ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಮಕ್ಕಳ ವಿಭಾಗ

ಅಲಕ್ಷ್ಯಕ್ಕೊಳಗಾಗಿರುವ ಮಕ್ಕಳ ಸಾಹಿತ್ಯ

ಲೇಖನ ಅಲಕ್ಷ್ಯಕ್ಕೊಳಗಾಗಿರುವ ಮಕ್ಕಳ ಸಾಹಿತ್ಯ ವಿಜಯಶ್ರೀ ಹಾಲಾಡಿ ಕರ್ನಾಟಕದ ಸಾಹಿತ್ಯ ಜಗತ್ತಿನಲ್ಲಿ `ಮಕ್ಕಳ ಸಾಹಿತ್ಯ’ ಎಂಬೊಂದು ಪ್ರಕಾರ ಹೇಗಿದೆ ಎನ್ನುವ ಕಡೆಗೆ ಯೋಚನೆ ಹರಿಸಿದರೆ ಬಹಳ ಖೇದವೂ, ಆಶ್ಚರ್ಯವೂ ಉಂಟಾಗುತ್ತದೆ. ಖೇದ ಏಕೆಂದರೆ ಏಕಕಾಲದಲ್ಲಿ ನಮ್ಮ ವರ್ತಮಾನವೂ, ಭವಿಷ್ಯವೂ ಆಗಿರುವ ಮಕ್ಕಳಿಗಾಗಿ ಇರುವ ಸಾಹಿತ್ಯ ಅಲಕ್ಷ್ಯವಾಗಿರುವುದಕ್ಕೆ. ಆಶ್ಚರ್ಯವೇಕೆಂದರೆ ಇಂತಹ ತಿರುಳನ್ನೇ ನಿರ್ಲಕ್ಷಿಸಿ ಇಡೀ ಸಾಹಿತ್ಯಲೋಕ ನಿಶ್ಚಿಂತೆಯಿಂದ ಇದ್ದು ಬಿಟ್ಟಿರುವುದಕ್ಕೆ! ಸಾಹಿತ್ಯ ವಲಯದ ಹಲವರೂ, ಸಂಸ್ಥೆ-ಅಂಗಸಂಸ್ಥೆಗಳೂ, ಸ್ವತಃ ಬರಹಗಾರರೂ, ಓದುಗರು ಎಲ್ಲರೂ ಸೇರಿ ಪಕ್ಕಕ್ಕೆ ಎತ್ತಿಟ್ಟು ಮರೆತುಬಿಟ್ಟ ಒಂದು ಸೃಜನಶೀಲ ಮಾಧ್ಯಮವಿದು. ಆದರೆ ಈ ಸಾಹಿತ್ಯ ಪ್ರಕಾರವನ್ನು ಅಲಕ್ಷಿಸಿದರೆ ನಮ್ಮ ಬದುಕಿನ ಆಶಾವಾದವಾದ ಮಕ್ಕಳನ್ನು, ಅವರ ಕನಸುಗಳನ್ನು ತುಳಿದಂತೆ ಎನ್ನುವುದಂತೂ ಸತ್ಯ!  ಶಿಶುಸಾಹಿತ್ಯದ ಕುರಿತು ಚಿಂತಿಸುವಾಗ ಏಳುವ ಬಹುಮುಖ್ಯ ಪ್ರಶ್ನೆಗಳೆಂದರೆ ಮಕ್ಕಳ ಸಾಹಿತ್ಯ ಕಡಿಮೆಯಾಗುತ್ತಿದೆಯೇ? ಗುಣಮಟ್ಟದ ಮಕ್ಕಳ ಸಾಹಿತ್ಯ ಕಡಿಮೆಯಾಗುತ್ತಿದೆಯೆ? ಈ ಸಾಹಿತ್ಯವನ್ನು ಓದುವವರು ಕಡಿಮೆಯೆ ಅಥವಾ ಗಾಂಭೀರ್ಯದ ಹೆಸರಲ್ಲಿ ಮಕ್ಕಳ ಸಾಹಿತ್ಯವನ್ನು ಮೂಲೆಗುಂಪಾಗಿಸಲಾಗಿದೆಯೆ? ಇಷ್ಟಕ್ಕೂ `ಮಕ್ಕಳ ಸಾಹಿತ್ಯ’ ಎನ್ನುವುದಕ್ಕೆ ವ್ಯಾಖ್ಯೆ ಏನು? ಮುಂತಾದವು. ಇಂತಹ ಹತ್ತಾರು ಪ್ರಶ್ನೆಗಳನ್ನಿಟ್ಟುಕೊಂಡು ಯೋಚಿಸುತ್ತ ಹೊರಟರೆ ಕನಿಷ್ಟ ಉತ್ತರದ ಹಾದಿಗಾದರೂ ತಲುಪಿಕೊಳ್ಳಬಹುದು ಎಂಬ ಆಶಯ ನನ್ನದು.    `ಮಕ್ಕಳ ಸಾಹಿತ್ಯ’ ಎಂದರೆ ಪ್ರೌಢ ಬರಹಗಾರರು ಮಕ್ಕಳಿಗಾಗಿಯೇ ಬರೆದ ಸಾಹಿತ್ಯ. ನಮ್ಮ ಮಕ್ಕಳಿಗೆ ಏನನ್ನು ಕೊಡಬೇಕು ಎಂಬ ದೃಷ್ಟಿಯನ್ನಿಟ್ಟುಕೊಂಡು ಅವರಿಗೆ ಇಷ್ಟವಾಗುವಂತೆ ಹಿರಿಯರು ಬರೆಯುವ ಕವಿತೆ, ಕತೆ ಇನ್ನಿತರ ಗದ್ಯ ಪ್ರಕಾರವೇ ಮಕ್ಕಳ ಸಾಹಿತ್ಯ. ಹಾಗಾದರೆ ಮಕ್ಕಳೇ ಬರೆದ ರಚನೆಗಳಿವೆಯಲ್ಲ; ಅವು ಏನು ಎನ್ನುವುದಕ್ಕೆ ಉತ್ತರ – ಅದು `ಸಾಹಿತ್ಯ’. ಮಗುವೊಂದು ಬರೆದದ್ದು ಇತರ ಮಕ್ಕಳಿಗಾಗಿ ಬರೆದ ಸಾಹಿತ್ಯವಾಗಿರಬಹುದು ಅಥವಾ ಅಲ್ಲದೆಯೂ ಇರಬಹುದು. ಈ ವಿಷಯದ ಕುರಿತು ಈಗಾಗಲೇ ಚರ್ಚೆಗಳಾಗಿವೆ ಮತ್ತು ಸಂವಾದಗಳು ನಡೆಯುತ್ತಲೂ ಇವೆ. ಏನೇ ಆದರೂ `ಮಕ್ಕಳಿಗಾಗಿ ಹಿರಿಯರು ಬರೆದದ್ದು’ ಮತ್ತು `ಮಕ್ಕಳೇ ಬರೆದದ್ದು’ ಈ ಎರಡು ಬಗೆಯ ಬರಹಗಳನ್ನೂ ಪ್ರತ್ಯೇಕವಾಗಿ ಪರಿಗಣಿಸುವುದು ಒಳ್ಳೆಯದು.   ಮುಖ್ಯವಾಗಿ ನಮ್ಮ ವ್ಯವಸ್ಥೆಯಲ್ಲಿ ಮಕ್ಕಳು ಅಲಕ್ಷಿತರು. ಪ್ರಸ್ತುತ ದಿನಗಳಲ್ಲಿ ಅವರವರ ಒಂದೋ, ಎರಡೋ ಮಕ್ಕಳಿಗೆ ಜನರು ಬಹಳ ಪ್ರಾಮುಖ್ಯತೆ ಕೊಡುತ್ತಿದ್ದಾರೆ ಎಂದು ನಮಗನ್ನಿಸಿದರೂ ಹೀಗಿಲ್ಲದ ಪೋಷಕರೂ ಬಹು ಸಂಖ್ಯೆಯಲ್ಲಿದ್ದಾರೆ. ಅದಲ್ಲದೇ ಊಟ, ವಸತಿ, ಪ್ರೀತಿ ಎಲ್ಲದರಿಂದ ವಂಚಿತರಾಗಿ ಅಕ್ಷರಶಃ ತಬ್ಬಲಿಗಳಾದ ಮಕ್ಕಳ ಸಂಖ್ಯೆಯೂ ನಾವು ಗಾಬರಿಬೀಳುವ ಪ್ರಮಾಣದಲ್ಲಿದೆ! ಪ್ರಾಮುಖ್ಯತೆ ಕೊಡುತ್ತಿರುವ ಪಾಲಕರಾದರೂ ತಮ್ಮ ಮಕ್ಕಳ ಬೇಕು-ಬೇಡಗಳನ್ನು ಗಮನಿಸುತ್ತಾರೋ ಅಥವಾ ತಮ್ಮ ಇಷ್ಟ ಅನಿಷ್ಟಗಳನ್ನು ಮಕ್ಕಳ ಮೇಲೆ ಹೇರುತ್ತಿದ್ದಾರೋ ಎಂದು ಗಮನಿಸಿದರೆ ಎರಡನೆಯ ಅಂಶವೇ ಉತ್ತರವೆಂಬುದು ಕಣ್ಣಿಗೆ ರಾಚುತ್ತದೆ. ತಮ್ಮ ಆಸೆಯಂತೆ ತಮ್ಮ ಮಕ್ಕಳನ್ನು `ತಿದ್ದುವುದೇ’ ಹೆಚ್ಚಿನ `ಪ್ರಜ್ಞಾವಂತ’ರ ಕಾಳಜಿ! ಈ ಕಾಳಜಿಯಲ್ಲಿ ಮಕ್ಕಳ ವಿದ್ಯಾಭ್ಯಾಸ ಕೂಡ ಭವಿಷ್ಯದ ದೊಡ್ಡ ಹುದ್ದೆ, ದೊಡ್ಡ ಹಣದ ಮೇಲೆ ಅವಲಂಬಿತವಾಗಿದೆ ಎಂದಾಗ ಮಕ್ಕಳ ಹವ್ಯಾಸ, ಆಸಕ್ತಿಯ ಕುರಿತಾದ ಜಾಗ್ರತೆ ಬಹುತೇಕ ಶೂನ್ಯ! ತಮ್ಮ ಮಕ್ಕಳು ಅವರಿಷ್ಟದ ಸೃಜನಶೀಲ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಿ; ಕತೆ, ಕವಿತೆ, ಕಾದಂಬರಿಗಳನ್ನು ಓದಲಿ ಎನ್ನುವವರು ಪ್ರಜ್ಞಾವಂತರಲ್ಲೂ ವಿರಳ. ಪರಿಸ್ಥಿತಿ ಹೀಗಿರುವಾಗ ಇನ್ನುಳಿದ ಮಂದಿ ಇಂಥವರ ಅನುಕರಣೆಯನ್ನು ಮಾತ್ರ ಮಾಡುವುದು ತಪ್ಪೆನ್ನಲಾಗದು! ಇದಕ್ಕೆ ಹೊರತಾಗಿ ಪೋಷಕರ ಆಸರೆಯೇ ಇಲ್ಲದೆ ಬದುಕುತ್ತಿರುವ ದೊಡ್ಡ ಸಂಖ್ಯೆಯ ಮಕ್ಕಳ ಅಭಿರುಚಿ, ಭಾವನೆಗಳನ್ನು ಕೇಳುವವರಾರು? ಹೀಗಾಗಿ ಮಕ್ಕಳ ಸಾಹಿತ್ಯ ಅಲಕ್ಷಿತವಾಗುವುದಕ್ಕೂ ಮಕ್ಕಳು ಅಲಕ್ಷಿತರಾಗಿರುವುದಕ್ಕೂ ಬಹು ಮುಖ್ಯ ಸಂಬಂಧವಿದೆ. ಇನ್ನು, ಮಕ್ಕಳ ಸಾಹಿತ್ಯವೇ ಕಡಿಮೆಯಾಗುತ್ತಿದೆಯೇ ಅಥವಾ ಗುಣಮಟ್ಟದ ಬರಹಗಳು ಕಡಿಮೆಯಾಗುತ್ತಿದೆಯೆ? ಎಂಬ ಎಳೆಯನ್ನಿಟ್ಟುಕೊಂಡು ಹೊರಟರೆ ಎರಡಕ್ಕೂ ‘ಹೌದು’ ಎನ್ನುವ ಉತ್ತರವೇ ದೊರಕುತ್ತದೆ. ಇದಕ್ಕೆ ಕಾರಣ, ಪರಿಸ್ಥಿತಿ, ಸಂದರ್ಭಗಳು ಹಲವು. ಈ ಕುರಿತುಅಧ್ಯಯನ ಮಾಡಿದ ವಿದ್ವಾಂಸರ ಪ್ರಕಾರ ನಮ್ಮರಾಜ್ಯದಲ್ಲಿ ಮಾತ್ರವಲ್ಲದೆ ಇತರ ಕಡೆಯೂ ಮಕ್ಕಳ ಸಾಹಿತ್ಯದ ಸ್ಥಿತಿ ಹೀಗೆಯೇ ಇದೆ. ಮಲಯಾಳಂ ಮತ್ತು ಹಿಂದಿಯಲ್ಲಿ ಬೇರೆಲ್ಲ ಭಾಷೆಗಿಂತ `ಅಡ್ಡಿಲ್ಲ’ ಎನ್ನುವ ವಾತಾವರಣಇದೆ ಅಷ್ಟೇ. ಅಮೇರಿಕಾದಂತಹ ದೇಶದಲ್ಲಿ ಮಕ್ಕಳ ಸಾಹಿತ್ಯಕ್ಕೆ ಬಹು ಬೇಡಿಕೆ, ಜನಪ್ರಿಯತೆ ಇರುವುದು ಹೌದಾದರೂ ಪ್ರೌಢ ಸಾಹಿತ್ಯಕ್ಕೆ ಹೋಲಿಸಿಕೊಂಡರೆ ಅಲ್ಲೂ ಮಕ್ಕಳ  ಸಾಹಿತ್ಯ ಒಂದು ಹೆಜ್ಜೆ ಹಿಂದೆಯೇ! ನಮ್ಮಲ್ಲಿ ಶಿಶು ಸಾಹಿತ್ಯದ ಪ್ರಮಾಣ ಪ್ರೌಢ ಸಾಹಿತ್ಯಕ್ಕಿಂತ ಕಮ್ಮಿ ಹೌದು. ಆದರೆ ಬರವಣಿಗೆ ಕಡಿಮೆ ಎನ್ನುವುದಕ್ಕಿಂತ ಗುಣಮಟ್ಟದ ಬರಹಗಳು ಕಮ್ಮಿ ಎಂಬ ಮಾತು ಮತ್ತಷ್ಟು ಸರಿಯೆನಿಸುತ್ತದೆ. ಮಕ್ಕಳ ಸಾಹಿತ್ಯವೆಂದರೆ `ಲಘು ಸಾಹಿತ್ಯ, ಯಾರೂ ಬರೆಯಬಹುದಾದದ್ದು, ಪಾಂಡಿತ್ಯ ತಿಳುವಳಿಕೆ ಬೇಡದಿರುವುದು’ ಎಂಬ ಅಭಿಪ್ರಾಯ ಸರ್ವೇಸಾಮಾನ್ಯವಾಗಿದೆ. ಹಾಗಾಗಿ ಹೊಸತನವೇ ಇಲ್ಲದ, ಅದೇ ಹಳೆಯ ಪ್ರಾಸಗಳಿಗೆ ಜೋತುಬಿದ್ದ, ಸಾಂಪ್ರಾದಾಯಿಕ ವಸ್ತು- ನಿರೂಪಣೆಗೆ ನಿಷ್ಠವಾದ ಶಿಶುಸಾಹಿತ್ಯ ಧಂಡಿಯಾಗಿ ರಚನೆಯಾಗುತ್ತಿದೆ. ಇಂತಹ ಸವಕಲು ಸರಕೇ ಈಚೆ ಯಾರೂ ಕಣ್ಣೆತ್ತಿ ನೋಡದಿರುವುದಕ್ಕೆ ಒಂದು ದೊಡ್ಡ ಕಾರಣವೂ ಆಗಿದೆ! `ಮಕ್ಕಳಿಗಾಗಿ ಪ್ರಕಟಿಸಿದ ಪುಸ್ತಕಗಳು ಮಾರಾಟವಾಗುವುದಿಲ್ಲ’  ಎಂದು ಪ್ರಕಾಶಕರು ಚಿಂತೆ ವ್ಯಕ್ತಪಡಿಸುವುದಕ್ಕೂ ಇದೊಂದು ಪ್ರಮುಖ ಕಾರಣ. ಆದರೆ ಈ ಹೊತ್ತಲ್ಲೇ ಹೇಳಬೇಕಾದ ಮಾತೆಂದರೆ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಮಕ್ಕಳ ಸಾಹಿತ್ಯ ಬದಲಾವಣೆಗೆ ತೆರೆದುಕೊಳ್ಳುತ್ತಿದೆ; ಅನೇಕ ಹೊಸಬರ, ಸೃಜನಶೀಲ ಬರಹಗಾರರ ಕಲ್ಪನೆಯ ಮೂಸೆಯಲ್ಲಿ ರೂಪು ಪಡೆಯುತ್ತಾ ಸಾಗಿದೆ ಎಂಬುದು. ಮಕ್ಕಳಿಗಾಗಿ ಫ್ರೆಶ್‌ ಆದ ಗದ್ಯ, ಪದ್ಯಗಳನ್ನು ಕೊಡಬೇಕೆಂಬ ತುಡಿತದಲ್ಲಿ ಇಂತವರು ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ನವೋದಯದ ಕಾಲದಲ್ಲಿ ಪಂಜೇ ಮಂಗೇಶರಾಯರು, ಕುವೆಂಪು, ಶಿವರಾಮ ಕಾರಂತ, ಹೊಯ್ಸಳ, ಜಿ.ಪಿ ರಾಜರತ್ನಂ, ಸಿದ್ದಯ್ಯ ಪುರಾಣಿಕರು ಮೊದಲಾದ ಹಿರಿಯರನೇಕರು ಬಹಳ ಆಸ್ಥೆಯಿಂದ ಮಕ್ಕಳಿಗಾಗಿ ಬರೆದಿದ್ದರು. ಅದರ ನಂತರ ಸುದೀರ್ಘಕಾಲದ ಬಳಿಕ ಕಳೆದ ಶತಮಾನದ ಕೊನೆಯ ದಶಕಗಳಲ್ಲಿ ಮತ್ತೊಮ್ಮೆ ಮಕ್ಕಳ ಸಾಹಿತ್ಯ ಚಿಗುರಿತು. ಈಗ ಪುನಃ ಅಂತಹ ದಿನಗಳು ಬರಲಾರಂಭಿಸಿವೆ ಎಂಬ ಆಶಾವಾದವನ್ನು ಮಕ್ಕಳ ಕ್ಷೇತ್ರದಲ್ಲಿ ತೊಡಗಿಕೊಂಡ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಬೇಕಾಗಿದೆ.    ಮಕ್ಕಳ ಸಾಹಿತ್ಯಕ್ಷೇತ್ರದ ವಿಕಾಸಕ್ಕೆ ತಡೆಯಾಗಿರುವ ಇನ್ನೊಂದು ಮುಖ್ಯ ಸಮಸ್ಯೆ `ಶ್ರೇಷ್ತ್ರತೆಯ ವ್ಯಸನ’! ಬಹಳ ಓದಿಕೊಂಡವರು, ಚಿಂತಕರು, ಗಂಭೀರ ಸಾಹಿತ್ಯ ಬರೆಯುವವರು ಮಕ್ಕಳ ಸಾಹಿತ್ಯಕೃಷಿ ಮಾಡಿದರೆ ಬೆಲೆ ಕಮ್ಮಿ ಎಂಬ ಒಂದು ಮನಸ್ಥಿತಿ ಪ್ರಚಲಿತದಲ್ಲಿದೆ. ಇದರಿಂದಾಗಿ ಮಕ್ಕಳ ಸಾಹಿತ್ಯಕ್ಕೆ ನಷ್ಟವಾಗಿದೆ ಎಂದೇ ಹೇಳಬಹುದು. ಅಂತಹ ಬರಹಗಾರರ ಸೃಜನಶೀಲತೆ, ಯೋಚನೆಗಳು ನಮ್ಮ ಮಕ್ಕಳಿಗೆ ದೊರಕಲಿಲ್ಲ. ನವೋದಯಕಾಲದ ಹಿರಿಯ ಕವಿಗಳನ್ನು ನೆನಪಿಸಿಕೊಂಡು ಈ ವಿಷಯದಲ್ಲಿ ಇನ್ನಾದರೂ ನಾವು ಬದಲಾಗಬೇಕಾದ ತುರ್ತಿದೆ. ಮಕ್ಕಳಿಗಾಗಿ ಬರೆಯುವುದು, ಮಕ್ಕಳ ಸಾಹಿತ್ಯ ಓದುವುದು ಇವೆರಡೂ ಬದುಕಿನ ಪ್ರೀತಿ, ಸರಳ ಖುಷಿ ಎಂದು ಪರಿಗಣಿಸಬೇಕಾಗಿದೆ. “ಮಕ್ಕಳಿಗಾಗಿ ಬರೆಯಬೇಕೆಂದರೆ ಮಕ್ಕಳ ಮಟ್ಟಕ್ಕೆ ನಾವು ಏರಬೇಕು” ಎನ್ನುತ್ತಾರೆ. ಏರುವುದೋ, ಇಳಿಯುವುದೋ ಒಟ್ಟಿನಲ್ಲಿ ಬರಹಗಾರನೇ/ಳೇ ಮಗುವಾಗಬೇಕಾದದ್ದು ಮೊದಲ ಅಗತ್ಯ. ಮಗುವಿನ ಮುಗ್ಧತೆ, ಕುತೂಹಲ, ಪ್ರಾಮಾಣಿಕತೆ ಮೊದಲಾದವು ಈ ಬರಹಗಾರರಲ್ಲಿ ಹುದುಗಿರಬೇಕಾದ ಬಹು ಮುಖ್ಯ ಅಂಶ. ಹೀಗೆ ಮಗುವೇ ಆಗಿ ಪರಕಾಯ ಪ್ರವೇಶ ಮಾಡಿದಾಗ ಮಾತ್ರ ಒಂದೊಳ್ಳೆ ಪದ್ಯವೋ, ಕತೆಯೋ ಬರೆಯಲು ಸಾಧ್ಯ. ದಿನನಿತ್ಯದ ದಂದುಗದಲ್ಲಿ ಏಗಿ ಸೂಕ್ಷ್ಮತೆಯನ್ನು, ಮಗುತನವನ್ನು ಕಳೆದುಕೊಂಡು ಜಡ್ಡುಬಿದ್ದಿರುವ ನಮ್ಮಂತಹ ದೊಡ್ಡವರಿಗೆ ಇದು ಕಷ್ಟವೆ! ಈ ಕಾರಣಕ್ಕಾಗಿಯೂಗುಣಮಟ್ಟದ ಮಕ್ಕಳ ಸಾಹಿತ್ಯ ಕಡಿಮೆಯಾಗಿರಬಹುದು. ಇಲ್ಲಿಯೇ ಚರ್ಚಿಸಬೇಕಾದ ಮತ್ತೊಂದು ಅಂಶವೆಂದರೆ ಮಕ್ಕಳ ಸಾಹಿತ್ಯಎಂದೊಡನೆ ಅದು `ಸರಳ’ ಆಗಿರಬೇಕು ಎಂಬ ತೀರ್ಮಾನಕ್ಕೆ ಬಂದುಬಿಡುವುದು! ಕೇಳಿ ಕೇಳಿ ಬೇಸರ ತರಿಸಿರುವ ಮಾದರಿಯನ್ನೇ ಆಯ್ದುಕೊಂಡು ಸರಳತೆಯ ಹೆಸರಲ್ಲಿ ಏನೋ ಬರೆದು ಬಿಡುವುದು! ಪುಟಾಣಿ ಮಗುವಿನಿಂದ ಹಿಡಿದು ಹದಿನೈದು-ಹದಿನಾರು ವರ್ಷದವರೆಗಿನ ಮಕ್ಕಳೂ ಈ ಸಾಹಿತ್ಯದ ವ್ಯಾಪ್ತಿಯಲ್ಲಿ ಪರಿಗಣಿತವಾಗುವುದರಿಂದ ರಚನೆಗಳಲ್ಲೂ ವೈವಿಧ್ಯತೆ ಇರಬೇಕಾದದ್ದು ಸಹಜ. ಆದರೆ ಯಾವ ವಯಸ್ಸಿನ ಮಕ್ಕಳಿಗೆ ಬರೆದದ್ದೇ ಇರಲಿ; ಗುಣಮಟ್ಟದ್ದಾಗಿದ್ದರೆ ಅದು ದೊಡ್ಡವರೂ ಓದಿ ಖುಷಿಪಡುವಂತಿರುತ್ತದೆ! ಹೀಗಾಗಿ ಮಕ್ಕಳ ಸಾಹಿತ್ಯ ಎಂದು ಪ್ರತ್ಯೇಕಿಸುವುದು ಸಾಹಿತ್ಯದ `ಪ್ರಕಾರ’ ಗುರುತಿಸುವುದಕ್ಕಾಗಿ, ವಿಮರ್ಶೆಯ ಸವಲತ್ತಿಗಾಗಿ ಮತ್ತೂ ಹೆಚ್ಚೆಂದರೆ ಪ್ರಶಸ್ತಿಗಳ ಪ್ರವೇಶಾತಿಗಾಗಿ ಅಷ್ಟೇ. ಪೂರ್ಣಚಂದ್ರ ತೇಜಸ್ವಿ ಅವರ ವಿಸ್ಮಯ, ದೇಶ-ವಿದೇಶ ಸರಣಿಯ ಪುಸ್ತಕಗಳು, ಅಮೇರಿಕಾದ ಲಾರಇಂಗಲ್ಸ್ ವೈಲ್ಡರ್ ಬರೆದ ಕಾದಂಬರಿ ಸರಣಿ ಇಂತಹ ಸಾಹಿತ್ಯವನ್ನು ಗಮನಿಸಿದರೆ ದೊಡ್ಡವರು-ಮಕ್ಕಳು ಎಂಬ ಭೇದವಿಲ್ಲದೆ ಓದುವಿಕೆ ಇರುತ್ತದೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ಮಕ್ಕಳ ಸಾಹಿತ್ಯವೆಂದರೆ ಬರೀ ಪಂಚತಂತ್ರದ ಕತೆಗಳು, ಪ್ರಾಸಪದ್ಯಗಳು, ಕಥನಕವನಗಳು, ರಾಜರಾಣಿಯ ಕತೆಗಳು, ಪೌರಾಣಿಕ ವಿಷಯಗಳು ಅಲ್ಲ; ಇದರಾಚೆಗೆ ಅನೇಕ ವಸ್ತು-ವಿಷಯ-ನಿರೂಪಣೆಯ ಮಾಧ್ಯಮವಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಾಗಿದೆ. ಅಳಿಲು, ಬೆಕ್ಕು, ನಾಯಿ, ಇರುವೆ, ಗೂಬೆ, ಬಸವನ ಹುಳು, ಇಲಿ, ಹೂವು, ಗಿಡಮರಗಳು, ಬದಲಾದ ಈ ಕಾಲದ ಮಗುವೊಂದರ ಖುಷಿ-ಸಂಕಷ್ಟಗಳು ಹೀಗೆ… ವಿಫುಲ ವಿಷಯಗಳಿವೆ. ಲಲಿತ ಪ್ರಬಂಧ, ಕಾದಂಬರಿ, ಪುಟಾಣಿಕತೆ, ಅನುಭವಕಥನ, ಫ್ಯಾಂಟಸಿಗಳು ಹೀಗೆ ವಿವಿಧ ಅಭಿವ್ಯಕ್ತಿಯ ಪ್ರಕಾರಗಳಿವೆ…..  ಈ ಸಂದರ್ಭದಲ್ಲಿ ಒಂದು ಮುಖ್ಯ ಪ್ರಶ್ನೆಯನ್ನು ಎತ್ತಿ ಈ ಬರಹವನ್ನು ಮುಗಿಸುತ್ತೇನೆ. `ಮಕ್ಕಳ ಸಾಹಿತ್ಯ’ ಒಂದು ಸಾಹಿತ್ಯ ಪ್ರಕಾರವಲ್ಲವೆ? ಸಣ್ಣಕತೆ, ಕವಿತೆ, ನಾಟಕ, ಕಾದಂಬರಿ, ಆತ್ಮಕಥೆ, ಜೀವನಚರಿತ್ರೆ, ವಿಚಾರಸಾಹಿತ್ಯ, ಪ್ರಬಂಧ ಹೀಗೆ ಇವೆಲ್ಲವೂ ವಿಮರ್ಶೆಗೆ, ಓದಿಗೆ, ಮರುಓದಿಗೆ ಒಳಪಡುತ್ತಿರುವ ಈ ಹೊತ್ತಿನಲ್ಲಿ ಮಕ್ಕಳ ಸಾಹಿತ್ಯವನ್ನೇಕೆ ಮೂಲೆಗುಂಪಾಗಿಸಲಾಗಿದೆ? ಕನಿಷ್ಠ ಒಂದು ಓದು, ವಿಮರ್ಶೆ, ಒಂದು ಗಮನಿಸುವಿಕೆಯನ್ನಾದರೂ ಈ ಸಾಹಿತ್ಯ ಕೃತಿಗಳು ಬಯಸಬಾರದೇ? ಕನಿಷ್ಠ ಒಂದು ಮೆಚ್ಚುಗೆಯ ಮಾತಾದರೂ ಮಕ್ಕಳ ಸಾಹಿತಿಗೆ ದೊರಕಬಾರದೆ? ಪ್ರೌಢ ಸಾಹಿತ್ಯದ ಮನ್ನಣೆಯ ಅಬ್ಬರದಲ್ಲಿ ನಿರ್ಲಕ್ಷಿತ ಮಕ್ಕಳ ಸಾಹಿತ್ಯ ಕೊಚ್ಚಿಹೋಗಬೇಕೆ? ಇದು ಖಂಡಿತಾ ಸರಿಯಲ್ಲ. ಪ್ರಜ್ಞಾವಂತ ಓದುಗರು, ವಿಮರ್ಶಕರು ಈ ಕುರಿತು ಗಮನ ಹರಿಸಲೇಬೇಕು. (ಪ್ರೋತ್ಸಾಹದದೃಷ್ಟಿಯಿಂದ ಸಾಹಿತ್ಯಅಕಾಡಮಿಯಿಂದ ತೊಡಗಿಇತರ ಕೆಲವು ಸಂಸ್ಥೆಗಳು ಕೊಡಮಾಡುವ ಕೆಲ ಪ್ರಶಸ್ತಿ, ಪುರಸ್ಕಾರಗಳು ಮಕ್ಕಳ ಸಾಹಿತ್ಯಕ್ಕಿವೆ ಎಂದು ಇಲ್ಲಿ ನೆನಪಿಸಿಕೊಳ್ಳುವೆ). ಮಕ್ಕಳ ಸಾಹಿತ್ಯ ಅಲಕ್ಷಿತವಾದರೆ ನಮ್ಮ ಮಕ್ಕಳು ಅಲಕ್ಷಿತವಾದಂತೆ, ಅವರು ಮೂಲೆಗುಂಪಾದರೆ ಇಡೀ ಸಮಾಜವೇ ಮೂಲೆಗುಂಪಾದಂತೆ ಎಂಬ ಎಚ್ಚರಿಕೆ ನಮ್ಮಲ್ಲಿರಬೇಕಾದದ್ದು ಅತ್ಯಗತ್ಯ.  ಪ್ರೌಢ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಎರಡರಲ್ಲೂ ಗಂಭೀರವಾಗಿ ತೊಡಗಿಕೊಂಡು ಉತ್ತಮ ಕೃತಿಗಳನ್ನು ನೀಡುತ್ತಿರುವ ಬರಹಗಾರರ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಸಂತಸದ ಸಂಗತಿ. ಹಾಗೇ ಪುಸ್ತಕವನ್ನು ಕೊಂಡು ಓದುವ ಸಂಸ್ಕೃತಿಯೂ ಬೆಳೆಯಲಿ. ಮಕ್ಕಳ ಸಾಹಿತ್ಯ ಕೃತಿಗಳನ್ನು ಮಕ್ಕಳು, ದೊಡ್ಡವರು ಸಮಾನವಾಗಿ ಓದಬಲ್ಲ ಪೂರಕ ವಾತಾವರಣ ಸೃಷ್ಟಿಯಾಗಲಿ ಎನ್ನುವುದು ಪ್ರಜ್ಞಾವಂತರೆಲ್ಲರ ಆಶಯ. **************************************************

ಅಲಕ್ಷ್ಯಕ್ಕೊಳಗಾಗಿರುವ ಮಕ್ಕಳ ಸಾಹಿತ್ಯ Read Post »

ಇತರೆ

ಕೊಂಕಣಿ ಕವಿ ಪರಿಚಯ

ಕೊಂಕಣಿ ಕವಿ ಪರಿಚಯ ಫೆಲ್ಸಿ ಲೋಬೊ ಶ್ರೀಮತಿ ಫೆಲ್ಸಿ ಲೋಬೊಶಿಕ್ಷಕಿ, ಸಂತ ಎಲೋಶಿಯಸ್ ಪ್ರೌಢಶಾಲೆ, ಮಂಗಳೂರು.ಹವ್ಯಾಸ: ಕವನ, ಲೇಖನ ಬರಹಕನ್ನಡ, ಕೊಂಕಣಿ, ತುಳು ಭಾಶೆಗಳಲ್ಲಿ.ಕೊಂಕಣಿಯ, ರಾಕ್ಣೊ, ಉಜ್ವಾಡ್, ಸೆವಕ್, ಮುಂತಾದ ಪತ್ರಿಕೆಗಳಲ್ಲಿ, ವೀಜ್ ಪಾಕ್ಶಿಕ ದಲ್ಲಿ, ಕವಿತಾ ಡಾಟ್ ಕಾಮ್ ಗಳಲ್ಲಿ ಬರಹಗಳ ಪ್ರಕಟವಾಗಿದೆ. ಕವಿಗೋಶ್ಟಿಗಳಲ್ಲಿ ಭಾಗವಹಿಸುವಿಕೆ, ವಿವಿಧ ಸಾಹಿತ್ಯ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಲಾಗಿದೆ. ಆಕಾಶವಾಣಿ ಮಂಗಳೂರು ರೇಡಿಯೊ ಹಾಗೂ ಸಾರಂಗ್ ರೇಡಿಯೊ ದಲ್ಲಿ ಕಾರ್ಯಕ್ರಮಗಳು ಪ್ರಸಾರ ಕಂಡಿವೆ. ” ಗರ್ಜೆತೆಕಿದ್ ಗಜಾಲಿ” ಎಂಬ ಚೊಚ್ಚಲ ಲೇಖನ ಪುಸ್ತಕ ಪ್ರಕಟವಾಗಿದೆ. ವಿದ್ಯಾರ್ಥಿಗಳನ್ನು ಸಾಹಿತ್ಯಾಸಕ್ತಿ ಬೆಳೆಸಲು ವಿವಿಧ ಸ್ಪರ್ಧೆಗಳಿಗೆ ಪ್ರೋತ್ಸಾಹಿಸಿ ಕಳುಹಿಸಲಾಗಿದೆ. ಸೃಜನಾತ್ಮಕ ಬರಹಗಳಿಗೆ ಪ್ರೋತ್ಸಾಹಿಸಿ, ಚುಟುಕುಗಳ ಸಂಗ್ರಹ” ಝೇಂಕಾರ” ಪ್ರಕಟಗೊಂಡಿದೆ. ಜೆಸಿಐ ಮಂಗಳೂರು, ಲಾಲ್ ಭಾಗ್ ರವರು ಶಿಕ್ಷಕರ ದಿನದಂದು, ಬಹುಮುಖ ಪ್ರತಿಭಾ ಶಿಕ್ಷಕಿ ಸನ್ಮಾನ ನೀಡಿ ಗೌರವಿಸಿರುತ್ತಾರೆ. ಫೆಲ್ಸಿ ಲೋಬೊ ಅವರು ಬರೆದ ಕೊಂಕಣಿ ಮತ್ತು ಕನ್ನಡ ಕವಿತೆಗಳು ನಿಮ್ಮೆಲ್ಲರಿಗಾಗಿ. ತಾಂಚೆ ಫಾತರ್ ಆನಿ ಹಾಂವ್~~~ ಕೊಣಾಯ್ಚ್ಯಾ ಹೆಳ್ಕೆ ವಿಣೆಕಿರ್ಲೊನ್ ವಾಡ್ಲೆಲ್ಯಾ ದೆಣ್ಯಾಂರುಕಾರ್ ಕಾಳಾ ತೆಕಿದ್ಕೊಂಬ್ರೆ, ಫಾಂಟೆ ವಿಸ್ತಾರ್ಲೆಸೊಪ್ಣಾಂಚ್ಯಾ ಪಿಶ್ಯಾ ಫುಲಾಂನಿದೆಖ್ತೆಲ್ಯಾಕ್ ಪಿಶ್ಯಾರ್ ಘಾಲೆಂ ಬರಿಂ ಫುಲಾಂ ಘೊಸ್ ಭಾಂದ್ತಾನಾಫಳಾಂನಿ ಆಸ್ರೊ ಸೊದ್ಲೊಫಳಾ ರುಚಿಂನಿ ಗರ್ಜೊಥಾಂಭಯ್ತಾನಾ, ತಾಣಿಂಫಾತರ್ ವಿಂಚ್ಲೆ ಸುರ್ವೆರ್ ಹಳ್ತಾಚೆ ಮಾರ್ವಾಡಾತ್ತ್ ಗೆಲೆ ವರ್ಸಾಂಭರ್ಮಾರ್ಲೆಲ್ಯಾ ಹರ್ ಫಾತ್ರಾಂಕಿಹಗೂರ್ ವಿಂಚುನ್ ಪೆಳಿ ಭಾಂದ್ಲಿ ತುಮಿ ಮಾರ್ಲೆಲ್ಯಾ ಹರ್ ಫಾತ್ರಾಂಕಿಮೋಲ್ ಭಾಂದ್ಲಾಂವೆಂಪೆಳಿಯೆರ್ ಬಸೊನ್ಲಿಖ್ತಾಂ ಆಜ್ ಯಾದಿಂಚ್ಯೊ ವೊಳಿ ತುಮಿ ಛಾಪ್ಲೆಲ್ಯಾ ಪಯ್ಲ್ಯಾ ಪಾನಾಕ್ಆಜ್ ಹಾಂವೆ ಲಿಖ್ಚ್ಯಾ ಹರ್ ಪಾನಾಂಕ್ಫರಕ್ ಇತ್ಲೊಚ್ಫಾತ್ರಾಂ ಪೆಳಿಯೆ ಥಾವ್ನ್ ಖಾಂತ್ಚ್ಯಾಉತ್ರಾಂ ಪಾಟ್ಲ್ಯಾನ್ ನಾಂವ್ ಆಸಾಅನಾಮಿಕ್ ನೈಂ ನಿಮ್ಮ ಕಲ್ಲ ಬೆಂಚು~~~~ನನಗರಿವಿಲ್ಲದೆಯೆ ಬೆಳೆದುಹೆಮ್ಮರವಾದ ಸದ್ಗುಣದ ಮರದಎಳೆ ಚಿಗುರು, ಕೊಂಬೆಬಲಿತ ರೆಂಬೆಗಳೆಡೆಯಲಿಅದಾಗಲೆ ಹುಚ್ಚು ಹೂಗಳ ಸರದಿ ಹೀಚು ಕಾಯದು ಬೆಳೆದುಕಾಯಾಗಿ ಬಲಿತು ಬಲು ರುಚಿಯಿಂದ ನಿಮ್ಮ ಒಲಿದಾಗಕಲ್ಲೆಸೆದು ಕೊಯ್ದವರೆತುಸು ತಾಳಿ ಎಸೆದ ಒಂದೊಂದು ಕಲ್ಲತಾಳ್ಮೆಯಿಂ ಶೇಖರಿಸಿ ಬೆಂಚೊಂದಕಟ್ಟಿರುವೆನುಅಲ್ಲೆ ಕುಳಿತು ತಿರುಚುವ ಒಂದೊಂದುಕಾಗುಣಿತಕ್ಕು ಎತ್ತಣಿಂದೆತ್ತ ಸಂಬಂಧ ! ಪ್ರಹಾರಗಳ ನೋವು ಆರಿಕಲ್ಲು ಬೆಂಚು ಬೆಳೆದಿದೆ ಹೆಗಲೇರಿನಿಮ್ಮ ಹಾಳೆಯಂತಲ್ಲಇಲ್ಲಿ ಪೋಣಿಸುವ ಒಂದೊಂದುಅಕ್ಷರದ ಹಿಂದೊಂದು ಹೆಸರಿದೆಇದು ಅನಾಮಿಕವಲ್ಲ ಪ್ರಶಸ್ತಿ ನಾತ್ಲೆಲೆ ಪಾತ್ರ್ # ಜಿವಿತಾಚ್ಯೆ ರಂಗ್ ಮಾಂಚಿಯೆರ್ಉಂಚ್ಲೆ ಪಾತ್ರ್ ತುಜೆಪಾಳ್ಣ್ಯಾ ಥಾವುನ್ ಪೆಟೆ ಪರ್ಯಾಂತ್ವಿಚಾರ್ ಖೂಬ್ ಗರ್ಜೆಚೆ ರಂಗಾಳ್ ಆಂಗ್ಲಿಂ ನ್ಹೆಸೊನ್ಆಂಗಣ್ ಭರ್ ಚರ್ಲೆಲಿಂ ಪಾವ್ಲಾಂವಾಡೊನ್ ಎತಾಂ ಭಂವ್ತಿಲ್ಯಾ ದೊಳ್ಯಾಂಚಿಭುಕ್ ಥಾಂಭಂವ್ಚೆಂ ಆಹಾರ್ ಜಾತಾತ್ ಘರ್ಚ್ಯಾ ಚಲಿಯೆ ಖಾತಿರ್ಸೆಜ್ರಾ ಉಠ್ತಾ ಆಕಾಂತ್ದೊಳೆಚ್ಚ್ ಕೆಮರಾ ಜಾವುನ್ ಬಾಬಾಚಾರ್ ಕುಶಿಂ ಥಾವುನ್ ರಾಕೊನ್ ಥಕ್ತಾತ್ ಪಾಯ್ಜಾಣಾಂಗೊ ತುಜಿಂ ಆವಾಜಾವಿಣ್ಝಳ್ಜಳಿತ್ ವಸ್ತ್ರಾಂ ಬಾವ್ಲ್ಯಾಂತ್ ರಂಗ್ ಉಬೊವ್ನ್ದಿವ್ಳಾ ಭಿತರ್ ವೆಶಿ ದೇವ್ ಕೊಪ್ತಾ ಮಣ್ತಾತ್ವಚಾನಾ ಜಾಶಿ ಬುರ್ಬುರೆಂ ವೊಡುನ್ದೆವಾ ಹುಜ್ರಿಂಚ್ ಮಾನ್ ಲುಟ್ತಾತ್ ದೇವಿ ತೂಂ , ನಾ ತುಕಾ ಪೂಜಾ ಸನ್ಮಾನ್ಉಜ್ವಾಡ್ ತೂಂ , ನಾ ತುಕಾ ಸಂಭ್ರಮ್ಕಾಂಪಿಣ್ ಮಾರ್ತೆಲ್ಯಾ ಪೂಜಾರಿಕ್ ಯಿಗುಪ್ತಿಂ ಲಿಪ್ತಿಂ ಗರ್ಜ್ ತೂಂಬಗ್ಲೆ ನಿದ್ತೆಲ್ಯಾಚ್ಯಾ ನಿಳ್ಯಾ ಪಿಂತುರಾಂಕ್ ಯಿಸಂಪನ್ಮೂಳ್ ತೂಂ ಕೆನ್ನಾ ಪಾಪ್ಸುಂಕ್ ತುಕಾ ದಾವ್ಲ್ಯೊ ರಾಕ್ತಾತ್ಪ್ರತಿಭಾ ಪಿಸ್ಡುಂಕ್ ಸುಣಿಂ ವಾಗ್ಟಾಂ ವಾವುರ್ತಾತ್ಗುಡ್ಡಾಯ್ತೆಲ್ಯಾಂ ಮಧೆಂ ಮಿಲಾವಾಚಿ ಪುತ್ಳಿ ಜಾ — ರಾವ್ ಉಭೆಂತುಜ್ಯಾ ವೆಕ್ತಿತ್ವಾಚಿ ವಳಕ್ ತರಿ ಜಾಯ್ತ್ ? ಉಭಾರುನ್ ವರ್ ಪರ್ವತಾಚೆರ್ ತುಜೊ ತಾಳೊಕಿಂಕ್ರಾಟೆಂತ್ ಆಸೊಂ ಜಯ್ತಾಚೊ ವ್ಹಾಳೊಅಬಲ್ ನೈಂ ತುಂ , ಪೌರುಷಾಚ್ಯೆ ನದ್ರೆಂತ್ಲೆಂಅಬಲ್ಪಣಾಚೆಂ ಕೂಸ್ ಹುಮ್ಟಿಲಾಂಯ್ ತೆಂ ಪಾಚಾರ್ ಕುಟ್ಮಾ ಸಂಸಾರ್ ಸೆಜ್ ಸಾಮಾರಾಂತ್ಖೂಬ್ ಜಾಗ್ ಉಠಯ್ತಾಂ ತುಜಿ ಹಾಜ್ರಿಮೆಲ್ಲ್ಯಾ ಮೊಡ್ಯಾಂಕ್ ಕಳಾತ್ ಕಶಿ ಶಾಥಿ ತುಜಿ?ಸಾಧನೆಚ್ಯಾ ಧಾಂವ್ಣೆಂತ್ ಥಾಂಭ್ಚಿ ಗರ್ಜ್ ನಾಕಾ ಆಜಿ , ಆವಯ್ , ಧುವ್ , ಸುನ್ , ಭಯ್ಣ್ವಿಭಿನ್ನ್ ಪಾತ್ರಾಂನಿ ಭರ್ಪೂರ್ ಜೀವ್ ಭರ್ತಾಯ್ಆಧಾರ್ ಗರ್ಜ್ ಆಸ್ಚ್ಯಾ ನಾಸ್ಚ್ಯಾಂಕಿತೆಂಕೊ ದಿಲಾಯ್ಪ್ರಶಸ್ತಿ ನಾಸ್ಲೆಲೆ ಪಾತ್ರ್ ತುಜೆ ನಿಮ್ಣೆಂ ಪಯ್ಣ್ ಸಂಪ್ತಚ್ಆವಯ್ ಗರ್ಭಾಂತ್ ಆಸ್ರೊ ಘೆತಾಯ್ಮಾತಿಯೆ ವಾಸ್ ಚಡಂವ್ಕ್ಜರೂರ್ ಕಾಡ್ತಾಂ ಯಾದ್ ತುಜಿಪಯ್ಲ್ಯಾ ಪಾವ್ಸಾ ಥೆಂಬ್ಯಾಚ್ಯಾ ಪರ್ಮೊಳಾಂತ್ ಪ್ರಶಸ್ತಿಗಳಿಲ್ಲದ ಪಾತ್ರಗಳು ಬಾಳ ರಂಗಮಂಚದಲಿ ನಿನ್ನ ಪಾತ್ರಗಳೆಲ್ಲವು ಉನ್ನತವೆತೊಟ್ಟಿಲಿನಿಂದ ಶವದ ಪೆಟ್ಟಿಗೆಯ ತನಕವಿಚಾರಗಳು ಮನಮುಟ್ಟುವಂತವೆ ಬಣ್ಣದಂಗಿಯ ತೊಟ್ಟು ಅಂಗಳದೆಲ್ಲೆಡೆಓಡಾಡಿದ ಪುಟ್ಟಪಾದಗಳುಬೆಳೆದಂತೆಲ್ಲ ಸುತ್ತಲ ಹಸಿದ ಕಂಗಳಿಗೆಆಹಾರವಾಗುವವು ಅರಿಯದೆಯೆ. ಈ ಮನೆಯ ಮಗಳಿಗಾಗಿ ನೆರೆಮನೆಗಳಲಿ ಯಾತಕೋ ಆತಂಕ!ತೆರೆದ ಕಣ್ಣೇ ಕ್ಯಾಮೆರಾಗಳಾಗುತನಾಲಕ್ಕು ದಿಕ್ಕುಗಳಲೂ ಕಾವಲು ಝಣ್ ಗುಡುವ ಗೆಜ್ಜೆಗಿಂದು ವಿಶ್ರಾಂತಿಝಗಮಗಿಸುವ ಉಡುಗೆಗಿಲ್ಲ ಕಳೆಗುಡಿಯೊಳಗ ಹೋದೆಯೆಂದುಕೋಪಿಸುವ ಜನಹೋಗದಿರೆ ಧರಧರನೆಳೆದು ನಿನ್ನದೇವನೆದುರೆ ಮಾನಗೆಡಿಸುವರಣ್ಣಾ ದೇವಿಯಲ್ಲವೆ ನೀ ನಿನಗೇತಕೊಪೂಜೆ ಸನ್ಮಾನ?ಬೆಳಕಂತೆ ನೀ ಏತಕೋ ಸಂಭ್ರಮವು?ಗುಡಿಯ ದೇವನ ತೊಳೆತೊಳೆದುಪೂಜೆಗೈವ ಪೂಜಾರಿಗೂಗುಟ್ಟಿನಲಿ ಬೇಕಲ್ಲ ನೀನೆನೀಲಿ ಚಿತ್ರಗಳಿಗು ಸಂಪನ್ಮೂಲ? ಕೆನ್ನಾಲಗೆಯಾಗಿ ಸುಡಲುಪ್ರತಿಭೆಗಳ ದಮನಿಸಲು ಕಾದಿವೆನರಿ ತೋಳಗಳ ಹಿಂಡು ಹಸಿದುಕಂಚಿನ ಪ್ರತಿಮೆಯಾಗಿ ನಿಂತುಬಿಡುಒದ್ದು ತುಳಿವವರ ಮಧ್ಯೆಭವ್ಯ ವ್ಯಕ್ತಿತ್ವದ ಅರಿವಾಗಲವರಿಗೆ ! ಉತ್ತುಂಗಕೇರಿಸು ಪರ್ವತಗಳ ಸೀಳಿಪ್ರತಿಧ್ವನಿಸಲಿ ನಿನ್ನುಲಿಯುಪ್ರತಿ ಚೀರಾಟದಲೂ ಬೆಸೆದಿರಲಿಜಯದ ಹರಿವುಅಬಲೆಯಲ್ಲ ನೀನು ಪೌರುಷದ ದಿಟ್ಟಿಯಲ್ಲಡಗಿದ ಅಪನಂಬಿಕೆಯ ಬೇರಕಿತ್ತು ಜಗಕೆ ಸಾರು ಕುಟುಂಬ ನೆರೆಯ ವಠಾರದಿ ಬೀರುವಸಾಂತ್ವನದ ಎಚ್ಚರದ ಹಾಜರಿಯಲಿನಿನ್ನಿರುವ ಲಕ್ಷಣದ ಅರಿವಾದರುಎಲ್ಲಿಹುದು ಸತ್ತ ಹೆಣಗಳಿಗೆ?ಸಾಧನೆಯ ಹಾದಿಯಲಿ ಹಿಂದೆನೋಡದಿರು, ತಂಗದಿರು ಅಜ್ಜಿ, ತಾಯಿ, ಮಗಳುಸೊಸೆ, ತಂಗಿಯಂದದಿ ವಿಭಿನ್ನಪಾತ್ರಗಳ ಜೀವವಾಗಿಬೇಡಿದ, ಬೇಡದವಗೂ ಆಸರೆಯನೀಡಿದ ನಿನ್ನೆಲ್ಲ ಪಾತ್ರಗಳಿಗೆಪ್ರಶಸ್ತಿಗಳಿಲ್ಲ ಕಾಣು ! ಬಾಳಪಯಣವು ಅಂತ್ಯವಾದಂತೆಭುವಿಯ ಗರ್ಭದೊಳು ಲೀನವಾಗಿರುವನಿನ್ನ ಸ್ಮರಣೆಯೆ ಪುನರಪಿ ಎನಗೆಮೊದಲ ಹೂಮಳೆಯು ಸೂಸ್ವ ಕಂಪಿಗೆಊರೆಲ್ಲ ಪಸರಿಸುವ ತಂಪಿಗೆ. *************************************** ಶೀಲಾ ಭಂಡಾರ್ಕರ್

ಕೊಂಕಣಿ ಕವಿ ಪರಿಚಯ Read Post »

ಇತರೆ, ಜೀವನ

ಕಡಿವಾಣವೂ ಪ್ರೀತಿಯೇ!!!!!

ಲೇಖನ ಕಡಿವಾಣವೂ ಪ್ರೀತಿಯೇ!!!!! ಮಾಲಾ ಅಕ್ಕಿಶೆಟ್ಟಿ   ಕೊರೊನಾ ಲಾಕಡೌನ್ ಕ್ಕಿಂತ ಮುಂಚೆ ನಡೆದ ಮಾತಿದು.ಆತ್ಮೀಯರೊಬ್ಬರು ಚರ್ಚಿಸಿದ ವಿಚಾರ.ಅವರು ವಿವರಿಸಿದ ಹಾಗೆ ಈಗ ಒಂದು ವರ್ಷದಿಂದ ಶಾಲೆಗೆ ಹೋಗುವ ನಾಲ್ಕು ವರ್ಷದ ಮಗಳು ದಿನಾಲು ಒಂದಿಲ್ಲೊಂದು ವಸ್ತುಗಳನ್ನು ಶಾಲೆಯಲ್ಲಿ ಕಳೆದುಕೊಂಡು ಬಂದು ತಾಯಿಗೆ ಮತ್ತೆ ಹೊಸ ವಸ್ತುಗಳನ್ನು ಕೊಡಿಸುವಂತೆ ಪೀಡಿಸುತ್ತಿದ್ದಳು. ಮಗಳು ದಿನವೂ ಪೆನ್ಸಿಲ್, ರಬ್ಬರ್, ಶಾರ್ಪನರ್, ಕ್ರೆಯಾನ್ಸ್ ಗಳನ್ನು ಕಳೆದುಕೊಂಡು ಬರುವುದು ತಾಯಿಗೆ ತಲೆನೋವಾಗಿ ಪರಿಣಮಿಸಿತ್ತು. ಬೇಸತ್ತ ತಾಯಿ ಒಂದು ದಿನ ಮಗಳಿಗೆ ಸ್ಟ್ರಿಕ್ಟಾಗಿ ಎಚ್ಚರಿಕೆ ಕೊಟ್ಟಳು. ದಿನಾಲೂ ಶಾಲೆಯಿಂದ ಬಂದ ತಕ್ಷಣ ತನ್ನಲ್ಲಿರುವ ಪೆನ್ಸಿಲ್, ರಬ್ಬರ್, ಶಾರ್ಪನರ್ ಮತ್ತು ಕ್ರೆಯಾನ್ಸ್ ಗಳನ್ನು ತಪ್ಪದೇ ತನಗೆ ತೋರಿಸಬೇಕು, ಕಳೆದುಕೊಂಡು ಬಂದರೆ ಹೊಸ ವಸ್ತುಗಳನ್ನು ಕೊಡುವುದಿಲ್ಲವೆಂದು.ಈ ನಿಯಮವನ್ನು ತಲೆಯಲ್ಲಿ ಇಟ್ಟುಕೊಂಡ ಮಗಳು ದಿನಾಲೂ ತಪ್ಪದೆ ವಸ್ತುಗಳನ್ನು ತೋರಿಸತೊಡಗಿದಳು. ಕಳೆದುಕೊಂಡು ಅಥವಾ ಶಾಲೆಯಲ್ಲಿ ಎಲ್ಲೋ ಇಟ್ಟು ಮರೆತು ಬರುವ ಪದ್ಧತಿ ಕೊನೆಗೊಂಡಿತು.           ಈಗಿನ ಪಾಲಕರು ಮಕ್ಕಳಿಗೆ ಬೇಕೆಂದು ಎಲ್ಲವನ್ನೂ ಮಕ್ಕಳು ಕೇಳುವ ಮೊದಲೇ ಬಹುವಾಗಿ ತಂದು ಬಿಡುವ ಸಂಪ್ರದಾಯ ರೂಢಿಸಿಕೊಂಡು ಬಿಟ್ಟಿದ್ದಾರೆ. ವರ್ಷದುದ್ದಕ್ಕೂ ಒಂದು ಪೆನ್ಸಿಲ್, ಒಂದು ರಬ್ಬರ್, ಒಂದು ಶಾಪ್ ನರ್, ಒಂದು ಕ್ರೆಯಾನ್ ಬಾಕ್ಸ್ ಇದ್ದರೆ ಸಾಕು. ಆದರೆ ಪಾಲಕರು ಡಜನ್ಗಟ್ಟಲೆ ವಸ್ತುಗಳನ್ನು ತಂದಿಟ್ಟಿರುತ್ತಾರೆ. ಅವು ಎಲ್ಲಿಟ್ಟಿರುತ್ತಾರೆಂದು ಮಕ್ಕಳಿಗೂ ಗೊತ್ತು. ದಿನವೂ ಯಾವುದಾದರೂ ವಸ್ತುವನ್ನು ಕಳೆದುಕೊಂಡು ಬಂದು ಪಾಲಕರಿಗೆ ಹೇಳದೆಯೇ ಹೊಸದನ್ನು ಪ್ಯಾಕೆಟ್ ನಿಂದ ಒಡೆದು ಉಪಯೋಗಿಸಲು ಪ್ರಾರಂಭಿಸುತ್ತಾರೆ. ತಿಂಗಳೊಪ್ಪತ್ತಿನಲ್ಲಿ ಡಜನ್ ಡಜನ್ ವಸ್ತುಗಳು ಮಾಯವಾಗಿರುತ್ತವೆ. ಮತ್ತೆ ಬೇಕು ಎಂದು ಹಟ ಹಿಡಿದಾಗ ಮಾತ್ರ, ಸಾಮಾನು ಖಾಲಿಯಾಗಿದೆ ಎಂಬ ಅರಿವು ಪಾಲಕರದ್ದಾಗುತ್ತದೆ. ಅಲ್ಲಿಯವರೆಗೂ ಎಷ್ಟಿತ್ತು?ಹೇಗೆ ಖಾಲಿಯಾಯಿತು? ಎಂಬುದು ಗೊತ್ತೇ ಆಗಿರುವುದಿಲ್ಲ.        ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರೆ ಹಟ ಎನ್ನುವ ಶಬ್ದ ಎಂದೂ ಶಬ್ದಕೋಶದಲ್ಲಿ ಇರಲೇ ಇಲ್ಲ. ಪಾಲಕರು ಕೊಡಿಸಿದ ವಸ್ತುಗಳನ್ನು ಅವು ಇನ್ನೂ ಉಪಯೋಗಕ್ಕೆ ಬರಲ್ಲ ಎನ್ನುವವರಿಗೆ ಬಳಸಲಾಗುತ್ತಿತ್ತು. ಜೂನ್ ತಿಂಗಳಲ್ಲಿ ಸಾಮಾನುಗಳನ್ನು ಕೊಡಿಸಿದರೆ ಮುಗಿಯಿತು ಮುಂದೆ ಮುಂದಿನ ಜೂನ್ನಲ್ಲಿ ಶಾಲೆಯ ವಸ್ತುಗಳನ್ನು ಖರೀದಿಸಲಾಗುತ್ತಿತ್ತು. ಕಳೆದುಕೊಂಡು ಬಂದ ಉದಾಹರಣೆಗಳು ತುಂಬಾ ಕಡಿಮೆ. ಜೊತೆಗೆ ವೆರೈಟಿ,ವೆರೈಟಿ ಅಥವಾ ಪ್ರತಿದಿನಕ್ಕೆ ಹೊಸದನ್ನು ಉಪಯೋಗಿಸಬೇಕೆಂಬ ಹಟವೂ ಇರಲಿಲ್ಲ. ಮೇಲಾಗಿ ಆಗಿನ ಪಾಲಕರು ಎಷ್ಟು ಬೇಕೋ ಅಷ್ಟೇ ತಂದು ಮಕ್ಕಳಿಗೆ ಕೊಡುತ್ತಿದ್ದರು. ಡಜನ್ಗಟ್ಟಲೆ ತಂದ ರೂಢಿಯೇ ಇರಲಿಲ್ಲ. ವರ್ಷಕ್ಕೆ ಇಂತಿಷ್ಟೇ ಎಂಬ ಕಟ್ಟುನಿಟ್ಟು ಇದ್ದುದರಿಂದ ವಸ್ತುಗಳ ಉಪಯೋಗ ಮತ್ತು ರಕ್ಷಣೆ ಸರಿಯಾಗಿಯೇ ಆಗುತ್ತಿತ್ತು.           ಕಾಲ ಬದಲಾದಂತೆ ಪಾಲಕರ ಮನಸ್ಥಿತಿಯೂ ಬದಲಾಗಿದೆ. ಮಕ್ಕಳು ಬೇಡಿದ್ದೆಲ್ಲವನ್ನು ಕೊಡಿಸುವುದು ತಮ್ಮ ಧರ್ಮ ಎಂದು ತಿಳಿದು, ಕೇಳಿದ್ದು ಕೇಳದೆ ಇದ್ದದ್ದನ್ನೆಲ್ಲ ಕೊಡಿಸುವುದನ್ನು ಪಾಲಕರು ಅನುಸರಿಸುತ್ತಿದ್ದಾರೆ. ಅವಶ್ಯಕತೆಗೆ ತಕ್ಕಂತೆ ಕೊಡಿಸುವುದು ಉತ್ತಮ. ಜೊತೆಗೆ ಅದರ ಉಪಯೋಗ ಸರಿಯಾಗಿ ಆಗುತ್ತದೆಯೋ ಇಲ್ಲವೋ ಅನ್ನುವುದನ್ನು ಪರೀಕ್ಷಿಸುತ್ತಿರಬೇಕು. ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ದುಡ್ಡಿನ ಮಹತ್ವ ತಿಳಿಯುವಂತೆ ಮಾಡಬೇಕು.            ಇಗೀಗ ಡ್ರಗ್ಸ ಜಾಲದಲ್ಲಿ ಸಿಕ್ಕಿಕೊಂಡವರನ್ನ ನೋಡಿದರೆ ಇವರಿಗೆ ದುಡ್ಡು ಸಿಕ್ಕುವುದು ಎಷ್ಟು ಸಲೀಸು!!!ಮೈಯೊಳಗಿನ ರಕ್ತವನ್ನು ಬೆವರಿನಂತೆ ಸುರಿಸಿದರೂ ಬಡವನಿಗೆ ಎರಡು ಹೊತ್ತಿನ ಕೂಳು ದುರ್ಲಭ.ಇಂಥ ಬಡತನವನ್ನು ಉಂಡುಟ್ಟವರಿಗೆ,ಉತ್ತಮ ನೌಕರಿ, ತಮ್ಮದೊಂದು ಮನೆ,ಮಕ್ಕಳಿಗೆ ವಿದ್ಯಾಭ್ಯಾಸ ಕೊನೆಗೆ ಸಾಧ್ಯವಾದರೆ ಕಾರ್ ಒಂದು ಖರೀದಿ.ಇವಷ್ಟೇ ಕನಸುಗಳು.ಶ್ರೀಮಂತಿಕೆಯಲ್ಲೇ ಹುಟ್ಟಿದವರಿಗೆ, ಇಲ್ಲಾ ಇಗೀಗ ಶ್ರೀಮಂತ ಆದವರಿಗೆ ಅಥವಾ ತಾವಾಗಿಯೇ ದುಡ್ಡು ಗಳಿಸಿ ಪ್ರಾಥಮಿಕ ಹಂತದ ಎಲ್ಲಾ ಆಸೆಗಳು ಸಂಪೂರ್ಣಗೊಂಡವರಿಗೆ ದುಡ್ಡು ಕಷ್ಟವಲ್ಲ.ಇಂಥವರೇ ವ್ಯಸನಿಗಳಾಗುತ್ತಾರೆ.        ಮಕ್ಕಳು ಕೇಳಿದ್ದೆಲ್ಲವನ್ನೂ ಕೊಡಿಸುವುದು ಪ್ರೀತಿ ಎಂದುಕೊಂಡಿದ್ದಾರೆ ಕೊಡಿಸದಿದ್ದರೆ ಪ್ರೀತಿ ಇಲ್ಲ ಅಥವಾ ಕಡಿಮೆ ಎಂದು ಮಕ್ಕಳು ತಿಳಿದಾರು ಎಂಬ ಭಯದಲ್ಲೇ ಕೊಡಿಸುತ್ತಾರೆ. ಬೇಡಿದ್ದೆಲ್ಲವನ್ನೂ ಕೊಡಿಸುವುದು ಪ್ರೀತಿಯೇ? ಹಟ ಯಾವಾಗಲೂ ಗೆಲ್ಲಬೇಕೆ? ಇಲ್ಲ ಬೇಡಿದ್ದೆಲ್ಲವನ್ನೂ ಕೊಡಿಸದಿರುವುದು ಪ್ರೀತಿ ಎಂಬುದನ್ನು ಪಾಲಕರು ತೋರಿಸಬೇಕು.ಕಡಿವಾಣವೂ ಪ್ರೀತಿಯ ಸಂಕೇತ. ಯಾವ ವಸ್ತುವೂ ಜಗತ್ತಿನಲ್ಲಿ ಪುಗ್ಗಟ್ಟೇ ಸಿಗಲ್ಲವೆಂದು ತಿಳಿಹೇಳಬೇಕಾಗಿದೆ.ಹಣದ, ದುಡಿತದ ಮಹತ್ವವನ್ನು ಹೇಳಿಕೊಡಬೇಕು. ಬೇಕಾಬಿಟ್ಟಿ ವಸ್ತುಗಳನ್ನು ತೆಗೆದುಕೊಂಡು, ಒಂದು ದಿನವೂ ಉಪಯೋಗಿಸದೇ ಮತ್ತೆ ಹೊಸದು ಬೇಕೆನ್ನುವುದಕ್ಕೆ ಲಗಾಮ ‌ಮತ್ತು ‌ಹಟ ‌ಒಳ್ಳೆಯದಲ್ಲವೆಂದು ತಿಳಿಹೇಳಬೇಕು.  ***********************************************************

ಕಡಿವಾಣವೂ ಪ್ರೀತಿಯೇ!!!!! Read Post »

ಇತರೆ, ಜೀವನ

ಕಾಯಕದ ಮಹತ್ವ.

ಲೇಖನ ಕಾಯಕದ ಮಹತ್ವ. ಜಯಶ್ರೀ ಭ.ಭಂಡಾರಿ. ದಾಸೋಹ ಕಾಯಕವೆಂಬ ನಾಣ್ಯದ ಇನ್ನೊಂದು ಮುಖ.ಸಮಾಜದಲ್ಲಿ ಸಂಪತ್ತು ಉತ್ಪತ್ತಿಯಾಗಲು ಸತ್ಯಶುದ್ಧ ಕಾಯಕ ಬೇಕು.ಆದರೆ,ಸಂಪತ್ತು ಕೇಂದ್ರೀಕತವಾದರೆ ಎಲ್ಲಾ ಬಗೆಯ ಅಸಮಾನತೆಗಳು ಹುಟ್ಟುತ್ತವೆ.ಆದ್ದರಿಂದ ಬಸವಾದಿ ವಚನಕಾರರು ದಾಸೋಹ ತತ್ವವನ್ನು ಆವಿಷ್ಕರಿಸಿ ಆಚರಣೆಯಲ್ಲಿ ತಂದರು.ಅಣ್ಣನವರ ಸುಪ್ರಸಿದ್ಧ ವಚನ “ಕಾಗೆಯೊಂದಗುಳ ಕಂಡಡೆ ಕೂಗಿ ಕರೆಯದೆ ತನ್ನ ಬಳಗವ….”. ಸಮಾಜದಲ್ಲಿ ಸಂಪತ್ತಿನ ವಿತರಣೆಯಾಗಲೇಬೇಕೆಂದು ವಿಧಿಸುವ ನಿಯಮ. ಕಾಯಕ ಸಾರ್ಥಕವಾಗುವದೇ ದಾಸೋಹದಲ್ಲಿ.ಆದ್ದರಿಂದಲೇ “ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ” ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ ಅಣ್ಣ.”ತನು ಮನ ಬಳಲಿಸಿ ತಂದು ದಾಸೋಹ ಮಾಡುವವ”ರನ್ನು ಸದ್ಭಕ್ತರೆನ್ನುತ್ತಾರೆ ಅಣ್ಣ. ಸಂಪತ್ತನ್ನು ಕೂಡಿಡುವ ,ಮಣ್ಣಿನಲ್ಲಿ ಹೂತಿಡುವ,ಕಂಗಳಲ್ಲಿ ನೋಡಿ ಹಿಗ್ಗುವ ಮರುಳರನ್ನು ಎಚ್ಚರಿಸಿ “ಕೂಡಲ ಸಂಗನ ಶರಣರಿಗೊಡನೆ ಸಂಪತ್ತನ್ನು ಸವೆಸಬೇಕು” ಎಂದು ಹೇಳುತ್ತಾರೆ.ಇನ್ನೊಂದು ಲೋಕೋತ್ತರ ವಚನದಲ್ಲಿ: ” ನಾನ್ಯಾವ ಕರ್ಮವ ಮಾಡಿದರೆಯೂನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದು ಕ್ರೀಯೆಯ ಮಾಡೆನುನಿಮ್ಮ ಸೊಮ್ಮಿಂಗೆ ಸಲಿಸುವೆನು ನಿಮ್ಮಾಣೆಕೂಡಲ ಸಂಗಮದೇವಾ” ಎಂದು ಹೇಳುವಾಗ ಅಸಂಗ್ರಹಾದುದನ್ನು ಸ್ಪಷ್ಟವಾಗಿ ವಿವರಿಸುತ್ತಾರೆ.ಆದ್ದರಿಂದಲೇ ಅಣ್ಣನವರನ್ನು 12 ನೇ ಶತಮಾನದ ಮಾರ್ಕ್ಸ ಎಂದು ಕೆಲವರು ಕರೆಯುತ್ತಾರೆ. ಬಸವಣ್ಣನವರ ಪ್ರಕಾರ ಐಹಿಕ ವಸ್ತುಗಳ ಮೋಹಕ್ಕೆ ಒಳಗಾಗುವವನು ಭವಿ. ಐಹಿಕ ವಸ್ತುಗಳೆಲ್ಲ ಶಿವನ ಪ್ರಸಾದವೆಂದು ಭಾವಿಸಿ ದಾಸೋಹಂ ಭಾವದ ಮೂಲಕ ಇವೆಲ್ಲ ಜಗತ್ತಿನ  ಜೀವಿಗಳಿಗೆ ಸೇರಿದ್ದು ಎಂದು ನಂಬಿದವನು ಭಕ್ತ. ಲಿಂಗಧಾರಣೆಯಿಂದ ಶರೀರವು ಭಕ್ತನ ಹಾಗೆ ಕಾಣಬಹುದೇ ಹೊರತು ವ್ಯಕ್ತಿ ಭಕ್ತ ಆಗಲಾರ. ಭಕ್ತಿ ಎಂಬುದು ಸರ್ವ ಸಮತ್ವ ಭಾವದಿಂದ ಬರುವಂಥದ್ದು.ಅಂತೆಯೇ ಬಸವಣ್ಣನವರು ‘ಎನ್ನ ತನು ಭಕ್ತ, ಮನ ಭವಿ’ ಎಂದು ಸೂಚ್ಯವಾಗಿ ಖಂಡಿಸಿದ್ದಾರೆ.ಯಾರು ಆತ್ಮಸಾಕ್ಷಿಯಾಗಿ ಬದುಕುವದಿಲ್ಲವೋ ಅವರೇ ಭವಿಗಳು ಎಂದು ಅವರು ಸೂಚಿಸಿದ್ದಾರೆ. ಕಾಯಕದಿನದ ಬಂದ  ಹಣವನ್ನು ದಾಸೋಹಕ್ಕೆ ವಿನಿಯೋಗಿಸುತಿದ್ದ ಕಕ್ಕಯ್ಯನನ್ನು ಪರೀಕ್ಷೀಸಲೆಂದು  ಬಂದ ಶಿವ ಕಂಕರಿಯ ನಾದಕ್ಕೆ ಮಾರುಹೋಗಿ ಕುಣಿಯತೊಡಗಿದ.ಕಕ್ಕರಿಯ ಕಕ್ಕಯ್ಯ ಶಿವ ಕುಣಿಯುವದನ್ನು ನೋಡಿ ಕಂಕರಿಯನ್ನು ಇನ್ನಷ್ಟು ಜೋರಾಗಿ ಸೊಗಸಾಗಿ ಬಾರಿಸಲು ಇಬ್ಬರಲ್ಲೂ ಸ್ಪರ್ಧೆ ಏರ್ಪಟ್ಟಿತು.ಮೂರು ದಿನಗಳ ನಿರಂತರ ನರ್ತನದ ಕೊನೆಗೆ ಶಿವನೇ ಸೋತು ಕುಣಿಯಲಾರದೆ ನೆಲಕ್ಕೊರಗಿದ.ಅವನ ಕೈ ಹಿಡಿದು ಎಬ್ಬಿಸಿದ ಕಕ್ಕಯ್ಯ ಕುಣಿಯುವಂತೆ ಹೇಳಿದ.ಜಂಗಮರೂಪದ ಶಿವ ತನ್ನ ನಿಜರೂಪ ತೋರಿ “ಈ ಲೋಕದ ಹಂಗು ಸಾಕು,ನನ್ನ ಜೊತೆ ಕೈಲಾಸಕ್ಕೆ ಬಾ” ಅಂದನಂತೆ.ಶಿವ ಮತ್ತು ಕೈಲಾಸ ಎರಡನ್ನೂ ಧಿಕ್ಕರಿಸಿದ ಕಕ್ಕಯ್ಯ “ಮೂರು ದಿನ ತಪ್ಪಿಹೋದ ಕಾಯಕದ ಆಯ ಕೊಡದೆ ನಿನ್ನನ್ನು ಬಿಡಲಾರೆ” ಎಂದನಂತೆ. ನಾನೂ ಮೂರು ದಿನ ಕುಣಿದೆ.ನಿಜವಾಗಿ ನೋಡಿದರೆ ನೀನೆ ನನಗೆ ಕಾಯಕದ ಪ್ರತಿಫಲವನ್ನು ಕೊಡಬೇಕು” ಎಂದ ಶಿವ.”ಕಾಯಕ ಸಿಕ್ಕುವದು ಈ ಭೂಮಿಯಲ್ಲಿ ಇರುವವರಿಗೆ ಮಾತ್ರ, ನಿನ್ನ ಕೈಲಾಸದವರು ಸೋಮಾರಿಗಳು, ನೀನು ಕಾಯಕವೆಂಬ ಪವಿತ್ರ ಭಾವನೆಯಿಂದ ಕುಣಿಯಲಿಲ್ಲ.ನನ್ನನ್ನು ಪರಿಕ್ಷಿಸಲು ಕುಣಿದೆ….ಕಾಯಕ ತೆಗೆದುಕೊಂಡು ನೀನು ಯಾರಿಗಾಗಿ ದಾಸೋಹ ಮಾಡುವೆ? ನಿನಗೆ ಕಾಯಕ ಬೇಕಾಗಿದ್ದರೆ ಈ ಭೂಮಿಯಲ್ಲಿ ವಾಸಮಾಡು. ಸತ್ಯಶುದ್ಧನಾಗಿ ದುಡಿ” ಎಂದು ಸವಾಲೆಸೆದು ಮುಲಾಜಿಲ್ಲದೆ ಕಾಯಕದ ಹಣವನ್ನು ವಸೂಲು ಮಾಡಿ ದಾಸೋಹಕ್ಕೆ ತೆರಳಿದ.   ಇದೇ ರೀತಿ ಶಿವನಿಂದ ಕಾಯಕವನ್ನು ಪಡೆದ ಮತ್ತೊಬ್ಬ ಶರಣನೆಂದರೆ ನಗೆಯ ಮಾರಿತಂದೆ.ಮುಖದಲ್ಲಿ ನಗೆಮಲ್ಲಿಗೆ ಅರಳಲು ಯಾರ ಅಪ್ಪಣೆಯೂ ಬೇಕಿಲ್ಲ.ನಗೆಯನ್ನು ದುಡ್ಡುಕೊಟ್ಟು ಕೊಳ್ಳಬೇಕಿಲ್ಲ ಆದರೂ ನಗೆ ನಮ್ಮ ಬಾಳಿನಲ್ಲಿ ಅಪರೂಪವಾಗುತ್ತಿದೆ.ನರನ ಬಾಳಿನಲ್ಲಿ ನಗೆಗಿಂತ ಹೊಗೆ,ಧಗೆಗಳೇ ಜಾಸ್ತಿ.ನಗುವ ಮನಸ್ಸಿದ್ದರೂ ಜಗದ ವೈಚಿತ್ರ್ಯದಿಂದ  ಮಿಡುಕುತ್ತ,ಸಿಡುಕುತ್ತ ದುಡಿಯುವ ಜನರಿಗೆ ನಕ್ಕು ನಗಿಸುವ ನಗೆಗಾರರು ಬೇಕಾಗುತ್ತಾರೆ. ಮಾರಿತಂದೆ ಅಂಥ ನಗೆಗಾರರಿಗೆಲ್ಲ ಗುರು.ಮ್ಲಾನಮುಖದಲ್ಲಿ ಮಂದಹಾಸವನ್ನು ಉಕ್ಕಿಸುವದೇ ಅವನ ಕಾಯಕವಾಗಿದ್ದಿತು.ಅವನ ವಿನೋದ ವಿನ್ಯಾಸದಿಂದ ನಕ್ಕು ಆನಂದ ಹೊಂದಿದ ಭಕ್ತರು ಸ್ವಸಂತೋಷದಿಂದ ಏನಾದರೂ ಕೊಟ್ಟರೆ ಅದನ್ನು ಭಕ್ತಿಯಿಂದ ಸ್ವೀಕರಿಸಿ ಅದರಲ್ಲಿಯೇ ಉದರ ನಿರ್ವಹಣೆ ಪೂರೈಸಿ,ಉಳಿದುದರಲ್ಲಿ ದಾಸೋಹ ಮಾಡುತ್ತಿದ್ದ. ಇಂಥಹ ದಾಸೋಹದ ಶರಣಸಂಕುಲವೇ ನಮ್ಮ ಮುಂದಿದೆ. ನಮಗೆ ಬಿಟ್ಟುಹೋದ ದಾಸೋಹ ಸಂಸ್ಕ್ರತಿಯನ್ನು ನಾವು ಚಾಚೂತಪ್ಪದೆ ಪಾಲಿಸೋಣ ಹಾಗೂ ಶರಣ ಸಂಸ್ಕ್ರತಿಯಲ್ಲಿ ನಡೆದು ಧನ್ಯರಾಗೋಣ. ******************************

ಕಾಯಕದ ಮಹತ್ವ. Read Post »

ಇತರೆ, ವಾರ್ಷಿಕ ವಿಶೇಷ

ಜಾಲತಾಣಗಳಿಂದ ಮಹಿಳೆಯರಿಗೆ ಹೆಚ್ಚಿದ ಅವಕಾಶ ಮಾಲಾ ಅಕ್ಕಿಶೆಟ್ಟಿ   ಎಲ್ಲೋ ಇದ್ದವರನ್ನು ಇಲ್ಲೇ ಇದ್ದಾರೆನ್ನುವಂತೆ ಮಾಡುವ ಮೋಡಿ ಈ ಜಾಲತಾಣಗಳಿಗಿದೆ. ಹಳೆಯ ಕಾಲವೇ ಕಣ್ಮರೆಯಾಗಿ, ಆಧುನಿಕದ ಹೊಸತಿಗೆ ತುಸು ಜಾಸ್ತಿನೇ ಹೊಂದಿಕೊಂಡ ಮನುಷ್ಯ, ಅನುಕೂಲಕ್ಕಾಗಿ ತನಗೆ ಬೇಕಾದ್ದನ್ನೆಲ್ಲಾ ಬಳಸಿಕೊಂಡು ಜಗತ್ತನ್ನು ಸಮೀಪದಿಂದಲೇ ಆನಂದಿಸುತ್ತಿದ್ದಾನೆ. ಹೊಸದರ ಅಳವಡಿಕೆ ಖುಷಿ ನೀಡಿದೆ. ಏಕಕಾಲದಲ್ಲೇ ಆಗುತ್ತಿರುವ ಹೊಸ ಹೊಸ ಆ್ಯಪ್ ಗಳ ಆವಿಷ್ಕಾರ ಹಾಗೂ ಇಂಟರ್ನೆಟ್ ಸೌಲಭ್ಯ ಎಲ್ಲರಿಗೂ ಅವುಗಳ ಉಪಯೋಗಕ್ಕೆ ಮಾಯಾ ಕೊಂಡಿಯನ್ನು ನಿರ್ಮಿಸಿದೆ.           ಮೊದಲೆಲ್ಲಾ ಇಂಥ ಸೌಲಭ್ಯಗಳು ಅಂದರೆ ಮೊಬೈಲ್, ಇಂಟರ್ನೆಟ್ ಹಾಗೂ ಆ್ಯಪ್ಗಳನ್ನು ಜಾಸ್ತಿಯಾಗಿ ಪುರುಷರೇ ಬಳಸುತ್ತಿದ್ದರು.ದಿನಗಳು ಸರಿದಂತೆ ಮಹಿಳೆಯರೂ ಬಳಸಲು ಪ್ರಾರಂಭಿಸಿದರು. ಒಬ್ಬ ಹೆಣ್ಣು ಮಗಳು ಕಲಿತು ನೌಕರಿ ಹಿಡಿದರೆ ಅದೊಂದು ಸಾಧನೆ ಎಂಬಂತೆ ಪರಿಗಣಿಸಿ, ಮನೆಯಲ್ಲಿರುವವರಿಗೆ ಅಂಥ ಗೌರವ ಸಿಕ್ಕಿರಲಿಲ್ಲ. ಆದರೆ ಈ ಜಾಲತಾಣಗಳ ಸಹಾಯದಿಂದ ಹೊಸ ಉಪಾಯಗಳು ಹೊಳೆದು ಸೃಜನಾತ್ಮಕತೆಯನ್ನು ಒರೆಗೆ ಹಚ್ಚುವ ಚಟುವಟಿಕೆಗಳಲ್ಲಿ ಭಾಗಿಯಾಗಿ ಎಷ್ಟೋ ಮಹಿಳೆಯರು ಮನೆಯಿಂದಲೇ ಉದ್ಯೋಗ ಅಥವಾ ಹಣವನ್ನು ಸಂಪಾದಿಸುತ್ತಿದ್ದಾರೆ.            ಅಡುಗೆ ಮಾಡುವುದೆಂದರೆ ಬರೀ ಹೆಣ್ಣಿನ ಆಸ್ತಿಯಂತೆ ಬಿಂಬಿಸಿದ್ದು ಈ ಸಮಾಜ. ರುಚಿಕಟ್ಟಾದ ಆಹಾರದ ತಯಾರಿಕೆಗೆ ಒಂದು ವೇದಿಕೆಯ ಅವಶ್ಯಕತೆಯಿತ್ತು.ಅಂತಹ ವೇದಿಕೆಯನ್ನು ಮಹಿಳೆಯರು ಯೂಟ್ಯೂಬ್ ಮುಖಾಂತರ ಸಾಧಿಸಿದ್ದಾರೆ. ಒಮ್ಮೆ ಯೂಟ್ಯೂಬ್ ಅನ್ನು ಜಾಲಾಡಿಸಿದರೆ, ಹೆಚ್ಚಿನ ಅಡಿಗೆ ಸಂಬಂಧಿಸಿದ ವಿಡಿಯೊಗಳು ಹೆಣ್ಮಕ್ಕಳಿಗೆ ಸಂಬಂಧಿಸಿವೆ.ಬರೀ ಅಡಿಗೆ ಮಾಡಿ ಸಂಸಾರ ನೋಡಿಕೊಂಡು ಹೋಗುವ ಏಕತಾನತೆಯಿಂದ ಬೇಸತ್ತ ಮಹಿಳೆಯರಿಗೆ ಇದು ವರವಾಗಿದೆ. ತಮಗೆ ಗೊತ್ತಿರುವ ವಿವಿಧ ಆಹಾರದ ರೆಸಿಪಿಗಳನ್ನು ಅಪ್ಲೋಡ್ ಮಾಡಿ, ಜನರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ಇತ್ತೀಚೆಗೆ ನಾನೊಬ್ಬ ಹಳ್ಳಿ ಮಹಿಳೆಯ ವಿಡಿಯೋ ನೋಡುತ್ತಿದ್ದೆ. ಹಳ್ಳಿ ಜೀವನ ಹೇಗೆ ಎಂಬುದನ್ನು ದಿನಾಲು ವಿಡಿಯೋ ಮಾಡಿ ಹಾಕುತ್ತಾಳೆ. ವಿಚಿತ್ರ ಎಂದರೆ ಆಕೆ ಕಲಿತದ್ದು ಕೇವಲ ಎಸ್ಸೆಸ್ಸೆಲ್ಸಿ. ಹೇಗೋ ಮೊಬೈಲ್ನ ಫೀಚರ್ಸ್, ಇಂಟರ್ನೆಟ್ ಬಳಕೆ ಜೊತೆಗೆ ಈ ವಿಡಿಯೋ ಹೇಗೆ ಮಾಡುವುದನ್ನು ಕಲಿತು ಅಪ್ಲೋಡ್ ಮಾಡುತ್ತಿದ್ದಾಳೆ. ಆಕೆಯೇ ಹೇಳುವಂತೆ ಗಂಡನ ಸಹಾಯ ಸಹಕಾರ ಇದೆ. ಬೆಳಿಗ್ಗೆ ಬೇಗ ಏಳುವುದರಿಂದ ಹಿಡಿದು ತಿಂಡಿ, ಮಧ್ಯಾಹ್ನದ ಊಟದ ವಿಶೇಷ, ಸಂಜೆ ತಿಂಡಿಗಳು, ದನ ಮೇಯಿಸುವುದು, ಹಾಲು ಹಿಂಡುವುದು, ಬೆಣ್ಣೆ ತೆಗೆಯುವುದು, ಹಳ್ಳಿ ಶೈಲಿಯಲ್ಲಿ ಕಾಯಿ ಪಲ್ಯಗಳನ್ನು ಮಾಡುವುದು ಹೀಗೆ ಹಳ್ಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಆಕೆ ವಿಡಿಯೋದಲ್ಲಿ ಸಂಗ್ರಹಿಸುತ್ತಾಳೆ. ನಿಜವಾಗಲೂ ಆಕೆಯನ್ನು ನೋಡಿದರೆ ಸಂತೋಷ. ಒಬ್ಬ ಹಳ್ಳಿಯ ಹೆಣ್ಣುಮಗಳು ಅಷ್ಟಷ್ಟೇ ಕಲಿತು ವಿಡಿಯೋ ಮಾಡಿ ಜನರಿಂದ ಸಾಕಾಗುವಷ್ಟು ಲೈಕ್ಸ್, ಕಾಮೆಂಟ್ಸ್ ಪಡೆಯುತ್ತಾಳೆ. ಜನರು ತಮಗೆ ಯಾವ ವಿಷಯ ಬೇಕು ಅನ್ನೋದನ್ನು ಅವಳಿಗೆ ಹೇಳುತ್ತಾರೆ. ಇದು ಹೆಣ್ಮಕ್ಕಳು ಜಾಲತಾಣಗಳನ್ನು ಹೇಗೆ ಬಳಸಿಕೊಳ್ಳುತ್ತೀದ್ದಾರೆ ಅನ್ನುವುದಕ್ಕೆ ಉದಾಹರಣೆ.     ಫೇಸ್ ಬುಕ್ ನಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದವರ ಫ್ರೆಂಡ್ಶಿಪ್ ಮಾಡಿಕೊಂಡು, ಜೊತೆಗೆ ತಮಗನಿಸಿದ್ದನ್ನು ಚುಟುಕಾಗಿ ತಮ್ಮ ವಾಲ್ ಮೇಲೆ ಬರೆಯುತ್ತಾ ಜನರಿಂದ ಪ್ರೇರಣೆ ಸಿಕ್ಕಾಗ ಲೇಖನ, ಕವಿತೆ, ಕತೆಗಳನ್ನು ಬರೆದವರು ಹಲವರು. ಎಷ್ಟೋ ಹೆಣ್ಮಕ್ಕಳು ಸಂಗೀತದ ಆಸಕ್ತಿಯಿಂದ ಫೇಸ್ ಬುಕ್ ನಲ್ಲಿ ವಿಡಿಯೋಗಳನ್ನು ಹಾಕಿ, ಜನರಿಂದ ಮನ್ನಣೆಯನ್ನು ಪಡೆದು, ಸಂಗೀತ ಲೋಕದ ಗಣ್ಯರಿಗೆ ಅದು ತಲುಪಿದಾಗ ಅವಕಾಶಗಳನ್ನು ಪಡೆದು ಉತ್ತಮ ಹಾಡುಗಾರರಿದ್ದಾರೆ. ರಾಣು ಮಂಡಲ್ ಎಂಬ ನಿರ್ಗತಿಕ ಮಹಿಳೆ ರೈಲ್ವೆ ಸ್ಟೇಷನ್ನಲ್ಲಿ ಹಾಡುವುದನ್ನು ವಿಡಿಯೊ ಮಾಡಿಕೊಂಡವ ಫೇಸ್ಬುಕ್ನಲ್ಲಿ ಹಾಕಿದಾಗ ಕ್ರಾಂತಿಯೇ ಆಗಿ ಹೋಗಿತ್ತು. ರಾತೋರಾತ್ರಿ ರಾಣು ಮಂಡಾಲ್ ಪ್ರಸಿದ್ಧರಾದಳು. ಹಿಮೇಶ್ ರೆಷಮಿಯಾ ಆಕೆಯನ್ನು ಕರೆಯಿಸಿಕೊಂಡು ತನ್ನ ಜೊತೆ ಹಾಡಲು ಅವಕಾಶ ಕೊಟ್ಟ. ಎಲ್ಲೋ ಇದ್ದವಳನ್ನು ಸಂಗೀತ ಕ್ಷೇತ್ರಕ್ಕೆ ಪರಿಚಯಿಸಿದ್ದು ಈ ಫೇಸ್ಬುಕ್. ಇತ್ತೀಚೆಗಷ್ಟೇ ಮಾನಸಿ ಸುಧೀರ್ ಹಾಡಿದ ಹಾಡುಗಳು ವೈರಲ್ ಆದವು. ಕೊರೊನಾದಿಂದ ಲಾಕ್ ಡೌನ್ ದೇಶಾದ್ಯಂತ ಘೋಷಣೆಯಾದಾಗ, ದಿನದ ಬೇಸರದ ಜೊತೆಗೆ ತನ್ನ ಕಲೆಯ ಪ್ರದರ್ಶನದ ಕಂಟಿನ್ಯೂಟಿಯನ್ನು ಫೇಸ್ ಬುಕ್ ಮುಖಾಂತರ ಮಾಡಿ, ಜನರ ಪ್ರಶಂಸೆಗೆ ಪಾತ್ರರಾದರು.ಅದೊಂದು ಪ್ರೇರಣೆಯಾಗಿ ಹಲವು ಹಾಡುಗಳನ್ನು ಹಾಡಿ, ಇತರರಿಗೂ ಪ್ರೇರಣೆಯಾದರು. ಇನ್ಸ್ಟಾಗ್ರಾಮ್ನಲ್ಲಿ ವಿವಿಧ ಬಗೆಯ ಫೋಟೊಗಳನ್ನು ಹಾಕಿಯೇ ಮನಸ್ಸಿನ ಖುಷಿಯನ್ನು ಪಡೆದವರು ಕೆಲವರು. ಮಹಿಳೆಯರು ಅದೇ ಬೇಸರದಿಂದ ಹೊರಬರಲು ಬಿಡುವಿನ ವೇಳೆಯಲ್ಲಿ ತಮ್ಮ ಕುಟುಂಬ ಸಮೇತ ಎಲ್ಲೋ ಸುತ್ತಾಡಿದ ಸ್ಥಳಗಳನ್ನು, ಭೇಟಿಕೊಟ್ಟ ಕಟ್ಟಡಗಳನ್ನು ಫೋಟೋಗಳ ಮುಖಾಂತರ ಹಂಚಿಕೊಂಡು, ಖುಷಿ ಪಡೆದವರಿದ್ದಾರೆ. ಏನೂ ಲಾಭವಿರದಿದ್ದರೂ ಮನಸ್ಸಿನ ಖುಷಿಯ ಮುಂದೆ ಯಾವುದೂ ಇಲ್ಲ ಎನ್ನುವುದಂತೂ ಅಷ್ಟೇ ನಿಜ.  ಇನ್ನು ವಾಟ್ಸಪ್ಪಿಗೆ ಬಂದರಂತೂ ಮಹಿಳೆಯರು ತಮಗೆ ಬೇಕಾದ ಗ್ರೂಪ್ಗಳನ್ನು ಮಾಡಿಕೊಂಡು ಮನದಾಳದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬಾಲ್ಯದ ಸ್ನೇಹಿತರಿಂದ ಹಿಡಿದು ಪಿಜಿ ಸಹಪಾಠಿಗಳ ವರೆಗೆ ಗ್ರೂಪ್ ಹೊಂದಿದ್ದಾರೆ. ಕುಟುಂಬದವರ, ನೆರೆಹೊರೆಯವರ ಗ್ರೂಪುಗಳು ಬೇರೆ.ಇಲ್ಲೂ ಕೂಡ ತಮ್ಮಿಚ್ಛೆಯಂತೆ ಗ್ರೂಪ್ಗಳಿಗೆ ಆಹಾರ, ವಿಹಾರ, ಫೋಟೋ, ಸಾಹಿತ್ಯಿಕ ಚಟುವಟಿಕೆ, ನಾಟಕ, ನೃತ್ಯ, ಸಂಗೀತ ಹೀಗೆ ಹಲವು ವಿಷಯಗಳ ಗ್ರೂಪ್ಗಳಲ್ಲಿ ಭಾಗಿಯಾಗಿ ಮಹಿಳೆಯರು ತಮ್ಮ ಅನಿಸಿಕೆಗಳನ್ನು ಬಿತ್ತರಿಸಿದ್ದಾರೆ.ಮಹಿಳೆ ಉದ್ಯೋಗಿಯಾಗಿದ್ದರೆ ಉದ್ಯೋಗಕ್ಕೆ ಸಂಬಂಧಿಸಿದ ಗ್ರೂಪ್ ಗಳಿವೆ. ತನಗನಿಸಿದ್ದನ್ನು ತನ್ನ ಆತ್ಮೀಯರಿಗೆ ಹಂಚುವ ಮತ್ತು ಚಾಟಿಂಗ್ ಮಾಡುವ ಮೂಲಕ ಆನಂದಿಸುತ್ತಿದ್ದಾಳೆ. ಎಷ್ಟೋ ಮಾನಸಿಕ ನೋವುಗಳು ಸಮಾನ ಮನಸ್ಕರಿಗೆ ಹೇಳಿದಾಗ ಸಾಂತ್ವನವನ್ನು ಪಡೆದಿದ್ದಾಳೆ. ಆಸಕ್ತಿದಾಯಕ ವಿಷಯಗಳಿಗೆ ಸ್ಫೂರ್ತಿ ಸಿಕ್ಕಾಗ ಜಗತ್ತನ್ನೇ ಗೆದ್ದಷ್ಟು ಖುಷಿ. ಮನೆಯಲ್ಲೇ ಕುಳಿತು ಇಷ್ಟವಾದ ಕೋರ್ಸುಗಳಿಗೆ ಉದ್ಯೋಗದ ಸಂದರ್ಶನಗಳಿಗೆ ಹಾಜರಾಗಿದ್ದಾಳೆ. ಆನ್ ಲೈನ್ ಶಾಪಿಂಗ್ ಎನ್ನುವುದು ವಸ್ತುಗಳ ಮಾರಾಟ ಮತ್ತು ಕೊಳ್ಳುವಿಕೆಗೆ ಸಿಕ್ಕಾಪಟ್ಟೆ ಅವಕಾಶ ನೀಡಿದೆ. ಮನೆಯಿಂದ ಹೊರಬರಲಾರದ ಅನಿವಾರ್ಯತೆಯಲ್ಲಿರುವ ಮಹಿಳೆಯರು ಆನ್ ಲೈನ್ ಕ್ಲಾಸಸ್ ಗಳನ್ನು ತೆಗೆದುಕೊಂಡು ಇದ್ದಲ್ಲಿಂದಲೇ ಹಣವನ್ನು ಗಳಿಸುತ್ತಿದ್ದಾರೆ. ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವಲ್ಲಿ ಜನರನ್ನು ಸಮಾಜದ ಏಳ್ಗೆಗಾಗಿ ಸಂಘಟಿಸುವಲ್ಲಿ ಸಾಮಾಜಿಕ ಆಪ್ ಗಳ ಬಳಕೆ ಉಪಯೋಗಿಯಾಗಿದೆ. ಇಂತಹ ಸಾಮಾಜಿಕ ಕಾರ್ಯಗಳಲ್ಲಿ ನಿರತರಾದ ಮಹಿಳೆಯರೆಷ್ಟೋ ಜನರಿದ್ದಾರೆ. ಪುಸ್ತಕ ಪ್ರಕಟಣೆಗಾಗಿ ಪ್ರಕಾಶಕರ ಕೊರತೆಯಿದ್ದಾಗ ತಮ್ಮದೇ ಬ್ಲಾಗ್ಗಳನ್ನು ತೆರೆದು ಜನಪ್ರಿಯರಾದವರೂ ಇದ್ದಾರೆ.ಮುದ್ರಣ ಕ್ಷೇತ್ರ ಕ್ಷೀಣಿಸುತ್ತಿರುವ ಈ ಹೊತ್ತಿನಲ್ಲಿ ಆನ್ಲೈನ್ ಮ್ಯಾಗಜೀನ್ ಗಳು ಹುಟ್ಟಿಕೊಂಡಿವೆ.ಒಟ್ಟಿನಲ್ಲಿ ಮಹಿಳೆಯರು ಆಧುನಿಕತೆಗೆ ಒಗ್ಗಿಕೊಂಡು, ಜಾಲತಾಣಗಳ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ವಿಷಯದ ಮಂಡನೆ, ವಿಚಾರಗಳ ಹಂಚಿಕೆ, ಉದ್ಯೋಗ ಕೊಡುವ-ಪಡೆಯುವ, ಹಣ ಗಳಿಸುವ ಸಮಾಜಮುಖಿ ಕಾರ್ಯಗಳಿಗೆ ಜಾಲತಾಣಗಳು ಮಹಿಳೆಯರಿಗೆ ಸಹಾಯಕಾರಿಯಾಗಿವೆ. ಜೊತೆಗೆ ಅವುಗಳಿಂದ ಆಗುವ ತೊಂದರೆಗಳನ್ನು ನಿಭಾಯಿಸುವ ಜಾಕಚಕ್ಯತೆಯೂ ಮಹಿಳೆಯರಿಗೆ ಇರಬೇಕು. ಇದನ್ನೊಂದು ಹೊರತುಪಡಿಸಿದರೆ ಜಾಲತಾಣಗಳು ತುಂಬಾನೇ ಸಹಕಾರಿ. ************************************************************

Read Post »

ಇತರೆ, ವಾರ್ಷಿಕ ವಿಶೇಷ

ನಮ್ಮ ಕವಿ ಸ್ಮಿತಾ ಅಮೃತರಾಜ್ ಕವಿಪರಿಚಯ–ಸಂದರ್ಶನ–ಕವಿತೆಗಳು ಪರಿಚಯ ಸ್ಮಿತಾ, ಕವಿ, ಲೇಖಕಿ, ಅಂಕಣಕಾರ್ತಿ, ಇವೆಲ್ಲಕ್ಕಿಂತ ಹೆಚ್ಚಾಗಿ ಅಪಾರ ಮಾನವೀಯ ಅಂತಃಕರಣದ, ಎಲ್ಲದರಲ್ಲೂ,ಎಲ್ಲರಲ್ಲೂ ಒಳಿತನ್ನೇ ಕಾಣುವ ಮೃದು ಹೃದಯಿ. “ಪ್ರಪಂಚ ಬಹಳ ಕೆಟ್ಟದು”ಅನ್ನುವ  ಸಿನಿಕತನ ನನ್ನನ್ನು ಕಾಡಿದಾಗೆಲ್ಲ ಅದಕ್ಕೆ ಅಪವಾದವೆಂಬಂತೆ ನನ್ನ ಮನಸ್ಸಿಗೆ ಬರುವ ನನ್ನ ಜೀವದ ಗೆಳತಿ ಸ್ಮಿತಾ ಬಗ್ಗೆ ಹೇಳಿದಷ್ಟು ಕಡಿಮೆಯೇ. ಸ್ಮಿತಾ ಅವರ  ಜನ್ಮಸ್ಥಳ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ . ಜನನ 8 ನೆ ಜನವರಿ 1978,   ತಂದೆ ಶ್ರೀಯುತ.ವೆಂಕಟ್ರಮಣ ಪಳಂಗಾಯ ಮತ್ತು ತಾಯಿ ಶ್ರೀಮತಿ.ಮೀನಾಕ್ಷಿ ಪಳಂಗಾಯ. ಓರ್ವ ಸಹೋದರಿ ಹಾಗೂ ಓರ್ವ ಸಹೋದರ ರಿದ್ದಾರೆ. ಶಿಕ್ಷಣ: ಅಜ್ಜಿ ಮನೆಯಾದ ಮಡಿಕೇರಿ ಸಮೀಪದ ಮೇಕೇರಿ ಗ್ರಾಮದಲ್ಲಿ ಇದ್ದು ಪ್ರಾಥಮಿಕ ಶಿಕ್ಷಣವನ್ನ  ಮಡಿಕೇರಿಯ ಮೇಕೇರಿ ಶಾಲೆ, ಪ್ರೌಡ ಶಿಕ್ಷಣ  ಜೂನಿಯರ್ ಕಾಲೇಜು,ಮಡಿಕೇರಿ ಯಲ್ಲಿ ಪಡೆದು,ಬಳಿಕ ಪಿ.ಯು.ಸಿ.ಸಂತ ಫಿಲೋಮಿನ ಕಾಲೇಜು,ಪುತ್ತೂರು, ಪದವಿ – ನೆಹರು ಮೆಮೋರಿಯಲ್ ಕಾಲೇಜು.ಸುಳ್ಯ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ – ಮಂಗಳೂರು ಮುಕ್ತ ವಿಶ್ವವಿದ್ಯಾನಿಲಯ ದಿಂದ ಪಡೆದಿದ್ದಾರೆ.             1998 ರಲ್ಲಿ ಅಮೃತ ರಾಜ್ ಅವರೊಂದಿಗೆ ವಿವಾಹದ ಬಳಿಕ, ಕೊಡಗಿನ ಮಡಿಕೇರಿ ತಾಲೂಕಿನ ಚಂಬು ಗ್ರಾಮದಲ್ಲಿ ವಾಸ.ಮಗಳು  ಮನಾಲಿ,ಮಗ ಆಷಯ್,ಅತ್ತೆ ಮತ್ತು ಮಾವಂದಿರೊಂದಿಗೆ ತುಂಬು ಕುಟುಂಬದಲ್ಲಿ ಜೀವನ. ತನ್ನನ್ನು ಕವಿ,ಲೇಖಕಿ ಎಂದು ಪರಿಚಯಿಸಿ ಕೊಳ್ಳುವುದಕ್ಕಿಂತ ಹೆಚ್ಚಾಗಿ “ಕೃಷಿಕ ಮಹಿಳೆ”ಎಂದು ಹೆಮ್ಮೆಯಿಂದ  ಹೇಳಿಕೊಳ್ಳುವುದು  ಅವರಿಗೆ ಹೆಚ್ಚು  ಖುಷಿ ಕೊಡುತ್ತದೆ. ಸ್ಮಿತಾರ ಮೊದಲ ಕವನ ಸಂಕಲನ “ಕಾಲ ಕಾಯುವುದಿಲ್ಲ”,(2008)  ಬಳಿಕ ಬಂದ ಕವನ ಸಂಕಲನ “ತುಟಿಯಂಚಲಿ ಉಲಿದ ಕವಿತೆಗಳು”(2014),ನಂತರ ಬಂದದ್ದು ಪ್ರಬಂಧ ಸಂಕಲನ “ಆಂಗಳದಂಚಿನ ಕನವರಿಕೆಗಳು”(2015). ವಿಜಯವಾಣಿ ಪತ್ರಿಕೆಯಲ್ಲಿ ಅಂಕಣಕಾರ್ತಿಯಾಗಿ  “ಲೇಡಿಸ್  ಡೈರಿ” ಶೀರ್ಷಿಕೆಯ ಅಂಕಣದಲ್ಲಿ ಹಲವಾರು ಲೇಖನಗಳನ್ನೂ ಬರೆದಿರುವ ಅನುಭವವಿದೆ.ಒಂದು ಕವನ ಸಂಕಲನ  ಒಂದು ಪ್ರಬಂಧ ಸಂಕಲನ  , ಅಚ್ಚಿನಲ್ಲಿವೆ. ಹಲವಾರು ಪತ್ರಿಕೆಗಳ,ಸಂಘ ಸಂಸ್ಥೆಗಳ ಕವನ ಸ್ಪರ್ಧೆ,ಪ್ರಬಂಧ ಸ್ಪರ್ಧೆ ಗಳಲ್ಲಿ ಬಹುಮಾನಗಳು ದೊರೆತಿವೆ.ಆಕಾಶವಾಣಿ ಮಡಿಕೇರಿಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ. ಸ್ಮಿತಾರಿಗೆ ದೊರಕಿರುವ ಪ್ರಶಸ್ತಿ ,ಪುರಸ್ಕಾರಗಳಲ್ಲಿ ಕೊಡಗಿನ ಗೌರಮ್ಮ ಪ್ರಶಸ್ತಿ, ಬಿ,ಎಂ,ಶ್ರೀ ಪ್ರಶಸ್ತಿ, ಶ್ರೀಮತಿ,ಸುಶೀಲ ಶೆಟ್ಟಿ ಸ್ಮಾರಕ  ಪ್ರಶಸ್ತಿ,ಸುಳ್ಯ ತಾಲೂಕಿನ ಸಾಹಿತ್ಯರತ್ನ,ದಾರಿ ದೀಪ ಪತ್ರಿಕೆಯ ಕಾಯಕರತ್ನ ,ಪ್ರಮುಖವಾದವುಗಳು. ‌ಅಪಾರ ಪ್ರತಿಭೆಯುಳ್ಳ ಸ್ಮಿತಾ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಸಂದರ್ಶನ ನೀವು ಕವಿತೆ ಬರೆಯಲು ಪ್ರಾರಂಭಿಸಿದ್ದು ಯಾವಾಗ? ನಾನು ಕವಿತೆ ಬರೆಯಲು ತೊಡಗಿದ್ದು ತೀರಾ ತಡವಾಗಿ, ಎರಡನೇ ವಾಣಿಜ್ಯ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ .ನನಗಾಗ ಹತ್ತೊಂಬತ್ತು ವಯಸ್ಸಿರಬಹುದು. ಆಗ ಯಾವುದೋ ಹುಕಿಯಲ್ಲಿ ಒಂದಷ್ಟು ಆರಂಭಿಕ ಕವಿತೆಗಳನ್ನು ಬರೆದದ್ದು ಬಿಟ್ಟರೆ, ನಂತರ ಮದುವೆಯಾಗಿ ಎಷ್ಟೋ ವರ್ಷಗಳ ಬಳಿಕ ಕವಿತೆಯತ್ತ ವಾಲಿಕೊಂಡೆ. ಕವಿತೆಯನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ? ಮೊದಲನೆಯದಾಗಿ,  ಕವಿತೆ ಬಗ್ಗೆ ಏನೊಂದೂ ತಿಳುವಳಿಕೆ ಇಲ್ಲದಿದ್ದರೂ ಕಾಲೇಜಿನಲ್ಲಿರುವಾಗ ಉಪನ್ಯಾಕರ ಪ್ರೇರಣೆಯಿಂದ, ಅವರ ಬಳಿ ಒಳ್ಳೆ ವಿದ್ಯಾರ್ಥಿ ಅನ್ನಿಸಿಕೊಳ್ಳ ಬೇಕು ಅನ್ನುವ ನಿಟ್ಟಿನಲ್ಲಿ ಒಂದಷ್ಟು ಕವಿತೆ ಗೀಚಿದ್ದು ಬಿಟ್ಟರೆ, ನಂತರ ನನ್ನ ಅಸ್ತಿತ್ವವನ್ನು ಕಂಡುಕೊಳ್ಳುವುದಕ್ಕಾಗಿ, ಹಳ್ಳಿ ಮೂಲೆಯೊಂದರಲ್ಲಿ ವಾಸ ಮಾಡುವ ನಾನು ಲೋಕಕ್ಕೆ ತೆರೆದುಕೊಳ್ಳುವುದ್ದಕ್ಕಾಗಿ ಕವಿತೆ ಬರೆಯಲು ತೊಡಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಅನಿಸಿಕೆಯನ್ನು ಅಭಿವ್ಯಕ್ತಿ ಪಡಿಸಲು ಕವಿತೆ ಒಂದು ನಿರಾಪಯಕಾರಿ ಮಾಧ್ಯಮ ಅಂತ  ಅನ್ನಿಸಿ ಕವಿತೆಯ ತೆಕ್ಕೆಗೆ ಬಿದ್ದೆ. ನಿಮ್ಮ ಕವಿತೆಗಳ ಬಗ್ಗೆ ನಿಮಗೆ ಏನನಿಸುತ್ತದೆ ನನ್ನ ಬರಹಗಳ ಮೌಲ್ಯ ಮಾಪನ ಮಾಡಿಕೊಳ್ಳುವುದಕ್ಕಾಗಿ ನಾನು ಪತ್ರಿಕೆಗಳಿಗೆ ಬರೆಯುವೆ. ಪ್ರಕಟಗೊಂಡಾಗ ಸಹಜವಾಗಿ ಖುಷಿಯಾಗುತ್ತದೆ. ಅದು ಮತ್ತಷ್ಟು ಬರೆಯಲು ಪ್ರೇರೇಪಿಸುವಂತೆ ಮಾಡುತ್ತದೆ.ಆದರೆ  ಉತ್ತಮ ಕವಿತೆ ಬರೆಯಲು ಸಾಧ್ಯವಾಗಲಿಲ್ಲ ಅನ್ನುವ ಅತೃಪ್ತಿ ಮತ್ತು ಹೇಗೆ ಕವಿತೆಯನ್ನು ಒಲಿಸಿಕೊಳ್ಳುವುದು ಎನ್ನುವ ಕೊರಗು ಸದಾ ಇದೆ. ನಿಮ್ಮ ಸಾಹಿತ್ಯ ಕೃಷಿಯಬಗ್ಗೆ ನಿಮ್ಮ ಕುಟುಂಬದವರ ಅನಿಸಿಕೆಯೇನು? ನಮ್ಮ ಮನೆಯಲ್ಲಿ ಒಂದು ರೀತಿಯಾದಂತಹ ಸಾಹಿತ್ಯಿಕ ವಾತಾವರಣ ಇದೆ. ಹಾಗಾಗಿ  ನನ್ನ ಬರವಣಿಗೆಯ ಕುರಿತು ಯಾರಿಗೂ ವಿಶೇಷತೆ ಅನ್ನಿಸದಿದ್ದರೂ, ನನ್ನ ಪಾಡಿಗೆ ನಾನು ಇವುಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಯಾರ ಅಡ್ಡಿ ಇಲ್ಲ.  ಯಾರಾದರೂ ನನ್ನನ್ನು ಗುರುತಿಸಿದರೆ, ಪ್ರಶಂಸಿದರೆ ಸಹಜವಾಗಿ  ಮನೆಯಲ್ಲಿ ಖುಷಿ ಪಡುತ್ತಾರೆ ನಿಮ್ಮ ಓದಿನ ಬಗ್ಗೆ ಹೇಳಿ? ಸಾಧ್ಯವಾದಷ್ಟು ಮಟ್ಟಿಗೆ ನಾನು ಹಿರಿಯ ಕವಿಗಳ ಕವಿತೆಯನ್ನು ಓದಲು,ಅವುಗಳನ್ನು ಗ್ರಹಿಸಲು ಪ್ರಯತ್ನ ಪಡುವೆ . ಎಮ್. ಆರ್. ಕಮಲ ಮೇಡಂ, ಚೊಕ್ಕಾಡಿ ಸರ್, ಎಚ್.ಎಸ್.ವೆಂಕಟೇಶ್ ಮೂರ್ತಿ ಸರ್  ಮತ್ತು ಬಿ.ಆರ್.ಲಕ್ಷ್ಮಣ್ ರಾವ್ ಸರ್ ನನ್ನ ಇಷ್ಟದ ಕವಿಗಳು. ಕವಿತೆಯ ಹೊರತಾಗಿ ಬೇರೇನು ಬರೆದಿದ್ದೀರಿ ಕವಿತೆಯ ಜೊತೆಗೆ ನಾನು ಲಲಿತ ಪ್ರಬಂಧಗಳನ್ನ ಬರೆಯುತ್ತೇನೆ. ಆದರೆ ಕತೆ ಬರೆಯಬೇಕೆಂಬ ತುಡಿತ ಬಹಳ ಇದೆ. ಪ್ರಯತ್ನ ಜಾರಿಗೊಳಿಸಬೇಕಿದೆ ಅಷ್ಟೇ. ನಿಮ್ಮ ಇತರೇ ಹವ್ಯಾಸಗಳೇನು ನಾನೊಬ್ಬಳು ಕೃಷಿಕ ಮಹಿಳೆಯಾದ ಕಾರಣ, ಹಟ್ಟಿ, ತೋಟ, ಮನೆಕೆಲಸದಲ್ಲೇ ಸಮಯ ವ್ಯಯವಾಗುತ್ತದೆ. ಹಾಗಾಗಿ ಆಸಕ್ತಿ ಇದ್ದರೂ ಇತರ ಹವ್ಯಾಸಗಳತ್ತ ನಿಗಾ ವಹಿಸಲು ಸಾಧ್ಯವಾಗುವುದಿಲ್ಲ. ಆದ ಕಾರಣ ಬಿಡುವಿನ ವೇಳೆಯಲ್ಲಿ ಓದು ಮತ್ತು ಬರಹವಷ್ಟೇ ಸುಲಭಕ್ಕೆ ತೊಡಗಿಸಿಕೊಳ್ಳಬಹುದಾದ ಹವ್ಯಾಸ ನನಗೆ. ಇತ್ತೀಚೆಗೆ ಕವಿತೆ ಬರೆಯುವವರ ಸಂಖ್ಯೆ ಹೆಚ್ಚಾಗಿದೆಯಲ್ಲ-ಏನು ಹೇಳುತ್ತೀರಿ ಈ ಬಗ್ಗೆ ನಿಜ, ಇತ್ತೀಚೆಗೆ ಕವಿತೆ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮ ಯುವ ತಲೆಮಾರು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿ ಕೊಂಡಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ. ಪ್ರಸ್ತುತ ವಿದ್ಯಮಾನಕ್ಕೆ ಪೂರಕವಾಗಿ ಬರವಣಿಗೆಯ ಮೂಲಕ ಸ್ಪಂದಿಸುತ್ತಿರುವುದು ಖುಷಿಯೆನ್ನಿಸುತ್ತದೆ. ಬರೆಹ ಹೇಗೇ ಇರಲಿ, ಬರವಣಿಗೆಯ ತುಡಿತ ಮತ್ತು ಪ್ರಯತ್ನ ಮುಖ್ಯ ಅನ್ನಿಸುತ್ತದೆ.  ಇತರರನ್ನು ಓದುತ್ತಾ ಓದುತ್ತಾ ತಮ್ಮ ಬರವಣಿಯ ದಿಕ್ಕನ್ನು ರೂಪಿಸಿಕೊಳ್ಳಬಲ್ಲರು. ಸ್ಮಾರ್ಟಪೋನ್ ಮತ್ತು ಇಂಟರ್ ನೆಟ್ ಗಳು ಮಹಿಳೆಯರು ಹೆಚ್ಚೀನ ಸಂಖ್ಯೆ ಯಲ್ಲಿ ಸಾಹಿತ್ಯ ಕೃಷಿಯಲ್ಲಿ ಕಾರಣವಾಗಿವೆ ಎಂಬ ಮಾತನ್ನುನೀವು ಒಪ್ಪುವಿರಾ?ಇದರ ಬಗ್ಗೆ ಏನು ಹೇಳುವಿರಿ ಇದು ನಿಜ. ಸ್ಮಾರ್ಟ್ ಫೋನ್,ಇಂಟರ್ನೆಟ್ ಬಂದ ಕಾರಣವೇ ನಾ ಇಷ್ಟರ ಮಟ್ಟಿಗೆ ಬರವಣಿಗೆಯಲ್ಲಿ ತೊಡಗಿಸಿಕೊಂಡೆ ಅಂತ ಗೆಳತಿಯೊಬ್ಬಳು ಹೇಳುತ್ತಾಳೆ. ಅಂಗೈಯೊಳಗೆ ಫೋನ್ ಇರುವ ಕಾರಣ ಸಿಕ್ಕ ಸಮಯದಲ್ಲಿ ತತ್ಕ್ಷಣಕ್ಕೆ ಓದು , ಬರವಣಿಗೆಯತ್ತ ವಾಲಿಕೊಳ್ಳಲು ಸಹಕಾರಿ. ನನ್ನ ಮಟ್ಟಿಗೆ ಹೇಳುವುದಾದರೆ ನನಗೆ ಇಂಟರ್ನೆಟ್ ಸೌಲಭ್ಯ ದಕ್ಕಿದ ಮೇಲೆಯೇ ಬರವಣಿಗೆ ಸಲೀಸು ಅನ್ನಿಸ ತೊಡಗಿದ್ದು ಸ್ಮಿತಾರವರ ಎರಡು ಕವಿತೆಗಳು – ಶಹರು ನಿದ್ರಿಸುವ ಚಿತ್ರ ಅನವರತ ಕರುಬಿದ್ದಕ್ಕೋಹಲುಬಿದ್ದಕ್ಕೋಅಚಾನಕ್ ಮಹಾನಗರದ ನಡುವಿಗೆಪಾದವಿಡುವಾಗ ಮೈಯೆಲ್ಲ ಪುಳಕ. ದುಡು ದುಡು ರೈಲು ಹತ್ತಿದಡ ದಡನೆ ಇಳಿಯುವಾಗಕಣ್ಣು ಬಾಡುವ ಹೊತ್ತಲ್ಲಿನಗರ ಪಿಳಿ ಪಿಳಿ ನೋಡುತ್ತಿದೆ. ಬಹುಷ; ನನ್ನನ್ನೇ ಕಾಯುತ್ತಿದ್ದಿರಬೇಕುಅಂದುಕೊಂಡೆ.ಇನ್ನು ಅದೆಷ್ಟು ನನ್ನಂತವರೋ..?!. ನೋಟವನ್ನು ಶೂನ್ಯಕ್ಕೆ ನೆಟ್ಟುದೌಡಾಯಿಸುತ್ತಲೇ ಇದ್ದಾರೆಚೋದ್ಯವಲ್ಲ ತಾನೇ? ಮತ್ತೊಮ್ಮೆಚಿವುಟಿಕೊಂಡೆ. ನನಗೋ ಗಂಟು ನೋವು ಪಾದಕ್ಕಿಳಿದುಕುಳಿತುಕೊಳ್ಳುವ ಕಾತರಅವರಿಗೋ ಅದೆಂಥಾ ಆತುರ? ತಳ್ಳಿಸಿಕೊಂಡ ರಭಸಕ್ಕೆ ಜೋಲುಹೊಡೆದಿದ್ದೆ ಅಷ್ಟೆ.ತೆಕ್ಕೆಗೆ ಬಿದ್ದವರನ್ನ ನಗರ ಕೆಳಕ್ಕೆಬೀಳಿಸುವುದಿಲ್ಲವಂತೆಹೌದೆಂಬುದ ಖಾತ್ರಿ ಪಡಿಸಿಕೊಂಡೆ. ಬಿಡುವಿಲ್ಲದ ಯಂತ್ರದ ರೆಕ್ಕೆನೆತ್ತಿ ಸವರುವಾಗದಡಲ್ ದಡಲ್ ಸದ್ದು ಎದೆಯನಡುವಿನಿಂದ ಹಾಯುವಾಗನಿದ್ರೆ ಮರೆತ ಶಹರು ಝಗಮಗಿಸುವಾಗನಾನೋ ಜಾತ್ರೆಯಿರಬೇಕೆಂದುಕೊಂಡೆ. ಅಬ್ಭಾ! ಓಡಿ ಓಡಿ ಸುಸ್ತಾಗಿನನ್ನೂರಿಗೆ ಸಾವಕಾಶವಾಗಿ ಕಾಲಿಳಿಸಿದಣಿವು ನೀಗಿಸಿಕೊಳ್ಳುತ್ತಿದ್ದೇನೆ.ಶ್..! ಊರೀಗ ಸಕ್ಕರೆ ನಿದ್ರೆಯಲ್ಲಿದೆ. ಪ್ರಭುವೇ..ಇನ್ನೇನು ಬೇಡಲಾರೆ ಹೆಚ್ಚಿಗೆ. ಸಾಕ್ಷಾತ್ಕಾರವೆನ್ನಲೇ?, ಸತ್ಯದರ್ಶನವೆನ್ನಲೇ?ಊಹೆ ಕೆಲವೊಮ್ಮೆ ಮಾಯೆಯೇ ದಿಟದೂರದಿಂದ ನುಣ್ಣಗೆಯೇ ಬೆಟ್ಟ ನನ್ನ ನಿದ್ರೆಯಲ್ಲೂ, ಎಚ್ಚರದಲ್ಲೂಕನಸಿನಲ್ಲೂ, ಪ್ರಾರ್ಥನೆಯಲ್ಲೂ ಈಗಶಹರು ನಿದ್ರಿಸುವ ಚಿತ್ರ. ########################### ಕಾಡು ಹೂವುಗಳು ಅವೇನು ಕೇಳಲಿಲ್ಲ ತಾವುಅರಳಿಕೊಳ್ಳಲು ಇಂತದೇತಾವು ಬೇಕೆಂದುಆದರೂ ಅವರವರ ಇಷ್ಟಕ್ಕೆ ತಕ್ಕಸಾಮರ್ಥ್ಯಕ್ಕೆ ತಕ್ಕಂತೆ.. ಕೆಲವು ಕುಂಡದಲ್ಲಿ ಅರಳಿಕೊಂಡವುಇನ್ನು ಕೆಲವು ಪಾತಿಯಲ್ಲಿಹಸಿವೆಯೆಂಬುದು ಗೊತ್ತೇ ಆಗದಂತೆನೀರು ಗೊಬ್ಬರ ಹದವರಿತು ದಕ್ಕಿಸಿಕೊಂಡವು. ತುಟಿ ತುಂಬ ನಗು ತುಳುಕಿಸಿಕೊಂಡುಒಡಲ ತುಂಬ ಕಂಪು ತುಂಬಿಕೊಂಡುಬಣ್ಣ ಬಣ್ಣದ ಪಕಳೆಗಳುಬಿರಿದದ್ದೊಂದೇ ತಡ.. ದೂರದ ಮಾರುಕಟ್ಟೆಯಲ್ಲಿಬೆಲೆ ನಿಗದಿಯಾಯಿತುಪಾಪಕ್ಕೋ,ಪುಣ್ಯಕ್ಕೋ,ಶಾಪಗ್ರಸ್ಥರಂತೆಕೆಲವು ಹಿತ್ತಲಿನಲ್ಲಿಯೇ ಉಳಿದುಕೊಂಡವು. ಸAಭ್ರಮದ ಸಡಗರದ ನಗುತುರುಬಿನಲ್ಲಿ,ಉದ್ದಜಡೆಯಲ್ಲಿಮಂಟಪದಲ್ಲಿ,ವೇದಿಕೆಯಲ್ಲಿಹಾರ ತುರಾಯಿಗಳಲ್ಲಿ ಅಕಾಲಿಕ ಅವಸಾನಪೈಪೋಟಿಯ ಜಿದ್ದಿನಲ್ಲಿ. ಅಲ್ಲಿ ಬೆಟ್ಟದಿರುಕಲಿನಲ್ಲಿಯಾರ ದೇಖರೇಖಿಯೂ ಇಲ್ಲದೆಹೆಸರಿಲ್ಲದ ಕೆಂಪು,ಹಳದಿ,ಕಡುನೀಲಿಬಣ್ಣನೆಗೂ ಸಿಗದ ಬಣ್ಣಗಳು ಊರಿನೊಳಗೆ ಬೇರನ್ನೂರಲುಸುತರಾಂ ಒಪ್ಪುತ್ತಲೇ ಇಲ್ಲಬಣ್ಣದೊಳಗಿನ ಸಹಜ ನಗುಮಾಸಬಹುದೆಂಬ ದಿಗಿಲಿವೆಯೆಂಬಂತೆ. **************************************** ಕವಿ ಪರಿಚಯ ಸಮತಾ ಆರ್.

Read Post »

ಇತರೆ, ವಾರ್ಷಿಕ ವಿಶೇಷ

ಒಂದು ಲೋಟ ಗಂಜಿ

ಕಥೆ ಒಂದು ಲೋಟ ಗಂಜಿ ಟಿ.ಎಸ್.ಶ್ರವಣಕುಮಾರಿ ಶುರುವಾಗಿದ್ದು ಹೀಗೆ… ಸಾವಿತ್ರಿಯ ಮಗಳು ಜಯಲಕ್ಷ್ಮಿ ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಯನ್ನು ಸೇರಿ ಎರಡು ದಿನವಾಗಿತ್ತು. ಹೆದರುವಂತದೇನಲ್ಲ, ಚೊಚ್ಚಲ ಹೆರಿಗೆ. ಆದರೆ ಸ್ವಲ್ಪವೇನೂ, ಸ್ವಲ್ಪ ಜಾಸ್ತಿಯೇ ನೋವು ತಿನ್ನುತ್ತಿದ್ದರೂ ಇನ್ನೂ ಹೆರಿಗೆಯಾಗಿರಲಿಲ್ಲ. ಸಾವಿತ್ರಿ, ಮೊನ್ನೆ ಬೆಳಗ್ಗೆ ಬಂದಿದ್ದವಳು ರಾತ್ರಿಯೆಲ್ಲಾ ಆಸ್ಪತ್ರೆಯ ಕಾರಿಡಾರಿನಲ್ಲೇ ತೂಕಡಿಸುತ್ತಾ ಕಾಯುತ್ತಾ ಕುಳಿತಿದ್ದಳು. ಆಸ್ಪತ್ರೆಗೆ ಮನೆ ಸ್ವಲ್ಪ ದೂರವೇ. ಗಂಡನಿಗೆ ಆಗುಂಬೆಯ ಟೋಲ್ಗೇಟಿನಲ್ಲಿ ಕೆಲಸ. ಬರುವುದು ವಾರಕ್ಕೊಂದು ಬಾರಿಯೇ. ನಿನ್ನೆ ಮತ್ತು ಇಂದು ಬೆಳಗ್ಗೆ ಒಂದು ಘಳಿಗೆ ಮನೆಗೆ ಹೋಗಿ ಸ್ನಾನ ಮಾಡಿ, ಹೊಟ್ಟೆಗಿಷ್ಟು ಹಾಕಿಕೊಂಡು ಜಯಲಕ್ಷ್ಮಿಗಿಷ್ಟು ಬಿಸಿನೀರು, ಜೀರಿಗೆ ಕಷಾಯವನ್ನು, ಉಳಿದಿದ್ದ ರಾತ್ರಿಯ ಹಾಲನ್ನೇ ಹಾಕಿ ಒಂದು ಲೋಟ ಗಂಜಿಯನ್ನು ಕಾಸಿಕೊಂಡಿದ್ದಳು. ಮಧ್ಯಾಹ್ನಕ್ಕೂ ಹುರಿಟ್ಟನ್ನೇ ತಿನ್ನುವಂತೆ ಮಕ್ಕಳಿಗೆ ಹೇಳಿ ಬಂದಿದ್ದಳು. ನೋವಿನಿಂದ ನರಳುತ್ತಿದ್ದ ಜಯಲಕ್ಷ್ಮಿಗೂ, ಆತಂಕದಿಂದ ಕಾಯುತ್ತಲೇ ಕುಳಿತಿದ್ದ ಸಾವಿತ್ರಿಗೂ ಹೆರಿಗೆಯಾಗಿ ಮಗು ಹೊರಬಂದರೆ ಸಾಕೆನ್ನಿಸಿತ್ತು. ಇವತ್ತಂತೂ ಜಯಲಕ್ಷ್ಮಿಗೆ ಹೊಟ್ಟೆಗೇನೂ ಸೇರದೆ ಅವಳು ಗಂಜಿಯನ್ನೂ ಕುಡಿಯಲಿಲ್ಲ. ಕಷ್ಟಪಟ್ಟು ಒಂದಿಷ್ಟು ಜೀರಿಗೆ ಕಷಾಯವನ್ನು ಕುಡಿಸಿದ್ದಾಯಿತು. ಮನೆಯಲ್ಲೇ ಐದು ಹೆರಿಗೆ, ಅದರಲ್ಲೆರಡು ಸಾವು ಕಂಡಿದ್ದ ಸಾವಿತ್ರಿಗೆ ಈಗ ಮಗಳನ್ನು ಮನೆಯಲ್ಲಿಟ್ಟುಕೊಂಡು ಹೆರಿಗೆ ಮಾಡಿಸುವಷ್ಟು ಧೈರ್ಯವಿಲ್ಲ. ಆಗ ಸಿಗುತ್ತಿದ್ದ ಮಿಡ್‌ವೈಫ್‌ ಗಂಗಮ್ಮನಿಗೂ ಈಗ ವಿಪರೀತ ವಯಸ್ಸಾಗಿ ಅವಳು ಹೆರಿಗೆ ಮಾಡಿಸುವುದನ್ನು ಬಿಟ್ಟು ಏಳೆಂಟು ವರ್ಷಗಳೇ ಆಗಿವೆ. ಇನ್ಯಾರ ಮೇಲೂ ಸಾವಿತ್ರಿಗೆ ನಂಬಿಕೆಯಿಲ್ಲ. ವಿಧಿಯಿಲ್ಲದೆ ಆಸ್ಪತ್ರೆಗೆ ಸೇರಿಸಿದ್ದಾಗಿದೆ. ದೇವರಾದರೂ ಪ್ರತ್ಯಕ್ಷವಾಗಬಹುದೇನೋ, ಡಾಕ್ಟರ ಮುಖವಂತೂ ಎರಡು ದಿನದಿಂದಲೂ ಕಂಡಿರಲಿಲ್ಲ. ರಜೆಯ ಮೇಲಿದ್ದಾರಂತೆ. ಇರುವ ಇನ್ನೊಬ್ಬ ಡಾಕ್ಟರಿಗೆ ಪುರಸೊತ್ತೇ ಇಲ್ಲ. ಲೇಬರ್‌ ವಾರ್ಡಿಗಷ್ಟೇ ಹೋಗುತ್ತಿದ್ದಾರೆ. ಮಿಕ್ಕ ಕಾರುಬಾರೆಲ್ಲಾ ದಾದಿಯರದೇ. ಯಾವಾಗಲೋ ಇಣುಕಿ ಹೋಗುವ ಈ ದಾದಿಯರು ಬಂದು ನೋಡಿದಂತೆ ಮಾಡಿ ಹೋಗುತ್ತಿದ್ದಾರೆಯೇ ವಿನಃ ಯಾವ ವಿವರವನ್ನೂ ಹೇಳುತ್ತಿಲ್ಲ. ಮಗುವಿಗೆ ಹೊಟ್ಟೆಯಲ್ಲೇ ಏನಾದರೂ ಆಗಿಬಿಟ್ಟರೆ ಎನ್ನುವ ಆತಂಕ ಸಾವಿತ್ರಿಗೆ. ಏನಾದರೂ ಹೆಚ್ಚು ಕಡಿಮೆಯಾದರೆ ಬೀಗಿತ್ತಿ ತನ್ನನ್ನು ಸಂತೆಯಲ್ಲಿಟ್ಟು ಹರಾಜು ಹಾಕಿಬಿಡುತ್ತಾಳೆ ಎನ್ನುವ ಭಯದಲ್ಲಿ ವಾರ್ಡಿನಲ್ಲಿ ಓಡಾಡುತ್ತಿದ್ದ ದಾದಿಯರನ್ನೆಲ್ಲಾ ವಿಚಾರಿಸುತ್ತಿದ್ದರೂ ಇವಳಿಗಿರುವ ಆತಂಕ ಅವರಿಗೇಕೆ?! ʻಇನ್ನೂ ತಡ ಆಗ್ಬಹುದು, ಡಾಕ್ಟರು ಬಂದು ನೋಡಿ ಹೇಳ್ತಾರೆʼ ಎನ್ನುತ್ತಾ ಇವಳ ಮುಖವನ್ನೂ ನೇರವಾಗಿ ನೋಡದೆ ಮರದ ಬೊಂಬೆಗಳಂತೆ ಓಡಾಡುತ್ತಿದ್ದಾರೆ. ಇವಳ ನಂತರ ಬಂದು ಅಕ್ಕ ಪಕ್ಕದ ಹಾಸಿಗೆಯಲ್ಲಿ ಮಲಗಿದವರಿಗೂ ಹೆರಿಗೆಗಳಾಗಿ ಒಂದಿಬ್ಬರು ಮನೆಗೂ ಹೋಗಿಯಾಗಿದೆ. ಇಂದು ಬೆಳಗ್ಗೆ ಪಕ್ಕದ ಬೆಡ್ಡಿಗೆ ಆಯನೂರಿನ ಕಡೆಯ ರೈತ ದಂಪತಿಗಳು ತಮ್ಮ ಮಗಳು ಮಾದೇವಿಯನ್ನು ಸೇರಿಸಿದ್ದಾರೆ. ಅವಳದ್ದೂ ಚೊಚ್ಚಲ ಹೆರಿಗೆಯೇ. ದಿನವಾಗಿದೆ, ನೋವು ಶುರುವಾಗಿಲ್ಲ; ಇಬ್ಬರೂ ಕೂತು ಒಂದಷ್ಟು ಕಷ್ಟ ಸುಖ ಹಂಚಿಕೊಂಡಿದ್ದಾಯಿತು. ಅಂತೂ ಇಂತೂ ರಜೆಯಿಂದ ವಾಪಸ್ಸು ಬಂದ ಡಾಕ್ಟರು ಮಧ್ಯಾಹ್ನ ಎರಡು ಗಂಟೆಗೆ ಊಟ ಮುಗಿಸಿ ಆರಾಮದಲ್ಲಿ ಬಂದು ಕೇಸ್‌ ಶೀಟನ್ನು ನೋಡಿ ಮೊನ್ನೆ ಬೆಳಗ್ಗೆಯಿಂದ ನೋವು ಬರುತ್ತಿದ್ದರೂ ಯಾಕೆ ಹೆರಿಗೆಯಾಗಿಲ್ಲ ಎನ್ನುವ ಸಂಶಯದಲ್ಲಿ ಕೇಸ್‌ ಶೀಟನ್ನು ಬರೆದ ದಾದಿಯನ್ನು ಕೇಳೋಣವೆಂದರೆ ಅವಳು ನಾಪತ್ತೆ. ಪರೀಕ್ಷಿಸಿದವರೇ ಸ್ವಲ್ಪ ಆತಂಕದಿಂದಲೇ ಪಕ್ಕದಲ್ಲಿದ್ದ ದಾದಿಗೆ ಕೂಡಲೇ ಲೇಬರ್‌ ವಾರ್ಡಿಗೆ ಶಿಫ್ಟ್‌ ಮಾಡಲು ಹೇಳಿ ಸಾವಿತ್ರಿಯ ಕಡೆ ತಿರುಗಿ ಕೂಡಾ ನೋಡದೆ ಹೊರಟುಹೋದರು. ಅವರು ಹೋದ ರೀತಿಯಿಂದಲೇ ಅವಳಿಗೆ ಆತಂಕ ಶುರುವಾಯಿತು. ಹಿಡಿದು ನಿಲ್ಲಿಸಿ ಕೇಳಲು ಅವಳಿಂದ ಸಾಧ್ಯವೇ! ಮಗಳ ಹಿಂದೆಯೇ ಲೇಬರ್‌ ವಾರ್ಡಿನ ತನಕ ಹಿಂಬಾಲಿಸಿ, ಅವಳ ಮುಖಕ್ಕೇ ಬಾಗಿಲು ಹಾಕಿ ಒಳಸೇರಿದ ಮೇಲೆ ಕಾಯುವುದು ಬಿಟ್ಟು ಬೇರೆ ದಾರಿಯಿಲ್ಲದೆ ಮುಚ್ಚಿದ ಬಾಗಿಲನ್ನೇ ನೋಡುತ್ತಾ ಕಾರಿಡಾರಿನಲ್ಲೇ ನಿಂತಳು. ಕಾಯುತ್ತಾ ನಿಂತವಳಿಗೆ ನಿಮಿಷಗಳು ಗಂಟೆಗಳಾಗುತ್ತಿವೆ. ಎಷ್ಟೋ ಹೊತ್ತಿನ ಮೇಲೆ ಹೊರಬಂದ ದಾದಿ ಒಂದು ಹಾಳೆಯನ್ನು ತಂದು ಅದರ ಮೇಲೆ ಸಹಿಹಾಕುವಂತೆ ಸಾವಿತ್ರಿಯ ಮುಖಕ್ಕೆ ಹಿಡಿದಳು. ಭಯದಿಂದಲೇ “ಏನಾಗಿದ್ಯಮ್ಮಾ? ಹೇಗಿದಾಳೆ ಮಗಳು” ಎಂದರೆ ಆ ದಾದಿಗೆ ಇಂತವರೆಷ್ಟೋ… “ಸರೀಗೆ ಗೊತ್ತಿಲ್ಲ, ಆಪರೇಶನ್‌ ಮಾಡ್ಬೇಕಾಗ್ಬೋದು ಅಂತಿದ್ರು ಡಾಕ್ಟ್ರು. ನೀನಿಲ್ಲಿ ರುಜು ಹಾಕಮ್ಮ” ಎನ್ನುತ್ತಾ ಪೆನ್ನನ್ನು ಕೊಟ್ಟಳು. “ಯಾಕಿದು? ನಂಗೆ ರುಜು ಹಾಕಕ್ಕೆ ಬರಲ್ಲ, ಬರೀ ಹೆಸರು ಬರೆಯಕ್ಕೆ ಬರತ್ತೆ” ಅಂದಳು ಸಾವಿತ್ರಿ. “ಅದನ್ನೇ ಬರಿ. ಆಪರೇಶನ್‌ ಮಾಡಕ್ಕೆ ಒಪ್ಗೆ ಇದೆ ಅಂತ ಬರ‍್ದಿದೆ ಇದ್ರಲ್ಲಿ” ಎನ್ನುತ್ತಾ ನಿರ್ಲಿಪ್ತಳಾಗಿ ಆ ಹಾಳೆಯನ್ನು ತೆಗೆದುಕೊಂಡು ಒಳಹೋದಳು. ಇತ್ತ ಸಾವಿತ್ರಿಗೆ ಇನ್ನಷ್ಟು ಹೆದರಿಕೆ, ಚಿಂತೆ ಶುರುವಾಗಿ ಕೈಕಾಲು ನಡುಗತೊಡಗಿತು. ಎಷ್ಟೋ ಹೊತ್ತಾಯಿತು… ಕಾದು ಕಾದು ಕಣ್ಣು ಸೋಲುವಾಗ ಮಗುವನ್ನೆತ್ತಿಕೊಂಡು ಹೊರಬಂದ ದಾದಿ “ಗಂಡು ಮಗು. ಐವತ್ರೂಪಾಯ್ ತತ್ತಾ, ತೋರಿಸ್ತೀನಿ” ಕೈಚಾಚಿದಳು. ಅರ್ಥವಾಗದೆ ಕಣ್ಕಣ್ಣು ಬಿಟ್ಟ ಸಾವಿತ್ರಿಯ ಸೀರೆಯ ಗಂಟಿನಲ್ಲಿಟ್ಟುಕೊಂಡಿದ್ದ ಐದು, ಹತ್ತು ರೂಪಾಯಿಗಳನ್ನು ಸೇರಿಸಿದರೆ ಬರೀ ನಲವತ್ತು ರೂಪಾಯಿ ಆಯಿತು. “ಏನು ದರ್ವೇಸಿಗಳೋ. ಹೆರಿಗೆಗೆ ಅಂತ ಬಂದವ್ರಿಗೆ ಒಂದಿಷ್ಟು ದುಡ್ಡಿಟ್ಕಂಡು ಬರಕ್ಕೆ ಗೊತ್ತಾಗಲ್ವಾ. ಏನು ಅಪ್ಪನ ಮನೆ, ಈಗ ಡಾಕ್ಟ್ರಿಗೆ ಐನೂರು ರೂಪಾಯಾದ್ರೂ ಕೊಡ್ಬೇಕು, ಆಪ್ರೇಶನ್‌ ಕೇಸ್‌ ಬೇರೆ. ಅಲ್ಲಿ ಓಟಿನಲ್ಲಿ ಇದ್ದವ್ರಿಗೆಲ್ಲಾ ಇಪ್ಪತ್ತು, ಮೂವತ್ತು ಕೊಡ್ಬೇಕು. ಅದ್ಹೆಂಗೆ ಮಾಡ್ತೀಯೋ ನೋಡು. ಸರಿ, ಈಗ ನಂಗೆ ನಲ್ವತ್ತನ್ನೇ ಕೊಡು ಹೋಗ್ಲಿ. ಮಿಕ್ಕವ್ರಿಗೆ ಕೊಡಕ್ಕೆ ಎಲ್ಲಾದ್ರೂ ಹೋಗಿ ದುಡ್ಡು ತಗೊಂಡು ಬಂದ್ಬಿಡು. ಆಯಾನೂ ಸೇರಿ ಇನ್ನೂ ಮೂರು ಜನ ಇದಾರೆ” ಎನ್ನುತ್ತಾ ದುಡ್ಡು ತೆಗೆದುಕೊಂಡು ಮಗುವಿನ ಮುಖವನ್ನು ತೋರಿಸಿದಳು. ಮೊಮ್ಮಗುವಿನ ಮುಖ ನೋಡಿದ ತಕ್ಷಣ ಎಲ್ಲಾ ಮರೆತ ಸಾವಿತ್ರಿಯ ಮುಖವರಳಿತು. ಎತ್ತಿಕೊಳ್ಳಲು ಕೈಚಾಚಿದರೆ ಮುಟ್ಟಕ್ಕೂ ಬಿಡದೆ “ದುಡ್ಡು ತೊಗೊಂಡು ಬಾ ಅಂದ್ನಲ್ಲಾ” ಎನ್ನುತ್ತಾ ಒಳಹೊರಟಳು. “ಅಮ್ಮಾ… ಮಗಳು ಹೇಗಿದಾಳಮ್ಮಾ?” ಕರೆದು ಕೇಳಿದಳು. “ಹುಷಾರಾಗಿದಾಳೆ. ಅವ್ಳಿಗೆ ಕೊಡಕ್ಕೆ ಗಂಜೀನೋ, ಕಾಫೀನೋ ತೊಗೊಂಡ್ಬಾ. ಇನ್ನೊಂದು ಗಂಟೇಲಿ ಬೆಡ್ಡಿಗೆ ಹಾಕ್ತಾರೆ” ಎಂದವಳು ಮುಂದಿನ ಮಾತಿಗೆ ಅವಕಾಶವಿಲ್ಲದ ಹಾಗೆ ಒಳಹೋಗಿ ಬಾಗಿಲೆಳೆದುಕೊಂಡಳು. ಏನು ಮಾಡಬೇಕೆಂದು ತೋಚದೆ ಯೋಚಿಸುತ್ತಾ ಐದು ನಿಮಿಷ ಸುಮ್ಮನೆ ಅಲ್ಲಿದ್ದ ಬೆಂಚಿನ ಮೇಲೆ ಕುಳಿತಳು. ʻಬೆಳಗ್ಗೆ ತಂದಿದ್ದ ಗಂಜಿ ಹಳಸಿ ವಾಸನೆ ಬಂದಿದೆ, ಬಾಣಂತಿಗೆ ಅದನ್ನು ಕೊಡಲು ಸಾಧ್ಯವೇ ಇಲ್ಲ. ನಡೆದುಕೊಂಡು, ಮನೆಗೆ ಹೋಗಿ, ಗಂಜಿ ಮಾಡಿಕೊಂಡು ತರಲು ಕಡೇ ಪಕ್ಷ ಎರಡು ಗಂಟೆಯಾದರೂ ಬೇಕು. ಅಷ್ಟರೊಳಗೆ ಬೆಡ್‌ಗೆ ಹಾಕಿಬಿಟ್ಟರೆ! ಅವ್ಳು ಬರೋ ಹೊತ್ತಿಗೆ ನಾನಿಲ್ದೇ ಹೋದ್ರೆ! ಪಾಪ, ಜಯ ಹೊಟ್ಟೆಗೇನಾದರೂ ಹಾಕಿಕೊಂಡು ಎರಡು ದಿನವೇ ಆಗಿದೆ. ʻಹಡ್ದ ಹೊಟ್ಟೆಗೆ ಹೇಲು ತಿನ್ನೋಷ್ಟು ಹಸ್ವುʼ ಅಂತಾರೆ. ಮೊದ್ಲು ಅವ್ಳಿಗೆ ಗಂಜಿ ತಂದುಕೊಡ್ಬೇಕಲ್ಲʼ ಎಂದುಕೊಳ್ಳುತ್ತಿರುವಾಗ, ದಿನವೂ ಅಡುಗೆ ಕೆಲಸಕ್ಕೆ ಹೋಗುತ್ತಿರುವ ಪದ್ದಮ್ಮನ ಮನೆ ಇಲ್ಲಿಗೆ ಹತ್ತು ನಿಮಿಷದ ದಾರಿ. ಹೋಗಿ ವಿಷಯ ಹೇಳಿ ಅಲ್ಲೇ ಒಂದು ಲೋಟ ಗಂಜಿ ಮಾಡಿಕೊಂಡು, ಸ್ವಲ್ಪ ದುಡ್ಡನ್ನೂ ಕೇಳಿ ತೆಗೆದುಕೊಂಡು ಬರಬಹುದೇನೋ ಅನ್ನಿಸಿತು. ʻಅದೇ ಸರಿʼ ಅನ್ನಿಸಿ ಇನ್ನು ತಡಮಾಡದೆ ಸರಸರನೆ ಪದ್ದಮ್ಮನ ಮನೆಕಡೆ ಹೆಜ್ಜೆ ಹಾಕಿದಳು. ಇವಳದೃಷ್ಟಕ್ಕೆ ಪದ್ದಮ್ಮ, ಡೆಲ್ಲಿಯಿಂದ ಬಂದಿದ್ದ ಅವರ ನಾದಿನಿ ಸೀತಮ್ಮನೊಂದಿಗೆ ಬೆಳಗ್ಗೆಯೇ ಯಾರದೋ ಮನೆಗೆ ಊಟಕ್ಕೆ ಹೋಗಿದ್ದರಂತೆ, ಇನ್ನೂ ಬಂದಿರಲಿಲ್ಲ. ಅಲ್ಲಿ ಸುತ್ತುಕೆಲಸಕ್ಕಿದ್ದ ನಟರಾಜ ಹಾಗಂದ. ನಟರಾಜನ ಹತ್ತಿರ ಎಲ್ಲವನ್ನೂ ಹೇಳಿ, “ಒಂದು ಲೋಟ ಗಂಜಿ ಮಾಡ್ಕಂಡು ಹೋಗ್ತಿನಿ. ಪದ್ದಮ್ಮ ಬಂದ್ಮೇಲೆ ಹಿಂಗಾಯ್ತು ಅಂತ್ಹೇಳ್ಬಿಡೋ. ದುಡ್ಡಿಗೇನ್ಮಾಡೋದೋ” ಎಂದು ಹೇಳುತ್ತಲೇ ಒಲೆಹೊತ್ತಿಸಿ ಗಂಜಿಯನ್ನು ಕಾಸಿಕೊಂಡು ತನ್ನೊಂದಿಗೆ ತಂದಿದ್ದ ಟಿಫಿನ್‌ ಕ್ಯಾರಿಯರನ್ನು ತೊಳೆದು ಅದರಲ್ಲಿ ಗಂಜಿಯನ್ನು, ಕಾಸಿದ ನೀರನ್ನು ತಿರುಪಿನ ಚಂಬಿನಲ್ಲೂ ತುಂಬಿಕೊಂಡಳು. ಹೊರಗೆ ಪದ್ದಮ್ಮನ ಮಾತು ಕೇಳಿಸಿತು. ʻಸಧ್ಯ! ಬಂದ್ರಲ್ಲ, ದುಡ್ನೂ ಕೇಳಬಹುದುʼ ಅನ್ನಿಸಿ ಸ್ವಲ್ಪ ನಿರಾಳವಾಯಿತು. ನಟರಾಜ ಹೊರಗೆ ಹೇಳಿದನೇನೋ, “ಹೌದಾ, ಎಂಥಾ ಮಗ್ವಾಯ್ತೇ, ಮಗೂ, ಬಾಣಂತಿ ಚೆನ್ನಾಗಿದಾರೇನೇ” ಎಂದು ಕೇಳುತ್ತಾ ಪದ್ದಮ್ಮ ಅಡುಗೆಮನೆಗೇ ಬಂದಳು. ಹಿಂದೆಯೇ ಕಾಳಿಯಂತೆ ಬಂದ ಸೀತಮ್ಮ “ನಿಂಗ್ಯಾರೆ ಇಷ್ಟು ಪಾರುಪತ್ಯ ಕೊಟ್ಟೋರು? ಏನು, ನಿನ್ನ ಮನಿ ಅನ್ನೋಂಗೆ ಬಂದು ಇಲ್ಲಿ ಗಂಜಿ ಕಾಯಿಸ್ಕತಿದೀಯಲ್ಲ. ಅದೆಷ್ಟು ಸ್ವತಂತ್ರ ನಿಂಗೆ” ಎನ್ನುತ್ತಾ ಸಾವಿತ್ರಿಯ ಮೇಲೆ ವಡವಡ ಬೈಗಳ ಪ್ರಹಾರವನ್ನೇ ಶುರುಮಾಡಿದಳು. ಜೊತೆಗೆ ವಯಸ್ಸಿನಲ್ಲಿ ತನಗಿಂತ ಚಿಕ್ಕವಳಾಗಿದ್ದ ಅತ್ತಿಗೆಯನ್ನೂ ಅಟಕಾಯಿಸಿಕೊಂಡು “ಏನ್ ಪದ್ದಾ, ಕೆಲಸದವ್ರಿಗೆ ಇಷ್ಟು ಸದ್ರ ಕೊಟ್ಟಿದೀಯಾ. ನೀನ್ ಮನೇಲಿ ಇಲ್ದಿರೋವಾಗ ಹಾಯಾಗ್ಬಂದು ಯಾರೇನು ಬೇಕಾರೂ ಮಾಡ್ಕಂಡು ಹೋಗ್ಬೋದಾ? ನಿಂಗೂ ಬುದ್ಧಿ ಇಲ್ಲ, ನಿನ್ಗಂಡಂಗೂ ಇಲ್ಲ. ಮನೇವ್ರಿಲ್ದಿದ್ದಾಗ ಹೇಳ್ದೆ, ಕೇಳ್ದೆ ಮನೇ ಸಾಮಾನು, ಸರಂಜಾಮು ಮುಟ್ಟೂದೂಂದ್ರೇನು? ಇಬ್ರೂ ಕೂಲಿಯವ್ರನ್ನ ತಲೆ ಮೇಲೆ ಕೂರಿಸ್ಕಂತೀರಿ. ಯಾರ‍್ಯಾರನ್ನ ಎಲ್ಲಿಟ್ಟಿರ‍್ಬೇಕೋ ಅಲ್ಲೇ ಇಟ್ಟಿರ‍್ಬೆಕು. ಇದು ತೀರಾ ಅತ್ಯಾಯ್ತು” ಇಬ್ಬರನ್ನೂ ವಾಚಾಮಗೋಚರ ಬೈಯುತ್ತಾ ನಿಂತಳು. ಪದ್ದಮ್ಮ ಸ್ವಭಾವತಃ ಸರಳ ಮನಸ್ಸಿನವಳು. ಅಪರೂಪಕ್ಕೆ ಡೆಲ್ಲಿಯಿಂದ ಬಂದಿರುವ ನಾದಿನಿಯನ್ನು ಬಿಟ್ಟುಕೊಡಲಾರಳು, ಇತ್ತ ದಿನವೂ ಅಡುಗೆಗೆ ಬರುವ ಸಾವಿತ್ರಿಯನ್ನೂ ಏನೂ ಅನ್ನಲಾರಳು. ಅವಳೂ ಪೆಚ್ಚಾಗಿ ನಿಂತಳು. ಸಾವಿತ್ರಿಗಂತೂ ಎರಡು ದಿನದಿಂದ ಕಟ್ಟಿಕೊಂಡಿದ್ದ ಭಯ, ಆತಂಕ, ದುಃಖ ಎಲ್ಲವೂ ಒಟ್ಟಿಗೆ ನುಗ್ಗಿ ಕಣ್ಣಲ್ಲಿ ನೀರಾಡತೊಡಗಿತು. ಇದು ಇಷ್ಟೊಂದು ದೊಡ್ಡ ಪ್ರಮಾದವಾಗಬಹುದೆಂಬ ಅರಿವಿದ್ದರೆ ಅವಳು ತಡವಾದರೂ ಮನೆಗೇ ಹೋಗಿ ಬಂದುಬಿಡುತ್ತಿದ್ದಳೇನೋ… ಈಗೇನು ಮಾಡಲೂ ತೋಚದೆ ಎರಡು ನಿಮಿಷ ತಲೆಕೆಳಗೆ ಹಾಕಿ ಮೌನವಾಗಿ ನಿಂತಳು. ಸೀತಮ್ಮನ ಕೋಪ ಇನ್ನೂ ಇಳಿದಿರಲಿಲ್ಲ, “ಮಾಡೋದ್ ಮಾಡಿ ಹೇಗ್ ನಿಂತಿದೀಯ ನೋಡು, ಏನೂ ಗೊತ್ತಿಲ್ದೇ ಇರೋವ್ರ ಥರ, ಎಲ್ಲಿ ಹೇಗಿರ‍್ಬೇಕೋ ಅದ್ನ ಮದ್ಲು ಕಲ್ತ್ಕಾ. ನೀನಾದ್ರೂ ಪದ್ದಾ, ಈ ಥರ ಸದರ ಕೊಟ್ಯೋ ಒಳ್ಳೇದಲ್ಲ ತಿಳ್ಕಾ. ಅಮ್ಮಾ ಇರ‍್ಬೇಕಿತ್ತು, ಗೊತ್ತಾಗ್ತಿತ್ತು. ಅವ್ಳು ಅಷ್ಟು ಜತನ್ವಾಗಿ ನೋಡ್ಕಂಡಿದ್‌ ಮನೇನ ನೀನು ಗುಡಿಸಿಬಿಡ್ತಿದೀಯ…. ಈ ಮನೇಲಿ ಹೆಣ್ಮಕ್ಳಿಗೂ ಇಲ್ದಿರೋ ಗೌರವ ಕೂಲಿಯಾಳುಗಳ್ಗಿದೆ” ನಿಲ್ಲುತ್ತಲೇ ಇಲ್ಲ ಬೈಗಳ ಮಳೆ. ಇನ್ನೂ ಏನೇನು ಅನ್ನುತ್ತಿದ್ದಳೋ, ಅಷ್ಟರಲ್ಲಿ ಬಚ್ಚಲಿಗೆ ಹೋಗಬೇಕೆನ್ನಿಸಿತೇನೋ ಬೈದುಕೊಂಡೇ ಹಿತ್ತಲಿಗೆ ಹೋದಳು. ತಕ್ಷಣವೇ ಪದ್ದಮ್ಮ “ಅವ್ಳು ಬರೋದ್ರೊಳ್ಗೆ ಇದ್ನ ತಗಂಡು ಈಗ್ಲೇ ಜಾಗ ಖಾಲಿ ಮಾಡೆ” ಎಂದು ಸಾವಿತ್ರಿಯನ್ನು ಹೆಚ್ಚುಕಡಿಮೆ ಓಡಿಸಿದಳು. ಸಾವಿತ್ರಿಗೆ ದುಡ್ಡು ಕೇಳಲು ಅವಕಾಶವಾಗಲೇ ಇಲ್ಲ. ದಾರಿಯುದ್ದಕ್ಕೂ ಕಣ್ಣೀರಿಡುತ್ತಲೇ ʻಇಷ್ಟೊತ್ತಿಗೆ ವಾರ್ಡಿಗೆ ಹಾಕೇಬಿಟ್ಟಿರ‍್ತಾರೇನೋʼ ಎನ್ನುವ ಅತಂಕದಲ್ಲೇ ಆಸ್ಪತ್ರೆಯನ್ನು ಸೇರಿದಳು. ಅವಳಂದುಕೊಂಡ ಹಾಗೇ ಜಯಲಕ್ಷ್ಮಿಯನ್ನು ವಾರ್ಡಿಗೆ ಹಾಕಿದ್ದರು. ಮಗುವನ್ನಿನ್ನೂ ಕರೆತಂದಿರಲಿಲ್ಲ. ತುಂಬಾ ಸುಸ್ತಾಗಿದ್ದವಳನ್ನು ನೋಡಿದ ಸಾವಿತ್ರಿಗೆ ದುಃಖ ಇಮ್ಮಡಿಸಿತು. ಗಂಜಿಯನ್ನು ಟೇಬಲ್ಲಿನ ಮೇಲಿಟ್ಟು, ಜಯಳ ತಲೆಯನ್ನು ಸವರಿ “ಹೇಗಿದೀಯೆ” ಅನ್ನುವಷ್ಟರಲ್ಲಿ ಬಂದ ನರ್ಸನ್ನು “ಮಗುವೆಲ್ಲಿ?” ಎಂದು ಕೇಳಿದಳು. “ಮಿಕ್ಕವ್ರಿಗೆ ದುಡ್ಕೊಟ್ಮೇಲೆ ಸ್ನಾನ ಮಾಡ್ಸಿ ತಂಕೊಡ್ತಾರೆ, ಅಲ್ಲೇ ಲೇಬರ್‌ ವಾರ್ಡಲ್ಲೇ ಅಳ್ತಾ ಇದೆ” ಎಂದು ಗಂಜಿಯನ್ನು ಕೊಡಲೂ ಬಿಡದೆ “ಡಾಕ್ಟ್ರು ಕರೀತಿದಾರೆ, ಬಾಯಿಲ್ಲಿ” ಎಂದು ಹೆಚ್ಚುಕಡಿಮೆ ಎಳೆದುಕೊಂಡಂತೇ ಹೋದಳು. ರಿಜಿಸ್ಟರಿನಲ್ಲಿ ಏನೋ ಬರೆಯುತ್ತಿದ್ದ ಡಾಕ್ಟ್ರಮ್ಮ ತಲೆಯೆತ್ತಿ “ನೀವೇ ಏನ್ರಿ ಜಯಲಕ್ಷ್ಮಿ ಕಡೇವ್ರು” ಎಂದರು ಉರಿಯುವ ಮುಖದಲ್ಲಿ “ಹೌದು ಡಾಕ್ಟ್ರೇ, ನಾನವಳ ತಾಯಿ” ಅಂದಳು ಸಾವಿತ್ರಿ. “ಅಲ್ರೀ, ಡೆಲಿವರಿ ಆಗ್ತಿದ್ದಂಗೆ ಕಣ್ತಪ್ಸಿ ಓಡೇಬಿಡೋದಾ. ಮಗು ಮಾಲೆ ಹಾಕ್ಕೊಂಡ್ಬಿಟ್ಟಿತ್ತು. ಇನ್ನು ಹತ್ನಿಮಿಷ ತಡ್ವಾಗಿದ್ರೆ ಉಸಿರುಕಟ್ಟಿ ಸತ್ತೋಗಿರೋದು. ಆಪರೇಶನ್‌ ಮಾಡಿ ಇಬ್ರ ಜೀವಾನೂ ಉಳ್ಸಿದೀವಿ. ಅಂತಾದ್ರಲ್ಲಿ ನಿಮ್ಗೆ ಸ್ವಲ್ಪಾನೂ ಕೃತಜ್ಞತೆ ಅನ್ನೋದಿಲ್ವಾ. ಪ್ರೈವೇಟ್‌ ಆಸ್ಪತ್ರೆಗೋಗಿದ್ರೆ ಐವತ್ತು-ಅರವತ್ತು ಸಾವಿರ ಆಗಿರೋದು, ಹೋಗ್ಲಿ, ನನ್ನ ಫೀಸು ಸಾವಿರ ರೂಪಾಯಿ ಕೊಡಿ” ಎಂದರು ವ್ಯಾಪಾರಸ್ತರ ಧೋರಣೆಯಲ್ಲಿ. ಕೈಮುಗಿದು ಬಿಟ್ಟಳು ಸಾವಿತ್ರಿ. “ಇದು ಗೌರ್ಮೆಂಟ್‌ ಆಸ್ಪತ್ರೆ,

ಒಂದು ಲೋಟ ಗಂಜಿ Read Post »

ಇತರೆ, ವಾರ್ಷಿಕ ವಿಶೇಷ

ಡಾ.ಕಾತ್ಯಾಯಿನಿ ಕುಂಜಿಬೆಟ್ಟುಕವಿತೆಗಳು

ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಕವಿತೆಗಳು ಏಕಾಂತ ನೇಸರ ಮೋಡಗಳ ಹಾಸಿಗೆಯಿಂದ ಎದ್ದುಮೈಮುರಿಯುತ್ತಆಕಾಶದಗಲಕ್ಕೆ ಬಾಯಿ ಆಕಳಿಸುತ್ತಬೆಳಕು ಮೈಯಲ್ಲಿ ನಿಲ್ಲುತ್ತಾನೆತುಂಬಿದ ಬೆಳಕಿನ ಅಕ್ಷಯ ಕೊಡಅವನ ಕಾಯಬೆಳಕು ಹರಿಸುತ್ತಲೇ ಇರುತ್ತಾನೆಸಂಜೆಯವರೆಗೂ…ಮಾತಿಲ್ಲಬರೀ ಮೌನ! ಹೂವುಗಳು ಅರಳುತ್ತವೆಕೆಂಪು ನೀಲಿ ಹಳದಿತುಟಿ ಎಸಳುಗಳಲ್ಲಿ ಬೆಳಕು ಹೀರುತ್ತಮೌನವಾಗಿ ಕಂಪು ಬೀರುತ್ತಜೇನುಗಳು ಮಕರಂಧ ಹೀರಿ ಮಧು ಸಂಗ್ರಹಿಸುತ್ತವೆಮೌನವಾಗಿ ಬೀಜಗಳಲ್ಲಿ ಮೊಳಕೆಯ ತಲೆ ಬೆಳೆದುತೆನೆತೆನೆಗಳಲ್ಲಿ ಹಾಲು ಉಕ್ಕಿಸುತ್ತವೆಇರುವೆಗಳು ಸಾಲು ಸಾಲು ಸರದಿಯಲ್ಲಿಸೂರ್ಯನನ್ನೇ ಹೊತ್ತು ಸಾಗುತ್ತವೆಮೌನವಾಗಿ ಈ ಎರಡು ಕಾಲ ಜೀವಿಗಳಿಗೆ ಮಾತ್ರ ಬರಿದೇಮೂರು ಕಾಲಗಳ ಮಾತು ಮಾತು ಮಾತುಬಾಯಿ ಬ್ರಹ್ಮಾಂಡ!ಎಲ್ಲಿದೆ ಏಕಾಂತ?ಮಾರುದ್ದ ನಾಲಗೆ ಮೈತುಂಬಈ ಮಾತುಗಳ ಸಂತೆಯಲ್ಲಿಓಡಾಡುತ್ತಿವೆ ಒಡಕು ಕೊಡಗಳುಕತ್ತಲನ್ನೇ ಚೆಲ್ಲುತ್ತ! ಕಾಡುವ ಜೀರುಂಡೆಗಳುಜೀರ್ ಜೀರ್ ಜೀರ್ಕರಿಸುವಹರಿತವಾದ ತಂತಿಕೊರಳುಗಳುಕತ್ತಿ ಬಾಯ ಠೇಂಕಾರಓ..ವ್! ಜೀರ್ ಜೀರ್ ಜೀರ್ ಜೀರೋಗುಟ್ಟುತ್ತಚೀತ್ಕಾರವನ್ನೇಓಂಕಾರ ಎಂದುಕೊಳ್ಳುತ್ತಮೈ ಒಡೆದುಜೀವ ರುಂಡದಿಂದ ಬೇರಾಗಿ ಸಾಯುತ್ತವೆ.ಜೀರುಂಡೆ!ಜೀವರುಂಡೆ! ರುಂಡದಲ್ಲೇ ಜೀವ!ಜೀರ್ ಉಂಡೆ! ಜೀರಲ್ಲೇ ಜೀವದುಂಡೆ!ಛೆ! ಇಷ್ಟು ಚಿಕ್ಕ ಜೀವಗಳ ಒಳಗೆಎಲ್ಲಿಟ್ಟುಕೊಂಡಿದ್ದವೋ ಈ ಅಪಸ್ವರ! ಈ ಹಾಂಕಾರ ಹೂಂಕಾರ ಹೇಂಕಾರ!ಕಟ್ಟಕಡೆಗೆ ಅಹಂಕಾರದ ಅಹಂ ಒಡೆದು ಹಾಹಾಕಾರ!ಸಾವಿನ ಗುಮ್ಮನಲ್ಲೇ ಸಾಕ್ಷಾತ್ಕಾರ! ಹೌದು! ಏಕಾಂತದಲ್ಲಿ ನಿದ್ದೆಯಲ್ಲೇ ಮುಳುಗಿ ತೇಲಿಸಾಯಬೇಕು ಒಬ್ಬಳೇ!ಛೆ! ಎಲ್ಲಿ ನೋಡಿದರಲ್ಲಿಎಲುಬಿಲ್ಲದ ಹಾವು ನಾಲಗೆಯ ಹುತ್ತ ಬಾಯಿಗಳು!ಬಾವಿಯೊಳಗೆ ಬಾವಿ ಬಾವಿಯೊಳಗೊಳಗೆ ಬಾವಿ ಬಾವಿಬಾಯಿಯೊಳಗೇ ಹೂತು ಹೋದಕಾಯ ಕೊಡವ ಮೇಲಕ್ಕೆತ್ತುವವರಾರು?…ಚೆನ್ನಪ್ಪ ಚೆನ್ನೇಗೌಡ ಕುಂಬಾರ ಮಾಡಿದ ಕೊಡನವ್ವಾ!ಆ ಕುಂಬಾರ ಈ ಕೊಡಗಳಿಗೆಲ್ಲ ಕಿವಿಯಗಲ ದಳಬಾಯಿ ಇಟ್ಟ! ಹಹ್ಹ! ಮೊದಲು… ನನ್ನ ವಾಚಾಳಿ ಮನಸ್ಸಿನ ಹಳವಂಡದಹಂಡೆ ಬಾಯಿಗೊಂದು ಮುಚ್ಚಳ ಹುಡುಕಬೇಕು!ಮೌನಮುಚ್ಚಳ! ಅಂದುಕೊಂಡಿದ್ದೆ ಇವನುಟೊಂಗೆ ಟೊಂಗೆಗಳಲ್ಲಿ ಮೊಗ್ಗುಗಳಅದುಮಿಟ್ಟುಕೊಂಡ ಮಂದ್ರ ಮಾಮರಕೊರಳೊಳಗೆ ಸ್ವರಗಳನ್ನುಅದುಮಿಟ್ಟುಕೊಂಡ ಕೊಳಲುಅಂದುಕೊಂಡಿದ್ದೆ!ಋತುವಿನ ಕೈಹಿಡಿದಾಗ ಮೈತುಂಬಜೊಂಪೆ ಜೊಂಪೆ ಗೊಂಚಲು ಹೂಬಿಟ್ಟುಕೋಕಿಲದ ಕುಹೂ ಮೊಗೆಮೊಗೆದು ತುಂಬಿಮಿಡಿ ಕಾಯಿ ಹಣ್ಣು ರಸ ಬಾಳುಅಂದುಕೊಂಡೂ ಇದ್ದೆ! ನಾನೋ ಋತು!ಮಿಠಾಯಿ ಲಂಗಧಾವಣಿಕುಪ್ಪಸದಿಂದೆದ್ದ ಗುಲಾಬಿ ಯವ್ವನವುಮದರಂಗಿ ದುಪ್ಪಟ ಹೊದ್ದುಕಪ್ಪು ದ್ರಾಕ್ಷಿ ಕಂಗಳ ಕಣ್ಣಿಂದ ಉದುರಿದನಕ್ಷತ್ರಗಳನ್ನುಕನಸು ಮೈಯ ಜೋಳಿಗೆಯಲ್ಲಿ ತುಂಬಿಎದೆಯ ಬುಲ್ಬುಲ್ ದಿಲ್ತರಂಗವನ್ನುಒಳಗೊಳಗೇ ನುಡಿಸುತ್ತನನ್ನೆದೆಯ ಪುಟಗಳಲ್ಲಿ ಪಿಸುಗುಡುವಪ್ರೇಮಪಾದಗಳಿಗೆ ಗೆಜ್ಜೆಕಟ್ಟುತ್ತ ಮಳೆಬಿಲ್ಲಿನ ಅರ್ಧ ವೃತ್ತದಂತೆ ಮತ್ತೆ ಮತ್ತೆಅವನ ಹಿಂದೆ ಮುಂದೆ ಕುಣಿಯುತ್ತಲೇಬಣ್ಣಗಳ ಮಿಂಚುಗಳ ಮೈಯೊಳಗೇಜುಂಜುಂ ಜುಮುಗುಡುತ್ತಬಿಸಿಲು ಮಳೆಯಲಿ ಕ್ಷಣಗಣನೆ ಮಾಡುತ್ತಬಹುಕಾಲ… ಅಂದುಕೊಂಡಿದ್ದೆ …ಅಂದುಕೊಳ್ಳುತ್ತಲೇ ಇದ್ದೆ ಆದರೆ ಅವನು ಚಲಿಸಲೇ ಇಲ್ಲಸೋತು ಅವನೊಳಗೆ ಒಂದು ದಿನನಾನೇ ಪ್ರವೇಶಿಸಿದೆಪರಕಾಯ ಪ್ರವೇಶವಾಯಿತದುಅರಿತೆ…ಋತು ಋತುಗಳು ನನ್ನೊಳಗೆ ಪ್ರವೇಶಿಸಿಹೊರಹೊರಟರೂಅವನು ಹಾಗೆಯೇಹೂಬಿಡದ ಮಾಮರಉಲಿಯದ ಕೊಳಲುಭುಸುಗುಡುವ ನಾಗರ ಹಾವನ್ನುಎದೆಯೊಳಗೇ ಸುರುಳಿ ಸುತ್ತಿಟ್ಟುಕೊಂಡ ಹುತ್ತಬಿರುಸು ಬಾಣಗಳ ತೊಡದೆ ಬತ್ತಳಿಕೆಯಲ್ಲೇಮುಚ್ಚಿಟ್ಟುಕೊಂಡ ಯೋಧಅರಿತೆ… ಅರಿತವಳೇ ಅವನೊಳಗಿಂದ ಹೊರಬಂದೆನನ್ನೊಳಗಿಂದ ಅವನ ಹೊರದೂಡಿದೆ ಆ ಕ್ಷಣದಿಂದಕಂಗಳ ಬಿಲ್ಲಿನಲ್ಲೇ ಗುರಿಯಿಟ್ಟು ಎಸೆಯುತ್ತಿದ್ದಾನೆಹಿಂದೆ ನಾನಂದುಕೊಂಡಕೋಮಲವಾದ ಹೂವುಗಳನ್ನಲ್ಲಮೈತುಂಬ ಮುತ್ತಿಕ್ಕುತ್ತಿವೆ ಕೆಂಪು ಕೆಂಪು ಕೆಂಡಚೂಪು ತುಟಿಯಲ್ಲಿಕೆಂಡಸಂಪಗೆಯಲ್ಲಮೈ ನಿಗಿನಿಗಿ ಉರಿವ ಬೆಂಕಿಕೊಳ್ಳಿಮನಸ್ಸಿಗೆ ಬೆಂಕಿ ಹಿಡಿಯಿತು ಗಾಳಿಗೆ ತೆರೆದುಕೊಂಡಿತು ಹಾಳೆಯಂತೆ ಮನಬಹುಕಾಲದಿಂದ ಎಡೆಬಿಡದೆ ಬಚ್ಚಿಟ್ಟ ಪ್ರೇಮ ಕವನಗಳುಹತ್ತಿಕೊಂಡು ಧಗಧಗನೆ ಉರಿಉರಿದುಈಗಉಳಿದದ್ದು ಬರೇ ಬೂದಿ ನಾನೀಗಅನಂಗಿ!ನಿರಾತ್ಮ! ನೀರ ಗುಳ್ಳೆ ಬದುಕು ಪಾತ್ರೆಯೊಳಗಿನ ನೀರುನಾನೊಂದು ಹೊಳೆಯುವ ಗುಳ್ಳೆಗುಳ್ಳೆಯಾಗಿಯೇ ಉಳಿಯುವ ಹಾಗಿಲ್ಲಒಡೆದು ನೀರಾಗಲೇಬೇಕು! ಅವನ ನದಿಯಲ್ಲಿಕೋಟಿ ಮಿಲಿಯ ಲೆಕ್ಕವಿಲ್ಲದಷ್ಟುಗುಳ್ಳೆಗಳು ಗುಳುಗುಳು ಹುಟ್ಟಿಒಡೆಒಡೆದು ಒಂದಾಗುತ್ತಲೇ ಇವೆ ಕ್ಷಣಕ್ಷಣವೂನಾನೂ ಹಾಗಾಗಲೇಬೇಕು ಬೇಡವೆಂದರೂ ಬೇಕೆಂದರೂ…ನಶ್ವರವು ಶಾಶ್ವತದಲ್ಲಿ ಒಂದಾಗಲೇಬೇಕು! ನೀರ ಬೊಬ್ಬುಳಿಯಂತೆ ಸ್ಥಿರವಲ್ಲ ಈ ದೇಹಎಂದು ದಾಸರು ಹಾಡಿದ್ದುಹುಟ್ಟಿನ ಜಾತ್ರೆ ಸಾವಿನ ಯಾತ್ರೆಗಳನ್ನು ನೋಡಿಯೇಅವರ ಯಾತ್ರೆಯೂ ಮುಗಿದಾಗಿದೆ! ನನ್ನ ಉಸಿರು ಒಡೆದುಲೀನವಾಗಲಿ ಆ ಗಾಳಿಯಲಿಅಂದು ನನಗೆ ಸಾವುನಿನಗೆ ಬದುಕು ನಿನ್ನ ಸಾವಲ್ಲಿ ನಾನೂ ಸಾಯುತ್ತೇನೆ ನಿನಗೆ!ನಿನ್ನ ಬದುಕಲ್ಲಿ ನಾನೂ ಬದುಕುತ್ತೇನೆ ನನಗೆ!ನಾನು ಬದುಕಿರುವಾಗ ನನಗಿರುತ್ತಾನೆ ನನ್ನ ದೇವರು!ನನ್ನ ಸತ್ತಾಗ ನನ್ನೊಡನೇ ಸಾಯುತ್ತಾನೆ ನನ್ನ ದೇವರು!ಏಕಕಾಲದಲ್ಲೇ… ಬದುಕಿ ಉಳಿದವರಿಗೆಅವನೂ ಬದುಕಿರುತ್ತಾನೆಅವರು ಸತ್ತಾಗ ಅವರಿಗೆ ಇಲ್ಲವಾಗುತ್ತಾನೆನಾನು ಹುಟ್ಟುವಾಗ ಹೊತ್ತು ತರುವುದು ಅವನನ್ನು ಮಾತ್ರ!ಸಾಯುವಾಗ ಕೊಂಡೊಯ್ಯುವುದೂ ಅವನನ್ನು ಮಾತ್ರ! ಬದುಕು ಪಾತ್ರೆಯ ನೀರಲ್ಲಿಹೊಳೆಯುವ ಗುಳ್ಳೆಸೂರ್ಯ ನೆತ್ತಿಗೇರುತ್ತಬೆಳಕು ಬಿಸಿಲಾಗಿ ಬಿಸಿಗೆ ಒಡೆದು ಅಸ್ತಕಡಲ ಪಾತ್ರೆಯೊಳಗೆ ಒಡಲ ಯಾತ್ರೆ! ಕ್ಷಣ ಬಾಳಾದರೂಈ ಗುಳ್ಳೆಗೆ ಹೊಳೆಯುವ ತ್ರಾಣಬಂದುದಾದರೂ ಎಲ್ಲಿಂದ? ನಿನ್ನ ನುಡಿ ನೀನು ನುಡಿಯುವ ಪ್ರತಿಯೊಂದು ಪದವೂನನ್ನ ಇರವನ್ನೇ ಇರಿಯುತ್ತಿದೆಜೀವದ ಕಣಕಣದಲ್ಲುನೆತ್ತರಿನ ಹನಿ ಬಿಕ್ಕುತ್ತಿದೆ ನೀನು ನುಡಿಯುವ ಪ್ರತಿಯೊಂದು ಪದವೂಬೂಟುಪಾದಗಳಾಗಿ ನನ್ನ ತುಳಿಯುತ್ತಿವೆಮಾತು ಮಾತುಗಳೂಲಾಠಿ ಏಟುಗಳಾಗಿ ನನ್ನ ಅಳಿಸುತ್ತಿವೆನಿನ್ನ ದಿಟ್ಟಿಯ ಮೊನಚುಸೂಜಿಸೂಜಿಗಳಾಗಿನನ್ನ ಹೃದಯದ ಕಣ್ಣ ಚುಚ್ಚುತ್ತಿವೆ ನನ್ನ ಆಳಕೆ ನಾನೇ ಇಳಿದುಹುಡುಕುವಾಗ ನನ್ನದೇ ಕರಿಛಾಯೆಕುರಿಯಾಗಿ ಅಣಕಿಸುತ್ತಿದೆನನ್ನದೇ ನನ್ನದಲ್ಲವೇ?ಎಂಬ ಶೋಧದಲ್ಲೇ ಕ್ಷಣಗಳುಕೊಲೆಯಾಗುತ್ತಿವೆ ನೀನು ನನ್ನೆಡೆಗೆ ಬೆಟ್ಟು ತೋರಿದಾಗೆಲ್ಲಬೆಟ್ಟದಿಂದ ಶತಂಪಾತಾಳದಾಳಕ್ಕೆಯಾರೋ ದೂಡಿದಂತಾಗಿಹೊಟ್ಟೆಯಾಳದಲ್ಲಿ ತಳಮಳವಾಗಿಬೆಚ್ಚಿ ಬಿದ್ದಿದ್ದೇನೆಕೊಳದೊಳಗೆ ಕಲ್ಲೆಸೆದಂತೆಮನದ ತಿಳಿಕೊಳ ಕಲಡಿ ಹೋಗಿದೆ ನಿನ್ನ ತಕ್ಕಡಿಯಲ್ಲಿ ಕುಳಿತು ಕುಳಿತುಅವಮಾನಗಳಿಂದ ಮಾನದ ಬೆಲೆ ಕುಸಿದುಹೃದಯ ಭಾರವಾಗಿ ಬಿಟ್ಟಿದೆಅದಕೆ ಸರಿತೂಗುವ ಮಾಪನದ ಅಳತೆಗಲ್ಲುಇಲ್ಲವಾಗಿಬಿಟ್ಟಿದೆತುಳಸಿದಳವೊಂದು ಒಣಗಿಕೃಷ್ಣನ ಪಾದದಲ್ಲಿ ನನ್ನನ್ನೇ ನೋಡುತ್ತಿದೆಒಗ್ಗರಣೆಗೆ ಪರಿಮಳ ತಂದ ಕರಿಬೇವು ಎಲೆಯೊಂದುನಿನ್ನ ತಾತ್ಸಾರಕ್ಕೆತಟ್ಟೆಯ ಪಕ್ಕವೇ ಬಿದ್ದು ನರಳಿದೆಅವನ ನೀಲ ಎದೆಯಲ್ಲಿದ್ದರೂತುಳಸಿದಳವೊಂದುನನ್ನನ್ನೇ ನೋಡುತ್ತ ನಿಟ್ಟುಸಿರಲ್ಲಿಒಣಗುತ್ತಿದೆ! ಅಂತರಂಗದಲ್ಲಿ ಹಂತಕನೊಬ್ಬ ಅಕ್ರಮಮನೆಕಟ್ಟಿಕೊಂಡಿದ್ದಾನೆನನ್ನ ಕತ್ತನ್ನು ನಾನೇ ಕತ್ತರಿಸಿನಿತ್ಯ ಸಾಯುತ್ತಿದ್ದೇನೆಕ್ಷಣ ಕ್ಷಣದ ವಿಲಿವಿಲಿ ಯಾತನೆಯಲ್ಲೇರುಂಡವು ಗಡಿಯಾರವಾಗಿಕಣ್ಣು ಕಿವಿ ಮೂಗು ಮುಳ್ಳುಗಳಾಗಿನಾಲಗೆಯು ನಿನಗೀಗ ತಲೆಯಿಲ್ಲ!ಎಂದು ಕಿರುಚುತ್ತದೆಹೃದಯವು ಆಘಾತದಲ್ಲಿ ರಿಂಗಣಿಸಿದಾಗಧಿಡ್ಕ ಎದ್ದುಮುಂಡದ ಕತ್ತಿಗೆ ಜೋಡಿಸಲುತಲೆಯನ್ನು ಹುಡುಕತೊಡಗುತ್ತೇನೆ! ಹುಡುಕುತ್ತ ಹುಡುಕುತ್ತಲೇ ಸೋತುಇಂದುಜವಳಿ ಅಂಗಡಿಯತಲೆಯಿಲ್ಲದ ಗೊಂಬೆಯ ಬಳಿನಿಂತು ಗೊಂಬೆಯಾಗಿದ್ದೇನೆಹಳೆಯಂಗಿ ಕಳಚಿಹೊಸ ಅಂಗಿ ತೊಡಿಸಲಾಗಿದೆತಲೆಯಿಲ್ಲದ ಅಂಗಿಯೊಳಗೆತಲೆಯಿಲ್ಲದ ಮೈ! ಈಗ ಕಿವಿಯೇ ಇಲ್ಲ ನನಗೆ!ಆದರೂ…ನಿನ್ನ ನುಡಿ ಚೂಪು ಚೂರಿ! **************************************************************

ಡಾ.ಕಾತ್ಯಾಯಿನಿ ಕುಂಜಿಬೆಟ್ಟುಕವಿತೆಗಳು Read Post »

ಇತರೆ, ವಾರ್ಷಿಕ ವಿಶೇಷ

ವಾರ್ಷಿಕೋತ್ಸವದ ವಿಶೇಷ ಲೇಖನವಾರ್ಷಿಕೋತ್ಸವದ ವಿಶೇಷ ಲೇಖನ ಅನುವಾದಕರ ಮುಂದಿರುವ ಸವಾಲುಗಳು ಪಾರ್ವತಿ ಜಿ.ಐತಾಳ್ ಅನುವಾದ ಅಥವಾ ಭಾಷಾಂತರವೆಂದರೆ ಭಾಷೆಯನ್ನು ಬದಲಾಯಿಸುವ ಕ್ರಿಯೆ ಎಂಬುದು ಸಾಮಾನ್ಯರ ಅಭಿಪ್ರಾಯ. ಇದು ಎರಡು ಭಾಷೆಗಳ ನಡುವೆ ಅನುವಾದಕ/ಕಿಯ ಮೂಲಕ ನಡೆಯುವ ಸಂವಹನ. ಇದಕ್ಕೆ ಮುಖ್ಯವಾಗಿ ಬೇಕಾದುದು ಎರಡು ಭಾಷೆಗಳ ಜ್ಞಾನ. ಯಾವ ಭಾಷೆಯಿಂದ ನಾವು ಅನುವಾದ ಮಾಡುತ್ತಿದ್ದೇವೋ ಅದನ್ನು ಮೂಲ ಭಾಷೆಯೆಂದೂ ಯಾವ ಭಾಷೆಗೆ ಮಾಡುತ್ತಿದ್ದೇವೋ ಅದನ್ನು ಉದ್ದಿಷ್ಟ ಭಾಷೆಯೆಂದೂ ಕರೆಯುತ್ತೇವೆ. ಅನುವಾದಕನಿ/ಕಿಗೆ ತನ್ನ ಮಾತೃಭಾಷೆ ಅಥವಾ ಶಿಕ್ಷಣ ಮಾಧ್ಯಮದ ಭಾಷೆ ಚೆನ್ನಾಗಿ ತಿಳಿದಿರುತ್ತದೆ. ನಂತರ ಕಲಿತ ಭಾಷೆಯ ಮೇಲೆ ಅಷ್ಟು ಒಳ್ಳೆಯ ಹಿಡಿತವಿರುವುದಿಲ್ಲ. ಆದ್ದರಿಂದ ಹೆಚ್ಚು ಹಿಡಿತವಿರುವ ಭಾಷೆಯನ್ನು ಉದ್ದಿಷ್ಟ ಭಾಷೆಯಾಗಿ ಆತ ತೆಗೆದುಕೊಳ್ಳುತ್ತಾನೆ. ಅದು ಸೂಕ್ತ ಕೂಡಾ. ಅನುವಾದಕನಿಗೆ ಭಾಷೆ ಮಾತ್ರ ತಿಳಿದಿದ್ದರೆ ಸಾಲದು.ಪ್ರತಿಯೊಂದು ಭಾಷೆಯೊಳಗೆ ಹಾಸು ಹೊಕ್ಕಾಗಿರುವ ಸಂಸ್ಕೃತಿ ಮತ್ತು ಜೀವನಕ್ರಮಗಳ ಬಗ್ಗೆ ಕೂಡಾ ಅರಿವಿರಬೇಕು. ಅದಕ್ಕಾಗಿ ಆ ಭಾಷೆಯನ್ನಾಡುವ ಜನರೊಂದಿಗೆ ಬೆರೆತ ಅನುಭವವೂ ಇರಬೇಕು. ಇವು ಅನುವಾದಕನ ಪ್ರಾಥಮಿಕ ಅಗತ್ಯಗಳು.        ಈ ಪ್ರಾಥಮಿಕ ಅರ್ಹತೆಗಳಿರು ಓರ್ವ ಅನುವಾದಕ/ಕಿ ಕೂಡಾ ಅನುವಾದ ಪ್ರಕ್ರಿಯೆಯಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾನೆ/ಳೆ. ಇವುಗಳನ್ನು ಬಾಹ್ಯ ಸಮಸ್ಯೆಗಳು ಮತ್ತು ಆಂತರಿಕ ಸಮಸ್ಯೆಗಳು ಎಂದು ವಿಂಗಡಿಸ ಬಹುದು. ಭಾಷೆಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಾಹ್ಯ ಸಮಸ್ಯೆಗಳೆಂದೂ ಅನುವಾದಕ/ಕಿ ಮತ್ತು ಮೂಲ ಲೇಖಕ/ಕಿಯರ ವ್ಯಕ್ತಿತ್ವ ಗಳಿಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಆಂತರಿಕ ಸಮಸ್ಯೆಗಳೆಂದೂ ಹೇಳಬಹುದು.     ಭಾಷೆ ಮತ್ತು ಸಂಸ್ಕ್ರತಿಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಸತತ ಅಧ್ಯಯನ-ಅವಲೊಕನ-ಚಿಂತನಗಳ ಮೂಲಕ ನಿವಾರಿಸಿಕೊಳ್ಳ ಬಹುದು. ನಾವು ಒಂದು ಕೃತಿಯನ್ನು   ಅನುವಾದಕ್ಕೆ  ಎತ್ತಿಕೊಂಡಾಗ ಮೂಲಭಾಷೆ ತಿಳಿದಿದ್ದರೂ ಕೆಲವು ಕ್ಲಿಷ್ಟ ಪದಗಳು ಅರ್ಥವಾಗದಿದ್ದಾಗ ಶಬ್ದಕೋಶವನ್ನು ತೆರೆದು ನೋಡುತ್ತೇವೆ. ಆದರೆ ಶಬ್ದ ಕೋಶವು ನಮಗೆ ಅಗತ್ಯವಿರುವ ಎಲ್ಲಾ ಶಬ್ದಗಳ ಅರ್ಥ ಕೊಡುವುದಿಲ್ಲ. ಅಲ್ಲದೆ ಕೆಲವೊಮ್ಮೆ ಅಲ್ಲಿ ಒಂದು ಶಬ್ದಕ್ಕೆ ಎರಡು ಮೂರು ಅಥವಾ ಹೆಚ್ಚು ಅರ್ಥಗಳಿರುತ್ತವೆ. ಆಗ ನಾವು ಮೂಲ ಶಬ್ದಕ್ಕೆ ಸಮನಾಗಿ ನಿಲ್ಲ ಬಲ್ಲ ಪರ್ಯಾಯ ಪದವನ್ನು ಆಯ್ದುಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆಗ ನಾವು ಮೂಲವಾಕ್ಯದ ಸಂದರ್ಭದ ಕುರಿತು   ಚೆನ್ನಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇದು ಸಾಧ್ಯವಾಗುವುದು ಅನುವಾದಕನ ವಿಶೇಷವಾದ ಗ್ರಹಣ ಸಾಮರ್ಥ್ಯದ ಮೂಲಕ ಮಾತ್ರ. ಅದನ್ನು ರೂಢಿಸಿಕೊಳ್ಳದೆ ಇದ್ದರೆ ಅನುವಾದಕ ತನ್ನ ಕೆಲಸದಲ್ಲಿ ವೀಫಲನಾಗುತ್ತಾನೆ.ಉದಾಹರಣೆಗೆ   ಇಂಗ್ಲಿಷ್ ನ ಒಂದು ವಾಕ್ಯ ಹೀಗಿರುತ್ತದೆ ಅಂತಿಟ್ಟುಕೊಳ್ಳಿ :  The novel experience of watching Shakespeare’s play was highly thrilling.. ಇಲ್ಲಿ novel ಅನ್ನುವುದಕ್ಕೆ ಎರಡು ಅರ್ಥಗಳಿವೆ. ಒಂದು ಹೊಸತು ಇನ್ನೊಂದು ಕಾದಂಬರಿ. ಇಲ್ಲಿ ಅರ್ಥದ ಬಗ್ಗೆ ಅನುವಾದಕ ಹೆಚ್ಚು ತಲೆಕೆಡಿಸಿಕೊಳ್ಳದೆ ಕಾದಂಬರಿಯ ಅನುಭವ ಎಂದು ಹೇಳಿದರೆ ಅನರ್ಥವಾಗುತ್ತದೆ. ಅನೇಕ ಅನುವಾದಕ ಇಂಥ ಗೊಂದಲಗಳನ್ನುಂಟು ಮಾಡುವುದಿದೆ. ಇಂಥ ಸಾವಿರಾರು ಉದಾಹರಣೆಗಳನ್ನು ಕೊಡಬಹುದು. ಅದೇ ರೀತಿ ಮೂಲಭಾಷೆಯಲ್ಲಿರುವ ಪದಪುಂಜ ಅಥವಾ phrase ಗಳ ಅರ್ಥ ಕೂಡಾ ಆ ಸಂದರ್ಭದಲ್ಲಿ ಯಾವುದು ಸೂಕ್ತ ಅನ್ನುವುದನ್ನು ಆಲೋಚಿಸುವ ಹೊಣೆ ಅನುವಾದಕ/ಕಿಯದ್ದು. ಕನ್ನಡದಲ್ಲೇ ನೋಡಿ.ಕೈ ಅನ್ನುವ ಶಬ್ದ ಇನ್ನೊಂದು ಶಬ್ದದೊಂದಿಗೆ ಸೇರಿ phrase ಆಗಿ ಯಾವ ರೀತಿ ಅರ್ಥ ಬದಲಾಗುತ್ತ ಹೋಗುತ್ತದೆ ನೋಡಿ. ಕೈಕೊಡು, ಕೈ ಮಾಡು, ,ಕೈಯೆತ್ತು, ಕೈನೀಡು, ಕೈಬಿಡು ಕೈಹಚ್ಚು ಇತ್ಯಾದಿ. ಇನ್ನೊಂದು ಭಾಷೆಯಲ್ಲಿ ಈ ರೀತಿಯ phrase ಗಳು ಇಲ್ಲದಿರಲೂ ಬಹುದು. ಅದು ಅಲ್ಲಿನ ಭಾಷಾ ಬಳಕೆಯ ರೀತಿಯನ್ನು ಅವಲಂಬಿಸಿರುತ್ತದೆ. ಅದೇ ರೀತಿ ಗಾದೆ ಮಾತುಗಳು. ಭಿನ್ನ ಸಂಸ್ಕೃತಿಗಳಲ್ಲಿ ಗಾದೆ ಮಾತುಗಳು ಭಿನ್ನವಾಗಿರುತ್ತವೆ. ಅದು ಅನುವಾದಕನಿ/ಕಿಗೆ ಮೊದಲೇ ತಿಳಿದಿರಬೇಕು.  ಉದ್ದಿಷ್ಟ ಭಾಷೆಯಲ್ಲಿ ಅದೇ ಸಂದರ್ಭದಲ್ಲಿ ಯಾವ ಗಾದೆಮಾತನ್ನು ಬಳಸಬಹುದು, ಯಾವದು ಹೆಚ್ಚು ಸಹಜ ಮತ್ತು ಸೂಕ್ತ ಅನ್ನುವುದರ ಬಗ್ಗೆ ಅನುವಾದಕ/ಕಿ  ಗ್ರಹಿಸುವ ಸಾಮರ್ಥ್ಯವನ್ನು ರೂಪಿಸಿಕೊಳ್ಳಬೇಕು. ಉದಾಹರಣೆಗೆ ಇಂಗ್ಲಿಷ್ ನಲ್ಲಿರುವ ಒಂದು ಗಾದೆ ಮಾತು Make hay while the sun shines ಅಂತ. ಅಂದರೆ ಸೂರ್ಯನ ಬಿಸಿಲು ಇದ್ದಾಗಲೇ ಹುಲ್ಲು ಒಣಗಿಸಿಕೋ ಅಥವಾ ಸರಿಯಾದ ಅವಕಾಶ ಮುಂದೆ ಇದ್ದಾಗ ಅದನ್ನು ಸರಿಯಾಗಿ ಬಳಸಿಕೋ ಎಂದರ್ಥ. ಇದಕ್ಕೆ ಪರ್ಯಾಯವಾಗಿ ‘ಬೆಂಕಿ ಇದ್ದಾಗ ಚಳಿ ಕಾಯಿಸಿಕೋ’ ಎಂದು ಹೇಳಬಹುದು. ಇಂಥ ಸಂದರ್ಭಗಳಲ್ಲೆಲ್ಲ ಅನುವಾದಕ/ಕಿ ಅತ್ಯಂತ ಸೃಜನಶೀಲನಾ/ಳಾಗಿರಬೇಕಾಗುತ್ತದೆ.  ಇನ್ನು ಒಂದೇ ಮೂಲದ ಭಾಷೆಯಿಂದ ಹುಟ್ಟಿಕೊಂಡ ಹಲವು ಭಾಷೆಗಳು ನಮ್ಮ ಭಾರತದಂಥ ಬಹುಭಾಷಾ ದೇಶದಲ್ಲಿ ಬೇಕಾದಷ್ಟು ಇವೆ. ಇಂದು ಚಾಲ್ತಿಯಲ್ಲಿರುವ ಅನೇಕ ಬಾಷೆಗಳು ಸಂಸ್ಕೃತ ಜನ್ಯ ಅನ್ನುತ್ತೇವೆ. ಈ ವಿಚಾರದಲ್ಲಿ ಅನುವಾದದ ಒಂದು ಸಮಸ್ಯೆಯೆಂದರೆ ಬೇರೆ ಬೇರೆ ಭಾಷೆಗಳಲ್ಲಿ ಒಂದೇ ಶಬ್ದವನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥದಲ್ಲಿ ಬಳಸಲಾಗುತ್ತದೆ ಅನ್ನುವುದು. ಉದಾಹರಣೆಗೆ ಹಿಂದಿಯಲ್ಲಿ ಉಪನ್ಯಾಸ ಅಂದರೆ ಕಾದಂಬರಿ. ಕನ್ನಡದಲ್ಲಿ ಅದೇ ಶಬ್ದದ ಅರ್ಥ ಬೇರೆ. ಮಲೆಯಾಳದಲ್ಲಿ ಅವಕಾಶಂ ಅಂದರೆ ಹಕ್ಕು.ಕನ್ನಡದ ಅರ್ಥ ಬೇರೆ.  ಹಿಂದಿಯಲ್ಲಿ ಸಂಸಾರ್ ಅಂದರೆ ಜಗತ್ತು.ಮಲೆಯಾಳದಲ್ಲಿ ಸಂಸಾರಂ ಅಂದರೆ ಮಾತು. ಇಂಥ ಶಬ್ದಗಳಿಗೆ ಸಾವಿರಾರು ಉದಾಹರಣೆಗಳನ್ನು ಕೊಡುತ್ತ ಹೋಗಬಹುದು.  ಇಂಥ ಸಂದರ್ಭಗಳಲ್ಲಿ ಅನುವಾದಕ/ಕಿ ಎಚ್ಚರಿಕೆಯಿಂದಿಲ್ಲದಿದ್ದರೆ ಅನುವಾದವು ಗೊಂದಲದ ಗೂಡಾಗಬಹುದು.    ವ್ಯಕ್ತಿತ್ವದ ಸಮಸ್ಯೆಗಳು ಅಂತ ಹೇಳಿದೆ. ಒಬ್ಬ ಸೃಜನಶೀಲ ಅನುವಾದಕ/ಕಿಗೆ ಉಂಟಾಗುವ ಸಮಸ್ಯೆ ಇದು.ಒಂದು ಕೃತಿಯನ್ನು ಅನುವಾದಕ್ಕೆ ಎತ್ತಿಕೊಂಡಕೂಡಲೇ ಮೂಲಕೃತಿಯಲ್ಲಿ ಹೇಳಿದ ಕೆಲವು ವಿಚಾರಗಳ ಬಗ್ಗೆ ತನ್ನ ಅಭಿಪ್ರಾಯ/ಅನ್ನಿಸಿಕೆಗಳು ಭಿನ್ನವಾಗಿವೆಯೆಂದು ಅನ್ನಿಸಬಹುದು. ಒಬ್ಬ ಆದರ್ಶ ಅನುವಾದಕ/ಕಿ ಅನುವಾದಕ್ಕೆ ಕೈಹಚ್ಚಿದ ಕೂಡಲೇ ತನ್ನ ಚಿಂತನೆಗಳನ್ನು ಸ್ಥಗಿತಗೊಳಿಸಿ ಮೂಲ ಲೇಖಕನ ಸ್ಥಾನದಲ್ಲಿ ನಿಂತು ಆಲೋಚಿಸಲು ಕಲಿಯಬೇಕು. ಮುಲಲೇಖಕ ಯಾವ ಸಂದರ್ಭ ಸನ್ನಿವೇಶ ಪರಿಸರಗಳಲ್ಲಿ ಬರೆದನೋ ಅಂಥದ್ದೇ ವಾತಾವರಣವನ್ನು ತನ್ನ ಮನಸ್ಸಿನೊಳಗೆ ಸೃಷ್ಟಿಸಿ ಕೊಳ್ಳಬೇಕು. ಅನುವಾದವೆನ್ನುವುದು ಒಂದು ರೀತಿಯಲ್ಲಿ ಪರಕಾಯ ಪ್ರವೇಶವಿದ್ದಂತೆ.ಅನುವಾದಕನ ವ್ಯಕ್ತಿತ್ವವು ಮೂಲ ಲೇಖಕನ ವ್ಯಕ್ತಿತ್ವದೊಳಗೆ ಮಿಳಿತಗೊಳ್ಳಬೇಕು. ಹಾಗೆ ಆದಾಗಲಷ್ಟೇ ಮೂಲಕೃತಿಯ ಸತ್ವವು ಅನುವಾದದಲ್ಲಿ ಮರುಸೃಷ್ಟಿಯಾಗುತ್ತದೆ.  ಅನುವಾದಕನು ಅನುವಾದದಲ್ಲಿ ಮೂಲಲೇಖಕನ ಮಟ್ಟಕ್ಕೆ ಏರಲು ಸಾಧ್ಯವಾಗದೇ ಹೋದರೆ ಅದನ್ನು ಅಧೋನುವಾದ(under translation) ಅನ್ನುತ್ತಾರೆ. ಇದಕ್ಕೆ ಇವತ್ತು ಅನುವಾದಗೊಳ್ಳುತ್ತಿರುವ ಅನೇಕ ಅನುವಾದಿತ ಕೃತಿಗಳನ್ನು ಉದಾಹರಣೆಯಾಗಿ ಕೊಡಬಹುದು. ಹಾಗೆಯೇ ಕೆಲವೊಮ್ಮೆ ಅನುವಾದಕನ ಸೃಜನ ಸಾಮರ್ಥ್ಯ ಮತ್ತು ವಿದ್ವತ್ತುಗಳು ಮೂಲ ಲೇಖಕನನ್ನು ಮೀರಿಸುವಂತಿದ್ದರೆ ಕೆಲವೊಮ್ಮೆ ಅನುವಾದವು ಮೂಲಕೃತಿಯ ಉದಾತ್ತತೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಹುದು. ಇದನ್ನು ಊರ್ಧ್ವಾನುವಾದ(over translation) ಅನ್ನುತ್ತಾರೆ.ಇದಕ್ಕೆ ಸೃಜನಶೀಲ ಲೇಖಕರಾಗಿ ಯಶಸ್ವಿಗಳಾದವರು ಮಾಡಿದ ಅನುವಾದಿತ ಕೃತಿಗಳನ್ನು ಉದಾಹರಣೆಯಾಗಿ ಕೊಡಬಹುದು. ಆದರೆ ಇವು ಎರಡೂ ಅತಿಗಳೇ.  ಆದ್ದರಿಂದ   ಸಮರ್ಥ ಅನುವಾದಕ ಈ ಅತಿಗಳನ್ನು ಮೀರಿ ಮೂಲ ಕೃತಿಯ ಯಥಾವತ್ತಾದ  ಪ್ರತಿಕೃತಿಯನ್ನು ಕೊಡುವ ಜವಾಬ್ದಾರಿ ತನ್ನದು ಎಂಬುದನ್ನು ಅರಿತಿರಬೇಕು.        ಇವೆಲ್ಲವೂ ಅನುವಾದಕ/ಕಿಯ ಮುಂದಿರುವ ಸಮಸ್ಯೆಗಳು ಮತ್ತು ಸವಾಲುಗಳು ಎನ್ನಬಹುದಾದರೂ ಇವು ಯಾವುವೂ ಅಪರಿಹಾರ್ಯವಾದವುಗಳಲ್ಲ. ತಾನು ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ,   ಶಿಸ್ತು, ಸತತ ಅಧ್ಯಯನ, ಚಿಂತನ,  ಪರಿಶ್ರಮ ಪಡುವ ಬುದ್ದಿ, ಸಮಯಪ್ರಜ್ಞೆ ಮೊದಲಾವುಗಳನ್ನು ತನ್ನಲ್ಲಿ ಬೆಳೆಸಿಕೊಳ್ಳುವುದರ ಮೂಲಕ ಒಳ್ಳೆಯ ಅನುವಾದಕನಾಗಿ/ಅನುವಾದಕಿಯಾಗಿ ಯಶಸ್ಸು ಪಡೆಯಲು ಸಾಧ್ಯ. *****************************

Read Post »

ಇತರೆ, ವಾರ್ಷಿಕ ವಿಶೇಷ

ದೀಪ್ತಿ ಭದ್ರಾವತಿ ಕವಿತೆಗಳು ಲೂಟಿಯಾದವರು ಅಗೋ ಸಿಕ್ಕಿಯೇಬಿಟ್ಟ ನಿನ್ನೆಯಷ್ಟೇ ಎಷ್ಟೆಲ್ಲ ಜನರ ಉಸಿರು ಕದ್ದು ನಡೆದವ ಇಂದಿಲ್ಲಿ ಆಸ್ಪತ್ರೆಯ ಕಲ್ಲು ಬೆಂಚಿನ ಮೇಲೆ ಸದ್ದಿಲ್ಲದೆ ಮಲಗಿದ್ದಾನೆ ಸೂರೆ ಹೋದವರು ಸೂರು ಹಾರುವಂತೆ ಕಿರುಚುತ್ತಿದ್ದರೂ ಗಮನಿಸದೆ ತನ್ನದೇ ಕನಸಲೋಕದಲ್ಲಿ ಹಾಯಾಗಿ ಕನಸುಕಾಣುತ್ತಿದ್ದಾನೆ ಲೂಟಿಯಾದವರು ಇದೀಗ ಇಲ್ಲಿ ಒಳಗಡೆಗೆ ನುಗ್ಗಲಿದ್ದಾರೆ ಎಬ್ಬಿಸಿ ಇವನನ್ನು ಬೀದಿಗೆಳೆದು ತಂದು ಆರೋಪಪಟ್ಟಿಯ ಸಿದ್ದವಾಗಿಸಿ ಕಂಬಕ್ಕೆ ಕಟ್ಟಿ ಥಳಿಸಲಿದ್ದಾರೆ “ಆಳಿಗೊಂದು ಕಲ್ಲು, ತಲೆಗೊಂದು ಮಾತು” ಕನ್ನ ಹಾಕುವುದೆ ಕಾಯಕ ಎಂದುಕೊಂಡವನಿಗೆ ಯಾವುದೂ ಹೊಸತಲ್ಲ ಪ್ರತಿ ಬಾರಿ ಆತ ಮಿಡಿತ ಹೊತ್ತು ನಡೆದಾಗಲೂ ಗಲಾಟೆ ಭುಗಿಲೇಳುತ್ತದೆ ಛಾವಣಿಗಳು ಬೊಬ್ಬೆ ಹಾಕುತ್ತವೆ ಪಂಚಾಯ್ತುದಾರರು ಊರ ಒಳಗಿನ ಮೂಲೆ ಮೂಲೆಯನು ಅವನಿಗಾಗಿ ತಡಕಿಸುತ್ತಾರೆ ಅವನು ಕಣ್ಣು ತಪ್ಪಿಸಿ ಮತ್ತೆಲ್ಲಿಯೋ ದೋಚುತ್ತಾನೆ ಹುಡುಕಿ ದಣಿದವರೆಲ್ಲ “ಇನ್ನು ಬಿಡುವ ಪ್ರಶ್ನೆಯೇ ಇಲ್ಲ” ಎನ್ನುತ್ತ ಹಾಕಿದ ಬಾಗಿಲು ಮುರಿಯುತ್ತಾರೆ ಬಡಿವ ಸದ್ದಿಗೆ ಎಚ್ಚೆತ್ತ ಅವನೂ “ಕಸುಬು ಬಿಡುವುದಿಲ್ಲ” ಕಿಚಾಯಿಸುತ್ತ ನುಗ್ಗುತ್ತಾನೆ ಹೆರಿಗೆ ವಾರ್ಡಿನ ಕಿಟಕಿಯೊಳಗೆ ರೇವೆ ಇಲ್ಲಿ ಹೀಗೆ ನಾನು ಒಂಟಿ ಕೂತಿರುವಾಗಲೇನೆನಪಿನ ಹಕ್ಕಿಯೊಂದುಕಿಟಕಿಯಲಿ ಸರಳಿನಾಚೆಯಲಿನಿಂತು ಕೂಗುತ್ತದೆ. ನಕ್ಷತ್ರದ ನಡುವಿನಲ್ಲಿ ನೆರಳುಗಳನೋಡುತ್ತೇನೆ ತೇವಗೊಂಡ ಆಗಸದ ಮುಗುಳೊಂದುಒದ್ದೆ ಕಣ್ಣಿನ ಅಂಚಿನಲ್ಲಿ ನಿಂತುಗೋಲಿಯಾಡುತ್ತದೆ… ಬರಲೋ ಬೇಡವೋಗೊತ್ತಾಗದೆ ಮತ್ತದೇ ಬಿಡುಗಣ್ಣಿನಲಿಆಗಸ ನೋಡುತ್ತೇನೆ. ಅಸ್ಥಿರಗೊಂಡ ಎದೆಯ ಕವಾಟದ ಚೂರೊಂದುಮುಗ್ಗಲು ಗೋದಾಮಿನಲಿ ಸೇರಿ ನರಳುತ್ತದೆ.ಇಲ್ಲ ಬಿಡು ಭೇಟಿಯಿನ್ನು ಸಾಧ್ಯವಿಲ್ಲಹರಕು ಕನಸೊಂದು ಯಾವುದೋವಿಳಾಸ ಹುಡುಕಿ ತಿರುಗುತ್ತದೆ.. ಇನ್ನು ಆ ನೆರಳು, ನೆನಪು, ಮುಗಿದ ರೇವೆಎಲ್ಲವೂ ನನ್ನ ಕಾಲುಂಗರದ ನಡುವಿನಲಿಎದ್ದ ಕುರುಗಳಲ್ಲಿಯಾವುದೋ ಸನ್ನೆಗಾಗಿ ಕಾಯತೊಡಗುತ್ತವೆ.. ಗೋದಾಮು ಅಸಲಿಗೆ ಹೇಳುವುದು ಎನೂ ಇರಲಿಲ್ಲನಡು ಮಧ್ಯಾಹ್ನವೊಂದು ತೆವಳು ಗಾಳಿಯಲಿತೇಲುತ್ತ ಫೌಂಡೇಶಿನ ಕ್ರೀಮುಗಳಲಿಸುಕ್ಕು ಮರೆಸುವಾಗಉಗುರು ಕಚ್ಚುವುದಲ್ಲದೆಮತ್ತೇನಿರುತ್ತದೆ ಹೇಳು ತೀಡುವ ಬೆಳ್ಳಿಚಾಮರಕ್ಕೆ ಇರುಳ ಲೇಪಿಸುವಾಗಬಣ್ಣ ಹೀರಿದ ಬ್ರಶ್ಶಿನಂತೆತಿರು ತಿರುಗಿ ಮತ್ತದೇ ಕನಸುಗಳ ಒಪ್ಪ ಮಾಡುವಾಗಹಳೆಯ ಗೋದಾನಿನ ಮುಗ್ಗುಗಟ್ಟಿದಜೋಳ ಸುಮ್ಮನೆ ನಗುವಾಗಏನೆಲ್ಲ ಹೇಳುವಶಕುನದವನ ಹಾಗೇಕೆ ನಿಂತೆ ಹೇಳು ಒಣ ತುಟಿಗಳಲ್ಲಿ ಮಾತುಗಳ ಹೆಕ್ಕುವೆನೆಂಬನಿನ್ನ ಹುಂಬತನಕ್ಕೆನನ್ನ ಲಿಪ್ ಸ್ಟಿಕ್ಕಿನ ತೇರು ಹೊಳೆದದ್ದುಸುಳ್ಳಲ್ಲಸುಡುವ ಕೆಂಡ ಹಾಯ್ದ ಮಿಡತೆ ಒಳಗೊಳಗೆಕಣ್ಣಿನಲಿಕನಸು ನಕ್ಕಿದ್ದು ಖರೆಕುತ್ತಿಗೆಯಲ್ಲೊಂದು ಕರಿ ಇರುವೆಗಳಸಾಲು ಕಾಲುಗಟ್ಟಿದಗೂಟದ ಬೇಲಿಮತ್ತೆ ಮತ್ತೆ ತಡೆ ಹಿಡಿಯುತ್ತಉಗ್ಗುಗಳ ಲೋಕದಲ್ಲಿ ನನ್ನ ಉಗುಳು ನುಂಗಿಸುವಾಗ ಎಲ್ಲ ಬಲ್ಲವನಂತೆ ನಿಂತದ್ದು ನಿನ್ನದೇತಪ್ಪು ಇದೀಗ ಮಾತಾಡಬೇಡೆಂದುನಾನು ಹೇಳುವ ಸ್ಥಿತಿಯಲ್ಲಿ ಇಲ್ಲಆದರೆ ನೀನು.. ************************************

Read Post »

You cannot copy content of this page

Scroll to Top