆಗಳು ಕವಿಯೊಬ್ಬನನ್ನು ನರ‍್ಮಿಸುತ್ತವೆ. ಹೊಸದನ್ನು ಕಾಣುವ, ಕಾಣಿಸುವ ಮನಸ್ಸು, ಪ್ರಜ್ಞೆ ಕವಿಗೆ ಬೇಕು.ಇದನ್ನೇ ಆಲಂಕಾರಿಕರು ‘ಪ್ರಜ್ಞಾ ನವನವೋನ್ಮೇಶ ಶಾಲಿನಿ’ ಎಂದಿದ್ದಾರೆ. ಜೊತೆಗೆ ಕಟ್ಟಿದ ಕಾವ್ಯವನ್ನು ಮತ್ತೆ ಮತ್ತೆ ಓರಣಗೊಳಿಸುವ ಪ್ರಯತ್ನವೂ ಅವಶ್ಯ. ಈ ಮೂರೂ ಮುಪ್ಪುರಿಗೊಂಡಾಗ ಯಶಸ್ವಿಗೊಂಡಾಗ ಯಶಸ್ವಿ ಕವಿಯೊಬ್ಬನನ್ನು ನರ‍್ಮಿಸುತ್ತವೆ. ಮೊದಲ ಪ್ರಯತ್ನದಲ್ಲೇ ಈ ಮೂರೂ ಲಕ್ಷಣಗಳನ್ನೊಳಗೊಂಡ ಕವಿ ದೇವಿ ಮಾಕೊಂಡ. ‌‌‌‌‌ ದೇವು ಮಾಕೊಂಡ ದೇಸೀ ಸಂಸ್ಕೃತಿ-ಪ್ರಜ್ಞೆಯನ್ನುಳ್ಳ ಕವಿ. ಹಳ್ಳಿ ವಿಭಿನ್ನ ಅನುಭವಗಳ ಆಗರ. ಲೊಕಜ್ಞಾನದ ಕೇಂದ್ರ. ಮನುಷ್ಯನಿಗೆ ಹಳ್ಳಿ ಕೊಡುವ ಅನುಭವ ಸಂಪತ್ತನ್ನು ಪಟ್ಟಣ ಕಟ್ಟಿಕೊಡಲಾರದು. ಪಟ್ಟಣದ ಕಂಪೌಂಡ ಸಂಸ್ಕೃತಿಯ ಅಡಿಯಾಳಾಗಿರುವ ನಾವುಗಳು ಇಂದು ನಮ್ಮ ಸುತ್ತ ಸ್ವರ‍್ಥದ ಗೋಡೆಕಟ್ಟಿಕೊಂಡಿದ್ದೇವೆ. ಆದರೆ ದೇವು ಮಾಕೊಂಡ ಹಳ್ಳಿಯೊಳಗೊಂದಾಗಿ ಬದುಕಿದ ಆಧುನಿಕ ಮನುಷ್ಯ. ಅಂತಲೇ ಈ ವ್ಯಕ್ತಿಗೆ ಹಳ್ಳಿಯಿಂದ ದಿಲ್ಲಿ ದಿಗಂತದವರೆಗಿನ ಅಪಾರ ಲೋಕಜ್ಞಾನವಿದೆ. ಅವರಿಗೆ ತಾನು, ತನ್ನ ವೈಯಕ್ತಿಕ ಬದುಕು ಇದಿಷ್ಟೇ ಜೀವನವಲ್ಲ. ಅದರಾಚೆಗೂ ತುಡಿತ-ತಲ್ಲಣಗಳಿವೆ. ಅಂತಲೇ ಅವರಿಗೆ ಅನ್ಯಾಯ, ಅತ್ಯಾಚಾರ, ಪರಿಸರ ನಾಶ, ಕೋಮು ಸಂರ‍್ಷ, ಜಾತಿ ಅಸಮಾನತೆಗಳ ಕುರಿತು ರೋಷವಿದೆ. ವಿರೂಪಗೊಂಡ ದೇಶದ ಚಿತ್ರಣದ ಜೊತೆಗೆ ನಮ್ಮಲ್ಲಿ ಇನ್ನೂ ಜೀವಂತವಿರುವ ಪ್ರೀತಿ, ಪ್ರೇಮ, ನನ್ನೂರು. ನನ್ನ ದೇಶಗಳ ಕುರಿತು ಅಭಿಮಾನವಿದೆ. ಇದನ್ನೆಲ್ಲ ನೋಡಿದಾಗ ಕವಿಗೆ ಒಟ್ಟು ಬದುಕಿನ ಬಗೆಗಿರುವ ವಿಶಾಲ ದೃಷ್ಟಿಕೋನದ ಅರಿವುಂಟಾಗುತ್ತದೆ. ಅದಕ್ಕೆ ಸಾಕ್ಷಿ ಬಿಕರಿಗಿಟ್ಟ ಕನಸುವಿನಲ್ಲಿನ ಕಾವ್ಯಾಭಿವ್ಯಕ್ತಿಗಳು.‍ ‘ಬಿಕರಿಗಿಟ್ಟ ಕನಸು’ ಸಮನ್ವಯ ಮಾದರಿಯ ಕವನ ಸಂಕಲನ. ಇಲ್ಲಿಯ ಕವನಗಳಲ್ಲಿ ನವೋದಯದ ಜೀವನ ಪ್ರೀತಿ, ರಾಷ್ಟ್ರಭಕ್ತಿ, ಪ್ರಕೃತಿ ಪ್ರೀತಿ, ಆರ‍್ಶ ಕಲ್ಪನೆಗಳಿವೆ. ಪ್ರಗತಿಶೀಲರ ಪ್ರಗತಿಯ ದೃಷ್ಟಿಕೋನವಿದೆ, ಡೋಂಗಿ ಬಾಬಾಗಳನ್ನು ಬಯಲಿಗೆಳೆಯುವ ದಿಟ್ಟತನವಿದೆ. ನವ್ಯರ ಪ್ರತೀಕಾತ್ಮಕವಾಗಿ ಹೇಳುವ ಕಲೆಗಾರಿಕೆ ಇದೆ, ಬದುಕು-ದೇಶದ ಬಗ್ಗೆ ಭ್ರಮನಿರಸನವಿದೆ. ಬಂಡಾಯದ ಪ್ರತಿಭಟನಾ ಗುಣವಿದೆ. ಹೀಗೆ ಇದುವರೆಗಿನ ಕನ್ನಡ ಸಾಹಿತ್ಯ ಚಳುವಳಿಗಳಿಗೆಲ್ಲ ಇಲ್ಲಿ ಸ್ಪಂದನೆ ಇದೆ. ಜೊತೆಗೆ ರ‍್ತಮಾನಕ್ಕೂ ಪ್ರತಿಕ್ರಿಯೆ ಇದೆ. ಈ ಸಂಕಲನದಲ್ಲಿ ಒಟ್ಟು ೪೩ ಕವನಗಳಿವೆ. ಅವನ್ನು ಸ್ಥೂಲವಾಗಿ ಐದು ವಿಭಾಗಗಳನ್ನಾಗಿ ಮಾಡಿಕೊಂಡು ನೋಡಬಹುದು. ಕೋಮು-ಜಾತಿ ಸಂರ‍್ಷ , ಪ್ರೇಮಕವಿತೆಗಳು , ಪರಿಸರ ಕಾಳಜಿ, ರ‍್ತಮಾನಕ್ಕೆ ಪ್ರತಿಕ್ರಿಯೆ ಹೀಗೆ ಅನೇಕ ಭಾವದ ಕವಿತೆಗಳು ಈ ಸಂಕಲನದಲ್ಲಿವೆ. ಮನುಷ್ಯ ಮನುಷ್ಯನನ್ನು ಒಡೆಯುವ ರ‍್ಮ ಜಾತಿಗಳ ಕುರಿತಾಗಿ ಕವಿಗೆ ಅಪಾರವಾದ ಆಕ್ರೋಶವಿದೆ. ಅದನ್ನು ಬಿಕರಿಗಿಟ್ಟ ಕನಸು, ಗುಲಾಮಗಿರಿ, ಚಂದ್ರನ ಸಾಕ್ಷಿಯಾಗಿ, ನನ್ನೆದೆಯೇ ಮಹಾಗ್ರಂಥಗಳಂತಹ ಕವನಗಳಲ್ಲಿ ಕಾಣಬಹುದು. ಉದಾಹರಣೆಗೆ, ಬಿಕರಿಗಿಟ್ಟ ಕನಸು ಕವಿತೆಯಲ್ಲಿ “ಬಂದೂಕಿನ ನಳಿಕೆಯಲಿ ಗೂಡು ಕಟ್ಟಲು ಹೋದ ಹಕ್ಕಿ ಮೊಟ್ಟೆ ಇಟ್ಟ ಭ್ರೂಣ ತಟ್ಟದೇ ಅಳಿಯುತ್ತಿದೆ” ಎಂಬ ಸಾಲುಗಳಲ್ಲಿ ಕವಿಯ ನೋವು ಅಭಿವ್ಯಕ್ತಗೊಳ್ಳುತ್ತದೆ. ಮಾನವೀಯತೆಯ ಆಶಯ ಬಂದೂಕಿನ ಬಾಯಲ್ಲಿ ಗುಬ್ಬಚ್ಚಿ ಗೂಡುಕಟ್ಟಬೇಕೆಂಬುದು. ಆದರೆ ಗುಬ್ಬಚ್ಚಿ ಬಂದೂಕಿನ ಬಾಯಲ್ಲಿ ಗೂಡು ಕಟ್ಟಿ ಇನ್ನೇನು ಆ ಭ್ರೂಣಕ್ಕೆ ಕಾವು ಕೊಟ್ಟು ಮರಿಮಾಡಬೇಕು ಅಷ್ಟರಲ್ಲಿ ಆ ಗೂಡು ತತ್ತಿ ಸಹಿತವಾಗಿ ಇಲ್ಲವಾಗುವದು ಇಂದಿನ ಕರಾಳ ವಾಸ್ತವ. ಇಂಥ ಸಾಲುಗಳು ಕವಿಯ ಕಾವ್ಯ ಶಕ್ತಿಗೆ ಕೈಗನ್ನಡಿ. ಬಿಕರಿಗಿಟ್ಟ ಕವಿತೆ ಕೋಮು ದಳ್ಳುರಿಯ ಬೆಂಕಿ ಹೇಗೆ ಜಗತ್ತನ್ನೇ ಬೇಯಿಸುತ್ತಿದೆ, ಶಾಂತಿ ಸೌಹರ‍್ದತೆಯ ನೆಲೆವೀಡಾದ ತಾಣಗಳನೇಕ ಇಂದು ರಕ್ತದ ಮಡುವಾಗಿ ಭಯ ಹುಟ್ಟಿಸುವ ತಾಣಗಳಾಗಿರುವುದರ ಬಗ್ಗೆ ಕವಿಗೆ ವಿಶಾದವಿದೆ. ಬೆಂಕಿಯ ಮಳೆ ಕವಿತೆಯಲ್ಲಿ ಇಂದು ದೇಶಾದ್ಯಂತ ಭಯೋತ್ಪಾದನೆ, ನಕ್ಸಲ್ ಚಟುವಟಿಕೆ, ಅತ್ಯಾಚಾರ, ಅನ್ಯಾಯ, ಅಸಹಿಷ್ಣುತೆ ತಾಂಡವವಾಡುತ್ತಿವೆ. ದೇಶಕ್ಕೊದಗಿದ ಇಂಥ ದರ‍್ದೆಸೆಗೆ ಕವಿ ಮನಸ್ಸು ಘಾಸಿಗೊಂಡಿದೆ. ಗುಲಾಮಗಿರಿ, ನೊಂದವರು ನೋಯುತ್ತಲೇ ಇರುತ್ತಾರೆಯಂಥ ಕವಿತೆಗಳಲ್ಲಿ ಪರಂಪರಾಗತವಾಗಿ ಬಂದ ಯಜಮಾನ್ಯ ಸಂಸ್ಕೃತಿಯನ್ನು ಪುರೋಹಿತಶಾಹಿಯನ್ನು ಕವಿ ಪ್ರತಿಭಟಿಸುತ್ತಾನೆ. ಆದರೆ ಈ ಪ್ರತಿಭಟನೆ ಸೌಮ್ಯ ತೆರನಾದದ್ದಾಗಿದೆ. ‘ಗುಲಾಮಗಿರಿ’ ಕವಿತೆಯಲ್ಲಿ “ನನ್ನ ಸುಕ್ಕುಗಟ್ಟಿದ ನಲುಗಿ ಬಾಡಿದ ದೇಹದ ಹನಿ ರಕ್ತದಿಂದ ನಿನ್ನ ಸುಖದ ಗೋಪುರ ಕಟ್ಟಿರುವೆ ನನ್ನ ನೋವಿನ ಮಡುವಿನಿಂದ ನಿನ್ನ ಜೀವನ ಸಾಗಿದೆ” ಎಂದು ಪ್ರತಿಭಟಿಸುತ್ತಾನೆ ಕವಿ. ‘ಚಂದಿರನ ಸಾಕ್ಷಿಯಾಗಿ’ ಕವಿತೆಯಂತೂ ಕತೆಯಾಗುವ ಕವಿತೆ. ಲಂಕೇಶರ ದಾಳಿ ಕಥೆಯನ್ನು ನೆನಪಿಸುವ ಕವಿತೆ. ಪ್ರಕೃತಿ ತಾನೆ ಮನುಷ್ಯನನ್ನು “ನಿಮ್ಮ ಮನೆಯ ಮಗಳೆಂದು ರಕ್ಷಿಸಿ” ಎಂದು ಬೇಡಿಕೊಳ್ಳುವ ದಯನೀಯತೆ ಪ್ರಕೃತಿ ಎದುರಾಗಿದ್ದನ್ನು ದುಃಖದಿಂದ ಹೇಳುತ್ತಾನೆ ಕವಿ. ಸಂಬಂಧ-ಸಾಂಗತ್ಯ ಕವಿತೆಯಲ್ಲಿ “ಕಣ್ಣು-ಕಿವಿ ಮೂಗು-ಬಾಯಿ ತುಂಡರಸಿ ಕಾಮನೋಟ ಬೀರಿ ನಿತಂಬ ಕತ್ತರಿಸಿ ಹಾಕುವಾಗ ತನಿರಸ ಧಾರೆ ಎರೆದ ಗಳಿಗೆ ನೆನಪಾಗಲಿಲ್ಲವೆ?” ಎನ್ನುತ್ತಾನೆ ಕವಿ. ಇದು ಕವಿತೆಯ ಕೊನೆಯ ನುಡಿ. ಈ ನುಡಿಗೆ ಬರುವವರೆಗೂ ಕವಿ ಪ್ರಕೃತಿ ಮತ್ತು ಜೀವ ಸಂಕುಲದ ಮಧ್ಯದ ಅವಿನಾಭಾವ ಸಂಬಂಧವನ್ನು ರ‍್ಣಿಸುತ್ತಾ ಕೊನೆಗೆ ಈ ಮೇಲಿನಂತೆ ಹೇಳುತ್ತಾನೆ. ಪ್ರಕೃತಿಯ ಮೇಲೆ ಮಾನವನ ಕಾಮದ ಕಣ್ಣು ಬಿದ್ದಿದೆ. ಎಲ್ಲೆಲ್ಲ ಕಾಮದ ಕಣ್ಣು ಬೀಳುವದೋ ಅಲ್ಲೆಲ್ಲ ಸ್ವರ‍್ಥ ಮನೆ ಮಾಡುತ್ತದೆ. ಮಾನವ ದಾನವನಾಗಿ ಅಮಾನುಷವಾಗಿ ರ‍್ತಿಸಲಾರಂಭಿಸುತ್ತಾನೆ. ಅದನ್ನೇ ಕವಿ ಇಲ್ಲಿ ಹೀಗೆ ಕವಿತೆಯಾಗಿಸಿದ್ದಾನೆ. ಇನ್ನು ವಸಂತಕಾಲದ ಚಿಟ್ಟೆ, ನಲ್ಲೆ, ಬರಿ ನೋಟವಲ್ಲದಂತಹ ಮುದನೀಡುವ ಪ್ರೇಮ ಕವಿತೆಗಳಿವೆ. ಆರ‍್ಶ ಮೌಲ್ಯಗಳನ್ನು ಪ್ರತಿಪಾದಿಸುವ ನಾಡ ಕಟ್ಟತೇವ, ಭಾವಕೋಶವೊಂದೇ ಭಾರತಯಂತಹ ಕವಿತೆಗಳು ಸಂಕಲನದ ಮೌಲ್ಯ ಹೆಚ್ಚಿಸುತ್ತವೆ. ಜೊತೆಗೆ ರ‍್ತಮಾನಕ್ಕೆ ಕವಿಯ ಪ್ರತಿಕ್ರಿಯೆಯಾಗಿ ಗೋರಿಯೊಳಗಿನ ಹೂವು, ಭೀಮೆಯ ಸಿರಿಯಂತಹ ಕವಿತೆಗಳಿವೆ. ಹೀಗೆ ಕವಿ ವಿಭಿನ್ನ ವಸ್ತು, ಆಶಯ, ಸನ್ನಿವೇಶಗಳಿಗೆ ತನ್ನದೇರೀತಿಯಲ್ಲಿ ಪ್ರತಿಕ್ರಿಯಿಸುತ್ತಾನೆ, ಅಭಿವ್ಯಕ್ತಿಸುತ್ತಾನೆ. ಕವಿಯೊಬ್ಬನ ಕವಿತೆಗಳೆಲ್ಲ ಒಂದೇ ಎತ್ತರದಲ್ಲಿರಲು ಸಾಧ್ಯವಿಲ್ಲ, ಅದನ್ನು ಕವಿಯಿಂದ ನಿರೀಕ್ಷಿಸಲೂ ಬಾರದು. ಎಷ್ಟೇ ದೊಡ್ಡ ಕವಿಯಾದರೂ ಸಾರಸ್ವತಲೋಕದಲ್ಲಿ ಕವಿಯೊಬ್ಬ ನೆಲೆ ನಿಲ್ಲುವದು ಕೆಲವು ಕವಿತೆಗಳಿಂದ ಮಾತ್ರ. ಅಂತೆಯೇ ದೇವು ಮಾಕೊಂಡ ಸಹ ಸುಡಗಾಡ ಹೂ, ಬಿಕರಿಗಿಟ್ಟ ಕನಸು, ಗುಲಾಮಗಿರಿ, ನೊಂದವರು ನೋಯುತ್ತಲೇ ಇರುತ್ತಾರೆ, ಚಂದ್ರನ ಸಾಕ್ಷಿಯಾಗಿ, ಗೋರಿಯೊಳಗಿನ ಹೂ, ಬಿಳಿ ಕ್ರಾಂತಿಯ ಶಿಶು ಅಂತಹ ಕವಿತೆಗಳಿಂದ ಒಂದಿಷ್ಟು ಕಾಲ ಈ ಸಾರಸ್ವತ ಲೋಕದಲ್ಲಿ ನೆಲೆ ನಿಲ್ಲುತ್ತಾರೆ. ಎಲ್ಲಕ್ಕೂ ಮಿಗಿಲಾಗಿ ಕಾವ್ಯ ರಸಾನಂದವನ್ನು ನೀಡಬೇಕು ಎನ್ನುವರು ಅಂಥ ರಸಾನಂದವನ್ನು ನೀಡುವ ಕವಿತೆ ಬಿಳಿ ಕ್ರಾಂತಿಯ ಶಿಶು. ಹೀಗೆ ಮೋದಲ ಸಂಕಲನದಿಂದಲೇ ಭರವಸೆಯನ್ನು ಮೂಡಿಸಿದ ಕವಿ ಮುಂದಿನ ದಿನಮಾನಗಳಲ್ಲಿ ಮತ್ತೊಂದಿಷ್ಟು ಸಂಕಲನಗಳ ಮೂಲಕ ಕಾವ್ಯ ಸಂಪತ್ತನ್ನು ಹೆಚ್ಚಿಸಲಿ.

ಪುಸ್ತಕ ವಿಮರ್ಶೆ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ಮಣ್ಣಿಗೆ ಬಿದ್ದ ಹೂಗಳು ಬಿದಲೋಟಿ ರಂಗನಾಥ್ ಅರುಣ್ ಕುಮಾರ್ ಬ್ಯಾತ ಬಿದಲೋಟಿ ರಂಗನಾಥ್ ಸರ್ ಜಾಲತಾಣದ ಆತ್ಮೀಯರಾದರೂ ಅವರು ಭೇಟಿ ಆದದ್ದು, ಮೊನ್ನೆ ತುಮಕೂರಿನ ಕಾರ್ಯಕ್ರಮವೊಂದರಲ್ಲಿ. ಮಾತಾಡಿಸಿ ಕೈಗೆರಡು ಪುಸ್ತಕಗಳನಿಟ್ಟು ಓದು ಎಂದರು. ನಾನೂ ಬಿಡುವಿನಲ್ಲಿ ಹಾಗೇ ಕಣ್ಣಾಡಿಸಿದೆ ಒಂದು ಮೂರು ಹತ್ತು ಹೀಗೆ ಎಲ್ಲವೂ ಮುಗಿದುಹೋದವು…ಓದಿಕೊಂಡಾಗ ಉಳಿದ ನನ್ನವೇ ಒಂದಿಷ್ಟೇ ಇಷ್ಟು ಅನಿಸಿಕೆಯನ್ನು ಇಲ್ಲಿ ಬರೆಯುವುದಕ್ಕೆ ಪ್ರಯತ್ನಿಸಿರುವೆ… ಏನು ಮಣ್ಣಿಗೆ ಬಿದ್ದ ಹೂವುಗಳು..? ಯಾಕೆ ಇದೇ ಶೀರ್ಷಿಕೆ ಇಟ್ಟರು ಎಂದು ತಡಕಾಡಿದೆ…! ಒಂದೆರಡು ಸಾಲು ಉತ್ತರ ಹೇಳಿದಂತಿದ್ದವು..,ಬುಡ್ಡಿಯ ಬೆಳಕ ಕಳೆದುಕೊಂಡು ಬೆಳದಿಂಗಳ ಬೆಳಕಲ್ಲಿ ಗೂಡಿರಿಸಿ ಮಲಗಿದ್ದ ತಣ್ಣನೆಯ ನೆನಪುಗಳನ್ನು ಕರ ಜೋಡಿಸಿ ಕಣ್ಣಲ್ಲಿ ಕರೆದ ದಾರಿಯಲ್ಲಿ ಬಂದ ಕಾವ್ಯಗಳಿಗೆ ಜೋಕಾಲಿ ಕಟ್ಟಿದೆ..! ನಾನು ನಾನಗದೇ ಭಾವ ಬಿಂದುವಿಗೆ ಹೂ ಮುಡಿಸಿ ಅಂದ ತುಂಬಿಕೊಂಡು ಕುಣಿಯುತ್ತಿದ್ದೆ…! ಅಲ್ವಾ… ಕೊಂಚ ಶಾಂತಿ ಸಿಗಲು ನಾ, ಅಡವಿಟ್ಟ ಮೊದಲ ಎಸಳ ಕವಿತೆಯ ಸಾಲು ಕೊಡು ಅದರಿಂದ ನೂರು ಭಾವ ತುಂಬಿದ ಕವಿತೆ ಬರೆದು ಕೊಡುವೆ ನಾನು…! ಕವಿಯೊಬ್ಬನ ಅಂತರಂಗದಲ್ಲಿ ಮಂಥನ ಮಾಡಬಲ್ಲ ಭಾವಯಾನ ಇಲ್ಲಿ ವ್ಯಕ್ತವಾಗುತ್ತದೆ. ಇಲ್ಲೂ ಕವಿಗಳು ತಮ್ಮದೇ ನಿಲುವಿನಲ್ಲಿ ಜಾತಿಯನ್ನು ನಿಂದಿಸುತ್ತಾರೆ, ಒಳಗಿನ‌ ಸೇಡ ನಿರ್ಭೀತಿಯಿಂದ ಹೊರಹಾಕುತ್ತಾರೆ..”ನಾನು ನಾನಗಿರುವುದಿಲ್ಲ , ನಿನ್ನ ಜಾತಿ ಯಾವುದೆಂದರೆ ಮೈ ಕೈ ಪರಚಿಕೊಳ್ಳುತ್ತೇನೆ ಎಂದು ಒಳಗಿನ‌ ಒಡಬಾಗ್ನಿಯನ್ನು ರಾಚುತ್ತಾರೆ…! ಆಕಾಶ ಮಡಿಕೆ ತೂತು ಬಿದ್ದ ರಾತ್ರಿ ಕವಿತೆಯಲ್ಲಿ ಬಡತನದ ಅನಾವರಣ ತರೆದಿಟ್ಟಿದ್ದಾರೆ., ಹೌದು ನಾನು ಆ ತರಹದ ನಡುರಾತ್ರಿ ಬಡಿಸ ಮಳೆಗೆ ತಡಕಾಡಿದ ಅಪ್ಪನನ್ನು, ಬಡಿದಾಡಿದ ಅಮ್ಮನನ್ನು, ಮಿಸುಕಾಡದೇ ಕೂತ ನಮ್ಮನ್ನು ನಮಗೆ ನೆನಪಿಸಿದವು…ಅಸಹಾಯಕತೆಗೆ ಎಷ್ಟು ಸೇಡು…! ಅಂದು ತೊಟ್ಟಿಕ್ಕಿದ ಆ ತೂತಾದ ಸೂರಿನಲ್ಲಿ ಬಿದ್ದ ಹನಿಗಳ ಕಲರವ ಇನ್ನೂ ಕಿವಿಗಳಲ್ಲಿದೆ.. ಒಳಗೆ ನುಗ್ಗಿದ ನೀರು ಒಲೆಯ ಮೆದು ಮಾಡಿ ಎನ್ನುವಾಗ ಹಪಹಪಿಸಿದ ಹಸಿವು ಕಾಣುತ್ತದೆ…! ಕಾಲದೊಟ್ಟಿಗೆ ಪ್ರೀತಿಯನ್ನು ಅದರ ಬದಲಾವಣೆಯಲ್ಲಿ ತನ್ನನ್ನೂ ತಿರುಗಿಸುತ್ತಾ ಕವಿ ನನ್ನಿಂದಿಲ್ಲದ ಕಾಲ ಎಂಬ ಕವಿತೆಯಲ್ಲಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.. ಸಾಲುಗಳು ಎಷ್ಟು ಚಂದ…, ” ಪ್ರೀತಿ ಬದುಕಿದ್ದ ಕಾಲದಲ್ಲಿ ಭಾವ ಸುರುಳಿಯಾಗಿತ್ತು, ಅಕ್ಕ ಪಕ್ಕದ ಗುಳ್ಳೆಯ ಹಂಗಿರಲಿಲ್ಲ ಮನಸ್ಸು ತಿಳಿಯಾಗಿತ್ತು…ಕದಡಿರಲಿಲ್ಲ…! ಕನಸುಗಳನ್ನು ಹಾರಿ ಬಿಟ್ಟಿದ್ದೇನೆ ಎಲ್ಲಿದ್ದರೂ ಹಿಡಿದುಕೋ ಎಂಬ ಸಾಲು ಎಷ್ಟು ಸತ್ಯವಾಗಿವೆ…! ಮೂಕ ಹಕ್ಕಿಯ ಮಾತು ಕವಿತೆಯಲ್ಲಿ ” ನನ್ನನ್ನು ನಾನೇ ನೋಡಿಕೊಳ್ಳುತ್ತೇನೆ,‌ ನನಗೆ ನಾನೇ ಅರ್ಥವಾಗದ ಹಾಗೆ, ಸದ್ದು ಗದ್ದಲದ ನಡುವೆ ಒಬ್ಬನೇ ಕೂತು” ಎಂದು ಒಂಟಿತನದ ಸಂಕಟದಲ್ಲೇ ತನ್ನೊಳಗಿನ‌ ತನ್ನನ್ನು ಸಮಾಧಾನಿಸುತ್ತಾ ನೋಡುವ ಬಗೆಯ ಬರೆಯುತ್ತಾರೆ. ಹೀಗೆ ಒಂದೈವತ್ತು ಕವಿತೆಗಳು ಈ ಪುಸ್ತಕದಲ್ಲಿವೆ, ಅವರೇ ಹೇಳುವಂತೆ ದಿಕ್ಕೆಟ್ಟವರ ಅಸಹಾಯಕರ ನಿರ್ಗತಿಕರ ಕೈ ಹಿಡಿದು ಮೇಲುತ್ತವ ಕವಿತೆಗಳು ಹೆಚ್ಚು ಕಿವಿ ತಟ್ಟುತ್ತವೆ.. ನೆಲದ ಜೀವಗಳ ಅಂತಃಕರಣ ಕವಿಯನ್ನು ಹೆಚ್ಚಾಗಿ ಕಾಡಿವೆ..ಬದುಕನ್ನೇ ಅಕ್ಷರಗಳಿಗೆ ಕಟ್ಟಿಕೊಟ್ಟ ಕವಿತೆಗಳು ನಮ್ಮವೇ ಎಂಬ ಹಳೆಯ ನೆನಪುಗಳ ಮತ್ತೆ ನೆನಪಿಸುತ್ತವೆ. ಹಳ್ಳಿ ದಾಟಿ ಕವಿತೆಗಳ ವಸ್ತು ಹೊರಗೆ ಹೋಗಿಲ್ಲ…! ಅಪ್ಪ ಅಮ್ಮ ಸಂಸಾರ ಬಡತನ, ಜಾತಿ, ಬಣ್ಣ, ಹಸಿವು ಅಸಹಾಯಕತೆ, ಹೊಟ್ಟೆ ಚುರುಕಿನ ಹೊಯ್ದಾಟಗಳ ಇಲ್ಲಿ ಕಾಣಬಹುದು..! ಕವಿತೆ ಬರೆಯಲು ಹಪಹಪಿಸುವ ನಮಗೆ ಸಿಕ್ಕದ್ದನ್ನೇ ಗೀಚಾಡುವ ಸಮಯಕ್ಕೆ ಬರೆಯಲು ಇಷ್ಟು ನಮ್ಮವೇ ವಿಷಯ ಇದ್ದಾವಲ್ಲ ಎಂಬ ಅಚ್ಚರಿಯೂ ಈ ಪುಸ್ತಕ ಓದಿದ ಮೇಲೆ ಅನಿಸದೇ ಇರದು.. ಕವಿತೆಗಳಲ್ಲಿ ಕಣಬಹುದಾದ ಬಳಸಿದ ಪದಗಳಂತು ಅವರೆಕಾಯಿ ಸೊಗಡಿನಂತವು, ದಾರಿ ಬದಿಯ ಹೂಗಳ ಘಮದಂತವು, ಬಿದ್ದ ಗಾಯದ ಗುರುತಿನಂಥವು…! ಹಾಗೇ ನಮ್ಮನ್ನು ಮುಟ್ಟಿ ಹೋಗಿ ಮರೆಯಾಗಿ ಮತ್ತೆ ಬಂದು ಬಡಿದೆಬ್ಬಿಸುವಂತಹ ಪದಗಳ ಕೈ ಚಳಕವಿದೆ…! ಓದುತ್ತಾ ನನ್ನ ಬಾಲ್ಯವೂ ಮರುಕಳಿಸಿತು. ಅಗಾಧ ಶ್ರೀಮಂತಿಕೆಗೆ ಬಡತನದ ಹಸಿವಿನ ನೋವು ಅರ್ಥವಾಗುವುದಿಲ್ಲ..ನಾವು ಹಸಿದವರು ಅನ್ನದ ಬೆಲೆಯೂ ಅಕ್ಷರಗಳ ಅಕ್ಕರೆಯೂ ನನ್ನ ಹಸಿವಿಗೆ ತುತ್ತನಿಟ್ಟು ಸಂತೈಸಿದವು… ಇಂತಹದ್ದೊಂದು ಪುಸ್ತಕ ಕೈಯಲ್ಲಿ ಇರಿಸಿದ ನಿಮಗೆ ಹೃದಯ ಪೂರ್ವ ಧನ್ಯವಾದಗಳು ಸರ್..ಮತ್ತಷ್ಟು ಮಣ್ಣಿನ‌ ಸೊಗಡಿನ ಪುಸ್ತಕಗಳು ನಮ್ಮೊಳಗೆ ಉಸಿರಾಡಲಿ…. ಪ್ರೀತಿಯಿಂದ ——————————–

ನಾನು ಓದಿದ ಪುಸ್ತಕ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಭ್ರಮ

ಲೋಕಾರ್ಪಣೆ ಹೆಚ್.ಎಸ್.ಸುರೇಶ್ ಸೂರ್ಯನ ಕಥೆಗಳು(ಕಥಾಸಂಕಲನ) ಹೊಗರೆ ಖಾನ್ ಗಿರಿ(ಕಾದಂಬರಿ) ನಮ್ಮೂರಿನ ಕಾಡು ಮಲ್ಲಿಗ(ಕಥಾ ಸಂಕಲನ) ತೀರ್ಪು(ಕಥಾ ಸಂಕಲನ) ಹೀಗೂಇದ್ದನೇ ರಾವಣ(ನಾಟಕ) ಪ್ರಶ್ನಿಸುವ ಸಾಹಿತ್ಯಕ್ಕೆ ದೇಶದ್ರೋಹದ ಪಟ್ಟ “ಇಂದುಜನಪರ ಸಾಹಿತ್ಯವು ಆತಂಕದ ಸ್ಥಿತಿಯಲ್ಲಿದೆ.ವ್ಯವಸ್ಥೆಯ ಲೋಪದೋಷಗಳನ್ನುಪ್ರಶ್ನಿಸುವ ಸಾಹಿತಿಗಳಿಗೆ ದೇಶದ್ರೋಹಿಗಳ ಪಟ್ಟ ಕಟ್ಟುವಹೊಸಸಂಪ್ರದಾಯ ಪ್ರಾರಂಭವಾಗಿದೆ: ಎಂದು ಹಿರಿಯ ಸಾಹಿತಿ ಶ್ರೀ ಕು.ಸ.ಮಧುಸೂದನರಂಗೇನಹಳ್ಳಿ ವಿಷಾದಿಸಿದರು. ಶ್ರೀಯುತರು ಲೋಕಾರ್ಒಣೆ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು  ತರೀಕೆರೆಯಲ್ಲಿ ಬಾನುವಾರ (17-11-2019ರಂದು)ಶ್ರೀ ಹೆಚ್.ಎಸ್.ಸುರೇಶ್ ಅವರ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದ್ಲಲ್ಲಿ ಅವರು ಮಾತನಾಡುತ್ತ “ಸಾಹಿತಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು,ಸತ್ಯಹುಡುಕಬೆಕು”ಎಂದು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ತಿನಮಾಜಿ ಅದ್ಯಕ್ಷರಾದ ಶ್ರೀ ಹೆಚ್. ಚಂದ್ರಪ್ಪನವರು ಅದ್ಯಕ್ಷತೆ ವಹಸಿದ್ದು,ಕಿರುತೆರೆಕಲಾವಿದೆ ಶ್ರೀಮತಿ ನಂದಿನಿ ಪಟವರ್ಷನ್ ಉದ್ಘಾಟನೆ ಮಾಡಿದರು.ಸಾಹಿತಿಗಳಾದಶ್ರೀನಾಗೇನಹಳ್ಳಿತಿಮ್ಮಯ್ಯ,ಶ್ರೀಭಗವಾನ್,ಎಂ.ಕೆ.ವಿಜಯಕುಮಾರ್,ಶ್ರೀಓಂಕಾರಪ್ಪನವರು ಉಪಸ್ಥಿತರಿದ್ದು ಕೃತಿಗಳ ಬಗ್ಗೆ  ಮಾತನಾಡಿದರು.

ಪುಸ್ತಕ ಸಂಭ್ರಮ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಕೃತಿ-ಗುಣ (ಕಾದಂಬರಿ) ಲೇಖಕರು-ಡಾ.ಗುರುಪ್ರಸಾದ್ ಕಾಗಿನೆಲೆ ಛಂದ ಪುಸ್ತಕ ಡಾ.ಅಜಿತ್ ಹರೀಶಿ ಶಿವಮೊಗ್ಗದಲ್ಲಿ ಹುಟ್ಟಿ ಬಳ್ಳಾರಿಯಲ್ಲಿ ಎಂಬಿಬಿಎಸ್.ಎಂಡಿ ಮಾಡಿ ಪ್ರಸ್ತುತ ಅಮೆರಿಕದಲ್ಲಿ ಎಮರ್ಜೆನ್ಸಿ ವೈದ್ಯರಾಗಿ ಕೆಲಸಮಾಡುತ್ತಿರುವ ಗುರುಪ್ರಸಾದರು ಬರೆದಿರುವ ಕಾದಂಬರಿಯಿದು. ಬಿಳಿಯ ಚಾದರ,ಗುಣ ಮತ್ತು ಹಿಜಾಬ್ ಅವರ ಪ್ರಕಟಿತ ಕಾದಂಬರಿಗಳು. ನಿರ್ಗುಣ, ಶಕುಂತಳಾ ಕಥಾಸಂಕಲನಗಳು, ಲೇಖನ ಸಂಗ್ರಹ-ವೈದ್ಯ ಮತ್ತೊಬ್ಬ, ಆಚೀಚೆ ಕಥೆಗಳು- ಸಂಪಾದಿತ ಕಥಾಸಂಕಲನಗಳನ್ನು ಇವರು ಪ್ರಕಟಿಸಿದ್ದಾರೆ. ಹಿಂದಿನ ದಶಕದಲ್ಲಿ ಅಮೆರಿಕೆಯಲ್ಲಿ ಘಟಿಸಿರಬಹುದಾದ, ಈ ದಶಕದಲ್ಲಿ ಭಾರತದ ಮಹಾನಗರಗಳಲ್ಲಿ ನಡೆಯುತ್ತಿರಬಹುದಾದ ಮತ್ತು ಮುಂದಿನ ದಿನಮಾನಗಳಲ್ಲಿ ನಾವೇ ಕಾಣಬಹುದಾದ ವಿಶಿಷ್ಟ ಕಥಾನಕವೇ ‘ ಗುಣ ‘ ಎನ್ನಬಹುದು. ಇದು ವಿದೇಶಿ ನೆಲದಲ್ಲಿ ಚಲಿಸುವ ಘಟನಾವಳಿಗಳ ನೋಟವಾದರೂ ಇದರ ಕೇಂದ್ರ ಭಾರತೀಯ ಮನಸ್ಥಿತಿಯೇ ಆಗಿದೆ. ಗೌತಮ ಮತ್ತು ಭಾರತಿ ಎಂಬ ವೈದ್ಯರ ಬದುಕಿನ ಕಥೆಯನ್ನು ಹೇಳುತ್ತಾ ವಾಸ್ತವದ ಮೇಲೆ ಬೆಳಕನ್ನು ಚೆಲ್ಲುತ್ತದೆ. ಅಮಿಗ್ಡಲ್, ಥ್ಯಾಲಮಸ್, ಹೈಪೊಥ್ಯಾಲಮಸ್ ಸೇರಿ – ‘ಅಮಿಗ್ಡಲ ಸರ್ಕ್ಯೂಟ್’ ಆಗುತ್ತದೆ. ಈ ಸರ್ಕ್ಯೂಟ್ ಬೇಗ ಫೈರ್ ಆಗುತ್ತದೆ. ಇದರಿಂದ ಸಿಟ್ಟು ಬಲು ಬೇಗ ಬರುತ್ತದೆ. ಅದೇ ಹೈಪೊಥ್ಯಾಲಮಸ್, ಥ್ಯಾಲಮಸ್ ಜೊತೆ ಪ್ರಿಫ್ರಂಟಲ್ ಕಾರ್ಟೆಕ್ಸ್ ಸೇರಿದರೆ ‘ ಪ್ರಿಫ್ರಂಟಲ್ ಸರ್ಕ್ಯೂಟ್’ ಆಗುತ್ತದೆ. ಇದು ಶಾಂತಿ, ಪ್ರೀತಿ ಮತ್ತು ತಾಳ್ಮೆಯ ಸರ್ಕ್ಯೂಟ್ ‌. ಸೋ…. ಪ್ರಿಫ್ರಂಟಲ್ ಸರ್ಕ್ಯೂಟ್ ಸ್ಟಿಮ್ಯುಲೇಟ್ ಮಾಡಿಕೊಳ್ಳೋಣ. ಇದೇ ‘ ಮೈಂಡ್ ಫುಲ್ ಅವೇರ್ ನೆಸ್’ ಎಂಬಂತಹ ಶಕ್ತಿಯುತ ವೈದ್ಯಕೀಯ ಸಾಲುಗಳನ್ನು ಇಲ್ಲಿ ಕಾಣಬಹುದಾಗಿದೆ. ಜೊತೆಗೆ ಗೌತಮ ಮತ್ತು ಮಲಿಸ್ಸಾ ಎಂಬ ನರ್ಸ್ ಇರುವಾಗ ನಡೆಯುವ ಪೋಲಿ ಸಾಲುಗಳೂ ಇವೆ. ಗೌತಮ ಮತ್ತು ಭಾರತಿ ಅವರ ಮಗಳು ಕ್ಷಮಾಳ ಪಾತ್ರ ಸಶಕ್ತವಾಗಿದ್ದು ಗಮನ ಸೆಳೆಯುತ್ತದೆ. ಸ್ಟೀವ್ ವಾರೆನ್, ಕೀರ್ತಿ ಎಂಬ ಗೇ ಗಳ ಸಮಸ್ಯೆ ಮತ್ತು ಬದುಕು ಕಾಡುತ್ತದೆ. ಗುಂಡಪ್ಪ ಮತ್ತು ನರಸಿಂಹರಾಯರು ಈಗ ಬೆಂಗಳೂರಿನಲ್ಲಿ ಅಥವಾ ನಮ್ಮೂರಿನಲ್ಲಿ ಸಿಗಬಹುದು. ಅಂತೆಯೇ ಶಕುಂತಳಾ ಬಾಯಿ ಎಂಬ ಟಿಪಿಕಲ್ ವುಮನ್ ಕೂಡ. ಜನರೇಷನ್ ಗ್ಯಾಪ್, ಇಂದಿನ ತಲೆಮಾರು ಬಳಸುವ ಪದಪುಂಜ ಗೌತಮ ಮತ್ತು ಭಾರತಿ ಎಂಬ ಪಾಲಕರನ್ನು ಮಾತ್ರವಲ್ಲ, ನಮ್ಮನ್ನೂ ಯೋಚನೆಗೀಡುಮಾಡುತ್ತದೆ. ಫ್ರೆಂಡ್, ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಗಳ ವ್ಯತ್ಯಾಸ ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ. ಹೀಗೆ ವಿವಿಧ ಆಯಾಮಗಳನ್ನು ಹೇಳುತ್ತಾ ಕಥೆ ತೆರೆದುಕೊಳ್ಳುವ ಪರಿ ಅನನ್ಯವಾದುದು. ಒಂದು ಉತ್ತಮ ಕಾದಂಬರಿ ‘ಗುಣ’. ಗುಣಮಟ್ಟದ ಓದಿಗಾಗಿ ಖಂಡಿತಾ ಈ ಕೃತಿಯನ್ನು ಓದಿ.

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಫೋಟೋ ಆಲ್ಬಂ

ಪಂಚವರ್ಣದ ಹಂಸ ಸತ್ಯಮಂಗಲ ಮಹಾದೇವ ಕೃತಿ ಬಿಡುಗಡೆಯ ಸಂಭ್ರಮದ ಕ್ಷಣಗಳು ದಿನಾಂಕ: 04-11-2019 ಬಿಡುಗಡೆ: ಶ್ರೀ ಮಲ್ಲೇಪುರಂ.ಜಿ.ವೆಂಕಟೇಶ್ ಕೃತಿ ಕುರಿತು ಮಾತಾಡಿದವರು: ಡಾ.ಸಿ.ಎನ್. ರಾಮಚಂದ್ರನ್

ಫೋಟೋ ಆಲ್ಬಂ Read Post »

ಪುಸ್ತಕ ಸಂಗಾತಿ

ಕೃತಿ ಲೋಕಾರ್ಪಣೆ

ಬಂಟಮಲೆ ತಪ್ಪಲಿನಲ್ಲಿ ಪುಸ್ತಕಸಂಭ್ರಮ ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಮುಖ್ಯಸ್ಥ ಶ್ರೀ ಡಾ.ಪುರುಷೋತ್ತಮ ಬಿಳಿಮಲೆಯವರ-“ವಲಸೆ,ಸಂಘರ್ಷ ಮತ್ತು ಸಮನ್ವಯ” ಕೃತಿ ನವೆಂಬರ್ 9 ರಂದು ಲೋಕಾರ್ಪಣೆಗೊಳ್ಳಲಿದೆ. ಕೃತಿಯ ಹೆಸರು-“ವಲಸೆ, ಸಂಘರ್ಷ ಮತ್ತು ಸಮನ್ವಯ” ಲೇಖಕರು-ಡಾ.ಪುರುಷೋತ್ತಮ ಬಿಳಿಮಲೆ ಸ್ಥಳ-ಬಂಟಮಲೆ ತಪ್ಪಲಿನ ಬಿಳಿಮನೆ ಅದ್ಯಕ್ಷತೆ-ಟಿ.ಜಿ.ಮುಡೂರು ಬಿಡುಗಡೆ-ಪ್ರೊ.ಬಿ.ಎ.ವಿವೇಕ ರೈ ಅತಿಥಿಗಳು-ಪ್ರೊ.ಕೆ.ಚಿನ್ನಪ್ಪಗೌಡ ಮತ್ತು ಜಾಕೆ ಮಾದವಗೌಡರು.

ಕೃತಿ ಲೋಕಾರ್ಪಣೆ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಕೃತಿ: ಭಾವಗಳು ಬಸುರಾದಾಗ. ಕವಿ:ಅರುಣ್ ಕೊಪ್ಪ ವಿಮರ್ಶೆ: ಜಿ.ವಿ.ಕೊಪ್ಪಲತೋಟ ಭಾವಗಳು ಬಸುರಾದಾಗ ಕವನ ಸಂಕಲನಕ್ಕೆ ಹಿರಿಯ ಪತ್ರಕರ್ತ ಶ್ರಿÃ ಜಯರಾಮ ಹೆಗಡೆ ಶಿರಸಿ ಮುನ್ನುಡಿ ಬರೆದಿದ್ದಾರೆ. ಬೆನ್ನುಡಿಯಲ್ಲಿ ಸಾಹಿತಿ ಡಾ|| ಬೇರ್ಯರಾಮಕುಮಾರ ಅವರು ಅರುಣಕೊಪ್ಪ ಅವರನ್ನು ಪರಿಚಯಿಸಿದ್ದಾರೆ. ಸಾಲದೂ ಎಂಬಂತೆ ಡಾ|| ಅಜಿತ್ ಹೆಗಡೆ ಹರೀಶಿಯವರೂ ಕೂಡಾ ಇವರನ್ನು ಓದುಗರಿಗೆ ಪರಿಚಯಿಸಿದ್ದಾರೆ. ಇವರ ಮೊದಲ ಕವನ ಸಂಗ್ರಹ ಹನಿಗಳ ಹಂದರ ಎರಡನೆ ಸಾಹಿತ್ಯ ಕೃತಿಯೇ ಭಾವಗಳು ‘ಬಸುರಾದಾಗ’ (ಕವನ ಸಂಕಲನ) ಈ ಸಂಕಲನದಲ್ಲಿ ಸಣ್ಣದು ದೊಡ್ಡದು ಸೇರಿ ಒಟ್ಟೂ ೭೬ ಕವನಗಳಿವೆ. ಭಾವಗಳು ಬಸುರಾದಾಗ ಏನಾಗುತ್ತದೆ? ಎಂಬುದಕ್ಕೆ ಕವಿ ಅರುಣ ನಾಯ್ಕ ಕೊಪ್ಪದವರ ಈ ಕವನ ಸಂಕಲನವನ್ನು ಓದಿದರೆ ಎಲ್ಲವೂ ಗೊತ್ತಾಗುತ್ತದೆ. ಎಂದು ಒಂದೇ ಮಾತಿನಲ್ಲಿ ಇದಕ್ಕೆ ವಿಮರ್ಶಿಸಬಹುದು. ಆದರೆ ಅದು ವಿಮರ್ಶಕನ ತರ್ಕಬದ್ಧ ಲಕ್ಷಣವಲ್ಲ ಮತ್ತು ಔಚಿತ್ಯವೂ ಅಲ್ಲ. ಮತ್ತು ಕವಿ ಇಟ್ಟುಕೊಂಡ ವಿಶಾಲ ಆಸೆ, ಆಕಾಂಕ್ಷೆ ಹರವನ್ನು ಮೊಟಕುಗೊಳಿಸಿದಂತಾಗಬಹುದೇನೂ?! ಅಲ್ಲದೇ ಬೆಳೆವ ಸಿರಿ ಮೊಳಕೆಯಲಿಯೇ ಚಿವುಟುವುದು ವಿಮರ್ಶೆ ಆಗಲಾರದು. ಕಾವ್ಯದ ಸಾರ, ಅದು ಸಾಗಿದ ಸತ್ಪಥ ಮತ್ತು ಕಾವ್ಯದ ಓದು ಅದು ಹೇಳುವ ಫಲಶ್ರುತಿ ಮತ್ತು ಅದರ ಒಳಧ್ವನಿ ಏನು ಎಂಬುದನ್ನು ತೆರೆದಿಡುವುದೇ ಒಂದು ವಿಮರ್ಶೆ ಎನಿಸಿಕೊಳ್ಳುತ್ತದೆ. ಕಾವ್ಯ ಅಥವಾ ಕವನ ಅದೇನು ಅಷ್ಟು ಸುಲಭವೇನಲ್ಲ. ಹೀಗೆ ಕಾವ್ಯ ರೂಪದಲ್ಲಿ ಹೇಳುವಾಗ ವಿಷಯದ ಪ್ರತಿಪಾದನೆ ಇಟ್ಟುಕೊಂಡಿರುವ ವಸ್ತುವಿನ ಅಸ್ತಿತ್ವ ಮತ್ತು ಭಾವ ಪ್ರತಿಮೆಗಳ ತುಲನಾತ್ಮಕ ಚಿಂತನೆ ಮಾಡುವದು, ಕಾವ್ಯ ರಚನೆಯ ನೀತಿ ಸಂಹಿತೆಯ ಉಲ್ಲಂಘನೆಯಾಗದಂತೆ ರಚಿಸುವುದೇ ಕವಿಯ ಮೇಧಾಶಕ್ತಿಗೆ ಒಡ್ಡುವ ಸವಾಲಾಗಿರುತ್ತದೆ. ಒಳ ಮನಸ್ಸಿನ ಆಳದಲ್ಲಿ ಹುದುಗಿದ ಯೋಚನೆಯನ್ನು ಭಾವನಾತ್ಮಕವಾಗಿ ಹೊರಹಾಕುವ ಮುನ್ನ ಅದು ಬಸುರಲ್ಲಿ ಬೆಳೆಯುತ್ತಿರುವ ಮಗುವಂತೆಯೇ ಎಂಬುದನ್ನು ಶ್ರಿÃ ಕೊಪ್ಪರÀವರು ತಮ್ಮದೇ ಆದ ಶೈಲಿಯಲ್ಲಿ ಸಾಕಷ್ಟು ಅರ್ಥಪೂರ್ಣವಾಗಿ ಹೇಳಿದ್ದಾರೆ. ಉದಾ :- ಕವನ ೧ ಅವ್ವನ ಕನಸು ಪ್ರಿÃತಿ ಪಾತ್ರ ನಾ ಇಷ್ಟಿತ್ತು ಮಮತೆಯ ಘನತೆ ಸಲ್ಲಿಸುವ ಗೌರವಕೆ ಕಿಂಚಿತ್ತು ಹೆಚ್ಚಲ್ಲ ಈ ಹೃದಯದಿಂದ ಹಸಿವಾದ ಈ ಮನಸ್ಸಿಗೆ ನೀಗಲು ಸಾಕು ನನ್ನ ಅವ್ವನ ಕನಸು ಹೇಗೆ ತಮ್ಮ ಮನಸನ್ನು ಕಾವ್ಯಾತ್ಮಕವಾಗಿ ಮಾರ್ಪಡಿಸಿಕೊಳ್ಳುವ ರೀತಿ ತುಂಬಾ ಹರಿತ ಮತ್ತು ಮೇಲ್‌ಸ್ತರದ ವಿಚಾರಗಳಾಗಿವೆ. ಕವನ ೬ ವೇದಿಕೆ : ಒಂದೇ ಬೇರು ಒಂದೇ ಕೊಂಬೆ ಹಸಿರು ಹಲವು ಸದಾ ಏಕತೆಯ ಉಸಿರು ರಂಗು ಈ ಸಂಜೆ ಹೀಗೆ ಹಲವು ಹತ್ತು ಕವನಗಳ ಸಾಲಿನಲ್ಲಿ ಶೃಜನಶೀಲತೆ ಇದೆ. ಉದಾ : ಕವನ ೮ :- ಮೂಡುವ ಕಾಡುವ ಮನಗಳ ಮಾತಿಗೆ ಹಾಡು ಪಾಡುವ ಒಲವಿನ ಗಡಿಬಿಡಿಗೆ ನಾ ಹೇಗೆ ಹೋಗಿ ಸಹಿಸಲಿ ನೀ ಹೇಳು ಹೇಗೆ ಮನಸ್ಸಿನ ಭಾವನೆಗಳನ್ನು ಭಾವನೆಯ ಬಸುರಲ್ಲಿಟ್ಟು ಹೇಳುವ ಅವರ ಮನಸ್ಸಿನ ಸ್ಥಾಯಿ ಸ್ಥಿತಿ ಅದರ ಮೇರು ವಿಚಾರಕ್ಕೆ ಮೆರಗು ತಂದಿದೆ. ಉದಾಃ ಕವನ ೬೦ : – ಶೀರ್ಶಿಕೆಯ ಕವನ “ಭಾವಗಳ ಬಸುರಾದಾಗ” ಇದರಲ್ಲಿ ಭಾವಗಳು ಬಸುರಾದಾಗ ಹರಿಸುವುದು ಸಂಗೀತ ಸಾಹಿತ್ಯದ ಕಾವ್ಯ ರಸದೌತಣ ಎಂದಿದ್ದಾರೆ. ಭಾವದ ಅಭಿವ್ಯಕ್ತಿಗೆ ಸಾಹಿತ್ಯ ಸಂಗೀತಕಲೆ ಎಲ್ಲವೂ ಲೀನವಾಗುತ್ತದೆ ಎಂಬುದನ್ನು ಸಾರವತ್ತಾಗಿ ಬಣ್ಣಿಸಿದ್ದಾರೆ. ಕವಿಯನ್ನು ಹೊಗಳಿ ಹೊಗಳಿ ಹೊನ್ನ ಶೂಲಕ್ಕೆÃರಿಸುವುದು ವಿಮರ್ಶೆಯೆ ಸರಿ ಸಮರ್ಪಕ ಪರಿಕಲ್ಪನೆಯಾಗಲಾರದು. ಕೆಲವು ಕವಿತೆಗಳು ಪ್ರಾಸರಹಿತವಾಗಿ ಅತಿ ಉದ್ದುದ್ದ ಸಾಲುಗಳಾಗಿ ಗದ್ಯದ ರೂಪ ತಳೆದಿರುವುದು ಓದುಗನ ಸಹನೆಯನ್ನು ಪರೀಕ್ಷಿಸುವಂತಿದೆ. ಉದಾ ಹರಿಸಬೇಕೆಂದರೆ : ನಿನ್ನ ನೆನಪಲಿ, ಗುಬ್ಬಿಗೂಡು, ನಮ್ಮ ಭಾರತ ಸಂವಿಧಾನ, ಹೀಗೆ ಕೆಲವಷ್ಟು ಕವನಗಳು ಮಿತಿಮೀರಿ ಬೆಳೆದು ನಿಂತಿವೆ. ಇವುಗಳು ಕಾವ್ಯಕ್ಕೆ ಭೂಷಣವಲ್ಲ ಎಂದೆನಿಸುತ್ತದೆ. ಕಲ್ಪನೆಯನ್ನು ಕವನವನ್ನಾಗಿಸುವ ಶಕ್ತಿ ಈ ಕವಿಗೆ ಚೆನ್ನಾಗಿದೆ. ತುಂಬಾ ಭಾವಾಭಿವ್ಯಕ್ತಿಯಲ್ಲಿ ಅಭಿವ್ಯಕ್ತಿಸುವ ರೀತಿಯಲ್ಲಿ ಸುತ್ತು ಬಳಸದಿರುವುದು ಒಳ್ಳೆಯದು. ಉದಾ : ನಾನು ಕವಿಯಲ್ಲ ಕವನ ೯ : ಮೂಡಿದ ಮನದ ಮರದಿ ಭಾವವೆಂಬ ಕೊಂಬೆ ! ಎತ್ತರದಿ ಸಿಗದ ಹಾಗೆ ಹಸಿರು ಎಲೆಗಳ ಚಪ್ಪರ ಮುಗಿಯದ ಹಕ್ಕಿ ಸಾಲಿನ ಆಸನ ನೋಡಿದಾಕ್ಷಣ ಕವನ ನಾನು ಕವಿಯಲ್ಲ ಕವಿಯ ವಿಚಾರಧಾರೆ ಹರಿತವಾಗಿದೆ. ವೈಚಾರಿಕತೆಯ ಹರವು ವಿಷಾಲವಾಗಿದೆ. ಸಂವೇದನಾ ಶೀಲತೆ ಎಲ್ಲ ಕವನದಲ್ಲಿಯೂ ಇದೆ. ಮನಸ್ಸಿಗೆ ಮುದ ನೀಡುವ ಶಕ್ತಿ ಕವನಗಳಿಗಿದೆ. ಬಸಿರು ಎನ್ನುವ ಶಭಾರ್ಥವೇ ಹಡೆಯುವ ಮೊದಲು ಇರುವ ತಾಯಿಯ ಸ್ಥಿತಿ. ಹುಟ್ಟುವ ಮಗುವಿನ ಬಗ್ಗೆ ತಾಯಿ ಏನೆಲ್ಲ ಚಿಂತಿಸುತ್ತಾಳೆ. ಏನೆಲ್ಲ ಕನಸು ಕಾಣುತ್ತಾಳೆ. ಹೇಳತೀರದು. ಹುಟ್ಟುವ ಮಗುವಿನ ಬಗ್ಗೆ ತರತರದ ಕನಸು ಕಾಣುತ್ತಾಳೆ. ಸರ್ವಾಂಗ ಸುಂದರವಾಗಿ ಮಗು ಹುಟ್ಟಲಿ ಎಂದು ಹಾರೈಸುತ್ತಾಳೆ. ಈ ಕವಿಯ ಎಲ್ಲ ಕವಿತೆಯಲ್ಲಿಯೂ ಇಂತ ಹಾರೈಕೆ ಎದ್ದು ಕಾಣುತ್ತದೆ. ಶಬ್ದಗಳ ಕೊರತೆ ಈ ಕವಿಗೆ ಇಲ್ಲ. ವಸ್ತುವನ್ನು ಹುಡುಕುವ ದಿವ್ಯ ಶೋಧಕ ಶಕ್ತಿ ತುಂಬಾ ಇದೆ. ಗೂಡ ನಿಗೂಡವಾಗಿ ವಿಷಯವನ್ನು ಸಾದರಪಡಿಸುವ ರೀತಿ ಓದುಗನಿಗೆ ಸ್ವಲ್ಪ ಕಬ್ಬಿಣದ ಕಡಲೆಯಾದರೂ ಪ್ರಬುದ್ಧ ಓದುಗನಿಗೆ ಏನೂ ಕಷ್ಟವೆನಿಸಲಾರದು. ಇವರ ಬರಹ ಪ್ರಬುದ್ಧತೆಯ ಪ್ರಬಲ ಪ್ರತಿಬಿಂಬ ಇವರ ಮನಸ್ಸು ಎನ್ನಬಹುದು. ಕವಿಗೆ ತುಂಬಾ ಭವಿಷ್ಯವಿದೆ. ವಿಚಾರದ ಅರಿಕೆ ಸಾಕಷ್ಟು ಮನಸ್ಸಿನ ಆಳಕ್ಕಿಳಿದಾಗಲೇ ಚಿಗುರುವ ಸಾಹಿತ್ಯದ ಕೊಂಬೆ ಬಲಿಷ್ಠವಾಗುತ್ತದೆ. ಕಾವ್ಯಕ್ಕೆ ಗಟ್ಟಿತನ ಬರುತ್ತದೆ. ವಿಚಾರವ ಅದುಮಿ ಹಿಡಿದಾಗ ಭಾವನೆಗಳು ಸ್ಪೊÃಟಗೊಳ್ಳುತ್ತವೆ ಎಂಬುದನ್ನು ಕೆಲವು ಕವನಗಳು ಸಾಬೀತುಪಡಿಸಿವೆ. ಕಾವ್ಯವೆಂದರೆ ಕಲ್ಪನೆ ಮತ್ತು ಭಾವಗಳ ಸಂಗಮ (ಹ್ಯಾಜ್‌ಲೀಟ್) ಇಂಗ್ಲಿÃಷ್ ಕವಿ ಕಾವ್ಯವೆಂದರೆ ಸೌಂದರ್ಯದ ಲಯಬದ್ಧ ಸೃಷ್ಟಿ ಎಂದಿದ್ದಾರೆ. (ಕೆಬ್ಲ) ಕವಿ ಅಚಿಡಿಟಥಿಟe ಹೇಳಿದ್ದಾರೆ. Poeಣಡಿಥಿ ತಿe ತಿiಟಟ ಛಿಚಿಟಟ musiಛಿಚಿಟ ಣhough ಎohಟಿsoಟಿ ಸಂಗೀತಮಯ ಚಿಂತನೆಯೇ ಕಾವ್ಯ ಹೇಳುತ್ತಾರೆ. ಎohಟಿsoಟಿ ಹೇಳುತ್ತಾರೆ. Poeಣಡಿಥಿ is meಣಡಿiಛಿಚಿಟ ಛಿomಠಿosiಣioಟಿ (ಕಾವ್ಯವೆಂದರೆ ಚಂದೋಬಂದ ರಚನೆ) ಎರ್ಡಸ್ ವಿತ್ರ ಹೇಳುತ್ತಾನೆ (Poeಣಡಿಥಿ is ಣhe bಡಿeಚಿಣh ಚಿಟಿಜ ಜಿiಟಿeಡಿ sಠಿiಡಿiಣ oಜಿ ಚಿಟಟ ಞಟಿoತಿಟeಜge ) ಕಾವ್ಯವು ಎಲ್ಲ ಜ್ಞಾನಕ್ಕಿಂತ ಮಿಗಿಲಾದ ಚೈತನ್ಯ ಉಸಿರು. ಮೇಲೆ ಹೇಳಿದ ಈ ಎಲ್ಲ ಅಂಶಗಳನ್ನು ಈ ಕವಿ ತಿಳಿದುಕೊಂಡು ಮುನ್ನಡೆಯಲಿ ಸಮಕಾಲೀನ ಸಮಸ್ಯೆಗಳ ಬಗ್ಗೆ ಕವಿ ದೃಷ್ಟಿ ಹಾಯಿಸಿದರೆ ಒಳಿತು. ಒಟ್ಟಾರೆ ಕವಿಯ ಈ ಎರಡನೆ ಹೆಜ್ಜೆ ಗಟ್ಟಿತನದ ದಿಟ್ಟ ಹೆಜ್ಜೆಯಾಗಿದೆ. ಕವಿಯ ಭವಿಷ್ಯ ಉಜ್ವಲವಾಗಲಿ, ಸಾಹಿತ್ಯಯಾನ ಚೆನ್ನಾಗಿ ಸಾಗಲಿ ಎಂದು ಹಾರೈಸುವೆ. ==============================================

ಪುಸ್ತಕ ವಿಮರ್ಶೆ Read Post »

ಪುಸ್ತಕ ಸಂಗಾತಿ

ಪುಸ್ತಕ ಬಿಡುಗಡೆಯ ಸಂಭ್ರಮ

ಲೋಕಾರ್ಪಣೆ ‘ಪಂಚವರ್ಣದ ಹಂಸ‘ ಸಾಹಿತ್ಯಾಸಕ್ತರಿಗೆ ಸ್ವಾಗತ ಕವಿ ಸತ್ಯಮಂಗಲ ಮಹಾದೇವ ಅವರ ಕವನ ಸಂಕಲನದ ಲೋಕಾರ್ಪಣೆಯ ಕಾರ್ಯಕ್ರಮ ದಿನಾಂಕ: 04/11/2019, ಸೋಮವಾರ ಸಮಯ: ಸಂಜೆ 6 ಗಂಟೆಗೆ ಸ್ಥಳ: ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಸಭಾಂಗಣ

ಪುಸ್ತಕ ಬಿಡುಗಡೆಯ ಸಂಭ್ರಮ Read Post »

You cannot copy content of this page

Scroll to Top