ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಸಿರ್ವಂತೆ ಕ್ರಾಸ್ ದಿನೇಶ ಹುಲಿಮನೆ ಮಲೆನಾಡಿನ ಬದುಕಿನ ಆಗುಹೋಗುಗಳ ಹಂದರವೇ ಆಗಿದೆ ದಿನೇಶ ಹುಲಿಮನೆಯವರ ‘ಸಿರ್ವಂತೆ ಕ್ರಾಸ್’ ಕಥೆಗಳ ಸಂಕಲನ..! ದಿನೇಶ ಹುಲಿಮನೆಯವರು ಮಲೆನಾಡು ಆದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲಿಮನೆಯವರು. ಹಾಗಾಗಿ ಇಲ್ಲಿ ಬರುವ ಎಲ್ಲಾ ಕಥೆಗಳೂ ದಿನೇಶ ಹಲಿಮನೆಯವರ ಮಲೆನಾಡಿನ ಕಲರವವಿದ್ದಂತೆ ಭಾಸವಾಗುತ್ತವೆ. ಭಾಸವಾಗುವುದೇನು ಬಂತು ಇದು ನಿಜವೂ ಆಗಿದೆ. ಏಕೆಂದರೆ ಈ ದಿನೇಶ ಹುಲಿಮನೆಯವರ ಈ ‘ಸಿರ್ವಂತೆ ಕ್ರಾಸ್’ ಈ ಕಥೆಗಳ ಸಂಕಲನವು ‘ಸಿರ್ವಂತೆ ಕ್ರಾಸ್‌’ ಕಥೆಯೂ ಸೇರಿದಂತೆ ಒಟ್ಟು ೧೮ ಸಣ್ಣ ಸಣ್ಣ ಕಥೆಗಳನ್ನು ಒಳಗೊಂಡಿದೆ ಮತ್ತು ಮಲೆನಾಡಿನಲ್ಲಿ ನಡೆಯುವ ವಿದ್ಯಮಾನಗಳಾಗಿವೆ ಇಲ್ಲಿಯ ಕಥೆಗಳು. ದಿನೇಶ ಹಲಿಮನೆಯವರು ಮಲೆನಾಡನ್ನು ಬಿಟ್ಟು ಇರಲಾರರು. ಹಾಗಾಗಿಯೇ ಇವರ ಕಥೆಗಳು ಮಲೆನಾಡಿನ ಬದುಕು-ಬವಣೆಗಳನ್ನು ತೆರೆದಿಡುತ್ತವೆ ಇಲ್ಲಿನ ಕಥೆಗಳು. ದಿನೇಶ ಹುಲಿಮನೆಯವರೇ ಹೇಳುವಂತೆ ‘ನನ್ನ ಬದುಕು-ಬರಹ ಮಲೆನಾಡನ್ನು ಬಿಟ್ಟು ಇರಲಾರವು. ಹಾಗಾಗಿಯೇ ಇಲ್ಲಿಯ ಕಥೆಗಳೆಲ್ಲಾ ಮಲೆನಾಡಿನ ಆಗು-ಹೋಗಗಳಾವೆ’ ಎಂದು. ಈ ಕಥೆಗಳ ಸಂಕಲನದಲ್ಲಿಯ ‘ಸಿರ್ವಂತೆ ಕ್ರಾಸ್’ ‘ಮಧ್ಯ ರಾತ್ರಿಯ ಮಾತು’ನಂತಹ ಕಥೆಗಳು ಮಲೆನಾಡಿನ ಬೆಟ್ಟಗುಡ್ಡಗಳನ್ನು ಹತ್ತಿಳಿದು, ಅಂಕು-ಡೊಂಕಾದ ಮಣ್ಣು ರಸ್ತೆಗಳಲ್ಲಿ ಸಂಚರಿಸಿದರೆ ‘ಸ್ಮಾರ್ಟ್ ಜಗತ್ತು’ ‘ಕನ್ನಡದ ಕಂದ’ದಂತಹ ಕೆಲ ಚುಟುಕು ಕಥೆಗಳು ಬೆಂಗಳೂರು ಕಾಂಕ್ರೀಟ್ ಹಾದಿಯಲ್ಲಿ ನುಸುಳುವಂತೆ ಭಾಷವಾಗುತ್ತವೆ. ‘ಅರ್ಧ ಸತ್ಯ!’, ‘ಎಡ-ಬಲಗಳ ನಡುವೆ’, ‘ತಳವಾರ ತಿಮ್ಮ’, ‘ಪ್ರಜಾ ಸಮಾಧಿ’, ‘ಕೃಷ್ಣನ ಪ್ರಣಯ ಪ್ರಸಂಗ’, ‘ಕಿಲಾರ’ದ ಹುಡುಗರು’ ಒಟ್ಟಾರೆ ಎಲ್ಲಾ ಕಥೆಗಳೂ ಓದಿಸಿಕ್ಕೊಂಡು ಹೋಗುವ ಕಥೆಗಳಷ್ಟೇ ಅಲ್ಲ,‌‌ ವಾಸ್ತವ ಬದುಕಿನ ಪಯಣವೇ ಆಗಿವೆ ಎಂದು ನನ್ನ ಅನಿಸಿಕೆ. ‘ಕಡಲ ಮುತ್ತು’ ‘ಕುಮಟಾದ ಹಳೇ ಬಸ್ ನಿಲ್ದಾಣ’ದಂತಹ ಕಥೆಗಳು ಕರಾವಳಿಯ ಬದುಕನ್ನು ಪರಿಚಯಿಸುತ್ತವೆ. ಇನ್ನುಳಿದ ಕಥೆಗಳು ಮನುಷ್ಯ ಸಹಜವಾದ ಪ್ರಾಕೃತಿಕ ಆಶೆ-ಅತಿಯಾಶೆ, ಪ್ರೀತಿ-ಪ್ರಣಯ, ಜೀವನ-ಜಂಜಾಟ, ಹಲವಾರು ಬಗೆಯ ಎಡರು-ತೊಡರುಗಳ ಮೇಲೆ ಇಲ್ಲಿಯ ಕಥೆಗಳನ್ನು ಹೆಣದಿದ್ದಾರೆ ದಿನೇಶ ಹಲಿಮನೆಯವರು. ನಂಬಿಕೆಯೇ ಜೀವನಾಧಾರ, ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡುವುದೇ ಜೀವನ’ ಎಂಬ ಕವಿ ಗೋಪಾಲಕೃಷ್ಣ ಅಡಿಗರ ವಾಣಿಯಂತೆ ಜೀವನದಲ್ಲಿ ಬರುವ ಕೆಲವು ಸಣ್ಣಪುಟ್ಟ ವಿಚಾರಗಳೇ ಇಲ್ಲಿಯ ಕಥಾವಸ್ತು ಅಲ್ಲದೇ ಇಲ್ಲಿಯ ಕಥೆಗಳು ನನ್ನ ದೃಷ್ಟಿಯಲ್ಲಿ ಕೇವಲ ಕಾಲ್ಪನಿಕವಲ್ಲ. ವಾಸ್ತವವೂ ಆದ ಬದುಕಿನ ಹಲವಾರು ಮಜಲುಗಳು. ಕಥೆಗಳಲ್ಲಿ ಹೆಚ್ಚು, ಹೆಚ್ಚು ವಿಷಯಗಳನ್ನು ತರಲಾಗದಿದ್ದರೂ ದಿನನಿತ್ಯ ನಡೆಯುವ ಬದುಕಿನ ಘಟಕಗಳ ಹಂದರವೇ ಆಗಿದೆ ಇಲ್ಲಿಯ ಕಥೆಗಳ ವಸ್ತು. ಹೀಗೆಯೇ ಬರುವ ಇಲ್ಲಿನ ಕಥೆಗಳು ವಿಶಿಷ್ಟ ಶೈಲಿಯದ್ದಾಗಿವೆ. ಇಲ್ಲಿಯ ಎಲ್ಲಾ ಕಥೆಗಳು ಓದುಗರನ್ನು ಹಿಡಿದಿಡುತ್ತವೆ. ದಿನೇಶ ಹಲಿಮನೆಯವರು ಹವ್ಯಾಸಿ ಲೇಖಕರಾಗಿ ಕಳೆದ ನಾಲ್ಕೈದು ವರ್ಷಗಳಲ್ಲಿ ಬರೆದ ಕಥೆಗಳು ಇವು. ಒಂದೆರಡು ನೀಳ್ಗತೆಯೂ ಸೇರಿದಂತೆ ಸಣ್ಣ-ಪುಟ್ಟ ಕಥೆಗಳೂ ಸೇರಿದಂತೆ ಒಟ್ಟು ಹದಿನೆಂಟು ಕಥೆಗಳು ಇಲ್ಲಿವೆ. ಇದು ಈ ದಿನೇಶ ಹಲಿಮನೆಯವರ ಮೊದಲ ಕಥೆಗಳ ಸಂಕಲನವಾಗಿದೆ. ಮೊದಲ ಕಥಾ ಸಂಕಲನ ಮೂಲಕವೇ ಇವರು ಒಬ್ಬ ಉತ್ತಮ ಕಥೆಗಾರರಾಗಿ ಹೊರಹೊಮ್ಮಿದ್ದಾರೆ. ಇವರಿಂದ ಇನ್ನೂ ಇಂತಹ ಕಥಾ ಬರಹವನ್ನು ನಿರೀಕ್ಷಿಸಬಹುದು. ಅಂಕೋಲಾದ ಶಿಕ್ಷಕಿಯಾದ ಶುಭಾ ಪಟಗಾರರವರ ಬೆನ್ನುಡಿ ಇದೆ. ********* ‌ —ಕೆ.ಶಿವು.ಲಕ್ಕಣ್ಣವರ

ಪುಸ್ತಕ ವಿಮರ್ಶೆ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ನೂರು ಜನಪದ ಹಾಡುಗಳು ಕೆ.ಶಿವು ಲಕ್ಕಣ್ಣವರ ಬೈಲೂರ ಬಸವಲಿಂಗಯ್ಯನವರ ಸಮೃದ್ಧ ಜನಪದ ಹಾಡಿನ‌ ಕೃತಿಯೇ ‘ನೂರು ಜನಪದ ಹಾಡುಗಳು’‌ ಎಂಬ ಪುಸ್ತಕವು! ಪ್ರಸ್ತುತವಾಗಿ ಈ ‘ನೂರು ಜನಪದ ಹಾಡುಗಳು’ ಕೃತಿಯು ವಿಸ್ತೃತವಾಗಿ ಗರ್ಭಸೇರಲಿದ್ದ ಬೀಸೂಕಲ್ಲಿನ ಪದಗಳು, ಸೋಬಾನೆ ಪದಗಳು, ಜೋಗುಳ ಪದಗಳು, ಚೌಡಿಕೆ ಪದಗಳು, ಕಿನ್ನರಿ ಪದಗಳು, ಹಬ್ಬದ ಹಾಡುಗಳು, ಕೋಲಾಟದ ಪದಗಳು, ಗೀಗೀ ಪದಗಳು, ಹೀಗೆಯೇ ಹತ್ತಾರು ಪ್ರಕಾರಗಳನ್ನು ಒಳಗೊಂಡಿದೆ ಈ ‘ನೂರು ಜನಪದ ಹಾಡುಗಳು’ ಎಂಬ ಕೃತಿಯು… ಒಟ್ಟಾರೆ ಜನಪದ ಹಾಡು ಅಥವಾ ಜಾನಪದವೆಂದರೆ ಹಳ್ಳಿಯ ಜನರ ಸಂಗೀತ, ರೂಪಕ, ಮಣ್ಣಿನ ವಾಸನೆಯ ಬದುಕು. ಹಳ್ಳಿಯ ಜನರು ತಮ್ಮ ದಿನ ನಿತ್ಯ ಕೆಲಸಗಳನ್ನು ಮಾಡುವಾಗ ಹಾಗೂ ತಮ್ಮ ಬಿಡುವಿನ ಸಂದರ್ಭದಲ್ಲಿ ತಮ್ಮದೇ ಪದಗಳಲ್ಲಿ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು ಮತ್ತು ಹಾಡುತ್ತಾರೆ. ಒಬ್ಬ ಮನುಷ್ಯ ಹೀಗೆ ಕಟ್ಟಿ ಹೇಳಿದ ಹಾಡು ಮತ್ತೊಬ್ಬರು ಹೇಳಿಕೊಳ್ಳುತ್ತ ಹೀಗೆಯೇ ಎಲ್ಲ ಜನಪದರ ಬಾಯಿಂದ ಬಾಯಿಗೆ ಹೊರಹೊಮ್ಮುವ ಪದದ ಅಥವಾ ಹಾಡುಗಳನ್ನು ಹಾಡುತ್ತಿದ್ದರು ಮತ್ತು ಇವು ರೋಮಾಂಚಕವೂ ಹೌದು… ಉದಾಹರಣೆಗೆ : ಒಬ್ಬ ತಾಯಿ ತನ್ನ ಮಗು ಮನೆಯಲ್ಲಿ ಓಡಾಡುತ್ತಿದ್ದರೆ ಆಗುವ ಖುಷಿಯನ್ನು ಹಾಡಿನಲ್ಲಿ ಬಣ್ಣಿಸುವ ರೀತಿಯ ಜಾನಪದ ಹಾಡಿನ ರೀತಿಯಲ್ಲಿ ಹೀಗಿದೆ. “ಕೂಸು ಇದ್ದ ಮನೆಗೆ ಬೀಸಣಿಕೆ ಯಾತಕ… ಕೂಸು ಕಂದಯ್ಯ ಒಳ ಹೊರಗ… ಕೂಸು ಕಂದಯ್ಯ ಒಳಹೊರಗ ಆಡಿದರ ಬೀಸಣಿಕೆ ಗಾಳಿ ಸುಳಿದಾವ…“ ಹೀಗೆ ಜನಪದ ಹಾಡು ತನ್ನತನವನ್ನು ಹಿಂದಿನಿಂದಲೂ ಉಳಿಸಿಕೊಳ್ಳುತ್ತಾ ಬಂದಿದೆ. ಹೀಗಿರುವ ಜಾನಪದ ಹಾಡಿಗೆ ವಿಶೇಷ ಸ್ಥಾನ-ಮಾನವನ್ನು ಕೊಡಲಾಗಿದೆ. ಈ ಜನಪದ ಹಾಡುಗಳಿಂದಾಗಿ ಹಳ್ಳಿಯಿಂದ ಹಳ್ಳಿಗೆ, ನಗರದಿಂದ ನಗರಕ್ಕೆ, ಪಟ್ಟಣದಿಂದ ಪಟ್ಟಣಕ್ಕೆ ಜನಪದ ಹಾಡಿನ ಮಹತ್ವವನ್ನು ಜನಪದರು ಪರಿಚಯಿಸಿದ್ದಾರೆ. ಹೀಗೆ ಜನಪದ ಹಾಡುಗಳು ಎಲ್ಲಾ ಕಡೆ ಪರಿಚಯವಾಗಿಬಿಟ್ಟಿದೆ… ಬೈಲೂರ ಬಸವಲಿಂಗಯ್ಯನವರ ‘ನೂರು ಜನಪದ ಹಾಡುಗಳು’ ಎಂಬ ಕೃತಿಯು ಇದನ್ನೇ ಹೇಳುತ್ತದೆ ಮತ್ತು ಕಟ್ಟಿಕೊಡುತ್ತದೆ… ಒಟ್ಟಾರೆ ಜನಪದವೆಂದರೆ ಮನುಷ್ಯ ಬದುಕಿನ ಕ್ರಿಯೆಗಳು, ವಸ್ತುಗಳು, ಮನರಂಜನೆಯ ಸಾಧನಗಳು, ಮನುಷ್ಯನ ಸಂಸ್ಕಾರ, ಆರಾಧನೆ, ನಂಬಿಕೆಗಳು: ಉಡುಪುಗಳು, ಹಬ್ಬ ಹರಿದಿನಗಳು, ಇದೇ ರೀತಿಯಾಗಿ ಒಟ್ಟಾರೆ ಬದುಕಿನ ಸರ್ವ ಲಯಗಳನ್ನು ಒಳಗೊಂಡಿರುವಂತದೇ ಆಗಿದೆ… ಮನುಷ್ಯ ಜೀವಿ ತನಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಜಾನಪದ ಸಾಹಿತ್ಯಕ್ಕೆ ಮೊರೆಹೋಗುತ್ತಾನೆ. ಹೀಗೆಂದು ಸಾರಿಹೇಳುತ್ತದೆ ಬೈಲೂರ ಬಸವಲಿಂಗಯ್ಯ ಹಿರೇಮಠರವರ ಈ ಕೃತಿಯು ‘ನೂರು ಜನಪದ ಹಾಡುಗಳು’ ಎಂಬ ಕೃತಿಯಾಗಿದೆ… ಈಗಂತೂ ಮನುಷ್ಯ ಬಹು ಎತ್ತರಕ್ಕೆ ಬೆಳೆದಿದ್ದಾನೆ. ‘ಸಂಸ್ಕೃತಿ’ ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಎಲ್ಲವನ್ನೂ ಸಂಶೋಧನೆಯ ತೆಕ್ಕೆಯಲ್ಲೇ ತಬ್ಬಿಕೊಳ್ಳಲು ಮನುಷ್ಯ ನಿರಂತರವಾಗಿ ಹೋರಾಡುತ್ತಿದ್ದಾನೆ. ಇದರ ಪರಿಣಾಮವಾಗಿ ಇಂದು ಅನೇಕಾನೇಕ ಜ್ಞಾನಶಿಸ್ತುಗಳು ಆವಿಷ್ಕಾರಗಳು ಒಡಮೂಡಿವೆ. ಇಂತಹ ಜ್ಞಾನಶಿಸ್ತುಗಳಲ್ಲಿ ಅಂತರಶಿಸ್ತೀಯ ಅಧ್ಯಯನವೂ ಒಂದು. ಈ ಶಿಸ್ತಿನ ಮೂಲಕ ವಿದ್ವಾಂಸರು ಇತರ ಜ್ಞಾನ ಶಾಖೆಗಳೊಂದಿಗೆ ಜಾನಪದ ಸಾಹಿತ್ಯದ ಅಂತರ್ ಸಂಬಂಧವನ್ನು ಗುರುತಿಸುವ ಸವಾಲುಗಳನ್ನು ಎದುರಿಸುವ ಕಾರ್ಯದಲ್ಲಿ ತೊಡಗಿರುವುದು ಈ ಸಾಹಿತ್ಯದ ಸತ್ವವಾಗಿದೆ. ಜಾನಪದ ಬಿಟ್ಟು ಬದುಕಿಲ್ಲ, ಬದುಕು ಬಿಟ್ಟು ಜಾನಪದವಿಲ್ಲ ಎಂಬುದು ಕಟು ವಾಸ್ತವ. ಈ ಸಾರವನ್ನೇ ಹೇಳುತ್ತದೆ ಬೈಲೂರ ಬಸವಲಿಂಗಯ್ಯನವರ ‘ನೂರು ಜನಪದ ಹಾಡುಗಳು’ ಕೃತಿಯು… ಇಡೀ ವಿಶ್ವವೇ ನಮ್ಮ ದೇಶದತ್ತ ಬೆರೆಗುಗಣ್ಣಿನಿಂದ ನೋಡುವಂತೆ ನಮ್ಮ ದೇಶದಲ್ಲಿ ಜಾನಪದ ಕಲೆಗಳು ಸಮೃದ್ಧವಾಗಿದೆ. ಈಗಾಗಲೇ ಗುರುತಿಸಲ್ಪಟ್ಟ ಜಾನಪದ ಕಲೆ ನೂರಾರು ಮತ್ತು ಸಮೃದ್ಧವಾಗಿವೆ. ಇನ್ನೂ ಗುರುತಿಸಲ್ಪಡಬೇಕಾದ ಕಲೆಗಳು ಸಾವಿರಾರು. ಹೀಗಿರುವುದರಿಂದಲೇ ನಮ್ಮ ಯುವ ಜನರು ಈ ಬಗೆಗೆ ಚಿಂತಿಸಬೇಕಾಗಿದೆ. ಎಲ್ಲ ಜಾನಪದ ಕಲೆಗಳನ್ನು ದಾಖಲಿಸಬೇಕಾಗಿದೆ. ಪ್ರದರ್ಶನ ಕಲೆಗಳನ್ನು ಬದಿಗಿಟ್ಟರೂ ಹಾಡುವ ಸಾಹಿತ್ಯವೇ ಅಪಾರ ಪ್ರಮಾಣದಲ್ಲಿದೆ… ಇಂತಹ ಹಾಡುವ ಸಾಹಿತ್ಯದ ಒಂದಿಷ್ಟನ್ನಾದರೂ ಸಹೃದಯರ ಮನೆ-ಮನಸ್ಸನ್ನು ಮುಟ್ಟಿಸಬೇಕೆಂಬ ಆಸೆಯಿಂದ ಬೈಲೂರ ಬಸವಲಿಂಗಯ್ಯನವರು ತಮ್ಮ ಸಾವಿರಾರು ಜಾನಪದ ಹಾಡುಗಳಲ್ಲಿ ಆಯ್ದ ಪುಸ್ತುಕೆಯೇ ‘ನೂರು ಜನಪದ ಹಾಡುಗಳು’..! ಈ ‘ನೂರು ಜನಪದ ಹಾಡುಗಳು’ ಎಂಬ ಕೃತಿಯನ್ನು ಜಾನಪದ ಸಂಶೋಧನ ಕೇಂದ್ರ ಭೂಷಣ ಪ್ರಕಾಶನ, ಸಪ್ತಾಪುರ, ಧಾರವಾಡ-೧ ಎಂಬ ಪ್ರಕಾಶನ ಹೊರತಂದಿದೆ… ಈ ಪ್ರಕಾಶನದ ನಿರ್ದೇಶಕಿಯಾದ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠರು ಈ ಪುಸ್ತಕೆಯನ್ನು ಹೊರತಂದಿದ್ದಾರೆ… ಸರ್ಕಾರದ ಉದಾಸೀನತೆ, ವಿದ್ವಾಂಸರ ಅದೂರದೃಷ್ಟಿ, ಕಲಾವಿದರ ಅಜ್ಞಾನ ಮತ್ತು ಜನತೆಯ ಅನಾದಾರದ ಕಾರಣವಾಗಿಯೇ ಉತ್ತರ ಕರ್ನಾಟಕದ ಸಮೃದ್ಧ ಜಾನಪದ ಅವಸಾನದಂಚಿನಲ್ಲಿದೆ. ಈ ಅನಾದಾರ ದೂರವಾಗಬೇಕಿದೆ ಎಂದು ಹೇಳಿ ಈ ಬೈಲೂರ ಬಸವಲಿಂಗಯ್ಯ ಹಿರೇಮಠರವರ ‘ನೂರು ಜನಪದ ಹಾಡುಗಳು’ ಬಗೆಗಿನ ನನ್ನ ಮಾತು ಮುಗಿಸುತ್ತೇನೆ..! **********

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ತಗಿ ನಿನ್ನ ತಂಬೂರಿ , ಶರೀಫರ ತತ್ವ ಭಾಷ್ಯ” ಕೃತಿ: ತಗಿ ನಿನ್ನ ತಂಬೂರಿ(ಶರೀಫರ ತತ್ವ ಭಾಷ್ಯ) ಲೇಖಕಿ; ಚಂದ್ರಪ್ರಭ ಬಿ. ಪ್ರಕಾಶಕರು: ಅಜಬ್ ಪ್ರಕಾಶನ, ನಿಪ್ಪಾಣಿ ತಗಿ ನಿನ್ನ ತಂಬೂರಿ , ಶರೀಫರ ತತ್ವ ಭಾಷ್ಯ” ಅಜಬ್ ಪ್ರಕಾಶನ, ನಿಪ್ಪಾಣಿ ರವರ ಹೊಸ ಪ್ರಕಟಣೆ. ಬನಹಟ್ಟಿಯ ಚಂದ್ರಪ್ರಭಾ ಲೇಖನಿಯಿಂದ ಇದು ಚೊಚ್ಚಲ ಪುಸ್ತಕ. ಕನ್ನಡ ನಾಡಿನ ಬಹು ಜನಪ್ರಿಯ ಜಾನಪದ ಕವಿ, ತತ್ವ ಪದಕಾರ ಶರೀಫ ಸಾಹೇಬರ ಆಯ್ದ ೨೫ ತತ್ವ ಪದಗಳನ್ನು ಇಲ್ಲಿ ಲೇಖಕರು ಚರ್ಚೆಗೆ ಒಳಪಡಿಸಿದ್ದಾರೆ. ಪ್ರಸ್ತಾವನೆಯಲ್ಲಿ ಸ್ವತಃ ಲೇಖಕಿ ಹೇಳುವಂತೆ ಶಿವಯೋಗದ ಹಿನ್ನೆಲೆಯಲ್ಲಿ ಈ ಪದ್ಯಗಳನ್ನು ವಿಶ್ಲೇಷಣೆ ಮಾಡಲಾಗಿದೆ. ಪೂರಕವಾಗಿ‌ ಬಸವಾದಿ ಶರಣರ ವಚನಗಳನ್ನು ಅಲ್ಲಲ್ಲಿ ಉಲ್ಲೇಖಿಸಿ ಶರಣರ ವಚನಗಳು ಹಾಗೂ ಶರೀಫರ ತತ್ವ ಪದಗಳಿಗಿರುವ ತಾತ್ವಿಕ ಹಿನ್ನೆಲೆಯತ್ತ ಬಲು ಸೊಗಸಾಗಿ ಗಮನ ಸೆಳೆಯಲಾಗಿದೆ. ಸಾಮಾನ್ಯ ಜನಜೀವನದ ಆಗು ಹೋಗುಗಳನ್ನೇ ರೂಪಕವನ್ನಾಗಿ ಮಾಡಿಕೊಳ್ಳುವಾಗಲೂ ಶರೀಫರ ತತ್ವ ಪದಗಳ ಗೂಢಾರ್ಥ ಪರಮಾರ್ಥ ಸಾಧನೆಯತ್ತ ಕೈ ಹಿಡಿದು ನಡೆಯಿಸುವುದನ್ನು ಲೇಖಕಿ ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಆಯಾ ಸಂದರ್ಭಗಳಲ್ಲಿ ಅಗತ್ಯವೆನಿಸುವ ದೃಷ್ಟಾಂತ ನೀಡುವ ಮೂಲಕ ಸಂಗತಿಗಳನ್ನು ಓದುಗ ಸ್ನೇಹಿ ಮಾಡುವ ನಿಟ್ಟಿನಲ್ಲಿ ಲೇಖಕರು ಪರಿಶ್ರಮ ಪಟ್ಟಿದ್ದು ಕಂಡು ಬರುತ್ತದೆ. ಸುದೀರ್ಘವಾದ ತಮ್ಮ ಪ್ರಸ್ಥಾವನೆಯಲ್ಲಿ ಯೋಗ, ಶಿವಯೋಗ ಇತ್ಯಾದಿ ಕುರಿತು ಹೇಳುವ ಲೇಖಕರು ಕಾವ್ಯ ಕುರಿತು ವ್ಯಕ್ತಪಡಿಸುವ ಅಧ್ಯಾಯ ಗಮನ ಸೆಳೆಯುತ್ತದೆ. ಅದೇ ರೀತಿ ಯೋಗದಲ್ಲಿ ಪ್ರಸ್ತಾಪವಾಗುವ ಹಲವಾರು ತಾಂತ್ರಿಕ ಪಾರಿಭಾಷಿಕ ಪದಗಳ ವಿವರಣೆ ಕೂಡಾ ಪೂರಕವಾಗಿದೆ. ಶರೀಫರ ಜೀವನದ ಆಗು ಹೋಗುಗಳನ್ನು ತಿಳಿಸುವ ಮೂಲಕ ಅವರೊಬ್ಬ ಸಮನ್ವಯದ ಹರಿಕಾರ ಎಂಬ ಅಂಶವನ್ನು ಕೊನೆಯಲ್ಲಿ ನಿರೂಪಿಸಲಾಗಿದೆ. ಶರೀಫರು ಬೇರೆಲ್ಲ ಆಗುವುದಕ್ಕಿಂತ ಮಿಗಿಲಾಗಿ ಓರ್ವ ಶಿವಯೋಗ ಸಾಧಕರಾಗಿದ್ದರು, ಅಪ್ಪಟ ಶರಣರಾಗಿದ್ದರು, ಮೌಢ್ಯ ವಿರೋಧಿಯಾಗಿದ್ದರು, ಜನಾನುರಾಗಿಯಾಗಿದ್ದರು ಎಂಬ ಸ್ಪಷ್ಟ ನಿಲುವನ್ನು ಲೇಖಕರು ಅತ್ಯಂತ ಶ್ರದ್ಧೆಯಿಂದ ನಿರೂಪಿಸುವುದನ್ನು ಇಲ್ಲಿ ಕಾಣಬಹುದು. ಪುಸ್ತಕ ದೊರೆಯುವ ಸ್ಥಳ: ರೂ. ೧೮೦/- ಬೆಲೆಯ ಪುಸ್ತಕ “ಅರು ಪ್ರಕಾಶನ” ಬನಹಟ್ಟಿ ಇವರಲ್ಲಿ ಲಭ್ಯವಿದೆ. ಸಂಪರ್ಕ ಸಂಖ್ಯೆ 9916542172 ಡಿ. ಎ. ಬಾಗಲಕೋಟ, ‘ಅರು ನಿಲಯ’, ಬೀಳಗಿ ಓಣಿ, ಬನಹಟ್ಟಿ 587311, ಜಿ.‌ ಬಾಗಲಕೋಟ – ಇವರನ್ನು ಸಂಪರ್ಕಿಸಬಹುದು.

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಪುಸ್ತಕ

‘ಗಂಗವ್ವ ಗಂಗಾಮಾಯಿ‘ ಶಂಕರ ಮೊಕಾಶಿ ಪುಣೇಕರ ಕೆ.ಶಿವು ಲಕ್ಕಣ್ಣವರ ಗಂಗವ್ವ ಗಂಗಾಮಾಯಿಯಾಗುವ ಅಪೂರ್ವ ಕಥನವೇ ಶಂಕರ ಮೊಕಾಶಿ ಪುಣೇಕರರ ‘ಗಂಗವ್ವ ಗಂಗಾಮಾಯಿ’..! ಕನ್ನಡದ ಮುಖ್ಯ ಸ್ತ್ರೀಪಾತ್ರಗಳ ಜೊತೆ ನಡೆಸುವ ಈ ಸಂವಾದಕ್ಕೆ ಹಲವು ಆಸೆಗಳು, ಉದ್ದೇಶಗಳು ಇವೆ. ಕನ್ನಡ ಮನಸ್ಸನ್ನು ಆವರಿಸಿರುವ, ಕಾಡಿರುವ ಈ ಸ್ತ್ರೀಪಾತ್ರಗಳನ್ನೆಲ್ಲ ಒಂದು ವೇದಿಕೆಗೆ ತಂದಾಗ ಸೃಷ್ಟಿಯಾಗುವ ಹೆಣ್ಣಿನ ಚಿತ್ರ ಹೇಗಿರಬಹುದು ಎನ್ನುವ ಕುತೂಹಲ, ಹೆಣ್ಣನ್ನು ನೋಡುವ, ಪರಿಭಾವಿಸುವ ನಿರ್ದಿಷ್ಟ ವಿನ್ಯಾಸಗಳು ಇವೆಯೇ ಎನ್ನುವ ಹುಡುಕಾಟವೇ ಲೇಖಕನದ ಮತ್ತು ಲೇಖಕನ ದೃಷ್ಟಿಕೋನ… ಆಯ್ಕೆ, ಆದ್ಯತೆ, ಸಮಕಾಲೀನ ಒತ್ತಡಗಳನ್ನೆಲ್ಲ ಮೆಟ್ಟಿ ನಿಂತ ಸ್ತ್ರೀಪಾತ್ರಗಳು ಏನನ್ನು ಪ್ರತಿನಿಧಿಸುತ್ತವೆ? ಕಲೆಯ ಶಕ್ತಿಯನ್ನೋ, ಹೆಣ್ಣಿನ ವ್ಯಕ್ತಿತ್ವದ ನಿಜ ನೆಲೆಯನ್ನೋ? ಅಪವಾದವೆನ್ನುವಂತೆ, ಅಪರೂಪವೆನ್ನುವಂತೆ, ಮುಖ್ಯವೆನ್ನುವಂತೆ ಕಾಣುವ ಸ್ತ್ರೀ ಪಾತ್ರಗಳಾಚೆಗೆ ಅಜ್ಞಾತವಾಸದಲ್ಲಿರುವ ಪಾತ್ರಗಳೂ ಇವೆಯೆ? ಈ ಸ್ತ್ರೀ ಪಾತ್ರಗಳ ಮೂಲಕ ಭಿನ್ನ ಲೋಕದೃಷ್ಟಿಯೊಂದನ್ನು ಕಟ್ಟಲು ಸಾಧ್ಯವಿದೆಯೆ? ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸುವಲ್ಲಿ ಈ ಪಾತ್ರಗಳ ಪಾತ್ರವೇನು..? ಇಂಥ ಹಲವು ಪ್ರಶ್ನೆಗಳ ಮುಖಾಮುಖಿಯೇ ಗಂಗವ್ವ ಗಂಗಾಮಾಯಿ… ಶಂಕರ ಮೊಕಾಶಿ ಪುಣೇಕರರ ‘ಗಂಗವ್ವ ಗಂಗಾಮಾಯಿ’ ನಿಸ್ಸಂದೇಹವಾಗಿ ಕನ್ನಡದ ಶ್ರೇಷ್ಠ ಪಠ್ಯಗಳಲ್ಲೊಂದಾಗಿರುವಂತೆಯೇ ಗಂಗವ್ವ ಕನ್ನಡ ಜಗತ್ತು ಸೃಷ್ಟಿಸಿರುವ ಸಾರ್ವಕಾಲಿಕ ಪಾತ್ರಗಳಲ್ಲೊಂದು. ತಾಯ್ತನವನ್ನು ಕುರಿತ ಎಲ್ಲ ಬಗೆಯ ರೊಮ್ಯಾಂಟಿಕ್ ನಿರೂಪಣೆಗಳನ್ನು ನಿರ್ದಾಕ್ಷಿಣ್ಯವಾಗಿ ಹೊಡೆದು ಹಾಕುತ್ತಲೇ ತಾಯ್ತನ ಮತ್ತು ಹೆಣ್ಣಿನ ಶಕ್ತಿಯನ್ನು ಈ ಕಾದಂಬರಿ ಅದ್ಭುತವಾಗಿ ಕಟ್ಟಿಕೊಡುತ್ತದೆ. ಇದನ್ನು ಈ ಕಾದಂಬರಿ ಎಷ್ಟು ಶಕ್ತವಾಗಿ ಮಾಡುತ್ತದೆ ಎಂದರೆ, ಹೆಣ್ಣಿನ ಶಕ್ತಿ ವಿಶೇಷಗಳ ಬಗ್ಗೆ ನಮ್ಮಲ್ಲಿ ಭಾವುಕವೂ, ರಮ್ಯವೂ ಆದ ಕೃತಜ್ಞತೆಯ ಭಾವವೊಂದು ಅನಾಯಾಸವಾಗಿ ಮೂಡುವಷ್ಟು..! ಗಂಡನನ್ನು, ಭಾವನಾತ್ಮಕ ಹಾಗೂ ಆರ್ಥಿಕ ಸುರಕ್ಷತೆಯನ್ನು ಒಟ್ಟಿನಲ್ಲಿ ಎಲ್ಲ ಬಗೆಯ ಆಧಾರಗಳನ್ನು ಕಳೆದುಕೊಂಡು ಮಗನನ್ನು ಬೆಳೆಸುವ, ಅವನಿಗೊಂದು ಬದುಕನ್ನು ಕಟ್ಟಿಕೊಡುವುದೇ ತನ್ನ ಬದುಕಿನ ಏಕೈಕ ಗುರಿಯೆಂದು ತಿಳಿಯುವ, ಮಾತ್ರವಲ್ಲ, ಅದನ್ನು ಅಕ್ಷರಶಃ ಬದುಕಿನ ಪ್ರತಿಘಳಿಗೆಯೂ ಪಾಲಿಸುತ್ತಾಳೆ ಗಂಗವ್ವ… ಜಗತ್ತಿನಾದ್ಯಂತ ಇಂಥ ಲಕ್ಷಾಂತರ ತಾಯಂದಿರಿದ್ದಾರೆ. ಅವರಿಗೆಲ್ಲ ತ್ಯಾಗಮಯಿಗಳೆಂಬ, ಬದುಕನ್ನು ಗಂಧದ ಹಾಗೆ ತೇಯುವ ಸಾರ್ಥಕ ಜೀವಿಗಳೆಂಬ ಪ್ರಶಸ್ತಿಯೂ ಯಾವುದೇ ವಶೀಲಿಬಾಜಿಯಿಲ್ಲದೇ ಅಪಾರ ಕೃತಜ್ಞತೆಯಲ್ಲಿ ಸಲ್ಲುತ್ತಾ ಬಂದಿದೆ. ಈ ದೃಷ್ಟಿಕೋನವು ಹೆಣ್ಣು ಇರಬೇಕಾದ್ದೇ ಹೀಗೆ ಎನ್ನುವ ಕರಾರಾಗಿಯೂ ಸ್ಥಾಪಿತವಾಗಿಬಿಟ್ಟಿದೆ. ಇದು ಹೆಣ್ಣಿನ ಶಕ್ತಿ ವಿಶೇಷ ಎನ್ನುವುದೇನೋ ಸರಿ, ಆದರೆ ತಾಯ್ತನವೆನ್ನುವುದು ಪ್ರತಿಘಳಿಗೆಯೂ ಅಪೇಕ್ಷಿಸುವ ಮನೋಚೈತನ್ಯವನ್ನು, ಅದನ್ನು ನಿರಂತರವಾಗಿ ಉಳಿಸಿಕೊಳ್ಳಲು ಏನೆಲ್ಲವನ್ನೂ ಹೆಣ್ಣು ಪಣಕ್ಕೆ ಒಡ್ಡಬೇಕಾಗುತ್ತದೆ ಎನ್ನುವುದನ್ನು ಗಂಗವ್ವನ ಪಾತ್ರ ಸಾಕ್ಷಾತ್ಕರಿಸಿ ಕೊಡುತ್ತದೆ. ಆದ್ದರಿಂದಲೇ ಇದು ‘Making of the Mother’ನ ವಾಸ್ತವವಾದಿ ಚಿತ್ರಣದ ಹಾಗೆ ಕಾಣಿಸುತ್ತದೆ… ಗಂಗವ್ವನ ಪಾತ್ರ ಗಂಗವ್ವನಿಂದ ಗಂಗಾಮಾಯಿಯಾಗುವ ಪ್ರಕ್ರಿಯೆಯ ಸಜೀವ ಚಿತ್ರಣ ಈ ಕಾದಂಬರಿಯಲ್ಲಿದೆ. ಗಂಗವ್ವನ ಪಾತ್ರದ ಪ್ರವೇಶವೇ ಕೃತಿಕಾರರ ದೃಷ್ಟಿಕೋನದ ಥಾಟನ್ನು ನಾಟಕೀಯವಾಗಿ ಓದುಗರಿಗೆ ಪರಿಚಯಿಸುತ್ತದೆ. ಭಾರತೀಯರ ಬದುಕಿನ ಅವಿಭಾಜ್ಯ ಅಂಗವೇ ಆಗಿರುವ ಗಂಗಾಜಲವನ್ನು ತನ್ನ ಮಗನನ್ನು ಪೊರೆಯಬೇಕಾದ ಜವಾಬ್ದಾರಿಯ ಸಲುವಾಗಿ ರೈಲಿನಿಂದ ಹೊರಗೆ ಚೆಲ್ಲುವ ದೃಶ್ಯದಿಂದ ಕಾದಂಬರಿ ಆರಂಭವಾಗುತ್ತದೆ. ಈ ಜವಾಬ್ದಾರಿಯ ಅರಿವು ಅವಳಿಗೆ ಆ ಘಳಿಗೆಯಲ್ಲಿ ಆಗುತ್ತದೆ ಎಂದಲ್ಲ. ಆದರೆ ಆ ಜವಾಬ್ದಾರಿ ಎಷ್ಟು ಮುಖ್ಯವಾದುದು ಮತ್ತು ಅನಂತವಾದುದು ಎಂದರೆ ಗಂಗಾಜಲ ತನ್ನ ಮನೆಯಲ್ಲಿ ಕಣ್ಣೆದುರಿಗೆ ಇರುವುದು ಅದಕ್ಕೊಡ್ಡುವ ಸವಾಲಿನ ಹಾಗೆ, ಸಾವಿನ ಅಸ್ತಿತ್ವವನ್ನು, ಆಗಮನದ ಅನಿವಾರ್ಯತೆಯನ್ನು ಆ ಗಂಗಾಜಲ ಪ್ರತಿಕ್ಷಣ ನೆನಪಿಸುವ ಮೂಲಕ ತನಗೆ ಅಡ್ಡಿಯಾಗಬಹುದೆಂದು ಆ ಗಂಗಾಜಲವನ್ನು ಹೊರಗೆ ಚೆಲ್ಲುತ್ತಾಳೆ… ಇದು ಆ ಗಂಗಾಜಲವನ್ನು ಕುರಿತ ಅವಳ ಅಪನಂಬಿಕೆಯ ಸಂಕೇತವೇನಲ್ಲ, ಸ್ವಭಾವತಃ ದೈವಶ್ರದ್ಧೆಯವಳಾದ ಗಂಗವ್ವನಿಗೆ ಧಾರ್ಮಿಕ ನಂಬಿಕೆಗಿಂತಲೂ ಮಗನನ್ನು ನೆಲೆನಿಲ್ಲಿಸುವುದು ತನ್ನ ಬದುಕಿನ ಪರಮ ಗುರಿ ಎನ್ನುವುದರಲ್ಲಿರುವ ನಂಬಿಕೆ ಮೇಲುಗೈ ಪಡೆಯುತ್ತದೆ ಎನ್ನುವ ಅಂಶ ತಾಯ್ತನದ ಸಹಜ ಗುಣವನ್ನು ಮಾತ್ರವಲ್ಲ; ಅದನ್ನು ಕಾಪಾಡಿಕೊಂಡು ಬರುವುದು ಯಾವ ಹೆಣ್ಣಿಗೂ ಒಂದು ಸವಾಲೂ ಹೌದು, ಅದೊಂದು ಸಾವಯವ ಪ್ರಕ್ರಿಯೆಯೂ ಹೌದು ಎನ್ನುವ ಬಹು ಮುಖ್ಯವಾದ ಅಂಶವನ್ನು ಹೇಳುತ್ತದೆ. ಸಾಮಾನ್ಯವಾಗಿ ಈ ಅಂಶವನ್ನು ಅವಳ ಹುಟ್ಟುಗುಣವೆನ್ನುವಂತೆ ನಿಭಾಯಿಸಲಾಗುತ್ತದೆ. ಆದರೆ ಪುಣೇಕರರ ಈ ಕೃತಿ ಅದೊಂದು ಸಿದ್ಧ ಸ್ಥಿತಿಯಲ್ಲ ಎನ್ನುವುದಕ್ಕೆ ಒತ್ತು ಕೊಡುವುದರ ಮೂಲಕ ಅದೊಂದು ಕಷ್ಟದ ದಾರಿ ಎನ್ನುವುದನ್ನು ಹೇಳುತ್ತದೆ… ಸ್ವಲ್ಪ ಉತ್ಪ್ರೇಕ್ಷಿತವಾಗಿ ಹೇಳುವುದಾದರೆ, ತಾಯ್ತನವೆನ್ನುವುದು ಅಹಂಕಾರವನ್ನು ಕಳೆದುಕೊಳ್ಳುತ್ತಾ ಹೋಗುವ ಕ್ರಿಯೆಯೂ ಹೌದು ಎನಿಸಿಬಿಡುತ್ತದೆ ಗಂಗವ್ವನನ್ನು ಅರ್ಥಮಾಡಿಕೊಳ್ಳುವಾಗ. ಮಗ–ಸೊಸೆ ತನ್ನನ್ನು ಅನಾದರದಿಂದ ಕಂಡ ಸಂದರ್ಭವೊಂದರಲ್ಲಿ ಊಟವನ್ನೂ ಮಾಡದೆ ಅವಳ ಹಿತಚಿಂತಕರಾದ ದೇಸಾಯರ ಮನೆಗೆ ಗಂಗವ್ವ ಹೋಗುತ್ತಾಳೆ. ಅಸಹನೀಯ ಅವಮಾನವಾಗಿದ್ದಾಗಲೂ ಗಂಗವ್ವ ಮನೆಗೆ ವಾಪಸಾಗುವುದಾಗಿ ಹೇಳುತ್ತಾಳೆ. ತನ್ನ ಅವಮಾನಕ್ಕಿಂತ ಮಗನ ಅಭ್ಯುದಯವೇ ದೊಡ್ಡದಾಗಿ ಅವಳಿಗೆ ಕಾಣಿಸುತ್ತದೆ. ಆದರೆ ಇದಕ್ಕಾಗಿ ಅವಳು ರಾಜಿ ಮಾಡಿಕೊಳ್ಳಬೇಕಾಗುವುದು ತನ್ನ ಆತ್ಮಗೌರವದ ಜೊತೆಗೆ. ಬಹುಕಷ್ಟದ ಈ ಸಂದರ್ಭವನ್ನು ಅವಳು ಹಾಯುವ ಘಳಿಗೆಯ ತಲ್ಲಣಗಳನ್ನು ಪುಣೇಕರರು ಅಬ್ಬರವಿಲ್ಲದ ತೀವ್ರತೆಯಲ್ಲಿ ಹಿಡಿಯುತ್ತಾರೆ. ತಾನು ಎನ್ನುವ ಅಹಂಕಾರವನ್ನು ಗೆಲ್ಲಬೇಕಾದ ಅನಿವಾರ್ಯತೆಯನ್ನು ಅವಳು ಸಾಂಪ್ರದಾಯಿಕ ಹೆಣ್ಣಿನ ಮಾಮೂಲಿ ಧಾಟಿಯಲ್ಲಿಯೇ ನಿಭಾಯಿಸಲು ಯತ್ನಿಸುವ ಹಾಗೆ ಕಾಣಿಸುತ್ತದೆ. ‘ಹೆಂಗಸಿನ ಜನ್ಮ ಇರೋದೇ ಅನುಭೋಗಿಸೋಕೆ… ಅನುಭೋಗಿಸ್ತೀನಿ ಬಿಡು ಗೋಪಣ್ಣಾ…’ ಎನ್ನುತ್ತಾಳೆ… ಆದರೆ ಇಡೀ ಕಾದಂಬರಿಯ ಭಿತ್ತಿಯಲ್ಲಿ ಅವಳ ಪಾತ್ರದ ಚಲನೆಗಳು ಅಸಹಾಯಕ ಹೆಣ್ಣಿನ ಗೋಳಾಟವಾಗಿ ಕಾಣಿಸುವುದಿಲ್ಲ. ಬದುಕಿನ ಯಾವುದೇ ಸನ್ನಿವೇಶಗಳನ್ನೂ ನಿರ್ಭೀತಿಯಿಂದ, ಕುಂದಿಲ್ಲದ ಆತ್ಮವಿಶ್ವಾಸದಿಂದ ಎದುರಾಗುತ್ತಾಳೆ. ಈ ಸನ್ನಿವೇಶವೂ ಕೂಡ ಅವಳ ಜೀವನದೃಷ್ಟಿಯ ನಿದರ್ಶನವೇ ಆಗಿದೆ. ಮಗನ ಹಾಗೂ ಸೊಸೆಯ ಎದುರಿಗಿನ ಸೋಲಾಗಬಹುದು ಎನ್ನುವುದಕ್ಕಿಂತ, ತನ್ನ ಆತ್ಮಗೌರವಕ್ಕೆ ಭಂಗವಾಗುತ್ತದೆ ಎನ್ನುವ ಸಾಧ್ಯತೆಗಿಂತ, ಮಗನ ಬದುಕು ಹಳಿ ತಪ್ಪಬಾರದು ಎನ್ನುವ ಪ್ರಜ್ಞಾಪೂರ್ವಕವಾದ, ಕಷ್ಟದ ಆಯ್ಕೆ ಇದು. ಆದರೆ ಅದು ಕಾಣಿಸಿಕೊಳ್ಳುವುದು ಮಾತ್ರ ಹೆಣ್ಣಿನ ಜನ್ಮ ಎನ್ನುವ ಸಾಂಪ್ರದಾಯಿಕ ಭಾಷೆಯಲ್ಲಿ. ಆದ್ದರಿಂದಲೇ ಗಂಗವ್ವನ ಪಾತ್ರ ಹೆಣ್ಣಿನ ವ್ಯಕ್ತಿತ್ವದ ಹುಡುಕಾಟ ಮತ್ತು ರಚನೆಯ ಅನೇಕ ಆಯಾಮಗಳನ್ನು ಅನಾವರಣಗೊಳಿಸುತ್ತದೆ… ಮುಖ್ಯವಾಗಿ ಹೆಣ್ಣಿನ ಸಾಮಾಜಿಕ, ಕೌಟುಂಬಿಕ ನೆಲೆಗಳಿಗೆ ಕೊಡುವ ಒತ್ತು ಇಲ್ಲೂ ಮುಂದುವರಿದಿರುವ ಹಾಗೆ ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ ಗಂಗವ್ವನ ಪಾತ್ರದ ಶಕ್ತಿ ಮತ್ತು ಅನನ್ಯತೆ ಇರುವುದೇ ಹೆಣ್ಣಿನ ಬದುಕಿನ ಸಾಮಾಜಿಕ, ಕೌಟುಂಬಿಕ ನೆಲೆಗಳನ್ನು ಸ್ಪಷ್ಟ ರಾಜಕೀಯ ಹಾಗೂ ನೈತಿಕ ಪ್ರಜ್ಞೆಯಲ್ಲಿ ಪ್ರತಿಪಾದಿಸುವುದರಲ್ಲಿ. ಗಂಗವ್ವ ಮುನ್ನೆಲೆಗೆ ತರುವ ಈ ಅಂಶಗಳು ಅವಳ ವ್ಯಕ್ತಿತ್ವ ಮತ್ತು ಹೋರಾಟಕ್ಕೆ ಅಪಾರ ಬಲ ಕೊಡುತ್ತವೆ. ಇಡೀ ಲೋಕವನ್ನು ಎದುರು ಹಾಕಿಕೊಳ್ಳಬಲ್ಲ ಛಾತಿಯನ್ನು ಅವಳು ಪಡೆಯುವುದು ಈ ರಾಜಕೀಯ ಪ್ರಜ್ಞೆಯಲ್ಲಿ. ಈ ಕಾರಣಕ್ಕಾಗಿಯೇ ಅವಳಿಗೆ ತನ್ನ ನಡೆಯಲ್ಲಿ ಯಾವ ದ್ವಂದ್ವಗಳೂ ಇಲ್ಲ. ತನ್ನ ಖಾಸಾ ತಮ್ಮ ರಾಘಪ್ಪನ ಮಗಳನ್ನೇ ತನ್ನ ಸೊಸೆಯಾಗಿ ಮಾಡಿಕೊಳ್ಳುವ ಸಂದರ್ಭದಲ್ಲೂ ಒಪ್ಪಂದದಂತೆ ಒಂದು ಸಾವಿರ ರೂಪಾಯಿ ಕೊಡದಿದ್ದರೆ ‘ಅಕ್ಕಿಕಾಳು’ ಇಲ್ಲ ಎಂದು ತುಂಬಿದ ಮದುವೆ ಮನೆಯಲ್ಲಿ ಘಂಟಾಘೋಷವಾಗಿ ಹೇಳಬಲ್ಲಳು. ಇಷ್ಟಾಗಿ ಆ ಹಣ ಯಾಕಾಗಿ? ತಾನು ಉಡುವ ಹರಕು ಸೀರೆಯ ಬದಲು ರೇಷ್ಮೆ ಸೀರೆ ಉಡಲಂತೂ ಅಲ್ಲ. ಮಗನ ಭವಿಷ್ಯದ ಆಪದ್ಧನವಾಗಿ ಅದು ಅವಳಿಗೆ ಬೇಕು… ಯಾರನ್ನು ಬೇಕಾದರೂ ತನ್ನ ಖೆಡ್ಡಾದಲ್ಲಿ ಬೀಳಿಸಿಕೊಳ್ಳಬಲ್ಲ, ಗೆದ್ದು ಬೀಗಬಲ್ಲ ಪ್ರಚಂಡ ರಾಘಪ್ಪನನ್ನು ಗಂಗವ್ವ ಸೋಲಿಸುವುದು ಇದೇ ಪ್ರಖರ ರಾಜಕೀಯ ಪ್ರಜ್ಞೆಯಲ್ಲಿ. ತಾಯಿಯಾಗಲ್ಲದೆ ತನಗೆ ಇನ್ನೊಂದು ಅಸ್ತಿತ್ವವೇ ಇಲ್ಲವೇನೋ ಎನ್ನುವ ಮಟ್ಟದಲ್ಲಿ ಗಂಗವ್ವ ವ್ಯವಹರಿಸುತ್ತಾಳೆ. ಕೆಲವು ಸನ್ನಿವೇಶಗಳು ಗಂಗವ್ವನ ವ್ಯಕ್ತಿತ್ವದ ಅಪ್ರತಿಮ ಸಾಕ್ಷಿಗಳಾಗಿವೆ. ಗಂಗವ್ವನ ಗಂಡ ಸ್ವಾಮಿರಾಯನ ಆಸ್ತಿಯೆಲ್ಲ ಹರಾಜಿಗೆ ಬಂದ ಹೊತ್ತಿನಲ್ಲಿ ಇವಳು ಮಗ ಕಿಟ್ಟಿಯ ಕೈಗೆ ಕೆಲವು ಒಡವೆಗಳನ್ನು ಕೊಟ್ಟು ಹಿತ್ತಲಿನಲ್ಲಿ ಒಗೆಸುತ್ತಾಳೆ. ನಂತರ ಅವುಗಳನ್ನು ಮಾರಿ, ಬಂದ ಹಣವನ್ನು– ರಕ್ಷಕ ದೈವದಂತೆ ಅವಳನ್ನು, ಮಗ ಕಿಟ್ಟಿಯನ್ನು ಸದಾ ಪೊರೆದ ದೇಸಾಯರ ಬಳಿ ಇಡುತ್ತಾಳೆ. ಎಂಥ ದುರ್ಭರ ಸನ್ನಿವೇಶದಲ್ಲೂ ಕಂಗೆಡದ ಈ ಗುಣವೊಂದು ಅವಳ ವ್ಯಕ್ತಿತ್ವದ ಅಸಾಧಾರಣ ಲಕ್ಷಣ. ಇದೇ ಹಣದ ಮೇಲೆ ತಮ್ಮ ರಾಘಪ್ಪ ಕಣ್ಣಿಟ್ಟು ಏನೆಲ್ಲಾ ಹುನ್ನಾರಗಳನ್ನು ಮಾಡಿದರೂ ಆ ಹಣ ಅವನ ಕೈಗಾಗಲಿ, ಮಗ ಕಿಟ್ಟಿಯ ದಂದುರಾಳಿತನಕ್ಕಾಗಲಿ ದಕ್ಕದಂತೆ ನೋಡಿಕೊಳ್ಳುತ್ತಾಳೆ… ನಿದ್ದೆ ಎಚ್ಚರಗಳಲ್ಲಿ ತನ್ನ ಜವಾಬ್ದಾರಿಯನ್ನೇ ಉಸಿರಾಡುವ ಗಂಗವ್ವ ಈ ಕಾರಣಕ್ಕಾಗಿಯೇ ಸದಾ ಚಡಪಡಿಸುತ್ತಿರುತ್ತಾಳೆ. ಆದ್ದರಿಂದಲೇ ಇವಳ ವ್ಯಕ್ತಿತ್ವದಲ್ಲಿ ಪ್ರಸನ್ನತೆ ಎನ್ನುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಹಾಸ್ಯವೂ ಇವಳ ಬಳಿ ಸುಳಿಯುವುದಿಲ್ಲ. ಗಂಗವ್ವನ ವ್ಯಕ್ತಿತ್ವದ ಅಪೂರ್ಣತೆ ನಮ್ಮ ಅರಿವಿಗೆ ಬರುವುದು ಇಂಥ ಸಂಗತಿಗಳಿಂದ. ಮಗ ಕಿಟ್ಟಿಯನ್ನು ಕುರಿತ ಗಂಗವ್ವನ ಕಾಳಜಿ, ಸದೋದಿತವಾಗಿ ಅವಳು ನಡೆಸುವ ಪ್ರಯತ್ನಗಳನ್ನು, ಅವಳ ಭಂಗವಿರದ ಏಕೋನಿಷ್ಠೆಯನ್ನು ವೈಭವೀಕರಿಸುವ, ನಾಟಕೀಯಗೊಳಿಸುವ, ಓದುಗರ ಕಣ್ಣಾಲಿಗಳನ್ನು ಒದ್ದೆಯಾಗಿಸುವ ಎಲ್ಲ ಅವಕಾಶಗಳೂ ಈ ಕೃತಿಗಿದ್ದವು. ಆದರೆ ಈ ಕಾದಂಬರಿ ಅದ್ಯಾವುದನ್ನೂ ಮಾಡದೆ ಗಂಗವ್ವನನ್ನು ಅವಳ ನಿಜದಲ್ಲಿ ನೋಡುವ ಪ್ರಯತ್ನ ಮಾಡುತ್ತದೆ. ಅವಳ ದೌರ್ಬಲ್ಯಗಳನ್ನು ಮುಚ್ಚಿಡುವ ಪ್ರಯತ್ನ ಮಾಡುವುದಿಲ್ಲವೆಂದೇ ಅವಳ ಶಕ್ತಿಯೂ ನಮ್ಮ ಅರಿವಿಗೆ ದಕ್ಕುವುದು ಸಾಧ್ಯವಾಗುತ್ತದೆ. ತಮ್ಮ ರಾಘಪ್ಪ ಹತ್ತು ವರ್ಷಗಳ ನಂತರ ಮೊದಲ ಬಾರಿಗೆ ಮನೆಗೆ ಬಂದಾಗ ಮಗ ಚಹಾ ಮಾಡು ಎಂದರೆ, ‘ರಾಘಪ್ಪ ಚಹಾದ ಮನುಷ್ಯ ಅಲ್ಲೇಳಪ್ಪ’ ಎನ್ನುವ ಕ್ರೌರ್ಯ, ಸಣ್ಣತನ, ದಿಗಿಲು ಹುಟ್ಟಿಸುತ್ತದೆ (ಚಹಾದ ಪುಡಿ ತೀರಿತ್ತು ಎಂದು ನಂತರ ಮಗನಿಗೆ ಅವಳು ಕೊಡುವ ಸಮರ್ಥನೆ ಅವಳ ನಡವಳಿಕೆಯ ಕ್ರೌರ್ಯವನ್ನೇನು ಕಡಿಮೆ ಮಾಡುವುದಿಲ್ಲ)… ಗಂಗವ್ವನ ಪಾತ್ರದ ಮಹತ್ವ ಇರುವುದು, ಸ್ಥಾಪಿತ ನಿಲುವೊಂದನ್ನು ಅಗೋಚರ ನೆಲೆಯಲ್ಲಿ ಮುರಿಯುವ ಪ್ರಯತ್ನದ ಕಾರಣಕ್ಕಾಗಿ. ಸಾಮಾನ್ಯವಾಗಿ ತಾಯ್ತನವು ಮಕ್ಕಳನ್ನು ತಮ್ಮ ಅಧಿಕಾರ ಮತ್ತು ಪ್ರೀತಿಯ ಅಧೀನತೆಯಲ್ಲಿ ನಿಯಂತ್ರಿಸಲು ಇರುವ ಒಂದು ಆವರಣವಾಗಿ ಬಳಕೆಯಾಗುತ್ತದೆ. ಅಲ್ಲಿ ಅಧಿಕಾರ ಕೇಂದ್ರದ ಪ್ರಶ್ನೆಯೂ ಸಹಜವಾಗಿಯೇ ಇರುತ್ತದೆ. ಎಂದರೆ ತಾಯಿ ಕೇಂದ್ರವಾಗಿ ಮಕ್ಕಳು ಅಧೀನವಾಗುವ ಕ್ರಮ. ಆದರೆ ಗಂಗವ್ವನ ಪಾತ್ರ ಇದಕ್ಕಿಂತ ಭಿನ್ನ. ಅದು ಮಗ ಕೇಂದ್ರ ಎನ್ನುವುದನ್ನು, ತನ್ನ ವೈಯಕ್ತಿಕ ಬದುಕಿನ ಸುಖದುಃಖಗಳು ಎರಡನೆಯವು ಎನ್ನುವುದನ್ನು ಗಂಗವ್ವ ಮತ್ತೆ ಮತ್ತೆ ಸಾಬೀತು ಮಾಡುತ್ತಾ ಹೋಗುತ್ತಾಳೆ… ಆದ್ದರಿಂದಲೇ ಆರಂಭದಲ್ಲಿ ಇದು ಅಹಂಕಾರವನ್ನು ಕಳೆದುಕೊಳ್ಳುವ ದಾರಿಯಾಗಿ ಕಾಣುತ್ತದೆ ಎಂದಿದ್ದು. ತಮ್ಮ ಈಡೇರದ ಆಸೆಗಳ ಪೂರೈಕೆಯ ವಾಹಕಗಳಾಗಿ ಮಕ್ಕಳನ್ನು ಪರಿಭಾವಿಸುವ ಮಾಮೂಲಿ ದಾರಿಯಲ್ಲ ಇದು. ಅಥವಾ ಮಗ ತನ್ನ ರಾಜ್ಯದ ನಿಷ್ಠಾವಂತ ಪ್ರಜೆಯಾಗಿರಬೇಕು ಎನ್ನುವ ನಿಲುವಿನಳಾಗಿಯೂ ಗಂಗವ್ವ ಕಾಣಿಸುವುದಿಲ್ಲ. ಜೀವ ಕೊಟ್ಟ ಮಗನಿಗೆ ಬದುಕು ಕಟ್ಟಿಕೊಡಬೇಕು ಎನ್ನುವ ಮೂಲಧಾತು ಇವಳನ್ನು ಬೇರೆ ಪಾತಳಿಯಲ್ಲಿಡುತ್ತದೆ. ಅಧಿಕಾರ, ವಾತ್ಸಲ್ಯ, ಕಾಳಜಿ ಮತ್ತು ಜವಾಬ್ದಾರಿ– ಇದು ಸಾಮಾನ್ಯವಾಗಿ ತಾಯ್ತನದಲ್ಲಿ ನಾವು ನೋಡುವ ಶ್ರೇಣೀಕೃತ ನೆಲೆಗಳು. ಗಂಗವ್ವನಲ್ಲಿ ಇದು ತಿರುವುಮುರುವಾಗಿದೆ. ಜವಾಬ್ದಾರಿ ಮೊದಲಾಗಿ ಅಧಿಕಾರ ಕೊನೆಯದಾಗಿದೆ. ಗಂಗವ್ವನನ್ನು ಗಂಗಾಮಾಯಿಯಾಗಿಸುವ ಅಂಶ ಇದೇ. ಇದನ್ನೇ ಮುಂದುವರೆಸಿ ಹೇಳುವುದಾದರೆ ತಾಯ್ತನವನ್ನು ಗ್ರಹಿಸಬೇಕಾದ ವಾಸ್ತವ ದೃಷ್ಟಿಕೋನವನ್ನು ಪುಣೇಕರರ ಈ ಕಾದಂಬರಿ ಶಕ್ತವಾಗಿ ಸ್ಥಾಪಿಸುತ್ತದೆ. ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ… ಎನಿಸಿದಾಗಲೂ ಅವಳ ಬಗ್ಗೆ ಪ್ರೀತಿ, ಕೃತಜ್ಞತೆ ಮಾತ್ರವಲ್ಲ ಗೌರವವೂ ಹುಟ್ಟುವುದು ಈ ಕಾರಣಕ್ಕಾಗಿ. ಕನ್ನಡದಲ್ಲಿ ಹಲವು ಅಮರ ತಾಯಂದಿರಿದ್ದಾರೆ. ಅವರಲ್ಲಿ ಗಂಗವ್ವನಿಗೆ ಹತ್ತಿರದ ಸಂಬಂಧಿಗಳೆಂದರೆ, ಲಂಕೇಶರ ‘ಅವ್ವ’ ಮತ್ತು ದೇವನೂರರ ‘ಸಾಕವ್ವ’..! ಇಂತಹ ಕೃತಿಕಾರರ ಪರಿಚಯ ಹೀಗಿದೆ– ಶಂಕರ ಮೊಕಾಶಿ ಪುಣೇಕರ ಅವರು ಹುಟ್ಟಿದ್ದು 1928, ಧಾರವಾಡದಲ್ಲಿ. ಅಲ್ಲಿಯೇ ತಮ್ಮ ಶಿಕ್ಷಣವನ್ನು ಮುಗಿಸಿದರು. ಬಿ.ಎ.ಪದವಿ ಮುಗಿದ ನಂತರ ನಾಲ್ಕು ವರ್ಷಗಳ

ಪುಸ್ತಕ Read Post »

ಪುಸ್ತಕ ಸಂಗಾತಿ

ಮುಟ್ಟಬಾರದವರ ಕಥೆ

‘ಉಚಲ್ಯಾ’ ಕೆ.ಶಿವುಲಕ್ಕಣ್ಣವರ ಲಕ್ಷ್ಮಣ ಗಾಯಕವಾಡರ ‘ಉಚಲ್ಯಾ’ ಎಂಬ ಹೀಗೊಂದು ಮುಟ್ಟಬಾರದವರ ಮರಾಠಿ ಕಥೆ..! ಅನುವಾದಕರು- ಚಂದ್ರಕಾಂತ ಪೋಕಳೆ Pages 120 ₹ 75.00 Year of Publication: 2017 Published by: ನವಕರ್ನಾಟಕ ಪ್ರಕಾಶನ Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001 Phone: 080-22203580/01/02 ಉಚಲ್ಯಾ’ ಮರಾಠಿಯ ಪ್ರಖ್ಯಾತ ಲೇಖಕ ಲಕ್ಷ್ಮಣ ಗಾಯಕವಾಡರ ಆತ್ಮಕತೆಯ ಕನ್ನಡಾನುವಾದ. ಚಂದ್ರಕಾಂತ ಪೋಕಳೆಯವರು ಉಚಲ್ಯಾವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬುಡಕಟ್ಟು ಸಮುದಾಯದಿಂದ ಬಂದ ಲೇಖಕ ತನ್ನ ಜೀವನದ ಭೀಕರೆಯನ್ನು ಬಿಚ್ಚಿಟ್ಟ ಈ ಕೃತಿ ಅತ್ಯಂತ ಪ್ರಸಿದ್ಧ ಕೃತಿಯಾಗಿದೆ. ’ರಕ್ತ ಸುರಿಸಿ ದುಡಿಯುವ ಸಮುದಾಯದ ನಾನು ಸಮಾಜಮುಖಿ ಕಾರ್ಯಕರ್ತ. ನಾನು ಹುಟ್ಟಿದ ಸಮುದಾಯವನ್ನು ಸಮಾಜ ಮತ್ತು ವ್ಯವಸ್ಥೆ ತಿರಸ್ಕರಿಸಿತ್ತು. ಸಾವಿರಾರು ವರ್ಷಗಳಿಂದಲೂ ನಮ್ಮನ್ನು ಪ್ರಾಣಿಗಳಿಂತಲೂ ಕಡೆಯಾಗಿ ಕಾಣುವ ಸಮಾಜದಲ್ಲಿ ಪ್ರಾಣಿ ಸಮಾನಜೀವನ ನಡೆಸುಂತ ಸ್ಥಿತಿ ಇತ್ತು. ಬ್ರಿಟಿಷ್ ಸರ್ಕಾರವಂತೂ ನಮ್ಮ ಜಾತಿಗೆ ಕ್ರಿಮಿನಲ್ ಟ್ರೈಬ್ ಎಂಬ ಹಣೆಪಟ್ಟಿಯನ್ನೇ ಹಚ್ಚಿತ್ತು ಎನ್ನುತ್ತಾರೆ’ ಮೂಲ ಲೇಖಕ ಲಕ್ಷ್ಮಣ ಗಾಯಕವಾಡರು… ಬುಡಕಟ್ಟು ಸಮುದಾಯವೊಂದರ ಬದುಕಿನ ನರಕ ಸದೃಶ್ಯ ಜೀವನವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಉಚಲ್ಯಾ ಕೃತಿ ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ಮೂಲ ಕೃತಿಗೆ 1988ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇಂಥಹ ಮೌಲ್ಯಯುತ ಕೃತಿಯನ್ನು ಚಂದ್ರಕಾಂತ ಪೋಕಳೆಯವರು ಅಷ್ಟೇ ಸೂಕ್ಷ್ಮವಾಗಿ ಕನ್ನಡೀಕರಿಸಿದ್ದಾರೆ… ಹೀಗೆ ಕನ್ನಡಿಕರಿಸಿದ ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು… ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ಚಂದ್ರಕಾಂತ ಅವರು ಕನ್ನಡ, ಮರಾಠಿ ಎರಡು ಭಾಷೆಗಳಲ್ಲೂ ಪ್ರಭುತ್ವ ಪಡೆದಿದ್ದು, ಮರಾಠಿ ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಕನ್ನಡಿಗರಿಗೆ ಪರಚಯಿಸುತ್ತಿದ್ದಾರೆ. ಅಲ್ಲದೇ ಕನ್ನಡ-ಮರಾಠಿ ಭಾಷಾ ಸೇತುವೆಯಾಗಿ ಕೆಲಸಮಾಡುತ್ತಿದ್ದಾರೆ… ಅನುವಾದಕ್ಷೇತ್ರಕ್ಕೆ ತಮ್ಮನ್ನು ಸಮರ್ಪಿಸಿಕೊಂಡು ಅನುವಾದ ಯಜ್ಞದಲ್ಲಿ ತಮ್ಮ ಹವಿಸ್ಸನ್ನೂ ಧಾರೆಎರೆದು ಮರಾಠಿ ಸಾಹಿತ್ಯದಿಂದ ಬಹುಮೌಲಿಕ ಕೃತಿಗಳನ್ನು ಕನ್ನಡಕ್ಕೆ ನೀಡುತ್ತಾ ಬಂದಿರುವ ಲೇಖಕರಲ್ಲಿ ಅತ್ಯಂತ ಪ್ರಮುಖರು… ಬೆಳಗಾವಿಯ ಗಡಿಭಾಗದಲ್ಲಿ ನೆಲೆಸಿರುವ ಚಂದ್ರಕಾಂತ ಪೊಕಳೆ ಆಗಾಗ್ಗೆ ಮರುಕಳಿಸುವ ಭಾಷಾ ವಾದ-ವಿವಾದ, ಏಕೀಕರಣ ಹೋರಾಟ, ಕನ್ನಡದ ಅಸ್ತಿತ್ವದ ಪ್ರಶ್ನೆ, ರಾಜಕಾರಣಿಗಳ ಮಸಲತ್ತುಗಳು ಇವುಗಳ ಮಧ್ಯೆಯೂ ಭಾಷಾ ಸ್ನೇಹಕ್ಕಾಗಿ ನಿರಂತರವಾಗಿ ದುಡಿಯುತ್ತಿದ್ದಾರಿ. ಭಾಷಾ ಬೆಳವಣಿಗೆಗೆ ತಮ್ಮದೇ ಆದ ಹಾದಿ ಕಂಡುಕೊಂಡಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮೇಲಿನ ಪ್ರಭುತ್ವ, ವಿದ್ವತ್‌, ಅಧ್ಯಯನಶೀಲತೆಯಿಂದ ಸಾಹಿತ್ಯದ ಯಾವುದೇ ಪ್ರಕಾರವನ್ನು ಆಯ್ಕೆಮಾಡಿ ಅನುವಾದಿಸಿದರೂ ಅದು ಸಹಜವಾಗಿ ಅನುವಾದಿತ ಭಾಷೆಗೆ ಹೊಂದಿಕೊಂಡು ಸ್ವಾಭಾವಿಕವೆನಿಸುವಂತಹ ಶೈಲಿ ಇವರ ಬರವಣಿಗೆಯದ್ದು… ಇವರ ಮನೆಮಾತು ಕೊಂಕಣಿ, ಕಲಿತದ್ದು ಕನ್ನಡ, ತಾಯಿ ಹಾಗೂ ಹೆಂಡತಿ ಮರಾಠಿ ಪರಿಸರದಿಂದ ಬಂದವರು. ಇದರಿಂದ ಕೊಂಕಣಿ-ಕನ್ನಡ-ಮರಾಠಿ ಭಾಷೆಗಳ ಸಹಜ-ಒಡನಾಟದಿಂದ ಅನುವಾದ ಕ್ರಿಯೆಗೆ ದೊರೆತ ಭಾಷಾ ಬಂಧುರ. ಭಾಷಾಂತರದ ಹಿಂದೆ ಯಾವುದೇ ಸೈದ್ಧಾಂತಿಕ ನೆಲೆಗಟ್ಟಿರದಿದ್ದರೂ ತಮ್ಮದೇ ಹಾದಿಯಲ್ಲಿ, ಮೂಲದಲ್ಲಿ ಓದಿದಷ್ಟೇ ತೃಪ್ತಿಕೊಡುವಂತಹ ಬರವಣಿಗೆಯಿಂದ ಸುಮಾರು 60 ಕ್ಕೂ ಹೆಚ್ಚು ಕೃತಿಗಳನ್ನು, ಇನ್ನೂರಕ್ಕೂ ಹೆಚ್ಚು ಕಥೆಗಳನ್ನು, 50 ಕ್ಕೂ ಹೆಚ್ಚು ಕವಿತೆಗಳನ್ನು ಕನ್ನಡಕ್ಕೆ ತಂದಿದ್ದಾರೆ… ಇವರು ಮೊದಲು ಅನುವಾದಿಸಿದ ಕೃತಿ ಜಯವಂತ ದಳವಿಯವರ ‘ಚಕ್ರ’ ಕಾದಂಬರಿ. ಈ ಕಾದಂಬರಿಯನ್ನು ಕಸ್ತೂರಿ ಮಾಸ ಪತ್ರಿಕೆಯ ಪುಸ್ತಕ ವಿಭಾಗಕ್ಕಾಗಿ ಸಂಕ್ಷಿಪ್ತವಾಗಿ ಸಂಗ್ರಹಿಸಿದರು. ಈ ಅನುವಾದವನ್ನೂ ಓದಿದ ಐಬಿಎಚ್‌. ಪ್ರಕಾಶನ ಸಂಸ್ಥೆಯು ಪೂರ್ಣ ಪ್ರಮಾಣದಲ್ಲಿ ಅನುವಾದಿಸಿಕೊಡುವಂತೆ ಕೋರಿದಾಗ, ಅನುವಾದದ ಪೂರ್ಣ ಕೃತಿಯು ಪುಸ್ತಕ ರೂಪದಲ್ಲಿ ಪ್ರಕಟಗೊಂಡಾಗ ಕಾದಂಬರಿ ವಲಯದಲ್ಲಿ ಉತ್ತಮ ಪ್ರಾರಂಭ ದೊರೆತು ಅನೇಕ ಕಾದಂಬರಿಗಳನ್ನು ಅನುವಾದಿಸಿದರು… ಮುಂಬಯಿಯ ಜೋಪಡಪಟ್ಟಿಯ ಜೀವನ ಕ್ರಮವನ್ನೂ ನಿರೂಪಿಸುವ ‘ಚಕ್ರ’ (ಮೂಲ ಮರಾಠಿ ಲೇಖಕರು-ಜಯವಂತ ದಳದಿ); ಗೋವೆಯ ದೇವದಾಸಿ ಸಮಸ್ಯೆಯ ಮೇಲೆ ಬೆಳಕುಚೆಲ್ಲುವ ‘ಮಾನು’ (ಜಯವಂತದಳವಿ); ಅನ್ನಕ್ಷುಧೆ-ಕಾಮಕ್ಷುಧೆಯ ತಾಕೂಟದ ವರ್ಣನೆಯ ‘ಶ್ವಪಥ’ (ರಂಗನಾಥ್‌ ಪಠಾರೆ); ದಲಿತರ ಸಾಂಸ್ಕೃತಿಕ ಹೋರಾಟದ ನೆಲೆಗಟ್ಟಿನ ಮೇಲೆ ರೂಪಗೊಂಡಿರುವ ‘ಉಚಲ್ಯಾ’ (ಲಕ್ಷ್ಮಣಗಾಯಕವಾಡ); ಹೆಣ್ಣಿನ ಒಳತುಡಿತಗಳನ್ನು ಎಳೆಎಳೆಯಾಗಿಬಿಡಿಸುವ ‘ಒಂದೊಂದೇ ಎಲೆಯುದುರಿದಾಗ’ (ಗೌರಿದೇಶಪಾಂಡೆ); ಲೇಖಕನ ಬದುಕು ಬರೆಹದಲ್ಲಿ ಇಬ್ಬಂದಿ ಬದುಕಿನ ‘ಕುಣಿಯೆಘುಮಾ’ (ಮಾಧವಿ ದೇಸಾಯಿ); ಮರಾಠ-ಮೊಗಲರ ನಡುವಣ ಚಾರಿತ್ರಿಕ ಸಂಘರ್ಷವನ್ನು ಗುರುತಿಸುವ ‘ಪಾಣಿಪತ’ (ವಿಶ್ವಾಸ ಪಾಟೀಲ)-ಹೀಗೆ ಒಂದೊಂದು ಅನುವಾದಿತ ಕೃತಿಗಳೂ ವಿಶಿಷ್ಟವಾಗಿದ್ದು, ಕನ್ನಡಿಗರಿಗೆ ಹೊಸ ಅನುಭವ ಸಂವೇದನೆಗಳನ್ನೂ ನೀಡುವಂತಹ ಕೃತಿಗಳಾಗಿವೆ. 2004 ರ ಕೇಂದ್ರ ಸಾಹಿತ್ಯ ಅಕಾಡಮಿಯ ಅನುವಾದ ಪ್ರಶಸ್ತಿ ಪಡೆದಿರುವ ‘ಮಹಾನಾಯಕ’ ಕಾದಂಬರಿಯು (ವಿಶ್ವಾಸ ಪಾಟೀಲ) ಮರಾಠಿ ಸಾಹಿತ್ಯ ವಲಯದಲ್ಲಿ ಬಹು ಚರ್ಚಿತ ಕೃತಿಯಾಗಿದ್ದು, ಜನಮನ್ನಣೆ ಗಳಿಸಿದೆ. ಸುಭಾಶ್‌ ಚಂದ್ರ ಬೋಸರ ಬದುಕಿನ ಸಂಘರ್ಷದ ಕಥೆಯ ನಿರೂಪಣೆಯೇ ಈ ಕಾದಂಬರಿಯ ಮುಖ್ಯ ಉದ್ದೇಶವಾಗಿದ್ದು, ಇಂಗ್ಲಿಷ್‌ ಹಾಗೂ ಜಪಾನಿ ಭಾಷೆಯೂ ಸೇರಿ ಭಾರತದ ಹಲವಾರು ಭಾಷೆಗಳಿಗೆ ಅನುವಾಗೊಂಡಿರುವ ವಿಶಿಷ್ಟ ಕೃತಿ. ಕನ್ನಡದಲ್ಲಿ ಎರಡನೆಯ ಮುದ್ರಣ ಕಂಡಿರುವುದಷ್ಟೇ ಅಲ್ಲದೆ ಮರಾಠಿಯಲ್ಲಿ ಹಲವಾರು ಮುದ್ರಣಗಳನ್ನು ಕಂಡಿದ್ದು 80,000 ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿ ದಾಖಲೆಯನ್ನೇ ನಿರ್ಮಿಸಿದೆ. ಮಾರಾಠಿ ಸಾಹಿತ್ಯದಿಂದ ಹೀಗೆ ಸುಮಾರು 30 ಕಾದಂಬರಿಗಳು, 8ಆತ್ಮಕಥೆಗಳು,7 ಕಥಾ ಸಂಕಲನಗಳು, 8 ಸಂಶೋಧನ ಕೃತಿಗಳು, ವೈಚಾರಿಕ, ವೈಜ್ಞಾನಿಕ, ಜೀವನ ಚರಿತ್ರೆಗಳು, ನಾಟಕಗಳು, ಕವಿತೆಗಳು, ಪ್ರಬಂಧಗಳು ಸೇರಿ ಒಟ್ಟು 60ಕ್ಕೂ ಹೆಚ್ಚು ಕೃತಿಗಳನ್ನೂ ಕನ್ನಡಕ್ಕೆ ತಂದಿದ್ದಾರೆ. ಕೆಲವೊಂದು ಕಾದಂಬರಿಗಳಲ್ಲಿ ಬರುವ ಪ್ರಾದೇಶಿಕ ಭಾಷೆಯ ವರ್ಣನೆಯನ್ನು ಕನ್ನಡದಲ್ಲಿ ಹಿಡಿದಿಡುವುದು ಬಹುಪ್ರಯಾಸದ ಕೆಲಸವೆಂದು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡರೂ ಸವಾಲೆನಿಸುವ ಕೃತಿಗಳನ್ನೂ ಅನುವಾದಿಸಿದ್ದಾರೆ. ಜೊತೆಗೆ ಇವರ ಸ್ವತಂತ್ರ ಕೃತಿಗಳಾದ ‘ಮರಾಠಿ ದಲಿತ ರಂಗಭೂಮಿ’, ಮರಾಠಿ ಭಾಷಾ ಸಾಹಿತ್ಯ, ಗಡಿಸಮಸ್ಯೆ ಮುಂತಾದ ವಿಷಯಗಳ ವೈಚಾರಿಕ ಲೇಖನಗಳ ಸಂಕಲನಗಳಾದ ‘ಅನುಸಂಧಾನ’ ಹಾಗೂ ‘ಜಾಗರ’ ಮತ್ತು ವ್ಯಕ್ತಿ ಪರಿಚಯದ ‘ಬಾಬಾ ಅಮ್ಟೆ’ ಕೃತಿಗಳು ಪ್ರಕಟವಾಗಿವೆ. ಇವುಗಳಲ್ಲದೆ ಕನ್ನಡದಿಂದ ಮರಾಠಿ ಭಾಷೆಗೆ ಆಧುನಿಕ ಬರಹಗಳನ್ನು ಭಾಷಾಂತರಿಸಿ ಶಾಂತಿನಾಥ ದೇಸಾಯಿಯವರೊಡನೆ ಹೊರತಂದ ಕೃತಿ ‘ಸಂಬಂಧ’ ಎಂಬ ಮರಾಠಿ ಸಂಕಲನ… ಬಹುಭಾಷೆಯಲ್ಲಿ ಎಷ್ಟೇ ಪಾಂಡಿತ್ಯ ಪಡೆದಿದ್ದರೂ ಅನುವಾದವೆನ್ನುವುದು ಬಹುಕ್ಲಿಷ್ಟಕರವಾದ ಕೆಲಸ. ಒಂದು ಭಾಷೆಯ ಆಡುನುಡಿ, ಗ್ರಾಮ್ಯಭಾಷೆ, ಜನಾಂಗೀಯ ಭಿನ್ನಭಿನ್ನ ಸಂಸ್ಕೃತಿಯ ಮತ್ತೊಂದು ಭಾಷೆಯಲ್ಲಿ ದೊರೆಯುವುದು ವಿರಳವೇ. ಇದಕ್ಕೆ ಮೂಲವಾಗಿ ಬೇಕಾಗಿರುವುದು ಸಾಂಸ್ಕೃತಿಕ, ಜನಾಂಗೀಯ ಅಧ್ಯಯನ ಹಾಗೂ ಭಾಷಾ ಸಂಪತ್ತು. ಇಷ್ಟೆಲ್ಲಾ ಪೂರ್ವ ಸಿದ್ಧತೆಗಳೊಡನೆ ಅನುವಾದ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಚಂದ್ರಕಾಂತ ಪೋಕಳೆಯವರಿಗೆ 1999 ಮತ್ತು 2004 ರಲ್ಲಿ ಶ್ರೀದೇವಿ ಶಾನಭಾಗ ಪ್ರಶಸ್ತಿ, 2001ರಲ್ಲಿ ವರದರಾಜ ಆದ್ಯಪ್ರಶಸ್ತಿ, 2002 ರಲ್ಲಿ ಸಂಗಾತಿ ಅಕಾಡಮಿ ಪ್ರಶಸ್ತಿ , 2002 ಮತ್ತು 2005 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, 2004 ರಲ್ಲಿ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿ ಅನುವಾದ ಪ್ರಶಸ್ತಿ, 2008ರಲ್ಲಿ ಕುವೆಂಪು ಭಾಷಾ ಭಾರತಿ ಪ್ರಶಸ್ತಿಗಳು ದೊರೆತಿವೆ… ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿಯಾಗಿದ್ದಾರೆ… **********************************

ಮುಟ್ಟಬಾರದವರ ಕಥೆ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಕಾಮೋಲವೆಂಬ ಅಂತರಂಗದ ಶೋಧ. ಸ್ಮಿತಾ ಅಮೃತರಾಜ್ ಕೃತಿ: ಕಾಮೋಲ (ಕಥಾ ಸಂಕಲನ) ಲೇಖಕ: ಅಜಿತ್ ಹರೀಶಿ ವೃತ್ತಿಯಲ್ಲಿ ವೈದ್ಯರಾಗಿ ಪ್ರವೃತ್ತಿಯಲ್ಲಿ  ಬರಹಗಾರರಾಗಿರುವ ಡಾ. ಅಜೀತ್ ಹರೀಶಿ ಶಿವಮೊಗ್ಗದ ಸೊರಬದವರು. ಕೃಷಿ, ವೈದ್ಯವೃತ್ತಿಯ ಬಿಡುವಿಲ್ಲದ ಕಾರ್ಯ ಬಾಹುಳ್ಯದ ನಡುವೆಯೂ ಕತೆ, ಕವಿತೆ ಬರೆಯುತ್ತಾ ತನ್ನ ಸೃಜನಶೀಲತೆಯನ್ನು ಬತ್ತದಂತೆ ಕಾಪಿಟ್ಟುಕೊಂಡಿರುವ  ಅಜೀತ್ ಹೆಗಡೆಯವರು ಈಗಾಗಲೇ ತಮ್ಮ ಬರಹಕ್ಕೆ ಅನೇಕ ಬಹುಮಾನ ಮತ್ತು ಪ್ರಶಸ್ತಿಗಳನ್ನು ಪಡೆದುಕೊಂಡವರು.   ಅವರ  ವೈವಿಧ್ಯಮಯ ಬರಹದ ಓಘದ ಕುರಿತು ನನಗೆ ಯಾವೊತ್ತು ತೀರದ ಅಚ್ಚರಿ. ಈಗಷ್ಟೇ ಓದಿ ಮುಗಿಸಿದ ,ವಿಶಿಷ್ಟ ಕುತೂಹಲ ಶಿರೋನಾಮೆ ಹೊಂದಿದ ಅವರ ಕಥಾಸಂಕಲನ ಕಾಮೋಲ. ಪ್ರೀತಿ,ಪ್ರೇಮ, ಕಾಮ,ಕ್ರೌರ್ಯ, ಹೀಗೆ  ಮನುಷ್ಯನ ಒಳಗೆ ಅಡಗಿರುವ ಅನೇಕ ಸುಪ್ತ ಭಾವಗಳನ್ನೆಲ್ಲಾ ಅನಾವರಣಗೊಳಿಸುತ್ತಾ ಹೋಗುತ್ತದೆ. ನಾವು ಕಂಡ ಕೆಲವೊಂದು ನಮ್ಮ ಸುತ್ತ ಮುತ್ತಲಿನ ಚರ್ಯೆಗಳು ಕೂಡ ಇದೇ ಕತೆಯ ಪಾತ್ರದಂತೆ ಭಾಸವಾಗುತ್ತದೆ. ಇದು ಅಜಿತ್ ರವರ ಕಥನಗಾರಿಕೆಯ ಕುಶಲತೆಗೆ ಸಾಕ್ಷಿ. ಮನುಷ್ಯನ ಪ್ರತಿಯೊಂದು ಕ್ರಿಯೆಯ ಹಿಂದೆ ಅವನಿಗೆ ದಕ್ಕಿದ ,ಬದುಕಿನಲ್ಲಿ ಘಟಿಸಿ ಹೋದ ಕೆಲವೊಂದು ಅಘಾತಕಾರಿ ಸಂಗತಿಗಳು ಆಳವಾಗಿ ಬೇರು ಬಿಟ್ಟು ಅವನಿಗೂ ಗೊತ್ತಿಲ್ಲದೆ  ಹೇಗೆ ಪ್ರಕಟಗೊಳ್ಳುತ್ತವೆ ಅನ್ನುವಂತದ್ದು ನಮಗೆ  ಕತೆಗಳನ್ನು ಓದುತ್ತಾ ಹೋದ ಹಾಗೆ ಮನದಟ್ಟಾಗುತ್ತದೆ. ಬಹುಷ; ತಮ್ಮ ವೃತ್ತಿಯಲ್ಲಿ ಅವರು ಇಂತಹ ವ್ಯಕ್ತಿತ್ವದವರಿಗೆ ಮುಖಾಮುಖಿಯಾಗುವ ಕಾರಣ ಜೊತೆಗೆ ವೈಜ್ಞಾನಿಕ ತಿಳುವಳಿಕೆ ಕೂಡ ಇರುವ ಕಾರಣ ಇಲ್ಲಿಯ ಕತೆಗಳು ಶೋಧನೆಗೆ ತೊಡಗುತ್ತವೆ. ಕಂಡುಂಡ ಘಟನೆಗಳನ್ನು ಕಲಾತ್ಮಕವಾಗಿ ಹೊರ ಹಾಕುವುದರಲ್ಲಿ ಅಜಿತ್ ಹೆಗಡೆಯವರು ಕುಶಲಿಗರು.  ಬದುಕಿನ ಪ್ರತಿಯೊಂದು ಸನ್ನಿವೇಶಗಳನ್ನು ಸೂಕ್ಷ್ಮವಾಗಿ ದಿಟ್ಟಿಸುತ್ತಾ ಅದರ ಒಳ ಹೊರಗನ್ನು ಬಗೆಯುವ ಇಲ್ಲಿನ ಕತೆಗಳಲ್ಲಿ ಜೀವಂತಿಕೆ ಇದೆ. ಒಟ್ಟು ೧೪ ಕತಾಗುಚ್ಚವಿರುವ ಈ ಕತಾಸಂಕಲನದಲ್ಲಿ ಮನುಷ್ಯ ಸಂಬಂಧದ ವಿವಿಧ ಮಗ್ಗುಲುಗಳ ಪರಿಚಯವಿದೆ. ಲೌಕಿಕ ಬದುಕಿನಲ್ಲಿ ಪರಿಶುದ್ಧ ಪ್ರೇಮಕ್ಕೆ ಅವಕಾಶವಿಲ್ಲದಾಗ  ಅಕ್ಕನಂತೆ ಅಲೌಕಿಕ ಪೇಮದಲ್ಲೇ ಮನಸನ್ನು ನೆಲೆಗೊಳಿಸಿ ಅದರಲ್ಲಿ ನೆಮ್ಮದಿಯನ್ನು ಹುಡುಕುವ  ಇಲ್ಲಿನ ಕತೆ ಒಂದು ವಿಭಿನ್ನ ಪ್ರಯತ್ನ.  ಮನುಷ್ಯನ ಒಳಗಿನ  ಭಾವದ ಸೆಲೆ ಹೇಗೆ ಬದುಕನ್ನು ಅರಳಿಸಬಲ್ಲದು ಅನುವಂತದ್ದನ್ನು ಹೇಳುತ್ತಾ ಕವಿತೆಯ ಸೆಲೆ ಅನ್ನುವಂತದ್ದು ನೋವು ನಿವಾರಣೆಯಂತೆ ಅನ್ನುವಂತದ್ದನ್ನ ಬರೆಯುತ್ತಾರೆ. ಸ್ವತ; ಕತೆಗಾರರು ಕವಿಯಾದ ಕಾರಣ ಕವಿತೆಯ ಸಾಂಗತ್ಯದಿಂದ ಬದುಕು ಹಸನಾಗುವುದೆಬುದನ್ನು ಕಟ್ಟಿಕೊಡುತ್ತಾರೆ. ಇಲ್ಲಿಯ ಕಾಡುವ  ಆಯಿಯ ಕತೆಯ ತುಂಬಾ ವಿವರಣೆಯಂತೆ ಅನ್ನಿಸಿದರೂ ಓದಿ ಮುಗಿಸಿದಾಗ  ಅಲ್ಲಿರುವ ಅಂತ;ಕರಣ ಕಣ್ಣಂಚನ್ನು ತೇವಗೊಳಿಸಿ ಬಿಡುತ್ತದೆ. ಮನುಷ್ಯನ ವರ್ತನೆಗಳನ್ನು ವಿಭಿನ್ನ ನೆಲೆಯಲ್ಲಿ ಶೋಧಿಸುತ್ತಾ ಅಂತರಂಗದ ತುಮುಲಗಳನ್ನು ಚಿತ್ರಿಸುವ ಕೆಲಸವನ್ನ ಇಲ್ಲಿನ ಕತೆಗಳು ಮಾಡಿವೆ. ಹೊಸ ದೃಷ್ಟಿಕೋನದಿಂದ ಬದುಕನ್ನು ನೋಡಲು ಪ್ರೇರೇಪಿಸುವ ಇಲ್ಲಿನ ಕತೆಗಳು ಸ್ನೇಹಕ್ಕೆ ಯಾವುದೇ ಸಿದ್ಧಾಂತಗಳ ಕಟ್ಟುಪಾಡುಗಳಿರಬಾರದು  ಅನ್ನುವಂತದ್ದನ್ನ ಕಟ್ಟಿಕೊಡುತ್ತಾ ಮಾನವೀಯ ಪ್ರೇಮದ ನೆಲೆಯಲ್ಲಿ ಕತೆಗಳು ಪ್ರಕಟಗೊಳ್ಳುತ್ತವೆ. ಪ್ರಾಧೇಶಿಕ ಭಾಷೆಯನ್ನು ಕತೆಗಳ ಮೂಲಕ ಸಮರ್ಥವಾಗಿ ದುಡಿಸಿಕೊಂಡ  ಅಜಿತ್ ರವರ ಪ್ರತಿಭೆ, ಶ್ರದ್ಧೆ, ಶ್ರಮ ಶ್ಲಾಘನೀಯ. ಕಾಮೋಲ ಓದುತ್ತಾ ಹೋದಂತೆ ಮನುಷ್ಯನ ದು;ಖ, ಸಂಕಟ, ಪ್ರೇಮ,ಕಾಮ, ಎಲ್ಲ ತಳಮಳಗಳಿಗೂ  ಹೊಸ ಅರ್ಥ ಕಂಡುಕೊಳ್ಳುವಲ್ಲಿ ಕತೆ ಯಶಸ್ವಿಯಾಗಿವೆ.ಅಜಿತ್ ಹೆಗಡೆಯವರ ಕಥನ ಕುತೂಹಲ ಮತ್ತಷ್ಟು ಕತೆಗಳಿಗೆ ಸಾಕ್ಷಿಯಾಗಲಿ.     ************

ಪುಸ್ತಕ ವಿಮರ್ಶೆ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ವಲಸೆ, ಸಂಘರ್ಷ ಮತ್ತು ಸಮನ್ವಯ ಪುಸ್ತಕ ವಿಮರ್ಶೆ ಪುಸ್ತಕದ ಹೆಸರು: ವಲಸೆ ಸಂಘರ್ಷ ಸಮನ್ವಯ ಲೇಖಕರು: ಪುರುಷೋತ್ತಮ ಬಿಳಿಮಲೆ ಪ್ರಕಟನ ವರ್ಷ: 2019 ಬೆಲೆ: 400 ರೂಪಾಯಿ  ಪ್ರಕಾಶಕರು: ಅಕೃತಿ ಆಶಯ ಪಬ್ಲಿಕೇಶನ್ ಮಂಗಳೂರು ಲೋಕೇಶ ಕುಂಚಡ್ಕ ಡಾ. ಪುರುಷೋತ್ತಮ ಬಿಳಿಮಲೆಯವರ 400 ಪುಟಗಳ ಈ ಕೃತಿಗೆ 1985ರಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ. ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಪ್ರಸ್ತುತ ಸಂಶೋಧನ ಕೃತಿಯು ಇದೀಗ ಪ್ರಕಟವಾಗಿದೆ. ಒಮ್ಮೆ ಬರೆದಾದ ಸಂಶೋಧನ ಪ್ರಬಂಧವನ್ನು ಪರಿಷ್ಕರಣೆ ಮಾಡುವುದು ಸುಲಭದ ಕೆಲಸವಲ್ಲ, ಇನ್ನೊಂದು ಪ್ರಬಂಧವನ್ನು ಬರೆದ ಹಾಗೆ ಆಗುತ್ತದೆ. ದೆಹಲಿಯಲ್ಲಿ ಕುಳಿತುಕೊಂಡು ಈ ಕೆಲಸ ಮಾಡಿದ ಡಾ.ಬಿಳಿಮಲೆಯವರ ಸಾಹಸ ಅಭಿನಂದನೀಯವಾಗಿದೆ. ಇವತ್ತು ಪ್ರತಿಯೊಬ್ಬ ಗೌಡರ ಮನೆಯಲ್ಲಿ ಇರಬೇಕಾದ ಪುಸ್ತಕವಿದು. ಮುನ್ನುಡಿಯಲ್ಲಿ ಪ್ರೊ. ವಿವೇಕ ರೈಅವರು ಹೇಳಿದಂತೆ ‘ನಿಚ್ಚಮ್ ಪೊಸತು’ ಎನ್ನುವ ಮಾತಿಗೆತಕ್ಕಂತೆ ಈ ಕೃತಿ ಸಿದ್ದಗೊಂಡಿದೆ. ಪುಸ್ತಕದಲ್ಲಿ ಅನೇಕ ಹಳೆಯ ವಿಚಾರಗಳೂ ಇವೆ, ಹೊಸ ಸಂಗತಿಗಳೂ ಇವೆ. ಈ ನಿಟ್ಟಿನಲ್ಲಿ ‘ಹಳೆ ಬೇರು, ಹೊಸ ಚಿಗುರು ಕೂಡಿರಲು ಮರ ಸೊಬಗು’ ಎಂಬ ಮಾತುಇಲ್ಲಿ ಸಾರ್ಥಕಗೊಂಡಿದೆ. ತಲೆಮಾರುಗಳ ಜೊತೆಗಿನ ನಮ್ಮ ಸಂಬಂಧಗಳನ್ನು ಈ ಕೃತಿಯು ಗಟ್ಟಿಯಾಗಿ ಬೆಸೆಯುತ್ತದೆ. ‘ಮುಂದೇನು?’ ಎನ್ನುವ ಪ್ರಶ್ನೆಗೂ ಪುಸ್ತಕವು ಕೆಲವು ಉತ್ತರಗಳನ್ನು ನೀಡುತ್ತದೆ.  ಒಂದು ಸಮುದಾಯದ ಚರಿತ್ರೆಯನ್ನು ಕಟ್ಟುವ ಸಮಯದಲ್ಲಿ ಅಧ್ಯಯನಕಾರ ಅದನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು ಎನ್ನುವುದಕ್ಕೆ ಇದು ಒಂದು ಮಾದರಿ. ಇಂದು ಒಂದು ದೇಶ, ಒಂದು ಭಾಷೆ, ಒಂದು ಧರ್ಮ, ಒಂದು ಬಾವುಟ ಎಂಬೆಲ್ಲಾ ಮಾತುಗಳು ಕೇಳಿ ಬರುತ್ತಿರುವಾಗ ಪ್ರಸ್ತುತ ಪುಸ್ತಕವು ಗೌಡರು ಮತ್ತು ಅವರಂಥ ಅನೇಕ ಸಣ್ಣ ಸಮುದಾಯಗಳು ಭಾರತವನ್ನು ಹೇಗೆ ಕಟ್ಟಿವೆ ಎಂಬ ಕುರಿತು ನಮ್ಮ ಗಮನವನ್ನು ಸೆಳೆಯುತ್ತದೆ. ಆ ಮೂಲಕ ಸುಳ್ಯದಲ್ಲಿ ಬಹುಸಂಖ್ಯಾತರಾದ ಗೌಡ ಸಮುದಾಯದ ಕುರಿತು ನಡೆಸಿದ ಅಧ್ಯಯನಗಳಲ್ಲಿ ಈ ಕೃತಿ ಮೇರು ಪಂಕ್ತಿಯಲ್ಲಿ ನಿಲ್ಲುವ ಅರ್ಹತೆಯನ್ನು ಪಡೆದುಕೊಂಡಿದೆ. ಲಿಖಿತ ಸಾಮಗ್ರಿಗಳಿಲ್ಲದೇ ಇರುವ ಸಮುದಾಯವೊಂದg Àಚರಿತ್ರೆಯನ್ನು ಕಟ್ಟುವ ಕ್ರಮ ಹೇಗೆ ಎಂದು ಸಂಶೋಧಕರಿಗೆ ತಿಳಿದಿಲ್ಲದಿರುವಾಗ, ಅವರಿಗೆ ಮಾರ್ಗದರ್ಶನ ಮಾಡುವ ರೀತಿಯಲ್ಲಿ ಈ ಪುಸ್ತಕವನ್ನು ಬರೆಯಲಾಗಿದೆ. ಇದು ಸುಲಭದ ಕೆಲಸವೇನೂ ಅಲ್ಲ.  ವಲಸೆ ಸಂಘರ್ಷ ಸಮನ್ವಯಗಳ ಕಥನ ಪುಸ್ತಕದ ಶೀರ್ಷಿಕೆಗೆ ತಕ್ಕಂತೆ, ‘ವಲಸೆ ,ಸಂಘರ್ಷ, ಮತ್ತು ಸಮನ್ವಯ” ಎನ್ನುವ ಪರಿಕಲ್ಪನೆಗಳು ವಿಶಾಲವಾದ ವ್ಯಾಪ್ತಿಯನ್ನು ಹೊಂದಿವೆ. ಈ ಕೃತಿ ಸುಳ್ಯ ಪರಿಸರದ ಗೌಡರ ಚರಿತ್ರೆಯನ್ನು ಕಟ್ಟಿಕೊಡುತ್ತಾ, ಅಸ್ತಿತ್ವ ಮತ್ತು ಅಸ್ಮಿತೆಗಳ ನಡುವೆ ಒಂದು ರೀತಿಯಲ್ಲಿ ಕೊಂಡಿಯಾಗಿ, ಮತ್ತೊಂದು ಕಡೆ ತನ್ನೊಳಗಿನ ಅನೇಕ ಅಂಶಗಳನ್ನು ಕೃತಿಯೊಳಗೆ ದಾಖಲಿಸುತ್ತದೆ. ಗೌಡ ಸಮುದಾಯವು ತನ್ನ ವಲಸೆಯ ಸಮಯದಲ್ಲಿ, ಪ್ರಭುತ್ವದ ಜೊತೆಗೆ ನಡೆಸಿದ ಸಂಘರ್ಷ, ಮತ್ತು ಆ ಬಳಿಕ ಸಾಧಿಸಿಕೊಂಡ ಸಮನ್ವಯತೆಯನ್ನು ಕೃತಿಯು ಸಾಧಾರವಾಗಿ ವಿವೇಚಿಸುತ್ತದೆ.  ಪ್ರತಿಯೊಬ್ಬ ವ್ಯಕ್ತಿಯೂ ಜೀವನದ ಒಂದು ಹಂತದಲ್ಲಿ ನಾನು ಯಾರು? ನನ್ನ ಅಜ್ಜ ಯಾರು? ನನ್ನ ಅಜ್ಜಿ ಎಲ್ಲಿಯವರು?. ಎಲ್ಲಿಂದ ಬಂದರು? ಹೇಗೆ ಬಂದರು?  ನನ್ನ ಜಾತಿ ಯಾವುದು? ನನ್ನ ಸಮುದಾಯದ ಚರಿತ್ರೆ ಏನು? ನನ್ನ ಮೂಲ ಯಾವುದು? ಇತ್ಯಾದಿ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾನೆ. ಗೌಡರಿಗೆ ಸಂಬಂಧಿಸಿದ ಹಾಗೆ ಅಂತ ಪ್ರಶ್ನೆಗಳಿಗೆ ಈ ಕೃತಿಯು ಸಮಾಧಾನಕರವಾದ ಉತ್ತರವನ್ನು ನೀಡುತ್ತದೆ. ಬೇರಿನ ಸಂಬಂಧ ಇಂದು ಬೇರಿನ ಜೊತೆಗಿನ ಸಂಬಂಧ ಕಡಿದುಕೊಳ್ಳಲಾಗುತ್ತಿದೆ. ಈ ಕಾಲದಲ್ಲಿ, ಈ ಕೃತಿಯು ಬೇರಿನ ಸಂಬಂಧದ ಪ್ರಾಮುಖ್ಯವನ್ನು ದಾಖಲಿಸುತ್ತದೆ, ಜೊತೆಗೆ ಅದರ ವಿಶ್ಲೇಷಣೆಯನ್ನು ನಡೆಸುತ್ತದೆ. ಕೂಡುಕಟ್ಟಿನ ಅಯಾಮದೊಳಗೆ ಗೌಡಸಂಪ್ರದಾಯದ ಬೇರಿನ ಅನೇಕ ಸಂಬಂಧಗಳು ಇವೆ ಎನ್ನುವುದನ್ನು ಹೇಳುತ್ತಾ, ಸಾಂಪ್ರದಾಯಿಕ ಕ್ರಮಗಳಲ್ಲಿ ಇರುವ ಅನನ್ಯತೆಯನ್ನೂ ಇಲ್ಲಿ ದಾಖಲು ಮಾಡಲಾಗಿದೆ. ಅಸ್ಮಿತೆಯ ಹುಡುಕಾಟ ಗೌಡಸಮಾಜದೊಳಗೆ ಏನೆಲ್ಲಾ ಹುದುಗಿಕೊಂಡಿದೆ ಎನ್ನುವುದನ್ನು ಈ ಕೃತಿ ಪರಿಶೀಲಿಸುತ್ತದೆ. ಗೌಡರ ಇತಿಹಾಸ, ಕಲ್ಯಾಣಪ್ಪನ ಹೋರಾಟದ°è ಗೌಡರ ಪಾತ್ರ, ಗೌಡರ ಸಾಂಪ್ರದಾಯ ವಸತಿ ಮತ್ತು ಆಹಾರ ಕ್ರಮಗಳು, ಕುಟುಂಬ ಪದ್ಧತಿ, ಬಳಿಗಳು, ಒಳಾಡಳಿತ, ಹುಟ್ಟು, ಮದುವೆ, ಸಾವಿನ ಆಚರಣೆಗಳು, ಧಾರ್ಮಿಕ ಸಂಪ್ರದಾಯಗಳು, ಸಿದ್ಧವೇಶ, ಅರೆಭಾಷೆ, ಜನಪದ ಸಾಹಿತ್ಯ, ಬೇಟೆ ಮತ್ತು ಆಟಗಳ ಜೊತೆಗೆ ಇತರೆಡೆಯ ಗೌಡರುಗಳ ಬಗೆಗೂ ಇಲ್ಲಿ ಮಾಹಿತಿಗಳಿವೆ. ಇತರ ಸಮುದಾಯದೊಳಗೆ ಇಲ್ಲದೆ ಇರುವ ಅನೇಕ ಅಂಶಗಳು ಗೌಡರಲ್ಲಿರುವುದನ್ನು ಈ ಪುಸ್ತಕದ ಮೂಲಕ ಗುರುತಿಸಬಹುದು. ಈ ಅರ್ಥದಲ್ಲಿ ಇದು ಗೌಡ ಸಂಸ್ಕøತಿಯ ಭಂಡಾರ.     ಈ ಕೃತಿಯನ್ನು ಪ್ರತಿಯೊಬ್ಬರು ಓದಿ “ನಮ್ಮದು” ಎನ್ನುವ ಸಂಸ್ಕøತಿಯ ಮರೆತ ಕಾಯಿಗಳನ್ನು ಮತ್ತೆ ಮಾಲೆಗೆ ಪೋಣಿಸಿ ಧರಿಸಿದರೆ ಗೌಡ ಸಮುದಾಯಕ್ಕೆ ತುಂಬ ಪ್ರಯೋಜನವಿದೆ. ವಲಸೆ ಸಂಘರ್ಷ ಸಮನ್ವಯ ಕೃತಿಯು ಗೌಡ ಸಮುದಾಯದ ಹೆಮ್ಮೆಯ ಕೃತಿ ಎಂದು ಹೇಳಬಹುದು. ಈ ಕೃತಿಯಲ್ಲಿ ಸಂಶೋಧನೆಗೆ ಅನೇಕ ಹೊಳಹುಗಳನ್ನು ನೀಡಲಾಗಿದೆ ಅವುಗಳನ್ನು ಆಧರಿಸಿ ಅಧ್ಯಯನ ನಡೆಸುವವರಿಗೆ ಉತ್ತಮ ಅವಕಾಶಗಳು ಸಿಗಬಹುದು. *******

ಪುಸ್ತಕ ವಿಮರ್ಶೆ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಕೃತಿ:ಮೆಟ್ಟಿಲಿಳಿದು ಹೋದ ಪಾರ್ವತಿ’..! ಲೇಖಕಿ: ಡಾ.ಕಮಲಾ ಹೆಮ್ಮಿಗೆ ಕೆ.ಶಿವು ಲಕ್ಕಣ್ಣವರ ‘ಅಗ್ನಿದಿವ್ಯ’ದಿಂದೆದ್ದು ಬಂದ ಹೆಣ್ಣುಗಳ ಕಥೆಗಳಿವು ಈ ಡಾ.ಕಮಲಾ ಹಮ್ಮಿಗೆಯವರ ‘ಮೆಟ್ಟಿಲಿಳಿದು ಹೋದ ಪಾರ್ವತಿ’..! ಕಥೆ ಕಟ್ಟುವುದು ಧ್ಯಾನದ ಪ್ರತೀಕ. ತಾಳ್ಮೆ, ಸಾಮಾಜಿಕ ಕಳಕಳಿ, ಪಾತ್ರದ ವೈವಿಧ್ಯ, ಅಭಿಪ್ರಾಯ ಮತ್ತು ಅಭಿವ್ಯಕ್ತಿಗಳ ನಿಪುಣತೆಯನ್ನು ಬೇಡುತ್ತದೆ ಕಥೆ ಕಟ್ಟುವ ಕಲೆ. ಆ ಕಲೆ ಮತ್ತು ವೈವಿಧ್ಯ ಮತ್ತು ಕಥೆ ಕಟ್ಟುವ ತಾಳ್ಮೆಯ ನಿಪುಣತೆಯನ್ನು ಕಮಲಾ ಹೆಮ್ಮಿಗೆಯವರು ಉಳ್ಳವರುವರಾಗಿದ್ದಾರೆ… ಸೂಕ್ಷ್ಮ ಕೆನ್ವಾಸಿನಲ್ಲಿ ಒಡಮೂಡುವ ಚಿತ್ರ ಮತ್ತು ಅತೀ ಸೂಕ್ಷ್ಮ ಸಂಗತಿಗಳ ಅತಿ ಅಗತ್ಯತೆಗಳನ್ನು ಕಥೆ ಕೇಳುತ್ತದೆ. ಕಥೆಯ ಸೂಕ್ಷ್ಮತೆಯನ್ನು ಕಮಲಾ ಹೆಮ್ಮಿಗೆ ಬಲ್ಲವರಾಗಿದ್ದಾರೆ. ಮತ್ತು ಆ ಸೂಕ್ಷ್ಮ ಸಂಗತಿಗಳನ್ನು ಪೂರೈಸಿದ್ದಾರೆ ಇಲ್ಲಿ… ಕಮಲಾ ಹೆಮ್ಮಿಗೆಯವರು ತಮ್ಮ ಜೀವನದುದ್ದಕ್ಕೂ ಇಟ್ಟುಕೊಂಡೇ ಜೀವಿಸಿದ್ದವರಾಗಿರೆ. ಅದಕ್ಕಾಗಿ ಆ ಎಲ್ಲಾ ಸೂಕ್ಷ್ಮಗಳನ್ನೂ ಉಳ್ಳವರಾಗಿದ್ದಾರೆ… ಡಾ.ಕಮಲಾ ಹಮ್ಮಿಗೆಯವರು ಸಾಹಿತ್ಯ ಪ್ರಕಾರಗಳ ಎಲ್ಲಾ ವಿಧದ ಸಾಹಿತ್ಯ ರಚನೆ ಮಾಡಿದರೂ ಅವರು ಜಾನಪದ ಸಾಹಿತ್ಯಕ್ಕೆ ಬಹು ಒಲವು ಕೊಟ್ಟವರು… ಡಾ.ಕಮಲಾ ಹಮ್ಮಿಗೆಯವರ ಪ್ರತಿಯೊಂದು ಬರಹಗಳಲ್ಲೂ ಮುಖ್ಯವಾಗಿ ‘ಹೆಣ್ಣು’ ಪ್ರಧಾನವಾಗಿ ಇದ್ದೇ ಇರುತ್ತಾಳೆ. ಆ ಹೆಣ್ಣು ಗಟ್ಟಿಗಿತ್ತಿಯಾಗಿರುತ್ತಾಳೆ ಕೂಡ… ಈಗ ಮಲಯಾಳಂನ ಗ್ರೇಸಿಯವರ ಈ ಪುಸ್ತಕವನ್ನು ಡಾ.ಕಮಲಾ ಹಮ್ಮಿಗೆಯವರು ‘ಮೆಟ್ಟಿಲಿಳಿದು ಹೋದ ಪಾರ್ವತಿ’ ಕಥೆಗಳ ಸಂಕಲನ ತಂದಿದ್ದಾರೆ… ಇಲ್ಲಿ ಬರುವ ಗಟ್ಟಗಿತ್ತಿ ‘ಹೆಣ್ಣು’ ‘ಪಾತ್ರ’ ಮಾತ್ರವಾಗಿಲ್ಲ. ಅವಳು ಸ್ವತಃ ಡಾ.ಕಮಲಾ ಹಮ್ಮಿಗೆಯವರೇ ಆಗಿದ್ದಾರೆ… ಈ ಕಥೆ ಸಂಕಲನದಲ್ಲಿ ಎಲ್ಲೂ ಸಂಕೀರ್ಣವಾದ ವಾಕ್ಯಗಳಿಲ್ಲ. ಗೋಜು ಗೋಜಲುಗಳಾದ ಸಂವೇದನೆಗಳಿಲ್ಲ. ಮೂಲ ಕೃತಿಯಾದ ಗ್ರೇಸಿಯವರ ‘ಪದಿಯೆರಂಗಿ ಪೋಯಾ ಪಾರ್ವತಿ’ ಕೃತಿಯ ನೆರಳಿನಂತಿಯೂ ಇಲ್ಲ. ಅದು ಕಮಲಾ ಹಮ್ಮಿಗೆಯವರ ಸ್ವಂತ ಅಭಿವ್ಯಕ್ತಿಯೂ ಅಗಿದೆ. ಈ ಕಮಲಾ ಹಮ್ಮಿಗೆಯವರ ಅನುವಾದಿತ ಕೃತಿ ಸರಳ ಭಾಷೆಯಲ್ಲಿದೆ… ಕಥೆಗಾರರಾಗಿ, ಜಾನಪದ ವಿದುಷಿಯಾಗಿ, ಕವಿಯಿತ್ರಿಯಾಗಿ, ಅನುವಾದಕ ಲೇಖಕಿಯಾಗಿ, ತಮ್ಮ ಹೆಜ್ಜೆ ಗುರುತು ಮೂಡಿಸಿರುವ ಡಾ.ಕಮಲಾ ಹಮ್ಮಿಗೆಯವರು ಈ ಅನುವಾದಿತ ‘ಮೆಟ್ಟಿಲಿಳಿದು ಹೋದ ಪಾರ್ವತಿ’ ಕಥೆಗಳ ಸಂಕಲನ ತಂದಿದ್ದಾರೆ ಡಾ.ಕಮಲಾ ಹಮ್ಮಿಗೆಯವರು… ಸವಾಲುಗಳಿಗೆಲ್ಲ ಎದೆಯೊಡ್ಡಿ, ಅವುಗಳನ್ನೆಲ್ಲಾ ಹಿಂದಿಕ್ಕಿ ಈ ಅಕ್ಷರ ಜಗತ್ತಿನಲ್ಲಿ ಸಂಚರಿಸಿದ್ದು ಅವರ ವೈಶಿಷ್ಟ್ಯವೂ ಹೌದು… ಖ್ಯಾತ ಲೇಖಕಿ ಶಶಿ ದೇಶಪಾಂಡೆಯವರ ‘ಭಯದ ಮೂಲ ಕತ್ತಲಲ್ಲ’ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಸೀತಾಕಾಂತ ಮಹಾಪಾತ್ರರ ‘ಶಬ್ದಭರಿತ ಆಕಾಶ’ ಕೃತಿಗಳ ಅನುವಾದದಿಂದ ಸಾಹಿತ್ಯ ಜಗತ್ತಿನಲ್ಲಿ ಹೆಸರು ಡಾ.ಕಮಲಾ ಹಮ್ಮಿಗೆಯವರು ‘ಅಗ್ನಿಶಾಕ್ಷಿ’ಯ ಮೂಲ ಮಲಯಾಳಂನ ಲಲಿತಾಂಬಿಕಾ ಅಂತರ್ಜನಂ ಮತ್ತು ಇದೇ ಮಲಯಾಳಂನ ಕಥೆಗಳು ಕಮಲಾದಾಸರ ‘ಗಂಧದ ಗಿಡಗಳು’ ಕೃತಿಗಳನ್ನು ಸುಲಭವಾಗಿ ಮತ್ತು ಸರಳವಾಗಿ ಕನ್ನಡಕ್ಕೆ ತಂದವರು ಕಮಲಾ ಹಮ್ಮಿಗೆಯವರು… ಶ್ರೀಮತಿ ಕಮಲಾದಾಸರ ಉತ್ತರಾಧಿಕಾರಿಯಾಗಿರುವ ಶ್ರೀಮತಿ ಗ್ರೇಸಿಯವರ ‘ಮೆಟ್ಟಿಲಿಳಿದು ಹೋದ ಪಾರ್ವತಿ’ಯನ್ನು ಕನ್ನಡ ಓದುಗರಿಗೆ ಉಣಬಡಿಸಾದ್ದಾರೆ ಕಮಲಾ ಹಮ್ಮಿಗೆಯವರು… ತಮ್ಮನ್ನು ಓರ್ವ ಸ್ತ್ರೀವಾದಿ ಎಂದು ಹೇಳಿಕೊಳ್ಳದಿದ್ದರೂ ಲಿಂಗ ತಾರತಮ್ಯ ಸಮಾಜದ ಅಘೋಷಿತ ನೀತಿ ಸಂಹಿತೆಗಳ ಉಲ್ಲಂಘನೆ, ಪುರಾಣ ಭಂಜನ, ಇವುಗಳಿಂದ ‘ಗೇಸಿ’ಯವರು ವಿಶಿಷ್ಟ ಛಾಪನ್ನು ಒತ್ತಿರುವುದು ಇಲ್ಲಿಯ ಕಥೆಗಳಿಂದ ಸ್ಪಷ್ಟವಾಗುತ್ತದೆ. ಇದಕ್ಕೆ ಸಾಕ್ಷಿಯಾಗಿವೆ ಇಲ್ಲಿಯ ‘ಒಂದು ಸತ್ಯಸಂಧ ಪುಟದ ನೆರಳು’ ಮತ್ತು ‘ಪಾಂಚಾಲಿ’ ಕಥೆಗಳು… ‘ಪಾಂಚಾಲಿ ಕಥೆಯ ನಾಯಕನಲ್ಲಿ ಪಾಂಡವರ‌ ಗುಣ ಲಕ್ಷಣಗಳು ಇವೆ! ಆದುನಿಕ ಭೂಮಿಕೆಯ ಇಲ್ಲಿಯ ನಾಯಕಿ ಐದು ಮಂದಿಯಲ್ಲಿ ಆಸಕ್ತಿ ತೋರಿ, ಕಡೆಗೆ ‘ಫಲ್ಗುಣ’ನನ್ನು ವರಿಸುತ್ತಾಳೆ! ಆದರೆ ಕಡೆಗೂ ಆಕೆ ಬಯಸುವುದು ಕಷ್ಟಗಳಿಗೆ ಕಿವಿಯಾಗುವ ಸಖ ‘ಕೃಷ್ಣನನ್ನು! ಮುಗ್ಧ ಬದುಕುಗಳು ನಗರದಲ್ಲಿ ಮೋಸಗಾರರಿಂದ ಹೇಗೆ ನಾಶವಾಗುತ್ತವೆ ಎಂಬುದನ್ನು ‘ದೂರದಿಂದ ಬಂದ ಜಾದೂಗಾರ’ ಹೇಳುತ್ತದೆ. ಇಲ್ಲಿ ಬರುವ ‘ಇಂದ್ರಜಾಲ’ ಅಕ್ಷರಶಃ ನಿಜವಲ್ಲದಿರಬಹುದು, ಆದರೆ ‘ಕಾಪಟ್ಯ’ ಕಣ್ಣಿಗೆ ಹೊಡೆಯುವ ಅಂಶ. ಪಿಂಗಾಣಿ ಬಟ್ಟಲು, ಬಿದ್ದು ಛಿದ್ರವಾದಂತೆ ಭಾಸವಾಗಿ ಮನ ಮರುಕ ಪಡುತ್ತದೆ… ‘ಗ್ರೇಸಿ’ಯವರಿಗೆ ಕಮಲಾದಾಸರಂತೆ ಕಾಮವೊಂದು ವ್ಯಸನವಲ್ಲ..ಬದುಕಿನ ವಿವಿಧ ಮಗಲಗಳೂ ಮುಖ್ಯವಾಗುತ್ತವೆ. ಓದುಗರಿಗೆ’ ಶಾಕ್’ ನೀಡುವ ಗೋಜಿಗವರು ಹೋಗರು. ‘ಅಳಿದ ಮೇಲೆ’ ಎಂಬ ಕಥೆಯನ್ನೇ ನೋಡಿದರೂ ಇದು ಸ್ಪಷ್ಟವಾಗುವುದು. ಗಂಡ, ತಾಯಿ, ತಂದೆ ಎಲ್ಲರೂ ಪ್ರತಿಕ್ರಿಯಿಸುವ ರೀತಿಯನ್ನು ತೀರಾ ವಾಸ್ತವವಾಗಿ, ವಿಡಂಬನಾತ್ಮಕವಾಗಿ ಚಿತ್ರಿಸಿದ್ದಾರೆ. ಇಲ್ಲೂ ತಾಯಿ ಕೂಡ ತನ್ನ ಹೆತ್ತ ಮಗಳ ದುಃಖವನ್ನು ಅರಿಯಲು ಯತ್ನಸುಲೆಸುದಿಲ್ಲವಲ್ಲ ಶವದ ‘ಸ್ವಗತ’ ಕಥೆ ಸಶಕ್ತವಾಗಿದೆ… ನನ್ನನ್ನು ತೀರಾ ಸೆಳೆದಿದ್ದೆಂರೆ ‘ಹೀಗೊಂದು ಜಾಗ’! ಆ ತಂದೆಯಿಲ್ಲದ ಪುಟ್ಟ ಹುಡುಗಿ, ಭ್ರಮಿಷ್ಠ ತಾಯಿ ನೋಡಿಕೊಳ್ಳುವ ಅನಿಯಮ್ಮನೆಂಬ ಹೆಂಗಸು, ಇದಿಷ್ಟೇ ಸೀಮಿತ ಜಗತ್ತು! ಒಮ್ಮೆ ಇದುರಿಗಿದ್ದ ಮನೆಯಲ್ಲಿ ಪತ್ನಿ ಮನೆಯಲ್ಲಿರದಾಗ ನಡೆದ ಕೆಲಸದಾಕೆಯೊಂದಗಿನ ಪತಿಯ ಭಾನಗಡಿ, ಹುಡುಗಿಯ ಮನ ಕದಕಿ, ಗವಾಕ್ಷಿ ಮುಚ್ಚಿಡುವುದು, ಆಕೆ ಪುಸ್ತಕಗಳಲ್ಲಿ ಮುಳುಗುವುದು, ತಾಯಿಯ ಸಾವು ಕೂಡ ಏನೂ ಅನ್ನಿಸದೆ, ಬೃಹದ್ಗಂಥದೊಳಗೊಂದು ಪುಟವಾಗಿ ಸೇರಿಹೋಗುವುದು… ಅಬ್ಬ! ದೀಡು ಪುಟದ ಕಥೆಯಲ್ಲಿ ಅದ್ಭುತ ‘ಫ್ಯಾಂಟಸಿ’ ಬದುಕಿನ ‘ಒಜ್ಜೆ’ ಇವನ್ನೆಲ್ಲಾ ಗ್ರೇಸಿಯವರು ಸುಲಲಿತವಾಗಿ ಮತ್ತು ಸರಳವಾಗಿ ಧ್ವನಿಪೂರ್ಣವಾಗಿ ಹೇಗೆ ಚಿತ್ರಿಸಿದ್ದಾರೆ! ಇನ್ನು ‘ಅರುಂಧತಿ’ಯಂಥ ಎಷ್ಟೋ ಹೆಣ್ಣುಗಳಿಗೆ ಗ್ರೇಸಿಯವರು ಧ್ವನಿಯಾಗಿದ್ದಾರೆ. ಆ ಧ್ವನಿಯನ್ನೇ ನಮ್ಮ ಡಾ.ಕಮಲಾ ಹಮ್ಮಿಗೆ ಕನ್ನಡಕ್ಕೆ ತಂದಿದ್ದು ಸ್ತುತಾರ್ಹ. ಇಲ್ಲಿ ಆಕ್ರೋಶವಿರದೇ ತೀವ್ರ ಅನುಕಂಪವಿದೆ. ಮನೋವಿಶ್ಲೇಷಣೆಯ ನಿರೂಪಣೆ ಇದೆ… ‘ಪರದೇಶಿಯ ಪ್ರಸಂಗ’, ‘ಬೆಕ್ಕು’ ಇವುಗಳೂ ಕೂಡ. ಅರೆ ವಾಸ್ತವವಾಗಿ ಹಾಗೂ ಕಾಲ್ಪನಿಕತೆಗಳ ನಡುವೆ ಸುಳಿವ ಕಥೆಗಳಿವು. ತೃತೀಯ ಲಿಂಗಿಯ ಅಳಲನ್ನು ಬಹುಶಃ ಮೊದಲು ಹೇಳಿದ ಕಥೆಗಳಿವು… ‘ಬೆಕ್ಕು’ ಮೂರನೇ ‘ಅವನ’ ಕುರಿತದ್ದು. ಗಂಡನಿಗೆ ಪತ್ನಿ, ಬೆಕ್ಕಿನಂತೆ ಕಾಣುವುದು, ಬಹು ದೊಡ್ಡ ‘ಐರನಿ’ಯಾಗಿದೆ. ಇಲ್ಲಿಯ ‘ಅಗ್ನಿಚಾಮುಂಡಿ’ ಒಂದು ದೀರ್ಘ ಮತ್ತು ಸಂಕೀರ್ಣ ಕಥೆ. ಧರ್ಮದಾಂತರ, ನಂತರದ ಘಟಕಗಳು, ಸರ್ಪಾರಾಧನೆ (ಲೈಂಗಿಕತೆಯ ಸಂಕೇತವೂ ಆಗುವುದು) ಅಜ್ಜನ ವಾಸ್ತವಿಕ ದೃಷ್ಟಿಕೋನ, ಹುಡುಗಿಯ ದುರಂತ, ಇವೆಲ್ಲವನ್ನೂ ಚಿತ್ರಮಯ ಭಾಷೆಯಲ್ಲಿ ಹಿಡಿದಿಟ್ಟಿದ್ದಾರೆ ಗ್ರೇಸಿ. ಈ ಗ್ರೇಸಿಯವರ ಈ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಡಾ.ಕಮಲಾ ಹಮ್ಮಿಗೆ. ಇದು ಅತ್ಯಂತ ಕುತೂಹಲಕಾರಿ ನಿರೂಪಣೆಯಿಂದ ಮಹತ್ವದ್ದಾಗಿದೆ… ‘ಮೆಟ್ಟಿಲಿಳಿದು ಹೋದ ಪಾರ್ವತಿ’ ಅಲ್ಲಲ್ಲ ಮನದ ಮೆಟ್ಟಿಲಿಂದ ಇಳಿದು ಹೋದ ‘ಸಖಿ’ಯ ವೃತ್ತಾಂತವಿದು! ಇನ್ನು ‘ನಕ್ಷತ್ರ ಜಾರುವ ಸಮಯ’ದ ಬಗೆಗೆ ರಹಸ್ಯವೊಡೆಯಲಾರೆನಾದರೂ, ಗಂಡನ ಬಗೆಗೆ ಅಸಹನೆ ತಾಳಿದ ಹೆಣ್ಣೋರ್ವಳ ಉರಿಯಿದು ಎಂದಷ್ಟೇ ಹೇಳಿ ಈ ಡಾ.ಕಮಲಾ ಹಮ್ಮಿಗೆಯವರ ‘ಮೆಟ್ಟಿಲಿಳಿದು ಹೋದ ಪಾರ್ವತಿ’ ಬಗೆಗಿನ ವಿಮರ್ಶೆಯನ್ನು ನಿಲ್ಲಿಸುವೆ! ಗದ್ಯವಲ್ಲ ಇದು ಪದ್ಯವೂ ಕೂಡ ಹೌದು… ಕೊನೆಯದಾಗಿ ಡಾ.ಕಮಲಾ ಹಮ್ಮಿಗೆಯವರ ಪ್ರತಿ ‘ಬರಹ’ಗಳಲ್ಲೂ ‘ಹೆಣ್ಣು’ವೊಬ್ಬಳು ಇರುತ್ತಾಳೆ. ಈ ಕಥಾ ಸಂಕಲನದಲ್ಲೂ ಕೂಡ ಆ ‘ಹೆಣ್ಣಿ’ನ ಮೆಲಕು ಇದೆ. ಹೀಗೆ ಹೇಳುತ್ತಾ ಡಾ.ಕಮಲಾ ಹಮ್ಮಿಗೆ ಕೇರಳದಿಂದ ಹಿಂತಿರುಗಿ ಬರುವಾಗ ಇಂತಹ ಮತ್ತಷ್ಟು ‘ಕೃತಿ’ಗಳನ್ನು ಹೊತ್ತು ತರಲಿ ಎಂದು ಆಸಿಸುತ್ತಾ ಇಲ್ಲಿಗೆ ‘ಮೆಟ್ಟಿಲಿಳಿದು ಹೋದ ಪಾರ್ವತಿ’ಯ ನೆನಕೆಗಳನ್ನು ಮುಗಿಸುವೆ… -======

ಪುಸ್ತಕ ವಿಮರ್ಶೆ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಕೃತಿ-ಮುಳುಗದಿರಲಿ ಬದುಕು(ಅನುವಾದಿತ) ಲೇ:-ಡಾ.ಸುಭಾಷ್ ರಾಜಮಾನೆ ಎಪಿಕ್ಟೆಟಸ್ ನ ‘ ದಿ ಆರ್ಟ್ ಆಫ್ ಲಿವಿಂಗ್’ ಕೃತಿಯ ಬಗ್ಗೆ ಒಂದು ಟಿಪ್ಪಣಿ ಡಾ.ಮಹಾಲಿಂಗ ಪೋಳ ದಿನಾಂಕ ೦೮-೧೨-೨೦೧೯ ರಂದು ಭಾನುವಾರ ಬಿಡುಗಡೆಯಾಗುತ್ತಿರು ‘ಮುಳುದಿರಲಿ ಬದುಕು’ ಡಾ.ಸುಭಾಷ್ ರಾಜಮಾನೆಯವರ ೪ ನೇ ಕೃತಿ. ೩ ನೇ ಅನುವಾದದ ಕೃತಿ.ಈಗಾಗಲೆ ಸಿನಿಮಾಕ್ಕೆ ಸಂಬಂಧಿಸಿದ ‘ ದಿ ಆರ್ಟಿಸ್ಟ್’ ಮತ್ತು ವಿಕ್ಟರ್ ಪ್ರ್ಯಾಂಕಲ್ ನ ‘ ಬದುಕಿನ ಅರ್ಥ ಹುಡುಕುತ್ತಾ’ ಎಂಬ ಕೃತಿಗಳನ್ನು ಅನುವಾದಿಸಿದ್ದಾರೆ. ಕನ್ನಡದಲ್ಲಿ ಇಲ್ಲದ ವಿಶಿಷ್ಟವಾದ ವಸ್ತುವುಳ್ಳ ಪುಸ್ತಕವನ್ನು ಆಯ್ದುಕೊಂಡು ಅನುವಾದ ಮಾಡುವುದು ಡಾ.ಸುಭಾಷ್ ರಾಜಮಾನೆಯವರ ವಿಶೇಷತೆ.ಕ್ರಿ.ಶ ೫೫-೧೩೫ ರ ಕಾಲಾವಧಿಯಲ್ಲಿ ಬದುಕಿದ್ದ ಗ್ರೀಸ್ ನ ತತ್ತ್ವಜ್ಞಾನಿ ಎಪಿಕ್ಟೆಟಸ್ ನ ‘ ದಿ ಆರ್ಟ್ ಆಫ್ ಲಿವಿಂಗ್’ ಎಂಬ ಮಹತ್ವದ ಪುಸ್ತಕವನ್ನು ಈಗ ಕನ್ನಡಕ್ಕೆ ತಂದಿದ್ದಾರೆ.ತತ್ತ್ವಶಾಸ್ತ್ರ ವಿಷಯವನ್ನು ಓದುವ ,ಬೋಧಿಸುವ ಕಾಲ ನಿಂತುಹೋದ ಈ ಸಂದರ್ಭದಲ್ಲಿ ತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕವನ್ನು ಕನ್ನಡದ ಓದುಗರಿಗೆ ನೀಡುತ್ತಿರುವುದು ಸಂತೋಷದ ವಿಷಯ.ಪಾಶ್ಚಾತ್ಯ ತತ್ತ್ವಜ್ಞಾನಿಗಳ ಪುಸ್ತಕ ಕನ್ನಡದಲ್ಲಿ ಸಿಗುವುದು ಅಪರೂಪ.ಅವರ ಚಿಂತನೆಗಳನ್ನು ಓದಬೇಕೆಂದರೆ ಇಂಗ್ಲಿಷ್ ಕೃತಿಗಳ ಇಲ್ಲವೆ ಇಂಟರ್ ನೆಟ್ ನ ಮೊರೆಹೋಗಬೇಕು.( ನಾನು ಎಂ.ಎ;ತತ್ತ್ವಶಾಸ್ತ್ರ ಓದುವಾಗ ಈ ಕಹಿ ಅನುಭವ ಆಗಿದೆ.) ಈ ಎಪಿಕ್ಟೆಟಸ್ ಗ್ರೀಸ್ ನ ತತ್ತ್ವಜ್ಞಾನಿಗಳಲ್ಲಿ ಪ್ರಮುಖನಾದವನು.ಗ್ರೀಕ್ ಮತ್ತು ರೋಮನ್ನರ ಮೇಲೆ ಮತದೃಷ್ಟಿಯಿಂದ ಪ್ರಭಾವ ಬೀರಿದ ‘ಸ್ಟೋಯಿಕ್’ ಪಂಥಕ್ಕೆ ಸೇರಿದವನು.ಈ ಪಂಥ ‘ ವಿಶ್ವದೇವೈಕ್ಯವಾದ’ದಿಂದ ಪ್ರಾರಂಭವಾಗಿ ‘ ಏಕೇಶ್ವರ’ಭಾವನೆಯೆಡಗೆ ಬೆಳೆದಿದೆ.ಈ ಪಂಥಕ್ಕೆ ಎಪಿಕ್ಟೆಟಸ್ ನ ಕೊಡುಗೆ ಮಹತ್ವದ್ದಾಗಿದೆ.ಇವನ ಬೋಧನೆಗಳು ಕ್ರೈಸ್ತ್ ರ ಹೊಸ ಒಡಂಬಡಿಕೆಯ ಮಾತುಗಳಂತಿವೆ.ಅಲ್ಲದೆ ಕ್ರೈಸ್ತ್ ಧರ್ಮದ ಪ್ರಚಾರಕ್ಕೆ ಇವುಗಳನ್ನು ಬಳಸಿಕೊಳ್ಳಲಾಗಿದೆ.ಇವನು ” ಒಬ್ಬ ದೇವರಿದ್ದಾನೆ,ಅವನ ಚೇತನ ವಿಶ್ವವನ್ನು ವ್ಯಾಪಿಸಿದೆ,ಅದು ನಮ್ಮ ಕಾರ್ಯಗಳಲ್ಲದೆ ನಮ್ಮ ಆಲೋಚನೆಗಳಲ್ಲೂ ಭಾವಗಳಲ್ಲೂ ವಿಕಾಸವಾಗುತ್ತದೆ” ಎಂದಿದ್ದಾನೆ. ಗ್ರೀಸ್ ನ ಹಿಂದಿನ ತತ್ತ್ವಜ್ಞಾನಗಳೆಲ್ಲ ಭೌತಜಗತ್ತಿನ ಕುರಿತಾದ ಚಿಂತನೆಗೆ ಹೆಚ್ಚು ಒತ್ತುಕೊಟ್ಟಿದ್ದರು.ಈ ಸ್ಟೋಯಿಕ್ ಪಂಥದವರು ಭೌತಜಗತ್ತಿನ ಚಿಂತನೆಯ ಜೊತೆಗೆ ಮನುಷ್ಯನ ಬುದ್ಧಿ,ಆಲೋಚನೆ,ಬಾಹ್ಯಕ್ರಿಯೆಗಳ ಕುರಿತಾಗಿ ಚಿಂತಿಸಿದ್ದಾರೆ.ಅದರಲ್ಲೂ ಎಪಿಕ್ಟೆಟಸ್ ಮನುಷ್ಯನ ಬುದ್ಧಿಶಕ್ತಿ,ಆಲೋಚನೆ,ದೃಷ್ಟಿಕೋನ ರೂಪುಗೊಳ್ಳುವುದರ ಕುರಿತಾಗಿ ಚಿಂತಿಸಿದ್ದಾನೆ.” ಮನುಷ್ಯ ಯಾವುದೇ ಘಟನೆಗಳನ್ನೋ,ಪರಿಸ್ಥಿಗಳನ್ನೋ ಎದುರುಗೊಂಡಾಗ ಅವು ಬಾಹ್ಯ ಸಂಗತಿಗಳಾಗಿ ಬಾಧಿಸುವುದಿಲ್ಲ; ಅವುಗಳ ಬಗ್ಗೆ ನಮ್ಮ ಆಲೋಚನೆಗಳೇನು ಎನ್ನುವುದು ಮುಖ್ಯವಾಗುತ್ತದೆ.ಬರಿ ಘಟನೆಗಳು ನಮ್ಮನ್ನು ವಿಚಲಿತರನ್ನಾಗಿ ಮಾಡುವುದಿಲ್ಲ; ಅವುಗಳ ಬಗೆಗಿನ ನಮ್ಮ ವ್ಯಾಖ್ಯಾನಗಳೇ ವಿಚಲಿತರನ್ನಾಗಿಸುತ್ತವೆ.ತಮ್ಮಷ್ಟಕ್ಕೆ ತಾವು ವಸ್ತುಗಳಾಗಲಿ,ಘಟನೆಗಳಾಗಲಿ ನಮಗೆ ನೋವು ನೀಡಲಾರವು.ನಾವು ಆ ವಸ್ತುಗಳಿಗೆ ಘಟನೆಗಳಿಗೆ ಯಾವ ರೀತಿ ಸ್ಪಂದಿಸುತ್ತೇವೆ ಎಂಬುದರಿಂದ ನಮ್ಮ ಮನೋಧರ್ಮಗಳು ರೂಪುಗೊಳ್ಳುತ್ತವೆ.” ಎಂಬ ಎಪಿಕ್ಟೆಟಸ್ ನ ಮಾತುಗಳು ಆಧುನಿಕ ಮನೋವಿಜ್ಞಾನದ ಸಿದ್ಧಾಂತವನ್ನೇ ತಿಳಿಸುತ್ತವೆ. ಈ ” ಮುಳುಗದಿರಲಿ ಬದುಕು” ಕೃತಿ ಎಪಿಕ್ಟೆಟಸ್ ನ ಯಾವುದೋ ಒಂದು ಸಿದ್ಧಾಂತದ ಕುರಿತಾಗಿ ತಿಳಿಸುವ ಪುಸ್ತಕವಲ್ಲ.ಬದಲಾಗಿ ಅವನ ಒಟ್ಟು ಚಿಂತನೆಯ ಸಾರವನ್ನು ಇದರಲ್ಲಿ ಭಟ್ಟಿ ಇಳಿಸಿದಂತಿದೆ.ಕೃತಿಯು ಎರಡು ಭಾಗಗಳಲ್ಲಿದ್ದು,ಮೊದಲ ಭಾಗದಲ್ಲಿ ‘ ವ್ಯಕ್ತಿತ್ವ ವಿಕಸನ’ಕ್ಕೆ ಬೇಕಾಗುವ ಎಲ್ಲ ಮೂಲ ತತ್ತ್ವಗಳು,ಜೀವನ ಮೌಲ್ಯಗಳನ್ನು ಬೋಧಿಸುವ ಬರಹಗಳಿವೆ.ಸಮಾಜದಲ್ಲಿ ಮನುಷ್ಯ ಭ್ರಮೆಗಳಿಂದ ಮುಕ್ತನಾಗಿ ಸದ್ಗುಣಿಯಾಗಿ ಹೇಗೆ ಬದು ಕಬೇಕು,ಅದಕ್ಕೆ ಬೇಕಾಗುವ ಮೂಲದ್ರವ್ಯ ಯಾವುದು ಎಂಬುದರ ಕುರಿತಾದ ಬರಹಗಳಿವೆ.ಇಲ್ಲಿ ಇಚ್ಛಾಶಕ್ತಿ,ಪ್ರೇರಣೆ,ದೃಷ್ಟಿಕೋನ,ಯೋಗ್ಯತೆ,ಪ್ರಾಮಾಣಿಕತೆ,ವಾಸ್ತವತೆ,ಬದುಕನ್ನು ನೋಡುವ ರೀತಿ,ನೆಮ್ಮದಿ,ಧನಾತ್ಮಕತೆ,ಆದರ್ಶಗಳು,ವಿವೇಕಯುಕ್ತತೆ,ಸಚ್ಚಾರಿತ್ರ್ಯ,ಸಂಬಂಧಗಳು,ವಿಶ್ವಾಸಾರ್ಹತೆ,ಘನತೆಯ ವ್ಯಕ್ತಿತ್ವ,ಪ್ರಕೃತಿಗೆ ಹೊಂದಿಕೊಳ್ಳುವುದು ಹೀಗೆ ಒಬ್ಬ ಮನುಷ್ಯ ಆದರ್ಶದ ಮಾದರಿಯಾಗಿ ಸಾಮುದಾಯಿಕ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಮಾರ್ಗದರ್ಶಕ ಚಿಕ್ಕ ಚಿಕ್ಕ ಅಧ್ಯಾಯಗಳಿವೆ. ಎರಡನೆಯ ಭಾಗದಲ್ಲಿ ತತ್ತ್ವಜ್ಞಾನದ ಮೂಲ ಉದ್ದೇಶ ,ಪುಸ್ತಕಗಳ ಉಪಯುಕ್ತತೆ,ಸಜ್ಜನರ ಗೆಳೆತನ,ತಪ್ಪುಗಳ ಮನ್ನಣೆ,ಸಚ್ಚಾರಿತ್ಯದ ನಿರಂತರತೆ,ಸದ್ಗುಣತೆ,ವೈಚಾರಿಕತೆ ,ಸಂತೋಷ ಹೀಗೆ ಹಲವು ವಿಷಯಗಳ ಕುರಿತು ಮೌಲ್ಯಯುತವಾದ ಬರಹಗಳಿವೆ. ಇಲ್ಲಿಯ ಬರಹಗಳನ್ನು ಪುಸ್ತಕದ ಮೊದಲ ಅಧ್ಯಾಯದಿಂದಲೇ ಓದಬೇಕೆಂಬ ನಿಯಮವೇನೂ ಇಲ್ಲ.ಯಾಕೆಂದರೆ ಪ್ರತಿಯೊಂದು ಬರಹಗಳು ತಮ್ಮಷ್ಟಕ್ಕೆ ಮುಕ್ತಕಗಳಂತೆ ಸ್ವತಂತ್ರವಾಗಿವೆ.ಯಾವುದೇ ಪುಟ ತೆಗೆದರೂ ಅಲ್ಲೊಂದು ನಿರ್ದಿಷ್ಟ ಮೌಲ್ಯದ ಮೂಲದ್ರವ್ಯ ಇರುವುದನ್ನು ಕಾಣುತ್ತೇವೆ.ಈ ಪುಸ್ತಕದ ವಿಶೇಷವೆಂದರೆ ಇಲ್ಲಿಯ ಅಧ್ಯಾಯಗಳು ಕನಿಷ್ಟ ಮೂರು ಸಾಲಿನ ,ಹೆಚ್ಚೆಂದರೆ ಎರಡು ಪುಟ ಮೀರುವುದಿಲ್ಲ.(ಓದಲು ಸಮಯವೇ ಇಲ್ಲದ ಈ ಕಾಲದಲ್ಲಿ ಸುದೀರ್ಘವಾದ ಬರಹಗಳನ್ನು ಯಾರು ಓದುತ್ತಾರೆ? ಎನ್ನುವವರಿಗೆ ಈ ಪುಸ್ತಕ ಹೆಚ್ಚು ಇಷ್ಟವಾಗಬಹುದೇನೋ !.) ಈ ಅನುವಾದದ ಕುರಿತಾಗಿ ಹೇಳಬೇಕೆಂದರೆ ಇದು ಅನುವಾದ ಮಾಡಿದ ಪುಸ್ತಕ ಎಂಬ ಭಾವನೆ ಎಲ್ಲೂ ಬರುವುದಿಲ್ಲ.ಕನ್ನಡದ ಚಿಂತನೆಯಿಂದಲೇ ರೂಪಗೊಂಡ ಕೃತಿಯಂತೆ ಭಾಸವಾಗುತ್ತದೆ.ಇಲ್ಲಿಯ ಚಿಂತನೆಗಳು ಮನುಷ್ಯನ ಒಳಗನ್ನು ( ಅಂತರಂಗ) ಗಟ್ಟಿಗೊಳಿಸಿ ಬಾಹ್ಯ ನಡವಳಿಗಳನ್ನು ತಿದ್ದುವ ಮತ್ತು ಗ್ರಹಿಕೆಯನ್ನು ಸ್ಪಸ್ಟ ಹಾಗೂ ವಾಸ್ತವಗೊಳಿಸುವತ್ತ ನಮ್ಮನ್ನು ಕೈ ಹಿಡಿದು ನಡೆಸುತ್ತವೆ.ಅದು ತತ್ತ್ವಶಾಸ್ತ್ರದ ಉದ್ದೇಶವೂ ಹೌದು. ಒಂದು ಚಿಕ್ಕ ಅಧ್ಯಾಯ: “ಒಳ್ಳೆಯದು ಒಳ್ಳೆಯದೇ” ‘ಒಳ್ಳೆಯತನ ಸ್ವತಂತ್ರವಾಗಿದ್ದು,ನಮ್ಮ ಒಳಗಿನಿಂದಲೇ ಅದಕ್ಕೊಂದು ಅಸ್ತಿತ್ವ ದೊರಕುತ್ತದೆ.ಒಳ್ಳೆಯತನ ಎಂದಿಗೂ ಇದ್ದೇ ಇರುತ್ತದೆ.ನಮ್ಮ ಅಸ್ತಿತ್ವಕ್ಕೂ ಮೊದಲೇ ಇತ್ತು’ (ಪುಟ.೧೪೦)

ಪುಸ್ತಕ ಸಂಗಾತಿ Read Post »

You cannot copy content of this page

Scroll to Top