ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಪ್ರವಾಸ ಕಥನ

ಪ್ರವಾಸ ಕಥನ

ಜಾರಕಬಂಡೆಕಾವಲ್ ವೃಕ್ಷ ಉದ್ಯಾನ ಚಂದ್ರಮತಿ ಪುರುಷೋತ್ತಮ್ ಭಟ್ ಮಲೆನಾಡಲ್ಲಿ ಬೆಳೆದವರಿಗೆ ಮರಗಳೇ ಸ್ನೇಹಿತರು . ಹಾಗೂ ತಮ್ಮ ಊರಿನ ಕಂಪು, ಸಂಸ್ಕೃತಿ ರೀತಿ ರಿವಾಜು ಮರೆತು ಬಾಳುವವರು ಇಲ್ಲವೇ ಇಲ್ಲ ಎಂದರೂ ತಪ್ಪಾಗಲಾರದು. ಎಲ್ಲಾ ಕಾಲದಲ್ಲೂ ಮರಗಿಡಗಳು ಹಸಿರಾಗಿ ಪರೋಪಕಾರಿಯಾಗಿಯೇ ಮೌನವಾಗಿ ತನ್ನತನವನ್ನು ಎತ್ತಿ ತೋರಿಸುವಂತಹ ಪ್ರಕೃತಿಯನ್ನು ಮೈದುಂಬಿಸಿಕೊಂಡಿರುತ್ತದೆ. ಬೆಟ್ಟಗುಡ್ಡಗಳು ನಿತ್ಯ ಜನರನ್ನು ಕೈಬೀಸಿ ಕರೆಯುತ್ತಿರುತ್ತದೆ.ಆಗಲೂ ಈಗಲೂ ಅರಣ್ಯಗಳಲ್ಲಿ ಸಿಗುವಂತಹ ಹಣ್ಣುಹಂಪಲುಗಳೇ ಅಲ್ಲಿಯ ಎಷ್ಟೋ ಜನರ ಆಹಾರವಾಗಿರುತ್ತದೆ. ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದ ನಮ್ಮಂತಹ ಎಷ್ಟೋ  ನಿಸರ್ಗಾರಾಧಕರಿಗೆ ಆಗಾಗ ತವರೂರು ನೆನಪಾಗುವುದು ಸರ್ವೇಸಾಮಾನ್ಯ. ಕೆಲವೊಮ್ಮೆ ನಗರ ನರಕ ಸಮಾನವೆಂದೆನಿಸಿ ಬಿಡುತ್ತದೆ.  ಉಸಿರು ಕಟ್ಟುವ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ವಾರಕ್ಕೊಮ್ಮೆಯಾದರೂ ಎಲ್ಲಾದರೂ ನಿರ್ಜನ ಹಾಗೂ ಪ್ರಕೃತಿಯಿರುವಲ್ಲಿ ಕಾಲಕಳೆಯ ಬೇಕೆನಿಸುವುದರಲ್ಲಿ ತಪ್ಪೇನಿದೆ.ನಗರಗಳು ಕದಂಬ ಬಾಹುವಿನಂತೆ ಹಳ್ಳಿ ಹಳ್ಳಿಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು  ಬೆಳೆಯುತ್ತಿರುವಾಗ ಪಶ್ಚಿಮಘಟ್ಟಗಳಿಂದ ಬಂದ ನಮಗೆ ಮರಗಿಡಗಳ ಹಾಗೂ ಹಕ್ಕಿಗಳ ಕಲರವ ನೀರಿನ ಜುಳುಜುಳು ನಾದ ನೆನಪಾಗದೇ ಉಳಿಯಲು ಸಾಧ್ಯವೇ ? ಅಕ್ಟೋಬರ್ ಇಪ್ಪತ್ತಾರನೇ ದಿನದಂದು ನಮ್ಮ ಮನೆಯಿಂದ ಸುಮಾರು ಇಪ್ಪತ್ತು ಮೈಲು ದೂರದಲ್ಲಿರುವ  ವೃಕ್ಷ ಉದ್ಯಾನಕ್ಕೆ ಹೊರಟೆವು.  ಸ್ವಲ್ಪ ನಗರದ ವಾಹನ ದಟ್ಟಣೆ ಕಳೆದ ತಕ್ಷಣ ಮರಗಳ ಸಾಲುಗಳು ನಮ್ಮನ್ನು ಕೈಬೀಸಿ ಕರೆದವು. ನಗರದಿಂದ ಅನತಿ ದೂರದಲ್ಲಿ ಇದ್ದ ಈ ವೃಕ್ಷಗಳು ಸ್ವೇಚ್ಛೆಯಾಗಿ ನೀಳವಾಗಿ ಎತ್ತರವಾಗಿ ವಿಸ್ತಾರವಾದ ಈ ಪ್ರದೇಶದಲ್ಲಿ ಕಂಗೊಳಿಸುತ್ತಿದ್ದವು. ವಾವ್ ಎನ್ನುವ ವಾತಾವರಣ ಹಾಯ್ ಎನ್ನಿಸಿದ್ದುಇದೇ ರಾಮಗೊಂಡನ ಹಳ್ಳಿಯಲ್ಲಿರುವಂತಹ  ‘ ಜಾರಕಬಂಡೆ ಕಾವಲ್ ವೃಕ್ಷ ಉದ್ಯಾನ ವನ ‘. ಇದು ನಿಸರ್ಗ ಪ್ರಿಯರಿಗೆ ಹೇಳಿಸಿದ ತಾಣ. ಸುಮಾರು ಸಾವಿರ ಹೆಕ್ಟೇರ್ ಜಾಗವನ್ನು ಒಳಗೊಂಡ ಈ ಉದ್ಯಾನವನದಲ್ಲಿ ಸುಮಾರು 5000 ಸಸ್ಯ ಪ್ರಬೇಧ‌ಗಳಿವೆ.ಇಕ್ಕೆಡೆಗಳಲ್ಲಿ ಮರ ಹಾಗೂ ಅಲ್ಲಲ್ಲಿ ದಣಿವು ತಣಿಸಿಕೊಳ್ಳಲು ಕಲ್ಲು ಆಸನಗಳೂ ಇವೆ. ಈ ಉದ್ಯಾನವನವನ್ನು ತುಂಬಾ ಸ್ವತಂತ್ರವಾಗಿ ಬೆಳೆಯಲು ಬಿಟ್ಟಿದ್ದಾರೆ. ಇದರ ಒಳಗಡೆ ಹಳ್ಳಿಯಲ್ಲಿ ಇರುವಂತಹ ಮಣ್ಣಿನ ರಸ್ತೆ , ಕಾಲುದಾರಿ ,ವಿವಿಧ ರೀತಿಯ ಗಿಡಗಳು ಪೊದೆಗಳು ಹೀಗೆ ನಡೆದಾಡುವ ಅಭ್ಯಾಸ ಇರುವವರಿಗೆ ಮನೋಲ್ಲಾಸವನ್ನು ನೀಡುತ್ತದೆ. ಅಲ್ಲಲ್ಲಿ ಕಣ್ತಣಿಸುವ ಮಲೆನಾಡಿನ ಸಸ್ಯಗಳನ್ನು ನಾವು ಕಾಣಬಹುದು. ನಾವು ಬಾಲ್ಯದಲ್ಲಿ ತಿನ್ನುತ್ತಿದ್ದ ಕೆಲವೊಂದು ಗಿಡಗಳೂ ಅಲ್ಲಿ ಫಲಭರಿತವಾಗಿ ಕಂಡು ಬಂದವು. ಪಕ್ಷಿ ಪ್ರಿಯರಿಗೂ ಅದ್ಭುತ ಸ್ಥಳ. ಅಲ್ಲಿಗೆ ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಹೋದರೆ ಅಲ್ಲಿ ಚಿಟ್ಟೆಗಳ ಪ್ರಪಂಚ ಇರುವುದರಿಂದ  ವರ್ಣರಂಜಿತ ವಿವಿಧ ರೀತಿಯ ಚಿಟ್ಟೆಗಳನ್ನೂ ಕಾಣಬಹುದು.ಬೈಸಿಕಲ್ ಸವಾರರಿಗೆ ಮತ್ತು ಕಾಲುನಡಿಗೆ ಮಾಡುವವರಿಗೆ ಮಾತ್ರ ಅಲ್ಲಿ ಪ್ರವೇಶವಿರುತ್ತದೆ. ಸುಮಾರು ಏಳೂವರೆ ಮೈಲಿಯಷ್ಟು ನಡಿಗೆ.  ತುಂಬಾ ವಿಸ್ತಾರವಾದ ಜಾಗವಾಗಿರೋದ್ದರಿಂದ ಒಬ್ಬರೇ ಹೋಗುವುದಕ್ಕಿಂತ  ಜೊತೆಯಲ್ಲಿ ಹೋಗುವುದು ಸುರಕ್ಷಿತ .ಮುಖ್ಯದಾರಿಯ ನಂತರ ಕಾಲು ದಾರಿಗಳಲ್ಲಿ ನಡೆಯುತ್ತಾ ನಡೆಯುತ್ತಾ ಮೈಮರೆತರೆ ಪುನ: ಹೊರಗಡೆ ಬರುವುದು ಕಷ್ಟವಾಗ ಬಹುದು. ಮಖ್ಯದ್ವಾರದಲ್ಲಿ ಇರುವ ಸಿಬ್ಬಂಧಿಗಳಲ್ಲಿ ವಿಚಾರಿಸಿಕೊಂಡು ನಿಮ್ಮ ಪ್ರಯಾಣವನ್ನು ಶುರು ಮಾಡುವುದು ಒಳ್ಳೆಯದು. ಬೆಳಿಗ್ಗೆ ಆರು ಗಂಟೆಯಿಂದ ಹತ್ತರವರೆಗೆ ಹಾಗೂ ಸಂಜೆ ಮೂರು ಗಂಟೆಯಿಂದ ಆರರವರೆಗೆ ತೆರೆದಿರುವುದರಿಂದ  ಸೂರ್ಯೋದಯ  ಮತ್ತು ಸಂಜೆಯ ಸೂರ್ಯಾಸ್ತದ ಸಮಯವನ್ನು ಆನಂದಿಸ ಬಹುದು. ನಾವು ಮುಸ್ಸಂಜೆಯಲ್ಲಿ ಹಕ್ಕಿಗಳ ಕಲರವದ ಜೊತೆಜೊತೆಗೆ ಸೂರ್ಯಾಸ್ತದ ಸಮಯವನ್ನು ಆನಂದಿಸಿದೆವು.  ಮೂರು ಘಂಟೆಗಳ ಕಾಲ ಕಾಲ್ನಡಿಗೆಯಲ್ಲಿ ಮುಖ ಕವಚವಿಲ್ಲದೆ ಶುದ್ಧ ಪ್ರಾಣವಾಯುವನ್ನು ಸೇವಿಸುತ್ತಾ ನಡೆಯುತ್ತಾ ಮಲೆನಾಡು ಸೊಬಗನ್ನು ಸವಿದೆವು. ಸೂರ್ಯಾಸ್ತದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡು ಮನೆಯತ್ತ ಸಾಗಿದೆವು. ಆಗಸ್ಟ್ ತಿಂಗಳಿನಿಂದ ಜನವರಿ ತಿಂಗಳವರೆಗೆ ಹಸಿರು ಸೊಬಗನ್ನು ಬಹುಶಃ: ಅಲ್ಲಿ ಕಾಣಬಹುದು.ದಯವಿಟ್ಟು ಅಲ್ಲಿಗೆ ನಿಸರ್ಗ ಪ್ರೇಮಿಗಳು ಮಾತ್ರ ಹೋಗಬೇಕು ಏಕೆಂದರೆ ಈ ಮಹಾನಗರ ವ್ಯಾಪ್ತಿಯಲ್ಲಿ ಇದು ಅಳಿದುಳಿದು ಕೊಂಡಂತಹ ಏಕೈಕ ತಾಣ ಹಾಗೂ ನೈಸರ್ಗಿಕವಾಗಿ ಕಲ್ಮಷರಹಿತವಾಗಿಟ್ಟಂತಹ ನೆಮ್ಮದಿಯ ತಾಣ ಎಂದರೂ ಅತಿಶಯೋಕ್ತಿಯಾಗಲಾರದು. ಅಂತಹ ಅಮೂಲ್ಯವಾದ ಜಾಗಗಳನ್ನು ಹಾಗೇ ಉಳಿಸಿಕೊಳ್ಳೋಣ. ಗೌರವಿಸೋಣ.*******************************************

ಪ್ರವಾಸ ಕಥನ Read Post »

ಇತರೆ, ಪ್ರಬಂದ

ಬಸ್ ಪಯಣ

ಬಸ್ ಪಯಣ ಬಸ್ ಪಯಣ ಎಂ. ಆರ್. ಅನಸೂಯ ನನಗೆ ಬಸ್ ಪ್ರಯಣ ಅಂದ್ರೆ ಇಷ್ಟವೇ ಆಗುತ್ತದೆ . ಅಲ್ಲಿ ನಮಗೆದುರಾಗುವ ವೈವಿಧ್ಯಮಯ ಪ್ರಸಂಗಗಳು ಬಹು ಸ್ವಾರಸ್ಯಕರವಾಗಿದ್ದು ಒಂಥರಾ ನಮ್ಮ ಲೋಕಾನುಭವ  ಹೆಚ್ಚಿಸುತ್ತವೆ.ಕಾರಣ ವಿವಿಧ ರೀತಿಯ ಜನರೊಡನಾಟ !  ಬಹುಶಃ ವೈವಿಧ್ಯತೆ ಕೊಡುವಷ್ಟು ಅನುಭವವನ್ನು ಬೇರೆ ಯಾವುದೂ ಕೊಡಲಾರದು. ಆದ್ದರಿಂದಲೆ ನಾವು ಅಂದ್ರೆ ಭಾರತೀಯರಿಗೆ ಸಿಗುವಷ್ಟು ಅನುಭವ ಇನ್ಯಾವ ದೇಶದ ಪ್ರಜೆಗಳಿಗೆ ಸಿಕ್ಕಲಾರದು. ಬಸ್ ಪಯಣವೆಂದರೆ ಒಂಥರ ಜನ ಧ್ವನಿಯೇ ಸರಿ. ಜನರ ನಾಡಿ ಮಿಡಿತ ! ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಘಟನೆ. ಒಮ್ಮೆ ಬಸ್ ನಲ್ಲಿ   ಪ್ರಯಾಣಿಸುತ್ತಿದ್ದೆ‌. ಸಾಮಾನ್ಯವಾಗಿ ನಾನು ಪ್ರಯಾಣ ಮಾಡುವಾಗ ನಿದ್ದೆ ಮಾಡುವುದಿಲ್ಲ. ಅದು ಹಳ್ಳಿಗಳನ್ನು ಸುತ್ತಿಕೊಂಡು ಹೋಗುವಂಥ ಖಾಸಗಿ ಬಸ್.ಬಸ್ ನಲ್ಲಿ ಎಲ್ಲಾಆಸನಗಳು ಭರ್ತಿಯಾಗಿದ್ದವು ಎನ್ನುವುದಕ್ಕಿಂತ ಬಸ್ನಲ್ಲಿ ಜನರನ್ನು ತುಂಬಿದ್ದರು ಎಂಬ ಹೇಳಿಕೆಯೇ ಸೂಕ್ತ.  ತುಂಬಿದ ಬಸುರಿ ಹೆಣ್ಣಿನಂತೆ ಗಜ ಗಮನೆಯಂತೆ ಬಸ್ ಚಲಿಸತೊಡಗಿತು. ದಾರಿ ಸಾಗುತ್ತ ಹಳ್ಳಿಗಳು ಬಂದಾಗ ಜನರಿಳಿದಂತೆ ಬಸ್ಸಲ್ಲಿದ್ದವರೆಲ್ಲಾ ಸಾವಕಾಶವಾಗಿ ಕುಳಿತರು. ಇದ್ದಕ್ಕಿದ್ದಂತೆಯೇ ” ಅಣ್ಣಾ ಡ್ರೈವರಣ್ಣ ಬಸ್ ನಿಲ್ಲಿಸಣ್ಣ” ಎಂದು ಮಹಿಳೆಯೊಬ್ಬರು ಜೋರಾಗಿ ಕೂಗಿಕೊಂಡಳು. ಡ್ರೈವರ್ ನೊಂದಿಗೆ ಮಾತು ಕತೆಯಲ್ಲಿ ಮಗ್ನನಾಗಿದ್ದ  ಬಸ್ ಕಂಡಕ್ಟರ್ “ಯಾಕೆ, ಏನು ಏನಾಯ್ತು “ಎಂದು ಗಾಬರಿಯಾಗಿ  ಕೇಳಿದ. ಎಲ್ಲರೂ ಆ ಧ್ವನಿ ಬಂದ ಕಡೆಗೆ ತಿರುಗಿದರು. ಆ ಹೆಣ್ಣುಮಗಳೊಬ್ಬಳು   ಡ್ರೈವರ್ ಹತ್ತಿರ ಬಂದು,”ಅಣ್ಣ,ಬಸ್ ನಿಲ್ಲಿಸಣ್ಣ ನನ್ನ ಈ ಕಿವಿದು ವಾಲೆ( ಓಲೆ)ಕಳೆದು ಹೋಗೈತೆ. ಹುಡುಕ್ತೀನಣ್ಣ”  ಕೈಮುಗಿಯುತ್ತ ಅವಳು ಅಂಗಲಾಚಿ ಬೇಡಿಕೊಂಡಳು. ತಕ್ಷಣವೆ ಬಸ್ ನಿಂತಿತು. ಅವಳು ಹಾಕಿಕೊಂಡಿದ್ದ ಎರಡು ಕಿವಿಯೋಲೆಯಗಳಲ್ಲಿ ಒಂದು ವಾಲೆಯು ಎಲ್ಲೋ ಬಿದ್ದು ಹೋಗಿದ್ದು ಈಗ ಅದು ಅವಳ ಅರಿವಿಗೆ ಬಂದಿತ್ತು.ತಕ್ಷಣ ಗಾಬರಿಯಿಂದ  ಕೂಗಿಕೊಂಡಿದ್ದಳು. ಆ ಹೆಣ್ಣು ಮಗಳು ಕಣ್ಣೀರು ಹಾಕುತ್ತಲೇ ಡ್ರೈವರ್ ಕಡೆ ಬಂದಳು.ಸುಮಾರು ನಲವತ್ತರ ವಯೋಮಾನ. ಆಗ ಕಂಡಕ್ಟರ್ “ಎಲ್ಲಿ ಬಿತ್ತೊ ಏನು ಕತೆನೋ ನೀನು ಮನೆಯಿಂದ ಬರುವಾಗ ಕಿವಿಲೇ  ಇತ್ತೇನಮ್ಮ ಎಲ್ಲಿ ಅಂತ ಹುಡುಕ್ತೀಯ ಎಂದಾಗ  “ಅಣ್ಣ ನಾನು ಕುಂತಿರ  ಸೀಟ್  ಹಿಂದೆ ಮುಂದೆಲ್ಲ ಹುಡುಕ್ತೀನಿ” ಎಂದು ಹೇಳಿದಳು. ಬಸ್ ನಲ್ಲಿದ್ದವರು ಅವಳ ಮನವಿಗೆ ಸ್ಪಂದಿಸಿ ಬೇಗನೆ ಕೆಳಗಿಳಿದು ಸಹಕರಿಸಿದರು “ಬೇಗ ಬೇಗ ನೋಡ್ಬೇಕಮ್ಮ” ಕಂಡಕ್ಟರ್ ಹೇಳಿದಾಗ “ಅಣ್ಣ ನಾನಿವತ್ತು  ವಾಲೆ ಕಳ್ಕೊಂಡು ಮನೆಗೆ ಹೋದ್ರೆ ನನ್ನ ಗಂಡ ಹೊಡೆದು ಸಾಯಿಸಿಬಿಡ್ತಾನೆ” ಎಂದು ಹೇಳಿದಾಗ  ಎಲ್ಲರು ಅಯ್ಯೋ  ಪಾಪ ಎಂದು ಮರುಗುತ್ತ ಕೆಲವರು ಅವಳೊಡನೆ  ತಾವು ಸಹಾ ಹುಡುಕಿದರು.ಅದು ಬಸ್ನಲ್ಲೆ  ಬಿತ್ತೋ ಅಥವ ಬಸ್  ಹತ್ತುವ ಮೊದಲೇ ಬಿದ್ದಿತ್ತೊಎಂಬ ಬಗ್ಗೆ ಅವಳಿಗೂ ಸಹ ಖಾತ್ರಿಯಿರಲಿಲ್ಲ  ಒಂದು ಇಪ್ಪತ್ತು ನಿಮಿಷ ಹುಡುಕಿದ್ರೂ ಸಿಗಲಿಲ್ಲ.ಆಗ ಕಂಡಕ್ಟರ್ “ಅದೆಲ್ಲಿ ಬಿದ್ದೋಯ್ತೋ ಏನೋ ಸಿಗಲ್ಲ. ಬಸ್ ಬಹಳ ಹೊತ್ತು ನಿಲ್ಲಿಸಕ್ಕಾಗಲ್ಲಮ್ಮ. ಎಲ್ಲರು ಬನ್ರಿ. ಕುಳಿತ್ಕಳಿರಿ” ಎಂದಾಗ ಎಲ್ಲರೂಬಸ್ ನಲ್ಲಿ ಬಂದು ಕೂತರು. ನಿಲ್ಲದ ಆ ಹೆಂಗಸಿನ ಅಳುವನ್ನು ಕಂಡು ಎಲ್ಲರ ಮನ ಕರಗಿತ್ತು. ಅವಳ ದು:ಖ  ನೋಡಲಾಗದೇ ಹಿರಿಯ ವ್ಯಕ್ತಿಯೊಬ್ಬರು “ಹೋಗ್ಲಿ ಬಿಡಮ್ಮ ಆಗಿದ್ದು ಆಗೋಯ್ತು ಸಮಾಧಾನ ಮಾಡ್ಕಳಮ್ಮ”ಎಂದು  ಹೇಳಿದಾಗ ಅವಳು “ನನ್ನ ಗಂಡನ ಬುದ್ಧಿ ನಿನಗೆ ಗೊತ್ತಿಲ್ಲಪ್ಪ. ನನ್ನ ಹೊಡೆದು ಸಾಯಿಸಿಬಿಡ್ತಾನೆ” ಎನ್ನುತ್ತ ಕಣ್ಣೀರು ಹಾಕಿದಳು. ವಾಲೆ ಕಳೆದುಕೊಂಡ ದುಃಖಕ್ಕಿಂತ ಹೆಚ್ಚಾಗಿ ತನಗೆ ಬೀಳಲಿರುವ ಗಂಡನ ಬಡಿತಗಳಿಗೆ ಬೆಚ್ಚಿ ಬಿದ್ದಂತೆ ಕಂಡಳು. ಸುಮ್ಮನೇ ಮೌನವಾಗಿ ತನ್ನ ಸೀಟ್ ನಲ್ಲಿ ಕುಳಿತು ಬಿಟ್ಟಳು.ಏನಾದ್ರು ಆಗಲಿ ಎಲ್ಲದಕ್ಕೂ ತಾನೂ ಸಿದ್ದವಾಗಿದ್ದೇನೆಂಬಂತಿದ್ದ ಆ ಹೆಣ್ಣುಮಗಳು ಅಸಹಾಯಕತೆಯ ಪರಮಾವಧಿಯಂತೆ ಕಂಡಳು.ಆಕೆ ಬಸ್ ಇಳಿದು ಹೋಗುವಾಗ “ಏನು ಆಗಲ್ಲ ಧೈರ್ಯವಾಗಿರಕ್ಕ. ದೇವರ ಮೇಲೆ ಭಾರ ಹಾಕಕ್ಕ’ ಎಂದು ಕಂಡಕ್ಟರ್ ಧೈರ್ಯ ಹೇಳಿದನು.ಅವಳ ಸಿಡುಕ ಗಂಡನಿಗೆ  ಕೆಟ್ಟಸಿಟ್ಟು ಬಾರದಂತೆ ಮಾಡಪ್ಪ ದೇವರೇ ಎನ್ನುವುದನ್ನು  ಬಿಟ್ಟರೆ ಮತ್ತೇನನ್ನೂ ಮಾಡದಂತಹ ಅಸಹಾಯಕ ಸ್ಥಿತಿ ನಮ್ಮದು. ಅವಳ ಮನೆಯಲ್ಲಿ ಮಂದೆ ನಡೆಯಲಿರುವ ಎಲ್ಲಾ ಸನ್ನಿವೇಶಗಳನ್ನು ನನ್ನದೇ ಆದ ರೀತಿಯಲ್ಲಿ ಕಲ್ಪನೆ  ಮಾಡಿಕೊಂಡು ಮನೆ ಸೇರಿ ಆ ಗುಂಗಿನಲ್ಲೇ ಎರಡು ದಿನ ಕಳೆದಿದ್ದೆ. ಉದ್ದೇಶಪೂರ್ವಕವಾಗಿ ತಾನು ಮಾಡದಿದ್ದರೂ ತನಗರಿವಿಲ್ಲದೆ ಆಕಸ್ಮಿಕವಾಗಿ ಆದ ತಪ್ಪಿನಿಂದ ಆ ಹೆಣ್ಣು ಮಗಳು ಎಂಥಾ ಶಿಕ್ಷೆ ಅನುಭವಿಸಿದಳೋ ಆ ದೇವರಿಗೇ ಗೊತ್ತು! ಅಷ್ಟೊಂದು ಭಯ ಬಿದ್ದ ಅವಳಿಗೆ ಅವಳ ಕೆಟ್ಟ ಗಂಡನ ಹೊಡೆತಗಳು ಅದೆಷ್ಟು ನೋವು ಕೊಟ್ಟಿರಬೇಕು !  ನಮ್ಮ ಹೆಣ್ಣುಮಕ್ಕಳ ಮೇಲಿನ ಕೊನೆಯಿಲ್ಲದ ಕ್ರೌರ್ಯದ ಶೋಷಣೆಯ ನಾನಾ ರೂಪಗಳು! ಆದೆಷ್ಟು ವರ್ಷಗಳು  ಕಳೆದರೂ ಆ ಘಟನೆ ಮಾತ್ರ ನನ್ನ ಚಿತ್ತದಲ್ಲಿ ಹಾಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ ! ಇಂತಿಪ್ಪ ಬಸ್ ಪಯಣದಲ್ಲೇ,ಒಮ್ಮೆ ನಾನೂ ಸಹ  ನನ್ನ ರಿಸ್ಟ್ ವಾಚ್ ಕಳೆದುಕೊಂಡಿದ್ದೆ. ಅದು ನನ್ನ ಮಗ ನನಗೆ ತನ್ನ ಮೊದಲ ಸಂಬಳದಲ್ಲೇ ಕೊಡಿಸಿದ್ದ ಬೆಲೆ ಬಾಳುವ ವಾಚು.ಕಳೆದುಕೊಂಡ ಬೇಸರದಲ್ಲಿ ಬೇಸರದಲ್ಲೆ ನಾನು ವಿಷಯವನ್ನು ಮಗನಿಗೆ ತಿಳಿಸಿದೆ. ಇದನ್ನು ಕೇಳಿಧ ನನ್ನ ಮಗನು ಒಂದಿಷ್ಟೂ ಬೇಸರ ಪಡದೆ “ಹೋಗ್ಲಿ ಬಿಡಮ್ಮ” ಎಂದು ಸಲೀಸಾಗಿ ಹೇಳಿದ್ದಲ್ಲದೆ ಅಂತಹದೆ ಮತ್ತೊಂದು ವಾಚ್ ಕೊಡಿಸಿದ್ದನು.ಎಲ್ಲವು ಅಷ್ಟೆ ಅವರವರ ಭಾವಕ್ಕೆ! ನಾನು ಬಿ.ಇಡಿ. ಓದುವಾಗ ಪ್ರತಿದಿನ ಬಸನಲ್ಲಿ ದುರ್ಗಕ್ಕೆ ಪಯಣ ಮಾಡುತ್ತಿದ್ದೆ. ಒಂದು ರೀತಿಯಲ್ಲಿ ಆ  ಸರ್ಕಾರಿ ಬಸ್ ವಿದ್ಯಾರ್ಥಿಗಳಿಗೆಂದೇ ಮೀಸಲಾದಂತಿತ್ತು. ಆ ದಿನ ನಮಗೆ ಪ್ರಾಕ್ಟಿಕಲ್ ಎಕ್ಸಾಂ ಇತ್ತು. ನಿಯೋಜಿಸಲ್ಪಟ್ಟಿದ್ದ ಶಾಲೆಗೆ ನಾವು ಸರಿಯಾದ ವೇಳೆಗೆ ತಲುಪಬೇಕಾಗಿತ್ತು.  ರೋಡ್ ಬ್ಲಾಕ್ ಆದ ಕಾರಣ ಬಸ್ ಇದ್ದಕ್ಕಿದ್ದಂತೆ ನಿಂತು ಬಿಟ್ಟಿತು. ಕಾರಣ ಕೆಲವೇ  ಕ್ಷಣಗಳ ಹಿಂದೆ ಅಲ್ಲೊಂದು ಅಪಘಾತವಾಗಿತ್ತು. ರಾಷ್ಟೀಯ ಹೆದ್ದಾರಿ ಬೇರೆ ನಮಗೆ ಆತಂಕ ಶುರು ಆಯಿತು. ಸಮಯಕ್ಕೆ  ಸರಿಯಾಗಿ ಶಾಲೆ ತಲುಪಲು ಸಾಧ್ಯವೇ ಎಂದು. ನಾವು ಡ್ರೈವರ್ ಅವರನ್ನ  ಕೇಳಿದೆವು. ಹತ್ತಿರದ ಇನ್ನೊಂದು ದಾರಿಯಲ್ಲಿ ಹೋಗಿರಿ  ನಮಗೆ ಎಕ್ಸಾಂ ಇದೆ. ಅವರು ಇಲ್ಲ ಅದು ಸಾಧ್ಯವಾಗಲ್ಲ ಎಂದರು. ಆಗ ನಾವು ಪೆಚ್ಚು ಮೋರೆ ಹಾಕಿಕೊಂಡೆವು. ಆಗ ಅವರು ಸಾವಧಾನವಾಗಿ ಅವರದೇ ಆದ ಕೆಲವು  ಸಮಸ್ಯೆಗಳನ್ನು ಹೇಳಿಕೊಂಡರು. ಜನರ ಒತ್ತಾಯಕ್ಕೆ  ಮಣಿದು ಅವರು ಬೇರೆ ರೂಟ್ ನಲ್ಲಿ ಹೋದಾಗ ಅಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸಿದರೂ ಅವನ ತಪ್ಪೆಂದು ಪರಿಗಣಿಸಿ ಅವನನ್ನು  ಕರ್ತವ್ಯದಿಂದ ಸಸ್ಪೆಂಡ್ ಮಾಡುವ ಸಾಧ್ಯತೆಯಿದೆ ಎಂದು ತಿಳಿಸಿದರು. ಯಾವುದೇ ಕ್ಷೇತ್ರ ಇರಬಹುದು, ಅಲ್ಲಿನ ಒಳ ಹೊರಗು  ಅಲ್ಲಿ ಇರುವವರಿಗೆ ತಿಳಿದಿರುವುದೆ ಹೊರತು ದೂರದಲ್ಲಿ ನಿಂತು ಮಾತನಾಡುವವರಿಗಲ್ಲ. ಇದು ಎಲ್ಲಕ್ಕು ಅನ್ವಯ ಆಗುತ್ತದೆಯಲ್ಲವೇ ? ನಾವು ತರಗತಿಗಳನ್ನು ತೆಗೆದುಕೊಳ್ಳಲು ನಿಯೋಜಿಸಿದ ಶಾಲೆಗೆ ನಾವು ಹೋಗಬೇಕಿತ್ತು. ಅಂತಹ ದಿನಗಳಲ್ಲಿಯೇ ಅನಿವಾರ್ಯ ಕಾರಣಗಳಿಂದ ನಮಗೆ ಬಸ್ ಸಿಗುವುದು ತಡವಾಗುತ್ತಿತ್ತು.ಮಾಗಿ ಕಾಲದ ದಿನಗಳಾಗಿದ್ದರೆ ಬೇಗನೆ ಕತ್ತಲು ಕವಿದು ಬಿಡುತ್ತಿತ್ತು  ಕೆಲವು ಬಸ್ ನಿರ್ವಾಹಕರು ಪಾಸ್ ಸೌಲಭ್ಯ ಹೊಂದಿದ ನಮ್ಮ ಮೇಲೆ ಸಿಡುಕುತ್ತಾ ಸಹನೆಯಿಲ್ಲದೆ ನೀವೆಲ್ಲಾ ಮ್ಯಾಟ್ನಿ ( ಮಧ್ಯಾನ್ಹದ ಚಲನ ಚಿತ್ರ ಪ್ರದರ್ಶನ )ಸಿನಿಮಾ ನೋಡಿಕೊಂಡು ಬರ್ತಿರಾ ಎಂದು ಗೊಣಗುತ್ತಾ ಪೂರ್ವಾಗ್ರಹ ಪೀಡಿತ ತೀರ್ಪನ್ನು ಕೊಟ್ಟೇ ಬಿಡುತ್ತಿದ್ದರು.ಆಗ ನಾವು ನಮಗೇನೂ ಕೇಳಿಸೇ ಇಲ್ಲವೆಂಬಂತೆ ಇರುತ್ತಿದ್ದೆವು.ಒಮ್ಮೆ ಹೀಗೆ ತಡವಾಗಿ ಬಸ್ ಹತ್ತಿ ಕೂತು ಅಂದಿನ ತರಗತಿ ಹಾಗೂ ವಿಷಯದ ಬಗ್ಗೆ ಮಾತನಾಡುತ್ತಾ ಅಂದಿನ ಬಸ್ ಕಂಡಕ್ಟರ್ ಗೆ ಪಾಸ್ ತೋರಿಸಿದಾಗ”ನೀವೆಲ್ಲಾ ಬಿ.ಇಡಿ. ಓದುತ್ತಿದ್ದೀರಾ?ನೀವು ಸ್ಕೂಲ್ ಗಳಿಗೆ ಹೋಗಿ ಪಾಠ ಮಾಡಬೇಕು ಅಲ್ವೇನ್ರಮ್ಮ. ನನ್ನ ಮಗಳೂ ಬಿ. ಇಡಿ. ಮಾಡ್ತಾ ಇದಾಳೆ ‘ ಎಂದವರು ಹೇಳಿದಾಗ ಒಬ್ಬ ಸಹೃದಯ ಸಜ್ಜನರಂತೆ ಕಂಡುಬಂದರು ಕಾಲೇಜು ವಿದ್ಯಾರ್ಥಿಗಳಿದ್ದ ಆ ಬಸ್ನಲ್ಲಿ ಜೋರು ಮಾತು ಕತೆ, ವಿನಾಕಾರಣ ನಗು,ಸಿನಿಮಾ,ರಾಜಕೀಯ,ಕಾಲೇಜ್  ಟೀಕೆ ಟಿಪ್ಪಣಿ, ತರಲೆ ತುಂಟಾಟಗಳ ಲವಲವಿಕೆ ತುಂಬಿದ ಉತ್ಸಾಹ ಪುಟಿಯುತ್ತಿತ್ತು ! ನಾನು ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಗೆ ಪ್ರತಿದಿನ ನಾವು ಬಸ್ ನಲ್ಲಿ ಹೋಗಬೇಕಿತ್ತು. ಹದಿನೈದುನಿಮಿಷದ ಅಲ್ಲಿನ ಪ್ರಯಾಣಕ್ಕೆ ಅರ್ಧಗಂಟೆಗೂ ಹೆಚ್ಚಿನ ಸಮಯವೆ ಬೇಕು ಪ್ರತಿಯೊಂದು ಹಳ್ಳಿಯಲ್ಲೂ ಹತ್ತಿ ಇಳಿಯುವವರಿಂದಾಗಿ ಅದು ಅನಿವಾರ್ಯ ಸಹ. ಒಮ್ಮೆಬಸ್ನಲ್ಲಿ ಹೋಗುವಾಗ ಇದ್ದಕ್ಕಿದ್ದಂತೆಯೇ ಗದ್ದಲ ಎದ್ದಿತು. ಏನೋ ದುರ್ವಾಸನೆ ಬರುತ್ತಿದೆ ಎಂದು ಎಲ್ಲರು ಜೋರಾಗಿ ಹೇಳತೊಡಗಿದರು  ದುರ್ವಾಸನೆ ಬೀರುವ ವಸ್ತುವನ್ನು ಬಸ್ಸಲ್ಲಿ ಇಡಲಾಗಿದೆ  ಎಂದು ಜನರು ಗುಮಾನಿ ಪಟ್ಟರು.ಆಗ ಬಸ್ ಕಂಡಕ್ವರ್ ( ಖಾಸಗಿ ಬಸ್) ಅಂತಹುದೇನೂ ಇಟ್ಟಿಲ್ಲ ಎಂಬುದಾಗಿ ಸ್ವಷ್ಟಪಡಿಸಿದನು. ಆಗ ಬಸ್ ನಲ್ಲಿದ್ದ ಯಾರೋ ಒಬ್ಬರು   ಮತ್ತೊಬ್ಬನ ಕಡೆ ಕೈ ತೋರಿಸುತ್ತ “ಅಗೋ ಅವನಿಂದಲೇ ಆ ಕೆಟ್ಟ ದುರ್ವಾಸನೆ ಬರ್ತಾ ಇರೋದು ಅವನ ಕಾಲಿಗೆ ಕೊಳಕು ಮಂಡಲ(ಒಂದು ರೀತಿಯಹಾವು) ಕಚ್ಚಿಬಿಟ್ಟಿದೆ ಅದಕ್ಕೆ ಈ ವಾಸನೆ”ಎಂದರು ಬಹಳಷ್ಟು ಜನರು ವಾಸನೆ  ತಡಯಕಾಗ್ತಿಲ್ಲ ಅವನನ್ನು ಕೆಳಗಿಳಿಸಿ ಎಂದಾಗ ಅವನು ತಾನೇ ತಾನಾಗಿ ಮುಖಕ್ಕೆ ಟವಲ್ ಮುಚ್ಚಿಕೊಂಡು ಕೆಳಗೆಇಳಿದು ಬಿಟ್ಟ. ಅಬ್ಬಾ! ಎಷ್ಟೊಂದು ಅವಮಾನ ! ಎಷ್ಟು ತಿರಸ್ಕಾರ ! ನನಗಂತು ಆ ರೀತಿಯ ಹಾವಿನ ಕಡಿತದ ಬಗ್ಗೆ ಅದರ ಪರಿಣಾಮ ಏನೂ ಗೊತ್ತಿಲ್ಲ ಎಲ್ಲವೂ ಹೊಸದೇ  ಅದು ನಿಜ ಅಥವ ಸುಳ್ಳೇಎಂಬುದು ಸಹ ತಿಳಿದಿರಲಿಲ್ಲ  ಅವನಿಗೆ ಅಂಥ ಅವಮಾನ ಮಾಡಿ ನಿರ್ದಯಿಗಳಾದ ಕಟುಕರಂತೆ ಕೆಳಗೆ ಇಳಿಸಿದ್ದು ಮಾತ್ರ ಅಮಾನುಷ ಕೃತ್ಯ ಎನಿಸಿತು. ಅಂತಹದೊಂದು ಹೀನಾಯ ಕ್ರಿಯೆಗೆ ನಾನು ಮೂಕ ಪ್ರೇಕ್ಷಕಳಂತೆ ಇದ್ದದ್ದು ತುಂಬಾನೇ ಕೆಡುಕೆನಿಸಿತು. ಕೆಲವೊಮ್ಮೆ ಜನರು ಸಮೂಹ  ಸನ್ನಿಗೊಳಗಾದವರಂತೆ ವರ್ತಿಸುತ್ತಾರೆ ಅನಿಸಿತು.  ನಾನು ಕರ್ತವ್ಯ ನಿರ್ವಹಿಸುತ್ತಿದ್ದ ನಮ್ಮ ಶಾಲೆಗೆ ಅಕ್ಕಪಕ್ಕ ಅಕ್ಕಪಕ್ಕದ ಗ್ರಾಮಗಳಿಂದ ಬರುವ  ವಿದ್ಯಾರ್ಥಿಗಳಿದ್ದರು. ಆಗ ಸರ್ಕಾರಿ ಬಸ್ ಗಳ ಸ್ಟಾಪ್ ಇರಲಿಲ್ಲ.ಖಾಸಗಿ ಬಸ್ಗಳೆ ನಮ್ಮಆಪತ್ಬಾಂಧವರು ಹತ್ತು ಗಂಟೆಗೆ ಸರಿಯಾಗಿ ನಾವು ಶಾಲೆಯಲ್ಲಿರ ಬೇಕಿತ್ತು. ಒಂಭತ್ತು ಗಂಟೆಗೆ ಹೊರಡುತ್ತಿದ್ದ  ಏಕೈಕ ಬಸ್ “ರಾಘವೇಂದ್ರ’ ನಮ್ಮನ್ನು ಹಾಲಲ್ಲಾದರೂ ಹಾಕು ನೀರಲ್ಲಾದರು ಹಾಕು ರಾಘವೇಂದ್ರ !  ಎಂಬಂತೆ ನಾವು ಅದನ್ನೇ ನಂಬಿದ್ದೆವು. ಪ್ರತಿಯೊಂದು ಸ್ಟಾಪನಲ್ಲೂ ನಮ್ಮವಿದ್ಯಾರ್ಥಿಗಳು ಹತ್ತುತ್ತಿದ್ದರು. ವಿದ್ಯಾರ್ಥಿನಿಯರು ಮಾತ್ರ ನಿಲ್ಲುವಷ್ಟು ಜಾಗ ಸಿಕ್ರೆ ಸಾಕು ಎಂದು ಬಸ ನಲ್ಲಿ  ತೂರಿ ಬಿಡುತ್ತಿದ್ದರು.ಆದ್ರೆ ನಮ್ಮ ಹುಡುಗ್ರು ಮಾತ್ರ ಬಸ್ ನಿಂತಾಕ್ಷಣ ಚಕ್ಕನೆ ಬಸ್ ಮೇಲೆ ಹತ್ತಿ ಕೂತುಬಿಡುತ್ತಿದ್ದರು  ಜಾಗ ಇಲ್ಲದಿದ್ದರೆ ಅವರು ತಾನೇ ಏನು ಮಾಡಿಯಾರು! ಆ ಬಸ್ ಬಿಟ್ಟರೇ ನಮಗೆ ಬೇರೆ ಬಸ್ ಇಲ್ಲ. ಹುಡುಗರು ಬಸ್ ಮೇಲೆ ಹತ್ತುವಾಗ ಸುಮ್ಮನಿರುತ್ತಿದ್ದ ಕಂಡಕ್ಟರಪ್ನ ಅವರೆಲ್ಲ ಇಳಿಯುವಾಗ ಅವರನ್ನು ಬೈಯುತ್ತಾ”ಇದೇ ಏನ್ರೋ ನೀವು ಸ್ಕೂಲಲ್ಲಿ ಕಲಿಯೋದು?” ಪರೋಕ್ಷವಾಗಿ ನಮ್ಮ ಮೇಲೆ ಆರೋಪ ಹೊರಿಸಿ ಕೂಗಾಡುತ್ತಿದ್ದ. ಆಗೆಲ್ಲ ಬೇಸರವಾದರೂ ಸಹ ನಮ್ಮ ಮಕ್ಕಳದೇ ತಪ್ಪಾಗಿರುತ್ತಿದ್ದ ಕಾರಣ ನಾವೂ ಸುಮ್ಮನಿರುತ್ತಿದ್ದೆವು. ದಿನಾ ಅದೇ ರಾಗ ಆಗಿದ್ದರಿಂದ ನಾವು ನಮ್ಮ ಮಕ್ಕಳು ಮೊಂಡು ಬಿದ್ದಿದ್ದೆವು ದಿನದಲ್ಲಿ ಎಂಟು ಗಂಟೆ ಮಾತ್ರ ಮಕ್ಕಳು ಶಿಕ್ಷಕರೊಂದಿಗೆ ಇರುತ್ತಾರೆ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರವೂ ಹಿರಿದೆಂಬುದರಲ್ಲಿ ಎರಡು ಮಾತಿಲ್ಲ. ಅದರೂ  ಮಕ್ಕಳ ಬದುಕಿನಲ್ಲಿ ತಂದೆತಾಯಿಗಳ ಪಾತ್ರವೇನೂ ಇಲ್ಲ ಎಂಬಂತೆ ಆಡುವ ಮಾತುಗಳನ್ನು ಕೇಳಿದಾಗ  ಶಿಕ್ಷಕರಿಗೆ ಬೇಸರವಾಗುವುದು ಸಹಜವೇ ಆಗಿದೆ. ಒಮ್ಮೊಮ್ಮೆ ವಿಚಿತ್ರವಾದರೂ ನಿಜವೆನಿಸುವಂಥ ಅನೇಕ ಪ್ರಸಂಗಗಳಿಗೆ ಪ್ರತ್ಯಕ್ಷದರ್ಶಿಗಳಾಗುತ್ತೇವೆ. ಶಿಕ್ಷಕರೆ ಹೆಚ್ಚು ಹೋಗುವ

ಬಸ್ ಪಯಣ Read Post »

ಇತರೆ

ಯುವ ಗಜಲ್ ಕವಿ ಅಕ್ಷತಾ ಕೃಷ್ಣಮೂರ್ತಿ ಅಕ್ಷತಾ ಕೃಷ್ಣಮೂರ್ತಿವಯಸ್ಸು : ೩೯ವೃತ್ತಿ: ಶಿಕ್ಷಕಿಶಿಕ್ಷಣ: ಕನ್ನಡ ಸ್ನಾತಕೋತ್ತರ ಪದವಿ ಕೃತಿಗಳು: ಹನ್ನೆರಡು ದಡೆ ಬೆಲ್ಲಹಾಲಕ್ಕಿ ಒಕ್ಕಲಿಗರುಮಧುರಚನ್ನಕೋಳ್ಗಂಬಹಾಲಕ್ಕಿ ಕೋಗಿಲೆಕೇದಿಗೆಯ ಕಂಪುನಾನು ದೀಪ ಹಚ್ಚಬೇಕೆಂದಿದ್ದೆ ಅಕ್ಷತಾ ಕೃಷ್ಣಮೂರ್ತಿಯವರ ಒಂದು ಗಜಲ್ ತಮ್ಮ ಓದಿಗಾಗಿ ಒಂದೆಒಂದು ಸಾರಿ ಪ್ರೀತಿಸುವೆ ಎಂದ್ಹೇಳಿ ಬಿಡು ಮಳೆಯಾಗಿ ಸುರಿದುಬಿಡುವೆಒಲವ ಪರಿಮಳವಾಗಿ ಬೀರಿ ಬಿಡು ತಂಗಾಳಿಯಾಗಿ ನಿನ್ನ ಸುತ್ತುವರಿಯುವೆ ಒಂದೆರಡು ಪದಗಳಿಗೆ ನೀ ಪ್ರೀತಿತುಂಬಿದರೆ ನಾ ಮಾತಾಡಿಬಿಡುವೆಉಸಿರು ಬಿಗಿಹಿಡಿದು ನಿನಗಾಗಿ ಕಾಯುವುದೇ ಪುಣ್ಯವೆಂದುಜೀವಿಸುವೆ ಒಂದೆಒಂದು ನೋಟಕೊನೆಯ ಬಾರಿಎಂಬಂತಾದರೂ ನೋಡಿಬಿಡುವೆನೀನು ಬಂದು ಮಾತನಾಡುವಕ್ಷಣಕೆ ಹಾತೊರೆಯುವುದನು ಮುಂದೂಡುವೆ ಒಂದುಕ್ಷಣ ನಿನ್ನ ಮುಂಗುರುಳು ತೀಡಲು ಬಿಡು ಸಿಕ್ಕಿದ್ದೆ ಪುಣ್ಯಎನ್ನುವೆಆ ನಿನ್ನ ಮೆತ್ತನೆಕೆನ್ನೆ ನಿಧಾನಒತ್ತಿಒಂದೆಒಂದು ಮುತ್ತನಿಡುವೆ ಎಷ್ಟು ಕಾಡುವೆಯೆ ನಿನ್ನ ಪಡೆಯುವಆಸೆಯನ್ನೆ ನೀನೆ ಮೆಟ್ಟಿರುವೆಹೃದಯ ಬಲು ನಾಜೂಕು, ಚುಚ್ಚಿ ನೋವಾಗಿ ಪ್ರತಿ ದಿನ ಸಾಯುತಿರುವೆ ************************************

Read Post »

ಇತರೆ

ಫಕೀರ್ ಸೂಫಿ ಸಂತ ಸೈಯದ್ ಹಜರತಶಾ ಕಾದರಿ..!

ಲೇಖನ ಫಕೀರ್ ಸೂಫಿ ಸಂತ ಸೈಯದ್ ಹಜರತಶಾ ಕಾದರಿ..! ಸೈಯದ್ ಹಜರತಶಾ ಕಾದರಿಯವರು ಸೂಫಿ ಸಂತರಲ್ಲೊಬ್ಬರು. ಇವರು ಆಗಿನ ಧಾರವಾಡ ಜಿಲ್ಲೆಯ ಈಗಿನ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹುಲಗೂರಲ್ಲಿ ನೆಲೆ ಕಂಡುಕೊಂಡವರು. ಇವರ ಜನನ, ಬಾಲ್ಯ, ಬದುಕು ಹಾಗೂ ಈ ಸಂತರ ಮರಣಗಳೆಲ್ಲವೂ ಪೂರ್ಣ ವಿಶಿಷ್ಠವಾದವುಗಳು ಆಗಿದ್ದವು… ಸೈಯದ್ ಹಜರತಶಾ ಕಾದರಿಯವರು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಬಂಕಾಪುರದಲ್ಲಿ ಜನಿಸಿದವರು. ಇವರ ತಂದೆಯ ಹೆಸರು ಸೈಯದ್ ಖಾದರಬಾಶಾ ಕಾದರಿ ಬಿಜಾಪೂರ. ತಾಯಿಯ ಹೆಸರು ಸೈಯದಾ ವಲಿಮಾಬೀಬಿ. ಸೈಯದ್ ವಲಿಮಾಬೀಬಿಯವರು ಅಲ್ಲಾವುದ್ದೀನಶಾ ಕಾದರಿಯವರ ಹಿರಿಮಗಳು. ಸೈಯದ್ ಹಜರತಶಾ ಕಾನರಿಯವರು ಇನ್ನೂ ತಾಯಿಯ ಹೊಟ್ಟೆಯಲ್ಲಿ ಇರುವಾಗ ತಂದೆ ಸೈಯದ್ ಖಾದರಬಾಶಾ ತೀರಿಕೊಂಡರು. ತಾಯಿ ಸೈಯದ್ ವಲಿಮಾಬೀಬಿಯವರು ಸೈಯದ್ ಹಜರತಶಾ ಕಾದರಿಯವರಿಗೆ ಜನ್ಮ ಕೊಟ್ಟು ಅವರೂ ತೀರಿದರು. ಹೀಗೆ ಸೈಯದ್ ಹಜರತಶಾ ಕಾದರಿಯವರು ಇನ್ನೂ ಕೂಸು ಇರುವಾಗಲೇ ತಂದೆ-ತಾಯಿ ತೀರಿದರು. ಇಂತಹ ಕಡು ದೃಶ್ಯಗಳನ್ನು ಕಂಡು ಕೂಸು ಸೈಯದ್ ಹಜರತಶಾ ಕಾದರಿಯವರ ತಾಯಿಯಾದ ಸೈಯದ್ ವಲಿಮಾಬೀಬಿಯವರ ತಂಗಿಯರು ಮತ್ತು ಅಣ್ಣತಮ್ಮಿಂದಿರು ಬಹು ದುಃಖತರಾದರು. ಅವರ ಮನೆಯೆಲ್ಲ ಶೋಕಸಾಗರದಲ್ಲಿ ಮುಳುಗಿತು… ಆದರೆ ಕೂಸು ಅಂದರೆ ಸೈಯದ್ ಹಜರತಶಾ ಕಾದರಿಯವರು ಬಹು ಸುಂದರವಾಗಿದ್ದರೂ ಈ ಮಗುವಿನ ಕಡೆಗೆ ಈ ಲಕ್ಷ್ಹವಹಿಸದೇ ಹೋದರು ಸೈಯದ್ ವಲಿಮಾಬೀಬಿಯವರ ತಂಗಿಯರು ಮತ್ತು ಅಣ್ಷತಮ್ಮಂದಿರು… ಮೇಲಿಂದ ಮೇಲೆ ಒದಗಿ ಬರುತ್ತಿದ್ದ ದುಃಖ-ದುಮ್ಮಾನ ಮತ್ತು ದುರ್ಘಟನೆಗಳಿಂದ ಬೇಸತ್ತು ಬೆಂಡಾಗಿ ಹೋಗಿದ್ದರು ಸೈಯದ್ ಹಜರತಶಾ ಕಾದರಿಯವರ ತಾಯಿಯ ತಂಗಿಯರು ಮತ್ತು ಅಣ್ಣತಂಮ್ಮಂದಿಯರು. ಹೀಗಿರುವಾಗ ಕೂಸಾದ ಸೈಯದ್ ಹಜರತಶಾ ಕಾದರಿಯವರನ್ನು ಸೈಯದ್ ವಲಿಮಾಬೀಬಿಯವರ (ಸೈಯದ್ ಹಜರತಶಾ ಕಾದರಿಯವರ ತಾಯಿ) ಅಣ್ಣನಾದ ಒಬ್ಬ ಸೈಯದ್ ಹಜರತಶಾ ಕಾದರಿಯವರವರನ್ನು ಇನ್ನೂ ಕೂಸು ಇರುವಾಗಲೇ ಹಿತ್ತಲದಲ್ಲಿದ್ದ ಒಂದು ಸೀತಾಫಲದ ಗಿಡದ ಬುಡದಲ್ಲಿ ಮಲಗಿಸಿ ಬಂದು ಬಿಟ್ಟ. ತದನಂತರ ಇವರ ಅಂದರೆ ಸೈಯದ್ ಹಜರತಶಾ ಕಾದರಿಯವರ ತಾಯಿ ದಿವಸಕಾರ್ಯ ಮುಗಿಸಿದರು. ಅಲ್ಲಿಯವರೆಗೂ ಈ ಸೈಯದ್ ಹಜರತಶಾ ಕಾದರಿ ಕೂಸು ಅಲ್ಲಿಯೇ ಸೀತಾಫಲದ ಗಿಡದ ಬುಡದಲ್ಲಿಯೇ ಮಲಗೇ ಇತ್ತು. ವಲಿಮಾಬೀಬಿಯವರ ದಿವಸ ಕಾರ್ಯವೆಲ್ಲ ಮುಗಿದು ಎರಡು-ಮೂರು ದಿನಗಳಾದರೂ ಆ ಕೂಸಿನತ್ತ ಇವರ ಗಮನವೇ ಇರಲೇ ಇಲ್ಲ. ನಾಲ್ಕನೇ ದಿನ ಫಾತೀಮಾಬೀಬಿ ಎಂಬವರು ಹಿತ್ತಲಿಗೆ ಹೋದರು. ಅಲ್ಲಿ ಹಸುಗೂಸು ಸೈಯದ್ ಹಜರತಶಾ ಕಾದರಿಯವರ ನೆಲವನ್ನೇ ಹಾಸಿಗೆ, ಆಕಾಶವೇ ಹೊದುಗೆ ಮಾಡಿಕೊಂಡು ಸೃಷ್ಟಿಕರ್ತನ ಆಶ್ರಯ ಪಡೆದು ನಸುನಗುತ್ತ ಮಲಗಿತ್ತು. ಆಗ ಆ ಸೈಯದ್ ಫಾತೀಮಾಬೀಬಿ ದೃಷ್ಟಿ ಆ ಮಗುವಿನತ್ತ ಹೊರಳಿತು. ಆಗ ಆ ಫಾತೀಮಾಬೀಬಿ ಲಗುಬಗೆಯಿಂದ ಆ ಮಗುವನ್ನು ಎತ್ತಿಕೊಂಡು ಎದೆಗೆ ಅವಚಿಕೊಂಡು ಮೇರೆ ಲಾಲ (ನನ್ನ ಕಂದ) ಎಂದು ಹೃದಯದಿಂದಲೇ ಉಕ್ಕೇರಿ ಬಂದ ಕಣ್ಣೀರನ್ನು ಸುರಿಸುತ್ತಾ ನಿನ್ನ ತಾಯಿ ಇದ್ದಿದ್ದರೆ ಇಂತಹ ಸ್ಥಿತಿಯಲ್ಲಿ ಬಿಡುತ್ತಿದ್ದಳೆ ಎಂದು ಗೋಳಾಡುತ್ತ ಒಳಗೊಯ್ದಳು ಮಗುವನ್ನು. ಮಗು ಅಂದರೆ ಸೈಯದ್ ಹಜರತಶಾ ಕಾದರಿಯು ಮೂರ್ನಾಲ್ಕು ದಿನಗಳಿಂದ ಹಾಲಿಲ್ಲದೇ ಹಾಗೇ ನಸುನಗುತ್ತ ಹಿತ್ತಲಲ್ಲೇ ಮಗಿತ್ತು. ಆದರಿಂದ ಹಾಲುಣಿಸಲು ಫಾತೀಮಾಬೀಬಿ ಪ್ರಯತ್ನ‌ ಮಾಡಿದಳು. ಹುಹುಂ ಹಾಲನ್ನು ಮಗು ಸೈಯದ್ ಹಜರತಶಾ ಕಾದರಿಯು ಹಾಲುಣುಲೇ ಇಲ್ಲ. ಮತ್ತೆ ಒಂದಿಬ್ಬರು ಪ್ರಯತ್ನಿಸಿದರು. ಆದರೂ ಮಗುವಿಗೆ ಹಾಲು ದಕ್ಕಲೇ ಇಲ್ಲ. ಆಗ ಎಲ್ಲರೂ ಚಿಂತಾಕ್ರಾಂತರಾದರು ಮಗುವಿಗೆ ಹಾಲುಣಿಸಲು ಯಾರನ್ನು ತರಬೇಕೆಂದು. ಹೀಗೆಯೇ ಮಗುವಿನ ಮಾವ ಅಂದರೆ ಸೋದರಮಾವ ಮಗುವನ್ನು ಎತ್ತಿಕೊಂಡನು. ಮಗು ಮಾವನ ಮೊಲೆಗೆ ಬಾಯಿಹಚ್ಚಿತು. ಆಗ ಲೊಚಲೊಚನೆ ಹಾಲು ಮಾವನ ಮೂಲೆಗಳಿಂದ ಬರಲಾರಂಭಿಸಿತು. ಇಂತಹ ವಿಚಿತ್ರ ಘಟನೆ ನಡೆಯಿತು. ಹೀಗೆಯೇ ಮಗು ಮಾವನ ಮೊಲೆಹಾಲನ್ನು ಕುಡಿದೇ ಬೆಳೆಯತೊಡಗಿದ್ದು ವಿಚಿತ್ರವಾದ ಘಟನೆ ನಡೆಯಿತು… ಪ್ರಾರಂಭದಿಂದಲೂ ಹೀಗೆಯೇ ವಿಲಕ್ಷಣವಾಗಿ ಬೆಳೆದು, ದೊಡ್ಡವನಾದ ಸೈಯದ್ ಹಜರತಶಾ ಕಾದರಿಯು. ಸೋದರ ಮಾವಂದಿರಾದ ಸೈಯದ್ ಆಬ್ದುರ್ರಜಾಕ ಕಾದರಿಯವರ ಆಶ್ರಯದಲ್ಲೇ ಮಗುವಿನ ಬಾಲ್ಯದ ದಿನಗಳುರುಳಿದವು. ಸೋದರ ಮಾವಂದಿರಿಂದ ಮುಂದೆ ಪಾಠ ಕಲಿಯತೊಡಗಿದ ಸೈಯದ್ ಹಜರತಶಾ ಕಾದರಿಯವು. ಪ್ರಾಥಮಿಕ ಮತ್ತು ಧಾರ್ಮಿಕ ಶಿಕ್ಷಣವನ್ನು ಸೋದರ ಮಾವಂದಿರಿಂದ ಕಲಿತು ಪೂರ್ಣಗೊಂಡ. ಯಾವಾಗ ಹನ್ನೆರಡು ವರ್ಷದವನಾದನೋ ಆವಾಗ ಸೈಯದ್ ಹಜರತಶಾ ಕಾದರಿಯು ಆಟ-ಪಾಠ ನಿತ್ಯದ ಕೆಲಸವಾಯಿತು. ಒಂದು ದಿನ ಸೈಯದ್ ಹಜರತಶಾ ಕಾದರಿಯು ಬೀದಿಯಲ್ಲಿ ಸುತ್ತುತ್ತಿರುವಾಗ ಅಲ್ಲಿ ಹಾಯ್ದು ಹೋಗುವ ಸೀಪಾಯಿಗಳನ್ನು ನೋಡಿದ. ಅವರು ಖಾಕಿ ಉಡುಪು ಧರಿಸಿ ತಲೆಯ ಮೇಲೆ ಮುಂಡಾಸು ಧರಿಸಿ ಅವರು ಹೋಗುವುದು ಶೋಭಿಸುತ್ತಿತ್ತು. ಅವರ ಉಡುಪಿನ ಮೇಲೆ ಶತ್ತ್ರಸ್ತಗಳೊಂದಿಗೆ ಆಡಂಬರದಿಂದ ಹೆಜ್ಜೆ ಹಾಕುತ್ತಿರುವುದನ್ನು ಕಂಡ ಸೈಯದ್ ಹಜರತಶಾ ಕಾದರಿಗೆ ಆಡಂಬರದ ಕಡೆಗೆ ಮನಸ್ಸು ಹೊರಳಿತು. ಆ ಸಿಪಾಯಿಯವಂತಯೇ ಪೋಷಕು ಧರಸಿ ಊರನ್ನೆಲಾ‌ ಸುತ್ತಿ ಬಂದ ಸೈಯದ್ ಹಜರತಶಾ ಕಾದರಿಯು. ಮನೆಗೆ ಬಂದೊಡನೆ ಸೋದರಮಾವ ಅಬ್ದುರ್ರಜಾಕ ಕಾದರಿಯವರು ಸೈಯದ್ ಹಜರತಶಾ ಕಾದರಿಯವರ ಆ ಪೋಷಾಕು ನೋಡಿ ಬೆರಗಾದರು. ಆಗ ಅವರ ಕಣ್ಣಿನಿಂದ ಕಂಬನಿ ಉದುರತೊಡಗಿತು. ಆಗ ಸೈಯದ್ ಹಜರತಶಾ ಕಾದರಿಯು ಕೇಳಿದ ಮಾವನವರೆ ಏಕೆ ಅಳತೊಡಗಿದಿರಿ ಎಂದು. ಆಗ ಮಾವ ಅಬ್ದುರ್ರಜಾಕ ಕಾದರಿಯವರು ಹೇಳುತೊಡಗಿದರು. ಮಗನೇ ನಮ್ಮಂತಹ ಫಕೀರ್ ರರಿಗೆ ಈ ತರದ ಉಡುಪು ಭೂಷಣವಲ್ಲ.ನಮಗೆ ಕಂಬಳಿಯೇ ಲೇಸು. ಲೆಪ್ ರೈಟ್ ನಮಗೆ ಬೇಡ. ಸರಳತೆಯ ಉಠ್ ಬೈಠ್ ನಮಗೆ ಬೇಕು. ಇದರಲ್ಲಿಯೇ ನಮಗೆ ತೃಪ್ತಿ ಇದೆ. ಆಡಂಬರದ ಉಪಕರಣ, ಸಾಮಗ್ರಿಗಳು ಬೇಡ. ಫಕೀರರಂತಹ ಸುಗಮ ವರ್ತನೆ ನಮಗೆ ಬೇಕಾಗಿದೆ. ನಮ್ಮ ಸಲುವಾಗಿ ನಾವೇ ಧಾನ್ಯ ಸಂಗ್ರಹಿಸಬೇಕು. ನಮಗೆ ಈ ಭೂಮಿಯೇ ಹಾಸಿಗೆ, ಗಿಡದೆಲೆಯೇ ಹೊದಿಗೆ. ಅಡವಿ ಗಿಡಮೂಲಿಕೆಯೇ ನಮ್ಮ ಆಹಾರ. ಇದರ ಹೊರತು ಅದ್ಯಾವುದೂ ನಮಗೆ ಬೇಡ. ಹೀಗೆಯೇ ಫಕೀರ್ ನ ಬದುಕಿನ ಲಕ್ಷಣಗಳನ್ನು ತಿಳಿಹೇಳಿದರು ಮಾವ ಅಬ್ದುರ್ರಜಾಕ ಕಾದರಿಯವರು. ನೀವು ಹಜರತ್ ಪೈಗಂಬರ್ ರ ಮಗಳ ಸಂತತಿ. ಆದರೆ ಹಜರತ್ ಮೌಲಾ ಅಲಿಯವರ ಮಕ್ಕಳ ಸಂತತಿಯಲ್ಲಿದ್ದೀರಿ. ಅವರ ಪಕ್ಷ ವಹಿಸಬೇಕಾಗಿತ್ತು. ಪರಂತು ನೀವು ನನ್ನ ಹತ್ತಿರ ನಿರಾತಂಕವಾಗಿ ಬಂದಿರುವಿರಲ್ಲ ಎಂದು ದುಃಖಿತ ಹೃದಯದಿಂದ ಅಂದರು. ಆ ಮರುಕ್ಷಣದಲ್ಲಿಯೇ ಸೈಯದ್ ಹಜರತಶಾ ಕಾದರಿಯವರು ತಮ್ಮ ಆಡಂಬರದ ದಿರಿಸು ತೆಗೆದೊಗೆದರು. ನಮ್ರತೆಯಿಂದ ಮಾವ ಅಬ್ದುರ್ರಜಾಕ ಕಾದರಿಯವರಿಗೆ ಹೇಳಿದರು. ಮಾವನವರೇ ನನಗೆ ಜ್ಞಾನನೋದಯ ಮಾಡಿಸಿದಿರಿ. ನಿಮ್ಮ ಉಪದೇಶದಂತೆಯೇ ನಡೆಯುವೆ. ಹಾಗೆ ಸೈಯದ್ ಹಜರತಶಾ ಕಾದರಿಯವರು ಜ್ಞಾನೋದಯಗೊಳ್ಳುತ್ತಿದಂತೆಯೇ  ಅವರಿಗೆ ಆಗಲೇ ಸೈಯದ್ ಅಬ್ದುರ್ರಜಾಕ ಕಾದರಿಯವರು ಖಿಲಾಫತ್ ಅಂದರೆ ದೀಕ್ಷೆ ಕೊಟ್ಟರು. ಹಾಗೂ ಕಾದರಿಯವರನ್ನು ಆಶೀರ್ವದಿಸಿದರು ಅಬ್ದುರ್ರಜಾಕ ಕಾದರಿಯವರು… ಮಾವ ಅಬ್ದುರ್ರಜಾಕ ಕಾದರಿಯವರು ಸೈಯದ್ ಹಜರತಶಾ ಕಾದರಿಯವರ ಧರ್ಮ ಗುರು… ಹೀಗೆಯೇ ಸೈಯದ್ ಹಜರತಶಾ ಕಾದರಿಯರಿಗೆ ತಮ್ಮ ಆತ್ಮ ಮತ್ತು ಪರಮಾತ್ಮನ ಅರಿವು ಆಯಿತು. ಯಾವನು ತನ್ನ ಆತ್ಮವನ್ನು ಗುರುತಿಸುವನೋ‌ ಅವನೇ ದೇವರನ್ನೂ ಗುರುತಿಸುವನು. ಯಾವನು ಅರಿಷಡವರ್ಗಗಳನ್ನು ಅಂದರೆ ಕಾಮ, ಕ್ರೋಧ, ಮೋಹ, ಲೋಭ, ಮದ ಮತ್ತು ಮತ್ಸರಗಳನ್ನು ಮೆಟ್ಟಿ ನಿಲ್ಲುವುನೋ ಆವಾಗ ಮಲಿನ‌ ಪದಾರ್ಥಗಳಿಂದ ದೂರವಾಗಿ ನಿರ್ಮಲವಾಗುವುನು. ಮಾನವ ಜನ್ಮದ ಮುಖ್ಯ ಉದ್ದೇಶಗಳಾದರೂ ಹೀಗಿರುವುವು– ೧) ತನ್ನನ್ನು ತಾನು ಅರಿಯುವುದು, ೨) ಜನರ ಹಕ್ಕುಬಾದ್ಯಗಳನ್ನು ಅರಿತುಕೊಂಡು ಜೀವನ ನಡೆಸುವುದು, ೩) ತನ್ನನ್ನು ನಿರ್ಮಾಣ ಮಾಡಿದ ಜಗದೀಶನನ್ನು ಅರಿಯುವುದು. ಇವುಗಳನ್ನು ಪಾಲಿಸಿದರೆ ಸತ್ಯಜ್ಞಾನದ ಅರಿವು ಸುಗಮವಾಗುವುದು. ಹೀಗೆಯೇ ಹೇಳುತ್ತಲೇ ಹೋಗಿದ್ದಾರೆ ಸೈಯದ್ ಹಜರತಶಾ ಕಾದರಿಯವರು… ಮುಂದೆ ಸೈಯದ್ ಹಜರತಶಾ ಕಾದರಿಯವರು ತಮ್ಮ ಮಾವನವರಾದ ಸೈಯದ್ ಅಬ್ದುರ್ರಜಾಕ ಕಾದರಿಯವರ ಮಗಳು ಸೈಯದ್ ಮರಿಯಂ ಬೀಬಿಯವರನ್ನು ಮದುವೆ ಆಗುತ್ತಾರೆ. ಮಾವ ಸೈಯದ್ ಅಬ್ದುರ್ರಜಾಕ ಕಾದರಿಯವರು ಇವರಿಗೆ ಸೋದರಮಾವನೂ ಹೌದು. ಧರ್ಮ ಗುರುವೂ ಹೌದು. ಅಲ್ಲದೇ ಮಗಳು ಮರಿಯಂ ಬೀಬಿಯವರ ತಂದೆ ಅಂದರೆ ಸೈಯದ್ ಹಜರತಶಾ ಕಾದರಿಯವರಿಗೆ ಮಗಳು ಕೊಟ್ಟವರೂ ಹೌದು. ನಂತರ ಸೈಯದ್ ಹಜರತಶಾ ಕಾದರಿಯವರಿಗೆ ತಮ್ಮ ಕಕ್ಕಂದಿರ ಸಂದರ್ಸಿಸಿ ಬರುವ ಅಪೇಕ್ಷೆಯಂತೆ ಮಾವನವರ ಅಪ್ಪಣೆಯಂತೆ ಬಿಜಾಪುರಕ್ಕೆ ಹೋಗಿ‌ ಬರುವ ಅನುವಾಗಿ ತಮ್ಮ ಕಕ್ಕಂದಿರ ಕಂಡು ಬರುತ್ತಾರೆ. ಹಾಗೆಯೇ ಮತ್ತೊಬ್ಬ ಕಕ್ಕನಾದ ಸೈಯದ್ ದಸಾವಲಿ ಕಾದರಿಯವರನ್ನು ಭೇಟಿ ಮಾಡಲು ಅದೇ ಬಿಜಾಪೂರ ಜಿಲ್ಲೆಯ ಉಕ್ಕಲಿ ಎಂಬ ಗ್ರಾಮಕ್ಕೆ ಹೋಗಿ ಬರುವರು… ಅಲ್ಲಿಂದ ಮುಂದೆ ತಿರುಗಿ ಶಿಗ್ಗಾವಿ-ಸವಣೂರ ತಾಲೂಕು ಬಂಕಾಪುರಕ್ಕೆ ಬರುವರು. ಬಂಕಾಪುರಕ್ಕೆ ಬಂದು ತಮ್ಮ ಮಾವನವರಾದ ಸೈಯದ್ ಅಬ್ದುರ್ರಜಾಕ ಕಾದರಿಯವರಿಗೆ ಭೇಟಿಯಾಗುವರು… ಅಲ್ಲಿಂದ ಮುಂದೆ ಸೈಯದ್ ಹಜರತಶಾ ಕಾದರಿಯವರು ಹೇಳದೇಕೇಳದೇ ಕಾಣೆಯಾಗುತ್ತಾರೆ. ಯಾವಾಗಲೂ ದೇವರ ಧ್ಯಾನದಲ್ಲಿ ಇರುತ್ತಿದ್ದ ಸೈಯದ್ ಹಜರತಶಾ ಕಾದರಿಯವರು ತಮ್ಮ ವಾಸಸ್ಥಳವನ್ನು ಬಿಟ್ಟು ಬಂಕಾಪುರ ಮತ್ತು ಸವಣೂರ ನಡುವೆ ಬರುವ ಹುರುಳಿಕೊಪ್ಪಿ ಬೆಟ್ಟಕ್ಕೆ ತೆರಳುವರು. ಬೆಟ್ಟದ ಗುಹೆಯೇ ತಮ್ಮ ಏಕಾಂತಕ್ಕೆ ಯೋಗ್ಯವಾದ ಸ್ಥಳವೆಂದು ಅಲ್ಲಿಯೇ ತಮ್ಮ ಬಿಡಾರವನ್ನು ಹೂಡುವರು. ಸೈಯದ್ ಹಜರತಶಾ ಕಾದರಿಯವರು ಹುರಳಿಕುಪ್ಪಿ ಬೆಟ್ಟದ ಗುಹೆಯಲ್ಲಿ ಕೂತುಕೊಂಡಿದ್ದ ಸಂಗತಿ ಯಾರಿಗೂ ತಿಳಿಯಲಿಲ್ಲ. ಅವರ ಶಿಷ್ಯರು ಸೈಯದ್ ಹಜರತಶಾ ಕಾದರಿಯವರನ್ನು ಗುಡ್ಡ, ಬೆಟ್ಟ, ಕಾಡು-ಮೇಡನ್ನೆಲ್ಲ ಹುಡುಕಿ ಸುಸ್ತಾದರು. ಕಡೆಗೆ ಶಿಷ್ಯರೆಲ್ಲ ತಮ್ಮ ಮನೆಗೆ ಮರಳಿದರು. ಹೀಗೆಯೇ ಈ ಆಂದೋಲನದಲ್ಲಿ ಪೂರ್ಣ ಏಳು ವರ್ಷಗಳು ಗತಿಸಿದವು. ತದನಂತರ ಹುರುಳಿಕುಪ್ಪಿಯ ಗುಹೆಯಿಂದ ಸೈಯದ್ ಹಜರತಶಾ ಕಾದರಿಯವರು ಹೊರಬಂದರು. ಕೈಕಾಲಿನ ಉಗುರುಗಳು ಬೆಳೆದಿದ್ದವು. ತಲೆ ಮೇಲಿನ ಕೂದಲು ಚದುರಿದ್ದವು.ಇವರು ಗುಹೆಯಿಂದ ಹೊರಗೆ ಬಂದಾಗ ಸಮೀಪದಲ್ಲಿಯೇ ಒಬ್ಬ ಹಿಂದೂವೊಬ್ಬಳು ದನ ಕಾಯುತ್ತಿದ್ದಳು. ಸೈಯದ್ ಹಜರತಶಾ ಕಾದರಿಯವರನ್ನು ಕಂಡು ವಿಧೇಯತೆಯಿಂದ ಅವಳು ನಮಸ್ಕರಿಸಿದಳು. ಸೈಯದ್ ಹಜರತಶಾ ಕಾದರಿಯವರು ಆಕೆಯ ಮೇಲೆ ಕೃಪೆ ತೋರಿದರು. ತಾಯಿ ನನಗೆ ಬಹಳ ಹಸಿವೆಯಾಗಿದೆ ಮಜ್ಜಿಗೆ-ಅಂಬಲಿ ತಂದು ಕೊಡುವೆಯಾ ಎಂದು ಕೇಳಿದರು. ಆಗ ಆ ಹೆಣ್ಣು ಮಗಳು ಊರಿಗೆ ಹೋಗಿ ಎರಡು ಬಟ್ಟಲು ತುಂಬಾ ಮಜ್ಜಿಗೆ-ಅಂಬಲಿಯನ್ನು ತಂದುಕೊಟ್ಟಳು. ಸೈಯದ್ ಹಜರತಶಾ ಕಾದರಿಯವರು ಅದನ್ನು ಸೇವಿಸದರು. ಆಗ ಸೈಯದ್ ಹಜರತಶಾ ಕಾದರಿಯವರು ಆಕೆಗೆ ಮತ್ತು ಆಕೆಯ ವಂಶದವರಿಗೆ ಆಶೀರ್ವಾದ ಮಾಡಿದರು. ಅಂದಿನಿಂದ ಅವರು ಸುಖಶಾಂತಿಯಿಂದ ಇರತೊಡಗಿದರು… ಸೈಯದ್ ಹಜರತಶಾ ಕಾದರಿಯವರು ಹುರಳಿಕುಪ್ಪಿ ಬೆಟ್ಟದ ಗವಿಯ ಮುಂಭಾಗದಲ್ಲಿ ಇರತೊಡಗಿದರು. ಅನೇಕ ಜನ ಭಕ್ತರು ಬಂದು ದರ್ಶನ ಪಡೆಯುತ್ತಿದ್ದರು. ಆ ಭಕ್ತರ ಪೈಕಿ ಸವಣೂರ ನವಾಬ್ ನೂ ಸೇರಿಕೊಂಡ. ಪರಸ್ಪರ ಮಾತುಕತೆಯಾದ ತರುವಾಯ ಆ ನವಾಬ್ ಹಕೀಮ್ ಖಾನಸಾಹೇಬನು ಸೈಯದ್ ಹಜರತಶಾ ಕಾದರಿಯವರನ್ನು ಬೇಡಿಕೊಂಡ ತಾವು ಸವಣೂರಿಗೆ ಬರಬೇಕೆಂದು ಹಲಬತೊಡಗಿದ. ಮೊದಲು ಕಾದರಿಯವರು ಒಪ್ಪಲಿಲ್ಲ. ಕಡೆಗೆ ಆ ನವಾಬ್ ಬಹಳ ಬೇಡಿಕೊಂಡಿದ್ದರಿಂದ ನವಾಬ್ ನ ಸಂಗಡ ಸವಣೂರಿಗೆ ಹೋದರು. ಅಲ್ಲಿಯ ಜನರು ಕಾದರಿಯವರನ್ನು ಕಂಡು ಬಹು ಸಂತೋಷಗೊಂಡರು. ಭಕ್ತಿಯಿಂದ ಬೇಡಿಕೊಂಡರು. ಇಂತಹ ಸನ್ನಿವೇಶದಲ್ಲಿ ಅನುಚಿತ ಘಟನೆಯೊಂದು ನಡೆಯಿತು. ಅದು ಹೀಗಿದೆ– ಒಂದು ದಿನ ನವಾಬ್ ಹಕೀಮ್ ಖಾನಸಾಹೇಬನಿಂದ ಒಂದು ದುರ್ಘಟನೆ ನಡೆಯಿತು. ಅದೇನೆಂದರೆ ನವಾಬ್ ಹಕೀಮ್ ಖಾನ್ ಸಾಹೇಬ ತಮ್ಮ ಸೇವಕರಿಗೆ ಹೀಗೆ ಅಪ್ಪಣೆ ಮಾಡಿದನು. ರೂಪವತಿ ತರುಣಿಯರನ್ನು ಹಿಡಿದು ತರಲು ಆಜ್ಞೆ ಮಾಡಿದನು. ಆ ‌ಪ್ರಕಾರ ಅನುವಾರ್ಯವಿಲ್ಲದೇ ಸೇವಕರು ಹುಡುಕುತ್ತ, ಹುಡುಕುತ್ತಾ ಕಾದರಿಯವರ ಶಿಷ್ಯಳಾದ ಸೈಯದ್ ವಂಶದ ಒಬ್ಬ ಅಬಲೆಯ ಮನೆಗೆ ಬಂದರು. ಅವಳ ಮಗಳನ್ನು ಒತ್ತಾಯದಿಂದ ಸ್ವಾಧೀನ ಪಡಿಸಿಕೊಂಡರು. ಆಕೆ ಅಳುತ್ತ ಹೀಗೆ ಮಾಡಬೇಡರೆಂದು ಎಷ್ಟು ಕೇಳಿದರೂ ಆ

ಫಕೀರ್ ಸೂಫಿ ಸಂತ ಸೈಯದ್ ಹಜರತಶಾ ಕಾದರಿ..! Read Post »

ಇತರೆ

ಯುವ ಗಜಲ್‌ ಕವಿ ರೇಖಾ ಭಟ್ ಹೆಸರು: ರೇಖಾ ಭಟ್ ಹೊನ್ನಗದ್ದೆಪ್ರಕಟಿತ ಕೃತಿ : ‘ಮಡಿಲ ನಕ್ಷತ್ರ’ ಗಜಲ್ ಸಂಕಲನವೃತ್ತಿ : ಪ್ರಾಥಮಿಕ ಶಾಲಾ ಶಿಕ್ಷಕಿಊರು: ಬಾಳೆಗದ್ದೆ‌. ಶಿರಸಿ ಆಯ್ಕೆಗಳ ಅರಿವಿದ್ದರೆ ಕಸಗಳು ಬೊಗಸೆ ಸೇರುವುದಿಲ್ಲಇಷ್ಟಗಳು ನಿರ್ದಿಷ್ಟವಿದ್ದರೆ ಕಷ್ಟಗಳು ಮೀಸೆ ತಿರುವುದಿಲ್ಲ ಎಲ್ಲ ಕಡೆ ಸುಳಿವ ಗಾಳಿ ಗಂಧ ದುರ್ಗಂಧಗಳ ಉಡಲೇಬೇಕುಬದುಕು ಹಗುರಾಗಿ ತೇಲಿದರೆ ಯಾವುದೂ ಅಂಟಿಕೊಳ್ಳುವುದಿಲ್ಲ ಕುಂದುಕೊರತೆಗಳು ದಾರಿಯ ನಡುವಿನ ಕೊರಕಲಿನಂತಲ್ಲವೇಗಮ್ಯದತ್ತಣ ಸಲೀಸು ನಡಿಗೆ ಎಂದಿಗೂ ಖುಷಿ ನೀಡುವುದಿಲ್ಲ ಎಲ್ಲೋ ಬೇರೂರಿದ ಬಳ್ಳಿ ಹಬ್ಬಿ ಹರಡಿ ಇಲ್ಲಿ ನೆಲೆ ನಿಲ್ಲಬಹುದುಕುತೂಹಲದ ಇಣುಕುನೋಟ ಎಂದೂ ಜೊತೆ ಬರುವುದಿಲ್ಲ ಕತ್ತಲೆಯ ಒಪ್ಪದವಗೆ ಬೆಳಕಿನ ‘ರೇಖೆ ‘ಯದು ದಕ್ಕಿತೇನುಕೊರಗುಗಳ ನುಂಗದೇ ಇಲ್ಲಿ ಕನಸುಗಳು ಅರಳುವುದಿಲ್ಲ *********************************

Read Post »

ಇತರೆ

ಕಾಗೆ…

ಲೇಖನ ಕಾಗೆ… ಡಾ. ಅರಕಲಗೂಡು ನೀಲಕಂಠ ಮೂರ್ತಿ ನಾನೊಂದು ಕಾಗೆ, ನಿಜ. ಅಪ್ಪಟ ಕಪ್ಪು, ನಿಜ. ನನ್ನ ‘ಮಧುರ’ ಧ್ವನಿ ನಿಮಗೆ ಕರ್ಕಷ! ಬಹುಶಃ ಅದೂ ಕೂಡ ನಿಜ! (ನಿಮ್ಮದೇ ಕಣ್ಣು ಕಾಣುವ ಕೋನದಿಂದ ಮಾತ್ರ). ನಿಮ್ಮ ಹಾಗೆ ನಮ್ಮ ಪಕ್ಷಿ ಲೋಕದ ಲ್ಲಿ, ಕಪ್ಪು ಅಂದಾಕ್ಷಣ ಅಸಹ್ಯವಿಲ್ಲ. ನಿಮ್ಮಲ್ಲೋ ಎಂಥೆಂತಹ ಅಸಹ್ಯ ಭಾವನೆಗಳಿಲ್ಲ ಹೇಳಿ – ಒಬ್ಬನನ್ನೊಬ್ಬ  ಕಂಡಾಗ ನಿಮ್ಮ ನಿಮ್ಮ ನಡುವೆ!  ನಾವು ವೈವಿಧ್ಯಮಯ ಜಗತ್ತನ್ನು ನಮ್ಮ ಉಗಮದಿಂದಲೇ ಗೌರವದಿಂದ ಭಾವಿಸಿಕೊಂಡು ಬಂದವರು; ಇಂದಿಗೂ ಹಾಗೇ, ಸ್ವಲ್ಪವೂ ಲೋಪವಿಲ್ಲದ ಹಾಗೆ  ಗೌರವಿಸುವವರು! ಯಾವ ಹಕ್ಕಿಯೂ ಇತರರ ಬಣ್ಣದ ಬಗ್ಗೆ, ಬಾಳಿನ  ಬಗ್ಗೆ, ಧ್ವನಿಯ ಬಗ್ಗೆ,  ನಿಮ್ಮನಿಮ್ಮಲ್ಲೇ ನೀವು ಮೂಗು ಮುರಿಯುವ ಹಾಗೆ, ನಾವು ನಮ್ಮ ನಮ್ಮ ಕೊಕ್ಕು ಮುರಿದವರಲ್ಲ ಎಂದೆಂದೂ,  ಮುಂದೂ ಕೂಡ. ಕಾಗೆ ದೂರವಿರು ಎಂದು ಕೋಗಿಲೆಯಾಗಲೀ, ಮುದ್ದು ಗಿಣಿಯಾಗಲೀ ಅಥವಾ ಇನ್ನೊಂದು ಪಕ್ಷಿಯಾಗಲೀ ಎಂದೂ ಕೂಗಿದ್ದು, ರಂಪ ಮಾಡಿದ್ದು ಕಂಡಿಲ್ಲ! ನೀವೋ  ‘ಓದು-ಬರೆಹ’ ಅನ್ನುವುದನ್ನು ತಿಳಿಯದವರೂ ಅಲ್ಲ  – ನಮ್ಮ ಹಾಗೆ (ಹಾರುವ ಹಕ್ಕಿಗೆ ಎಲ್ಲಿಯ, ಅದೆಂಥ ಓದು, ಎಂತಹ ಶಾಲೆ – ಹಾರುವ ಪಾಠ ಅಲ್ಲದೆ)! ಬಹಳ ತಿಳಿದವರೂ ಸಹ, ಹೌದಲ್ಲವೇ; ಬುದ್ಧಿ ಇರುವವರು. ವಾಸ್ತವವಾಗಿ ವಿಪರೀತ ಬುದ್ಧಿ ಇರುವವರು. ಬಹುಶಃ ವಿನಾಶೀ  ಬುದ್ಧಿ ಇರುವವರೂ, ಹೌದು… ನೀವು ಎಂತಹವರೇ ಆದರೂ ಕೂಡ, ನೀವು ಸತ್ತು ಬಿದ್ದಾಗ, ನಿಮ್ಮ ಬಾಯಿಂದ ನಮ್ಮದೇ ಸ್ತುತಿ! ನಾವೇ ದೇವರೋ ಎಂಬಂತೆ, ಕಾಗೆಗಳದ್ದೇ ಜಪ…ನಿಜ ಅಲ್ಲವೇ; ನೀವೇ ಕೊಟ್ಟು ಕೂರಿಸಿದ್ದೀರಲ್ಲವೇ, ನಮಗೆ ಶನಿ ಮಹಾತ್ಮನ ವಾಹನದ ಪಟ್ಟ! ಮತ್ತೆ, ಭಯವಲ್ಲವೇ… ಆಹಾ…ಅದೇನು ಬಾಯಿ ಬಿಡುವಿರೋ; ನಮಗಾಗಿ ಕಾಯುತ್ತ, ಕಾಯತ್ತ ಕೂರುವಿರೋ, ನಿಮಗೇ ಪ್ರೀತಿ… ಅಷ್ಟೇ ಅಲ್ಲ! ನೀವು ಹರಿಶ್ಚಂದ್ರನಂಥ  ಮಹಾತ್ಮನನ್ನೇ ಬಿಟ್ಟಿಲ್ಲ. ಅವನನ್ನೂ ಕೂಡ ‘ಸ್ಮಶಾನ’ದ ‘ವಾಚ್ಮನ್’ ಕೆಲಸಕ್ಕೆ ಅಂತ ಇಟ್ಟಿಬಿಟ್ಟಿದ್ದೀರಲ್ಲವೇ! ಅಲ್ಲದೆ, ಅದೇ ಸ್ಥಳದಲ್ಲಿ ನಾವು ಕೂಡ ಅತಿಥಿಗಳು, ನಿಮ್ಮವರು ಸತ್ತುಬಿದ್ದಾಗ…ನಮಗೆ ಕೂಳು, ಹರಿಶ್ಚಂದ್ರನಿಗೆ ಕೈತುಂಬಾ ಕಾಯಕ! ಎಂಥ ಭಾಗ್ಯ… ಹೌದು, ನಾವು ಅಕಸ್ಮಾತ್, ನೀವು ಭಯದಿಂದ ನೀಡುವ ‘ಕೂಳು’ ತಿನ್ನದೇ ಹಾಗೆಯೇ ಮೂಸಿ ಹಾರಿಹೋದರೆ, ನಿಮ್ಮ ನಿಮ್ಮಲ್ಲೇ ಆ  ಸಂದರ್ಭದಲ್ಲಿ ಎಂಥೆಂಥಾ ಚಿಂತೆಗಳು ಆರಂಭವಾಗಿ ಎಷ್ಟು ಹಿಂಸೆ ಅಲ್ಲವೇ. ಎಲ್ಲ ಪಾಪಗಳು, ಪ್ರಾಯಶ್ಚಿತ್ತಗಳು ಒಟ್ಟೊಟ್ಟಿಗೆ ಕಾಣುತ್ತವೆ! ನಮ್ಮ ಪ್ರಾಣಿ ಪಕ್ಷಿಗಳು ಸತ್ತರೆ, ನಮಗೆ ಅಂಥ ಯಾವ ಚಿಂತೆಯೂ ಇಲ್ಲ; ಬದಲಿಗೆ, ರಣಹದ್ದಿಗೆ ಅಹಾರವಾಗಿ ‘ಪುಣ್ಯ’ ಪಡೆಯುತ್ತೇವೆ! ಅಂತಹ ಸಂದರ್ಭದಲ್ಲಿ, ನಾವು ನಿಮ್ಮ ಕೂಳು ತಿನ್ನದ ಹೊತ್ತಿನಲ್ಲಿ, ಸತ್ತವರ ಗತಿ! ಸ್ವರ್ಗವಂತೂ ಖಂಡಿತ ಇಲ್ಲ; ಹಾಗಾದರೆ, ನರಕವೋ ಅಥವಾ ತ್ರಿಶಂಕುವೋ, ಇನ್ನೆಲ್ಲೋ ಎಂಬ ಜಿಜ್ಞಾಸೆ, ಅಲ್ಲವೇ? ಅಲ್ಲ ರೀ, ನೀವೇ ಇಲ್ಲದೆ, ಜಡವಾಗಿ, ಉಸಿರೇ ನಿಂತು, ಇನ್ನೇನು ಹಾಗೇ ಬಿಟ್ಟರೆ ಗಬ್ಬು ನಾತ ಅನ್ನುವ ಪರಿಸ್ಥಿತಿ ಯಲ್ಲೂ, ಅಯ್ಯೋ, ಇನ್ನೇನು ಗತಿಯೋ ಅನ್ನುವ ಹಾಸ್ಯಾಸ್ಪದ ಚಿಂತನೆ… ಅದಿರಲಿ ಈ ರೀತಿಯ ಯೋಚನೆ, ಹೊರಟು ಹೋದವರ ಮುಂದಿನ ಗತಿಯ ಬಗ್ಗೆಯೋ ಅಥವ ಹೋದವರು ಬಂದು ಇರುವವರಿಗೆ ಪೀಡನೆ ಉಂಟು ಮಾಡಿ, ಅವರ ಬಾಳನ್ನೇ ನರಕಕ್ಕೆ ನೂಕಿಬಿಡುವರು ಎಂಬ ಗಾಢ ನಂಬಿಕೆಯ, ಸ್ವಾರ್ಥವೋ…! ಎಂಥಹವರಯ್ಯ ನೀವು, ಮನುಷ್ಯರು, ಯಾವ ಪ್ರಾಣಿಪಕ್ಷಿ ಬೇಕಾದರೂ ತಿಂದು ತೇಗಿಬಿಡುವವರು, ಅಥವ ಅವುಗಳ ಇರುವನ್ನೇ ಇಲ್ಲವಾಗಿಸಿ ಧೂಳೀಪಟ ಮಾಡುವವರು; ಈಗಾಗಲೇ ಅರ್ಧಂಬರ್ದಕ್ಕೂ ಮಿಗಿಲಾಗಿ ನಾಶ ಮಾಡಿರುವವರು, ಒಂದು ಯಕಃಶ್ಚಿತ್ ಕಾಗೆಗಾಗಿ ಬಾಯಿಬಿಡುತ್ತೀರಿ ನಿಮ್ಮ ಸಾವಿನ ಸಮಯದಲ್ಲಿ! ಮತ್ತು, ಅದೇ ಕಾಗೆ ಅಂದರೆ ದೂರವೋ ದೂರ ಇದ್ದುಬಿಡುವಿರಿ, ಹೆದರಿ! ಶನಿದೇವರ ವಾಹನವೆಂದೋ; ಅಥವ ಶನಿಯೇ ನಿಮ್ಮ ಹೆಗಲೇರಿಬಿಡುವನೋ ಎಂಬಂತೆ; ಅಥವಾ ನೀವೂ ಸತ್ತೇಹೋಗುವ ಭಯವೋ. ಎಲ್ಲಿ, ಈ ಕರಿಕಾಗೆಯ ಕಪ್ಪು ಶಾಪ ಕೂಡ  ಹೆಗಲೇರುವುದೋ ಎಂಬ ಭಯವೋ? ಇರಬಹುದು, ಅದಕ್ಕಾಗಿಯೇ ಅಲ್ಲವೇ, ನೀವು ಕಾಗೆಗಳನ್ನೇ ತಿನ್ನದೇ ಇನ್ನೂ ಉಳಿಸಿರುವುದು! ಎಲೈ, ಜ್ಞಾನ-ವಿಜ್ಞಾನಗಳೆಲ್ಲದರ ಪ್ರಭೃತಿಗಳಾಗಿರುವ ಮಾನವರೇ, ಇಂತಹ ಅನನ್ಯ ತಿಳಿವು ತುಂಬಿರುವ ತಲೆಯಲ್ಲಿ ಮತ್ತು ನಿಮ್ಮೆದೆಯಲ್ಲಿ ಒಂದೇ ಒಂದಿಷ್ಟಾದರೂ ಕರುಣೆ ಬೇಡವೇ–ಪ್ರಾಣಿ ಪಕ್ಷಿಗಳ ಬಗ್ಗೆ! ಕೇವಲ ಸ್ವಾರ್ಥಕ್ಕೆ ಮಾತ್ರ  ಅವುಗಳ ಉಪಯೋಗವೇ? ನಿಮ್ಮ ಮೃಗಾಲಯಗಳು ಕೂಡ ಅದೇ ರೀತಿಯ ಮೋಜಿನ ಸ್ವಾರ್ಥಕ್ಕಾಗಿ ಅಲ್ಲವೇ… ಹಾಗಂತ, ನೀವು ಪ್ರಪ್ರಥಮ ಬಾರಿಗೆ ಈ ಭುವಿಯ ಮೇಲೆ ಜೀವ ತಳೆದು, ನಿಮ್ಮ ನಿಮ್ಮ ಸಂತಾನವನ್ನೇ ಬೆಳೆಯತೊಡಗಿದಾಗ, ಈ ಜಗದೊಳು ಇದ್ದ ಪ್ರಾಣಿ ಪಕ್ಷಿಗಳ ಸಂಖ್ಯೆಯಾದರೂ ಎಷ್ಟೆಂದು ನಿಮಗೆ ಅರಿವಿಲ್ಲದೆ ಇಲ್ಲ ಅಲ್ಲವೇ? ಇದೆ, ಹೌದು ತಾನೆ? ಅಂದಮೇಲೆ ನಿಮಗೇ ತಿಳಿದಿರಬೇಕಲ್ಲವೇ “ಈ ಜಗದ ನೆಲದಮೇಲೆ ನೀವು ಫ್ರಥಮರೋ ಅಥವಾ ನಾವೋ…!” ನಮ್ಮ ಪಕ್ಷಿಗಳ ಸಮಾಚಾರ ಬಂದಾಗ, ಹ್ಞಾ, ಇನ್ನೊಂದು ಮುಖ್ಯ ವಿಷಯ! ನೀವು ನಿಮ್ಮ ‘ಬೆಳೆ’ಯನ್ನೇ  ವೃದ್ಧಿಪಡಿಸುವ ಕ್ರಾಂತಿಯಲ್ಲಿ, ಇಡೀ ಭೂಮಿಯನ್ನೇ ಒಂದಿಷ್ಟೂ ಜಾಗವಿರದ ಹಾಗೆ ತುಂಬಿಕೊಂಡರೂ ಕೂಡ, ನಮಗೇನೂ ಚಿಟಕಿಯಷ್ಟೂ ಚಿಂತೆಯಿರದು! ಆಗಲೂ ನೀವೇ ನೋಡುವಿರಿ: ನಮಗೆ ದಷ್ಟ ಪುಷ್ಟ ವೃಕ್ಷಗಳಿರುತ್ತವೆ ಗೂಡು ಕಟ್ಟಲು, ಅನಂತ ನೀಲಿ ನಭವಿರುತ್ತದೆ ಸ್ವಚ್ಛಂದದ ಹಾರಾಡಲು ಮತ್ತು ನಿರಂಬಳ ಉಸಿರಾಡಲು…ಆದರೆ.. . ನಿಮ್ಮ ಮುಂದಿನ ವಂಶಜರು ಈ ವಸುಂಧರೆಯ ಹವಾಮಾನದಲ್ಲಿ ಏರುಪೇರಾಗದ ಹಾಗೆ, ಇನ್ನೂ ಒಂದಿಷ್ಟು ಗಾಳಿ ಮುಂತಾಗಿ ಉಳಿಸಿದ್ದರೆ…ಮಾತ್ರ! ನಿಮ್ಮ ನಭೋಮಂಡಲವನೆ ಭೇದಿಸಿರುವ ತಿಳಿವಿಗೆ, ಕ್ಷುಲ್ಲಕ ಕಾಗೆ- ಯಂತಹ, ಕಗ್ಗತ್ತಲೆಯಲೂ ಕಾಣದ ಈ ಕರಿಜೀವಿಯ ಇಷ್ಟು ಸಣ್ಣ ಅಹವಾಲು ಸಾಕಲ್ಲವೇ, ಗ್ರಹಿಕೆಗೆ: ನೀವು ಪೂಜಿಸುವ ಭಗವಂತನ ಅನುಗ್ರಹದಿಂದಲಾದರೂ, ಭಾರವಾಗುವತ್ತ ನಡೆದಿರುವ ಈ ಭುವನದಲ್ಲಿ, ನಮ್ಮಂತಹ ಪ್ರಾಣಿ ಪಕ್ಷಿಗಳಿಗಾಗಿ ಕಿಂಚಿತ್ತಾದರೂ ಇರಲಿ ಜಾಗ…ಮತ್ತು ಕರುಣೆ… ********************************************************** .

ಕಾಗೆ… Read Post »

ಇತರೆ

ಯುವ ಗಜಲ್‌ ಕವಿ ಶಿವಪ್ರಕಾಶ ರು ಕುಂಬಾರ ಹೆಸರು: ಶಿವಪ್ರಕಾಶ ರು ಕುಂಬಾರ(ನಂರುಶಿ ಕಡೂರು) ವಯಸ್ಸು: ೩೨ ಶಿಕ್ಷಣ: ಐಟಿಐ ,ಡಿಪ್ಲೋಮಾ ವೃತ್ತಿ: ಬೆಂಗಳೂರು ಮೆಟ್ರೋ ರೈಲ್ವೆನಲ್ಲಿ ಕಿರಿಯ ಅಭಿಯಂತರ ಪ್ರಕಟಿತ ಕೃತಿಗಳು : ೧) ಅಮೃತ ಸಿಂಚನವು ನಿಮಗಾಗಿ ( ಕವನ ಸಂಕಲನ) ೨) ಕಾಮನ ಬಿಲ್ಲು ಬಣ್ಣ ಬೇಡುತಿದೆ (ಗಜಲ್ ಸಂಕಲನ) ೩) ನೇರಿಶಾ (ಗಜಲ್ ಸಂಕಲನ) ಸಂಗಾತಿಓದುಗರಿಗೆ ಇವರದೊಂದು ಗಜಲ್ ಸತ್ತವನ ಮನೆಯ ಗೋಳು ನನಗೂ ಕೇಳುತಿದೆ ಗಾಲಿಬ್ಯಮ ಕಿಂಕರರ ನರ್ತನ ಎಲ್ಲೇ ಮೀರುತಿದೆ ಗಾಲಿಬ್ ಹಸಿದ ಹೆಬ್ಬುಲಿಯಂತೆ ರಣಕೇಕೆ ಹಾಕುವುದು ಏಕೆಮಸಣವು ನರ ಜೀವಗಳ ತಾನೇ ಬೇಡುತಿದೆ ಗಾಲಿಬ್ ಅಂಗುಲಿಮಾಲನಂತೆ ಕೊರಳಲಿ ಅದೆಷ್ಟು ಬುರುಡೆಗಳೋಜಗವನು ಸುತ್ತುತ ತಮಟೆ ಬಡಿದು ಸಾರುತಿದೆ ಗಾಲಿಬ್ ಮೊಗ್ಗುಗಳನೂ ಬಿಡದೆ ಚಿವುಟಿ ಊದುವುದು ನ್ಯಾಯವೇರಾಶಿ ಹೆಣಗಳ ತೋರಿಸಿ ಎಚ್ಚರ‌ ನೀಡುತಿದೆ ಗಾಲಿಬ್ ಹೇಡಿಯಂತೆ ಹೆದರಿ ಇನ್ನೆಷ್ಟು ದಿನ ಉಸಿರ ಹಿಡಿದಿಡಲಿನಂರುಶಿ ಜೀವ ಕೂಡ ಎಲ್ಲರಲಿ ಸೇರುತಿದೆ ಗಾಲಿಬ್. **********************************

Read Post »

ಇತರೆ

ಯುವ ಗಜಲ್ ಕವಿ ಚೇತನ್ ನಾಗರಾಳ ಹೆಸರು : ಚೇತನ್ ನಾಗರಾಳ.ವಯಸ್ಸು : ೨೫ಶಿಕ್ಷಣ : ಬಿ‌.ಕಾಮ್ವೃತ್ತಿ : ಖಾಸಗಿ ಬ್ಯಾಂಕ್ ಉದ್ಯೋಗಿಪ್ರಕಟಿತ ಕೃತಿಗಳು: ೧) ಹೀಗೊಂದು ಯುದ್ಧ ಬುದ್ಧನೊಂದಿಗೆ (ಕವನ ಸಂಕಲನ)೨) ಖಾಲಿ ಕೋಣೆಯ ಹಾಡು (ಗಜಲ್ ಸಂಕಲನ) ವಿಳಾಸ :ಚೇತನ್ ನಾಗರಾಳ204 , ವಾರ್ಡ್ ನಂ 1ಬಸವ ವೃತ್ತದ ಹತ್ತಿರಬೀಳಗಿ – 587116ಜಿಲ್ಲೆ : ಬಾಗಲಕೋಟಮೊ :8861888130 —————————– ಸಂಗಾತಿಯ ಓದುಗರಿಗೆ ಇವರದೊಂದು ಗಜಲ್ ಒಮ್ಮೆ ಉಳಿಸಿಕೊ ನೀನು ಈ ರಾತ್ರಿ ಮತ್ತೆ ಬರುವುದಿಲ್ಲನೆನಪಿರಲಿ ಈ ಘಳಿಗೆಯೇ ಮಧುರ ನಮಗೆ ನಾಳೆಗಳು ಇರುವುದಿಲ್ಲ.. ನಿನ್ನದೋ ಸ್ವರ ನನ್ನದೋ ಯಾವುದಾದರೇನಂತೆಇಲ್ಲಿ ಯಾರೂ ನಮ್ಮ ದುಃಖಗಳನ್ನು ಹಾಡುವುದಿಲ್ಲ.. ನಿನ್ನ ಕೋಣೆಯ ಮಂದ ಬೆಳಕಿನ ದೀಪ ನಾನುಹೌದು, ಪ್ರೀತಿ ಯಾರನ್ನೂ ಸುಮ್ಮನೇ ಸುಡುವುದಿಲ್ಲ.. ಈ ಗಾಳಿಯಲ್ಲಿ ಅಂತಹ ಹಿತವೇನೂ ಇಲ್ಲತೇಯಲಾರದೆ ಗಂಧ ಸೂಸುವುದಿಲ್ಲ.. ಅಲೆಗಳೆಂದೂ ಭಾರವಲ್ಲ ಕಡಲಿಗೆ ಚೇತನಗಳವುಕೇಳಿಲ್ಲಿ, ಬದುಕು ನಮ್ಮಿಂದ ಏನನ್ನೂ ಬಯಸುವುದಿಲ್ಲ.. ******************************************* ************************************************************************

Read Post »

ಇತರೆ, ಜೀವನ

ಅಂಕಣ ಬರಹ–02 ಶಾಂತಿ ವಾಸು ಹೋದ ಅಂಕಣದಲ್ಲಿ ರೇಡಿಯೋ ನಮ್ಮ ಜೀವನವನ್ನು ಆಕ್ರಮಿಸಿದ ಕಾಲ ಹಾಗೂ ರೀತಿಯನ್ನು ನೋಡಿದೆವು. ನಮ್ಮನ್ನು ಆಧುನಿಕ ಕಾಲದ ಪ್ರತಿನಿಧಿಗಳನ್ನಾಗಿಸಿದ ರೇಡಿಯೋ ಬಗ್ಗೆ ಈಗ ಇನ್ನಷ್ಟು ವಿಷಯಗಳನ್ನು ತಿಳಿಯೋಣ ಬನ್ನಿ. ಸಂಶೋಧನೆಗಾಗಿ ನೋಬಲ್ ಪ್ರಶಸ್ತಿ ಪಡೆದ ಇಟಲಿಯ  ಗೂಗ್ಮಿಯೆಲ್ಮೋ ಮಾರ್ಕೋನಿಯಿಂದ 1885 ರಲ್ಲಿ ತಂತಿರಹಿತ ಸಂದೇಶ ರವಾನಿಸುವ ಮೂಲಕ ಕಂಡುಹಿಡಿಯಲ್ಪಟ್ಟ ರೇಡಿಯೋ ಎಂಬ ಒಂದು ಅದ್ಭುತವನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದ ಭೌತವಿಜ್ಞಾನಿ, ಪ್ರಕಾಶ ಶಾಸ್ತ್ರ, ಸಸ್ಯ ಜೀವಶಾಸ್ತ್ರ, ದೂರಸಂಪರ್ಕ ಹಾಗೂ ರೇಡಿಯೋ ವಿಜ್ಞಾನಿ ಸರ್. ಜಗದೀಶ್ ಚಂದ್ರ ಬೋಸ್ ಅವರ ಕೊಡುಗೆ ರೇಡಿಯೋ ಹಾಗೂ ದೂರ ಸಂಪರ್ಕದ ಬೆಳವಣಿಗೆಯಲ್ಲಿ ಅತ್ಯಂತ ಮಹತ್ತರವಾದದ್ದು. ಭಾರತ ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ಹಾಗೂ ತಮ್ಮ ಸಂಶೋಧನೆಗಳಿಗೆ ಅಗತ್ಯವಾದ ಉಪಕರಣಗಳನ್ನು ತಾವೇ ಸ್ವತಃ ಕಂಡು ಹಿಡಿದುಕೊಂಡಿದ್ದ ಮಹಾಜ್ಞಾನಿ, ಅಧ್ಯಾತ್ಮ ಚಿಂತಕ, ನಮ್ಮ ಭಾರತದ ಹೆಮ್ಮೆಯ ಪುತ್ರ “ಜ್ಞಾನ ಯಾರ ಸ್ವತ್ತೂ ಅಲ್ಲ. ಅವರವರ ಶ್ರಮದ ಪ್ರತಿಫಲ ಅವರವರಿಗೆ” ಎಂದು ಜಗತ್ತಿಗೆ ಸಾರಿದ, ಪ್ರತಿಷ್ಠಿತ ನೈಟ್ ಹುಡ್ ಪ್ರಶಸ್ತಿಯೊಂದಿಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿ, ಕಲ್ಕತ್ತಾದಲ್ಲಿ “ಬೋಸ್ ಇನ್ಸ್ಟಿಟ್ಯೂಟ್” ಆರಂಭಿಸಿದ ನಮ್ಮ ಭಾರತದ ಹೆಮ್ಮೆಯ ಸಸ್ಯ ವಿಜ್ಞಾನಿ ಇವರು ಎಂಬುದು ಹೆಮ್ಮೆ ಪಡತಕ್ಕ ವಿಷಯ. ರೇಡಿಯೋದ ಕಾರ್ಯವಿಧಾನ, ಉಪಯೋಗಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಸಲುವಾಗಿ 1932ರಲ್ಲಿ ಮಂಗಳೂರಿನ ವಿದ್ವಾನ್. ಹೊಸಬೆಟ್ಟು ರಾಮರಾವ್ ಅವರು “ಆಕಾಶವಾಣಿ” ಎಂಬ ಹೆಸರಿನ ಸುಮಾರು 20 ಪುಟಗಳ ಒಂದು ಪುಸ್ತಕವನ್ನು ಬರೆದಿದ್ದರು . ಮೈಸೂರು ವಿಶ್ವವಿದ್ಯಾನಿಲಯದ ಮನಃಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾಕ್ಟರ್ ಎಂ.ವಿ.ಗೋಪಾಲಸ್ವಾಮಿಯವರು ದೇಶಕ್ಕೆ ಹೊಸತನ್ನು ಪರಿಚಯಿಸುವ ಸಲುವಾಗಿ ಲಂಡನ್ನಿನಿಂದ ಕಡಿಮೆ ವಿದ್ಯುತ್ ಬಳಕೆಯ “ಟಾಲ್” ಎಂಬ ಟ್ರಾನ್ಸಮೀಟರನ್ನು ತಂದು 1935 ಸೆಪ್ಟೆಂಬರ್ 10ರಂದು, ರಾಷ್ಟಕವಿ ಕುವೆಂಪುರವರಿಂದ ಕವನವಾಚನ ಮಾಡಿಸುವ ಮೂಲಕ ಭಾರತ ದೇಶದ ಮೊದಲ ಬಾನುಲಿ ಕೇಂದ್ರವನ್ನು ಮೈಸೂರಿನ ತಮ್ಮ ವಿಠ್ಠಲವಿಹಾರ ಮನೆಯಲ್ಲಿ ಸ್ಥಾಪಿಸಿದರು. ಆಗಿನ ಮೈಸೂರಿನ ಮಹಾರಾಜರು ಸ್ವತಃ ಕಾಲೇಜಿನ ಅಸೆಂಬ್ಲಿಯಲ್ಲಿ ಹಾಜರಿದ್ದು ಅದನ್ನು ಆಲಿಸಿದ್ದರು ಎಂಬುದು ವಿಶೇಷ. ಬಾನಿನಿಂದ ತರಂಗಗಳು ಹೊತ್ತು ತಂದ ಉಲಿಯನ್ನು ರೇಡಿಯೋದಲ್ಲಿ ಕೇಳಬಹುದಾದ ಅದ್ಭುತವನ್ನು ಅಂದಿನ ಮೈಸೂರು ಆಕಾಶವಾಣಿ ಸಹಾಯಕ ನಿರ್ದೇಶಕ, ಸಾಹಿತಿ ನಾ. ಕಸ್ತೂರಿಯವರು “ಆಕಾಶವಾಣಿ” ಎಂದು ಕರೆದರು. ಭಾನುವಾರ ಹೊರತು ಪಡಿಸಿ, ಮಿಕ್ಕ ದಿನಗಳಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಬಾನುಲಿ ಭಾಷಣವನ್ನು ಪ್ರಸಾರ ಮಾಡುತ್ತಿದ್ದ ಬಾನುಲಿ ಕೇಂದ್ರವನ್ನು ಸ್ವಾತಂತ್ರ್ಯಾ ನಂತರ ಅಂದರೆ 1950 ರಲ್ಲಿ ಸಂವಿಧಾನ ಅಳವಡಿಕೆಯೊಂದಿಗೆ ದೇಶದ ಎಲ್ಲ ಪ್ರಸಾರ ಸೇವೆಗಳನ್ನು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡಿಸಲಾಯಿತು. ಹಾಗೂ 1956 ರಲ್ಲಿ ಕೇಂದ್ರಸರ್ಕಾರವು “ಆಕಾಶವಾಣಿ” ಎಂಬ ಹೆಸರನ್ನೇ ಅಧಿಕೃತವಾಗಿ ಘೋಷಣೆ ಮಾಡಿತು. ದಾಖಲೆಗಳ ಪ್ರಕಾರ 1954 ರಲ್ಲಿ ಭಾರತದ ಮೊದಲ ವ್ಯಾಪಾರಿ ರೇಡಿಯೋ ಅಂದರೆ ಆಂಟೆನೋ ಇದ್ದ ಕಮರ್ಷಿಯಲ್ ಟ್ರಾನ್ಸಿಸ್ಟರ್  ಮಾರಾಟವಾಯಿತು. ಇದನ್ನು ಹೋದ ಕಡೆಯಲ್ಲೆಲ್ಲ ಹೊತ್ತು ಹೋಗಬಹುದಾದರಿಂದ, ಹಾಗೂ ದರದ ದೃಷ್ಟಿಯಿಂದ ಅಗ್ಗವಾಗಿದ್ದ ಟ್ರಾನ್ಸಿಸ್ಟರ್ ಎಂಬುದು ಆ ದಿನಗಳಲ್ಲಿ ಒಂದು ಮನರಂಜನಾ ವಸ್ತುವಾಗಿ ಬಹುದೊಡ್ಡ ಮಾರುಕಟ್ಟೆಯೊಂದಿಗೆ ಬಹು ಜನಪ್ರಿಯತೆಯ ಕೇಂದ್ರ ಬಿಂದುವಾಯಿತು. ಪೂರ್ಣ ಪ್ರಮಾಣದಲ್ಲಿ ವಾಣಿಜ್ಯ ದೃಷ್ಟಿಯಿಂದ ಆರಂಭವಾದ ರೇಡಿಯೋ ಎಂಬ ಆ ಕಾಲದ ಆಧುನಿಕ ತಂತ್ರಜ್ಞಾನವು, ಜಾಹೀರಾತು ಪ್ರಪಂಚಕ್ಕೆ ಭದ್ರವಾದ ಅಡಿಗಲ್ಲನ್ನು ನೆಟ್ಟಿತು. ಜಾಹೀರಾತುಗಳನ್ನು ಕೇವಲ ಕೇಳಬಹುದಾಗಿದ್ದ ಆ ಕಾಲಘಟ್ಟದಲ್ಲಿ ಆಲ್ ಇಂಡಿಯಾ ರೇಡಿಯೋ (A.I.R)ದ ಭಾಗವಾಗಿ 1959ರಲ್ಲಿ ದೂರದರ್ಶನವನ್ನು ಆರಂಭಿಸಲಾಯಿತು. ಇದು ಕೂಡ ವಾಣಿಜ್ಯ ದೃಷ್ಟಿಯಿಂದಲೇ ಸ್ಥಾಪಿತವಾದದ್ದೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹಾಗಾಗಿ ಮೊದಲೇ ಹೇಳಿದ ಜಾಹೀರಾತಿನೊಂದಿಗೆ ದೂರದರ್ಶನದಲ್ಲಿ ಡಾಬರ್ ಚವನ್ ಪ್ರಾಶ್, ನಿರ್ಮಾ ವಾಷಿಂಗ್ ಪೌಡರ್ ವಿಕೋ ಟರ್ಮರಿಕ್ ಕ್ರೀಮ್, ಲಿರಿಲ್ ಸೋಪು ಹಾಗೂ ಸಿಯಾರಾಂ ಸೂಟಿಂಗಿನ ಜಾಹೀರಾತು ಕೂಡ ಸೇರಿಕೊಂಡದ್ದು ಹೌದಲ್ಲವೇ? ಆಗಿನ ಜನರಿಗೆ ಆದ ಹೊಸ ಹೊಸ ಅವಿಷ್ಕೃತ ವಸ್ತುಗಳ ಪರಿಚಯ, ನೋಡುವ ಮುಟ್ಟುವ ಉತ್ಸಾಹ,  ಉಪಯೋಗಿಸುವಾಗಿನ ಪುಳಕ ಈಗೊಂದೂ ಇಲ್ಲ. ಏಕೆಂದರೆ ಕೆಲವೇ ಕೆಲವನ್ನು ಹೊರತುಪಡಿಸಿ ಮಿಕ್ಕೆಲ್ಲವೂ ಆಗಿನದ್ದರ ಸುಧಾರಿತ ವ್ಯವಸ್ಥೆ ಹಾಗೂ ರೂಪಾಂತರ ಅಷ್ಟೇ ಆಗಲೀ ಯಾವುದೂ ಹೊಸತಲ್ಲ.  ಶ್ರೀಸಾಮಾನ್ಯರಿಗಾಗಿಯೇ, ರೇಡಿಯೋಗಳ ನಿಗದಿತ ಕಾರ್ಯಕ್ರಮಗಳ ಏಕತಾನತೆಯನ್ನು ಹೋಗಲಾಡಿಸವ ಸಲುವಾಗಿ, ಸುಧಾರಿತ ಹಾಗೂ ಉತ್ತಮಗುಣಮಟ್ಟದ ಕಾರ್ಯಕ್ರಮ ರೂಪಿಸುವ ಹಾಗೂ ಸರ್ಕಾರದ ವರಮಾನವನ್ನು ಹೆಚ್ಚುಮಾಡುವ ಹೆಚ್ಚು ಸ್ಪಷ್ಟತೆಯ ಎಫ್. ಎಂ (frequency modulation ಆವರ್ತನ ಮಾಡ್ಯುಲೇಶನ್) ಕೇಂದ್ರಗಳು ಸ್ಥಾಪಿತವಾದವು. MHz(ಮೆಗಾಹರ್ಡ್ಜ್) ತರಂಗಾಂತರದ ಮೇಲೆಯೇ ಇಂದಿಗೂ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿರುವ ಎಫ್.ಎಂ. ರೇಡಿಯೋಗಳು ಹಾಗೂ ದೂರದರ್ಶನದ ಹಲವಾರು ಚಾನೆಲ್ಲುಗಳಿಗೆ ಜಾಹೀರಾತುಗಳಿಂದ ಬರುವ ಹಣವೇ ಜೀವಾಳ ಹಾಗೂ ಹಿರಿಮೆ. ********************************************************

Read Post »

ಇತರೆ, ಪ್ರವಾಸ ಕಥನ

ಸಿದ್ಧಿಸಿತೆನಗೆ ” ಸಿದ್ಧರ ಬೆಟ್ಟ “ಯಾನ

ಪ್ರವಾಸ ಕಥನ ಸಿದ್ಧಿಸಿತೆನಗೆ  -ಸಿದ್ಧರ ಬೆಟ್ಟ ಯಾನ ಚಂದ್ರಮತಿ ಪುರುಷೋತ್ತಮ್ ಭಟ್     ಬಹುದಿನದ ಬಯಕೆ, ನೋಡಲೇ ಬೇಕೆಂಬ ತುಡಿತದ ಜೊತೆಗೆ ನಲವತ್ತರ ಹರೆಯ ದಾಟಾಯ್ತು ಈಗಲೂ ನೋಡದಿದ್ದರೆ ಇನ್ನು ಯಾವಾಗ ನೋಡೋದು ಅನ್ನೋ ಅನಿಸಿಕೆ. ನನ್ನ ಮಗಳು ಹಾಗೂ ಅವಳ ಗೆಳೆಯರು ಬರ್ತೀರ ಆಂಟಿ ಸಿದ್ಧರ ಬೆಟ್ಟಕ್ಕೆ ಅಂದಾಕ್ಷಣ ವೈ ನಾಟ್ ! ಎಂದು ‘ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ‘ ಅಂತ ಹುಂ ಎಂದು ಹೊರಟೇ ಬಿಟ್ಟೆ. ತುಂಬಾ ದಿನದಿಂದ ಅಂದು ಕೊಂಡ ಈ ಬೆಟ್ಟ ನೋಡುವ ಭಾಗ್ಯಬಂದೊದಗಿಯೇ ಬಿಟ್ಟಿತು. ಸೂರ್ಯೋದಯಕ್ಕೂ ಮುಂಚೆ ಸುಮಾರು 4.45 ರ ಸಮಯಕ್ಕೆ ಶುರುವಾಯ್ತು ನಮ್ಮ ಪಯಣ. ಜನಸಂದಣಿ ಇರದ ಈ ಸಮಯದಲ್ಲಿ ನಮ್ಮ ಬೆಂದಕಾಳೂ ಕೂಡ ಸುಂದರ ಹಾಗೂ ಸುಖಕರವೆನಿಸುವುದು. ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿರುವ ಸಿದ್ದರ ಬೆಟ್ಟಕ್ಕೆ ಐದು ಮಂದಿಯನ್ನು ಹೊತ್ತು ಡಸ್ಟರ್ ಶರವೇಗದಲ್ಲಿ ನಗರವನ್ನು ದಾಟಿ ಇನ್ನೇನು ಸಿದ್ಧರ ಬೆಟ್ಟದ ದಾರಿ ತಲುಪಿದ್ದಂತೆಯೆ ನಮ್ಮನ್ನು ಸೆಳೆದದ್ದು ಆ ಊರಿನ ರುಚಿಕರವಾದ ತಟ್ಟೆ ಇಡ್ಲಿ .  ಅಲ್ಲಿಂದ 8 ರಿಂದ 10 ಕಿ.ಮೀ ದೂರದಲ್ಲಿ ಈ ಬೆಟ್ಟ . ತಲುಪಿದಾಗ ಸುಮಾರು ಮುಂಜಾನೆ 6.30 ಸಮಯ. ಸದ್ದು ಗದ್ದಲ ಇಲ್ಲದ ನಿರ್ಜನ ಪ್ರಶಾಂತ ತಾಣ. ಸಿಲಿಕಾನ್ ಸಿಟಿಯಿಂದ ಬರುವ ಯಾತ್ರಿಕರಿಗೆ ಒಮ್ಮೆ ಯಾದರೂ ಹಾಯ್ ಎನಿಸದೇ ಇರದು.ಈ ಬೆಟ್ಟವು ಸುಮಾರು 6 ಕಿಲೋಮೀಟರ್ ಚಾರಣ. 1700ಅಡಿ ಎತ್ತರದಲ್ಲಿರುವ ಈ ಬೆಟ್ಟವು ಔಷಧೀಯ ಸಸ್ಯಗಳ ಬೀಡು. ೨೦೦೦ ಕ್ಕೂ ಹೆಚ್ಚು ಸಸ್ಯಗಳಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಕೆ.ಫ್.ಡಿ ಗೆ ಧನ್ಯವಾದ ಹೇಳಲೇ ಬೇಕು   ಶುರುವಾಯ್ತು ಸೆಲ್ಫಿಯಿಂದಲೇ ನಮ್ಮ ಉತ್ಸಾಹದ ಆರೋಹಣ ಚಾರಣ. ಹಸಿರಿನ ಔಷಧೀಯ ಮರಗಿಡಗಳ ನಡುವೆ ಹಕ್ಕಿಗಳ ಕಲರವ ಹಾಗೂ ತುಂತುರು ಮಳೆಯಲ್ಲಿ ಹತ್ತಿದ ಕ್ಷಣ ಅದ್ಬುತ ! ನೂರಾರು ಮೆಟ್ಟಿಲುಗಳ ನಂತರ ಕಡಿದಾದ ಬೆಟ್ಟದಲ್ಲಿ ಮುಂದಕ್ಕೆ ಹತ್ತಲು ಗಟ್ಟಿ ಕಲ್ಲುಗಳೇ ನಮಗೆ ಆಸರೆಯಾದವು. ಅಂತು ಇಂತೂ ಅಸಾಧ್ಯ ಎನಿಸಿದರೂ ಅಲ್ಲಲ್ಲಿ ತಂಗುದಾಣ ನಮ್ಮನ್ನು ಪ್ರೋತ್ಸಾಹಿಸಿತು. ಕ್ಷಣಕಾಲ ನಿಬ್ಬೆರಗಾದೆವು ! ನೋಡಿದರೆ ದೊಡ್ಡ ಕಲ್ಲು ಬಂಡೆಯನ್ನೇ ಕೊರೆದು ಮಾಡಿದ ಕಿರಿದಾದ ಮೆಟ್ಟಿಲುಗಳು. ಜಿನುಜಿನುಗುವ ಮಳೆಯಲ್ಲಿ ಹತ್ತುತ್ತಾ ಕಾಲು ಜಾರಿದರೆ ಎನ್ನುವ ಆತಂಕದಲ್ಲಿ ಮುಂದೆ ಮುಂದೆ ಹೆಜ್ಜೆ ಇಟ್ಟೆವು. ಹತ್ತಿದಾಕ್ಷಣ ಜಯಶಾಲಿಯದೆವಾ ? ಅನ್ನೋ ಅನಿಸಿಕೆಯ ಜೊತೆ ಜೊತೆಗೆಮಂಜು ಮುಸುಕಿದ ತುದಿಬೆಟ್ಟವು ‘  ಮಾನವ ನೀನೆಷ್ಟು ಅಲ್ಪ ! ಎಂದು ನಗುವುದೇನೋ ಎನ್ನಿಸಿತು.  ಸೌಂದರ್ಯ , ಪ್ರಶಾಂತತೆ  ನಮ್ಮನ್ನು ಮೂಖವಿಸ್ಮಿತಗೊಳಿಸಿತು. ಅಚ್ಚರಿ ! ಆ ತುತ್ತತುದಿಯಲ್ಲಿ ಕಲ್ಲು ಬಂಡೆಯಲ್ಲೂ ಸದಾಕಾಲ ಎಳಿನೀರಿನಂತಹ ತಣ್ಣೀರು ಕಾಣಸಿಗುವುದು.  ಸಿದ್ಧರು ಸಿದ್ಧಿ ಫಡೆದಂತಹ ಸ್ಥಳ ಆಗಿರೋದರಿಂದ ಆಸ್ತಿಕರಿಗೆ ಹೇಳಿಸಿದ ಸ್ಥಳ ಕೂಡ . ಅಲ್ಲಿ ಈಗಲೂ ಬಂದವರೆಲ್ಲರಿಗೂ ಆಶೀರ್ವದಿಸಲು ಒಬ್ಬರು ಸಿದ್ಧರು ದೊಡ್ಡ ಕಲ್ಲು ಬಂಡೆಯ ಒಳಗಡೆ ತಪಸ್ಸು ಮಾಡುತ್ತಾ ಕುಳಿತಿರುತ್ತಾರೆ. ಆಶೀರ್ವಾದ ಪಡೆದ ನಾವು ಕೊಂಚ ಹೊತ್ತು ಅಲ್ಲೇ ಧ್ಯಾನ ಮಗ್ನರಾದೆವು. ಇನ್ನೂ ಬೆಟ್ಟದ ತುದಿ ನೋಡುವ ಬಯಕೆ ಹೊತ್ತು ಬಂದ ನಾವು ತುಸು ವಿಶ್ರಮಿಸಿ ಮುಂದಿನ ಹೆಜ್ಜೆ ಬೆಳೆಸಿದೆವು. ಅಲ್ಲಿಂದ ಮುಂದೆ ದೊಡ್ಡ ಬಂಡೆಯೊಳಗಿಂದ ಹತ್ತುತ್ತಾ ಹತ್ತುತ್ತಾ ಹೊರಬಂದು ನೋಡಿದರೆ ಅಲ್ಲಿರುವ  ಮನಮೋಹಕ ಪ್ರಕೃತಿಯ ವೈಚಿತ್ರ್ಯ ! ಮಂಜಿನ ಸಹಿತ ಬೀಸುತ್ತಿರುವ ಶೀತಗಾಳಿಯು ಹಾಗೂ ಮುಂಜಾನೆಯ ಹೊಂಗಿರಣದಿಂದ ಫಳ ಫಳಿಸುತ್ತಿರುವ  ಆ ಬೆಟ್ಟವು ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ದು ಬಿಟ್ಟಿತು. ಹನ್ನೆರೆಡು ಗಂಟೆಯವರೆಗೂ ಹಿಮಾವೃತ ಬೆಟ್ಟವನ್ನು ನೋಡಿದನುಭವ ಅವರ್ಣನೀಯ ! ನಮ್ಮ ಕರ್ನಾಟಕ ಆಹಾ ಎಷ್ಟು ಅದ್ಭುತ ! ಎಂದೆನಿಸಿತು. ವಾರೆ ವಾವ್ ! ಈ ಸಿದ್ಧರ ಬೆಟ್ಟ ನೋಡುವಾವಕಾಶ ಎಲ್ಲರಿಗೂ ಸಿದ್ಧಿಸಲಿ ಸಿದ್ಧರ ಆಶೀರ್ವಾದ ಪಡೆಯಲಿ . ಎನ್ನುತ್ತಾಮತ್ತೊಂದಿಷ್ಟು ಸೆಲ್ಫಿ ಒಂದಿಷ್ಟು ಮಸ್ತಿ ಮಾಡುತ್ತಾ ಬೆಟ್ಟದಿಂದ ನಿಧಾನವಾಗಿ ಅವರೋಹಣ ಮಾಡಿದೆವು. ಏರಿಳಿತಗಳ ರೋಚಕ ಅನುಭವವನ್ನು ಮೆಲುಕು ಹಾಕುತ್ತಾ ನಗರಿಗೆ  ಹಿಂತಿರುಗಿ ಪ್ರಯಾಣ ಬೆಳೆಸಿದೆವು. ——— ಮಾರ್ಗ :ಬೆಂಗಳೂರು – ತುಮಕೂರು -ತೋವಿನಕೆರೆ – ತುಂಬಾಡಿ – ಸಿದ್ಧರಬೆಟ್ಟಸರಿಯಾದ ಸಮಯ : ಜೂನ್-ಜುಲೈ-ಆಗಸ್ಟ್ಚಾರಣದ ಸಮಯ : ಒಂದು ಗಂಟೆಸಾಧ್ಯ : ಚಾರಣಾಸಕ್ತರು ಹಾಗೂ ಪ್ರಕೃತಿ ಪ್ರಿಯರಿಗೆ ಮಾತ್ರ ನಿಷೇಧ : ಪ್ಲಾಸ್ಟಿಕ್ಸಲಹೆ : ಒಂಟಿ  ಪಯಣ ಬೇಡ. ಗುಂಪಿನ ಜೊತೆ ಯೋಗ್ಯ          “ಪ್ರಕೃತಿಯನ್ನು ಉಳಿಸಿ ಪ್ರೀತಿಸಿ ಆದರಿಸಿ ಆನಂದಿಸಿ “ *********************************

ಸಿದ್ಧಿಸಿತೆನಗೆ ” ಸಿದ್ಧರ ಬೆಟ್ಟ “ಯಾನ Read Post »

You cannot copy content of this page

Scroll to Top