ನಾನು ನಿನ್ನ ಉಸಿರಾಡುತ್ತಿದ್ದೇನೆ
ನೀನಲ್ಲಿ ಕುದಿಯವ ಸಾರಿಗೆ ಉಪ್ಪುಹಾಕಿ , ಕುದಿಬಿಂದುವಿನತ್ತ ದೃಷ್ಟಿ ನೆಟ್ಟಿರುವೆ
ರಾಧೆಯ ಭಾವತಲ್ಲಣ
ರಾಧೆಯ ಭಾವತಲ್ಲಣ ಚಂದನ ಜಿ ಪಿ ನೆನಪಿದೆಯಾ ಕೃಷ್ಣಾ.. ಲಲಿತೆ ಏನನ್ನುತಿದ್ದಳು ಎಂದುನೀನು ನನಗೆ ಸಿಕ್ಕಿದ್ದು ಮಣ್ಣಲ್ಲಿ ಸಿಕ್ಕ ಮಾಣಿಕ್ಯವಂತೆ ಬೃಂದಾವನದ ಹೊನ್ನ ಹೂವಂತೆಯಾರಿಗೂ ಎಟುಕದ ಭಾಗ್ಯವಂತೆನನ್ನ ಏಳೇಳು ಜನ್ಮದ ಪುಣ್ಯವಂತೆ ಕೃಷ್ಣಾ..ಸ್ಮೃತಿ ಪಟಲದಲ್ಲಿ ನಿನ್ನ ನೆನಪೆಲ್ಲವೂ ಸ್ಪುಟ-ನಿಚ್ಚಳ ನೀ ನನ್ನ ಅರಿತಂತೆ ಅರಿತು ನನ್ನ ಬೆರೆತಂತೆ ಒಮ್ಮೇಲೆ ನನ್ನ ತೊರೆದಂತೆ ತೊರೆದು ನನ್ನ ಮರೆತಂತೆ ಮರೆತವನ ನಾ ನೆನೆದಂತೆ ನೆನೆನೆನೆದು ಅತ್ತಂತೆ ಕೇಳುತ್ತಿರುವೆಯ ಕೃಷ್ಣಾ..ವಿಶಾಖ ಏನೆಂದಳು ಗೊತ್ತೆ ನೀನು ನನ್ನಿಂದ ದೂರಾದದ್ದು ಪೂರ್ವ ಜನ್ಮದ ನನ್ನ ಪಾಪವಂತೆ ನಾನು ನತದೃಷ್ಠೆಯಂತೆ ನಿನ್ನ ಪ್ರೇಮ ಪೂಜೆಗೆ ಹೂವಾಗಿ ಭಾಮಾ ರುಕ್ಮಿಣಿಯರು ಇಹರಂತೆಅವರ ರತ್ನಾಭರಣಗಳ ಮೆರುಗಲ್ಲಿ ನನ್ನ ಹೂವಾಭರಣಗಳು ಬಡವಂತೆ ನಾನು ಬೃಂದಾವನದ ಕಾಣದಎಲೆ ಮರೆಯ ಮಲ್ಲಿಗೆಯಂತೆ ನಿನ್ನ ಕಾಯುವುದು ವ್ಯರ್ಥವಂತೆ ಕೃಷ್ಣಾ..ಜಗದ ಪರಿವೆ ಬೇಡ ಎನಗೆ ಮನಸುಗಳ ಮಿಲನವಾದ ಮೇಲೆ ಮದುವೆಯ ಬೇಲಿ ಬೇಕೆ ಹೇಳು ನೀ ನುಡಿಸುತ್ತಿದ್ದ ಕೊಳಲ ಇಂಪು ನಿನ್ನ ಮೈಯ ಚಂದನದ ಕಂಪು ಮಾಮರದಡಿ ಅಪ್ಪಿ ತೂಗಿದ ಜೊಂಪು ಯಮುನೆಯಲಿ ಮಿಂದ ತಂಪು ರಾಧೆ, ಪ್ರಿಯ ಸಖಿ ರಾಧೆ, ನನ್ನಾಕೆ ರಾಧೆ ಎಂದು ಬೃಂದಾವನದಲೆಲ್ಲಾ ಕರೆದ ನೆನಪು ಸಾಕೆನಗೆ ಈ ಜನ್ಮಕೆ ಬದುಕಲು ******
ಇಲ್ಲಿ
ಕವಿತೆ ಇಲ್ಲಿ ಮುತ್ತು ಬಳ್ಳಾ ಕಮತಪುರ ಇಲ್ಲಿ ರೋಗಕ್ಕೂಧರ್ಮದ ಟಚ್ ಕೊಡುತ್ತಾರೆಪ್ರಶ್ನೆಸುವಂತಿಲ್ಲ ಸುಮ್ಮನೆಜಾಗಟೆ ಹೊಡೆಯಬೇಕು.. ಆಸ್ಪತ್ರೆಗಳು ಉಳ್ಳವರಿಗೆ ಇಲ್ಲಿಎಲ್ಲವೂ ವಸಿಲಿ ಭಾಜಿಗೆ ಮನೆಹಾಕುತ್ತಾರೆ ಏಕೆ ಎಂದೂಪ್ರಶ್ನೆಸುವಂತಿಲ್ಲ..? ಇಲ್ಲಿ ಬೆಡ್ಗೂ ಬ್ರೇಡಗೂ ಪಾಲಿಹಚ್ಚಬೇಕು ಏಕೆಂದರೆ ಅವರಿಗೆಹಸಿದವರ ನೋವು ಅವರಿಗೆಹಸಿಬಿಸಿಯಾಗಿ ಕಾಣುತ್ತದೆ…! ಇಲ್ಲಿ ಸಾವಿಗೂ ರಶೀದಿಪಡೆಯಬೇಕು…..! ಮಣ್ಣಾಗುವದಕ್ಕೂಕಾಯಬೇಕು,ಎದೆಯ ಮೇಲಿನಹೂ ಬಾಡುವವರೆಗೂ..!ಚಿತೆಗೆ ಕಟ್ಟಿಗೆ ಸಿಗುವವರೆಗೂ… ಶವ ಸಂಸ್ಕಾರಕ್ಕೂಜಾತಿ ಧರ್ಮದ ಬಣ್ಣಎಲ್ಲವೂ ಪ್ರಚಾರದ ಸಾಮಗ್ರಿಆದರೆ ಪ್ರಶ್ನೆಸುವಂತಿಲ್ಲ..? ಇಲ್ಲಿ ಬೆಂಕಿಯಲಿ ಅರಳಿನಿಂತ ಕುಸುಮಗಳು ಇವೆ …..!ಅಮಲಿನ ಲವಣ ಹಾಕದಿರುಇದು ಒಂದೇ ಕೊನೆಗೆ ನಾಕೇಳುವ ಆತ್ಮದ ಪ್ರಶ್ನೆ…? ******************************









