ಹೊಸ ಬಾಳಿಗೆ
ಕವಿತೆ ಹೊಸ ಬಾಳಿಗೆ ಶ್ವೇತಾ ಎಂ.ಯು.ಮಂಡ್ಯ ಹಳತು ಕಳೆದುಹೊಸ ವರ್ಷ ಮರಳಿಎಲ್ಲಿಂದಲೋ ಬಂದುಮತ್ತೆಲಿಗೋ ಸಾಗೋಈ ಬದುಕ ಹಾದಿಯಲಿಹೊಸ ಭರವಸೆಯ ಚಿಗುರಿಸಲಿ ರಾಗಯೋಗ ಪ್ರೇಮಸೌಂದರ್ಯಮೇಳೈಸಿ ಭೂರಮೆಯ ಸಿಂಗಾರಗೊಳಿಸಿರೆಂಬೆಕೊಂಬೆಗಳು ತೂಗಿ ಬಾಗಿನರುಗಂಪು ತಣ್ಣನೆಯ ಗಾಳಿ ಸೂಸಿಆನಂದವನೆ ಹಂಚಿವೆ ಈ ಹರುಷವು ಹೀಗೆ ಉಳಿಯಲಿಖಂಡ ಖಂಡಗಳ ದಾಟಿಅರೆಗೋಡೆ ಮಹಾಗೋಡೆಅರೆತಡಿಕೆ ಮಹಾಮನೆಗಳೊಳಗಿನರೋಗಗ್ರಸ್ತ ಮನಸುಗಳಲಿಸೊರಗದ ಸಂಜೀವಿನಿಯಾಗಲಿ ಮೈಮುದುಡಿ ಚಳಿಯೊಳಗೆಬಿಟ್ಟುಬಿಡದೆ ಕಾಡುವ ಶಾಪಗ್ರಸ್ತ ದಾರಿದ್ರಕ್ಕೆ ಬಲಿಯಾದ ಜೀವಗಳಿಗೆಬೇಡುವ ಕೈಗಳಿಗೆ ನೀಡುವಶಕ್ತಿಯ ನೀ ಇಂದಾದರುಹೊತ್ತು ತಾ ಹೊಸ ವರುಷವೇ ಬದುಕನ್ನೇ ಹಿಂಡಿದ ಕಾಣದ ಮುಖವುಕಾಣದೆ ಹೋಗಲಿ ಹಾಗೆಯೇಈ ಲೋಕದೊಳಗಿಂದ ಆಚೆಗೆಹೊಸ ಮುನ್ನುಡಿಹೊಸ ಕನ್ನಡಿಹೊಸಬಾಳಿನ ನಾಳೆಗೆ **************************









