ಕಾವ್ಯಯಾನ
ಏಕೆ ಹೀಗೆ? ನೀ.ಶ್ರೀಶೈಲ ಹುಲ್ಲೂರು ಅಧರದಲಿರುವ ಲಾಲಿ ರಂಗುಪದರು ಪದರಾಗೆರಗುತಿಹುದುಮರುಗುತಿರುವ ಮನದ ಮತಿಯುಅತಿಯ ಮೀರಿ ಕೊರಗುತಿಹುದು ಕಣ್ಣಲಿಟ್ಟ ಒಲವ ಬಾಣಎದೆಯನಿರಿದು ನರಳುತಿಹುದುಕಳೆದಿರುವ ಕಾಲ ಸಾಲುಪದವ ಕಿತ್ತು ಕೊರಗುತಿಹುದು ಆಗಸದ ಸೊಗಸ ಮೋಡನಕ್ಕು ತಾನೆ ಅಳುತಲಿಹುದುಚಕ್ರವಾಕ ಹೆದೆಯ ಮೆಟ್ಟಿಮುದವನಪ್ಪಿ ನಗುತಲಿಹುದು ಇರುವ ಸುಖದ ಕೊರಳ ಮುರಿದುದು:ಖ ಕೇಕೆಗೈಯುತಿಹುದುದಾರಿ ನಡೆವ ಧೀರನೆದೆಗೆಒದ್ದು ಹಾಸಗೈಯುತಿಹುದು ಮನುಜರಾಳದೊಡಲ ಬಗೆದಕರುಳೆ ಸಿಳ್ಳೆಯೂದುತಿಹುದುಭವದಿ ತೇಲುತಿರುವ ಘಟದಉಸಿರ ಗುಳ್ಳೆಯೊಡೆಯುತಿಹುದು ಏಕೆ ಹೀಗೆ ದೇವ ಭಾವ ?ತನ್ನ ತಾನೆ ತುಳಿಯುತಿಹುದುನರರ ನಡುವೆ ನರಕ ತೂರಿಮರುಕವಿರದೆ ಅಳಿಯುತಿಹುದು *******








