ಅನುಬಂಧ
ಕವಿತೆ ಅನುಬಂಧ ಅಕ್ಷತಾ ಜಗದೀಶ ಆ ನೀಲಿ ಆಗಸದಿ ಚಿತ್ತಾರ ಮೂಡಿಸಲೇನು…..ಮೌನದಲಿ ಅಡಗಿದ ಭಾವನೆಗಳಮಾತಿನಲ್ಲಿ ಬಹಿರಂಗ ಪಡಿಸಲೇನು…. ಎಲ್ಲಾ ಆಸೆಗಳ , ಎಲ್ಲಾ ಕನಸುಗಳಎಲ್ಲೆಲ್ಲೂ ಓಡುವ ಮನದೊಳಗೆಬಂಧಿಸಿರುವೇ ಈಗ…… ಬರೆವ ಕವಿತೆಯೋಳಗೆಮನದ ಮಾತು ಕುಣಿದಾಡಿ…ಪದಗಳೊಡನೆ ಪುಟಿದೆದ್ದುರಾಗದಲಿ ಬೆರೆತು ಅರಳಿದಾಗ..ಆಹಾ ಸಂತೋಷವೇ…!ಎಂಥಹ ಆಹ್ಲಾದವು.. ಚೂರು ಪ್ರೀತಿ ಭಾವದೊಳು ಬೆರೆತಾಗಸುಂದರ ಬಾಳಿನ ಪ್ರಾರಂಭ ಆಗ..ಇರಲೀ ಹೀಗೆ ಈ ಬಂಧ..ಮರೆಯಲಾರದ ಅನುಬಂಧ. *************************









