“ಪೊಡವಿ ಸಗ್ಗ” ಏಳೆ ಕವನ-ಗುಣಾಜೆ ರಾಮಚಂದ್ರ ಭಟ್
ಕಾವ್ಯ ಸಂಗಾತಿ ಗುಣಾಜೆ ರಾಮಚಂದ್ರ ಭಟ್ “ಪೊಡವಿ ಸಗ್ಗ” ಏಳೆ ಕವನ-*ಛಂದಸ್ಸು: ಏಳೆ:೫೪೩/543/ ಜಗವಿದು ನಮ್ಮದು ಸೊಗಸಿದೆ ಕಾಣಲುಖಗಗಳ ಕಂಡು ಗಗನದಿ.. ಮೂಡುವ ನೇಸರ ಬಾಡದ ಚೇತನಕಾಡಿನ ಹಸಿರು ನಂದನ .. ನೀಲಿಯ ಕಡಲಿದೆ ನಾಲೆಯ ಹರಿವಿದೆಕಾಲನ ನಡೆಯು ಸಂತತ .. ಹರಿಯುವ ನದಿಗಳು ಕರೆಯುವ ಹಸುಗಳುಸುರಿಸುವ ನೋಟ ಸುಂದರ ಕೆಂಪಿನ ಹೂಗಳು ಕಂಪನು ಪಸರಿಸಿತಂಪನು ನೀಡಿ ಸಾನಂದ.. ಬಣ್ಣದ ಕುಸುಮವು ಕಣ್ಣನು ತುಂಬುತಬಣ್ಣಿಸೆ ಕವನ ಹೊಳಪಂತೆ.. ಮಿಗಗಳು ಕೋಟಿಯ ಅಗಣಿತ ಲೆಕ್ಕದಿಮಿಗಿಲಾದ ಸೃಷ್ಟಿ ವಿಸ್ಮಯ ಜೀವಿಗೆ ಬಾಳಲು ನಾವಿಹ ಭೂಮಿಯೆತಾವಿದು ಸಗ್ಗ ನಮಗೆಲ್ಲ.. ಮಾನವ ಶ್ರೇಷ್ಠನು ದಾನವನಾದರೆಕಾನನ ರಾಜ್ಯ ತಪ್ಪದು.. ——– ಗುಣಾಜೆ ರಾಮಚಂದ್ರ ಭಟ್
“ಪೊಡವಿ ಸಗ್ಗ” ಏಳೆ ಕವನ-ಗುಣಾಜೆ ರಾಮಚಂದ್ರ ಭಟ್ Read Post »









