ರಾಜುಪವಾರ್ ಅವರ ಚಳಿಗಾಲದ ಸಾಲುಗಳು
ಕಾವ್ಯ ಸಂಗಾತಿ ರಾಜುಪವಾರ್ ಅವರ ಚಳಿಗಾಲದ ಸಾಲುಗಳು ರಗ್ಗು ಮಧುರ ಪ್ರಿಯನಿಗೆ ಚಳಿಯ ಚಿಂತೆ ಇಲ್ಲಬಳಿ ಇರುವಾಗ ಮೊ(ನ)ಲ್ಲೆಯ ಮೊಗ್ಗು !‘ಮಧು’ ಪ್ರಿಯನಿಗೂ ಚಳಿಯ ಹಂಗಿಲ್ಲಒಳ ಹೋದೊಡೆ ಒಂದು ಪೆಗ್ಗುಹೊತ್ತಂತೆ ಎರಡೆರಡು ರಗ್ಗು !! ***ಈ ‘ಚಳಿ’ಗೆ ಚಳಿಯಾಗುವುದಿಲ್ಲವೆ !?ಊರೆಲ್ಲ ಸುತ್ತಿ ಎಲ್ಲರಿಗೂಚಳಿಯಲ್ಲಿ ನಡುಗಿಸುತ್ತದೆ,ಮನೆಯ ಮೂಲೆ ಸೇರಿಬೆಚ್ಚನೆ ಕೂರಬಾರದೆ !? ***ಚಳಿಗೆ ಬೆಚ್ಚನೆ ಕಾಫಿ ಹೀರಲು ಕುಳಿತ್ತಿದ್ದೆಗಡ ಗಡ ನಡುಗುತ್ತ ಬಳಿ ಬಂದ ಚಳಿತನಗೊಂದು ಲೋಟ ಕಾಫಿಗೆ ಅಂಗಲಾಚಿತು!ಕೈಯಲ್ಲದ್ದ ಕಾಫಿ ಲೋಟ ಚಾಚಿದೆಮನದಲ್ಲಿ ಚಳಿಯ ಚಳಿ ಹೋಗಲಾಡಿಸಿದ ಬೆಚ್ಚನೆಯ ಅನುಭವ !! ***ನೀರಿಗೂ ಚಳಿ ಆಗಬಾರದೆಂದುಬಿಸಿ ಮಾಡಿಮೆಲ್ಲನೆ ಕೈ ಹಿಡಿದುಕೊಂಡು ಕರೆದ್ಹೋಗುತ್ತೇನೆ ಸ್ನಾನಕ್ಕೆ !! ***ಅತಿ ಯಾಯಿತು ಈ ಚಳಿಯ ಗಲಾಟೆಸೂರ್ಯ ಮೆರೆಯಾಗುವುದೇ ತಡಬಂದು ಬಿಡುತ್ತಾನೆ ನಡುಗಿಸಲು ಗಡ ಗಡ ————————— ರಾಜು ಪವಾರ್ ರಾಜುಪವಾರ್ ಅವರ ಚಳಿಗಾಲದ ಸಾಲುಗಳು
ರಾಜುಪವಾರ್ ಅವರ ಚಳಿಗಾಲದ ಸಾಲುಗಳು Read Post »









