ಗೀತಾ ಆರ್ ಅವರ ಕವಿತೆ “ಸುಗ್ಗಿ ಸಂಕ್ರಾಂತಿ”
ಕಾವ್ಯ ಸಂಗಾತಿ ಗೀತಾ ಆರ್ “ಸುಗ್ಗಿ ಸಂಕ್ರಾಂತಿ” ಹೊಸ ವರುಷದ ಹೊಸತುಬೆಳೆ ಹರುಷದಲಿ….ಸುಗ್ಗಿ ಸುಗ್ಗಿ ಸಂಭ್ರಮವುಮನೆಯಲಿ ಸಡಗರವು….ಕಷ್ಟವೆಂಬ ಕಹಿಎಳ್ಳು ಮರೆವಕಬ್ಬು ಬೆಲ್ಲದ ಸವಿಯಲಿ…ಸೂರ್ಯ ಪಥ ಬದಲಿಸುವಸಂಚಲನ ಕಾಲಚಕ್ರದಲಿ…ತುಂಬಿರಲಿ ಸುಖ ಸಂತೋಷಮಕರ ಸಂಕ್ರಾಂತಿಯಲಿ….ರಂಗೋಲಿಯ ಬಣ್ಣಗಳಲ್ಲಿಪಚ್ಚೆ ತಳಿರುತೋರಣದಲಿ…ಜೀವನದ ನೋವುಗಳೆಲ್ಲಾಮರೆವ ನಾವು ಬಾಳಿನಲ್ಲಿ….ಸ್ನೇಹ ಪ್ರೀತಿ ಸಂಬಂಧಗಳುಇರಲಿ ಸಾಮರಸ್ಯದಲಿ….ಆಯುಷ್ಯ ಆರೋಗ್ಯ ಆನಂದಪ್ರಾರ್ಥಿಸು ದೇವರಲಿ….ಧನ ಧಾನ್ಯ ಸಂಪತ್ತು ಸಮೃದ್ಧಿಏಲ್ಲಾರ ಬದುಕಿನಲಿ….ಸುಖ ಶಾಂತಿ ನೆಮ್ಮದಿ ಸಿಗಲಿಎಲ್ಲಾರಿಗೂ ಸುಗ್ಗಿಯಲಿ…ಸಂಭ್ರಮಿಸಿರಿ ಏಲ್ಲಾರೂಮಕರ ಸಂಕ್ರಾಂತಿಯಲಿ…. ಗೀತಾ ಆರ್.
ಗೀತಾ ಆರ್ ಅವರ ಕವಿತೆ “ಸುಗ್ಗಿ ಸಂಕ್ರಾಂತಿ” Read Post »









