ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಮೌನದಲ್ಲಿನ ಮಾತು

ಕಾವ್ಯ ಸಂಗಾತಿ ಮೌನದಲ್ಲಿನ ಮಾತು ಶ್ರೀವಲ್ಲಿ ಮಂಜುನಾಥ ಕವಿತೆ ಏನ ಹೇಳಲಿ ಸಖನೆ,ನೀ ನುಡಿಯದಿರಲೇನುನಿನ್ನ ಈ ಮೌನದಲೇನನ್ನ ಹಿಡಿದಿಟ್ಟಿರುವೆ ! ನಿಶೆಯಳಿದು,ಉಷೆಯುದಿಸೆಹೊನ್ನಯೆಳೆಯಂದದಿನಿನ್ನ ದನಿಯದು ತಾಆಗಸದಿ ಮೂಡುವುದು! ಹಕ್ಕಿಯೆದೆಗೂಡಿಂದಹೊರಟ ದನಿಯಲಿನಿನ್ನ ಇನಿದನಿಯುಕಲರವವಗೈದಿಹುದು ! ಆ ಇನಿದನಿಯನ್ನುಆಲಿಸಿದ ಈ ಬುವಿಯಮರಗಳು, ಮೌನದಲೆಹೂವುಗಳ ಅರಳಿಸುತ್ತಿಹುದು! ಮೌನದಾ ಸೆರಗಲ್ಲೆಮಾತುಗಳಡಗಿದೆಯಲ್ಲಮನದ ಮಾತುಗಳನೆಲ್ಲಕಂಗಳರುಹಿದೆಯಲ್ಲ! ಮೌನದರಮನೆಯರಸ,ಮಾತನಾಡದೆಯೆನಗೆಗಿಳಿಮಾತ ಕಲಿಸಿದಾನಿನಗೆ ನಾ ಶರಣು !! ಶ್ರೀವಲ್ಲಿ ಮಂಜುನಾಥ

ಮೌನದಲ್ಲಿನ ಮಾತು Read Post »

ನಿಮ್ಮೊಂದಿಗೆ

ಸಂಕ್ರಾಂತಿ ಬಂತೋ ರತ್ತೋ ರತ್ತೋ ವಿಶಾಲಾ ಆರಾಧ್ಯ ಭಾರತವು ಅನೇಕ ಧರ್ಮಗಳನ್ನೊಳಗೊಂಡ ದೇಶ.  ಹಬ್ಬಗಳು ಎಲ್ಲಾ ಧರ್ಮಗಳಲ್ಲಿ ಹಾಸು ಹೊಕ್ಕಾಗಿವೆ.  ಈ ಹಬ್ಬಗಳಿಗೆ ತನ್ನದೇ ಆದ ವಿಶೇಷ ಹಿನ್ನೆಲೆ ಮತ್ತು ಪ್ರತೀಕಗಳು ಇವೆ.  ಭಾರತೀಯರೆಲ್ಲಾ ಕೂಡಿ ಆಚರಿಸುವ ಹಬ್ಬಗಳು ಒಂದೆಡೆಯಾದರೆ. ಆಯಾ ಧರ್ಮದವರು ಆಚರಿಸುವ ಹಬ್ಬಗಳು ಮತ್ತೊಂದು. ಉತ್ತರಭಾರತದಲ್ಲಿ ಆಚರಿಸುವ ಹಬ್ಬಗಳು ಒಂದೆಡೆಯಾದರೆ.. ಅದೇ ಹಬ್ಬಗಳನ್ನು ಬೇರೆ ಹೆಸರಿನಿಂದ ದಕ್ಷಿಣ ಭಾರತೀಯರು ಆಚರಿಸುತ್ತಾರೆ.  ಇಂತಹ ಹಬ್ಬಗಳಲ್ಲಿ ಸಂಕ್ರಾಂತಿಯು ನಮ್ಮ ದಕ್ಷಿಣ ಭಾರತೀಯರಿಗೆ ಅದರಲ್ಲೂ ಹಿಂದೂಗಳಿಗೆ ಇದು ಮಹತ್ವದ ಹಬ್ಬವಾಗಿದೆ.      ಇದು ರೈತಾಪಿ ಹಬ್ಬವಾಗಿದೆ.  ಇದನ್ನು ಹೊಲಗದ್ದೆಗಳಲ್ಲಿ ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುತ್ತದೆ.  ಈ ಹಬ್ಬವು ನಾಡಿನ ರೈತಾಪಿ ಜನಗಳ ಸಮೃದ್ಧಿಯ ಸಂಕೇತವಾಗಿದೆ.  ಈ ಸಂಕ್ರಾಂತಿಯು ಧಾರ್ಮಿಕ ತತ್ವಗಳಿಂದ ಬೇರ್ಪಟ್ಟು ಆಚರಿಸಿದರೂ ಸಹ ಇದಕ್ಕೆ ಜ್ಯೋತಿಷ್ಯ ಶಾಸ್ತ್ರದ ಅಡಿಪಾಯವೂ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂಗಳು ಆಚರಿಸುವುದು ವಾಡಿಕೆ.  ಈ ಸಂಕ್ರಾಂತಿಯನ್ನು ಮಕರ ಸಂಕ್ರಾಂತಿಯೆಂದು ಕರೆಯಲಾಗುತ್ತದೆ. ಇದನ್ನು ಪ್ರತಿವರ್ಷ ಜನವರಿ ೧೪ ರಂದು ಆಚರಿಸಲಾಗುತ್ತದೆ.  ಇದಕ್ಕೆ ಉತ್ತರಾಯಣ ಎಂದೂ ಕರೆಯಲಾಗುತ್ತದೆ.  ಈ ದಿನ ಸೂರ್ಯ ತನ್ನ ಪಥವನ್ನು ಬದಲಿಸಿ ಮಕರ ರಾಶಿಗೆ ಪ್ರವೇಶಿವನು. ಅದಕ್ಕಾಗಿ ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.  ಈ ಹಬ್ಬದಲ್ಲಿ  ವಿಶೇಷವಾಗಿ ಗಂಗಾ, ಯಮುನ ಮತ್ತು ಪ್ರಯಾಗ ಸೇರಿದಂತೆ ಯಾವುದೇ ನದಿಯಲ್ಲಿ  ಸ್ನಾನಮಾಡಿದರೆ ಮೋಕ್ಷವೆಂದು ಪರಿಗಣಿಸಲಾಗಿದೆ.  ಈ ಹಬ್ಬದಲ್ಲಿ ಸೂರ್ಯನ ಪೂಜೆ ವಿಶೇಷವಾಗಿರುತ್ತದೆ. ಹಳ್ಳಿಯ ಮೂಲದ ಈ ಹಬ್ಬದಲ್ಲಿ ಮುಂಜಾನೆಯೇ ಹೆಂಗೆಳೆಯರು ಮನೆಮುಂದೆ ಸಗಣಿಯಿಂದ ಸಾರಿಸಿ ರಂಗೋಲಿಯಿಂದ ಸಿಂಗರಿಸುತ್ತಾರೆ. ಮನೆಯಲ್ಲಿ ಮತ್ತು ಹಳ್ಳಿಯಲ್ಲಿ ಅಂದು ವಿಶೇಷ ಕಳೆತುಂಬಿರುತ್ತದೆ.  ಸಂಕ್ರಾಂತಿಗೆ ರೈತರು ತಮ್ಮ ವ್ಯವಸಾಯಕ್ಕೆ ನೆರವಾದ ಎತ್ತುಗಳಿಗೆ ಸ್ನಾನ ಮಾಡಿಸಿ, ಕೊಂಬುಗಳಿಗೆ ಬಣ್ಣಹಚ್ಚಿ, ವಿವಿಧ ಬಣ್ಣದ ರಿಬ್ಬನ್ ಗಳಿಂದ ಸಿಂಗರಿಸಿ ಗೋಮಾತೆಯೊಂದಿಗೆ ಪೂಜಿಸುವರು. ಬೆಳೆದ ಧಾನ್ಯಗಳಾದ ಕಡಲೆಪಪ್ಪು, ಬೆಲ್ಲ, ಎಳ್ಳು, ಕಡಲೆಬೀಜಗಳನ್ನು ಹುರಿದು ಅದರೊಂದಿಗೆ ಸಕ್ಕರೆ ಅಚ್ಚು ಮುಂತಾದವನ್ನು ಬೆರೆಸಿ ಕಬ್ಬಿನ ಜಲ್ಲೆಯೊಂದಿಗೆ ಅಕ್ಕ ಪಕ್ಕದ ಸ್ನೇಹಿತರಿಗೆ ಹಂಚಿ “ಎಳ್ಳು ಬೆಲ್ಲ ತಿನ್ನೋಣ, ಒಳ್ಳೆ ಮಾತನಾಡೋಣ” ಎಂದು ಪರಸ್ಪರ ಹೇಳುತ್ತಾ……. ಹಿಂದಿನ ದ್ವೇಷ, ಕೋಪ, ಮನಸ್ತಾಪಗಳನ್ನು ಮರೆತು ಸಂತೋಷದಿಂದ ಮುಂದಿನ ದಿನಗಳನ್ನು ಕಳೆಯಲು ಸ್ನೇಹದ ಹಸ್ತ ಚಾಚುವ ಹಬ್ಬವಾಗಿದೆ.  ಕೆಲವರು ಈ ಹಬ್ಬದಲ್ಲಿ ಹೆಸರುಬೇಳೆ ಮತ್ತು ತರಕಾರಿಗಳನ್ನು ಸೇರಿಸಿ ಮಾಡಿದ ಕಿಚಡಿ ಅನ್ನವನ್ನು ರುಚಿಯಾಗಿ ತಯಾರಿಸಿ ಸವಿಯುವರು. ಇದನ್ನೇ ಅನೇಕರು ಪೊಂಗಲ್ ಎಂದೂ ಕರೆಯುವರು. ಈ ವರ್ಷದ ಸಂಕ್ರಾಂತಿ ಎಲ್ಲರಿಗೂ ಸಂತಸ ತರಲಿ, ನಮ್ಮನ್ನೆಲ್ಲಾ ಕಾಡುತ್ತಿರುವ ಕೊರೋನ ಬೇಗ ನಾಶಹೊಂದಿ ಜನರು ನಿರ್ಭಯವಾಗಿ ಸರಳ ಜೀವನ ನಡೆಸುವಂತಾಗಲಿ ಎಂದು ತಿಳಿಸುತ್ತಾ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ತಮಗೆಲ್ಲಾ.

Read Post »

ನಿಮ್ಮೊಂದಿಗೆ

ಕಾವ್ಯ ಸಂಗಾತಿ ನನಗೂ ನಿನ್ನಂತಾಗಬೇಕಿತ್ತು ಅದೆಷ್ಟೋ ಸಲ ನಾನೂ ನಿನ್ನಂತಾಗಲು…ಎದೆಯಾಳದ ಕನಸಿನ ಕಣ್ಣಿಗೆ ಕಪ್ಪು ಪಟ್ಟಿ ಬಿಗಿಯುತಿದ್ದೆತೀವ್ರವಾದ ಭಾವಗಳು ಎಲ್ಲೆ ಮೀರದಂತೆಇತಿಮಿತಿಯ ರೇಖೆಯನೆಳೆಯುತಿದ್ದೆ ಕೆಲವೊಮ್ಮೆ ಮಾತುಗಳು ಹಳಿ ತಪ್ಪಿದಾಗಕರಾಳ ಮೌನ ಎದೆಯನ್ನು ಸುಡುತಿತ್ತುಅಭದ್ರತೆಯ ನೆಲೆಯೊಳಗೆ ಓಲಾಡಿಸುತಿತ್ತು ಅಂದುಕೊಂಡಂತೆ ಇರಲಾಗದೆಸಣ್ಣ ತಪ್ಪುಗಳೂ ವಿರಾಟ ರೂಪ ತಳೆದುಮೂರ್ತರೂಪಕ್ಕಿಳಿಸುವ ಛಲದಿನಕಳೆದಂತೆ ಇಳಿಯುತ್ತಲೇ ಇತ್ತು ನಿನ್ನ ಸಖ್ಯವಾದ ಮೇಲೆನಾನೆನುವ ಅಹಂಭಾವ ಬಿಗುಮಾನಎಲ್ಲವೂ ದೂರ ಸರಿದುನಿನ್ನ ಅನುನಯದೊಳು ಹೂವಾಗಿದ್ದು ಸುಳ್ಳಲ್ಲ ಬೇಕು ಬೇಡಗಳ ನಡುವಿನ ಒಳಪಂಥದಲಿಅದೆಷ್ಟೋ ಬಾರಿ ನಾನೂ ನೀನೂಸೋತು ಗೆಲ್ಲುತಿದ್ದೆವು ಕೆಲವೊಮ್ಮೆ ಮಾತು ಮೌನಗಳ ಮಥನದಲಿ ವಿರಹದ ಅಲೆಗಳೆದ್ದು ನಲುಗಿ ಸುಸ್ತಾದಾಗನನಗೂ ನಿನ್ನಂತಾಗುವ ಹಂಬಲ ದಿನ ಕಳೆದಂತೆ ನೋಯಿಸುವ ಭಾವಗಳನ್ನೆಲ್ಲನಿರಾಕಾರಕ್ಕಿಳಿಸಿದೆನನಗೂ ನಿನ್ನಂತಾಗಬೇಕಿತ್ತುನನ್ನತನವನ್ನಾದರೂ ಉಳಿಸಿಕೊಳ್ಳುವಷ್ಟು ಈಗ ಕಳವಳವಿಲ್ಲ ಕಳುವಾಗುವ ಭಯವೂ ಇಲ್ಲಬಂದಂತೆ ಬದುಕನೊಪ್ಪಿಕೊಳ್ಳುವದಿಟ್ಟನಡೆ ನಿನ್ನಂತೆ… ನಾನಂದುಕೊಂಡಂತೆ ಅನಿತಾ ಪಿ. ತಾಕೊಡೆ

Read Post »

ನಿಮ್ಮೊಂದಿಗೆ

ಪ್ರೀತಿಯ ಸಂಗಾತಿ ಬಳಗವೇ ….

ಈ ಸಂದರ್ಭದಲ್ಲಿ ಸಂಗಾತಿ ಬಳಗ,  ನಮ್ಮ  ಲೇಖಕರಿಗೆ, ಓದುಗರಿಗೆ ಪುಟ್ಟದಾಗಿ ನಮ್ಮ ಸೌಹಾರ್ದ ಪರಂಪರೆಯನ್ನು‌ ನೆನಪಿಸಿದೆ. ನಮ್ಮ ಎಲ್ಲಾ ಬಳಗಕ್ಕೆ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು..

ಪ್ರೀತಿಯ ಸಂಗಾತಿ ಬಳಗವೇ …. Read Post »

You cannot copy content of this page

Scroll to Top