ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನೆನಪಾದವಳು

ಕಾವ್ಯ ಸಂಗಾತಿ ನೆನಪಾದವಳು ಶಾಲಿನಿ ರುದ್ರಮುನಿ ಕನಸ ತೇರಲಿದಣಿದ ತಣಿದಮನದ ಹಾದಿಯಲಿಸಿಹಿಲೇಪನದಮುಗುಳ ಹೊತ್ತುಜೀವ ಭಾವದಬಾಳು ಸಮರ್ಪಿಸುತನಿಂತವಳು ನೆನಪಾದಳುಕನ್ನಡಿಯ ಮುಂದೆ…, ಅಲ್ಲಲ್ಲಿ ಹಸಿಗಾಯಮಾತು ಮೌನಗಳತರಪರಚಿದ ಗೀಚುಒಸರಿದರು ಒಸರದಂತಿಹರಕ್ತದ ಕಲೆಯ ಬಲೆನೆಲೆ ಬಲೆಗೆ ಬಾಲೆಹಸಿರುಣಿಸಿ ಮತ್ತೆನೀರುಡಿಸುತಿಹಹಾಡಿನ ಜಾಡಿನಲಿಹಾಡು ತಾನಾಗಿ ನಲಿದುನಿಂತವಳು ನೆನಪಾದಳುಕನ್ನಡಿಯ ಮುಂದೆ…, ಕೊಲ್ಮಿಂಚಿನ ಬಿಸಿಲಿಗೆಚಂದ್ರಿಕೆಯ ಚೆಲುವಿಗೆಕಾಣುವ ಸೊಬಗನುಇರುಳ ನರಳಿಗೆಹೊರಳಿ ಜಾವಕೆಕಾಣದಿಹ ಸೊಬಗನುಹಸಿರ ತೋರಣ ಮಾಡಿಮನೆ ಮನ ಬಾಗಿಲಿಗೆಸಿಂಗರಿಸಿ ಸಡಗರದಿಬಾಳದಾಟ ಕೂಟಕೆಸುಮ್ಮನೆ ಆರಾಧಿಸುತನಿಂತವಳು ನೆನಪಾದಳುಕನ್ನಡಿಯ ಮುಂದೆ…, ಅರಿವಿನ ಪಯಣದಲಿಗುರು ತಾನಾಗಿಹಳುಬೆಳಕಿನ ಜಾಡಿನಲಿಏನನೋ ಅರಸುವಳುಹರಿಯುವ ಅರಿವಿನಹಸಿವ ಒಡಲಿಳಿಸಿಭವದ ಬಂಧನಗಳಒದೊಂದೆ ಕಳಚಿಕದಳಿಯ ಬನದಲಿನಿಂತವಳು ನೆನಪಾದಳುಕನ್ನಡಿಯ ಮುಂದೆ…, ಒಳ ಹೊರಗಣಅರಿದಲ್ಲದೆ ಹರಿಯದುಬಾಳ ಬಯಲುಧೇನು ಮನದಲಿಧ್ಯಾನ ಛಲದ ಬದುಕುಒಲಿದ ಕಾಯದಲಿಗೆಲಿದ ಮನದಲಿಅವನ ಅರಸುತಲಿಹಸಿರು ಗಿರಿ ವನದ ಮಧ್ಯೆನಿಂತವಳು ನೆನಪಾದಳುಕನ್ನಡಿಯ ಮುಂದೆ…

ನೆನಪಾದವಳು Read Post »

ಕಾವ್ಯಯಾನ

ವಸುಂಧರಾ ಕದಲೂರು ಕವಿತೆ ಖಜಾನೆ

ಕತೆಯ ಕೊನೆ ಸರ್ರನೆ ಒಳ ಸೇರಿನಿಧಾನವಾಗಿ ಸಾಗಿಹುದುಗಿ, ತೆವಳ ಬಯಸುವಕೆಲವರನು ಹಂಗಿಸಿ, ಭಂಜಿಸಿಮೊಲದೊಡನೆ ಓಡಲು ಬಿಟ್ಟು;ಆ ಚುರುಕು, ಆ ವೇಗ, ಆ ಬಿಳುಪು,ಆ ಸೊಬಗು ಇಲ್ಲವೆಂದಂದರೂಅವರಿಗೆ ಪರವಾಗಿಲ್ಲ ! ಬೇಸರವಿಲ್ಲ !ಕತೆಯ ಕೊನೆಗೆ ಗೆಲುವಿನ ಗೆರೆಮುಟ್ಟಿದವರಾರೆಂದು ಎಲ್ಲರಿಗೂಗೊತ್ತಿದೆಯಲ್ಲ. ***************** ಬೇರು- ಚಿಗುರು ಹಿತ್ತಲು- ಅಂಗಳ ಒಂದು ಹದವಾದ ಮಳೆಗೆಕಾದಿದ್ದ ಹೂಬಳ್ಳಿ ; ಚಿಗುರಿಹೂ ಅರಳಿಸಿ, ದುಂಬಿ ಆಹ್ವಾನಕೆಸುವಾಸನೆ ಬೀರಲು ಮೆಲುಗಾಳಿಗೆಕಾದಿರುವಾಗ…. ಚಿವುಟಿದರುಅವರಿವರೆನ್ನದ, ಪರಿಚಿತಪರಿಚಿತರು!!ಘಾಸಿಗೊಂಡ ಬಳ್ಳಿ ತಬ್ಬಿ ಸಂತೈಸಿತುಅಪ್ಪಿಕೊಂಡ ಗಿಡ; ಅಭಯ ನೀಡುತ್ತಿತ್ತು ಕಾಣದೊಳಗುಳಿದ ಬೇರು… **************** ಹಿಂಬಾಗಿಲ ಮುಚ್ಚಿಮುಂಬಾಗಿಲ ಹೊರಗೆಅಡಿಯಿಡುವ ಮುನ್ನನಡುಮನೆಯಲ್ಲಿ ನಿಂತ ಮೇಲೆಹಿತ್ತಲ ಬೇರನು ಬೆದಕುವಆಸೆ ಬಿಡಬೇಕು…ಅಂಗಳದ ಮಲ್ಲಿಗೆಗೆಮುತ್ತಿಟ್ಟ ಚಿಟ್ಟೆಆಗಸಕೆ ಹಾರಿದುದನೋಡಲು ಮುನ್ನಡೆಯ ಬೇಕು ವಸುಂಧರಾ ಕದಲೂರು.

ವಸುಂಧರಾ ಕದಲೂರು ಕವಿತೆ ಖಜಾನೆ Read Post »

ಕಾವ್ಯಯಾನ

ಮಠದ ಬೆಕ್ಕಿಗೆ ಘಂಟೆ ಇಲ್ಲ

ಕಾವ್ಯ ಸಂಗಾತಿ ಮಠದ ಬೆಕ್ಕಿಗೆ ಘಂಟೆ ಇಲ್ಲ ಹಾರೋಹಳ್ಳಿ ರವೀಂದ್ರ ಮಧ್ಯರಾತ್ರಿಹಾಸಿಗೆಯ ಮೇಲೆ ಪಕ್ಕದಲ್ಲೆಬೆಕ್ಕೊಂದು ಬಂದು ಮಲಗಿತುಎರಡು ಕೈ ಹಿಡಿಯಿತುದೇಹವ ಅದುಮಿತುರಾತ್ರಿಯೆಲ್ಲ ಶಬುದ ಬಾರಲೇ ಇಲ್ಲಹಾಸಿಗೆಯ ಮೇಲೆ ವೀರ್ಯಸ್ಕಲನದ ರುಜುವಿತ್ತು ಮಧ್ಯರಾತ್ರಿಕಣ್ಣುಮುಚ್ಚಿ, ಕಿವಿ ಹಿಡಿದುಹಾಲ್ಕೊಹಾಲ್ ಕುಡಿಯುತಿತ್ತುರಾತ್ರಿಯೆಲ್ಲಾ ಶಬುದ ಬಾರಲೇ ಇಲ್ಲಗ್ಲಾಸಿನ ಮೇಲೆ ಬೆರಳುಗಳ ರುಜುವಿತ್ತು ಮಧ್ಯರಾತ್ರಿನಾಲಿಗೆಯ ಚಪಲಮಾಂಸ ತಿನ್ನುತಲಿತ್ತುರಾತ್ರಿಯೆಲ್ಲ ಮೂಳೆ ಕಡಿದ ಶಬುದ ಬಾರಲೇ ಇಲ್ಲಕಾವಿ ಬಟ್ಟೆಯ ಮೇಲೆ ತಿಂದ ಬಾಯಿ, ಕೈ, ವರೆಸಿದ ರುಜುವಿತ್ತು ಮಧ್ಯರಾತ್ರಿಹಣದ ಪೆಟ್ಟಿಗೆಗಳುಓಡಿ ಬಂದವುತೆಗೆದು ಕೋಣೆಯಲ್ಲಿಡುತ್ತಿದ್ದರುರಾತ್ರಿಯೆಲ್ಲಾ ಬಾಗಿಲು ತೆಗೆದ ಶಬುದ ಬಾರಲೇ ಇಲ್ಲಖಜಾನೆಯ ಕೀ ಮೇಲೆ ಹಸ್ತಾಂತತರದ ರುಜುವಿತ್ತು ಕಾವಿಯೂ ಕಾಣಲಿಲ್ಲರುಜುಗಳು ನಾಪತ್ತೆಯಾಗಿದ್ದವೂನಡುರಾತ್ರಿ ಎಲ್ಲವನ್ನೂ ನುಂಗಿ ಹಾಕಿತ್ತುಮಹಜೂರು ಮಾಡಲು ಶಬುದವು ಇರಲಿಲ್ಲಯಾಕೆಂದರೆಮಠದ ಬೆಕ್ಕಿಗೆ ಘಂಟೆ ಇಲ್ಲ………….

ಮಠದ ಬೆಕ್ಕಿಗೆ ಘಂಟೆ ಇಲ್ಲ Read Post »

ಕಾವ್ಯಯಾನ

ಹೇಗೆ ನೋವ ನಗಿಸುವುದು?

ಕಾವ್ಯ ಸಂಗಾತಿ ಹೇಗೆ ನೋವ ನಗಿಸುವುದು? ಲಕ್ಷ್ಮಿ ಕೆ ಬಿ ಹೇಗೆ ನೋವ ನುಂಗಿಮುಗಿಲಾಗುವುದು? ರೆಕ್ಕೆ ಮುರಿದ ಮೇಲೂಆಗಸಕ್ಕೇರುವ ಹಕ್ಕಿಯಂತೆ ಮುರಿದ ಕಾಲಲ್ಲೇತೆವಳಿ ನಡೆವ ಇರುವೆಯಂತೆ ಹೇಗೆ ನೋವ ನಗಿಸಿಮಗುವಾಗುವುದು? ಕಾರ್ಮೋಡದ ನಡುವೆಯೂಬೆಳಕ ತೂರಿಬಿಡುವ ರವಿಯಂತೆ ದಾರಿ ಕಾಣದಿದ್ದರೂಸಾಗರ ಸೇರುವ ನದಿಯಂತೆ ಮುಳ್ಳುಗಳ ಒಡಲಾಳದಲ್ಲೂನಗುವ ಹೂವಿನಂತೆ ಹೇಗೆ ನೋವ ಮರೆತುಬಾಳ ಮುನ್ನಡೆಸುವುದು? ಸಾವ ಮಸಣದಲ್ಲೂನಗುವ ಹೂ ಹೃದಯದಂತೆ

ಹೇಗೆ ನೋವ ನಗಿಸುವುದು? Read Post »

You cannot copy content of this page

Scroll to Top