ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಕಾರ್ಮಿಕ ದಿನದ ವಿಶೇಷ-ಕವಿತೆ

ಕವಿತೆ ನಾಲ್ಕು ಶಬ್ದ ಮರಾಠಿ ಮೂಲ: ನಾರಾಯಣ ಸುರ್ವೆ ಕನ್ನಡಕ್ಕೆ: ಕಮಲಾಕರ ಕಡವೆ ನಾಲ್ಕು ಶಬ್ದ ಪ್ರತಿದಿನದ ರೊಟ್ಟಿಯ ಪ್ರಶ್ನೆ ಪ್ರತಿದಿನದ್ದೂ ಆಗಿದೆ ಒಮ್ಮೊಮ್ಮೆ ಗಿರಣಿ ಹೊರಗೆ, ಒಮ್ಮೊಮ್ಮೆ ಒಳಗೆ ಕಾರ್ಮಿಕನು ನಾನು, ಹರಿತ ಕತ್ತಿಯಂತವನು ಪಂಡಿತರೇ, ಕೊಂಚ ಅಪರಾಧ ಮಾಡಬೇಕಿದೆ ಸ್ವಲ್ಪ ಸಹಿಸಿದೆ, ನೋಡಿದೆ, ಯತ್ನಿಸಿದೆ ನಾನು ನನ್ನ ಜಗತ್ತಿನದೇ ಆದ ಪರಿಮಳವೂ ಅಲ್ಲಿದೆ ಆಗೀಗ ತಪ್ಪಿದೆ, ಸೋತೆ, ಹೊಸತನ್ನು ಕಲಿತೆ ಹೇಗೆ ಬಾಳುತಿರುವೇನೋ ಹಾಗೇ ನನ್ನ ಮಾತಿದೆ ರೊಟ್ಟಿ ಬೇಕು ಸರಿಯೇ, ಮತ್ತೂ ಏನೋ ಬೇಕಿದೆ ಅದಕ್ಕೆ ಈ ಜಗತ್ತು ರೂಪಾಯಿ ಮಾಡಿ ಕುಂತಿದೆ ಇಲ್ಲಿಯೇ ಶಬ್ದಗಳ ಕೈಲಿ ನಾನು ಹೂವ ಹಿಡಿಸಿದೆ ಇಲ್ಲಿಯೇ ಶಬ್ದಗಳ ಕೈಲಿ ನಾನು ಶಸ್ತ್ರ ಹಿಡಿಸಿದೆ ಒಬ್ಬನೇ ಬಂದಿಲ್ಲ ನಾನು ಯುಗವೇ ಜೊತೆಗಿದೆ ಹುಷಾರಿರಿ, ತೂಫಾನು ಇದೋ ಶುರುವಾಗಿದೆ ಕಾರ್ಮಿಕನು ನಾನು ಹರಿತ ಕತ್ತಿಯಂತವನು ಪಂಡಿತರೇ, ಕೊಂಚ ಅಪರಾಧ ಮಾಡಬೇಕಿದೆ ********

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಅನುವಾದ

ಕಾರ್ಮಿಕ ದಿನದ ವಿಶೇಷ-ಕವಿತೆ

ಕಾರ್ಮಿಕನೊಬ್ಬ ಚರಿತ್ರೆಯನ್ನು ಓದುತ್ತಾನೆ. ಮೂಲ: ಬರ್ಟೋಲ್ಟ್ ಬ್ರೆಕ್ಟ್ ಕನ್ನಡಕ್ಕೆ: ಮೇಗರವಳ್ಳಿ ರಮೇಶ್ ಕಾರ್ಮಿಕನೊಬ್ಬ ಚರಿತ್ರೆಯನ್ನು ಓದುತ್ತಾನೆ. ಥೀಬ್ಸ್ ನ ಏಳು ಗೇಟುಗಳನ್ನು ಕಟ್ಟಿದವರಾರು?ಪುಸ್ತಕಗಳ ತು೦ಬಾ ರಾಜರುಗಳ ಹೆಸರುಗಳು.ಬ೦ಡೆಗಲ್ಲುಗಳನ್ನು ತ೦ದು ಜೋಡಿಸಿದವರು ದೊರೆಗಳೆ?ಮತ್ತು ಬ್ಯಾಬಿಲೋನ್ ಅದೆಷ್ಟು ಸಲ ನಾಶವಾಯಿತು!ಮತ್ತೆ ಮತ್ತೆ ಯಾರು ಕಟ್ಟಿದರು ಈ ನಗರವನ್ನು?ಚಿನ್ನದ ಹೊಳಪಿನ ನಗರಿಯಲ್ಲಿ ಅದನ್ನು ಕಟ್ಟಿದವರು ವಾಸವಾಗಿದ್ದರೆ?ಚೀನಾದ ಮಹಾಗೊಡೆಯನ್ನು ಕಟ್ಟಿ ಮುಗಿಸಿದ ಸ೦ಜೆಗಾರೆ ಕೆಲಸದವರು ಎಲ್ಲಿಗೆ ಹೋದರು?ರೋಮ್ ಸಾಮ್ರಾಜ್ಯದ ತು೦ಬಾ ವಿಜಯದ ಸ೦ಕೇತದ ಕಮಾನುಗಳು.ಯಾರು ನಿಲ್ಲಿಸಿದರು ಅವುಗಳನು?ಯಾರ ಮೇಲೆ ಸೀಸರ್ ವಿಜಯ ಸಾಧಿಸಿದ?ಹಾಡಿನಲ್ಲಿ ಜೀವ೦ತವಾಗಿದೆ ಬೈಜಾ೦ಟಿಯಮ್ಎಲ್ಲಿ ಹೋದವು ಅಲ್ಲಿನ ವಾಸದರಮನೆಗಳು?ಪುರಾಣಪ್ರಸಿದ್ಧ ಅಟ್ಲಾ೦ಟಿಸ್ನಲ್ಲೂರಾತ್ರಿ ಕಡಲು ಭೋರ್ಗರೆದು ಉಕ್ಕಿದಾಗಮುಳುಗುತ್ತಿದ್ದ ಮ೦ದಿ ಬೊಬ್ಬೆಯಿಟ್ಟರುತಮ್ಮ ಗುಲಾಮರಿಗಾಗಿ. ಯುವ ಅಲೆಗ್ಸಾ೦ಡರ್ ಭಾರತವನ್ನು ಗೆದ್ದಅವ್ಬನೊಬ್ಬನೇ ಹೊರಾಡಿ ಗೆದ್ದನೆ?ಸೀಸರ್ ಗಾಲ್ ರನ್ನು ಸೊಲಿಸಿದಅವನ ಸೈನ್ಯದಲ್ಲೊಬ್ಬ ಅಡಿಗೆಯವನೂ ಇರಲಿಲ್ಲವ?ಸ್ಪೈನ್ ನ ಫಿಲಿಪ್ ತನ್ನ ಹಡಗು ಮುಳುಗಿನಾಶವಾಗುವಾಗ ಜೊರಾಗಿ ರೋದಿಸಿದಅಲ್ಲಿ ಇನ್ನಾವ ಕಣ್ಣೀರುಗಳೂ ಇರಲಿಲ್ಲವೆ?ಗ್ರೀಸ್ ನ ಫ್ರೆಡ್ರಿಕ್ ಏಳು ವರ್ಷಗಳ ಯುದ್ಧದಲ್ಲಿವಿಜಯ ದು೦ದುಭಿ ಬಾರಿಸಿದಅವನ ಜತೆ ವಿಜಯೋತ್ಸವವನ್ನುಮತ್ತೆ ಯಾರ್ಯಾರು ಆಚರಿಸಿದರು? ಪ್ರತೀ ಪೇಜಿನಲ್ಲೂ ವಿಜಯದ ವಿವರಯಾರ ಬೆಲೆ ತೆತ್ತು ಏರ್ಪಡಿಸಿದ್ದುಈ ವಿಜಯೊತ್ಸವದ ಕೂಟಗಳನ್ನು? ಪ್ರತೀ ದಶಕದಲ್ಲೂ ಒಬ್ಬ ಮಹಾನ್ ವ್ಯಕ್ತಿ!ತುತ್ತೂರಿಯವನಿಗೆ ಹಣ ಕೊಟ್ಟವರು ಯಾರು? ಎಷ್ಟೊ೦ದು ವಿವರಗಳು!ಎಷ್ಟೊ೦ದು ಪ್ರಶ್ನೆಗಳು!*********

ಕಾರ್ಮಿಕ ದಿನದ ವಿಶೇಷ-ಕವಿತೆ Read Post »

ಅನುವಾದ

ಅನುವಾದ ಸಂಗಾತಿ

ನಿನ್ನ ಹಾಡು ಮೂಲ: ರಬೀಂದ್ರ ನಾಥ ಟಾಗೋರ್ ಕನ್ನಡಕ್ಕೆ: ಡಾ.ಪ್ರಸನ್ನ ಹೆಗಡೆ ನೀ ಹಾಡುವಾ ಪರಿಯ ನಾನರಿಯೆ ನನ್ನೊಡೆಯಾ ಬೆರಗಿನಿಂ ನಾ ಕುಳಿತು ಪೇಳ್ವೆ ಜಿಯಾ,,,ಪೇಳ್ವೆ ಜಿಯಾ ನಿನ್ನ ಹಾಡಿನಾ ಕಿರಣ ಬೆಳಗುತಿದೆ ಜಗವನ್ನು ಬಾನಿನಿಂ ಬಾನಿಗೆ ಹರಿಸಿ ಉಸಿರು ಆ ಹಾಡಜೀವಸೆಲೆ ಅಡೆತಡೆಯ ಪುಡಿಮಾಡಿ ದೈರ್ಯದಿಂ ಮುಂದಕ್ಕೆ ನುಗ್ಗುತಿಹುದು….ನುಗ್ಗುತಿಹುದು ನಿನ್ನ ಹಾಡಕೂಡೆಂದು ಕೂಗುತಿದೆ ಎನ್ನೆದೆಯು ಆದರದು ಬರಿವ್ಯರ್ಥ ದ್ವನಿಗಾಗಿ ನಾನು ಒರಲುತಿಹೆನು ನಾ ನುಡಿವೆ ಬರಿನುಡಿಯ ಹಾಡಾಗ ಆ ನುಡಿಯು ಕೈಚೆಲ್ಲಿ ಕಣ್ಣೀರ ಸುರಿಸುತಿಹೆನು…ಸುರಿಸುತಿಹೆನು ಅಹ! ದಣಿಯೆ ಎನ್ನ ದಣಿಯೆ ನಿನ್ನಹಾಡಿನಾ ಅನಂತ ಬಲೆಯಲ್ಲಿ ಎನ್ನೆದೆಯ ಹಿಡಿದೆಳೆದು ಬಂದಿಸಿರುವೆ….ಬಂದಿಸಿರುವೆ. ********

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಮೂಲ: ನಿಝಾರ್ ಖಬ್ಬಾನಿ ಕನ್ನಡಕ್ಕೆ: ಡಾ.ಗೋವಿಂದ ಹೆಗಡೆ ಆ ಮೀನಿನಂತೆ ನಾನು ಚುರುಕು ಮತ್ತು ಹೇಡಿ ಪ್ರೇಮದಲ್ಲಿ ನೀನು ನನ್ನಲ್ಲಿನ ಸಾವಿರ ಹೆಣ್ಣುಗಳ ಸಾಯಿಸಿದೆ ಮತ್ತು-ರಾಣಿಯಾದೆ ಚಿಂತಿಸಬೇಡ ನನ್ನ ಮಧು ಖನಿಯೇ ನೀನಿದ್ದೀ ನನ್ನ ಕವಿತೆಗಳಲ್ಲಿ ನನ್ನ ಪದಗಳಲ್ಲಿ ವರುಷಗಳು ಉರುಳಿ ಮುದಿಯಾಗಬಹುದು ಆದರೆ ನನ್ನ ಪುಟಗಳಲ್ಲಿ ನೀನು ಚಿರ ಯೌವನೆ ಈಗಲೂ ನೀನು ನಾನು ಹುಟ್ಟಿದ ದಿನವನ್ನು ಕೇಳುವೆ ಹಾಗಿದ್ದರೆ ಬರೆದುಕೋ-ನಿನಗೆ ಗೊತ್ತಿಲ್ಲದಿರುವುದನ್ನು ಎಂದು ನೀನು ಪ್ರೇಮವನ್ನು ಅರುಹಿದೆಯೋ ಅಂದೇ ನನ್ನ ಜನ್ಮದಿನ! ***********

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಮೂಲ: ಆಕ್ತೇವಿಯೋ ಪಾಜ಼್ (ಮೆಕ್ಸಿಕನ್ ಕವಿ) ಹೋಗಿ ಬರುವ ನಡುವೆ ಮೇಗರವಳ್ಳಿ ರಮೇಶ್ ಹೋಗುವ ಮತ್ತು ಉಳಿಯುವ ನಡುವೆಹೊಯ್ದಾಡುತ್ತದೆ ದಿನತನ್ನದೇ ಪಾರದರ್ಶಕತೆಯ ಮೇಲಿನ ಪ್ರೀತಿಯಲ್ಲಿಶೂನ್ಯ ಮಧ್ಯಾಹ್ನ ಈಗೊ೦ದು ಕೊಲ್ಲಿ.ಸ್ತಬ್ದ ಜಗತ್ತು ಅಪ್ಪಳಿಸುವುದಲ್ಲಿ. ಎಲ್ಲವೂ ಸ್ಪಷ್ಟ ಮತ್ತು ಎಲ್ಲವೂ ಗ್ರಹಿಕೆಗೆ ದೂರಎಲ್ಲವೂ ಹತ್ತಿರ ಮತ್ತು ನಿಲುಕಿಗೆ ದೂರ. ಕಾಗದ, ಪುಸ್ತಕ, ಪೆನ್ಸಿಲ್ಲು, ಗಾಜಿನ ಲೋಟತಮ್ಮ ತಮ್ಮ ಹೆಸರಿನ ನೆರಳಲ್ಲಿ ವಿಶ್ರಮಿಸಿವೆ. ನನ್ನಕಪೋಲಗಳಲ್ಲಿ ಮಿಡಿವಕಾಲ ಪುನರುಚ್ಛರಿಸುತ್ತದೆಬದಲಾಗದ ರಕ್ತದ ಅದೇ ಪದವನ್ನ. ಬೆಳಕು ನಿರ್ಲಕ್ಷ್ಯ ಗೋಡೆಯನ್ನು ಬದಲಿಸುವುದುಪ್ರತಿಫಲನಗಳ ಭಯ೦ಕರ ರ೦ಗವನ್ನಾಗಿ. ಕಣ್ಣೊ೦ದರ ನಡುವಿನಲ್ಲಿ ನನ್ನ ನಾ ಕ೦ಡೆನೋಡುತ್ತ ಅದರ ಶೂನ್ಯ ದೃಷ್ಟಿಯಲ್ಲಿ. ಚದುರಿದೆ ಕ್ಷಣಸ್ತಬ್ದವಾಗಿ ಉಳಿಯುತ್ತೇನೆಮತ್ತು ಹೋಗುತ್ತೇನೆನಾನೊ೦ದು ನಿಲ್ದಾಣ! *****

ಅನುವಾದ ಸಂಗಾತಿ Read Post »

ಅನುವಾದ

ಕಾವ್ಯಯಾನ

ನಿಝಾ಼ರ್ ಖಬ್ಬಾನಿ ಅವರ ಪ್ರೇಮ ಕವಿತೆಗಳು ೧) ನಾನು ನಿನ್ನ ಬಗ್ಗೆ ಅವರಿಗೆ ಹೇಳಿರಲಿಲ್ಲ ಅವರು ನನ್ನ ಕಣ್ಣುಗಳಲ್ಲಿ ಮೀಯುವ ನಿನ್ನ ಕಂಡರು ನಾನು ನಿನ್ನ ಬಗ್ಗೆ ಅವರಿಗೆ ಹೇಳಿರಲಿಲ್ಲ ಆದರೆ ನಾನು ಬರೆದ ಪದಗಳಲ್ಲಿ ನಿನ್ನನ್ನು ಕಂಡರು ಪ್ರೇಮದ ಪರಿಮಳವನ್ನು ಮುಚ್ಚಿಡಲಾಗದು ೨) ನಾನು ನನ್ನ ಪ್ರೇಮಿಯ ಹೆಸರನ್ನು ಗಾಳಿಯ ಮೇಲೆ ಬರೆದೆ ನಾನು ನನ್ನ ಪ್ರೇಮಿಯ ಹೆಸರನ್ನು ನೀರಿನ ಮೇಲೆ ಬರೆದೆ ಆದರೆ ಗಾಳಿ ಒಬ್ಬ ಕೆಟ್ಟ ಕೇಳುಗ ನೀರು ಹೆಸರನ್ನು ನೆನಪಿಡುವುದಿಲ್ಲ ೩) ನನ್ನ ಪ್ರೇಮಿ ಕೇಳುತ್ತಾಳೆ- “ನನ್ನ ಮತ್ತು ಆಗಸದ ನಡುವೆ ಅಂತರವೇನು?” “ಅಂತರವಿಷ್ಟೆ, ಪ್ರಿಯೆ, ನೀನು ನಗುವಾಗ ನಾನು ಆಗಸವನ್ನು ಮರೆತು ಬಿಡುವೆ” ******* ಡಾ.ಗೋವಿಂದ ಹೆಗಡೆ

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಅಂಬೇಡ್ಕರ ೧೯೮೧ ಮೂಲ: ನಾಮದೇವ ಡಸಾಲ್ ಕನ್ನಡಕ್ಕೆ: ಕಮಲಾಕರ ಕಡವೆ ಮುಂಗಾರಿನಂತೆ ನಿನ್ನ ಬರವು ನಮ್ಮ ಕಡೆ ನಿನ್ನ ತಯಾರಿಯಲ್ಲಿ ನಾವಿರಬೇಕು ಎಲ್ಲಿಲ್ಲ ನೀನು? ಬಿಸಿಲು ಮಳೆಯಲ್ಲಿ, ಗಾಳಿ ಸುಂಟರಗಾಳಿಯಲ್ಲಿ, ಭೂತಕಾಲದಲ್ಲಿ ಹಳೆಯ ನೋವಲ್ಲಿ, ನನ್ನ ಕಣ್ಣುಗಳಲ್ಲಿ, ಈ ನೆಲದ ಕಾಮನಬಿಲ್ಲಿನಲ್ಲಿ ಸ್ವಪ್ನಗಳ ಆಸರೆಗೆ ಪೆಟ್ಟು ಕೊಡುತ್ತ ಅಸ್ತಿತ್ವದ ಈ ಕಾಂಪೋಸಿಷನ್ನನ್ನು ಉತ್ತುಂಗವಾಗಿಸುತ್ತ ನಿನ್ನ ಶೇಷ, ನಿನ್ನ ಅವಶೇಷ ನಿನ್ನ ನಿರರ್ಗಳ ಉಜ್ವಲ ಪ್ರತಿಬಿಂಬ ಅವರು ಹೊರಟಿದ್ದಾರೆ ಚೆಲ್ಲಾಪಿಲ್ಲಿಯಾಗಿಸುತ್ತ ಭಯೋತ್ಪಾದನೆ ಭಯೋತ್ಪಾದನೆ ಹೇಗೆ ನಿನ್ನ ಹೆಸರಾದೀತು? ಜ್ಞಾನದ ಎಲೆಯೊಂದಿಗೆ ಧೃಢವಾಗುತ್ತ ದಿಗಂತವೇ ಆಗುವವ ನೀನು ಕ್ಷುದ್ರ ಕಣ್ಣಿನ ಲಫಂಗರು ಯಾಕೆ ನಿನ್ನನ್ನು ಕ್ಷಿತಿಜಕ್ಕೆ ಮಾತ್ರ ಬಂಧಿಯಾಗಿಸಿಡಬೇಕು? ತಮ್ಮ ಕುಂಡಿಯ ಮೇಲಿನ ಮಚ್ಚೆ ಎಣಿಸಲು ಬಾರದ ಇವರಿಗೆ ಬರೀ ಸಾಮಾನ ಪಿಟೀಲು ತುಣ ತುಣಿಸುವುದು ಮತ್ತು ಕುಂಡೆಯ ಡೋಲು ಬಾರಿಸುವುದು ಯಾಕೆ ಬೇಕು? ಬೆರೆಯುವ ಹೆಸರಲ್ಲಿ ಇವರು ಮೈಮೇಲೆ ಹೊದ್ದುಕೊಂಡಿರುವ ಸಂಪತ್ತಿನ ಶಾಲು ಕೊನೆಗೂ ರಾಧಾಬಾಯಿ, ಭೀಮಾಬಾಯಿಯರ ಕರುಣಾಷ್ಟಕ ಕೊನೆಗೂ ಯೆಲ್ಲಮ್ಮನ ತಿರುಪೆ ಪಾತ್ರೆ, ಈ ಚಾಣಾಕ್ಷ ಉರಿಶಿಶ್ನ ಇವರುಗಳ ಪಂಚಾಯತಿ ಹಮಾಲ ಇವರುಗಳ ಗುಡಾಣತುಂಬುವ ಟ್ರಸ್ಟ್ ಇವೇ ಇವರುಗಳ ಎಂಟು ಹೊತ್ತಿನ ಸುಗ್ರಾಸ ಊಟದ ಶಿಬಿರ ನಂತರ ರಾತ್ರಿ ಸ್ವಪ್ನಕ್ಕೆ ಕಾಡಿಗೆ ಹಚ್ಚಿಕೊಂಡು ಸುಗ್ರಾಸ ಸಂಭೋಗ ಪುನಃ ಹೊಸ ದಿನಕ್ಕಾಗಿ ಶುಭ್ರ ಖಾದಿ ಹೊದ್ದು ಸುಪರ್ ಸ್ಟ್ರಕ್ಚರ್ ಹಾಗೆ ನಲ್ಲ ನಲ್ಲೆ ಸ್ವಂತದ್ದೇ ಶಿಲುಬೆ ಸ್ವಂತ ಹೆಗಲುಗಳ ಮೇಲೆ ಹೊತ್ತೊಯ್ಯಲು ಹಲ್ಕಟರಾದ ಇವರು ಇಲ್ಲಿ ಅಜ್ಞಾನ ಫಲ ಕೊಡಲಿ, ಅರಳಲಿ ದಲಿತರಿಗೆ ಮಾತ್ರ ಏನೂ ತಿಳಿಯದಿರಲಿ ಈ ಪ್ರವಾದಿಗಳ ನೆತ್ತಿಯ ಮೇಲೆ ಬೆಣ್ಣೆ ಕರಗುತ್ತಲಿರಲಿ ಇತ್ತೀಚೆ ಇವರ ಸಮಾಜವಾದಿ ಪಿಂಡಗಳನ್ನೂ ಕಾಗೆ ತಿನ್ನ ತೊಡಗಿವೆ ಈ ಕಾಗೆಗಳು ಇಡೀ ಶಹರವನ್ನೇ ಹೊಲಸು ಮಾಡಿ ಬಿಟ್ಟಿದ್ದಾವೆ ಓ ಮಬ್ಬು ಆಕಾಶವೇ ಆ ನಮ್ಮ ಹಿತೈಷಿ ಮುಂಗಾರು ನಮ್ಮನ್ನ ಒದ್ದೆಯಾಗಿಸುತ್ತ ಬರುತ್ತಿದೆಯಲ್ಲ ! ಈ ಎಂಬತ್ತೊಂದರ ವರ್ಷದ ಮಹಾದ್ವಾರವು ಅವನಿಗಾಗಿ ಪೂರ್ತಿ ತೆರೆಯಲಿ ಅವನಿಗಾಗಿ ಈ ಹೃದಯ, ಅವನಿಗಾಗಿ ಈ ರಕ್ತ ಅವನಿಗಾಗಿ ಈ ಪ್ರೇಮ ಸ್ವಪ್ನಗಳ ಪರದೆ ಹರಿದು ಸಿಂಹಗರ್ಜನೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದೇವೆ ನಾವೀಗ ಯಾರಪ್ಪನ ಭಯ ನಮಗೆ? *******

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ನನ್ನ ಪ್ರಿಯ ಕವಿ ಮೂಲ: ಸರ್ಬಜೀತ್ ಗರ್ಚ ಕನ್ನಡಕ್ಕೆ:ಕಮಲಾಕರ ಕಡವೆ ಬೇಕಾದರೆ ಅವುಗಳನ್ನು ಕವಿತೆ ಎನ್ನಬೇಡಆದರೆ ಬರೆವೆಯಾದರೆ ಬರೆಜೇಬಿನ ಕತ್ತಲೆಗೆ ಬೆಳಕ ಚೆಲ್ಲದಿದ್ದರೂಕೊಂಚ ಬೆಚ್ಚಗಿರುಸುವಂತಸಾಲುಗಳನ್ನು ಹೇಗೆ ನೆಲಹಾಸಿನ ಮೇಲೆ ಬೀಳುವ ಬಿಸಿಲಕೋಲುವರ್ಷಾನುಗಟ್ಟಲೆ ಮುಚ್ಚಿದ್ದ ಕೋಣೆಗೂಹೊರಗೆ ಬೆಳಗುತ್ತಿರುವ ಸೂರ್ಯನಕಾಣುವ ತವಕವನ್ನು ಕೊಟ್ಟಂತೆ ಅಂತಹ ಸಾಲುಗಳುಜೇಬಿನಲ್ಲಿಯೇ ಇದ್ದು ಇದ್ದುಒಂದು ದಿನ ಪಕಳೆಯಾಗಿ ಬಿಡುವವು ಹಾಗೂ ಸೂರ್ಯನಾಗುವನು ಒಂದು ಗುಲಾಬಿಹರಡಿ ಅದರೊಳಗೆಲ್ಲ ತನ್ನ ಕಿರಣ ಕಾಗದ ಅಥವಾ ಜೇಬು ಇಲ್ಲದೆಯೂಅವು ದಿನದಿನವೂ ಬೆಳಗುವವುಅನುದಿನವೂ ನಗುವವು *********

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಹಸಿವು ಮತ್ತು ಬಾಯಾರಿಕೆ ಮೂಲ: ಖಲೀಲ್ ಗಿಬ್ರಾನ್ ಕನ್ನಡಕ್ಕೆ:ಡಾ.ಬೆಳ್ಳೂರು ವೆಂಕಟಪ್ಪ ಧರ್ಮಛತ್ರದ ಕಾವಲುಗಾರನಾಗಿದ್ದ ವೃದ್ದನೊಬ್ಬ ಕೇಳಿದ: ಹಸಿವು ಮತ್ತು ಬಾಯಾರಿಕೆ ಬಗ್ಗೆ ತಿಳಿಸಿ: ಪ್ರವಾದಿ ನಗುತ್ತಾ ಹೀಗೆ ಹೇಳಿದ: ಬೆಳಕನ್ನು ಹೀರಿ ಬೆಳೆವ ಮರಗಿಡಗಳ ರೀತಿ ತಂಗಾಳಿಯ ಜತೆ ಸುಗಂಧ ಬಿರಿವ ಭೂಮಿಯ ಮೇಲೆ ನಿಮಗೆ ಬದುಕುವುದಕ್ಕೆ ಸಾಧ್ಯವೇ? ಆದರೆ ಕೊಂದು ತಿನ್ನುತ್ತೀರಿ ಪ್ರಾಣಿಗಳ ಹಾಲನ್ನು ಕದ್ದು ಕುಡಿಯುತ್ತೀರಿ ಹಸಿವು ಮತ್ತು ಬಾಯಾರಿಕೆ ನೀಗಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿರುವ ಈ ಪ್ರಕೃತಿ ನಿಯಮ ಪೂಜನೀಯವಾಗಿದೆ ನಿಮ್ಮ ವಾಸದ ಮನೆಗಳನ್ನು ಕಟ್ಟಲು ಆ ಮುಗ್ಧ ಕಾಡಿನ ಮರಗಳನ್ನು ಬಲಿ ಕೊಡುತ್ತೀರಿ ಇನ್ನೂ ಮುಗ್ಧತೆಯ ಪ್ರತಿಕವಾಗಿರುವ ನಿಮಗೆ ಪರಿಶುದ್ಧ ಗುಣದ ಕಾಡು ಎಲ್ಲವನ್ನೂ ತ್ಯಾಗ ಮಾಡಿದೆ. ಆಡು ಕುರಿ ಕೋಳಿ ಇತರೆ ಯಾವುದಾದರೂ ಜೀವಿಗಳನ್ನು ಕೊಲ್ಲುವಾಗ ನೀವು ನಿಮ್ಮ ಹೃದಯಕ್ಕೆ ಹೀಗೆ ಹೇಳಿ “ಯಾವ ನಿಯಮ ನಿಮ್ಮನ್ನು ಕೊಲ್ಲುವಂತೆ ಮಾಡಿದೆಯೊ ಅದೇ ನಿಯಮ ನನ್ನನ್ನೂ ಕೊಂದು ನನ್ನ ದೇಹದ ಮಾಂಸವನ್ನು ಬೇರೆ ಜೀವಿಗಳು ಸೇವಿಸುತ್ತವೆ” “ಕೊಂದು ತಿನ್ನಲು ಯಾವ ಪ್ರಕೃತಿ ನಿಮ್ಮನ್ನು ನನ್ನ ಕೈಲಿರಿಸಿದೆಯೊ ಅದೇ ಪ್ರಕೃತಿ ನನ್ನನ್ನು ಇನ್ನೊಂದು ಕಾಣದ ಕೈಯಲ್ಲಿ ಇರಿಸಿದೆ” “ನನ್ನ ರಕ್ತ ಮತ್ರು ನಿಮ್ಮ ರಕ್ತ ಬೇರೇನೂ ಅಲ್ಲ ಸ್ವರ್ಗದ ಮರಗಳ ಬೇರುಗಳಿಗೆ ಜೀವರಸ ಮಾತ್ರ” ಹಾಗೆಯೇ ಸೀಬೆಯ ಹಣ್ಣನ್ನು ಕಚ್ಚಿ ತಿನ್ನುವಾಗ ನಿಮ್ಮ ಹೃದಯಕ್ಕೆ ಕೇಳಿಸುವಂತೆ ಹೀಗೆ ಹೇಳಿ: “ನಿಮ್ಮ ಬೀಜಗಳು ನನ್ನ ಹೊಟ್ಟೆಯಲ್ಲಿ ಸೇರಿದ್ದು ಅವು ಮುಂದೆ ನಳನಳಿಸುವ ಹೂವಾಗಿ ನನ್ನ ಹೃದಯದಲ್ಲಿ ಅರಳುತ್ತವೆ “ “ನಿನ್ನ ಸುಗಂಧ ನನ್ನ ಉಸಿರಾಗಲಿ ಎಲ್ಲ ಋತುಗಳಲ್ಲಿ ಕೂಡಿ ಬಾಳೋಣ” ಅದೇ ತರ ಶರತ್ಕಾಲದ ದ್ರಾಕ್ಷಿತೋಟದಿಂದ ಕಿತ್ತು ತಂದ ಹಣ್ಣುಗಳನ್ನು ತುಳಿದು ವೈನ್ ತಯಾರಿಸುವಾಗ ಕೂಗಿ ಹೇಳಿ ನಿಮ್ಮ ಹೃದಯಕ್ಕೆ: “ನಾನೂ ಕೂಡ ಒಂದು ದ್ರಾಕ್ಷಿತೋಟ ನನ್ನ ಎಲ್ಲ ರಕ್ತ ಮಾಂಸ ದ್ರಾಕ್ಷಿ ಹಣ್ಣುಗಳ ರೀತಿ ತುಳಿಯಲ್ಪಟ್ಟು ದ್ರಾಕ್ಷಾರಸವಾಗುತ್ತವೆ” “ನಾನು ಹೊಸ ವೈನ್ ಅಗಿ ಅನಂತ ಕಾಲದ ಪಾತ್ರೆಗಳಲ್ಲಿ ಬಂಧಿಯಾಗುತ್ತೇನೆ” “ಚಳಿಗಾಲಕ್ಕೆ ನೀವು ಕುಡಿವ ಆ ವೈನಿನ ಪ್ರತಿ ಕಪ್ಪಿನಲ್ಲೂ ಸೇರಿ ನಿಮ್ಮ ಹೃದಯದ ಹಾಡಾಗುತ್ತೇನೆ” “ಆ ಹಾಡಿನಲ್ಲಿ ಶರತ್ಕಾಲದ ದ್ರಾಕ್ಷಿ ತೋಟ ಮತ್ತು ವೈನ್ ಮತ್ತೆ ನೆನೆಪಾಗಲಿ” ***********

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

“ನಿಮ್ಮ ಕೈಗಳು ಮೂಲ: ಬಾಬುರಾವ್ ಬಾಗುಲ್(ಮರಾಠಿಕವಿ) ಕನ್ನಡಕ್ಕೆ:ಕಮಲಾಕರ ಕಡವೆ ನಿಮ್ಮ ಕೈಗಳು ಇದ್ದಿರಬಹುದು ಬಂಧಿಆದರೆ ಅವು ಸೃಜನಶೀಲನಿಮ್ಮ ಕೈಗಳು ಇದ್ದಿರಬಹುದು ಶಾಂತ, ಅಮಾಯಕಆದರೆ ಅವು ಪರಿವರ್ತನೆಯ ರಥಗಳುಪ್ರಗತಿಯ ಹೆದ್ದಾರಿಗಳುನಿಮ್ಮ ಐದು ಬೆರಳುಗಳು ಪಂಚಮಹಾಭೂತಗಳುಇದೇನು ಬಾ. ಬಾ. ನ ಕಲ್ಪನೆಯಲ್ಲರಶಿಯಾ, ಅಮೇರಿಕ, ಯುರೋಪು ಆಗಿದ್ದಾರೆ ಸಾಕ್ಷಿನಿಮ್ಮ ಖಚಿತ ಸಾಮರ್ಥ್ಯಕ್ಕೆ ********

ಅನುವಾದ ಸಂಗಾತಿ Read Post »

You cannot copy content of this page

Scroll to Top