ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ಭಾರತಿ ರವೀಂದ್ರ 1) ಹೂಗಳು ಬಣ್ಣದ ಲೋಕ :ಹೂಗಳು ಹಲವಾರು,ದೃಷ್ಟಿ ಹೀನತೆ. 2) ವಿರಹ ವಿರಹ ತಾಪ :ಮೂಡಣದ ದೊರೆಗೆ,ಭುವಿ ಪ್ರೀತಿಗೆ. 3) ಕವಿ ಕವಿ ತಾಕತ್ತು :ರವಿ ಇಲ್ಲೆಡೆ ಎಲ್ಲಾಕರಾಮತ್ತು. 4) ಭೂರಮೆ ಭೂರಮೆ ಕಳೆ:ಹಸಿರುಟ್ಟ ಬೆಡಗಿ,ಕೋಗಿಲೆ ಗಾನ. 5) ಮೌನ ಮೌನದ ಭಾರ :ಮಾತುಗಳ ಕದನ,ಮುಕ್ತಾಯ ಗೀತೆ. 6) ಅಮ್ಮ ದಾರಿ ದೀವಿಗೆ :ಅಮ್ಮನ ನಗೆ ರೂಪ,ಬಾಳು ಸಂಭ್ರಮ. 7) ನಲ್ಲ ಅನುದಿನವೂಅನವರತ ನಗು,ನಲ್ಲನ ಮೊಗ. 8) ಕಾಣಿಕೆ ಮುಗಿಲ ಮಾಲೆ :ಭುವಿಯ ಕೊರಳಿಗೆ,ರವಿ ಕಾಣಿಕೆ. 9) ಬೆಳದಿಂಗಳು ವಿರಹ ತಾಪ :ಬೆಳದಿಂಗಳ ರಾತ್ರಿ,ಚಂದ್ರ ಗ್ರಹಣ. 10) ಸ್ವಪ್ನ ಸ್ವಪ್ನ ರಾಣಿಗೆ :ಜಾಗರಣೆ ಬಹಳ,ನನಸಾಗಲು. ************************************

ಹಾಯ್ಕುಗಳು Read Post »

ಕಾವ್ಯಯಾನ

ಅನಾಮಿಕಾ

ಕವಿತೆ ಅನಾಮಿಕಾ ಮೋಹನ್ ಗೌಡ ಹೆಗ್ರೆ.‌ ಅವಳು ಮಲಗಿದ್ದಾಳೆಕಣ್ಣಿನಲ್ಲಿ ಕನಸಿನ ಹಸಿವ ತುಂಬಿಒಡಲಿನಲಿ ಮತ್ಯಾವುದೋ ಹಸಿವ ನುಂಗಿಅವಳ ದೇಹದೊಡನೆ ದುಡ್ಡು ಮಾತಾಡುವುದ ಕೇಳಿ… ಒಂದಾನೊಂದು ದಿನದಲ್ಲಿಅವಳು ಮಲಗಿರುವಾಗತೊಟ್ಟಿಲ ತೂಗಿದ ಕೈಗಳುಮಲಗಿದ ಮುದ್ದು ಮುಖಕ್ಕೆಮುತ್ತಿನ ಮಳೆಗೆರೆದ ಮನಸುಗಳುಹೊಸ ಬಟ್ಟೆಯ ಉಡಿಸಿ ಆನಂದಿಸಿದ ಕಣ್ಗಳುಅವಳಿಗೆ ನೆನಪಾಗುತಲೇ ಇಲ್ಲ… ವಿದ್ಯೆ ಬುದ್ದಿಗಳನ್ನು ಕಲ್ಲು ಕಟ್ಟಿ ಮುಳುಗಿಸಿದ್ದಾಳೆಕೆಲವೊಮ್ಮೆ ಇವಳೂ ಏಳದ ಹಾಗೇಮನಸು ಬಯಸದ ಶೃಂಗಾರಕೆ ನಿತ್ಯ ಅಣಿಯಾಗುತಾಳೆಎಲ್ಲೂ ಬೆವರದವರು ಇವಳಲ್ಲಿ ಬಂದು ಬೆವರುವಷ್ಟೂ ಕ್ರೂರತನವಸಹಿಸಿಕೊಂಡು ಅದೊಂದು ವೃತ್ತಿಯೇ ಎನಿಸುವಷ್ಟುಬಲಿತ ಮಾಂಸ ಖಂಡಗಳೇಉಬ್ಬು ತಗ್ಗುಗಳೇ ಅವಳ ಪದೋನ್ನತಿಸ್ವಯಂ ನಿವೃತ್ತಿ ಪಡೆದರೂಉಳಿತಾಯವಾಗಲಿ, ಪಿಂಚಣಿಯಾಗಲಿ ಅವಳ ಪಾಲಿಗಿಲ್ಲ…. ಅನುಕಂಪ, ಬಂಡಾಯ, ಭದ್ರತೆಎಲ್ಲವನ್ನೂ ಮರೆತಿದ್ದಾಳೆ ಅವಳುತನ್ನ ಮೈಯ ಒತ್ತೆಯಿಟ್ಟು ಎಷ್ಟೋ ಅತ್ಯಾಚಾರಗಳ ತಪ್ಪಿಸಿದಾಕೆಸಮಾಜದ ಯಾವುದೋ ಸರಪಳಿಯಅನ್ವರ್ಥಕ ದೇವತೆಯೇ ಅವಳುಗೊತ್ತಿಲ್ಲ ನನಗೆ ಇಂದಿಗೂ ಅವಳ ಹೆಸರೇನೆಂದು….. **************************************

ಅನಾಮಿಕಾ Read Post »

ಕಾವ್ಯಯಾನ

ನಿನಗಿಂತ ದೊಡ್ಡವರು…..

ಕವಿತೆ ನಿನಗಿಂತ ದೊಡ್ಡವರು….. ಯಮುನಾ.ಕಂಬಾರ ತುಟಿ ಬಿಚ್ಚದೇ ಬಾಯ್ಮುಚ್ಚಿಕೊಂಡುತೆಪ್ಪಗೆ ಮೌನದಲಿ,ಒಮ್ಮೆ ದುಃಖ ಒಮ್ಮೆ ಸುಖ ಅಟ್ಟಿಸಿಕೊಂಡುಕಾಲ ಹಾಕುವ ಕಾರಣಿಕಳೇ….!!. ಕ್ರೌರ್ಯ , ಕೋಪ ತಾಪಗಳಗರ್ಭದಲ್ಲಿ ಅಡಗಿ ಕುದಿಗೊಂಡರೂಮತ್ತೆ ಮತ್ತೆ ಅದೇ ಮೌನಅದೇ ಶಾಂತಿ ,ಅದೇ ಆ ಸುರಿಯುವ ಕಾಂತಿ !! ನಿನ್ನ ಸಹನೆಗೆ ತಾಳ್ಮೆಗೆಇಲ್ಲ – ಸಾಟಿಇತಿಹಾಸದ ಕತ್ತಲಲ್ಲಿ – ಕರಗಿವೆಸಾವಿರ ಸಾವಿರ ಮರೆಯದ ಮಾಣಿಕ್ಯದ ದೀಪ್ತಿ !! ಆಗಲೂ ಈಗಲೂ ಧುಮ್ಮಿಕ್ಕಿ ಪುಟಿಯುತಿವೆ – ಸಾಯದ ಅಮರ ಅಕ್ಷರಗಳು:” ದುರಾಸೆ ದುಃಖಕ್ಕೆ ಮೂಲಅಹಿಂಸೆ ಬದುಕಿನಸೂತ್ರಕಾಯಕವೇ ಕೈಲಾಸ “. !! ನಿನ್ನ ಕಣ ಕಣದ ಕಣ್ಣಲ್ಲೂಮಿಂಚುವ ದೀಪ್ತಿಗೆನನ್ನ ಮೈ ಮನ ಶರಣಾದ ಹೊತ್ತುಸವಿಯುತ್ತಿರುವೆ – ನಿನ್ನೆದೆಯ ಸಿರಿಯಲಿಒಂದಾಗಿ ಒಂದಾಗಿ – ಹಗಲು ರಾತ್ರಿಗಳ ಮರೆತು !! ನಿನ್ನ ವಿನಹ ಗತಿ ಇಲ್ಲಹೆತ್ತ ಒಡಲುಹೊತ್ತ ಉದರ – ಒಂದೇ ಒಂದೇನಿನಗಿಂತ ದೊಡ್ಡವರು – ಇಲ್ಲ ಇಲ್ಲ ಇಲ್ಲ…!! ******************************

ನಿನಗಿಂತ ದೊಡ್ಡವರು….. Read Post »

ಕಾವ್ಯಯಾನ

ಬೆಳಗಬೇಕಾದರೆ..!

ಕವಿತೆ ಬೆಳಗಬೇಕಾದರೆ..! ಸುಮನಸ್ವಿನಿ. ಎಂ ನೋವ ನುಂಗಲು ಹಿಂಜರಿಯದೇಘರ್ಷಿಸಿಕೊಳ್ಳಬೇಕುಬೆಳಕ ಹೊತ್ತಿಸಬೇಕಾದರೆ… ಸುಟ್ಟುಕೊಳ್ಳುವ ಅಂಜಿಕೆಯಿಲ್ಲದೇನಿರ್ಭಯ ಗೀರಿಕೊಳ್ಳಬೇಕುಬೆಳಗಬೇಕಾದರೆ… ಕರಗಿಹೋಗಲು ಕಳವಳಗೊಳದೇಪ್ರಾಂಜಲ ದಹಿಸಬೇಕುಪ್ರಜ್ವಲಿಸಬೇಕಾದರೆ… ಬೂದಿಯಾಗಲು ಹೆದರದೇಹೊತ್ತಿ ಉರಿಯಬೇಕುಬೆಳಕಾಗಬೇಕಾದರೆ… ಮಾಯವಾಗೋ ಭಯವ ಮೀರಿನಿರಂತರ ಧಗಧಗಿಸಬೇಕುಶಾಶ್ವತ ಮಿನಗುತಿರಬೇಕಾದರೆ… ******************************************

ಬೆಳಗಬೇಕಾದರೆ..! Read Post »

ಕಾವ್ಯಯಾನ

ಮಾರುವೇಷ

ಕವಿತೆ ಮಾರುವೇಷ ಪ್ರೊ.  ಚಂದ್ರಶೇಖರ ಹೆಗಡೆ ಪಾತಾಳದಿಂದೆದ್ದು ಭೋಂಕನೆಬೇಟೆಯಾಡುವ ವಿಧಿಯೇಶ್ವಾನದಲ್ಲಡಗಿ ಹೊಟ್ಟೆ ಹೊರೆವಹಂಗಿನರಮನೆಯ ವಾಸವೇಕೆ ?ವಾಹನದೊಳಗಿಳಿದು ಬಲಿ ಬೇಡುವಭಿಕ್ಷಾಟನೆಯ ಡಾಂಭಿಕತೆಯೇಕೆ ?ಹೃದಯದೊಳಪೊಕ್ಕು ನಿಲ್ಲಿಸುವಮೋಸದ ಮಾರುವೇಷವೇಕೆ ? ಹೊರಬಂದು ಎದುರಾಗಿಬಿಡು ಒಮ್ಮೆನಿಜರೂಪ ಸತ್ಯ ನಾಮವ ತಳೆದುಕಣ್ತುಂಬಿಕೊಳ್ಳಲಿ ಜಗವು ಮೊರೆದುಪ್ರಾರ್ಥಿಸಿದಣಿವಿಲ್ಲದ ಕಾಯಕಕೆ ಶರಣುಶರಣೆಂದೆನುತ!ಎದೆಯೊಳಗಿನ ದಯೆ ಕರುಣೆಗಳಹುಡುಕಿ ಕೊರಗುತ ಯಾರಿಗೂ ಜಗ್ಗದ ಭೀಮಬಲವೆಲ್ಲಿಯದು ?ವಶ ಮಾಡಿಕೊಳ್ಳುವ ಅವಲೋಕಿನಿಯೆಲ್ಲಿಯದು ?ಬಿಡುವ ಬಾಣದ ತುದಿಗೆಎಂದೂ ನೀಗದ ಹಸಿವಿನೊಡಲುಎಲ್ಲಿ ಬರಿದಾಗುವುದೋ ಇಂದುಯಾವ ತಾಯಿಯ ಮಡಿಲು ಪಯಣ ಹೊರಟವರ ಮನದಲ್ಲೊಂದುನಿತ್ಯ ಅಳುಕುಯಾರಿಗೆ ಗೊತ್ತು ನಿನ್ನೊಳಗಿನವಂಚನೆಯ ಹುಳುಕುಕಾಣದ ಲೋಕದೊಳಗೇಕೆ ಬಯಲಾಟತೊರೆದುಬಿಡಬಾರದೇ ಹೇಗಾದರೂಕೊಂಡೊಯ್ಯುವೆನೆಂಬ ಹಠ ಜೀವನ ಪ್ರೀತಿಯೊಂದಿಗೆ ನಿನ್ನದೆಂದಿಗೂ ವ್ಯರ್ಥ ಕದನಅಸುರರೆಂಬುವರಿಲ್ಲ; ಕಾಣುವುದೆಲ್ಲೆಡೆಗೆನಿನ್ನದೇ ಅಟ್ಟಹಾಸದ ವದನಲೋಕವೆಲ್ಲವೂ ವಿರೋಧಿ ಬಣಹೀಗಳೆಯಬಾರದೆಂದರೂ ನಿನ್ನಬಿಡದು ಹೆಣೆದ ಚಕ್ರವ್ಯೂಹದ ದರ್ಶನ ************************

ಮಾರುವೇಷ Read Post »

ಕಾವ್ಯಯಾನ

ಶಾಯರಿ

ಶಾಯರಿ ಭಾರತಿ ರವೀಂದ್ರ ಕಾಡಿಗೆ ಕಣ್ಣುಗಳನ್ನಮುದ್ದಿಸಲಿ ಹ್ಯಾಗೆ ಹೇಳು, ನನ್ನೊಡತಿಕರಿ ಮೋಡ ಕೋಪಿಸಿಕೊಂಡುಸುರದಾವ ಪ್ರವಾಹ ಬಂದಾಂಗ. ಬಂದರ ಬರಲೇಳುಸಾವಿರ ಸಂಕಟಗಳಸುರಿ ಮಳಿನಿನ್ನ ಪಿರೂತಿ ಸಾಥ್ಇರುವಾಗ ನಂಗ್ಯಾಕೆ ಭೀತಿ ******************************************

ಶಾಯರಿ Read Post »

ಕಾವ್ಯಯಾನ

ನೀವು ಎದೆಗೆ ಗುಂಡು ಹೊಡೆದರೆ.

ಕವಿತೆ ನೀವು ಎದೆಗೆ ಗುಂಡು ಹೊಡೆದರೆ ಅಲ್ಲಾಗಿರಿರಾಜ್ ಕನಕಗಿರಿ ನೀವು ಜಲ ಫಿರಂಗಿಸಿಡಿಸಬಹುದು ನಮ್ಮ ಮೈ ಮೇಲೆ.ನಾವು ಮುಂಗಾರು ಮಳೆಯ ಆರ್ಭಟವೆಂದು ಭಾವಿಸುತ್ತೇವೆ.ಏಕೆಂದರೆ ನೀರು ನಮ್ಮ ವೈರಿಯಲ್ಲ. ನೀವು ಲಾಠಿ ಬೂಟುಗಳಿಂದದಾಳಿ ಮಾಡಬಹುದು ನಮ್ಮ ಮೈ ಮೇಲೆ.ನಾವು ನಮ್ಮ ಅನ್ನ ಉಂಡ ಮಕ್ಕಳ ಸಲಿಗೆ,ಪ್ರೀತಿಯೆಂದು ಭಾವಿಸುತ್ತೇವೆ.ಏಕೆಂದರೆ ಮಕ್ಕಳು ನಮ್ಮ ವೈರಿಗಳಲ್ಲ. ನೀವು ಅಶ್ರುವಾಯು ಸಿಡಿಸಿಕಣ್ಣು ಕತ್ತಲು ಮಾಡಬಹುದು ನಮ್ಮ ಕನಸುಗಳ ಮೇಲೆ.ನಾವು ಮಂಜುಕವಿದ ವಾತಾವರಣವೆಂದು ಭಾವಿಸುತ್ತೇವೆ.ಏಕೆಂದರೆ ಪ್ರಕೃತಿ ಎಂದೂ ನಮ್ಮ ವೈರಿಯಲ್ಲ. ಆದರೆ….. ಆದರೆನೀವು ದಲ್ಲಾಳಿಗಳ ಮಾತು ಕೇಳಿ, ಎದೆಗೆ ಗುಂಡು ಒಡೆದರೆನೆತ್ತರು ಕುಡಿದ ನೆಲ, ಬೆಳೆದು ನಿಂತ ಬೆಳೆಹೋರಾಟದ ಹಾಡು ಬರೆಯುತ್ತವೆ ಮರೆಯಬೇಡಿ. ಏಕೆಂದರೆ…….‘ಸರಕಾರ ರೊಕ್ಕ ಮುದ್ರಿಸಬಹುದೆ ಹೊರತುತುಂಡು ರೊಟ್ಟಿಯನ್ನಲ್ಲ ನೆನಪಿರಲಿ’. ******************************************

ನೀವು ಎದೆಗೆ ಗುಂಡು ಹೊಡೆದರೆ. Read Post »

ಕಾವ್ಯಯಾನ

ಮೌನದಲಿ ಕವಿತೆಯಾದವಳು

ಕವಿತೆ ಮೌನದಲಿ ಕವಿತೆಯಾದವಳು ವಿದ್ಯಾಶ್ರೀ ಅಡೂರ್ ಕವಿತೆಯಾದಳು ಆಕೆ ತಿಳಿದವರು ತಿಳಿದ ತರಹುಡುಕ ಹೋಗಲು ಬಗೆಯ ಬೇಗೆ ಬೆಂಬತ್ತಿತುಟಿತುದಿಯ ಕಿರುನಗೆಯ ಅರಿತವನ ಮನದ ಸ್ಥರಜಿಗಿವ ಜಿಂಕೆಯಂತೆ ಕವನವನ್ನು ಬಿತ್ತಿ ಹಣೆ ಮೇಲೆ ಆಕೆಯ ಗೆರೆಗಳನು ಕಂಡಾತಬರೆದಿಹನು ಪುಟಪುಟದ ಸಾಲುಗಳ ಹೆಚ್ಚಿತನ್ನನ್ನೇ ಬಣ್ಣಿಪನು, ಬಂದಿಹೆನು ತಾನೆಂದುಆಕೆಯ ಮನದೊಳಗೆ ದೀಪವನು ಹಚ್ಚಿ ಕಣ್ಣಂಚ ಹನಿಗಳನು ಮುತ್ತಂತೆ ಪೋಣಿಸುತರಂಗುಬಳಿದು ಅದಕೆ ಕಟ್ಟಿಹನು ಬೆಲೆಯಹಾದಿಬೀದಿಯ ಜನರು ಕೊಳ್ಳುವ ಸರಕಾಯ್ತುಅಳಿಸದೇ ಹೋಯ್ತವಳ ಕಣ್ಣೀರ ಸೆಲೆಯ ಮಾತಿನ ಪೇಟೆಯಲಿ ಬೆಲೆಯಿಲ್ಲ ಮೌನಕ್ಕೆಕುಗ್ಗಿಹಳು ಸಾಗರದ ಬಿಂದುವಾಗಿಮಾತಿರದ ಮೌನದಲಿ ಕವಿತೆಯಾದಳು ಅವಳುಕ್ಷಣಕೊಮ್ಮೆ ಕಣಕಣದಿ ಸಿಂಧುವಾಗಿ *******

ಮೌನದಲಿ ಕವಿತೆಯಾದವಳು Read Post »

ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ಗಹಗಹಿಸಿದೆನರನರವು ನಿತ್ರಾಣವೈಧ್ಯನ ಬಾಣ ಹಾಳಾದ ಗೋರಿಕೂಗಿ ಕರೆದಿದೆ ಕವಿಯಕಾವ್ಯ ಗೀಚಲು. ಗೋರಿಯ ಮೇಲೆಕೊನೆಯ ದಿನ-ಹಚ್ಚಿದಕಣ್ಣೀರ ದೀಪ. ಹಸಿದ ಹೊಟ್ಟೆಅವ್ವ-ಕಾವಿನ ಜೀವತುಂಬಿದೊಲವು. ನಿದ್ರೆಯಲೆದ್ದುರುದ್ರ ಲೀಲೆ ಕುಣಿತಕಾಂಚಣ ರಾಣಿ ಗಾಳಿಯ ಗುಟ್ಟುಬದುಕಿನಡಿ ಹೇಡಿಜೊಳ್ಳಿನ ಸುಳ್ಳು ಹೊನ್ನ ಬಳ್ಳಿಹೊತ್ತ ಹಾದಿಯ ಬುತ್ತಿಕನ್ನಡ ಪದ. ಒಂದೇ ‘ಎನಲು’ಗುಡಿ ಚರ್ಚು ಮಸೀದಿನಲಿವು ನಾಡು. ಎಳೆ ಹಸುಳೆತೊದಲು ನುಡಿದವುಮಾಗೀ-ಚಳಿಗೆ ಶಿಶಿರ ಋತುಭೂದೇವಿ-ಹೆಡಿಗೆಹುಗ್ಗಿ ಹೋಳಿಗೆ. ಮುಗುದೆ ‘ಒಲ್ಲೆ’ಮೂಕ ಮಾತಿನ ಎದಿಗೆನಲ್ಲನುರಿಗಾವು ಎಲೆಲೆ-ಬಾಳುಹಿತ ಮಿತಕೆ ಸೋಲುನೆಲೆ-ನೆರಳು ಕಾಗೆ ಗೂಗೆ ಬಾವ್ಲಿಬೇತಾಳ-ತಾಳಮೇಳರಾಜಕೀಯ. ಒಡಲೊಳಗಿದೆಕೊಳೆತನಾರು ಬೆಳೆಕಲ್ಮಶ ದೊರೆ ಒಳ-ಹೊರಗೆಕುರುಡು ಕುಂಟೆ ಬಿಲ್ಲೆಮೀರಿದ ಎಲ್ಲೆ. ಕಾವಿಯ ಚಿತ್ತಕಾಯ್ದ ಹಂಚಿನ ಮೇಲೆತತ್ವದ ಮಾತು. ಮನದ ಮಾಯೆಹಿಡಿಯೆ ಕಣ್ಣು ಕತ್ತಲುಉಲಿ-ಬದುಕು ಎಲೆಲೆ-ಕೀಟಜಗದ ತಲೆಕೆದರಿನಗದಿರಿಣುಕಿ ನವ-ತುಡುಗಎದೆಗೆ ಮುತ್ತಿಟ್ಟಬಾನಿಗೇರುತ ತೂತಾದ ಕೊಡದಾರಿಗೆ ನೀರ ಬಿತ್ತಿದಚಿತ್ತದ-ಗತ್ತು. ಬಣ್ಣದ ಬೆಕ್ಕುತುತ್ತನದು ನೆಕ್ಕಿತುಬಹು ವಿಲಾಸಿ. ನಾನೇ-ದುರುಳಯಾರು-ಯಾರನು ದೂರಲಿಪಾತಕೀ ಲೋಕ. ಜಿದ್ದಿನ ಪೀಳಿಗೆಬಕ್ಷಣಕೆ ಬಾಯ್ದೆರೆದರಣ ಹದ್ದುಗಳು. ****************************************************************

ಹಾಯ್ಕುಗಳು Read Post »

ಕಾವ್ಯಯಾನ

ಕುಸುಮಾಂಜಲಿ

ಕವಿತೆ ಕುಸುಮಾಂಜಲಿ ಅಭಿಜ್ಞಾ ಪಿ ಎಮ್ ಗೌಡ ಕುಸುಮವು ನಗುತಿರೆನಸುಕಿನ ವೇಳೆಯುಮುಸುಕನು ತೆರೆಯುತ ನಲಿಯುತಿದೆಕಸವರ ವರ್ಣದಿಜಸದಲಿ ಬೀಗುತರಸಮಯ ಸೃಷ್ಟಿಸಿ ಜೀಕುತಿದೆ|| ಕುಹಕವ ಕೇಳದೆಕಹಿಯನು ಮರೆಯುತಮಹಿಯಲಿ ಹಾಸವ ಚೆಲ್ಲುತಿದೆಸಹನೆಯ ದಳವದುಸಹಿಸುತ ಬಿಸಿಲನುಬಹಳಾಕರ್ಷಣೆ ಗಳಿಸುತಿದೆ|| ಶುದ್ಧತೆ ಭಾವವುಬದ್ದತೆಯಿಂದಲೆಸಿದ್ಧತೆ ಹೊಂದುತ ಪಸರಿಸಿದೆಮುದ್ದಿನ ಹೂವಿದುಮದ್ದಲು ಮುಂದಿದೆಸದ್ದನು ಮಾಡದೆ ನಗುತಲಿದೆ|| ಭ್ರಾಂತಿಯ ತೊಲಗಿಸಿಶಾಂತಿಯ ಹರಡುವಕಾಂತಿಯು ದೇವರ ಮುಡಿಯಲ್ಲಿಕಾಂತನು ಕೊಟ್ಟಿಹಕಾಂತೆಗೆ ಸುಮವನುಕಾಂತಿಯು ಗುಂದದೆ ಹೊಳೆಯುತಿದೆ|| ನೋಡುವ ಕಣ್ಣಿಗೆಮಾಡಿದೆ ಮೋಡಿಯಕಾಡುತ ನಿತ್ಯವು ಕಚಗುಳಿಯಬೇಡುವ ಮನಸಿಗೆಕೇಡನು ಬಯಸದೆಬಾಡುವ ನಿರ್ಮಲ ಕುಸುಮವಿದು|| **********************************************

ಕುಸುಮಾಂಜಲಿ Read Post »

You cannot copy content of this page

Scroll to Top