“ಅಜೀಬ್ ದಾಸ್ತಾಂ ಹೈ ಏ” ಸುಮತಿ ನಿರಂಜನ
ಕಾವ್ಯ ಸಂಗಾತಿ ಸುಮತಿ ನಿರಂಜನ “ಅಜೀಬ್ ದಾಸ್ತಾಂ ಹೈ ಏ ಸಂಪಾದಕರ ಸುಗ್ರೀವಾಜ್ಞೆ !“ಏನೇ ಇರಲಿ ಹೊಸತು ಬರಲಿಏನಾದ್ರೂ ವಿಭಿನ್ನ ಬರೀರ್ರೀಪ್ರಾಸ ಗೀಸದ ಬೆನ್ನಟ್ಟದಿರಿ!”“ಆದ್ರೆ ಸರ್, ಕಲ್ಪನಾ ವಿಲಾಸಪ್ರಾಸದ್ದೇ ಬೆನ್ನೇರಿ ಬಂದ್ರೆ ?”“ಏನಾದ್ರೂ ಮಾಡ್ರೀ ಹೋಗ್ರೀ !ಆದ್ರೆ ಹಳೇ ದಾಸ್ತಾನಿಂದಮಾತ್ರ ತೆಗೀಬೇಡ್ರೀ !” ಪೆನ್ನು ಪೇಪರು ಹಿಡಿದು ಹೊರಟೆಚಿನ್ನದ ಗಣಿಯೆಲ್ಲಾದರೂಇದೆಯೇನು ಪಕ್ಕ್ದಲ್ಲೇ ?ಅಗ್ದು ಅಗ್ದು“ಪುಟ”ಕ್ಕಿಟ್ಟು ಕೊಡ್ಲಿಕ್ಕೆ ?ಹೋಗ್ಲಿ, ಅಮ್ಮನಅವಳಮ್ಮನ ಒಡವೆ ಮುರಿದುಹೊಸ ಡಿಸೈನು ಮಾಡಿಸ್ಲೆ ?ಯಾಕೋ ಮನಸ್ಸಾಗ್ಲಿಲ್ಲಬರೇ ಆಂಟಿಕ್ ವಾಲ್ಯೂಎಂದಾರು ಸಂ.ಸಾಹೇಬ್ರು ! ಅಥವಾ,ಪಳ ಪಳ ಹೊಳೆಯುವಹೊಸ ಹೊಸ ಪದಗಳಟಂಕಿಸಿ ಅಂಟಿಸಿ ಪೇಜಿನ ಮೇಲೆಅಂಚೆಗೆ ಹಾಕ್ಲೆ ಈಗ್ಲೆ ?ಹೊಸ ನಾಣ್ಯ ನಡೆಯೋದಲ್ಲಓಡ್ತಾವೆ ನೋಡಿ, ಮಿಂಟ್ ಫ್ರೆಶ್ !ಎಂದನಲ್ಲವೇ ಸಂ ಮಹಾಶಯ !ಆದರೆ…ಹತ್ರ ಎಲ್ಲೂ ಟಂಕಸಾಲೆನೇಕಾಣಿಸ್ತಿಲ್ವಲ್ರೀ !ಈಗ ಅದೇನೋ ಬಂದಿದ್ಯಂತಲ್ಲಾಕೃತ್ರಿಮ ಬುದ್ಧಿ ಮತ್ತೆ ಅಂತ ?ಅದಕ್ಕೇ ಮೊರೆ ಹೋಗ್ಲೇನು ?“ಅದ್ ಬಂದ್ ಮೇಲೆನಿಮ್ಗ್ ಯಾರ್ರೀ ಹಾಕ್ತಾರ್ರ್ ಸೊಪ್ಪು ?”ಎಂದಾನು ಮಹಾನುಭಾವ ! ಸರಿ, ನಡಿ ಮತ್ತೆಹಳೆ ಉಗ್ರಾಣಕ್ಕೆ…ಏನೇನೋ ದಾಸ್ತಾಂ…ಅಳಿದಿದ್ದು ಉಳಿದಿದ್ದುಮುರಿದಿದ್ದು ಮಬ್ಬಾದದ್ದುಎದ್ದಿದ್ದು ಅರ್ಧನಿದ್ರೆಲಿದ್ದಿದ್ದುಏನೇ ಆಗ್ಲಿ ನಂದೇ ಎಲ್ಲಾಬೇರೆಯವ್ರ್ ದಾಸ್ತಾನಂತೂ ಅಲ್ಲಯಾವ್ದೋ ಒಂದನ್ನೆಬ್ಸಿಉಜ್ಜಿ ತೊಳ್ದು ಒಪ್ಪ ಮಾಡಿಹೊಸ ಇಸ್ತ್ರಿ ಅಂಗಿ ಹಾಕಿಕಳಸ್ತೀನಿ ಮಾರಾಯಂಗೆನಡೀಯತ್ತೋ ಓಡತ್ತೋಎಡವಿ ಬೀಳತ್ತೋನೋಡೇ ಬಿಡಾಣ ! ಸುಮತಿ ನಿರಂಜನ
“ಅಜೀಬ್ ದಾಸ್ತಾಂ ಹೈ ಏ” ಸುಮತಿ ನಿರಂಜನ Read Post »









