ಭಯದ ಬಗ್ಗೆ ಭಯ ಬೇಡ ಇಂದಿನ ಆಧುನಿಕ ಗಡಿಬಿಡಿ ಜೀವನ ಶೈಲಿಯು ನಮ್ಮ ಮನಸ್ಸಿನ ಮೆಲೆ ಅನೇಕ ದುಷ್ಪರಿಣಮಗಳನ್ನು ಬೀರುತ್ತಿದೆ. ಅದರಲ್ಲಿ ಭಯವು ಪ್ರಮುಖವಾಗಿದೆ. ಭಯದ ಜೊತೆಗೆ ಉತ್ಸುಕತೆ ಹೆಚ್ಚುತ್ತಿದೆ. ಇವೆರಡೂ ಮಾನವನ ಸಹಜ ಗುಣಗಳಾದರೂ ಇತ್ತೀಚಿನ ದಿನಮಾನಗಳಲ್ಲಿ ಇವು ನಮ್ಮ ನಿಕಟ ಸಂಗಾತಿಗಳಾಗಿವೆ. ಮನಸ್ಸಿನಲ್ಲಿ ಭಯ ಮೂಡಿತೆಂದರೆ ಅದರಿಂದ ಹೊರಬರುವದು ಅಷ್ಟು ಸುಲಭದ ಮಾತಲ್ಲ. ಮಕ್ಕಳು ಯಾವ ಯಾವದೆ ವಿಷಯಕ್ಕೆ ಭಯಗೊಳ್ಳುತ್ತವೆ. ಭಯ ಕೇವಲ ಮಕ್ಕಳಿಗೆ ಅಷ್ಟೇ ಅಲ್ಲ ದೊಡ್ಡವರಿಗೂ ಕಾಡುವ ಮಾನಸಿಕ ಸಮಸ್ಯೆ. ಭಯ ಅಂದರೇನು? ಅದು ಏಕೆ ಉಂಟಾಗುತ್ತದೆ ಅದನ್ನು ಹೇಗೆ ನಿವಾರಿಸುವದು ಎಂಬ ಪ್ರಶ್ನೆಗಳು ನಮ್ಮಲ್ಲಿ ಅದೆಷ್ಟೋ ಬಾರಿ ಸುಳಿಯುತ್ತವೆ. ಭಯ ಅಂದರೆ ಏನು ಅಂತ ಹೇಳೋಕೆ ಆಗಲ್ಲ ಆದರೆ ಅದನ್ನು ಒಂದಿಲ್ಲೊದು ಸಂದರ್ಭದಲ್ಲಿ ನಾವು ಅನುಭವಿಸುತ್ತೇವೆ. ಇದು ಮನಸ್ಸಿನ ನಕಾರಾತ್ಮಕ ಭಾವನೆ. ಭಯ ಎಂದರೇನು? ನಮ್ಮ ಶಕ್ತಿಗೆ ಮೀರಿದ ಅಸಾಂಭವ್ಯ ವಿಚಾರವು ನಮ್ಮ ಮನಸ್ಸಿಗೆ ಹೊಕ್ಕಿತೆಂದರೆ ಆಗ ನಮ್ಮಲ್ಲಿ ನಾವು ಏನೋ ಕಲ್ಪಿಸಿಕೊಳ್ಳುತ್ತೇವೆ. ಇಂತಹ ವಾಸ್ತವವಲ್ಲದ ಕಲ್ಪನೆಗಳಿಗೆ ಒಂದು ಸ್ಪಷ್ಟ ಚಿತ್ರಣವನ್ನು ಸೃಷ್ಟಿಸಿಕೊಂಡು ನೋಡಲು ಶುರು ಮಾಡುತ್ತೇವೆ. ಆಗ ಮನದಲ್ಲಿ ಸಾವಕಾಶವಾಗಿ ಭಯವು ಆವರಿಸಕೊಳ್ಳತೊಡುಗತ್ತದೆ. ನಾವು ಸೃಷ್ಟಿಸಿಕೊಂಡ ಕಾಲ್ಪನಿಕ ಚಿತ್ರಣವು ಕ್ರಮೇಣ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿ ನಮ್ಮನ್ನು ಅಧೋಗತಿಗೆ ತಳ್ಳುತ್ತದೆ. ಬಹಳಷ್ಟು ಬಾರಿ ಭಯವು ನಮ್ಮ ಭ್ರಮೆಯೇ ಆಗಿರುತ್ತದೆ. ಇಲ್ಲದ್ದನ್ನು ಇದ್ದ ಹಾಗೆ ತಿಳಿದುಕೊಳ್ಳುತ್ತೇವೆ. ಇದು ಒಂದು ಭಾವನಾತ್ಮಕ ಅನುಭವ. ಮನದಲ್ಲಿ ಆತಂಕ ಭಾವ ಸೃಷ್ಟಿ ಮಾಡಿ, ಭಾವನಾತ್ಮಕ ಅಡಚಣೆಯನ್ನುಂಟು ಮಾಡುತ್ತದೆ. ಭಯದಿಂದಾಗಿ ನಮ್ಮ ಜಾಗೃತ ಮನಸ್ಸು ನೋವನ್ನು ಅನುಭವಿಸುತ್ತದೆ. ನೋವಿನಿಂದ ಹೊರಬರಲು ನಮ್ಮ ಮನಸ್ಸು ಒದ್ದಾಡುತ್ತದೆ. ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ಎಚ್ಚರಿಕೆಯ ಸಂಕೇತವಾಗಿ ವರ್ತಿಸುತ್ತದೆ. ಇಲ್ಲವಾದಲ್ಲಿ ಮಾನಸಿಕ ವ್ಯಾಧಿಯಾಗಿ ಕಾಡುತ್ತದೆ. ಭಯ ಉಂಟಾಗೋದು ಯಾವಾಗ? ನಾಳೆ ಏನಾಗುತ್ತದೆಯೋ ಏನೊ ಎಂಬ ಚಿಂತೆಯು ಭಯವಾಗಿ ಪರಿವರ್ತನೆಯಾಗುತ್ತದೆ. ಯಾವುದೇ ವಿಷಯದ ಬಗೆಗೆ ನಿರಾಶಾದಾಯಕವಾಗಿ ಆಲೋಚಿಸುವದು, ಸುಮ್ಮನೆ ಏನನ್ನೋ ಇಲ್ಲದ್ದನ್ನು ಊಹಿಸಿಕೊಳ್ಳುವದು,ಹಿಂದೆ ನಡೆದು ಹೋದ ಕಹಿ ಘಟನೆಗಳನ್ನು ಮೇಲಿಂದ ಮೇಲೆ ನೆನಪು ಮಾಡಿಕೊಳ್ಳುವದು, ನಾನೆಲ್ಲಿ ಸೋತು ಹೋಗುತ್ತೇನೊ ಎಂಬ ಸೋಲಿನ ಆತಂಕ, ನನಗಾರೂ ಇಲ್ಲ ನಾನು ಏಕಾಂಗಿ ಎಂಬ ಭಾವ, ಪರರು ನನಗಿಂತ ಮುಂದೆ ಹೋಗುತ್ತಿದ್ದಾರೆ ಎಂಬ ಮತ್ಸರ ಭಾವ ನಮ್ಮಲ್ಲಿ ಭಯವನ್ನು ಹುಟ್ಟು ಹಾಕುತ್ತವೆ. ನಾವು ಅಪಾಯದಲ್ಲಿ ದ್ದಾಗ ನಮ್ಮ ಜೀವನದ ಬಗ್ಗೆ ಹೆದರಿಕೆಯಾಗುತ್ತದೆ. ಯಾವುದಕ್ಕೆ ಭಯಗೊಳ್ಳುತ್ತೆವೆ? ಚಿಕ್ಕ ಪುಟ್ಟ ವಿಷಯಗಳಿಗೂ ಮನಸ್ಸು ಭಯಗೊಳ್ಳುತ್ತದೆ. ಇದು ಒಂದು ತೆರನಾದ ಮಾನಸಿಕ ಸಂಘರ್ಷ. ಇದಕ್ಕೆ ಫೋಬಿಯೋ ಅಂತಲೂ ಕರೆಯುತ್ತಾರೆ. ಕೆಲವರಿಗೆ ಕಾಡುಪ್ರಾಣಿಗಳೆಂದರೆ ಭಯ. ಇನ್ನೂ ಕೆಲವರಿಗೆ ಸಾಕು ಪ್ರಾಣಿಗಳಾದ ನಾಯಿ ಬೆಕ್ಕು ಕಂಡರೂ ಭಯ. ಮಳೆ ಗುಡುಗು ಮಿಂಚಿಗೂ ಹೆದರುತ್ತಾರೆ. ವಿಚಿತ್ರೆಮದರೆ ಕೆಲವರು ಜನರನ್ನು ಕಂಡರೆ ಕಾಡು ಪ್ರಾಣಿ ನೋಡಿದ ತರ ಭಯಗೊಳುತ್ತಾರೆ.ಆಹಾರದ ಭಯ, ಎತ್ತರ ಜಾಗದ ಭಯ, ಬಸ್ಸಿನಲ್ಲಿ , ರೈಲಿನಲ್ಲಿ ವಿಮಾನದಲ್ಲಿ ಪ್ರಯಾಣ ಮಾಡುವದೆಂರೆ ಭಯ ಇನ್ನು ಕೆಲವರು ನೀರು ಕಂಡರೆ ಹೆದರುತ್ತಾರೆ. ಅಂದರೆ ಭಯ ಎಲ್ಲ ಹಂತಗಳಲ್ಲಿ ಇದ್ದೇ ಇರುತ್ತದೆ.ಒಬ್ಬೊಬ್ಬರಿಗೆ ಒಂದೊಂದನ್ನು ಕಂಡರೆ ಭಯ. ಆಫೀಸಿಗೆ ಹೋದ ಗಂಡ, ಸ್ಕೂಲಿಗೆ ಹೋದ ಮಕ್ಕಳು ಮನೆಗೆ ಸರಿಯಾದ ಸಮಯಕ್ಕೆ ಮರಳಿ ಬರದಿದ್ದರೂ ಭಯಗೊಳ್ಳುವ ಪ್ರಸಂಗಗಳಿವೆ. ನಾವು ಧೈರ್ಯವಂತರು ಎಂದು ಎಷ್ಟೋ ಜಂಭ ಕೊಚ್ಚಿಕೊಂಡರೂ ಭಯಗೊಳ್ಳುತ್ತೇವೆ ಎಲ್ಲಕ್ಕಿಂತ ದೊಡ್ಡ ಭಯ ಎಂದರೆ ಸಾವಿನ ಭಯ. ಈ ಭಯ ನಮ್ಮ ಅಸ್ತಿತ್ವಕ್ಕೆ ಸಂಭಧಿಸಿದ್ದುಎಲ್ಲಿ ನಮ್ಮ ಪ್ರಾಣಕ್ಕೆ ಸಂಚಕಾರ ಬರುತ್ತೇನೋ ಎಂದು ಎಷ್ಟೋ ಬಾರಿ ಭಯಗೊಳ್ಳುತ್ತೇವೆ. ಭಯದ ಲಕ್ಷಣಗಳೇನು? ಭಯವುಂಟಾದಾಗ ಮೈಂಡ್ ಫುಲ್ ಬ್ಲ್ಯಾಂಕ್ ಆಗಿರುತ್ತೆ ಯಾವುದೇ ವಿಚಾರಗಳು ಆಲೋಚನೆಗಳು ಹೊಳೆಯೊದಿಲ್ಲ. ಮೈಯೆಲ್ಲ ಬೆವರುತ್ತೆ.ಕೈ ಕಾಲುಗಳಲ್ಲಿ ಶಕ್ತಿಯಿಲ್ಲದಂತೆ ಭಾಸವಾಗುತ್ತೆ. ಮಾತೇ ಹೊರಡೊದಿಲ್ಲ.ಹೊರಡಿದರೂ ತೊದಲುತ್ತೆ. ಭಯದ ವಿಚಾರವನ್ನು ಹೊರತುಪಡಿಸಿ ಬೇರೆ ಯಾವ ವಿಚಾರಗಳು ಮನಸ್ಸಿನಲ್ಲಿ ಸುಳಿಯಲಾರವು. ವಿಚಾರಗಳೆಲ್ಲ ಅಸ್ಥವ್ಯಸ್ಥವಾಗುವವು ಅಂದುಕೊಂಡ ಯಾವ ಕೆಲಸವನ್ನು ಮಾಡಲು ಸಾಧ್ಯವಾಗುವದಿಲ್ಲ. ಸಣ್ಣ ಪುಟ್ಟ ವಿಷಯಗಳಿಗೆ ಬೆಚ್ಚಿ ಬೀಳುವದು ಅಥವಾ ಇದಕ್ಕೆ ತದ್ವಿರುದ್ಧವಾಗಿ ಗಂಭೀರ ವಿಷಯಗಳಿಗೂ ಪ್ರತಿಕ್ರಿಯಿಸದೆ ಮೌನವಾಗಿರುವದು.ಇವೆಲ್ಲ ಭಯದ ಮುಖ್ಯ ಲಕ್ಷಣಗಳು. ಭಯ ತಡೆಯೋಕೆ ಏನು ಉಪಾಯ ಪ್ರತಿಯೊಂದು ಭಯದಿಂದಲೂ ನಾವು ಮುಕ್ತರಾಗಬಹುದು. ಭಯ ತಡೆಯುವ ಉಪಾಯಗಳು ಕಠಿಣವೆನಿಸಿದರೂ ಅಸಾಧ್ಯವೇನಲ್ಲ. ನಾವು ಭಯಗೊಳ್ಳುತ್ತೇವೆ ಎನ್ನುವ ಸಂಗತಿಯನ್ನು ಒಪ್ಪಿಕೊಳ್ಳುವದು.ಯಾವ ವಿಷಯದ ಬಗ್ಗೆ ಭಯವಿದೆಯೋ ಎಂಬುನ್ನು ತಿಳಿದು ಅದನ್ನು ಮುಕ್ತವಾಗಿ ಆತ್ಮೀಯರೊಂದಿಗೆ ಚರ್ಚಿಸುವದು.ಯಾವಾಗಲೂ ಕೆಲಸದಲ್ಲಿ ತೊಡಗಿಸಿಕೊಳ್ಳುವದು. ಮೂಢನಂಬಿಕೆ ಮತ್ತು ಅಪಶಕುನಗಳನ್ನು ನಂಬದೆ ಇರುವದು. ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳುವದು. ಪರಿಸ್ತಿತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನಿರ್ಣಯ ಕೈಗೊಳ್ಳುವದು ಅನುಮಾನಕ್ಕೆ ಆಸ್ಪದ ಕೊಡದಿರುವದು ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ನಮಗೆ ಎಚ್ಚರಿಕೆಯಂತೆ ವರ್ತಿಸುತ್ತದೆ ಎಂದು ತಿಳಿದುಕೊಳ್ಳುವದು.ಭಯ ನಿವಾರಿರಿಸುವದಕ್ಕೆ ಪ್ರಯತ್ನಿಸಿ ತಜ್ಞ ವೈಜ್ಞರನ್ನು ಭೇಟಿ ಮಾಡುವದು. ನಿಜವಾದ ಧೈರ್ಯವನ್ನು ಮನಸ್ಸಿಗೆ ತುಂಬಿಕೊಳ್ಳುವದು ಆಶಾವಾದಿಯಾಗಿರುವದು. ನಾನು ಧೈರ್ಯವಂತ ಎಂದು ನನ್ನಷ್ಟಕ್ಕೆ ನಾವೇ ಹೇಳಿಕೊಳ್ಳುವದು ಎಂದರೆ ಸೆಲ್ಪ ಹಿಪ್ನಾಟಿಸಂ ಮಾಡಿಕೊಳ್ಳುವದು. ವಿವೇಕಾನಂದರ ವಾಣಿಯಂತೆ ‘ನಿಮ್ಮಿಂದ ನೀವೇ ಉದ್ದಾರವಾಗಬೇಕು. ಸ್ನೇಹಿತನೆ ನಿನಗೆ ಯಾರೂ ಸಹಾಯ ಮಾಡಲಾರರು. ನಿನಗೆ ನೀನೇ ದೊಡ್ಡ ಶತ್ರು ನಿನಗೆ ನೀನೇ ದೊಡ್ಡ ಮಿತ್ರ ಹಾಗಾದರೆ ನೀನು ಆತ್ಮವನ್ನು ದೃಢವಾಗಿ ಹಿಡಿದುಕೊ ಎದ್ದು ನಿಲ್ಲು ಅಂಜಬೇಕಾಗಿಲ್ಲ. ನೀನು ಜಗತ್ತನ್ನೇ ಅಲ್ಲಾಡಿಸಲು ಸಮರ್ಥನಾಗುವೆ. ಶಕ್ತಿಯ ರಹಸ್ಯ ವ್ಯಕ್ತಿ ಮತ್ತು ಆತನ ಜೀವನವೇ ಹೊರತು ಮತ್ತಾವುದು ಅಲ್ಲವೆಂಬುವದನ್ನು ನೆನಪಿನಲ್ಲಿಡಿ’. ಸ್ವಾಮಿ ವಿವೇಕಾನಂದರ ವಿವೇಕಭರಿತವಾದ ಈ ವಾಣಿಯನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತ ಕೇವಲ ದೈಹಿಕ ಆರೋಗ್ಯದ ಕಡೆಗೆ ಗಮನ ಕೊಡದೆ ಮಾನಸಿಕ ಆರೋಗ್ಯದ ಬಗೆಗೆ ಗಮನವಹಿಸಿ ಆಗಾಗ ತಜ್ಞ ವೈದ್ಯರನ್ನು ಭೇಟಿಯಾಗಿ ನಮ್ಮ ವರ್ತನೆಯಲ್ಲಾದ ಬದಲಾವಣೆಯ ಕುರಿತು ಚರ್ಚಿಸಿ, ಅವರ ಸಲಹೆಗಳನ್ನು ಪಾಲಿಸಿದರೆ, ಭಯ ಮಂಗಮಾಯವಾಗುವದು ಖಚಿತ. ************************** ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು
ಅಂಕಣ ಬರಹ ತ್ವರಿತವಾಗಿಉತ್ತಮನಿರ್ಧಾರತೆಗೆದು ಕೊಳ್ಳುವುದುಹೇಗೆ? ಹಿಂದೆ ಮಾಡಿದ ನಿರ್ಧಾರಗಳು ಇಂದು ನಾವಿರುವ ಸ್ಥಿತಿಗೆ ಕಾರಣ.ಎಂಬುದು ನಮಗೆಲ್ಲ ಗೊತ್ತಿರುವ ವಿಷಯವೇ. ಆದರೂ ಹಲವೊಮ್ಮೆ ನಾವು, ಛೇ! ನಾನು ಅಷ್ಟು ತಡವಾಗಿ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಈಗ ನೋಡು ಎಷ್ಟೊಂದು ನೋವು ಅನುಭವಿಸುವ ಹಾಗಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯ್ತು. ನನ್ನ ವಿಳಂಬ ನಿರ್ಧಾರದಿಂದ ಸಾಕಷ್ಟು ನಷ್ಟವಾಗುತ್ತಿದೆ ಅಂತ ತಿಳಿಯುತ್ತಿದ್ದರೂ ಅದನ್ನು ಬದಲಿಸಿಕೊಳ್ಳಲು ಆಗುತ್ತಿಲ್ಲ ಎಂದು ಹಲಬುತ್ತೇವೆ.ನಿರ್ಧಾರಗಳು ಇಡೀ ಜೀವನವನ್ನೇ ಆವರಿಸಿವೆ. ವೃತ್ತಿ ಪ್ರವೃತ್ತಿ ಆರೋಗ್ಯ ಸಂಬಂಧಗಳು ಎಲ್ಲವೂ ನಿರ್ಧಾರದಿಂದ ನಿರ್ಧರಿಸಲ್ಪಡುತ್ತವೆ. ನನ್ನ ಜೊತೆಗೆ ಇದ್ದ ಗೆಳೆಯರು ಇದೇ ವಿಷಯದಲ್ಲಿ ಮಾಡಿದ ಸೂಕ್ತ ತ್ವರಿತ ನಿರ್ಧಾರಗಳು ಅವರ ಬದುಕನ್ನು ಉನ್ನತ ಸ್ಥಿತಿಗೆ ಏರಿಸಿದವು.ನಿರ್ಧಾರವೆಂದರೆ. . . . . .?‘ಮೂಲತಃ ನಿರ್ಧಾರವೆಂದರೆ ಲಭ್ಯವಿರುವ ಆಯ್ಕೆಗಳಲ್ಲಿ ಸರಿಯೆನಿಸಿದ ಒಂದನ್ನು ಆರಿಸಿಕೊಳ್ಳುವುದು.’ ‘ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ನಮ್ಮ ಜೀವನವನ್ನು ನಿರ್ಧರಿಸುತ್ತದೆ.’ನಾವು ತೆಗೆದುಕೊಳ್ಳುವ ನಿರ್ಧಾರಗಳು ಬದುಕನ್ನು ಕಟ್ಟುತ್ತವೆ ಇಲ್ಲವೇ ಕೆಡುವುತ್ತವೆ. ನಿರ್ಧಾರಗಳಿಗೆ ಬಹಳಷ್ಟು ಸಮಯ ಕಳೆಯುತ್ತೇವೆ. ಮುಂಜಾನೆ ಎಷ್ಟು ಗಂಟೆಗೆ ಏಳೋದು? ಮಧ್ಯಾಹ್ನ ಊಟಕ್ಕೇನು? ಇಂದು ಯಾವ ಯಾವ ಕೆಲಸ ಮಾಡುವುದು? ಯಾರನ್ನು ಭೇಟಿಯಾಗುವುದು ಇಂಥ ಚಿಕ್ಕ ಚಿಕ್ಕ ವಿಷಯಗಳಲ್ಲಿಯೂ ನಿರ್ಧಾರ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದೆ. ಬಿಕ್ಕಟ್ಟಿನ ಸಮಯದಲ್ಲಿ ಇಲ್ಲವೇ ಜೀವನದ ಮಹತ್ವದ ನಿರ್ಧಾರದಲ್ಲಂತೂ ಇದರ ಪಾತ್ರ ಬದುಕನ್ನೇ ಅಲ್ಲಾಡಿಸಿ ಬಿಡುತ್ತದೆ. ತ್ವರಿತ ನಿರ್ಧಾರದಿಂದ ಸಾಕಷ್ಟು ಸಮಯ ಉಳಿಸಬಹುದು.ಕಠಿಣ ನಿರ್ಧಾರಗಳನ್ನು ತ್ವರಿತವಾಗಿ ತೆಗೆದುಕೊಳ್ಳಲು ಸಮರ್ಪಕ ಗುರಿ ಹೊಂದಿರುವುದು ಮುಖ್ಯ.ಬಿಲಿಯನ್ ಡಾಲರ್ ಪ್ರಶ್ನೆನಿರ್ಧಾರಗಳೇ ಹಾಗೆ ಕೇವಲ ಕೆಲವು ಕ್ಷಣಗಳಲ್ಲಿ ಬದುಕನ್ನು ವಿಚಿತ್ರ ತಿರುವಿನಲ್ಲಿ ತಂದು ನಿಲ್ಲಿಸಿ ಬಿಡುತ್ತವೆ. ಪ್ರತಿ ಬಾರಿ ನಿರ್ಧರಿಸುವಾಗ ತುಂಬಾ ಅವಸರಿಸಿದರೂ ಕಷ್ಟ ವಿಳಂಬವಾದರೂ ಕಷ್ಟ. ಇದೊಂದು ತರಹ ಬಿಸಿ ತುಪ್ಪ ಬಾಯಲ್ಲಿ ಹಾಕಿಕೊಂಡ ಅನುಭವ ಉಗುಳಲೂ ಆಗದು. ನುಂಗಲೂ ಆಗದು. ಎನ್ನುವುದು ಹಲವರ ಅಂಬೋಣ.ಕೆಲವರ ಸಲಹೆ ಪ್ರಕಾರ ಮುಗ್ಗರಿಸಿದರಂತೂ ಅವರನ್ನು ಇನ್ನಿಲ್ಲದಂತೆ ಹಾಡಿ ಹರಸುತ್ತೇವೆ. ಸಲಹೆ ನೀಡುವವರು ಸಾರ್ವತ್ರಿಕವಾಗಿ ಯೋಚಿಸಿ ನಿರ್ಧಾರ ಪ್ರಕಟಿಸುತ್ತಾರೆ. ನಮ್ಮ ಬದುಕಿನ ಬಗ್ಗೆ ನಮಗಿಂತ ಚೆನ್ನಾಗಿ ಬೇರೆಯವರಿಗೆ ಹೆಚ್ಚು ತಿಳಿದಿರುವುದಿಲ್ಲ. ನಮಗೆ ಚೆನ್ನಾಗಿ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲವೆಂದ ಮೇಲೆ ಅನುಭವಿಗಳ ತಿಳಿದವರನ್ನು ಅವಲಂಬಿಸುವುದು ಸಾಮಾನ್ಯ. ಆದರೆ ಆ ನಿರ್ಧಾರ ಯಾವಾಗಲೂ ಒಳ್ಳೆಯ ಫಲಿತಗಳನ್ನು ಕೊಡುತ್ತದೆ ಎನ್ನುವುದು ಲಾಟರಿ ಫಲಿತಾಂಶ ಇದ್ದಂತೆ. ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಇತರರ ಮೇಲೆ ಅವಲಂಬಿಸುವುದು ಎಂದರೆ, ‘ಕುಸಿಯುತ್ತಿರುವ ಆಧಾರವನ್ನು ಗಟ್ಟಿಯಾಗಿ ಹಿಡಿದುಕೊಂಡಂತೆ.’ ಹೀಗಿದ್ದಾಗ ತ್ವರಿತ ನಿರ್ಧಾರ ತೆಗೆದುಕೊಳ್ಳುವುದು ಹೇಗೆ?ಎನ್ನುವುದು ಬಿಲಿಯನ್ ಡಾಲರ್ ಪ್ರಶ್ನೆಯಂತೆ ಕಾಡುತ್ತದೆ ಅಲ್ಲವೇ? ಹಾಗಾದರೆ ಮುಂದಕ್ಕೆ ಓದಿ.ನನ್ನ ನಿರ್ಧಾರ ನನ್ನದುಪ್ರತಿಯೊಂದರಲ್ಲೂ ಪರಿಶ್ರಮ ಪಡುವ ಮನೋಭಾವವಿದ್ದರೆ ನಾವು ಅಂದುಕೊಂಡಿದ್ದನ್ನು ಸಾಧಿಸಿ ಬಿಡುತ್ತೇವೆ ಎನ್ನುವುದು ಸುಳ್ಳು. ಧೈರ್ಯದ ತ್ವರಿತ ನಿರ್ಧಾರ ತೊಟ್ಟು ಚೈತನ್ಯದೊಂದಿಗೆ ಮುಂದುವರೆದರೆ ಮಾತ್ರ ಬದುಕಿನಲ್ಲಿ ಸುಧಾರಣೆ ತಂದುಕೊಳ್ಳಬಹುದು. ಚಾಣಕ್ಯ ನೀತಿಯಲ್ಲಿ ಹೇಳಿದಂತೆ “ಕೋಳಿಯಿಂದ ನಾಲ್ಕು ಪಾಠ ಕಲಿಯಬಹುದು. ಬೇಗ ಏಳುವುದು, ಆತ್ಮ ರಕ್ಷಣೆಗೆ ಹಾಗೂ ಯುದ್ಧಕ್ಕೆ ಸದಾ ಸನ್ನದ್ಧವಾಗಿರುವುದು.ತನ್ನ ಸುತ್ತಲಿನವರಿಗೆ ಉದಾರವಾಗಿ ಹಂಚುವುದು. ತನ್ನ ಅವಶ್ಯಕತೆಗಳಿಗೆ ತಾನೇ ಸಂಪಾದಿಸುವುದು.” ಕೋಳಿ ಹೇಗೆ ತನ್ನ ಅಗತ್ಯತೆಗೆ ತಾನೇ ಸ್ಪಂದಿಸುವುದೋ ಹಾಗೆ ನಾವೂ ನಮ್ಮ ನಿರ್ಧಾರಗಳಲ್ಲಿ ಮುಖ್ಯ ಪಾತ್ರವನ್ನು ವಹಿಸಬೇಕು.ಗ್ರೀಕ್ ನಾಣ್ಣುಡಿಯಂತೆ “ಬಲ್ಲಿದವನಿಗಿಂತ ತಿಳಿದವನು ಮೇಲು.” ಇತರರು ನಮ್ಮನ್ನು ಬಲ್ಲರು ಆದರೆ ಚೆನ್ನಾಗಿ ತಿಳಿಯಲಾರರು. ಆದ್ದರಿಂದ ನಮ್ಮ ಬಗ್ಗೆ ನಾವೇ ಅರಿತು ನಿರ್ಧರಿಸುವುದು ಮೇಲು.ಪ್ರಮಾಣ ನಿರ್ಧರಿಸಿಸುಮ್ಮನೆ ಯೋಚಿಸಿದರೆ ಪ್ರತಿ ದಿನದ ಬದುಕಿನಲ್ಲಿ ಜೀವಿಸುತ್ತಿರುವುದು ನಾವು ತೆಗೆದುಕೊಳ್ಳುವ ನಿರ್ಧಾರದ ಮೇಲೆ. ತೆಗೆದುಕೊಳ್ಳುವ ನಿರ್ಧಾರಗಳು ಬದುಕನ್ನು ಬದಲಿಸುವ ತಾಕತ್ತು ಹೊಂದಿವೆ. ಮಾಡುವ ಆಯ್ಕೆಯಲ್ಲಿ ತುಸು ತಡವಾದರೂ ಬಹಳಷ್ಟು ತೊಂದರೆ ಅನುಭವಿಸುವ ತೊಂದರೆ ತಪ್ಪಿದ್ದಲ್ಲ. ಪ್ರತಿ ಸಲ ಪ್ರತಿ ವಿಷಯದಲ್ಲೂ ವಿಳಂಬ ನಿರ್ಧಾರವನ್ನು ರೂಢಿಸಿಕೊಂಡರೆ ಮುಗಿದೇ ಹೋಯಿತು.ಬಂಗಾರದಂಥ ಅವಕಾಶಗಳು ಕೈ ತಪ್ಪಿ ಹೋಗುತ್ತವೆ. ಜೀವನ ಪರ್ಯಂತ ಅದನ್ನೇ ನೆನೆ ನೆನೆದು ಕೊರಗ ಬೇಕಾಗುತ್ತದೆ.ಅವರಿವರ ಮುಂದೆ ಅದನ್ನೇ ತೋಡಿಕೊಳ್ಳುತ್ತ ಕೂರಬೇಕಾಗುತ್ತದೆ. ಹಾಗಾದರೆ ತ್ವರಿತ ನಿರ್ಧಾರ ತೆಗೆದುಕೊಳ್ಳುವುದು ಒಂದು ಕೌಶಲ್ಯ ಅಲ್ಲವೇ? ಸರಿ, ಏನಾದರೂ ಆಗಲಿ ಅಂತ ಅವಸರದಲ್ಲಿ ಏನಾದರೂ ನಿರ್ಧಾರ ಕೈಗೊಂಡರೆ ಅದನ್ನೂ ಅನುಭವಿಸಲೇಬೇಕು. ನಿರ್ಧಾರಗಳನ್ನು ಸಣ್ಣ ಮಧ್ಯ ಮತ್ತು ದೊಡ್ಡ ಎನ್ನುವ ವರ್ಗಕ್ಕೆ ಸೇರಿಸಬೇಕು.ಇದು ನಿರ್ಧಾರದ ಪ್ರಾಮುಖ್ಯತೆಯನ್ನು ಬೇರ್ಪಡಿಸುವುದು. ಸೂಕ್ತ ಸಮಯ ಹಾಗೂ ಶ್ರಮವನ್ನು ಹಾಕಲು ಅನುವು ಮಾಡಿಕೊಡುವುದು.ಇರಲಿ ಸಮಯ ಮಿತಿಸ್ವಯಂ ಸಮಯ ಮಿತಿಯು ನಿರ್ಧಾರವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುವುದು.ಯಾವುದೇ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದರೆ ಟೈಮರ್ನ್ನು ಹೊಂದಿಸಿ ಮತ್ತು ನಿರ್ಧಾರದ ಪ್ರಕ್ರಿಯೆ ಪ್ರಾರಂಭಿಸಿ. 10,10,10 ವಿಧಾನ ಬಳಸಿ ಅಂದರೆ ತೆಗೆದುಕೊಂಡ ನಿರ್ಧಾರ 10 ನಿಮಿಷ, 10 ತಿಂಗಳು 10 ವರ್ಷಗಳ ನಂತರ ಖುಷಿ ನೀಡುವುದು ಎನ್ನುವುದನ್ನು ತಿಳಿದುಕೊಂಡರೆ ಸಾಕು. ತ್ವರಿತ ಉತ್ತಮ ನಿರ್ಧಾರ ಸಾಧ್ಯ. ನಿರ್ಣಯ ತೆಗೆದುಕೊಳ್ಳಬೇಕಾದ ಸಮಸ್ಯೆಯನ್ನು ಬರೆದು ಸಂಭವನೀಯ ನಿರ್ಣಯಗಳನ್ನು ಲಾಭದಾಯಕ ಅಂಶಗಳನ್ನು ವಿಶ್ಲೇಷಿಸುವುದು ಅತ್ಯಂತ ಉತ್ತಮ ವಿಧಾನ. ನಿರ್ಣಯದ ತುದಿಯನ್ನು ಸರಳವಾಗಿ ತಲುಪಲು ಸಹಾಯ ಮಾಡುತ್ತದೆ. ‘ಸಮಯ ಮಿತಿಯು ಯಾವಾಗ ಕೊನೆಗೊಳ್ಳುತ್ತದೆ ಎಂದು ತಿಳಿದಾಗ ನಾವು ನಿರ್ಧಾರದಲ್ಲಿ ಹೆಚ್ಚಿನ ಶ್ರಮವನ್ನು ಹೂಡುತ್ತೇವೆ.’ ಎಂದು ಒಂದು ಅಧ್ಯಯನ ತಂಡ ಹೇಳಿದೆ. ಅಷ್ಟೇ ಅಲ್ಲ ಕಡಿಮೆ ಆಯಾಸವನ್ನು ಅನುಭವಿಸುತ್ತೇವೆ. ಇದು ಗಡುವಿನ ಶಕ್ತಿ ಅಲ್ಲದೇ ಮತ್ತೇನೂ ಅಲ್ಲ. ದೊಡ್ಡ ಅಥವಾ ಮಹತ್ವದ ನಿರ್ಧಾರಗಳಿಗೆ ಹೆಚ್ಚಿನ ಗಡುವನ್ನು ಅನ್ವಯಿಸಿ.ಒಳ್ಳೆಯದು ಮತ್ತು ಕೆಟ್ಟದ್ದೆಂದು ಯೋಚಿಸಿಹೆಚ್ಚಿನ ವಿಶ್ಲೇಷಣೆಯು ಹೆಚ್ಚಿನ ಆಯ್ಕೆಗಳಿದ್ದಲ್ಲಿ ನಿರ್ಧರಿಸುವುದನ್ನು ಇನ್ನೂ ಹೆಚ್ಚು ನೆನಗುದಿಗೆ ಬೀಳುವಂತೆ ಮಾಡುತ್ತದೆ. ನಿರ್ಧಾರ ತೆಗೆದುಕೊಂಡಾದ ಮೇಲೆಯೂ ಫಲಿತಾಂಶದ ಕುರಿತಾಗಿ ಯೋಚಿಸುವುದು ಒಳ್ಳೆಯದಲ್ಲ. ಇಂಥ ಸಂದರ್ಭದಲ್ಲಿ ನಿರ್ಧಾರ ಮುಳಗಿಸಬಹುದು ಇಲ್ಲವೇ ತೇಲಿಸಬಹುದು. ವಿಶ್ಲೇಷಣೆ ಸಕಾರಾತ್ಮಕವಾಗಿರಲಿ. ಕೆಲವೊಮ್ಮೆ ಆಪ್ತರೊಂದಿಗೆ ಚರ್ಚಿಸಿ ನಿರ್ಧರಿಸುವುದು ಸೂಕ್ತವೆನಿಸುವುದು. ನಿರ್ಧರಿಸುವಾಗ ಆಯ್ಕೆಗಳನ್ನು ಒಳ್ಳೆಯದು ಕೆಟ್ಟದ್ದು ಎಂದು ವಿಭಜಿಸುವುದು ಸೂಕ್ತ. ಇದೊಂದು ತರಹ ಬೆಳೆಯಲ್ಲಿನ ಕಳೆ ತೆಗೆಯುವ ಪ್ರಕ್ರಿಯೆಯಂತೆ. ಒಳ್ಳೆಯ ಮತ್ತು ಕೆಟ್ಟ ಎಂಬ ಎರಡು ಕಾಲಮ್ ಮಾಡಿಕೊಂಡು ಆಯ್ಕೆಗಳನ್ನು ವಿಭಜಿಸಿ ಈ ಕೌಶಲ್ಯ ನಿರ್ಧರಿಸುವಿಕೆಯನ್ನು ಸರಳಗೊಳಿಸುತ್ತದೆ ಮತ್ತು ತ್ವರಿತಗೊಳಿಸುತ್ತದೆ. ನಿರ್ಣಯಿಸುವ ವಿಷಯದ ಕುರಿತು ಯೋಚಿಸುವುದು ಸೂಕ್ತ ಇದರಿಂದ ಸರಿಯಾಗಿ ಮೌಲ್ಯಮಾಪನ ಮಾಡಬಹದುದು. ಆದರೆ ಅತಿಯಾಗಿ ಯೋಚಿಸುವುದು ಸಮಸ್ಯೆಯಾಗುತ್ತದೆ.ಕಾಗದದಲ್ಲಿ ಬರೆಯಿರಿಎಲ್ಲ ಆಯ್ಕೆಗಳು ಹೆಚ್ಚು ಕಡಿಮೆ ಸರಿ ಸಮಾನ ಮೌಲ್ಯವನ್ನು ಹೊಂದಿವೆ ಎಂದು ತೋರುತ್ತಿದ್ದರೆ ಉತ್ತಮವೆನಿಸಿದವುಗಳನ್ನು ಪ್ರತ್ಯೇಕ ಕಾಗದದಲ್ಲಿ ಬರೆದು ನಂತರ ಯಾದೃಚ್ಛಿಕವಾಗಿ ಒಂದನ್ನು ಆರಿಸಿ ನಿರ್ಧರಿಸಬಹುದು. ನಿರ್ಧಾರಗಳು ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ ಆದ್ದರಿಂದ ಇದು ದೊಡ್ಡ ನಿರ್ಧಾರಗಳಿಗೆ ಸೂಕ್ತವಲ್ಲ. ಸಣ್ಣ ಪುಟ್ಟ ನಿರ್ಧಾರಗಳಿಗೆ ಇದು ಹೇಳಿ ಮಾಡಿಸಿದ ಕೌಶಲ್ಯದಂತೆ ಕಾರ್ಯ ನಿರ್ವಹಿಸುತ್ತದೆ.ಈ ಕ್ಷಣದಲ್ಲಿ ಜೀವಿಸಿನಿರ್ಧರಿಸುವಿಕೆ ಮಾನಸಿಕವಾಗಿ ನಮ್ಮನ್ನು ಗೊಂದಲಕ್ಕೆ ಬೀಳಿಸುತ್ತದೆ. ಪ್ರತಿ ಹೆಜ್ಜೆಯ ಫಲಿತಾಂಶವನ್ನು ನೋಡಲು ಇಚ್ಛಿಸುತ್ತೇವೆ ಹೀಗಾಗಿ ಕೈಯಲ್ಲಿರುವ ಸಮಯ ಸೋರಿ ಹೋಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ಆದ್ದರಿಂದ ಸರಳವಾಗಿ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ಅತಿಯಾಗಿ ಯೋಚಿಸಿ ಸಮಯ ವ್ಯರ್ಥ ಮಾಡದಂತೆ ನಿಮ್ಮಷ್ಟಕ್ಕೆ ನೀವು ವೀಕ್ಷಕರಾಗಿ ಕಾರ್ಯ ನಿರ್ವಹಿಸಿ.ಕೆಲಸದಲ್ಲಿ ಉತ್ಪಾದಕತೆಯನ್ನು ಬಾನೆತ್ತರಕ್ಕೆ ಏರಿಸಿ ನಿರ್ಧಾರದಲ್ಲಿ ತೀವ್ರಗೊಳ್ಳಲು ಹೆಚ್ಚು ಪರಿಣಾಮಕಾರಿಯಾಗಿ ಇರಬೇಕೆಂದರೆ ವರ್ತಮಾನದತ್ತ ಹೆಚ್ಚು ಗಮನ ನೀಡಬೇಕು. ನಿರ್ಧರಿಸುವಲ್ಲಿಯೇ ಹೆಚ್ಚು ಸಮಯ ತೆಗೆದುಕೊಂಡು ಕಾರ್ಯಾನುಷ್ಟಾನಕ್ಕೆ ಸಮಯ ಇಲ್ಲದಂತೆ ಮಾಡಿಕೊಳ್ಳುತ್ತೇವೆ. ದುಡುಕಿನ ನಿರ್ಧಾರ ಹಾಳುಗೆಡುವುದೇ ಹೆಚ್ಚು. ಈ ಕ್ಷಣದಲ್ಲಿ ಜೀವಿಸಿ ನಿರ್ಣಯಿಸಿ.ವೈಫಲ್ಯವನ್ನು ಸ್ವೀಕರಿಸಿತ್ವರಿತ ನಿರ್ಧಾರ ಸದಾ ಕಾಲ ಉತ್ತಮವಾಗಿಯೇ ಫಲ ನೀಡುತ್ತವೆ ಎಂದೇನಿಲ್ಲ. ಕೆಲವೊಮ್ಮೆ ಬಿರುಗಾಳಿಯಂತೆ ಸಮಸ್ಯೆಗಳನ್ನು ತಂದು ಚೆಲ್ಲಬಹುದು. ತಪ್ಪು ನಿರ್ಧಾರಗಳು ವೈಫಲ್ಯದ ಉಡುಗೊರೆಯನ್ನು ನೀಡಬಹುದು ಆದ್ದರಿಂದ ವೈಫಲ್ಯವನ್ನು ಸ್ವೀಕರಿಸುವ ಮನೋಭಾವವನ್ನು ಹೊಂದುವುದು ಒಳಿತು. ವೈಫಲ್ಯ ಜೀವನದ ಅವಿಭಾಜ್ಯ ಅಂಗ ಅದರಿಂದ ಬಹಳಷ್ಟನ್ನು ಕಲಿಯುತ್ತೇವೆ ಎನ್ನುವುದೂ ನಿಜ.ಸೋಲು ನಮ್ಮ ಹಿನ್ನೆಡೆಗೆ ಕಾರಣವಾಗದಂತೆ ನೋಡಿಕೊಳ್ಳಬೇಕು.ಕೊನೆ ಹನಿಜೀವನ ಆಯ್ಕೆಗಳ ಸರಮಾಲೆ. ಬೇಕಾದುದನ್ನು ಆರಿಸಿಕೊಳ್ಳುವುದೇ ನಿರ್ಧಾರ. ಎಲ್ಲ ಪರಿಸ್ಥಿತಿಗಳಲ್ಲಿ ನೂರಕ್ಕೆ ನೂರರಷ್ಟು ತ್ವರಿತ ಉತ್ತಮ ನಿರ್ಧಾರ ತೆಗೆದುಕೊಳ್ಳುವಷ್ಟು ಪರಿಪೂರ್ಣರು ಯಾರೂ ಇಲ್ಲ. ಇಲ್ಲಿ ಪರಿಪೂರ್ಣತೆ ಮುಖ್ಯವಲ್ಲ. ಶೀಘ್ರ ಮತ್ತು ಪರಿಣಾಮಕಾರಿ ನಿರ್ಧಾರ ತೆಗೆದುಕೊಳ್ಳುವುದು ಮಾತ್ರ ಮುಖ್ಯ. ತ್ವರಿತ ಉತ್ತಮ ನಿರ್ಧಾರ ನಮ್ಮನ್ನು ವೃತ್ತದೊಳಗೆ ಮತ್ತು ಹೊರಗೆ ಗೆಲುವಿನತ್ತ ಕರೆದೊಯ್ಯಲು ಸಹಕಾರಿ. ನಡೆಯುವ ದಾರಿಯಲ್ಲಿ ನಿರ್ಣಯದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗುವುದು ಅಷ್ಟೊಂದು ಸುಲಭದ ಕೆಲಸವೇನಲ್ಲ ಹಾಗಂತ ಅಸಾಧ್ಯವುದುದೂ ಅಲ್ಲ. ಬದುಕಿನ ಕೆಲ ಚಿಕ್ಕ ತ್ವರಿತ ಉತ್ತಮ ನಿರ್ಣಯಗಳು ಕೆಲವೊಮ್ಮೆ ದೊಡ್ಡ ಪರಿಣಾಮವನ್ನು ಬೀರುತ್ತವೆ. ಅಂತರಂಗವು ಹೇಳಿದಂತೆ ಭಾವನೆಗಳಿಗೆ ಒತ್ತು ಕೊಟ್ಟು ತೆಗೆದುಕೊಂಡ ನಿರ್ಣಯಗಳು ಖಂಡಿತ ಒಳ್ಳೆಯ ದಾರಿಯಲ್ಲಿ ನಮ್ಮನ್ನು ನಡೆಸುತ್ತವೆ ಮತ್ತು ದೊಡ್ಡ ನಗು ಚೆಲ್ಲುವಂತೆ ಮಾಡುತ್ತವೆ. ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು
ಅಂಕಣ ಬರಹ ಕಳೆದುಕೊಂಡದ್ದು ಸಮಯವಾದರೆ ಹುಡುಕಲೂ ಆಗದು (ಟೈಂ ಬ್ಯಾಂಕ್ ಅಕೌಂಟ್ ಮೆಂಟೇನನ್ಸ್- ಹೀಗೆ ಮಾಡಿ ನೋಡಿ ) ಟೈಂ ನೋಡೋಕೂ ಟೈಂ ಇಲ್ಲ. ಎಲ್ಲಾ ಟೈಮಿನೊಳಗೂ ಮೈ ತುಂಬ ಕೆಲಸ. ಎಲ್ಲಿ ಕುಂತರೂ ಕೆಲಸ ಕೈ ಮಾಡಿ ಕರಿತಾವ..ಮೈ ಕೆರೆದುಕೊಳ್ಳಲೂ ಪುರುಸೊತ್ತಿಲ್ಲದಂಗ ಕೆಲಸ ಮಾಡಿದರೂ ಕೆಲಸ ಮುಗಿತಿಲ್ಲ. ಆದರೂ ಮಾಡಿದ ಕೆಲಸ ಒಂದೂ ನೆಟ್ಟಗಾಗ್ತಿಲ್ಲ ಎನ್ನುವದು ಅನೇಕರ ಗೊಣಗಾಟ. ಇಂಥ ಟೈಮಿನೊಳಗ ಕನಸು ಬೇರೆ ಕಾಡ್ತಾವ. ಕನಸು ಕಾಣಬೇಕೋ ನೆಟ್ಟಗಾಗುವಂಗ ಕೆಲಸ ಮಾಡೂ ರೀತಿನ ಬದಲಿಸಬೇಕೋ ಏನೂ ತಿಳಿತಿಲ್ಲ. ಎಲ್ಲಾ ಗೊಂದಲಮಯ. ಈ ಗೊಂದಲಕ್ಕೆ ಮಂಗಳಾರತಿ ಹಾಡಬೇಕಂದರೆ ಇದನ್ನು ಗಮನವಿರಿಸಿ ಓದಿ ಇದರಲ್ಲಿಯ ನಿಯಮ ಪಾಲಿಸಿ.ಕೆಲಸಕ್ಕೆ ಉತ್ತಮ ಫಲ ತಾನೆ ಸಿಗುತ್ತೆ ನೋಡಿ.. ಕಾಲ ಮಿತ್ರನೂ ಹೌದು ಶತ್ರುವು ಹೌದು ಅರೆ ಅದ್ಹೇಗೆ ಮಿತ್ರ ಶತ್ರು ಆಗುವದು ಸಾಧ್ಯವಿದೆ ಅಂತಿರೇನು? ಕಾಲವನ್ನು ನಾವು ಸಕಾರಾತ್ಮಕವಾಗಿ ಉಪಯೋಗಿಸಿಕೊಂಡರೆ ಮಾತ್ರ ಮಿತ್ರ ಇಲ್ಲದೇ ಹೋದರೆ ಶತ್ರು. ಬದುಕನ್ನು ನಂದನವನದಂತೆ ಸುಂದರಗೊಳಿಸುವ ದಿವ್ಯಶಕ್ತಿ ಮತ್ತು ಬಿರುಗಾಳಿಯಂತೆ ಹಾಳುಗೆಡುವುವÀ ದೈತ್ಯಶಕ್ತಿಯೂ ಇದಕ್ಕಿದೆ. ಕಾಲವನ್ನು ತಡೆಯೋರು ಯಾರು ಇಲ್ಲ. ಕಾಲ ಸಮುದ್ರದ ಅಲೆಯಂತೆ ಯಾರಿಗೂ ಕಾಯಲ್ಲ. ಕಾಲದ ಕಾಲಿಗೆ ಸಿಕ್ಕು ಹಲುಬದಿರಿ. ಚಿರದುಃಖಿಗಳಾಗದಿರಿ. ಅದನ್ನು ನೀವು ನಿಮ್ಮ ಆಪ್ತಮಿತ್ರನನ್ನಾಗಿಸಿಕೊಳ್ಳಿ. ಕಾಲವನ್ನು ಉಪೇಕ್ಷಿಸಿದರೆ ಅದು ನಮ್ಮನ್ನೂ ಉಪೇಕ್ಷಿಸುತ್ತದೆ. ಎನ್ನುವದು ನೆನಪಿರಲಿ ಕಾಲವನ್ನು. ಗೌರವಿಸಿದರೆ ನಮ್ಮನ್ನು ಗೌರವಿಸುವ ಕಾಲ ಬರುತ್ತೆ. ವ್ಯರ್ಥವಾಗಿ ವ್ಯಯ ಮಾಡಿದರೆ ನಮ್ಮ ಕಾಲುಗಳನ್ನೇ ಇಲ್ಲದಂತೆ ಮಾಡುತ್ತೆ. ಸದುಪಯೋಗಪಡಿಸಿಕೊಂಡರೆ ಸುಖದ ಉಡುಗೊರೆಯಾಗುತ್ತೆ. ಹೀಗೆ ಉಡುಗೊರೆಯಾಗಿಸಿಕೊಳ್ಳಲು ಕಳೆದು ಹೋದ ಸಮಯ ಒಡೆದ ಮುತ್ತಿನಂತೆ ಮರಳಿ ಮತ್ತೆಂದೂ ಬಾರದು ಎಂಬುದು ಮನದಲ್ಲಿರಲಿ. ಕೈಯಲ್ಲಿ ಹಿಡಿದುಕೊಂಡರೆ ಕಾಲಡಿಯಲ್ಲಿ ಬೀಳುತ್ತೆ. ಕಾಲವನ್ನು ಕೊಳ್ಳುವ ಶ್ರೀಮಂತ ಜಗತಿನಲ್ಲಿ ಇನ್ನೂ ಹುಟ್ಟಿಲ್ಲ. ಹಣದಿಂದ ಜಗತ್ತಿನ ಎಲ್ಲ ವೈಭೋಗಗಳನ್ನು ನಮ್ಮದಾಗಿಸಿಕೊಂಡು ಮೆರೆಯಬಹುದು. ಆದರೂ ಕಾಲವನ್ನು ಕೊಳ್ಳುವ ಶಕ್ತಿಯನ್ನು ಕಾಲ ಜಗತ್ತಿನ ನಂಬರ್ ಒನ್ ಶ್ರೀಮಂತನಿಗೂ ಕೊಟ್ಟಿಲ್ಲ.ಇಂಥ ಶಕ್ತಿಯುತ ಕಾಲವನ್ನು ಅಂಗೈಯಲ್ಲಿ ತಡೆದು ಹಿಡಿದಿಟ್ಟುಕೊಂಡರೆ ನಮ್ಮ ಕಾಲಡಿಯಲ್ಲಿ ಬೀಳುತ್ತೆ. ಹಿಡಿದಿಟ್ಟುಕೊಳ್ಳುವ ಶಕ್ತಿ ಮನಸ್ಸಿಗೆ ಮಾತ್ರ ಇದೆ.ಹೀಗೆ ಮನಸ್ಸು ಮಾಡಿದರೆ ಕಾಲನಿಗೆ ಯಜಮಾನರಾಗಬಹುದು. ಯಜಮಾನರಾಗಲು ಶಿಸ್ತು ಸಂಯಮವೆಂಬ ಹಣ ಬೇಕೇ ಬೇಕು. ದಿನದ ಪ್ರತಿ ಕ್ಷಣ ಹೇಗೆ ಕಳೆಯಬೇಕೆಂಬ ವೇಳಾಪಟ್ಟಿ ಹಿಂದಿನ ದಿನದ ರಾತ್ರಿಯೇ ಸಿದ್ಧವಾಗಿರಬೇಕು ನೀವು ಹಾಕಿಕೊಂಡೆ ವೇಳಾ ಪಟ್ಟಿಯ ಅನುಷ್ಟಾನದಲ್ಲಿ ಕೆಲವು ಅಡೆತಡೆಗಳು ಬಂದೇ ಬರುತ್ತವೆ ಅವಗಳನ್ನು ಜಾಣ್ಮೆಯಿಂದ ಪರಿಹರಿಸಿ..ಕಾಲದ ಸದುಪಯೋಗಪಡಿಸಿಕೊಂಡವನೇ ಜಾಣ. ಅವನೇ ಗೆಲುವಿನ ಸರದಾರ. ಸಮಯ ಸರಿಯಾಗಿ ಉಪಯೋಗಿಸುತ್ತ ಹೋದ ಹಾಗೆ ಆತ್ಮವಿಶ್ವಾಸದ ಬಲ ಹೆಚ್ಚುತ್ತೆ. ಆತ್ಮವಿಶ್ವಾಸವಿರುವವನು ಸಾಧನೆಗೆ ಬೇಗ ಹತ್ತಿರವಾಗುತ್ತಾನೆ. ದಿನದ ಒಟ್ಟು ಕಾಲವನ್ನು ಅಂಗೈಯಲ್ಲಿಟ್ಟುಕೊಂಡು ಗುರಿ ಸಾಧನೆಗೆ ಮೀಸಲಿಟ್ಟು ಕಾರ್ಯ ಪ್ರವೃತ್ತರಾಗಬೇಕು. ಹೀಗೆ ಮಾಡುವದರಿಂದ ಬೆರಗು ಸೃಷ್ಟಿಸಬಹುದು. ಕಾಲವನ್ನು ನಿಮಗಿಷ್ಟ ಬಂದಂತೆ ಆಡಿಸೋ ಶಕ್ತಿ ನಿಮಗಿದೆ. ವಿದ್ಯಾರ್ಥಿ ದಿಸೆಯಲ್ಲಿಯೇ ವೇಳಾ ಪಟ್ಟಿಯ ಅನುಸರಣೆಯ ರೂಡಿ ಅಂಟಿಸಿಕೊಳ್ಳಿ. ಸೋಮಾರಿತನದ ರೋಗದಿಂದ ಮುಕ್ತವಾದರೆ ಮಾತ್ರ ಕಾಲ ನಿಮ್ಮ ಕೈಗೆ ಸಿಗೋದು. ಸೋಮಾರಿತನಕ್ಕೆ ಮತ್ತು ಕಾಲಕ್ಕೆ ಎಣ್ಣೆ ಸೀಗೆಕಾಯಿ ಸಂಬಂಧ. ಕಾಲ ಎಲ್ಲ ಸಂಪತ್ತನ್ನೂ ಮೀರಿದ್ದು. ಈ ಸಂಪತ್ತಿನ ಒಡೆಯರಾಗಬೇಕೆಂದರೆ ಶ್ರದ್ಧೆ ಮತ್ತು ಪರಿಶ್ರಮದ ಅವಶ್ಯಕತೆಯಂತೂ ಇದ್ದೇ ಇದೆ. ಗುರಿಯ ಗೆರೆ ಮುಟ್ಟೋಕೆ ಕಾಲನ ಸಾಥ್ ಬೇಕೆ ಬೇಕು. ತಿಥಿ ಮಿತಿ ನೋಡದೆ ಒಂದೇ ಸಮನೆ ಓಡಬೇಕು. ಯಾವುದೇ ರಸ್ತೆಯಲ್ಲಿ ಸುಮ್ಮನೆ ಗೊತ್ತು ಗುರಿಯಿಲ್ಲದೆ ನಡೆಯುವದನ್ನು ಬಿಟ್ಟು ಗುರಿ ಯಾವುದು? ಎಷ್ಟು ಸಮಯದವರೆಗೆ ಅದರ ಜೊತೆ ಕಾಲು ಹಾಕಬೇಕು ಎನ್ನುವದನ್ನು ಮೊದಲೇ ನಿರ್ಧರಿಸಬೇಕು. ಹಿತ ಚಕ್ರದೊಂದಿಗೆ ಕಾಲು ಹಾಕಿ ಬೇರೆ ಎಲ್ಲರಿಗೂ ಹೊಂದಿಕೆಯಾಗುವಂತೆ ತನ್ನನ್ನ್ನು ಕತ್ತರಿಸಿಕೊಳ್ಳುವವÀನು ತನ್ನ ಸ್ವಂತ ಆಕಾರವನ್ನೇ ಕಳೆದುಕೊಳ್ಳುತ್ತಾನೆ. ಎಂಬುದೊಂದು ನುಡಿಮುತ್ತು. ನಿನ್ನ ಸ್ಡಂತ ಆಸಕ್ತಿಗಳ ಬಗ್ಗೆ ಯೋಚಿಸಿದ್ರೆ ಪರರ ಹಿತಾಸಕ್ತಿಗಳನ್ನು ಚೆನ್ನಾಗಿ ಪೋಷಿಸಬಲ್ಲಿರಿ. ಇದೇ ಹಿತಚಕ್ರ . ಈ ಹಿತಚಕ್ರದೊಂದಿಗೆ ಕಾಲು ಹಾಕಿದರೆ ಕಾಲದ ಮೌಲ್ಯ ನಿಮಗೆ ಪೂರ್ಣ ದಕ್ಕುತ್ತದೆ. ಉತ್ತಮ ನಾಯಕರು ಹುಟ್ಟಿ ಬಂದವರಲ್ಲ. ಕಾಲನ ಸದುಪಯೋಗದಿಂದ ರೂಪಗೊಂಡವರು. ಎಂಬ ಮಾತು ಮನದಲ್ಲಿರಲಿ. ಬೇರೆಯವರು ನಿಮ್ಮ ಬಗ್ಗೆ ಅದೇನು ಅಂದುಕೊಳ್ಳುತ್ತಾರೊ ಎಂಬ ಯೊಚನೆಯಲ್ಲಿ ಬೀಳದಿರಿ. ನಿಮ್ಮಲ್ಲಿ ಇಲ್ಲದುದುರ ಬಗ್ಗೆ ಕೊರಗುವ ಬದಲು ನಿಮ್ಮಲ್ಲಿರುವ ಪ್ರತಿಭೆಯ, ಸದ್ಗುಣಗಳನ್ನು ಪೋಷಿಸಿ ಬೆಳೆಸಲು ಕಾಲ ಕಳೆಯಿರಿ. ಆಶಾರಹಿತ ಭಾವವೇ ಬೇಸರ. ಆಯಾಸವೆನಿಸಿದಾಗ ವಿರಾಮಕ್ಕೆ ಜಾಗ ಮಾಡಿಕೊಡಿ ಹೊರತು ಬೇಸರಕ್ಕಲ್ಲ. ಇಂದು ನಿಮ್ಮ ಕೈಯಲ್ಲಿದೆ. ಸಾಧನೆಗೆ ಬೇಕಾಗಿರುವ ಮೊದಲ ಭಾವ ಕನಸು. ಕಾಲ ಮತ್ತು ಕನಸಿನ ನಡುವೆ ಅವಿನಾಭಾವ ಸಂಬಂಧವುಂಟು. ಕಣ್ಣಲ್ಲಿ ಕನಸಿಲ್ಲದಿದ್ದರೆ ಹೋಗುವ ದಾರಿ ತಿಳಿಯುವದಿಲ್ಲ. ಸಾಧನೆಯಲ್ಲಿ ಕನಸು ಪ್ರಥಮ ಹೆಜ್ಜೆ. ಮೊದಲ ಹೆಜ್ಜೆ ಗಟ್ಟಿಯಾಗಿರಬೇಕು. ದಿಟ್ಟವಾಗಿರಬೇಕು. ಆತಂಕವನು ದೂರ ಸರಿಸಿ ಕಂಡ ಕನಸಿಗೆ ಶಕ್ತಿ ಸಾಮಥ್ರ್ಯ ಕೊಡಬೇಕಾದರೆ ನಿನ್ನೆ ನಾಳೆಗಳ ಚಿಂತೆಯಲ್ಲಿ ಇಂದನ್ನು ಹಾಳು ಮಾಡಿಕೊಳ್ಳದಿರಿ.ನಿನ್ನೆ ಇತಿಹಾಸ ನಾಳೆ ನಿಗೂಢ ಇಂದು ಉಡುಗೊರೆ ಅದನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುವ ಯೋಜನೆ ಹಾಕಿಕೊಳ್ಳಿ ಯೋಜನೆ ಅನ್ನುವದು ಮಾನಸಿಕ ದೂರ ದೃಷ್ಟಿ. ಪ್ರತಿ ಕೆಲಸಕ್ಕೂ ಲೆಕ್ಕಾಚಾರ ಹಾಕಿ ತರ್ಕಬದ್ಧವಾಗಿ ಯೋಚಿಸಿ ಸಮಯದ ಸದುಪಯೋಗದ ಕುರಿತು ಮೈಂಡ್ ಟ್ಯೂನಿಂಗ್(ಮೆದುಳು ಹದಗೊಳಿಸುವದು) ಮಾಡಿಕೊಂಡರಂತೂ ಭಯ ಉದ್ವೇಗ ಖಿನ್ನತೆಗಳು ಮಾಯವಾಗುತ್ತವೆ. ಕಾಲದ ಹಗ್ಗವನ್ನು ಗಟ್ಟಿಯಾಗಿ ಹಿಡಿದು, ಹಿಡಿದ ಕಾರ್ಯದಲ್ಲಿ ತಲ್ಲೀನವಾದರೆ ವಿಜಯದ ಮಾಲೆ ನಿಮ್ಮ ಕೊರಳನ್ನು ಹುಡುಕಿಕೊಂಡು ಬರುತ್ತೆ. ಕೆಲವೊಂದಕ್ಕೆ ಇಲ್ಲ ಅನ್ನಿ ಸಮಯವನ್ನು ರಬ್ಬರ ತರ ಹಿಗ್ಗಿಸೋಕೂ ಆಗಲ್ಲ ಕುಗ್ಗಿಸೋಕೂ ಆಗಲ್ಲ. ಒಂದು ದಿನಕ್ಕಿರೋದು 1440 ನಿಮಿಷ ಮಾತ್ರ. ಸಾಧಿಸಬೇಕಾದ ಗುರಿಗೆ ಈ ಸಮಯ ಸಾಕಾಗಲ್ಲ. ಅಂತಿಮವಾಗಿ ನಿಮ್ಮ ಸಮಯವನ್ನು ಹಾಳು ಮಾಡಲು ನಿಂತವರಿಗೆ ನಿರ್ದಾಕ್ಷಿಣ್ಯವಾಗಿ ಇಲ್ಲ ಎಂದು ಹೇಳಲು ಕಲಿಯಿರಿ. ದಾಕ್ಷಿಣ್ಯಕ್ಕೆ ಬಿದ್ದು ಅಮೂಲ್ಯ ಸಮಯ ಹಾಳು ಮಾಡಿಕೊಳ್ಳದಿರಿ. ನೀವು ಕೆಲಸ ಮಾಡುವ/ಓದುವ ಕೋಣೆಯಲ್ಲಿ ನನ್ನ ಸಮಯ ಅಮೂಲ್ಯ ಎಂದು ದೊಡ್ಡದಾಗಿ ಬರೆದು ಅಂಟಿಸಿ. ಸಮಯ ಪಾಲಿಸದವರ ಜೊತೆ ಅತಿಯಾದ ಸ್ನೇಹಬೇಡ. ಯಾರೋ ಯಾವುದೊ ಇಲ್ಲ ಸಲ್ಲದ ಕೆಲಸಕ್ಕೆ ಕರೆದರೆ ಇಲ್ಲ ಎನ್ನಲಾಗದೆ ಅವರ ಹಿಂದೆ ಕಾಲು ಎಳೆದುಕೊಂಡು ಹೊಗದಿರಿ. ನಿಮ್ಮ ಅತೀ ಜರೂರು ಕೆಲಸದ ಕಾರಣ ಹೇಳಿ ನಯವಾಗಿ ನಿರಾಕರಿಸಿ. ಹರಟೆ ತಡರಾತ್ರಿಯವರೆಗೂ ಹೊರಗೆ ತಿರುಗಾಡುವದು ಅಪರಿಚಿತ ವ್ಯಕ್ತಿಗಳೊಂದಿಗೆ ವಾಟ್ಸಪ್ ಫೇಸ್ ಬುಕ್ಗಳಲ್ಲಿ ಅನವಶ್ಯಕ ಚಾಟ್ ಮಾಡೋದು ಇವೆಲ್ಲವುಗಳಿಗೆ ಮುಲಾಜಿಲ್ಲದೆ ಇಲ್ಲ ಅನ್ನಿ. ಕಲೆ ಕರಗತಗೊಳಿಸಿಕೊಳ್ಳಿ ಸಮಯ ಆಭಾವದಿಂದ ಕೆಲಸದ ಒತ್ತಡ ಹೆಚ್ಚುತ್ತಿದೆ. ಅಂತ ಕಾರಣ ಹೇಳುವದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಬಹಳ ಕೆಲಸಗಳಲ್ಲಿ ತೊಡಗಿಸಿಕೊಂಡವರು ಎಲ್ಲ ಕೆಲಸಗಳನ್ನು ಮಾಡಿ ಮುಗಿಸುವಷ್ಟು ಸಮಯ ಹೊಂದಿರುತ್ತಾರೆ. ನೀವೊಂದು ಮಹಲು ಕಟ್ಟುವದಾದರೆ ಕೈತುಂಬ ಕೆಲಸವಿರುವ ವಾಸ್ತುಶಿಲ್ಪಿಯ ಬಳಿ ಹೋಗಿ. ಎನ್ನುವ ನುಡಿಮುತ್ತು ಸಮಯ ನಿರ್ವಹಣೆ ಒಂದು ಕಲೆ ಎನ್ನುವದನ್ನು ಸಾರಿ ಹೇಳುತ್ತೆ. ಸಮಯ ನಿರ್ವಹಣೆಯಲ್ಲಿ ಆದ್ಯತೆಗೆ ಪ್ರಥಮ ಆದ್ಯತೆಯಿದೆ. ಅದರಲ್ಲಿ ತುರ್ತು ಮತ್ತು ಮಹತ್ವದ್ದು. ಅಂತ ಎರಡು ಪ್ರಕಾರ ತುರ್ತು ಅನಿವಾರ್ಯವಾದ ಕೆಲಸಗಳಿದ್ದರೆ ಶ್ರದ್ಧೆ ಶಿಸ್ತು ಆಸಕ್ತಿಯಿಂದ ತೊಡಗಿಸಿಕೊಳ್ಳಿ. ತಕ್ಷಣದ್ದು ಮತ್ತು ಅನಿವಾರ್ಯವಾದದ್ದು ಅಂದರೆ ತಕ್ಷಣಕ್ಕೆ ನಿಮಗೆ ಖುಷಿ ಕೊಡಬಹುದು. ಆದರೆ ಅದರ ಅಗತ್ಯ ನಿಮಗಿಲ್ಲ. ಎನ್ನುವಂತದಕ್ಕೆ ಮಾರು ಹೋಗಲೇಬೇಡಿ. ಅನಿವಾರ್ಯ ಮತ್ತು ತಕ್ಷಣವಲ್ಲದ್ದು ಅಂದರೆ ಭವಿಷ್ಯತ್ತಿನಲ್ಲಿ ಲಾಭದಾಯಕವಾದುದು. ಈಗ ಮಾಡದೇ ಹೋದರೆ ಮುಂದೆ ತೊಂದರೆ ಆಗುವಂತಹುದು. ಸಮಯಾವಕಾಶ ಬಹಳವಿದೆಯೆಂದು ಮುಂದೂಡುತ್ತ ಬಂದರೆ ಸಂಕಷ್ಟಕ್ಕೆ ಸಿಲುಕಿ ಹಾಕಿಕೊಳ್ಳುವದು ನೂರಕ್ಕೆ ನೂರುಷ್ಟು ಖಚಿತ. ಮುಂಬರುವ ವಾರ್ಷಿಕ ಪರೀಕ್ಷೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ .ಇನ್ನೂ ಸಾಕಷ್ಟು ಸಮಯವಿದಿಯೆಂದು ಉಪೇಕ್ಷಿಸಿ ತಯಾರಿ.ಮಾಡದೇ ಹೋದರೆ ಸಮಸ್ಯೇಗೆ ಆಹ್ವಾನ ನೀಡಿದಂತೆ ಸರಿ. ಊಟ ಆಟ ಟಿವಿ ಮನರಂಜನೆ ಕುಟುಂಬ ಗೆಳತನಕ್ಕೆ ಅಗತ್ಯವಿರುವಷ್ಟು ಸಮಯ ಎತ್ತಿಡಿ. ಟೈಂ ಬ್ಯಾಂಕ್ ಬ್ಯಾಲೆನ್ಸ್ ಒಂದು ದಿನ ಬ್ಯಾಂಕಿನ ಖಾತೆಯಲ್ಲಿ ಪ್ರತಿದಿನವೂ ಪ್ರತಿಯೊಬ್ಬರಿಗೂ ಬೆಳ್ಳಂಬೆಳಿಗ್ಗೆ 86400 ಸೆಕೆಂಡುಗಳು ಜಮೆಯಾಗಿರುತ್ತವೆ. ಈ ಸೆಕೆಂಡುಗಳನ್ನು ಅಂದೇ ಖರ್ಚು ಮಾಡಬೇಕು. ಇಲ್ಲಿ ಓವರ್ ಡ್ರಾಫ್ಟ್ ಸೌಲಭ್ಯವಿಲ್ಲ. ಅಂದಿನದು ಅಂದು ಖರ್ಚು ಮಾಡಬೇಕು ಇಲ್ಲದಿದ್ದರೆ ಖಾತೆಯಲ್ಲಿ ಬ್ಯಾಲೆನ್ಸ್ ನಿಲ್ ಆಗಿ ಹೋಗುತ್ತೆ. ದೇವರು ನೀಡಿದ ಟೈಂ ಬ್ಯಾಂಕಿನ ಸೆಕೆಂಡುಗಳನ್ನು ತಪ್ಪದೇ ಸದ್ವಿನಿಯೊಗಪಡಿಸಿಕೊಳ್ಳಬೇಕು. ಟೈಂ ವೇಗವಾಗಿ ಜಾರುತ್ತಿದೆಯಾದರೆ ನೀವು ತುಂಬಾ ಬಿಜಿ ಎಂದರ್ಥ. ಬಿಜಿಯಾಗಿರುವ ಸಾಧಕರಿಗೆ ಸಮಯ ನಿರ್ವಹಣೆ ತುಂಬಾ ಆಕರ್ಷಣೀಯವಾಗಿ ಸೆಳೆಯುತ್ತೆ ಹೀಗಾಗಿ ಅವರು ನಮ್ಮ ಟೈಂ ಬ್ಯಾಂಕಿನಲ್ಲಿ ಪ್ರತಿದಿನದ ಒಂದೊಂದು ಸೆಕಂಡನ್ನು ಕಳೆದುಕೊಳ್ಳಲು ಇಚ್ಛಿಸುವದಿಲ್ಲ. ಕಳೆದುಕೊಂಡಿದ್ದು ವಸ್ತು ಆದರೆ ಹುಡುಕಬಹುದು. ಸಿಗದಿದ್ದರೆ ಮತ್ತೊಂದು ಪಡೆದುಕೊಳ್ಳಲೂಬಹುದು. ಕಳೆದುಕೊಂಡದ್ದು ಸಮಯವಾದರೆ ಹುಡುಕಲೂ ಆಗದು ಪಡೆದುಕೊಳ್ಳಲೂ ಆಗದು. ಎನ್ನುವದನ್ನು ಮನಸ್ಸಿನಲ್ಲಿ ಬೇರೂರಿಸಿಕೊಂಡು ನಿಖರವಾದ ಗುರಿಯೊಂದಿಗೆ ಸಂವಹನ ಕಲೆ ಜಾಣ್ಮೆ ವ್ಯಹವಾರ ಕೌಶಲ ಬೆರೆಸಿ ಕಾಲದ ಜೊತೆ ಕಾಲು ಹಾಕಿದರೆ ಕಣ್ಣು ಕಂಡ ಕನಸುಗಳೆಲ್ಲ ನನಸಾಗಿ ಗೆಲುವು ನಿನ್ನ ಕಾಲಡಿಯಲ್ಲಿ ನಿಂತಿರುತ್ತದೆ ಹಾಗದರೆ ತಡವೇಕೆ? .ಬನ್ನಿ ಟೈಂ ಬ್ಯಾಂಕ್ ಬ್ಯಾಲನ್ಸ್ನ್ನು ಬೇಗ ಬೇಗ ಇಂದಿನಿಂದ ಇಂದೇ ಗುರಿ ಸಾಧನೆಗಾಗಿ ಖಾಲಿ ಮಾಡಿ ಯಶ ಗಳಿಸಿ. =============================================== ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು
ಅಂಕಣಬರಹ ಬದುಕಿನ ಏರಿಳಿತಗಳನು ಒಪ್ಪಿಕೊಳ್ಳುವುದು ಹೇಗೆ? ಬದುಕಿನ ರೀತಿಯೇ ಅಂಥದ್ದು. ಪ್ರತಿ ಕ್ಷಣವೂ ಹೊಸತನದಿಂದಲೇ ಕೂಡಿಕೊಂಡಿರುತ್ತದೆ.ಅದೆಷ್ಟೇ ಬೇಸರಗೊಂಡಿದ್ದರೂ ಮತ್ತೆ ಕುತೂಹಲದಿಂದ ಸೆಳೆದು ನಿಲ್ಲಿಸಬಲ್ಲ ಮಾಯಾಶಕ್ತಿ ಅದಕ್ಕಿದೆ. ರಾಶಿ ರಾಶಿ ಹೊಸ ಅನುಭವಗಳು ಮುಂದೆ ಕಾದಿವೆ ಎಂದು ಗೊತ್ತಿದ್ದರೂ ಕೆಲವೊಂದು ಸಲ ಕಷ್ಟದ ಸಾಲುಗಳು ಇನ್ನಿಲ್ಲದಂತೆ ಆವರಿಸಿ ಹಿಂಡಿ ಹಿಪ್ಪಿ ಮಾಡಿಬಿಡುತ್ತವೆ. ಪ್ರತಿ ಕಷ್ಟವೂ ವಿಶಿಷ್ಟತೆಯಿಂದ ಕಾಡುತ್ತದೆ. ಅನುಭವದ ಪಾಠವನ್ನು ಕಲಿಸಿಯೇ ಮುನ್ನಡೆಯುತ್ತದೆ. ಒಮ್ಮೊಮ್ಮೆ ದಡದಡನೆ ಓಡುವವರನ್ನು ಗಕ್ಕನೇ ನಿಲ್ಲಿಸಿ ಬಿಡುತ್ತದೆ. ಅಟ್ಟದ ಮೇಲೇರಿ ಕುಳಿತವರನ್ನು ಕೆಳಕ್ಕೆ ತಳ್ಳಿ ಬಿಡುತ್ತದೆ. ಇನ್ನು ಕೆಲವು ಸಲ ಕೌತುಕತೆಯಿಂದ ಅದರ ಮುಂದೆ ನಿಂತು ಬಿಟ್ಟ ಕಣ್ಣು ಬಿಟ್ಟಂತೆ ಪರವಶತೆಯಿಂದ ನೋಡುವಂತೆ ಮಾಡುತ್ತದೆ. ಲಗು ಬಗೆಯಿಂದ ಮೆಟ್ಟಿಲೇರಿ ಹೋಗುವವರನ್ನು ಮುಂದಕ್ಕೆ ಅಡಿ ಇಡದಂತೆ ಮಾಡುತ್ತದೆ. ಒಟ್ಟಾರೆ ಸರಳ ಮಾತಿನಲ್ಲಿ ಹೇಳುವುದಾದರೆ ಜೀವನ ಆಡಿಸಿ ನೋಡು ಬೀಳಿಸಿ ನೋಡು ಆಟ ಇದ್ದಂತೆ ಅನಿಸುವದಂತೂ ಖಚಿತ. ಜೀವನ ಎರಡು ಮುಖವುಳ್ಳ ನಾಣ್ಯವಿದ್ದಂತೆ. ಒಮ್ಮೆಲೇ ಎರಡು ಮುಖಗಳೂ ಬೀಳುವ ಸಾಧ್ಯತೆ ಇಲ್ಲ. ಆದರೆ ಎರಡೂ ಮುಖಗಳು ಬೀಳುವ ಸಾಧ್ಯತೆ ಸಮವಾಗಿರುತ್ತದೆ. ಇಲ್ಲವೇ ಕಡಿಮೆ ವ್ಯತ್ಯಾಸವಿರುತ್ತದೆ. ಒಮ್ಮೆ ಏರು ಮತ್ತೊಮ್ಮೆ ಇಳುವು.ಒಮ್ಮೆ ಗೆಲುವು ಒಮ್ಮೆ ಸೋಲು. ಒಮ್ಮೆ ಕಷ್ಟ ಮತ್ತೊಮ್ಮೆ ಸುಖ. ಮನಸ್ಸು ವಿಚಿತ್ರವಾದ ತಳಮಳಗಳಿಗೆ ಒಳಗಾದಾಗ ಬದುಕು ಭಾರವೆನಿಸುತ್ತದೆ. ಹೀಗೆ ಆದರೆ ಮುಂದೆ ಹೇಗೆ ಎನ್ನುವ ಚಿಂತೆಯ ಪ್ರಶ್ನಾರ್ಥಕ ಚಿನ್ಹೆ ನಮ್ಮ ಮುಖಕ್ಕೆ ಮುಖ ಮಾಡಿಕೊಂಡು ನಿಲ್ಲುತ್ತದೆ ಅದಕ್ಕೆ ಉತ್ತರ ನೀಡುವುದು ಹೇಗೆ? ಚೆಂದದ ಗಳಿಗೆಗಳು ಜೊತೆಗಿರುವಾಗ ಹೀಗೇ ನೂರ್ಕಾಲ ಬದುಕಬೇಕು ಅನ್ನಿಸುವುದೂ ಖಚಿತ. ಸ್ವಾರಸ್ಯಕರ ಕಥೆ ಬದುಕಿನ ಏರಿಳಿತಗಳನ್ನು ಒಪ್ಪಿಕೊಳ್ಳುವ ಕುರಿತಂತೆ ಓದಿದ ಕತೆಯೊಂದು ತುಂಬಾ ಸ್ವಾರಸ್ಯಕರವಾಗಿದೆ. ನೀವೂ ಓದಿ: ಒಮ್ಮೆ ಒಬ್ಬ ರಾಜನು ಕಮ್ಮಾರನಿಗೆ ಹೀಗೆಂದು ಆದೇಶಿಸಿದನು. “ನಾನು ಮೇಲೇರುವಾಗ ನನ್ನ ಸಂತೋಷವನ್ನು ಕೂಡಿಡುವಂತೆ ಮತ್ತು ನಾನು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಾಗ ಉತ್ಸಾಹ ಚಿಮ್ಮುವಂತೆ ಒಂದು ಸೂಕ್ತಿಯಳ್ಳ ಒಂದು ಮೊಹರನ್ನು ತಯಾರಿಸಿ ಕೊಡು.”ಎಂದ. ಕಮ್ಮಾರಿನಿಗೆ ಮೊಹರು ತಯಾರಿಸುವುದೇನು ಕಷ್ಟದ ಕೆಲಸವಲ್ಲ ಆದರೆ ಕಷ್ಟ ಮತ್ತು ಸುಖದ ಕ್ಷಣಗಳಲ್ಲಿ ಎಚ್ಚರಿಕೆಯ ಸಂದೇಶವನ್ನು ನೀಡುವ ಸೂಕ್ತಿಯನ್ನು ತಯಾರಿಸುವುದು ಕಷ್ಟವೆನಿಸಿತು. ಆದ್ದರಿಂದ ಆತ ಒಬ್ಬ ಋಷಿಯ ಬಳಿ ಹೋದ. ಋಷಿಯ ಬಳಿ ನಡೆದ ಪ್ರಸಂಗವನ್ನೆಲ್ಲ ವಿವರಿಸಿದ. ರಾಜ ಸುಖದ ಕ್ಷಣಗಳಲ್ಲಿರುವಾಗ ಸಂತಸವನ್ನು ಸಮೀಕರಿಸುವಂತೆ, ದುಃಖದ ಮಡುವಿನಲ್ಲಿರುವಾಗ ಉತ್ಸಾಹದಿಂದ ಪುಟಿದೇಳುವಂತೆ ಮಾಡುವ ಯಾವ ಸಂದೇಶವನ್ನು ಮೊಹರಿನ ಮೇಲೆ ಬರೆಯಬೇಕು? ಎಂದು ಭಿನ್ನವಿಸಿಕೊಂಡ.ಋಷಿಯು ಹೀಗೆ ಹೇಳಿದನು. ಮೊಹರಿನ ಮೇಲೆ ಹೀಗೆಂದು ಬರೆ “ಇದನ್ನೂ ದಾಟಬೇಕು” ಗೆದ್ದಾಗ ಈ ಮೊಹರನ್ನು ನೋಡಿ ವಿನೀತನಾಗುತ್ತಾನೆ. ಮತ್ತು ನಿರುತ್ಸಾಹದಲ್ಲಿ ಎದೆಗುಂದಿದಾಗ ಭರವಸೆಯ ಬೆಳಕಿನ ಕಿರಣವನ್ನು ಮೂಡಿಸುತ್ತದೆ.ಹಾವು ಏಣಿಯ ಆಟದಂತಿರುವ ಬದುಕನ್ನು ಹೇಗೆ ಒಪ್ಪಿ ಅಪ್ಪಿಕೊಳ್ಳುವುದು. ಉತ್ಸಾಹದ ಚಿಲುಮೆ ಚಿಮ್ಮಿಸುವುದು ಹೇಗೆ ನೋಡೋಣ ಬನ್ನಿ. ಮನಸ್ಥಿತಿ ಅನೇಕ ಸಲ ನಮ್ಮ ಪರದಾಟಗಳಿಗೆ ಏರಿಳಿತಗಳಿಗೆ ನಮ್ಮ ಮನಸ್ಥಿತಿ ಮುಖ್ಯ ಕಾರಣವಾಗಿ ಪರಿಣಮಿಸುತ್ತದೆ. ನಾವು ಸುಖವಾಗಿ ಇರಬೇಕೆಂದರೆ ನಮ್ಮೆದುರಿಗಿನವರನ್ನು ಸುಖವಾಗಿ ಇಡುವುದು ಮುಖ್ಯ “ನಾವು ಇತರರಿಂದ ಏನನ್ನು ಬಯಸುತ್ತೇವೆಯೋ ಅದನ್ನು ಅವರಿಗೆ ಮೊದಲು ನೀಡಬೇಕು.” ಆದರೆ ನಾವು ಇvರÀರಿಂದ ಸಹಕಾರ ಪ್ರೀತಿ ಬಯಸುತ್ತೇವೆ ಆದರೆ ನೀಡುವುದಿಲ್ಲ. ಬಹುತೇಕರು ಸ್ವಾರ್ಥ ಕೇಂದ್ರಿತರಾಗಿರುತ್ತಾರೆ ಯಾವಾಗಲೂ ತಮ್ಮ ಮೂಗಿನ ನೇರಕ್ಕೆ ಯೋಚಿಸುತ್ತಾರೆ. ಮುಂದಿನ ಹರುಷದ ಮನಗಳು ನಮಗೆ ಪ್ರಸನ್ನತೆಯನ್ನು ಮೂಡಿಸುತ್ತವೆ ಎನ್ನುವ ಪರಿಕಲ್ಪನೆಯನ್ನು ತಲೆಯಲ್ಲಿ ಇರಿಸಿಕೊಳ್ಳುವುದಿಲ್ಲ. ಅಂಥ ಮನಸ್ಥಿತಿಯಿಂದ ಬಿಡುಗಡೆ ಹೊಂದುವಂತೆ ಯಾರೂದರೂ ಉಪದೇಶಿಸಿದರೆ ಅವರ ಮುಂದೆ ಕೌಲೆತ್ತಿನಂತೆ ಗೋಣು ಹಾಕಿ ಮತ್ತೆ ಅದೇ ತಾಳ ಅದೇ ರಾಗ ಎನ್ನುವಂತೆ ಇರುತ್ತಾರೆ. ಎಂಥ ಕೆಟ್ಟವನಲ್ಲೂ ಒಂದು ಒಳ್ಳೆಯ ಗುಣ ಇದ್ದೇ ಇರುತ್ತದೆ ಎಂದು ನಂಬಬೇಕು. ಇದು ವಾಸ್ತವ ಕೂಡ. ಪ್ರತಿಯೊಂದಕ್ಕೂ ಇತರರನ್ನು ಅವಲಂಬಿಸುವ ಮನೋಭಾವವೂ ನೋವನ್ನು ತರುವುದು. ಮನಸ್ಥಿತಿ ಎನ್ನುವುದು ಫಲವತ್ತಾದ ಮಣ್ಣು ಇದ್ದಂತೆ ಅದರಲ್ಲಿ ಏನು ಬಿತ್ತುತ್ತೇವೆಯೋ ಅದನ್ನೇ ಬೆಳೆಯುತ್ತೇವೆ. ಕೋಪ ಅಸಹನೆ ಸೇಡು ತಿರಸ್ಕಾರ ಭಯದ ಬೀಜಗಳನ್ನು ಬಿತ್ತಿದರೆ ಅದೇ ಬೆಳೆಯುವುದು. ಪರಿಸ್ಥಿತಿಯನ್ನು ನಿಭಾಯಿಸುವ ಗುಣಗಳಾದ ತಾಳ್ಮೆ ಪ್ರೀತಿ ಒಲವು ಉದಾರತೆಯನ್ನು ಬಿತ್ತಿದರೆ ಬದುಕಿನಲ್ಲಿ ಕಹಿ ಪಾಲು ಕಡಿಮೆಯಾಗಿ ಸಿಹಿ ಪಾಲು ಹೆಚ್ಚುವುದು. ವಿವೇಕ ವಿವೇಚನೆ “ವಿಶ್ವ ವಿದ್ಯಾಲಯಗಳ ಆದ್ಯ ಕರ್ತವ್ಯವೆಂದರೆ ವಿವೇಕ ವಿವೇಚನೆಯನ್ನು ಕಲಿಸುವುದು. ವ್ಯಾಪಾರವನ್ನಲ್ಲ. ಯೋಗ್ಯತೆ ಸಂಪನ್ನಶೀಲತೆಯನ್ನೇ ಹೊರತು ವಿಧಿ ವಿಧಾನವನ್ನಲ್ಲ.” ಎಂದಿದ್ದಾನೆ ವಿನ್ಸ್ಟನ್ ಚರ್ಚಿಲ್ ಯಾರು ಪ್ರತಿದಿನ ಎದುರಾಗುವ ಸನ್ನಿವೇಶಗಳನ್ನು ನಿಭಾಯಿಸುತ್ತಾರೋ ಪರಿಸ್ಥಿತಿಗಳನ್ನು ಅರ್ಥೈಸಿಕೊಂಡು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೋ ಸಾಧ್ಯವಿದ್ದಷ್ಟು ತಾಳ್ಮೆಯಿಂದ ವರ್ತಿಸುತ್ತಾರೋ ಅವರನ್ನು ವಿವೇಕಿಗಳು ಎನ್ನುತ್ತಾರೆ.ಸಂಕ್ಷಿಪ್ತವಾಗಿ ಹೇಳುವುದಾದರೆ, ಬದುಕಿನ ಎಂಥ ಜಟಿಲ ಸವಾಲುಗಳಲ್ಲೇ ಆಗಲಿ ವಿವೇಕದಿಂದ ಆಯ್ಕೆ ಮಾಡುವವರು. ಯಾರು ಮೂರ್ಖತನ ಕೆಟ್ಟದ್ದು ಎಂದು ಚೆನ್ನಾಗಿ ಅರಿಯಬಲ್ಲರೋ ಅವರು ವಿವೇಕಿಗಳು. ಅತ್ಯಂತ ನಿರುತ್ಸಾಹಗೊಂಡಾಗಲೂ ಸಹನೆ ಕಳೆದುಕೊಳ್ಳದೇ ವರ್ತಿಸಬೇಕು. ಸಮಸ್ಯೆಗಳನ್ನು ಹೊಸ ದೃಷ್ಟಿಯಿಂದ ಆಲೋಚಿಸಿ ಒಳ್ಳೆಯ ಪರಿಹಾರ ಸೂಸುವುದಷ್ಟೇ ಜಾಣತನವಲ್ಲ. ಓದಿನಲ್ಲಿ ಹಿಂದೆ ಬಿದ್ದರೂ ಲೋಕಾನುಭವದಿಂದ ಚಾಕು ಚಕ್ಯತೆಯಿಂದ ಬದುಕು ನಿರ್ವಹಿಸುವುದೂ ಜಾಣತನವೇ. ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಅಂತ ಎಲ್ಲೆಲ್ಲೋ ಬಿದ್ದು ಸಾಯುವುದಲ್ಲ. ಜೀವನದಲ್ಲಿ ನೊಂದು ಸಾಯಲು ನಿರ್ಧರಿಸುವವನು ವಿವೇಕೆ ಅಲ್ಲವೇ ಅಲ್ಲ. ಆಸಕ್ತಿ ಹುಮ್ಮಸ್ಸು ಇರಿಸಿಕೊಂಡರೇ ಜಗತ್ತೇ ನಮ್ಮದು. ಇವೆರಡನ್ನು ಸದಾ ಹೋದಲೆಲ್ಲ ಹೊತ್ತೊಯ್ಯದರೆ ಏರಿಳಿತಗಳನ್ನು ಉತ್ತಮವಾಗಿ ನಿರ್ವಹಿಸಬಲ್ಲೆವು. ಸಂತಸದಿಂದ ಇರಬಲ್ಲೆವು. ಶ್ರದ್ಧೆ ಜೀವನದಲ್ಲಿ ಏನೇನು ಒಳ್ಳೆಯದು ಆಗಿದೆಯೋ ಅದರ ಹಿಂದೆ ಶ್ರದ್ಧೆಯ ಸಿಂಹಪಾಲಿದೆ. ಇಳಿಕೆಗಳನ್ನು ಏರುಗಳನ್ನಾಗಿ ಬದಲಿಸುವ ಮರದ ತಾಯಿಬೇರು ಶ್ರದ್ಧೆ ಆಗಿದೆ. “ಶ್ರದ್ಧೆ ಎಲ್ಲಿದೆಯೋ ಅಲ್ಲಿ ಧೈರ್ಯವಿದೆ.”ಶ್ರದ್ಧೆ ಇಲ್ಲದ ಬಲವಂತನೂ ಸೋಲುತ್ತಾನೆ. ಶ್ರದ್ಧೆ ಇರುವ ಕಡಿಮೆ ಬಲ ಇರುವವನು ಗೆಲ್ಲುತ್ತಾನೆ. ಬದುಕಿನ ಬಾಗಿಲಿನಾಚೆ ಏನಿದೆ ಯಾರಿಗೂ ಗೊತ್ತಿಲ್ಲ ಆದರೆ ಕೆಟ್ಟದ್ದನ್ನು ಬದಲಿಸುವ ತಾಕತ್ತು ಶ್ರದ್ಧೆಗಿದೆ. ಬೆವರ್ಲ ಸೀಲ್ಸ್ ಹೇಳಿದ ಮಾತು ಇಲ್ಲಿ ಸೂಕ್ತವೆನಿಸುತ್ತದೆ. “ನೀವು ವಿಫಲರಾದಲ್ಲಿ ನಿರಾಶರಾಗಬಹುದು.ಆದರೆ ಪ್ರಯತ್ನವನ್ನೇ ಮಾಡದಿದ್ದರೆ ವಿನಾಶ ನಿಶ್ಚಿತ.”ಶ್ರದ್ಧೆ ಇಲ್ಲದವನು ಏನಾದರೂ ಆಗಲಿ ಎಂದುಕೊಳ್ಳುತ್ತಾನೆ ಶ್ರದ್ಧೆ ಇರುವವನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುತ್ತಾನೆ. ಅಂದರೆ ಶ್ರದ್ಧೆ ಜೀವರಸಾಯನವಿದ್ದಂತೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಗಟ್ಟಿಯಾಗಿ ನಿಲ್ಲುವಂತೆ ಮಾಡುತ್ತದೆ. ಬದುಕಬೇಕೆನ್ನುವ ಬೆಳೆಯಬೇಕೆನ್ನುವ ಆಸೆ ಚಮತ್ಕಾರಗಳನ್ನು ಸೃಷ್ಟಿಸಬಲ್ಲದು. ಅದೃಷ್ಟವಚಿತರೆಂದು ಗುರುತಿಸಲ್ಪಡುವವರೆಲ್ಲರೂ ಜೀವನದ ಸುಳಿಗಳಲ್ಲಿ ವೈಫಲ್ಯಗಳಲ್ಲಿ ಗಂಡಾಂತರಗಳಲ್ಲಿ ಶ್ರದ್ಧೆಯಿಂದ ಮುಂದೆ ಸಾಗಿದ್ದಕ್ಕೆ ಶ್ರದ್ಧೆ ಅವರ ಕೈ ಹಿಡಿದು ಮುನ್ನಡೆಸಿತು. ಕೋಲಂಬಸ್ ಗೆ ಹೊಸ ಜಗತ್ತನ್ನು ಕಂಡು ಹಿಡಿಯುವ ದಾರಿ ಗೊತ್ತಿರಲಿಲ್ಲ. ಆದರೆ ಅವನಲ್ಲಿದ್ದ ಬಲವಾದ ಶ್ರದ್ದೆಯೇ ಅದನ್ನು ಹುಡುಕಿಕೊಟ್ಟಿತು. ಸ್ಥಿರವಿಲ್ಲದ ಹೊಯ್ದಾಟದ ಸ್ಥಿತಿಯಲ್ಲಿ ಮುನ್ನಡೆಸುವುದು ಶ್ರದ್ಧೆ ಆದ್ದರಿಂದ ಶ್ರದ್ಧಾವಂತರಾಗುವುದು ಮುಖ್ಯ. ಸಂಕೋಚ – ಬೇಸರ ಸಂಕೋಚ ಬಹುತೇಕ ಸನ್ನಿವೇಶಗಳಲ್ಲಿ ಅಡೆತಡೆಯಾಗಿ ಪರಿಣಮಿಸುತ್ತದೆ. ಬೇರೆಯವರನ್ನು ತೃಪ್ತಿ ಪಡಿಸಲು ನಮಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡಬಾರದು ನಮ್ಮ ಬಗ್ಗೆ ನಮಗಿರುವ ಕೆಟ್ಟ ಅಭಿಪ್ರಾಯಗಳಲ್ಲಿ ಬೇರೆಯವರು ಆಪಾದಿಸಿದ್ದೇ ಹೆಚ್ಚು.ಅವುಗಳನ್ನು ನಿಜವಾಗಿಸಬಾರದು. ಬೇರೆಯವರಿಗೆ ಸಲಹೆ ನೀಡಿದಾಗ ಅವರು ಪಾಲಿಸದಿದ್ದರೆ ಬೇಸರ ಪಟ್ಟುಕೊಳ್ಳಬಾರದು.ನಾವು ಹೇಳಿದ್ದನ್ನೆಲ್ಲ ಜನ ಸ್ವೀಕರಿಸಬೇಕೆಂದು ಯೋಚಿಸುವುದು ತಪ್ಪು. ನಾವು ಹೇಳಿದ್ದರಲ್ಲಿ ವಿಷಯ ಇಲ್ಲದಿರಬಹುದು, ಇಷ್ಟವಾಗದೇ ಇರಬಹುದು. ಇಲ್ಲವೇ ಅವರಿಗೆ ಅರ್ಥವಾಗುವ ಹಾಗೆ ನಾವು ಹೇಳದೇ ಇರಬಹುದು. ತಪ್ಪು ಒಪ್ಪು ತಪ್ಪು ಮಾಡಿದಾಗ ಒಪ್ಪಿಕೊಂಡು ಬಿಡಬೇಕು. ತಪ್ಪುಗಳೇ ನಚಿತರ ಒಪ್ಪುಗಳನ್ನು ಮಾಡಲು ದಾರಿ ತೋರಿಸುತ್ತವೆ.ತಪ್ಪು ಮಾಡಿದಾಗ ನಮಗೆ ನಾವೇ ಭಯಂಕರ ಶಿಕ್ಷೆ ವಿಧಿಸಿಕೊಂಡು ಮೂಲೆಯಲ್ಲಿ ಕೂರಬಾರದು. ತಪ್ಪನ್ನು ತಿಳಿದುಕೊಂಡು ಒಳ್ಳೆಯ ದೃಷ್ಟಿಯಲ್ಲಿ ಒಳ್ಳೆಯ ಕೆಲಸ ಮಾಡಬೇಕು. ಚಾರ್ಲಿ ಚಾಪ್ಲಿನ್ ಚಿತ್ರಗಳಲ್ಲಿ ಆತ ಎಷ್ಟೋ ಸಲ ಬೀಳುತ್ತಿರುತ್ತಾನೆ. ಏಳುತ್ತಿರುತ್ತಾನೆ ಪೈಪು ಹಿಡಿದು ಮೇಲಕ್ಕೆ ಹತ್ತಿ ಧೊಪ್ಪೆಂದು ಕೆಳಕ್ಕೆ ಬೀಳುತ್ತಾನೆ. ಅದನ್ನು ಕಂಡು ನಾವು ಬಿದ್ದು ಬಿದ್ದು ನಗುತ್ತೇವೆ. ಯಾರೋ ಬಾಳೇ ಹಣ್ಣಿನ ಸಿಪ್ಪೆಯ ಮೇಲೆ ಕಾಲಿಟ್ಟು ಜಾರಿ ಬಿದ್ದಾಗ ಗೊಳ್ಳೆಂದು ನಗುತ್ತೇವೆ. ಅಂದರೆ ಇತರರ ಕಷ್ಟಗಳು ತೊಂದರೆಗಳು ನಮಗೆ ತಮಾಷೆ ಎನಿಸುತ್ತವೆ. ಆದರೆ ನಮ್ಮ ಬುಡಕ್ಕೆ ಬಂದಾಗ ನೋವು ತರುತ್ತವೆ. ಈ ಮನೋಭಾವವನ್ನು ಬದಲಿಸಿಕೊಳ್ಳಬೇಕು. ಕಷ್ಟಗಳಿಗೆ ಹೆದರಿ ನಮ್ಮನ್ನು ನಾವು ಶಿಕ್ಷಿಸಿಕೊಳ್ಳುವುದು ಬೇರೆಯಲ್ಲ ಇಲಿಯನ್ನು ಓಡಿಸಲು ಮನೆಗೆ ಬೆಂಕಿ ಹಚ್ಚುವುದು ಬೇರೆಯಲ್ಲ. ಎಲ್ಲ ಏರಿಳಿತಗಳಲ್ಲೂ ಗೆದ್ದು ಬದುಕಬೇಕೆನ್ನುವ ತೀವ್ರ ಆಕಾಂಕ್ಷೆ ನಮ್ಮನ್ನು ಸಂತಸದಿ ನಗೆ ಚೆಲ್ಲಿ ಬರಮಾಡಿಕೊಳ್ಳುತ್ತದೆ. ಹಾಗಾದರೆ ಆ ತೀವ್ರ ಆಕಾಂಕ್ಷೆ ನಮ್ಮದಾಗಿಸಿಕೊಳ್ಳೋಣ ಅಲ್ಲವೇ? ********************************************* ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು
ಮರೆವಿಗೆ ಇಲ್ಲಿದೆ ರಾಮಬಾಣ ಹಗಲು ರಾತ್ರಿ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಓದ್ತಿನಿ.ಆದರೂ ಬೇಕೆಂದಾಗ ನೆನಪಿಗೆ ಬರುವುದೇ ಇಲ್ಲ. ಅದೂ ಪರೀಕ್ಷೆ ಸಮಯದಲ್ಲಂತೂ ಸರಿಯಾಗಿ ಕೈ ಕೊಡುತ್ತದೆ ಏನು ಮಾಡಬೇಕು ತಿಳಿಯುತ್ತಿಲ್ಲ. ಎನ್ನುವುದು ಬಹಳಷ್ಟು ಪರೀಕ್ಷಾರ್ಥಿಗಳ ದೊಡ್ಡ ಸಮಸ್ಯೆ. ನನ್ನ ಮಕ್ಕಳು ಓದಲ್ಲ ಅಂತಿಲ್ಲ. ಎಲ್ಲವನ್ನೂ ಓದ್ತಾರೆ.ಆದರೆ ಅವರಿಗೆ ಜ್ಞಾಪಕ ಶಕ್ತಿದೇ ಸಮಸ್ಯೆ. ಪರೀಕ್ಷೆಯಲ್ಲಿ ಓದಿದ್ದು ಚೆನ್ನಾಗಿ ನೆನಪಿಗೆ ಬರಲಿಲ್ಲ ಅದಕ್ಕೆ ಅಂಕ ಕಡಿಮೆ ಬಂದಿದೆ ಎಂದು ಕಣ್ಣಿರಿಡುತ್ತಾರೆ ನಮಗೇನು ಮಾಡಬೇಕು ಅಂತ ಹೊಳಿತಿಲ್ಲ ಎನ್ನುವುದು ಹಲವು ಹೆತ್ತವರ ಗೋಳು. ಈ ಸಮಸ್ಯೆಗೆ ಅವರಿವರ ಜೊತೆ ಚರ್ಚಿಸಿ ಕೆಲ ಟಿಪ್ಸ್ ಸಿಕ್ಕರೂ ಅವು ಅಷ್ಟೊಂದು ಫಲ ನೀಡುತ್ತಿಲ್ಲ ಅನ್ನೋದು ಕೆಲವು ಪಾಲಕರ ಚಿಂತೆ. ಮರೆವು ಎನ್ನುವುದು ಒಂದು ರೋಗವೇ? ಇದಕ್ಕೆ ಮದ್ದು ಇಲ್ಲವೇ? ನನಗೆ ಜ್ಞಾಪಕ ಶಕ್ತಿ ಕಡಿಮೆ ಎಂಬ ಭ್ರಮೆ ತಲೆಯಲ್ಲಿ ಪ್ರ್ರಾರಂಭವಾದರೆ ಅದನ್ನು ಹೋಗಲಾಡಿಸುವುದು ಕಷ್ಟ ಸಾಧ್ಯ.ಮರೆವು ಒಂದು ವರವೂ ಹೌದು. ಮರೆವು ಇರದಿದ್ದರೆ ಕಹಿ ಘಟನೆಗಳನ್ನು ದುಃಖದ ಸಂಗತಿಗಳನ್ನು ಮರೆಯಲು ಸಾಧ್ಯವಾಗದೇ ಬಾಳು ನಿತ್ಯ ನರಕವಾಗುತ್ತಿತ್ತು. ಪ್ರಮುಖ ವಿಷಯಗಳನ್ನು ಮರೆಯದೇ ನೆನಪಿÀಡಬೇಕೆ? ಹಾಗಾದರೆ ಇಲ್ಲಿದೆ ಅದಕ್ಕೆ ರಾಮಬಾಣ. ಅಟೋ ಸಜೇಷನ್ ಸಾಮಾನ್ಯವಾಗಿ ಜ್ಞಾಪಕ ಶಕ್ತಿ ಎಲ್ಲರಲ್ಲೂ ಒಂದೇ ರೀತಿಯಲ್ಲಿರುತ್ತದೆ. ಇದನ್ನು ದಿನ ನಿತ್ಯ ಮೊಂಡಾದ ಚಾಕು ಹರಿತಗೊಳಿಸುವಂತೆ, ಪರಿಶ್ರಮದಿಂದ ವೃದ್ಧಿಸಿಕೊಳ್ಳುತ್ತಾರೆ. ಗೆಲುವು ಸಾಧಿಸುತ್ತಾರೆ. ಇನ್ನೂ ಕೆಲವರು ತಮ್ಮಲ್ಲಿ ಜ್ಞಾಪಕ ಶಕ್ತಿಯ ಪ್ರಮಾಣವೇ ಕಡಿಮೆ ಇದೆ ಎಂಬ ಭ್ರಮೆಗೆ ಜೋತು ಬಿದ್ದು ವಿಫಲರಾಗುತ್ತಾರೆ. ಕೆಲ ಜನರು ತೀರಾ ಅನಗತ್ಯವೆನಿಸುವ ವಿಷಯಗಳನ್ನು ಪ್ರಮುಖವೆಂದು ಭಾವಿಸಿ ಆ ಸಂಗತಿಗಳು ತಮ್ಮ ತಲೆಯಲ್ಲಿ ಉಳಿಯುವುದಿಲ್ಲ ಎಂದು ಚಿಂತಿಸುತ್ತಾರೆ. ನಿಜ ಹೇಳಬೇಕೆಂದರೆ ಚಿಕ್ಕ ಪುಟ್ಟ ವಿಷಯಗಳಿಗೆ ಹೆಚ್ಚು ಸಮಯ ವ್ಯರ್ಥ ಮಾಡುತ್ತಿಲ್ಲ ಎಂದು ಖುಷಿ ¥ಡಬೇಕು ನೀವು ಪುಸ್ತಕ ಪೆನ್ನು ಇತ್ಯಾದಿ . ದಿನ ನಿತ್ಯ ಇಡುವ ಜಾಗದಲ್ಲಿ ಇಡದೇ ಬೇರೆ ಜಾಗದಲ್ಲಿಟ್ಟು ಹುಡುಕುತ್ತ ಇತ್ತೀಚಿಗೆ ನನಗೆ ಮರೆವು ಹೆಚ್ಚಾಗ್ತಿದೆ ಎಂದು ಬೇಸರಿಸಿಕೊಂಡರೆ ಅದೊಂದು ರೀತಿಯ ಮೂರ್ಖತನವೇ ಅಲ್ಲವೇ? ಎಲ್ಲೋ ಇಟ್ಟು ಎಲ್ಲೋ ಹುಡುಕಿದರೆ ಸಿಗುವುದಾದರೂ ಹೇಗೆ? ನನಗೆ ಜ್ಞಾಪಕ ಶಕ್ತಿ ಕಡಿಮೆ ಮರೆವು ಜಾಸ್ತಿ ಎಂದು ಪದೇ ಪದೇ ಹೇಳಬೇಡಿ. ಈ ಸಂಗತಿ ಮೆದುಳಲ್ಲಿ ಪ್ರತಿಷ್ಟಾಪಿಸಿದರೆ ಅಪಾಯಕಾರಿ. ನನಗೆ ಅದ್ಭುತ ಜ್ಞಾಪಕ ಶಕ್ತಿ ಇದೆ ಎಂದು ಅಟೋ ಸಜೆಷನ್ (ಸ್ವ ಸಲಹೆ) ಕೊಟ್ಟುಕೊಳ್ಳಿ ಪರಿಣಾಮವೂ ಅದ್ಭುತವಾಗಿರುತ್ತದೆ. ಆಸಕ್ತಿ ವಲಯ ಬದಲಿಸಿ ನಿಮಗೆ ಕ್ರಿಕೆಟ್ ನಲ್ಲಿ ಆಸಕ್ತಿ ಇದ್ದರೆ ಯಾರು ಎಷ್ಟು ಶತಕ ಬಾರಿಸಿದರು? ಭಾರತ ಯಾವಾಗ ವಿಶ್ವ ಕಪ್ ಗೆದ್ದಿತು? ಯಾರು ಬ್ಯಾಟಿಂಗ್ ದಾಖಲೆ ಸಾಧಿಸಿದ್ದಾರೆ ಎನ್ನುವ ಪ್ರಶ್ನೆಗಳಿಗೆ ನಿರಾಯಾಸವಾಗಿ ಉತ್ತರಿಸುತ್ತೀರಿ. ಒಂದು ವೇಳೆ ಸಿನಿಮಾದಲ್ಲಿ ಆಸಕ್ತಿ ಇದ್ದರೆ ಯಾವ ಸಿನಿಮಾದಲ್ಲಿ ಯಾರು ಹೀರೋ? ನಿರ್ದೇಶನ ಯಾರದು ಎಂಬಿತ್ಯಾದಿ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುತ್ತೀರಿ. ಸಂಗೀತದಲ್ಲಿ ಆಸಕ್ತಿ ಇದ್ದರೆ ಗೀತೆ ರಚನೆಕಾರರು ಯಾರು? ಹಾಡಿದವರು ಯಾರು? ಎನ್ನುವ ಪ್ರಶ್ನೆಗಳಿಗೆ ಅರೆ ಕ್ಷಣ ಯೋಚಿಸದೇ ಫಟಾ ಫಟ್ ಉತ್ತರಿಸಿ ಬಿಡುತ್ತಿರಿ. ಇಷ್ಟವಾದ ವಿಷಯಗಳನ್ನು ನೆನಪಿಡಲು ಕಷ್ಟವೆನಿಸುವುದಿಲ್ಲ. ಆದರೆ ಇಷ್ಟ ಇಲ್ಲದ ವಿಷಯ ಬಂದಾಗ ಮರೆವು ಜಾಸ್ತಿ ಇದೆ ಎನ್ನುವ ದೂರು ನೀಡುವ ನಿಮಗೆ ಇದೆಲ್ಲ ಉತ್ತರಿಸೋಕೆ ಹೇಗೆ ಸಾಧ್ಯ? ಎಂಬ ಪ್ರಶ್ನೆ ಭ್ರಮೆಯಲ್ಲಿರುವವರಿಗೆ ಹೆಚ್ಚಾಗಿ ಮೂಡುವುದಿಲ್ಲ. ಒಮ್ಮೆ ಪ್ರಶ್ನಿಸಿಕೊಂಡು ನೋಡಿ ಹೌದು ನನ್ನಲ್ಲಿ ಜ್ಞಾಪಕ ಶಕ್ತಿ ಅಗಾಧವಾಗಿದೆ. ಆದರೆ ನನ್ನ ಆಸಕ್ತಿ ವಲಯ ಬದಲಿಸಿದರೆ ನಾನು ಓದಿಗೆ ಸಂಬಂಧಿಸಿದ ಅಥವಾ ನನಗೆ ಬೇಕಾದ ವಿಷಯ ನೆನಪಿನಲ್ಲಿಟ್ಟುಕೊಳ್ಳಬಲ್ಲೆ ಎಂಬುದು ಸ್ಪಷ್ಟವಾಗುವುದು. ಪುನರಾವಲೋಕನ ನೀವು ಓದಿದ ವಿಷಯಗಳನ್ನು ಮೇಲಿಂದ ಮೇಲೆ ಪುನರಾವಲೋಕನ ಮಾಡಿಕೊಳ್ಳುತ್ತಿರಬೇಕು ಪುನರಾವರ್ತನೆಗೊಳ್ಳುವ ವಿಷಯಗಳನ್ನು ಮೆದುಳು ಅಷ್ಟು ಸಲೀಸಾಗಿ ಮರೆಯಲು ಸಾಧ್ಯವಿಲ್ಲ. ಪರೀಕ್ಷೆ ಬರೆಯುವಾಗ ಈ ವಿಷಯಗಳು ಖಂಡಿತ ನೆನಪಿಗೆ ಬರುವವು. ಒಮ್ಮೆ ಮನೆಯಲ್ಲಿ ಪ್ರಶ್ನೆ ಪತ್ರಿಕೆ ಬಿಡಿಸಿ ಪರೀಕ್ಷಿಸಿ ನೋಡಿ. ನಿಮಗೆ ಅಚ್ಚರಿ ಎನಿಸುತ್ತದೆ. ಪುನರಾವಲೋಕನ ಮನೋಬರಲವನ್ನು ಹೆಚ್ಚಿಸಿ ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ. ಅರಿಯದೇ ನೋಡದೇ ಯೋಚಿಸದೇ ಕಾರ್ಯ ಮಾಡಬಾರದು ಎಂದು ವಿಷ್ಣು ಶರ್ಮ ಹೆಳಿದ್ದಾನೆ. ಅಂತೆಯೇ ಓದಿದ ವಿಷಯಗಳನ್ನು ಅರ್ಥೈಸಿಕೊಂಡು ಪುನರಾವಲೋಕನ ಮಾಡಿಕೊಳ್ಳಿ. ಅಕ್ರೋನಿಮ್ಸ್ ಬಳಸಿ ಹತ್ತು ಹಲವು ಅಂಶಗಳುಳ್ಳ ದೊಡ್ಡ ದೊಡ್ಡ ಉತ್ತರಗಳನ್ನು ನೆನಪಿನಲ್ಲಿಕೊಟ್ಟುಕೊಳ್ಳುವುದು ತುಂಬಾ ಕಷ್ಟ ಎನಿಸುವುದು ಸಹಜ. ಕಂಠ ಪಾಠ ಮಾಡುವ ಪದ್ದತಿ ಇಲ್ಲಿ ಉಪಯೋಗಕ್ಕೆ ಬಾರದು. ಶ್ಲೋಕಗಳು ಪದ್ಯಗಳು ಸುಭಾಷಿತಗಳನ್ನು ನೆನಪಿಡಲು ಮಾತ್ರ ಕಂಠ ಪಾಠ ಸೂಕ್ತ. ಕಾಮನಬಿಲ್ಲಿನಲ್ಲಿರುವ ಏಳು ಬಣ್ಣಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ವಿಬ್ಗಾರ್ ಎಂದು ಅಕ್ಷರ ಮುದ್ರಿಕೆಯನ್ನು ಉಪಯೋಗಿಸುತ್ತಾರೆ. ದೊಡ್ಡ ಉತ್ತರಗಳ ಅಂಶಗಳ ಮೊದಲ ಅಕ್ಷರಗಳನ್ನು ಒಟ್ಟುಗೂಡಿಸಿದರೆ ಅಕ್ಷರ ಮುದ್ರಿಕೆ (ಸಣ್ಣ ಪದಗಳು) ಅಬ್ರಿವೇಶನ್ಸ್ನಂತೆ ಆಗುತ್ತದೆ. ನೆನಪಿಟ್ಟುಕೊಳ್ಳಲು ಅನುಕೂಲವಾಗುವಂತೆ ವಾಕ್ಯವನ್ನು ರಚಿಸಿಕೊಳ್ಳಬಹುದು.ಅದೂ ಪರಿಣಾಮಾಕಾರಿ ಆಗಿರುತ್ತದೆ. . ಬೇಡ ಒತ್ತಡ ಕೇಳಿದ ಓದಿದ ನೋಡಿದ ವಿಷಯಗಳು ಮನದಲ್ಲಿ ಅಚ್ಚೊತ್ತಿದಮತೆ ಉಳಿಯಬೇಕೆಂದರೆ ಮನಸ್ಸು ಪ್ರಫುಲ್ಲವಾಗಿರಬೇಕು. ಒತ್ತಡದಿಂದ ಕೂಡಿದ್ದರೆ ಸಣ್ಣ ಸಂಗತಿಗಳನ್ನು ನೆನಪಿಲ್ಲಿಡಲು ಸಾಧ್ಯವಾಗುವುದಿಲ್ಲ. ಪ್ರಶಾಂತ ವಾತಾವರಣದಲ್ಲಿ ನಿಮ್ಮ ಓದು ಬರಹ ಸಾಗಲಿ. ದಿನ ನಿತ್ಯ ಕಲಿತ ಹೊಸ ಸಂಗತಿಗಳನ್ನು ಪುರ್ನಮನನ ಮಾಡಿಕೊಳ್ಳಿ. ಶ್ರೀರಂಗರು ಹೇಳಿದಂತೆ ಮಾನವರಿಗೆ ವಿಚಾರಕ್ಕಿಂತ ಆಚಾರದ ಮಹತ್ವವಿದೆ. ಬುದ್ಧಿಗಿಂತ ಶ್ರದ್ಧೆಗೆ ಮಹತ್ವವಿದೆ. ಹೀಗಾಗಿ ನೆನಪಿನ ಶಕ್ತಿಗೆ ಶ್ರದ್ಧೆ ಅತಿ ಮುಖ್ಯವಾದುದು. ಏಕಾಗ್ರತೆ ವಿವೇಕಾನಂದರು ನುಡಿವಂತೆ ಇಂದ್ರೀಯಗಳು ಪ್ರತಿಕ್ಷಣದಲ್ಲೂ ನಮ್ಮನ್ನು ಮೋಸಪಡಿಸುತ್ತಿರುತ್ತವೆ.ನಮ್ಮೆಲ್ಲ ಇಂದ್ರೀಯಗಳನ್ನು ನಿಗ್ರಹಗೊಳಿಸಿ ಒಂದೇ ಕಡೆ ಚಿತ್ತದ ಗಮನ ಹರಿಸುವುದೇ ಏಕಾಗ್ರತೆ. ಇಂದ್ರೀಯಗಳು ಯಾವಾಗಲೂ ಪರತಂತ್ರವಾಗಿವೆ. ಹೊರಗಣ ತಂತ್ರಗಳನ್ನು ಅವಲಂಬಿಸಿವೆ. ಹೀಗಾಗಿ ಯಾವುದೇ ಕೆಲಸ ಕಾರ್ಯದಲ್ಲಿ ತೊಡಗಿರುವಾಗ ಅದರಾಚಿಗಿನ ವಿಷಯವನ್ನು ಎಂದಿಗೂ ಯೋಚಿಸಬಾರದು. ವರ್ತಮಾನದಲ್ಲಿ ಮಾತ್ರ ಚಿತ್ತ ಮುಳಗಿರಬೇಕು. ಅಡುಗೆಗೆ ಉಪ್ಪು ಹೇಗೋ ಹಾಗೆ ಜ್ಞಾಪಕ ಶಕ್ತಿಯ ವೃದ್ಧಿಗೆ ಏಕಾಗ್ರತೆ. ಏಕಾಗ್ರತೆ ಇಲ್ಲದೇ ಸಣ್ಣ ಸಂಗತಿಯನ್ನು ಮೆದುಳಿನಲ್ಲಿ ದಾಖಲಿಸಲಾಗುವುದಿಲ್ಲ. ಮನೆ ಮದ್ದು ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುವ ಮನೆ ಮದ್ದುಗಳನ್ನು ಬಳಸಿ. ಸರಿಯಾದ ಸಮಯಕ್ಕೆ ಸಮತೋಲಿತ ಆಹಾರ, ನೀರಿನ ಸೇವನೆ ವ್ಯಾಯಾಮ ನಿದ್ದೆ ಮೆದುಳಿಗೆ ಕಸರತ್ತು ನೀಡುವ ಮೆಮರಿ ಗೇಮ್ಸ್ಗಳನ್ನು ಆಡಿ ಅವು ಮೆದುಳನ್ನು ಬಲಪಡಿಸುತ್ತವೆ ಅದರೊಂದಿಗೆ ಈ ಎಲ್ಲವೂ ಜ್ಞಾಪಕ ಶಕ್ತಿಗೆ ಪರೋಕ್ಷವಾಗಿ ಪುಷ್ಟಿ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿಜ್ಞಾನಿಗಳು ಮತ್ತು ಮಾನಸಿಕ ತಜ್ಞರು ಜ್ಞಾಪಕ ಶಕ್ತಿ ಹೆಚ್ಚಿಸಲು ಅನೇಕ ವಿಧಾನಗಳನ್ನು ಕಂಡು ಹಿಡಿದಿದ್ದಾರೆ. ಅವುಗಳನ್ನು ತಿಳಿದು ಅಳವಡಿಸಿಕೊಳ್ಳಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಮರೆವಿಗೆ ಮದ್ದು ನೀಡುವ ಪುಸ್ತಕಗಳನ್ನು ಓದಿ. ಜ್ಞಾಪಕ ಸಕ್ತಿ ಹೆಚ್ಚಿಸಿಕೊಂಡು ಗೆಲುವಿನ ನಗೆ ಬೀರಿ. ********** ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು
ಏಕಾಗ್ರತೆಯ ಬೆನ್ನೇರಿ ಗೆಲುವಿನ ನಗೆ ಬೀರಿ ಅಯ್ಯೋ! ನನ್ನ ಎಲ್ಲ ಕೆಲಸಗಳು ಅರ್ಧಂಬರ್ಧ. ಯಾವುದೂ ಪೂರ್ಣ ಮಾಡೋಕೆ ಆಗುತ್ತಿಲ್ಲ ಏಕಾಗ್ರತೆ ಇಲ್ಲದೇ ನನಗೆ ಅಡಚಣೆ ಆಗ್ತಿದೆ.ಇದನ್ನು ಸಾಧಿಸೋದು ಹೇಗೆ ತಿಳಿಯುತ್ತಿಲ್ಲ? ಎನ್ನುವುದು ಇತ್ತೀಚಿನ ಅನೇಕ ವಿದ್ಯಾರ್ಥಿಗಳ ಮತ್ತು ದಾವಂತದ ಬದುಕಿನಲ್ಲಿ ಕಾಲು ಹಾಕುತ್ತಿರುವ ಬಹುತೇಕ ಜನರ ದೊಡ್ಡ ದೂರು. ಏಕಾಗ್ರತೆಯಿಲ್ಲದೇ ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ಹೀಗಾಗಿ ಎಲ್ಲದರಲ್ಲೂ ವೈಫಲ್ಯತೆಯ ನೋವು ಕಾಡುತ್ತದೆ. ಒತ್ತಡದ ಕೂಪದಲ್ಲಿ ಬಿದ್ದವರೆಲ್ಲ ಸುಲಭವಾಗಿ ಏಕಾಗ್ರತೆಯನ್ನು ಕಳೆದುಕೊಂಡು ನರಳುತ್ತಾರೆ. ಯಾವುದೇ ಒಂದು ನಿರ್ದಿüಷ್ಟ ಕೆಲಸದಲ್ಲಿ ತೀಕ್ಷ÷್ಣ ದೃಷ್ಟಿ ಹರಿಸಿ ಮುಂದುವರೆಯಬೇಕೆAದರೆ ಬೇಡವಾದ ನೂರಾರು ಆಲೋಚನೆಗಳು ಹರಿದಾಡಿ ಮನಸ್ಸನ್ನು ಎಲ್ಲೆಲ್ಲೋ ಕರೆದುಕೊಂಡು ಹೋಗಿ ಬಿಡುತ್ತವೆ. ನೆಪೋಲಿಯನ್ ಹೇಳಿದಂತೆ ಏಕಾಗ್ರತೆಯಿಂದ ಯಾವನು ಪ್ರಯತ್ನಿಸುವುದಿಲ್ಲವೋ, ಅವನು ಎಂದೂ ಯಶಸ್ಸು ಗಳಿಸಲಾರನು. ಇದು ಸರ್ವಕಾಲಿಕ ಸತ್ಯ. ಏಕಾಗ್ರತೆ ಸಾಧಿಸುವುದೆಂದರೆ ತನ್ನ ಕೆಲಸದಲ್ಲಿ ತನಗೆ ತಾನೇ ಸಹಾಯ ಮಾಡಿಕೊಳ್ಳುವುದು. ತನಗೆ ತಾನು ಸಹಾಯ ಮಾಡಿಕೊಳ್ಳದೆ ಯವುದೇ ವ್ಯಕ್ತಿ ಪ್ರಾಮಾಣಿಕವಾಗಿ ಇತರರಿಗೆ ಸಹಾಯ ಮಾಡಲು ಪ್ರಯತ್ನಿಸಲು ಸಾಧ್ಯವಿಲ್ಲ. ಎಂಬುದು ಈ ಜೀವನದ ಅತ್ಯಂತ ಸುಂದರ ಪರಿಹಾರಗಳಲ್ಲಿ ಒಂದು.ಏಕಾಗ್ರತೆ ಎಂದರೆ.. . . ?ದೈನಂದಿನ ಗಜಿಬಿಜಿ ಕೆಲಸಗಳು ನಮ್ಮ ಗಮನವನ್ನು ಅತಿ ಸುಲಭವಾಗಿ ಸೆಳೆಯುತ್ತಿರುವಾಗ ನಮ್ಮ ಆದ್ಯತೆಗಳತ್ತ ಗಮನ ಹರಿಸುವಂತೆ ಮಾಡುವುದೇ ಏಕಾಗ್ರತೆ. ಯಾವುದಾದರೂ ಒಂದು ಗುರಿಗೆ ಸಂಪೂರ್ಣ ದೃಷ್ಟಿ ನೆಡುವುದೇ ಏಕಾಗ್ರತೆ. .ಏಕಾಗ್ರತೆ ಸಾಧಿಸಲು ಈ ಸೂತ್ರಗಳನ್ನು ಅನುಸರಿಸಿ.ಒಂದು ಸಮಯಕ್ಕೆ ಒಂದೇ ಕೆಲಸಗುರಿಯ ಸಾಧನೆಗೆ ಮಾಡಲೇಬೇಕಾದ ಕೆಲಸಗಳು ಸಾಕಷ್ಟಿವೆ ಅವುಗಳಲ್ಲಿ ಯಾವುದನ್ನು ಮೊದಲು ಮಾಡುವುದು ಎಂಬ ಗೊಂದಲ ಇದ್ದೇ ಇರುತ್ತದೆ. ಹೀಗಾಗಿ ಆದ್ಯತೆಯ ಪ್ರಕಾರ ಕೆಲಸದ ಪಟ್ಟಿ ಮಾಡಿ ಮಹತ್ವದ ಕೆಲಸ ಅನಿವಾರ್ಯ ಕೆಲಸ ಪಟ್ಟಿಗಳನ್ನು ಮಾಡಿ ಅದರಲ್ಲಿ ನಿರ್ಧಿಷ್ಟ ಕೆಲಸವನ್ನು ಕೈಗೆತ್ತಿಕೊಳ್ಳಿ. ಎತ್ತಿಕೊಂಡಿರುವ ಕೆಲಸದ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿ. ಹೀಗೆ ತದೇಕ ಚಿತ್ತದಿಂದ ತಲ್ಲೀನರಾಗಿ ಮಾಡಿದ ಕೆಲಸದ ಫಲಿತಾಂಶ ಅತ್ಯದ್ಭುತವಾಗಿರುತ್ತದೆ ಎಂದು ಬೇರೆ ಹೇಳಬೇಕಿಲ್ಲ. ಅತ್ತುತ್ತಮ ಗುಣಮಟ್ಟದ ಕಾರ್ಯ ಬೇರೆಯವರು ನಿಮ್ಮೆಡೆ ಹುಬ್ಬೇರಿಸುವಂತೆ ಮಾಡುವುದರಲ್ಲಿ ಸಂಶಯವಿಲ್ಲ. ಧ್ಯಾನಬೆಂಕಿಯಿAದ ಕಬ್ಬಿಣ ಮೃದುವಾಗುವಂತೆ ಧ್ಯಾನದಿಂದ ಏಕಾಗ್ರತೆ ಹದಕ್ಕೆ ಬರುತ್ತದೆ. ಮನುಷ್ಯನಿಗೆ ಉಸಿರಾಡಲು ಹೇಗೆ ಆಮ್ಲಜನಕವೋ ಹಾಗೆ ಗುರಿಯ ಸಾಧನೆಗೆ ಏಕಾಗ್ರತೆ ಅವಶ್ಯಕ. ಪ್ರತಿದಿನ ಧ್ಯಾನದಲ್ಲಿ ತೊಡಗಿಸಿಕೊಳ್ಳುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎನ್ನುವುದು ಈಗಾಗಲೇ ಸಂಶೋಧನೆಗಳಿAದ ಸಾಬೀತಾದ ಸಂಗತಿ. ಕ್ಷಣ ಕ್ಷಣಕ್ಕೂ ಹೊಯ್ದಾಡುವ ಮನಸ್ಸನ್ನು ಒಂದೆಡೆ ಹಿಡಿದಿಡಲು ಧ್ಯಾನ ಸಹಕಾರಿ. ದ್ಯಾನ ನಮ್ಮ ಧಾರಣ ಶಕ್ತಿಯನ್ನು ಹೆಚ್ಚಿಸುತ್ತದೆ. ಎಂಥ ಚಂಚಲ ಸ್ವಭಾವದವರಾದರೂ ಸರಿ ಜಾಗರೂಕರಾಗಿ ಮೈ ಕೊಡವಿಕೊಂಡು ನಿಲ್ಲುವಂತೆ ಮಾಡಲು ಧ್ಯಾನ ಸಹಾಯಕ ಬದುಕು ಒಂದು ಸುಂದರ ಗೆಲುವುಗಳ ಮುತ್ತಿನ ಹಾರ. ವಿವಿಧ ಬಣ್ಣಗಳ ಮುತ್ತಿನ ಹಾರ ಪಡೆಯಬೇಕೆಂದು ಬಯಸುವುದಾದರೆ ಧ್ಯಾನ ಅವಶ್ಯಕ. ನೆಪ ಬೇಡನಾನೂ ಏಕಾಗ್ರತೆಯಿಂದ ಚೆನ್ನಾಗಿ ಕೆಲಸ ನಿರ್ವಹಿಸಬೇಕು, ಅಧ್ಯಯನ ನಡೆಸಬೇಕು ಅಂತಿದ್ದೇನೆ ಆದರೆ ನನ್ನ ಮನೆಯ ವಾತಾವರಣ ಸರಿ ಇಲ್ಲ. ಗದ್ದಲಮಯ ಪ್ರದೇಶದಲ್ಲಿ ಚಿತ್ತವನ್ನು ಒಂದೆಡೆ ಕೇಂದ್ರೀಕರಿಸುವುದು ಕಷ್ಟವಾಗುತ್ತಿದೆ. ಎಂಬ ನೂರಾರು ನೆಪಗಳನ್ನು ಹೇಳದಿರಿ. ಕಷ್ಟಪಟ್ಟವನಿಗೆ ಸುಖ ಏನೆನ್ನುವುದು ತಿಳಿಯುತ್ತದೆ.ಮೊದಲು ಐದಾರು ನಿಮಿಷ ಮನಸ್ಸನ್ನು ಕೇಂದ್ರೀಕರಿಸುವುದು ಕಷ್ಟವೆನಿಸುತ್ತದೆ. ಮುಂದಿನ ಐದು ನಿಮಿಷ ಮನಸ್ಸನ್ನು ಸ್ವಾಧೀನದಲ್ಲಿರಿಸಿ ಗುರಿಯತ್ತ ನೆಟ್ಟರೆ ಸಾಕು. ಏಕಾಗ್ರತೆ ತಾನೇ ತಾನಾಗಿ ಹೊಂದಿಕೊಳ್ಳುತ್ತದೆ. ಏಕಾಗ್ರತೆಯ ಬಲದಿಂದ ಮಹಾನ್ ಕಾರ್ಯಗಳು ಸಂಭವಿಸಿವೆ. ಜೀವನದಲ್ಲಿ ನೀವು ಈಗ ಹೆಮ್ಮೆಯಿಂದ ಹೇಳಿಕೊಳ್ಳುವ ಅನೇಕ ಮಹತ್ಕಾರ್ಯಗಳು ಏಕಾಗ್ರತೆಯಿಂದಲೇ ಸಾಧಿಸಲ್ಪಟ್ಟಿವೆ ಸಂಕೀರ್ಣಮಯ ಜೀವನವನ್ನು ಸರಳಗೊಳಿಸಿ, ಶ್ರೇಷ್ಠ ಕೆಲಸಗಳಿಗೆ ಏಕಾಗ್ರತೆ ಮುನ್ನುಡಿಯಾಗುತ್ತದೆ. ಬದ್ಧತೆ ಬೆಳೆಸಿಕೊಳ್ಳಿನಮ್ಮ ಮೆದುಳು ಅದ್ಭುತ ಕಾರ್ಖಾನೆಯಿದ್ದಂತಿದೆ. ಒಂದು ಕೆಲಸ ಮಾಡುವಾಗಲೇ ಬೇರೆಲ್ಲ ಕೆಲಸಗಳ ಬಗೆಗೂ ಯೋಚಿಸಬಲ್ಲುದು ತರಕಾರಿ ಹೆಚ್ಚುತ್ತಿರುವ ತಾಯಿ ಹಾಲು ಉಕ್ಕದಂತೆ ನೋಡುತ್ತಾಳೆ. ಹೊರಗೆ ಯಾರೋ ಯಾವುದೇ ವಸ್ತು ಎಲ್ಲಿದೆ ಎಂದು ಕೇಳಿದರೂ ಸರಿಯಾಗಿ ಉತ್ತರಿಸುತ್ತಾಳೆ.ಮೆದುಳಿನ ಕಾರ್ಯದ ಬಗೆಗೆ ಅಚ್ಚರಿಯೆನಿಸುತ್ತದಲ್ಲವೇ? ಇಷ್ಟೆಲ್ಲ ಶಕ್ತಿ ಹೊಂದಿದ ಮೆದುಳಿಗೆ ಒಂದೇ ಕೆಲಸ ಕೊಟ್ಟರೆ ಇನ್ನೂ ಅಚ್ಚುಕಟ್ಟುತನದಿಂದ ಮಾಡಬಲ್ಲದು. ಸೂರ್ಯನ ಕಿರಣಗಳು ಕಾಗದವೊಮದನ್ನು ಸುಡಬಲ್ಲವು. ಆಶ್ಚರ್ಯವೇ! ಸೂರ್ಯನ ಕಿರಣಗಳನ್ನು ಒಂದೆಡೆ ಭೂತಗನ್ನಡಿಯಲ್ಲಿ ಕೇಂದ್ರೀಕರಿಸಿದಾಗ ಮಾತ್ರ ಸಾಧ್ಯ. ಚದುರಿದ ಕಿರಣಗಳಿಂದ ಅಸಾಧ್ಯ. ಮೆದುಳಿನ ಒಟ್ಟು ಶಕ್ತಿಯನ್ನುೆÆಂದು ಸಮಯದಲ್ಲಿ ಒಂದೇ ಕೆಲಸಕ್ಕೆ ಉಪಯೋಗಿಸುವ ಬದ್ಧತೆ ಬೆಳೆಸಿಕೊಳ್ಳಿ. ದಿನಚರಿ ಬರೆಯಿರಿನೀವು ಏನಾಗಬೇಕೆಂಬುದನ್ನು ಬೇರೆಯವರು ನಿರ್ಧರಿಸುವದಕ್ಕಿಂತ ನೀವೇ ನಿರ್ಧರಿಸಿಕೊಳ್ಳಿ.ದಿನಚರಿ ಬರೆಯುವುದನ್ನು ರೂಢಿಸಿಕೊಂಡರೆ ನಿಮ್ಮ ಆಸಕ್ತಿ ಒಲವು ಅಭಿರುಚಿಗಳು ನಿಮಗೇ ಗೊತ್ತಾಗುತ್ತವೆ. ಆಸಕ್ತಿಯಿದ್ದಲ್ಲಿ ಮನಸ್ಸನ್ನು ಹಿಡಿದಿಡುವುದು ಅವಶ್ಯವಿಲ್ಲ.ಮನಸ್ಸು ತಾನೇ ಆಸಕ್ತಿಯಿಂದ ತೊಡಗಿಕೊಂಡು ಬಿಡುತ್ತದೆ. ಇದರಿಂದ ಏಕಾಗ್ರತೆ ಸುಲಭ ಸಾಧ್ಯವಾಗುವುದು. ಮಾಡುವ ಕೆಲಸವನ್ನು ವಿಭಿನ್ನ ರೀತಿಯಲ್ಲಿ ಮಾಡಬಹುದೇ? ಎಂಬ ಸೃಜನಶೀಲತೆನ್ನು ಅಳವಡಿಸಿಕೊಳ್ಳಲು ದಿನಚರಿ ಉಪಯುಕ್ತ.ಟನಲ್ ವಿಷನ್ ಬಳಸಿಎರಡೂ ಅಂಗೈಗಳಿAದ ಕಣ್ಣುಗಳನ್ನು ಮುಚ್ಚಿಕೊಳ್ಳಿ. ನಂತರ ಅಂಗೈಗಳನ್ನು ಕಣ್ಣುಗಳ ಮೇಲಿಂದ ತೆಗೆಯುತ್ತ ಮುಚ್ಚುತ್ತ ಬ್ಲಿಂರ್ಸ್ (ಮಿಣುಕು) ತರ ಉಪಯೋಗಿಸಿ.ನಂತರ ನಿಮ್ಮ ದೃಷ್ಟಿಯನ್ನು ನಿಮ್ಮ ಮುಂದಿರುವ ಗುರಿಯತ್ತ ಹೊರಳಿಸಿ. ಕ್ರಮೇಣವಾಗಿ ಮೆದುಳು ಪೂರ್ತಿ ಏಕಾಗ್ರತೆಯನ್ನು ಪಡೆಯುತ್ತದೆ. ನಿಮ್ಮ ಗುರಿಯತ್ತ ದೃಷ್ಟಿ ಕೇಂದ್ರೀಕರಿಸುವ ಈ ಟನಲ್ ವಿಷನ್ ಪ್ರಕ್ರಿಯೆಯನ್ನು ಬಳಸಿ. ತಾಜಾ ಹಣ್ಣು ಸಮತೋಲಿತ ಆಹಾರ ಸೇವಿಸಿಆದರ್ಶ ಕಣ್ಮುಂದಿರಲಿಬರೀ ಅಧ್ಯಯನ ಮತ್ತು ಕೆಲಸ ಎಂದು ಸಮಯ ಕಳೆದರೆ ನೆಚ್ಚಿನ ಆಟ ಆಡುವುದು ಯಾವಾಗ? ಎಂದು ಯೋಚಿಸದಿರಿ. ಆಡುವಾಗ ಮನಸ್ಸು ಆಟದಲ್ಲಿರಲಿ ಅಧ್ಯಯನದಲ್ಲಿರುವಾಗ ಪುಸ್ತಕದಲ್ಲಿರಲಿ.ಆಡುವಾಗ ಅಭ್ಯಾಸದ ಕುರಿತು ಚಿಂತಿಸಿ ಕಿರಕಿರಿಗೊಳಗಾಗದಿರಿ. ಒಂದೇ ಮಾತಿನಲ್ಲಿ ಸ್ಪಷ್ಟಗೊಳಿಸಬೇಕೆಂದರೆ ಟಿವಿ ನೊಡಿ ಕಪಿ ಛೇಷ್ಟೆ ಮಾಡಿ. ಕಂಪ್ಯೂಟರ್ ಗೇಮ್ ಆಡಿ ಇಷ್ಟವಾದ ಸಂಗೀತ ಆಲಿಸಿ ಕುಣಿಯಿರಿ. ಇವು ನಿಮ್ಮನ್ನು ಪುನಃಶ್ಚೇತನಗೊಳಿಸುತ್ತವೆ. ಆದರೆ ಏನೋ ಮಾಡುವಾಗ ಏನೋ ಯೋಚಿಸುತ್ತ ನಿತ್ರಾಣಗೊಳ್ಳದಿರಿ.. ನೀವು ಎಲ್ಲಿದ್ದಿರೋ ಅಲ್ಲಿಯೇ ನಿಮ್ಮ ಮನಸ್ಸು ಇರಲಿ.ಮಾಡುವ ಕೆಲಸ ಬಿಟ್ಟು ಮನಸ್ಸು ಬೇರೆಲ್ಲೂ ಕದಲದಿರಲಿ. ಏಕಾಗ್ರತೆಯಿಂದಲೇ ಇಡಿ ಜಗತ್ತು ಫಲವತ್ತತೆಯನ್ನು ಪಡೆದಿದೆ ಎನ್ನುವುದು ನೆನಪಿರಲಿ. ಏಕಾಗ್ರತೆಗೆ ಅತ್ಯುತ್ತಮ ಉದಾಹರಣೆಯೆಂದರೆ ಸ್ವಾಮಿ ವಿವೇಕಾನಂದರು. ದೊಡ್ಡ ದೊಡ್ಡ ಗ್ರಂಥಗಳಲ್ಲಿ ಇಷ್ಟನೇ ಪುಟದಲ್ಲಿ ಹೀಗೇ ಹೇಳಲಾಗಿದೆ ಎಂದು ಹೇಳುವಷ್ಟು ಏಕಾಗ್ರಚಿತ್ತರಾಗಿ ಅಧ್ಯಯನ ನಡೆಸುತ್ತಿದ್ದರು. ಅಂಥ ಆದರ್ಶ ಸಾಧಕರು ಕಣ್ಮುಂದಿರಲಿ.ಪ್ರಯತ್ನಿಸಿ -ಸಾಧಿಸಿಕೆಲಸದ ಒತ್ತಡದಲ್ಲಿ ಕೆಲಸಗಳ ತರಾತುರಿಯಲ್ಲಿ ನಾನೇನು ಮಾಡುತ್ತಿದ್ದೇನೆ ಎಂಬುದರ ಪರಿವೆ ಇರಬೇಕಾದುದು ಅನಿವಾರ್ಯ. ಗುರಿಯೆಡೆಗೆ ಗುರಿಯಿಟ್ಟು ಅತ್ಯುನ್ನತ ಸಾಮರ್ಥ್ಯಕ್ಕೆ ಏರಲು ಏಕಾಗ್ರತೆ ಬೇಕೇ ಬೇಕು. ಅಸಾಧಾರಣವಾದುದನ್ನು ಸಾಧಿಸಲು ಸಾಧಾರಣ ಗುಣಮಟ್ಟದ ಏಕಾಗ್ರತೆ ಸಾಕಾಗುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಏಕಾಗ್ರತೆ ಸಾಧಿಸಿದಷ್ಟು ದೊರೆಯುತ್ತದೆ.ನಿಮ್ಮ ಬದುಕನ್ನು ವಿಶೇಷ ಮತ್ತು ಮರೆಯಲಾಗದ್ದನ್ನಾಗಿ ಮಾಡಲು ಏಕಾಗ್ರತೆಯ ಹೆಜ್ಜೆಯು ಕಾಲಾಂತರದಲ್ಲಿ ದೊಡ್ಡ ಪರಿಣಾಮ ಬೀರಬಲ್ಲದು. ಏಕಾಗ್ರತೆ ಇಲ್ಲ ಎಂಬ ಬಲಹೀನತೆಯನ್ನು ಅತಿಕ್ರಮಿಸಲು ಪ್ರಯತ್ನಿಸಿ. ಬರೀ ಗುರಿ ಇಟ್ಟರೆ ಸಾಲದು ಹೊಡೆಯಲೂ ಬೇಕು. ಏಕಾಗ್ರತೆಯ ಬೆನ್ನೇರಿ ಗೆಲುವಿನ ನಗೆ ಬೀರಿ ಏಕಾಗ್ರತೆಯನ್ನು ಸಾಧಿಸಿದರೆ ಗೆಲುವು ಕಟ್ಟಿಟ್ಟ ಬುತ್ತಿ. ಸಾಧನೆಯ ಮೈಲಿಗಲ್ಲು ಸ್ಥಾಪಿಸಲು ಸಾಧ್ಯವಾಗುವುದು. **************************** ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು
ಗೆಲುವಿಗೆ ಶತ್ರುಗಳಿವೆ. . . . ಎಚ್ಚರಿಕೆ‼
ಗೆಲುವಿಗೆ ಶತ್ರುಗಳಿವೆ. . . . ಎಚ್ಚರಿಕೆ‼ ನನ್ನಲ್ಲಿರುವ ಚೂರು ಪಾರು ಆತ್ಮವಿಶ್ವಾಸವನ್ನು ಒಗ್ಗೂಡಿಸಿ ಏನನ್ನೇ ಮಾಡಲು ಹೊರಟರೂ ಉತ್ಸಾಹಕ್ಕೆ ತಣ್ಣೀರೆರುಚುವವರು ಸುತ್ತಲೂ ಸುತ್ತುವರೆದಂತೆ ಇರುತ್ತಾರೆ. ಅಷ್ಟೇ ಅಲ್ಲ ಮನದಲ್ಲಿ ಉಕ್ಕುತ್ತಿರುವ ಹಂಬಲವನ್ನು ಚಿವುಟಿ ಚಿಂದಿ ಮಾಡುತ್ತಾರೆ. ಎಷ್ಟೋ ಸಲ ನನ್ನಿಂದ ಏನೂ ಆಗುವುದಿಲ್ಲ ಅನ್ನುವ ಭಾವವನ್ನು ಮೂಡಿಸುವವರೂ ಇದ್ದಾರೆ. ಅವರಿವರ ಇಂಥ ಗಿರಕಿಯೊಳಗೆ ಸಿಕ್ಕಿ ಬಿದ್ದರೆ ನನ್ನ ಕಥೆ ಮುಗಿದೇ ಹೋಗುತ್ತದೆ ಅಂತ ಅನ್ನಿಸಿದರೂ ಅದರಿಂದಾಚೆ ಬರಲು ಆಗುತ್ತಿಲ್ಲ. ‘ಏನಾದರೂ ಆಗಲಿ ಮುನ್ನುಗ್ಗು ಎಂಥ ಸೋಲೇ ಎದುರಾದರೂ ಎದೆಗುಂದಬೇಡ ಧೈರ್ಯದಿಂದ ಹೆಜ್ಜೆ ಹಾಕು. ‘ಛಲವೇ ಗೆಲುವಿನ ಬಲ.’ ಎಂದು ಗುರುಗಳು ಹೇಳಿದ ಮಾತುಗಳನ್ನು ನೆನೆದಾಗಲೊಮ್ಮೆ “ಗೆಲ್ಲುವುದು ಕಷ್ಟವಲ್ಲ ಗೆಲ್ಲಲೇಬೇಕೆಂದು ಮನಸ್ಸು ಮಾಡುವುದು ಕಷ್ಟ. ದೃಢ ಸಂಕಲ್ಪ ತೊಡುವುದು ಇನ್ನೂ ಕಷ್ಟ..”ಎಂದೆನಿಸುತ್ತದೆ. ಇದು ಬಹುತೇಕ ಯುವ ಸ್ಪರ್ಧಾರ್ಥಿಗಳ ಮತ್ತು ವಿದ್ಯಾರ್ಥಿಗಳ ಸ್ವಗತವಾಗಿದೆ. ಗೆಲುವು. . . . ಗೆಲುವು ಯಾರಿಗೆ ಬೇಡ ಹೇಳಿ? ಪ್ರತಿಯೊಬ್ಬರೂ ಗೆಲ್ಲಲು ಬಯಸುತ್ತಾರೆ.ಕನಸುಗಳು ಬೇರೆ ಬೇರೆ ಬಣ್ಣ ಸುರಿದು ಕೈ ಬೀಸಿ ಕರೆಯುತ್ತವೆ. ಇನ್ನೇನು ಗೆಲುವು ಕೈಯಲ್ಲಿ ಸಿಕ್ಕಿತು ಎನ್ನುವಷ್ಟರಲ್ಲಿ ಕೈ ಜಾರಿದ ಕಹಿ ಅನುಭವವನ್ನು ಮರೆಯುವದಾದರೂ ಹೇಗೆ? ಗೆಲುವಿನ ವಿಷಯವಾಗಿ ಅನೇಕ ಸಲ ಮನಸ್ಸಿಗೆ ಮತ್ತು ಬುದ್ಧಿಗೆ ಚಕಮಕಿ ನಡೆದಿರುತ್ತದೆ. ಕೆಲವೊಮ್ಮೆ ಗುರಿಯ ಕುರಿತು ಬಲು ಶಿಸ್ತಿನ ವ್ಯಕ್ತಿಯಾದರೂ ಗೆಲುವು ಮರೀಚಿಕೆ ಆಗುವುದುಂಟು. ಯಶಸ್ಸಿನ ವಿಷಯದಲ್ಲಿ ಅಸಮಾಧಾನದಲ್ಲಿ ಇರುವುದನ್ನು ಕಾಣುತ್ತೇವೆ.ನನ್ನ ಜೀವನ ಈಗ ಯಾವ ಘಟ್ಟದಲ್ಲಿದೆ ಅದನ್ನು ಎಲ್ಲಿಗೆ ಕೊಂಡೊಯ್ಯಬೇಕು? ಗೆಲುವಿನತ್ತ ಹೆಜ್ಜೆ ಹಾಕುವುದು ಹೇಗೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೊರಟಾಗ ಜೀವನ ಧ್ಯೇಯವನ್ನು ಕಂಡುಕೊಂಡು ಆ ಗುರಿಯತ್ತ ದಿಟ್ಟ ಹೆಜ್ಜೆ ಹಾಕುವಾಗ ಏಕಾಂಗಿಯಾಗಿ ಉಳಿಯುವ ಮಾತಿಲ್ಲ. ‘ ರೈತ ಬಿತ್ತಿದ ತಕ್ಷಣ ಫಲ ಬರುವುದಿಲ್ಲ. ನೀರು ಗೊಬ್ಬರ ಸಕಾಲಕ್ಕೆ ಹಾಕಿದ ಮೇಲೆ ಅಲ್ಲವೇ ಬೆಳೆ ಬರುವುದು.’ ಹಾಗೆಯೇ ಗೆಲುವೂ ಸಹ. ಮನಸ್ಸಿನಲ್ಲಿ ಗೆಲ್ಲಬೇಕೆನ್ನುವ ಬಯಕೆ ಮೂಡಿದರೆ ಸಾಲದು ಅದಕ್ಕೆ ಪೂರಕ ಅಂಶಗಳನ್ನು ಪೂರೈಸಿದಾಗ ಮಾತ್ರ ಫಲಿಸುವುದು. ಸ್ವಯಂ ಪ್ರೀತಿ ಇಲ್ಲದಿರುವುದು ಗೆಲುವಿನ ಗಿಡಕ್ಕೆ ಕಾಡುವ ಕ್ರಿಮಿ ಇದ್ದಂತೆ. ರೋಲೋ ಮೇ ಹೇಳುವಂತೆ ‘ಸ್ವಯಂ-ಪ್ರೀತಿ ಅವಶ್ಯಕ ಮತ್ತು ಒಳ್ಳೆಯದು ಮಾತ್ರವಲ್ಲ ಅದು ಇತರರನ್ನು ಪ್ರೀತಿಸಲು ಸಹ ಒಂದು ಪೂರ್ವಭಾವಿ ಅಗತ್ಯವಾಗಿರುತ್ತದೆ.’ ಬೆಳೆಯನ್ನು ಕಾಡುವ ಕ್ರಿಮಿಗಳಿಗೆ ಕೀಟನಾಶಕ ಸಿಂಪಡಿಸಿ ನಿಯಂತ್ರಿಸಿದAತೆ ಗೆಲುವಿನ ಶತ್ರುಗಳಾವವು? ಅವುಗಳನ್ನು ನಿಯಂತ್ರಿಸುವುದು ಹೇಗೆ ಎಂಬುದನ್ನು ತಿಳಿಯಬೇಕೇ? ಹಾಗಾದರೆ ಮುಂದಕ್ಕೆ ಓದಿ.. . . ಸ್ಪಷ್ಟ ಗುರಿ ಬಹುತೇಕರು ಎಡುವುದೇ ಇಲ್ಲಿ. ಗುರಿಯ ನಿರ್ಧಾರವಿಲ್ಲದಿದ್ದರೆ ಹೋಗುವುದಾದರೂ ಎಲ್ಲಿಗೆ? ಗಾಳಿಯಲ್ಲಿ ಹೊರಟ ಕರುವಿನಂತೆ ಆಗುತ್ತದೆ ಬದುಕು. ಕಡಲಯಾನಿಗಳಿಗೆ ಬೇಕಾದ ಪ್ರಮುಖ ವಸ್ತು ಎಂದರೆ ದಿಕ್ಸೂಚಿ. ಹೋಗುವ ದಿಕ್ಕು ಗೊತ್ತಿಲ್ಲದೇ ಮುನ್ನಡೆದರೆ ಆಪತ್ತು ಕಟ್ಟಿಟ್ಟ ಬುತ್ತಿ. ಎಲ್ಲವೂ ಇದ್ದು ಏನೂ ಇಲ್ಲದವರ ತರಹ ಹಲುಬುವುದು ಗೋಳಾಡುವುದೇ ಜೀವನವಾಗಬಾರದು. ಸ್ಪಷ್ಟ ಗುರಿ ಇಲ್ಲದಿರುವುದು ಗೆಲುವಿಗೆ ದೊಡ್ಡ ಶತ್ರು. ಗುರಿಯನ್ನೇ ಗುರುತಿಸದಿರುವುದು. ಗುರಿ ನಿರ್ಧಾರವು ಒಂದು ಸಾಹಸ ಸಂಕೇತ. ಗುರಿ ನಿರ್ಧರಿಸುವುದು ಮತ್ತು ಅದನ್ನು ಎಡೆಬಿಡದೇ ಅನುಸರಿಸುವುದು ಅನಿವಾರ್ಯ. ಯೋಜನೆಗಳನ್ನು ಹಾಕದಿರುವುದು. ಯೋಜನೆಗಳು ನಕ್ಷತ್ರಗಳಂತೆ ಗುರಿಯತ್ತ ಚಲಿಸುವಾಗ ಅವುಗಳನ್ನು ಮಾರ್ಗ ಸೂಚಿಗಳಂತೆ ಆಯ್ಕೆ ಮಾಡಿಕೊಳ್ಳಬೇಕು.ಆ ದಾರಿಗುಂಟ ಗಮ್ಯ ಸ್ಥಾನವನ್ನು ತಲುಪಬಲ್ಲೆವು. ಬದ್ಧತೆಗಳು ನಂಬಿಕೆಗಳು ಸಮಾನವಾಗಿರದಿದ್ದರೆ ಜೀವನದಲ್ಲಿ ಸುಖದಿಂದ ಇರಲು ಸಾಧ್ಯವಿಲ್ಲ ಅಂತೆಯೇ ಗುರಿ ಇಲ್ಲದ ಜೀವನ ಗೆಲುವಿನ ದಡ ಸೇರಲು ಸಾಧವಿಲ್ಲ.. ಗುರಿ ನಮ್ಮ ಮನಸ್ಸಿಗೆ ಸ್ಪೂರ್ತಿ ನೀಡುತ್ತದೆ. ಬರೆದಿಟ್ಟ ಗುರಿಯತ್ತ ದಿಟ್ಟ ಹೆಜ್ಜೆ ಇಡುವಂತೆ ಮಾಡುತ್ತದೆ.’ಸ್ಪಷ್ಟ ಗುರಿ ಎಂದರೆ ಸಾಮಾನ್ಯನಾಗಿಯೇ ಇರಲು ನಿರಾಕರಿಸುವುದು.. ಅಸಾಮಾನ್ಯನಾಗುವ ನಿರ್ಧಾರ ಕೈಗೊಂಡಂತೆ.’ ಮುಂದಿನ ಜೀವನದ ದಿಟ್ಟ ಪ್ರಯತ್ನ. ಏಕೆಂದರೆ ಅದು ನಿಮ್ಮಲ್ಲಿ ಅಡಗಿರುವ ಸುಪ್ತ ಶಕ್ತಿಗಳನ್ನು ಸಾಧ್ಯತೆಗಳನ್ನು ಹೊರಗೆಳೆಯುವ ಚೈತ್ರ ಕಾಲ. ಆಲಸ್ಯತನ ಆಲಸ್ಯ ನಮ್ಮ ಶರೀರದೊಳಗೇ ಇರುವ ದೊಡ್ಡ ಶತ್ರು. ಇದನ್ನು ಹೊರ ಓಡಿಸಲು ಮನಸ್ಸು ಮಾಡದಿದ್ದರೆ ಜೀವನವನ್ನು ನುಂಗಿ ಹಾಕಿ ಬಿಡುತ್ತದೆ. ಬಣ್ಣದ ಮಾತುಗಳನ್ನು ಹೇಳುತ್ತ ಕುಳಿತರೆ ಬದುಕು ಉದ್ದಾರವಾಗುವುದಿಲ್ಲ ಎಂಬುದು ಕಟು ಸತ್ಯ. ‘ನಾವು ಪಡೆದುಕೊಳ್ಳುವ ವಸ್ತುಗಳಲ್ಲೆಲ್ಲಾ ಬಹು ಬೇಸರದಿಂದ ಪಡೆದುಕೊಳ್ಳುವುದು ಬುದ್ಧಿವಾದ.’ ಎನ್ನುವ ಸಂಗತಿ ಎಲ್ಲರಿಗೂ ಗೊತ್ತಿರುವುದೇ. ಗುರು ಹಿರಿಯರು ಹೇಳುವ ಬುದ್ಧಿವಾದವನ್ನು ಕಿವಿಗೆ ಹಾಕಿಕೊಳ್ಳದೇ ಆಲಸ್ಯತನವನ್ನೇ ಸಮರ್ಥಿಸಿಕೊಳ್ಳುವುದನ್ನು ರೂಢಿಸಿಕೊಂಡಿರುವುದು ಶೋಚನೀಯ ವಿಚಾರ. ‘ಸಮರ್ಥತೆ ಇರಲಾರದೇ ಆರ್ಥಿಕತೆ ಇರಲಾರದು.’ಎಂಬುದು ಬಲ್ಲವರ ಮಾತು. ಅಂತೆಯೇ ‘ಶ್ರಮವಿರಲಾರದೇ ಗೆಲುವು ಇರಲಾರದು.’ ಎಂಬ ನುಡಿಯನ್ನು ಅದಕ್ಕೆ ಜೋಡಿಸಬಹುದು. ಇದು ಸಾರ್ವಕಾಲಿಕ ಸತ್ಯ ಕೂಡ. ಕಷ್ಟ ನಷ್ಟಗಳ ನಡುವೆ ಫೀನಿಕ್ಸ್ ಪಕ್ಷಿಯಂತೆ ಮೈ ಕೊಡವಿ ಎದ್ದು ನಿಂತು ಬದುಕಿ ಬಾಳುವವರ ಚಿತ್ರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿರುತ್ತವೆ. ಅಂಥವುಗಳನ್ನೆಲ್ಲ ನೋಡಿದಾಗೊಮ್ಮೆ ನಾನೂ ಹಾಗೆ ಆಗಬೇಕೆಂದುಕೊಂಡರೂ ಮನಸ್ಸು ಮಾತ್ರ ಚೇತನ ಆವಸ್ಥೆಗೆ ಬರುವುದೇ ಇಲ್ಲ. ಅದಕ್ಕೆ ಎಲ್ಲ ಕಾರಣ ದೃಢ ಸಂಕಲ್ಪದ ಅಭಾವ. ‘ಅಚಲ ಸಂಕಲ್ಪವೇ ಆಲಸ್ಯತನಕ್ಕೆ ಮದ್ದು.’ ಶ್ರದ್ಧೆಯ ದುಡಿಮೆಗೆ ಮೋಸವಿಲ್ಲವೆಂದು ಗುರಿಯ ದಾರಿಯಲ್ಲಿ ಹೆಜ್ಜೆ ಹಾಕಬೇಕು.ಸೋಮಾರಿತನದ ಗೂಡಾದ ಮೆದುಳು ತಾರ್ಕಿಕವಾಗಿ ಏನನ್ನೂ ಯೋಚಿಸದು. ಆದ್ದರಿಂದ ಸೋಮಾರಿತನದ ಬೇರನ್ನು ಕಿತ್ತೊಗೆಯುವುದೊಂದೇ ದಾರಿ. ಸಮಯ ನಿರ್ವಹಣೆ ಬಹುತೇಕ ಪ್ರಾಜ್ಞರ ಪ್ರಕಾರ ‘ಜೀವನವೆಂದರೆ ಸಮಯ.’ ಸಮಯ ನಿರ್ವಹಣೆಯಲ್ಲಿಯೇ ಜೀವನದ ನೋವು ನಲಿವು ಸೋಲು ಗೆಲುವು ಎಲ್ಲವೂ ಅಡಗಿವೆ. ಮಾಡುವ ಕೆಲಸಗಳ ಬಗೆಗೆ ಸರಿಯಾದ ಚಿತ್ರಣ ಇರದಿದ್ದರೆ ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡಿ ಸಮಯ ಪೋಲು ಮಾಡಿ ಬಿಡುತ್ತೇವೆ. ಅಷ್ಟೇ ಅಲ್ಲ ಮಾಡಬೇಕಾದ ಸಮಯದೊಳಗೆ ಕೆಲಸವನ್ನು ಮುಗಿಸಲು ಆಗುವುದಿಲ್ಲ ಮುಖ್ಯವಾದ ಕೆಲಸಗಳಿಗೆ ಸಮಯವೇ ಇಲ್ಲದಂತಾಗುತ್ತದೆ.ಕೆಲಸಗಳ ಪ್ರಾಮುಖ್ಯತೆಯ ಅರಿವಿಲ್ಲದೇ ಕಷ್ಟ ಪಟ್ಟು ಕೆಲಸ ಮಾಡಿದರೂ ಸರಿಯಾದ ಫಲಿತಾಂಶ ದೊರೆಯುವುದಿಲ್ಲ.ಆದ್ದರಿಂದ ಪ್ರತಿನಿತ್ಯ ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಹಿಂದಿನ ದಿನ ರಾತ್ರಿ ಇಲ್ಲವೇ ಬೆಳಿಗ್ಗೆ ತಯಾರಿಸಿಕೊಳ್ಳುವುದು ಸೂಕ್ತ. ಮುಖ್ಯವಾದ ಕೆಲಸಗಳಲ್ಲಿ ತೊಡಗಿರುವಾಗ ಇತರರಿಗೆ ‘ಇಲ್ಲ ಆಗುವುದಿಲ್ಲ ಎಂದು ಹೇಳುವುದನ್ನು ಕಲಿಯಲೇಬೇಕು. ಇಲ್ಲದಿದ್ದರೆ ಮನಸ್ಸಿನ ಮೇಲೆ ಹಲವಾರು ಕೆಲಸಗಳನ್ನು ಹೇರಿದಂತಾಗಿ ಯಾವ ಕೆಲಸವನ್ನೂ ಸರಿಯಾಗಿ ಮಾಡಲಾಗುವುದು.’ಯಾವ ವ್ಯಕ್ತಿಗೆ ಸಮಯ ನಿರ್ವಹಣೆ ಗೊತ್ತಿದೆಯೋ ಅವನು ಯಶಸ್ವಿ ವ್ಯಕ್ತಿಯಾಗುವನು.’ ನಿರ್ವಹಣೆ ಗೊತ್ತಿಲ್ಲದವನು ಸಮಯದ ಅಭಾವದ ಕುರಿತು ದೂರುವನು. ಉತ್ಸಾಹ ಹೊಸ ಹುರುಪು ಸ್ಪಷ್ಟ ಚಿಂತನೆಗಳು ಇರದಿದ್ದರೆ ಯಾವುದರಲ್ಲಿಯೂ ಮುನ್ನಡೆಯುವುದು ಕಷ್ಟ. ಉತ್ಸಾಹದಿಂದ ವಿಶ್ವಾಸ ವೃದ್ಧಿಯಾಗುವುದು.ನೀವು ಏನನ್ನೇ ಮಾಡಲು ಮುಂದಾದರೂ ನಿಮ್ಮ ಉತ್ಸಾಹಕ್ಕೆ ತಣ್ಣೀರೆರಚುವವರು ಮತ್ತು ವಿಪತ್ತುಗಳು ಸಂಕಷ್ಟಗಳು ಇದ್ದೇ ಇರುತ್ತವೆ.ನೀವು ಈಗ ನದಿ ಹರಿಯುವ ದಿಕ್ಕಿನಲ್ಲಿ ದೋಣಿಯನ್ನು ನಡೆಸುತ್ತಿರುವವರು ನಿಮಗೀಗ ಮುಂದೆ ಹೋಗುವುದನ್ನು ಬಿಟ್ಟು ಬೇರೆ ದಾರಿ ಇಲ್ಲ.ಅಥವಾ ಹಿಂದೆ ಹೋಗಬೇಕು.ಖ್ಯಾತ ಸಾಹಿತಿ ಮಾಕ್ ð ಟ್ವೇನ್ ಹೇಳುವಂತೆ “ಪ್ರತಿಯೊಬ್ಬರೂ ತಾನಿರುವ ಸ್ಥಿತಿಯಲ್ಲಿ ಉಳಿದರೆ ಪ್ರಪಂಚದಲ್ಲಿ ಹೀರೋಗಳೇ ಇರುವುದಿಲ್ಲ.”ದುರ್ಬಲ ಹೃದಯದವರಾಗಿ ನಿನ್ನೆ ಅನ್ನುವ ಕಳೆದು ಹೋಗಿರುವ ಇತಿಹಾಸದಲ್ಲಿ ಉಳಿದು ಬಿಟ್ಟರೆ ತೊಂದರೆ ಖಚಿತ.“ಉತ್ಸಾಹ ಎನ್ನುವುದು ಕಲ್ಲಿದ್ದಲಿನೊಳಗಿನ ಕಾವು ಆಗಬೇಕೇ ಹೊರತು ಹುಲ್ಲು ಮೆತ್ತೆಗೆ ಹತ್ತಿದ ಬೆಂಕಿ ಆಗಬಾರದು.”ಎಷ್ಟೋ ಸಲ ಗೆಲುವಿನ ಹತ್ತಿರವೇ ಇದ್ದರೂ ಗಡಿಬಿಡಿಯಲ್ಲಿ ಸೋಲಿನತ್ತ ಹೊರಳುತ್ತೇವೆ. ಕೊನೆ ಹನಿ ಗೆಲುವನ್ನು ನಮ್ಮದಾಗಿಸಿಕೊಳ್ಳಲು ಅಲ್ಪಾಸೆಗೆ ಒಳಗಾಗುತ್ತೇವೆ. ಶ್ರಮದ ಬದಲು ಅಡ್ಡ ದಾರಿ ಹಿಡಿಯುತ್ತೇವೆ. ‘ಗೆಲುವು ಎಂದರೆ ಭೂಮಿಯನ್ನು ಅಗೆದು, ಮರಳನ್ನು ಜಾಲಾಡಿಸಿ ಚಿನ್ನವನ್ನು ತೆಗೆಯುವ ಪ್ರಯತ್ನದಂತೆ.ಕಷ್ಟಪಟ್ಟು ಜಾಲಾಡಿದರೆ ಕೊನೆಗೊಂದು ದಿನ ಸಿಗುವುದು.. ಪ್ರಯತ್ನದಿಂದ ಗೆಲುವಿನ ಸಾಗರವೇ ನಮ್ಮದಾಗುವುದು. ತಾಳ್ಮೆ ಬೇಕಷ್ಟೇ.ಕ್ಷಣಿಕ ಕ್ಷುಲ್ಲಕ ಆಸೆಗಳನ್ನು ಬಿಟ್ಟು ಅಮೃತದಂಥ ಪ್ರಯತ್ನದ ಬೆನ್ನು ಹತ್ತಬೇಕು. ಹತ್ತು ಹಲವು ಕಡೆ ಹಾರುವ ಚಂಚಲ ಮನವನ್ನು ಗುರಿಯತ್ತ ನೆಲೆಯಾಗಿಸುವುದರಲ್ಲೇ ಗೆಲುವಿದೆ. ನಿರಂತರ ಪ್ರಯತ್ನಿಸುವವನಿಗೆ ಗೆಲುವು ತಾನಾಗಿಯೇ ಕೈ ಚಾಚಿ ಅಪ್ಪಿಕೊಳ್ಳುತ್ತದೆ. ಬದುಕಿನ ಹಸಿ ಗೋಡೆಯ ಮೇಲೆ ಗೆಲುವಿನ ಹೊಸ ಚಿತ್ತಾರ ಬರೆಯುತ್ತದೆ. ************************************ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು
ಗೆಲುವಿಗೆ ಶತ್ರುಗಳಿವೆ. . . . ಎಚ್ಚರಿಕೆ‼ Read Post »
ಸೃಜನಶೀಲರಾಗಿ ಯಶಸ್ವಿ ವ್ಯಕ್ತಿಗಳಾಗಿ ಸಾಮಾನ್ಯವಾಗಿ ನಾವು ಮಾಮೂಲಿ ಕೆಲಸಗಳನ್ನು ಮಾಮೂಲಿ ರೀತಿಯಲ್ಲಿ ಮಾಡಿ ಅತ್ಯದ್ಭುತ ಫಲಿತಾಂಶ ಬಯಸುತ್ತೇವೆ. ನಾವು ಮಾಡುತ್ತಿರುವ ಕೆಲಸವನ್ನು ಎಂದಿನಂತೆ ಮಾಡುವ ರೀತಿಯಲ್ಲಿಯೇ ಮುಂದುವರೆಸಿದರೆ ಹಿಂದೆ ಬಂದ ಫಲಿತಾಂಶವೇ ಬರುವುದು ಸಹಜ. ಕೆಲವರು ನಾವು ಮಾಡುತ್ತಿರುವ ಕೆಲಸವನ್ನೇ ಮಾಡಿ ನೋಡ ನೋಡುತ್ತಿದ್ದಂತೆ ಗೆಲುವು ಪಡೆಯುತ್ತಾರೆ. ಎಲ್ಲರ ನೆದರಿನಲ್ಲಿಯೂ ಮಿಂಚುತ್ತಾರೆ.ತಾವೂ ಹಿಗ್ಗಿ ಹಲಸಿನಕಾಯಿಯಾಗುತ್ತಾರೆ. ಅದನ್ನು ನಾವು ಬೆರಗುಗಣ್ಣುಗಳಿಂದ ನೋಡುತ್ತಲೇ ಇದ್ದು ಬಿಡುತ್ತೇವೆ. ಅವರು ಅದೃಷ್ಟವಂತರು ಎಂಬ ಹಣೆಪಟ್ಟಿ ಕಟ್ಟುತ್ತೇವೆ. “ಮನುಷ್ಯನು ತನ್ನ ಕುರಿತು ತಾನೇನು ಅಂದುಕೊಳ್ಳುತ್ತಾನೋ ಅದೇ ಆತನ ಅದೃಷ್ಟವನ್ನು ನಿರ್ಣಯಿಸುತ್ತದೆ.” ಎನ್ನುವ ಎಚ್ ಡಿ ಥೋರೇ ಅವರ ಮಾತನ್ನು ಕಿವಿಗೆ ಹಾಕಿಕೊಳ್ಳದೇ ನಾವು ತುಂಬಾ ದುರದೃಷ್ಟವಂತರು ಎಂದು ಕರಬುತ್ತೇವೆ.. ನಿಜ ಸಂಗತಿ ಎಂದರೆ “ಜಯಶಾಲಿಗಳು ವಿಭಿನ್ನ ಕೆಲಸಗಳನ್ನೇನೂ ಮಾಡುವುದಿಲ್ಲ; ಅವರು ಕೆಲಸ ಮಾಡುವ ರೀತಿ ವಿಭಿನ್ನವಾಗಿರುತ್ತದಷ್ಟೆ.”ಮಾಡುವ ಕಾರ್ಯಗಳ ಬಗೆಗೆ ಹಳೆಯದರ ಆಧಾರದ ಮೇಲೆ ವಿಭಿನ್ನವಾಗಿ ವಿಚಾರ ಮಾಡಿ ಹೊಸ ರೀತಿಯಲ್ಲಿ ನಿರ್ವಹಿಸುವುದೇ ಸೃಜನಶೀಲತೆ ಎಂದು ಕರೆಸಿಕೊಳ್ಳುತ್ತದೆ. ಹಳೆಯ ಪದ್ದತಿಗಳನ್ನು ನಂಬಿಕೊಂಡು ಅದಕ್ಕೆ ಜೋತು ಬಿದ್ದು ಪಡೆದ ಜ್ಞಾನವನ್ನು ಅರಿವಾಗಿಸಿಕೊಳ್ಳದೇ ಅಜ್ಜ ನೆಟ್ಟ ಆಲದ ಮರಕ್ಕೆ ಜೋತು ಬೀಳುವ ರೀತಿಯಲ್ಲಿ ಮುನ್ನಡೆಯುತ್ತಿರುವುದರಿಂದ ಹೀಗಾಗುತ್ತಿದೆ. ಈ ಮನಸ್ಥಿತಿಯಿಂದ ನಾವಿಂದು ಹೊರಬರಲೇಬೇಕಿದೆ. ಇಂಥ ಮನೋಭಾವವನ್ನು ಕಂಡು ಕಾಳಿದಾಸ “ಹಳೆಯದು ಎಂದ ಮಾತ್ರಕ್ಕೆ ಎಲ್ಲವೂ ಒಳ್ಳೆಯದಲ್ಲ.” ಎಂದು ಹೇಳಿ ಹಳೆಯದರ ಪರಿಮಿತಿಯೆಡೆಗೆ ನಮ್ಮ ಗಮನ ಸೆಳೆದಿದ್ದಾನೆ. ಇತಿಹಾಸದ ಪುಟಗಳಲ್ಲಿ ಯಶಸ್ವಿ ವ್ಯಕ್ತಿಗಳಾಗಿ ತಮ್ಮ ಹೆಸರು ದಾಖಲಿಸಿಕೊಂಡ ಅಲ್ಬರ್ಟ್ ಐನಸ್ಟೀನ್, ಸಿ ವಿ ರಾಮನ್ ಥಾಮಸ್ ಅಲ್ವಾ ಎಡಿಸನ್, ಸರ್ ಎಮ್ ವಿಶ್ವೇಶ್ವರಯ್ಯನವರಂಥವರ ಯಶಸ್ಸಿಗೆ ಸೃಜನಶೀಲತೆಯು ಬಹುಮುಖ್ಯ ಪಾತ್ರ ವಹಿಸಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಸೃಜನಶೀಲತೆ ಎಂದರೆ. . . . .? “ಮಾಡುವ ಕೆಲಸ ಕಾರ್ಯಗಳನ್ನು ಸಾಮಾನ್ಯವಾಗಿ ಯೋಚಿಸದೇ ವಿಭಿನ್ನ ದೃಷ್ಟಿಕೋನದಿಂದ ಆಲೋಚಿಸಿ ಹೊಸ ಸಂಶೋಧನೆಗಳಿಗೆ ಆವಿಷ್ಕಾರಗಳಿಗೆ ಮುನ್ನುಡಿ ಬರೆಯಲು ಸಹಕರಿಸುವ ಅಂಶವೇ ಸೃಜನಶೀಲತೆ ಎಂದು ಸೃಜನಶೀಲತೆಯು ನಮ್ಮನ್ನು ಇತರರಿಂದ ವಿಭಿನ್ನ ಎಂದು ತೋರಿಸುತ್ತದೆ. ಜಗತ್ತಿನಲ್ಲಿ ಕುತೂಹಲಕಾರಿ ವಿಸ್ಮಯಕಾರಿ ಸಂಗತಿಗಳೆಡೆಗೆ ಕಣ್ಣರಳಿಸಿ ನೋಡುತ್ತ ಈ ಸತ್ಯ ಸಂಗತಿಗಳ ಬೆನ್ನು ಹತ್ತಿ ತಿಳಿದುಕೊಳ್ಳುವ ಹಂಬಲವನ್ನು ಮನದಲ್ಲಿ ತುಂಬಿಕೊಂಡು ನಾವೂ ಅಂಥ ಚಕಿತಗೊಳಿಸುವ ¸ಸಂಗತಿಗಳನ್ನು ಇದ್ದುದರಲ್ಲಿಯ ನ್ಯೂನತೆಗಳನ್ನು ತಿದ್ದಿ ಉತ್ತಮ ಪಡಿಸುವುದು ಹೇಗೆ ಎಂದು ನಿರಂತರವಾಗಿ ಯೋಚಿಸಿ ಊಹಿಸಿ ಕಲ್ಪನೆಗಳನ್ನು ಕಟ್ಟಿಕೊಂಡು ಆ ಕಲ್ಪನೆಗಳನ್ನು ನನಸಾಗಿಸುವುದೇ ಸೃಜನಶೀಲತೆ.ಹೊಸತನಕ್ಕೆ ತುಡಿಯುವ ಮನ ಸಹಜವಾಗಿ ಸೃಜನಶೀಲತೆಯತ್ತ ವಾಲುತ್ತದೆ. ಇಂಥವರನ್ನು ಸೃಜನಶೀಲ ಮನಸ್ಸುಳ್ಳವರು ಎಂದು ಗುರುತಿಸಿ ಗೌರವಿಸುತ್ತೇವೆ. ನೀವೂ ಸೃಜನಶೀಲರಾಗಬೇಕೇ? ಹಾಗಾದರೆ ಈ ಅಂಶಗಳನ್ನು ನಿಮ್ಮದಾಗಿಸಿಕೊಳ್ಳಿ ಪ್ರಶ್ನಿಸುವುದನ್ನು ರೂಢಿಸಿಕೊಳ್ಳಿ ಯಾರೋ ಏನೋ ಹೇಳಿದರು ಎಂದು ಸುಮ್ಮನೆ ನಂಬಿ ಬಿಡಬೇಡಿ. ಪ್ರಶ್ನಿಸಿಕೊಳ್ಳಿ ಅದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಿ. ಉತ್ತರ ನಿಮಗೆ ಸಮಾಧಾನ ನೀಡುವವರೆಗೆ ಪ್ರಯತ್ನ ಮುಂದುವರೆಯಲಿ. ಕುತೂಹಲವಿರಲಿ ಮೂಲತಃ ಸೃಜನಶೀಲತೆ ನಿಂತಿರುವುದೇ ಕುತೂಹಲ ಪ್ರವೃತ್ತಿಯ ಮೇಲೆ. ಯಾವುದೇ ಸಂದರ್ಭ ಸನ್ನಿವೇಶ ಪ್ರಸಂಗಗಳಲ್ಲಿಯ ಅನುಭವಗಳನ್ನು ಕುತೂಹಲ ದೃಷ್ಟಿಯಲ್ಲಿಯೇ ನೋಡುವುದು. ಕುತೂಹಲಭರಿತರಾಗಿಯೇ ಆಸ್ವಾದಿಸುವುದನ್ನು ಮೈಗೂಡಿಸಿಕೊಳ್ಳಿ. ಸ್ವಂತಿಕೆಯ ಹಂಬಲವಿರಲಿ ಮತ್ತೊಬ್ಬರ ವಿಚಾರಗಳನ್ನು ಅಂಧಾನುಕರಣೆಯಂತೆ ಒಪ್ಪದಿರಿ. ಪರಾಮರ್ಶಿಸಿ ಸ್ವತಂತ್ರವಾದ ನಿಲುವುಗಳನ್ನು ತಳೆಯಿರಿ. ಈ ಪ್ರಕ್ರಿಯೆ ನಡೆಯುತ್ತಿರುವಾಗ ಮಾನಸಿಕ ಸಂಘರ್ಷ ನಡೆಯುತ್ತದೆ. ನೀವು ತೆಗೆದುಕೊಂಡ ಸ್ವತಂತ್ರ ನಿರ್ಧಾರಗಳಿಗೆ ಪ್ರಬಲವಾದ ಸಮರ್ಥನೆಗಳಿರಲಿ.ಅವು ವಾಸ್ತವಿಕತೆಯಿಂದ ಕೂಡಿರಲಿ. ಕಲ್ಪನಾಶಕ್ತಿ ಪುಟಿಗೊಳಿಸಿ ಊಹಿಸುವ ಸಾಮರ್ಥ್ಯವೇ ಕಲ್ಪನಾಶಕ್ತಿ. ಅಗಾಧವಾದ ಕಲ್ಪನಾಶಕ್ತಿಯನ್ನು ಪುಟಿಗೊಳಿಸಿ ಸಾಧಿಸಬೇಕೆನ್ನುವ ಕ್ಷೇತ್ರದಲ್ಲಿ ಪೂರ್ವ ನಿರ್ಧರಿತ ಪರಿಕಲ್ಪನೆಗಳನ್ನು ಬಳಸಬೇಕೆಂದರೆ ಕಲ್ಪನಾಶಕ್ತಿ ಅತ್ಯಗತ್ಯ. ಕಲ್ಪನಾಶಕ್ತಿಯನ್ನು ವೃದ್ಧಿಸಿಕೊಂಡಷ್ಟು ವಿಷಯ ವಿಸ್ತರಿಸುವ ವಿಷ್ಲೇಶಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ. ಸಣ್ಣ ಸಂಗತಿಯನ್ನೂ ವಿಭಿನ್ನ ಆಯಾಮದಿಂದ ನೋಡಿ ಅದಕ್ಕೆ ಹೊಸ ರೂಪವನ್ನು ನೀಡಲು ಸಾಧ್ಯವಾಗುವುದು. ಪ್ರಯೋಗಶೀಲತೆ ಇರಲಿ ಪ್ರಯೋಗಶೀಲತೆಯನ್ನು ಸೃಜನಶೀಲತೆಯ ತಾಯಿ ಎಂದು ಕರೆಯಬಹುದು. ಕೇಳಿದ ತಿಳಿದ ವಿಷಯಗಳ ಬಗ್ಗೆ ಗೋಚರ ಇಲ್ಲವೇ ಅಗೋಚರ ರೀತಿಯಲ್ಲಿ ಪ್ರಯೋಗಶೀಲತೆ ನಿರಂತರವಾಗಿ ನಡೆಸಿ. ಇದು ಅಪರೋಕ್ಷವಾಗಿ ನಿಮ್ಮಲ್ಲಿ ಸಾಹಸ ಪ್ರವೃತ್ತಿಗೆ ಬೇಕಾದ ಅಸಾಧಾರಣ ಧೈರ್ಯವನ್ನು ತುಂಬುತ್ತದೆ. ಸವಾಲುಗಳನ್ನು ಸ್ವೀಕರಿಸುವ ಮನೋಭಾವ ಬೆಳೆಸುತ್ತದೆ. ಚಿಂತನೆಯ ರೀತಿ ಬದಲಿಸಿ ಹೇಳಿದ್ದನ್ನು ಕೇಳಿದ್ದನ್ನು ಓದಿದ್ದನ್ನು ಬರೆದಿದ್ದನ್ನು ಏಕಮುಖೀ ರೀತಿಯಲ್ಲಿ ಯೋಚಿಸಿ ಒಪ್ಪಿಕೊಂಡು ಬಿಡದೇ ಯಾವುದೇ ಒಂದು ವಿಷಯದ ಬಗ್ಗೆ ವಿವಿಧ ಆಯಾಮಗಳಲ್ಲಿ ಚಿಂತಿಸಿದರೆ ಒಂದೇ ಕಾರ್ಯವನ್ನು ವಿವಿಧ ರೀತಿಯಲ್ಲಿ ಮಾಡಲು ಹಲವಾರು ಸಾಧ್ಯತೆಗಳು ಸಿಗುತ್ತವೆ. ಹೀಗೇ ನಿಮ್ಮ ಏಕ ಮುಖಿ ಚಿಂತನೆಯನ್ನು ಬಹುಮುಖಿ ಚಿಂತನಾ ವಲಯಕ್ಕೆ ವಿಸ್ತರಿಸಿಕೊಳ್ಳಿ. ಹೊಸತನದ ಜೊತೆಗೆ ಮುಕ್ತತೆ ಇರಲಿ ಸೃಜನಶೀಲತೆಯು ಹೊಸತನದ ವಿನ್ಯಾಸದಲ್ಲಿಯೇ ಅಡಗಿದೆ. ನೊಡುವ ನೋಟದಲ್ಲಿ, ಕಾರ್ಯ ನಿರ್ವಹಣೆಯಲ್ಲಿ,ಚಿಂತನೆಯಲ್ಲಿ ವರ್ತನೆಯಲ್ಲಿ ಒಟ್ಟಿನಲ್ಲಿ ಪ್ರತಿಯೊಂದರಲ್ಲಿ ಹೊಸತನವೇ ಮಿಂಚುತಿರಲಿ. ಪೂರ್ವಾಗ್ರಹಪೀಡಿತರಾಗಿ ಯಾವುದೇ ಒಂದು ನಿರ್ಧಿಷ್ಟ ವಿಚಾರಗಳಿಗೆ ಕಟ್ಟಿ ಹಾಕಿಕೊಳ್ಳಬೇಡಿ. ಎಲ್ಲವನ್ನೂ ಮುಕ್ತ ಮನಸ್ಸಿನಿಂದ ಸ್ವಾಗತಿಸಿ. ಸಾಧಕ ಬಾಧಕಗಳನ್ನು ಗಮನದಲ್ಲಿರಿಸಿ ಕಾರ್ಯೋನ್ಮುಖರಾಗುವುದು ಉಚಿತ. ಉತ್ಸಾಹ ಚಿಮ್ಮುತಲಿರಲಿ ಉತ್ಸಾಹ ಹೊಸತನದ ಹೊಸ್ತಿಲಲ್ಲಿ ವಿವಿಧ ರೀತಿಯ ನೂತನ ವಿಚಾರಗಳಿಗೆ ನಾಂದಿ ಹಾಡುತ್ತದೆ. ಪ್ರತಿ ಬಾರಿ ಹೊಸತನಕ್ಕೆ ತುಡಿಯುವದರ ಜೊತೆಗೆ ಹಳೆಯದರಲ್ಲಿ ಅತ್ಯುತ್ತಮವಾದುದನ್ನು ಹೆಕ್ಕಿ ತೆಗೆಯಬೇಕು.ಅದನ್ನೇ ಬುನಾದಿಯನ್ನಾಗಿಸಿಕೊಂಡರೆ ಅವಿಷ್ಕಾರ ಪ್ರವೃತ್ತಿಯು ನಿಮ್ಮದಾಗುತ್ತದೆ. ಅವಿಷ್ಕಾರ ಪ್ರವೃತ್ತಿಯು ನಿಮ್ಮನ್ನು ಗೆಲುವಿನ ಶಿಖರದ ತುತ್ತ ತುದಿಯ ಮೇಲೆ ನಿಲ್ಲುವಂತೆ ಮಾಡುತ್ತದೆ. ಪ್ರೇರೇಪಿಸಿಕೊಳ್ಳಿ ಸೃಜನಶೀಲತೆಗೆ ಎಲ್ಲಡೆಯೂ ಮಣೆ ಮನ್ನಣೆ ಹೊಗಳಿಕೆ ಇದ್ದೇ ಇದೆ. ಇದರಿಂದ ಬಹಿರಂಗ ಪ್ರೇರಣೆ ದೊರೆಯುವುದು ಖಚಿತ. ಕೇವಲ ಬಹಿರಂಗ ಪ್ರೇರಣೆಯೊಂದೇ ಸಾಲದು. ಈ ಬಹಿರಂಗ ಪ್ರೇರಣೆ ಅಂತಃಪ್ರೇರಣೆಯಾಗಿ ಪರಿವರ್ತನೆಯಾಗಬೇಕು. ನಿಮ್ಮನ್ನು ಪ್ರೇರೇಪಿಸಿಕೊಂಡಾಗ ಮಾತ್ರ ಸೃಜನಶೀಲತೆ ಹೊರೆ ಹೊಮ್ಮುವುದು. ಸೃಜನಶೀಲತೆಯು ಎಲ್ಲರಿಗೂ ಎಟಕುವಂಥದ್ದು..ಏಕೆಂದರೆ ಇದು ಮಾನವ ಸಹಜವಾದ ಗುಣ. ದಿನ ನಿತ್ಯದ ಬದುಕಿನಲ್ಲಿ ಜೀವನೋತ್ಸಾಹವನ್ನು ತುಂಬಿಕೊಂಡು ಸುತ್ತಮುತ್ತಲಿರುವ ಸಂಗತಿಗಳೆಡೆಗೆ ಆಸಕ್ತಿ ಯ ಕಂಗಳಿಂದ ನೋಡುವುದನ್ನು ರೂಢಿಸಿಕೊಂಡರೆ ಸೋಲಲ್ಲೂ ಸಂಭ್ರಮಿಸುವ ಗಳಿಗೆ ಸನ್ನಿಹಿತವಾಗುವುದು. ಸೋಲನ್ನು ಗೆಲುವಾಗಿ ಪರಿವರ್ತಿಸುವ ಗುಣ ಸೃಜನಶೀಲತೆಗಿದೆ. ಬದುಕಿನ ಎಲ್ಲ ಹಂತದ ಕಾರ್ಯಗಳ ಗೆಲುವಿಗೂ ಸೃಜನಶೀಲತೆ ಬೇಕೇ ಬೇಕು. ಸೃಜನಶೀಲತೆಯು ವಿವೇಕವನ್ನು ಹೆಚ್ಚಿಸುವುದು.ಎಂಥ ಕ್ಲಿಷ್ಟಕರ ಸನ್ನಿವೇಶಗಳಲ್ಲೂ ಸಹನೆ ಕಳೆದುಕೊಳ್ಳದೇ ಪರಿಹಾರ ಕಂಡುಕೊಳ್ಳುವ ಪಕ್ವತೆ ನೀಡುವ ಶಕ್ತಿ,ನಮ್ಮ ಎಲ್ಲ ಶಕ್ತಿಗಳನ್ನು ಸಮರ್ಥವಾಗಿ ಉಪಯೋಗಿಸಿ ಸರ್ವತೋಮುಖ ವ್ಯಕ್ತಿತ್ವ ನೀಡುವ ಶಕ್ತಿ ಸೃಜನಶೀಲತೆಗೆ ಮಾತ್ರ ಇದೆ. ನೀವು ಯಶಸ್ಸು ಗಳಿಸಬೇಕೆಂದರೆ ನೀವು ನೂತನ ದಾರಿಗಳನ್ನು ಆರಿಸಬೇಕು.ಈಗಾಗಲೇ ಒಪ್ಪಿರುವ ನಡೆದಾಡಿರುವ ದಾರಿಗಳನ್ನು ಹೊರತುಪಡಿಸಿ ಸೃಜನಶೀಲತೆಯು ವಿಶ್ವದಾದ್ಯಂತ ಬಂದೂಕಿನ ಗುಂಡುಗಳಿಗಿಂತ ಹೆಚ್ಚು ಶಬ್ದ ಮಾಡುತ್ತ ಸಾಗುತ್ತದೆ ಎನ್ನುವುದು ನೆನಪಿರಲಿ. ಹಾಗಾದರೆ ತಡವೇಕೆ ಸೃಜನಶೀಲರಾಗಿ ಯಶಸ್ವಿ ವ್ಯಕ್ತಿಗಳಾಗಿ. *********************** ಲೇಖಕರ ಬಗ್ಗೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು
ದಿಕ್ಸೂಚಿ
ಸೋಲಿನ ಸುಳಿಯಲ್ಲೇ ಗೆಲುವಿನ ತುದಿಯಿದೆ! ಎಷ್ಟೆಲ್ಲ ಅನುಭವಗಳ ಮೂಟೆಯನ್ನು ಬೆನ್ನಿಗೆ ಕಟ್ಟಿಕೊಂಡು ತಿರುಗಿದರೂ ಗೆಲುವು ಮಿಂಚಿನಂತೆ ಅರೆಗಳಿಗೆ ಮಿಂಚಿ ಮಾಯವಾಗುತ್ತದೆ.ಇಲ್ಲಿ ಎಲ್ಲದರಲ್ಲೂ ಒತ್ತಡ. ಯಾವುದೂ ಸರಳ ರೇಖೆಯಲ್ಲಿ ಸಿಗುವುದಿಲ್ಲ. ಎಲ್ಲವನ್ನೂ ವಕ್ರ ರೇಖೆಯ ಕಾಣದ ತಿರುವುಗಳಲ್ಲಿ ಶ್ರಮ ಹಾಕಿಯೇ ಪಡೆಯಬೇಕು.ಕೆಲವೊಮ್ಮೆ ಶ್ರಮ ಹಾಕಿದರೂ ಮುಖ ಎತ್ತಿಯೂ ನೋಡದೇ, ಬೆನ್ನು ತೋರಿಸಿ ನಗುತ್ತದೆ. ಕೈಗೆ ಸಿಗದೇ ಓಡಿ ಬಿಡುತ್ತದೆ ಗೆಲುವು! ಒಮ್ಮೊಮ್ಮೆ ನನಗೇ ತಿಳಿಯದಂತೆ ಮೇಲಕ್ಕೆತ್ತರಿಸಿ ಕೂರಿಸುತ್ತದೆ. ಮತ್ತೊಮ್ಮೆ ನಿರೀಕ್ಷಿಸಿದರೂ ಕೈಗೆ ಸಿಗದೇ ಕೆಳಕ್ಕೆ ಎಸೆದು ಬಿಡುತ್ತದೆ. ಹೆದರಿಸಿ ಬೆನ್ನಲ್ಲಿ ಬೆವರಿಳಿಸಿದ ಸೋಲಿನ ಘಟನೆಗಳನ್ನು ನೆನದಾಗಲೊಮ್ಮೆ ಗೆಲುವಿನ ರುಚಿಯ ಆಸೆಯೇ ಬೇಡ ಎಂದೆನಿಸಿ ಬಿಡುತ್ತದೆ.ಸೋಲಿನ ಸಹವಾಸ ಸಾಕಾಗಿ ಒಮ್ಮೆ ಸರಿದು ನಿಂತು ಬದುಕಿನ ಕಪಾಳಕ್ಕೆ ಬಾರಿಸಲೇ ಎನಿಸುವಷ್ಟು ಕೋಪ ನೆತ್ತಿಗೇರುತ್ತದೆ. ಆದರೆ, ಎಷ್ಟೇ ಆಗಲಿ ಬದುಕು ನನ್ನದೇ ಅಲ್ಲವೇ? ಅದಕ್ಕೆ ನೋವಾದರೆ ಮರಳಿ ನನಗೂ ನೋವಾಗುವುದಲ್ಲವೇ? ಎನ್ನುತ್ತ ಹಲ್ಲು ಕಿತ್ತ ಹಾವಿನಂತೆ ಬಲಹೀನನಾಗಿ ಬಿಡುತ್ತೇನೆ. ಸೋಲಿನ ಮಡುವಿನಲ್ಲಿ ಬಿದ್ದು ಒದ್ದಾಡುವಾಗ ಈ ಕ್ಷಣವೇ ನನ್ನನ್ನು ನನ್ನ ಬಂಧು ಬಾಂಧವರು ಶವ ಪೆಟ್ಟಿಗೆಯಲ್ಲಿಟ್ಟು ಕೈ ತೊಳೆದುಕೊಳ್ಳಬಾರದೇ ಎಂದೆನಿಸದೇ ಇರದು. ಸೋಲು ಕಂಡಾಗ ಜೊತೆಗಿದ್ದವರು ದೂರವಾಗುವರು.ಕೆಲಸಕ್ಕೆ ಬಾರದವನು, ಕೈಲಾಗದವನು,ಎಂದು ಚುಚ್ಚು ಮಾತುಗಳಲ್ಲೇ ಚುಚ್ಚುವರು. ಇದೆಲ್ಲ ಏನು ಅಂತಿರೇನು? ಸಾಲು ಸಾಲು ಸೋಲುಂಡ ಜೀವಿಗಳ ಸ್ವಗತ. ಅಷ್ಟಕ್ಕೂ ಗೆಲುವು ಎಂದರೇನು? ಸೋಲಿನ ಸುಳಿಯಲ್ಲೇ ಇರುವ ಗೆಲುವಿನ ತುದಿ ಹಿಡಿಯಲು ಕುತೂಹಲ ಅಲ್ಲವೇ? ಹಾಗಾದರೆ ಮುಂದಿನ ಸಾಲುಗಳಿಗೆ ಕಣ್ಣು ಹಾಯಿಸಿ. ಗೆಲುವು ಎಂದರೇನು? ಗೆಲುವನ್ನು ವ್ಯಾಖ್ಯಾನಿಸುವುದು ಜೀವನವನ್ನು ಪುಟವೊಂದರಲ್ಲಿ ಹಿಡಿದಿಟ್ಟಷ್ಟೇ ಕಠಿಣ. ಹಾಗೆ ನೋಡಿದರೆ ಗೆಲುವು ಅನ್ನೋದು ಅವರವರ ಭಾವಕ್ಕೆ ಬಿಟ್ಟದ್ದು. ಕೆಲವರಿಗೆ ಹಣದೊಡೆಯರಾಗುವುದು ಗೆಲುವಾದರೆ, ಇನ್ನೂ ಕೆಲವರಿಗೆ ಆಟೋಟಗಳಲ್ಲಿ ಚಾಂಪಿಯನ್ ಆಗುವುದು. ತಾವು ದಾಖಲಿಸಿದ ದಾಖಲೆಗಳನ್ನು ತಾವೇ ಮುರಿಯುವುದು. ಇತರರ ಹೆಸರಲ್ಲಿರುವ ದಾಖಲೆಯನ್ನು ಸರಿಗಟ್ಟುವುದು.ಉದ್ಯಮಿಯಾಗುವುದು, ಸ್ವ ಉದ್ಯೋಗ, ಸರಕಾರಿ ನೌಕರಿ ಇನ್ನೂ ಹತ್ತು ಹಲವು.ಈಗ ನಮ್ಮ ಹತ್ತಿರ ಏನಿದೆಯೋ [ಮನೆ, ಶಿಕ್ಷಣ, ಹಣ, ಉದ್ಯೋಗ] ಅಷ್ಟನ್ನು ಪಡೆಯುವ ಕನಸು ಕಾಣುತ್ತಿರುವವರಿಗೆ ಅವುಗಳನ್ನೆಲ್ಲ ಪಡೆಯುವುದೇ ಗೆಲುವು.ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಗೆಲುವು ಎಲ್ಲ ಕಾಲಕ್ಕೂ ಎಲ್ಲರಿಗೂ ಸಾಮಾನ್ಯವಾಗಿರುವುದಲ್ಲ. ವಯೋಮಾನ ಸ್ಥಿತಿ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುವಂಥದು. ಅರ್ಲ್ ನೈಟಿಂಗೇಲ್ರ ಪ್ರಕಾರ ‘ಅರ್ಹ ಅಥವಾ ಯೋಗ್ಯವಾದ ಗುರಿಯನ್ನು ಪ್ರಗತಿಪೂರ್ವಕವಾಗಿ ಸಾಧಿಸುವ ಪರಿಯೇ ಯಶಸ್ಸು’ ನೂರಾರು ಚಿಂತೆ ಕೋಟಲೆಗಳ ಮೀರಿ ಎದ್ದು ನಿಲ್ಲುವುದು ಯಶಸ್ಸು. ದೊಡ್ಡ ದೊಡ್ಡ ಕನಸು ಕಾಣುವುದು ಗೆಲುವಲ್ಲ. ಅವುಗಳು ನನಸಾಗುವವರೆಗೆ ಬೆನ್ನು ಹತ್ತುವುದು ಗೆಲುವು. ಅಂದ ಹಾಗೆ ಸೋಲಿನ ಸುಳಿಯಲ್ಲೇ ಗೆಲುವಿದೆ. ಅದ್ಹೇಗೆ ಅಂತಿರೇನು? ಸೋಲಿನ ಸಹವಾಸವೇ ಸಾಕಪ್ಪಾ ಎಂದು ಸೋಲನ್ನಪ್ಪಿಕೊಳ್ಳುವಾಗ ಎರಡು ಹೆಜ್ಜೆ ಮುಂದಿಟ್ಟರೆ ಸಾಕು ಗೆಲುವು ತಾನಾಗಿಯೇ ನಮ್ಮ ಕೈ ಹಿಡಿಯುತ್ತದೆ. ಬನ್ನಿ ಸೋಲಿನ ಸುಳಿಯಲ್ಲಿ ಗೆಲುವು ಹೇಗೆ ಅಡಗಿದೆ ನೋಡೋಣ. ಬೇರು ಕಿತ್ತೊಗೆಯಿರಿ ಸೋಲನ್ನು, ಬೇಡ ಬೇಡವೆಂದರೂ ಕಾಲಿಗೆ ತೊಡರಿಸಿಕೊಳ್ಳುವ ಕಸದ ಬಳ್ಳಿಯೆಂದು ತಿಳಿಯುವುದು ತಪ್ಪು. ಉಪಾಯವಿಲ್ಲದೇ ತಂತ್ರಗಳಿಲ್ಲದೇ ಕೈ ಹಾಕಿದರೆ, ಕೈ ಹಾಕಿದ ಕೆಲಸ ಕೈಗೂಡುವುದಿಲ್ಲ.ಸೋಲಿನ ಎದೆಯೊಳಗೆ ಇಣುಕಿ ನೋಡಬೇಕು. ಆಗ ಅದು ತನ್ನ ಅಂತರಾಳದ ನೋವನ್ನು ಬಿಚ್ಚಿಡುತ್ತದೆ.ಇತರರ ಗೆಲುವು ಕಂಡು ಹೊಟ್ಟೆ ಕಿಚ್ಚು ಹೆಚ್ಚಾಯಿತೇ ಹೊರತು ನಿನ್ನ ಗುರಿಯ ಕಿಚ್ಚು ಹೆಚ್ಚಾಗಲಿಲ್ಲ ಎಂದು ಅಳುತ್ತದೆ. ಸೋತೆನೆಂದು ನಿರಾಸೆಯಿಂದ ಕೈ ಚೆಲ್ಲಿ ಕುಳಿತಿಯೇ ಹೊರತು ನಾ ಹೊತ್ತು ತಂದ ಪಾಠವನ್ನು ಆಸೆಯಿಂದ ಸ್ವೀಕರಿಸಲೇ ಇಲ್ಲ. ಕೊರತೆ ಇರುವುದು ನಿನ್ನಲ್ಲಿಯೇ ಹೊರತು ನನ್ನಲ್ಲಲ್ಲ ಎಂದು ಬಿಕ್ಕುತ್ತದೆ. ಹಾಗಾದರೆ ನಾವು ಸೋಲು ತನ್ನ ಬೆನ್ನ ಮೇಲೆ ಹೊತ್ತು ತಂದಿರುವ ಪಾಠವನ್ನು ಅರ್ಥೈಸಿಕೊಳ್ಳಲು ಮುಂದಾಗಬೇಕು ಎಂದಂತಾಯಿತು. ಸೋಲಿನ ಕುರಿತಾಗಿರುವ ಹತಾಶೆ ನಿರಾಶೆಯ ಬೇರುಗಳನ್ನು ಹುಡುಕಿ ಅವುಗಳನ್ನು ಬೇರು ಸಮೇತ ಕಿತ್ತೊಗೆಯಬೇಕು. ಸೋಲೇ ಗೆಲುವಿನ ಸೋಪಾನವೆಂದು ಯಾವ ಅಂಶಗಳ ಕೊರತೆಯಿಂದ ಸೋತೆ ಎಂದು ಆತ್ಮಾವಲೋಕನ ಮಾಡಿಕೊಂಡು ಮುನ್ನುಗ್ಗಬೇಕು.ಆಗ ಗೆಲುವು ಒಂದು ಹೆಜ್ಜೆ ಸನಿಹ ಬರುವುದು. ತಪ್ಪುಗಳ ಪಟ್ಟಿ ಮಾಡಿ ‘ಮಾನವ ಯಶಸ್ಸಿನಿಂದ ಕಡಿಮೆ ಕಲಿಯುತ್ತಾನೆ. ವೈಫಲ್ಯತೆಯಿಂದ ಹೆಚ್ಚು ಕಲಿಯುತ್ತಾನೆ.’ಎನ್ನುತ್ತಾರೆ ಪ್ರಾಜ್ಞರು. ಕಂಡ ಸೋಲಿನಲ್ಲಿ ಮಾಡಿದ ಮುಖ್ಯ ತಪ್ಪುಗಳನ್ನು ಪಟ್ಟಿ ಮಾಡಿ ಒಂದು ವರದಿಯನ್ನು ಹೆಣೆಯಬೇಕು. ಅದನ್ನು ಸ್ಪಷ್ಟವಾಗಿ ಒಂದೆಡೆ ಬರೆದು ಮುಂದಿನ ಸಲ ಈ ತಪ್ಪುಗಳಾಗದಂತೆ ಜಾಗರೂಕತೆ ವಹಿಸಬೇಕು. ಹೊಸ ತಪ್ಪುಗಳಾದರೆ ಗಾಬರಿಯಿಂದ ಪ್ರಯತ್ನಿಸುವುದನ್ನು ಅರ್ಧಕ್ಕೆ ನಿಲ್ಲಿಸುವಂತಿಲ್ಲ. ಇನ್ನೂ ಚೆನ್ನಾಗಿ ಮಾಡುವುದಾದರೆ ಹೇಗೆ ಮಾಡಬಹುದು ಎನ್ನುವ ಯೋಜನೆ ಹಾಕಿಕೊಂಡು ಮುನ್ನುಗ್ಗಬೇಕು. ಸಣ್ಣ ತೊರೆಗಳು ಮಹಾನ ಸಮುದ್ರಗಳಾಗುತ್ತವೆ. ತಪ್ಪುಗಳನ್ನು ಮರುಕಳಿಸದಂತೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡರೆ ಗೆಲುವಿನ ಇತಿಹಾಸ ನಿರ್ಮಾಣವಾಗುತ್ತದೆ. ಗುರಿಗೆ ಗುರಿ ಇಡಿ ಮಂಡಿಯೂರಿ ಕುಳಿತು ದೇವರನ್ನು ಬೇಡಿದರೆ ಸಿಗುವುದಿಲ್ಲ ಗೆಲುವು.ಯಾರ್ಯಾರನ್ನೋ ಒಲಿಸಿಕೊಳ್ಳಲು ಹೋಗುವುದರಲ್ಲಿಲ್ಲ. ಎಲ್ಲರಿಗೂ ಬೇಕಾದ ವ್ಯಕ್ತಿ ನಾ ಆದರೆ ಅದೇ ಗೆಲುವೆಂದು ಎಲ್ಲರನ್ನೂ ತೃಪ್ತಿ ಪಡಿಸಲು ನೋಡಿದರೆ ಸೋಲಿನ ಸುಳಿಯಿಂದ ಹೊರ ಬರಲಾಗುವುದಿಲ್ಲ. ಇದನ್ನೇ ಬಿಲ್ ಕಾಸ್ಟಿ ಹೀಗೆ ಹೇಳಿದ್ದಾನೆ.”ಯಶಸ್ಸಿನ ಕೀಲಿ ಕೈ ಯಾವುದೋ ನನಗೆ ತಿಳಿಯದು. ಆದರೆ ಎಲ್ಲರನ್ನೂ ತೃಪ್ತಿ ಪಡಿಸಲು ಯತ್ನಿಸುವುದು ವಿಫಲತೆಯ ಕೀಲಿಕೈ ಎಂಬುದನ್ನು ಮಾತ್ರ ನಾನು ಚೆನ್ನಾಗಿ ಬಲ್ಲೆ.” ಇಟ್ಟುಕೊಂಡ ಗುರಿಗೆ ಗುರಿ ಇಟ್ಟು ಹೊಡೆದರೆ, ಸೋಲು ನಿಮ್ಮನ್ನು ಬಿಟ್ಟು ಹೋಗಲು ಬೇಸರಿಸಿಕೊಳ್ಳುವುದಿಲ್ಲ. ಗುರಿಗೆ ಬೇಕಾದ ಕೆಲಸ ಕಾರ್ಯಗಳ ಯೋಜನೆ ರೂಪಿಸಿ ಮಾಡಲೇ ಬೇಕೆಂದು ಮನಸ್ಸಿಗೆ ಹಟ ಹಿಡಿಯುವಂತೆ ಮಾಡಿ.ಇಲ್ಲದಿದ್ದರೆ ಮನಸ್ಸು ಅನಗತ್ಯ ಕೆಲಸಗಳ ಸುತ್ತುವರೆದು ಅಗತ್ಯವಾದುದನ್ನು ಮಾಡಲು ಅಡಚಣೆ ಉಂಟು ಮಾಡುತ್ತದೆ. ಮನದ ತುಡಿತವು ಇಲಿಯನ್ನೂ ಹುಲಿಯಾಗಿಸಬಲ್ಲದು. ನಿರಂತರ ಪ್ರಯತ್ನಿಸಿ ಸೋತಾಗ ಹಗಲು ರಾತ್ರಿ ಸಾಲು ಸಾಲು ಸೋಲುಗಳನ್ನು ಅವುಚಿ ಹಿಡಿದುಕೊಂಡು ಕಣ್ಣೀರಿಡುವಾಗ ಗೆಲುವಿನ ಮೇಲೆ ನಂಬಿಕೆ ಹೊರಟು ಹೋಗುತ್ತದೆ. ಮೃತ ಮೀನುಗಳು ಮಾತ್ರ ನೀರು ಹರಿಯುವ ದಿಕ್ಕಿನಲ್ಲಿ ಚಲಿಸುತ್ತವೆ ಎನ್ನುವುದನ್ನು ಮರೆಯಬಾರದು.ಹೇಳದಿದ್ದರೂ ಮಾಡುವವರು ಹೆಚ್ಚಿನ ಸಂಬಳ ಪಡೆಯುತ್ತಾರೆ ಎಂಬುವುದನ್ನು ನೆನಪಿಡಬೇಕು. ಪ್ರಯತ್ನಕ್ಕೆ ಸರಿಯಾದ ಪ್ರತಿಫಲ ಸಿಕ್ಕೇ ಸಿಗುತ್ತದೆ. ಸಿಗುವ ಸಮಯ ಹೆಚ್ಚು ಕಡಿಮೆ ತಡವಾಗಬಹದು. ಒಂದೊಂದು ಸೋಲಿನಿಂದಲೂ ಮಾರಕವಾದ ಅಂಶಗಳನ್ನು ತ್ಯಜಿಸಬೇಕು. ಪೂರಕ ಅಂಶಗಳತ್ತ ಚಿತ್ತ ದೃಢವಾಗಿಸಿ, ಬಿಡದೇ ಪ್ರಯತ್ನಿಸಬೇಕು. ಆಕಾಶದೆತ್ತರಕ್ಕೆ ಬೆಳೆದು ನಿಂತ ಹೆಮ್ಮರಗಳನ್ನು ಸಹ ಅನೇಕ ಹೊಡೆತಗಳಿಂದ ನೆಲಕ್ಕೆ ಉರಳಿಸಬಹುದು.ಅಂದರೆ ಯಶಸ್ಸಿಗೆ ಒಂದರ ಮೇಲೊಂದರಂತೆ ಪ್ರಯತ್ನಗಳು ಬೇಕಾಗುತ್ತವೆ. “ಬಹುತೇಕ ಜನರು ಯಶಸ್ಸಿನ ಬಾಗಿಲವರೆಗೆ ಬಂದು, ತಮ್ಮ ಪ್ರಯತ್ನ ಬಿಟ್ಟು ಬಿಡುತ್ತಾರೆ. ಹೌದು, ವಿಜಯದ ಗುರಿ ಒಂದು ಗಜ ದೂರವಿರುವಾಗ, ಕೇವಲ ಒಂದು ಅಡಿ ಇರುವಾಗ ಯತ್ನ ಬಿಟ್ಟು ಬಿಡುತ್ತಾರೆ.’ಎನ್ನುತ್ತಾರೆ ಎಚ್. ರಾಸ್. ಪೆರಾಟ್. ಕೊನೆಯ ಹೆಜ್ಜೆಯವರೆಗೂ ಪ್ರಯತ್ನಿಸಿ ಸೋಲಿನ ಸುಳಿಯಲ್ಲೇ ಅಡಗಿದ ಗೆಲುವು ತಂತಾನೇ ಹರಿದು ಬರುತ್ತದೆ. ************************************ ಲೇಖಕರ ಬಗ್ಗೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು
ಅಂಕಣ
ಆಗದು ಎಂದು ಹೇಳಲು ಕಲಿಯಿರಿ ಕಲಿಸಿರಿ ಎಲ್ಲದಕ್ಕೂ ಹೂಂ ಎನ್ನುವ ಸ್ವಭಾವ ಬಹಳ ಜನರಲ್ಲಿ ಬೇ ರೂರಿದೆ. ಹೀಗಾಗಿ ಅವರೆಲ್ಲ ಹೌದಪ್ಪಗಳಾಗಿದ್ದಾರೆ.ಪ್ರತಿ ಯೊಂದು ಕೆಲಸಕ್ಕೂ ಹೂಂ ಎಂದು ಒತ್ತಡ ಆತಂಕವನ್ನು ಅನಾಯಾಸವಾಗಿ ತಾವೇ ಮೈ ಮೇಲೆ ಎಳೆದು ಕೊಳ್ಳುತ್ತಾ ರೆ.ಯಾವುದಕ್ಕೂ ಇಲ್ಲ ಎಂದು ಹೇಳಿ ರೂಢಿಯೇ ಇಲ್ಲ. ಇಲ್ಲ ಎಂದು ಹೇಳುವುದು ಅಗೌರವ ಎಂದೇ ಭಾವಿಸಿದ್ದೇ ವೆ.ನನಗೀಗ ತಾವು ಹೇಳಿದ ಕೆಲಸ ಮಾಡಲಾಗುವುದಿಲ್ಲ. ನಾನು ಬೇರೊಂದು ಕಾರ್ಯದಲ್ಲಿ ಮಗ್ನನಾಗಿದ್ದೇನೆ ಎಂದು ಎದುರಿಗಿನವರು ನಮ್ಮನ್ನು ತಪ್ಪಾಗಿ ತಿಳಿಯುತ್ತಾರೆಂದು ನಾವೇ ತಪ್ಪಾಗಿ ಅರ್ಥೈಸಿಕೊಂಡು ಬಿಡುತ್ತೇವೆ. ಹೂಂ ಎಂದು ಎಲ್ಲ ಕಾರ್ಯಗಳನ್ನು ಒಪ್ಪಿಕೊಳ್ಳುವುದು ಸೌಜನ್ಯತೆಯ ಲಕ್ಷಣ. ಆಂಗ್ಲ ನುಡಿಯಂತೆ ಸೌಜನ್ಯವು ಶತ್ರುವನ್ನು ಗೆಲ್ಲುತ್ತದೆ ಎಂಬುದೇನೋ ನಿಜ.ಮ್ಯಾಂಟಿಗೋ ಹೇಳುವಂತೆ ಸೌಜನ್ಯಕ್ಕೆ ವೆಚ್ಚವೇನೂ ಹಿಡಿಯುವುದಿಲ್ಲ, ಆದರೆ ಸೌಜನ್ಯವು ಎಲ್ಲವನ್ನೂ ಕೊಂಡುಕೊಳ್ಳುತ್ತದೆಂಬ ಮಾತು ಅಷ್ಟೇ ದಿಟ. ಅಪಮಾನಕರ ಸಂಗತಿ ಅಲ್ಲ.ಒಲ್ಲೆ ಬೇಡ ಎಂದು ಹೇಳುವುದು ಅಪಮಾನಕರ ಎಂಬ ಹುರು ಳಿಲ್ಲದ ನಂಬಿಕೆಯಲ್ಲಿ ಬಿದ್ದು ನರಳುವವರನ್ನು ನೋಡುತ್ತೇ ವೆ ಅವರಿಂದ ಪಾಠ ಕಲಿಯದೇ ನಾವೂ ಅದೇ ಬಲೆಯಲ್ಲಿ ಬೀಳಲು ಹವಣಿಸುತ್ತೇವೆ.ದಾಕ್ಷಿಣ್ಯಕ್ಕೆ ಬಿದ್ದು ಬೇಡ ಒಲ್ಲೆ ಎನ್ನದೇ ಒಪ್ಪಿಕೊಂಡ ಸಂಗತಿಗಳು ನುಂಗಲಾರದ ತುತ್ತಾಗಿ ಪರಿಣಮಿಸುತ್ತವೆ.ಎಂಬುದು ಅನುಭವಿಸಿದವರಿಗೆ ಗೊತ್ತು ಬಲವಂತಕ್ಕೆ ಬಲಿಪಶುಗಳಾಗುವುದಕ್ಕಿಂತ ನಿರ್ದಾಕ್ಷಿಣ್ಯದಿಂ ದ ಮಾತನಾಡುವುದು ಒಳಿತು. ದಾಕ್ಷಿಣ್ಯಕ್ಕೆ ಒತ್ತು ಕೊಟ್ಟರೆ ಬಲಿಯಾಗುವಿರಿ. ಆಲಿವರ್ ಗೋಲ್ಡ್ ಸ್ಮಿತ್ ಹೇಳಿದಂತೆ ಸಹೃದಯತೆ ಕರುಣೆ ಹೊಂದಿದ ವ್ಯಕ್ತಿಯನ್ನು ಸಮಾಜ ಸದಾ ಗುರುತಿಸುತ್ತದೆ. ಹೀಗಾಗಿ ಸಹೃದಯತೆಯನ್ನು ಮೆರೆಯಿರಿ ಹೊರತು ದಾಕ್ಷಿ ಣ್ಯದ ಹೊರೆ ಹೊತ್ತು ಬೇಸರಿಸಿಕೊಂಡು,ನಿಮ್ಮ ಮನದ ಪ್ರಶಾಂತತೆಯನ್ನು ಕಳೆದುಕೊಳ್ಳದಿರಿ.ಹೌದಪ್ಪಗಳಾಗಬೇಡಿ ಪ್ರತಿಯೊಂದಕ್ಕೂ ಹೂಂ ಎನ್ನುವ ಹೌದು ಎಂದು ಗೋಣು ಅಲ್ಲಾಡಿಸಿ ಹೌದಪ್ಪ (ಎಸ್ ಮ್ಯಾನ್)ಗಳಾಗಲು ಕಾರಣಗ ಳು ಅನೇಕ.ಅವುಗಳಲ್ಲಿ ಧೈರ್ಯವಿಲ್ಲದಿರುವುದೂ ಒಂದು ನಮಗ್ಯಾಕೆ ಉಸಾಬರಿ? ಹೂಂ ಎಂದರೆ ಬೀಸೋ ದೊಣ್ಣೆ ಯಿಂದ ತಪ್ಪಿಸಿಕೊಂಡಂತೆ ಎಂಬ ಜಾಯಮಾನ. ಒಲ್ಲೆ ಇಲ್ಲ ಬೇಡ ಎಂದರೆ ಗುಂಪಿನಿಂದ ಹೊರ ಹೋಗಬೇಕಾಗು ತ್ತೆ. ಎಲ್ಲರೊಂದಿಗೆ ಗೋವಿಂದ ಅಂದರೆ ಮುಗಿದು ಹೋ ಯಿತು. ಅತಿ ಮುಖ್ಯ ಕಾರಣವೆಂದರೆ ಎಲ್ಲರಲ್ಲಿಯೂ ತಾ ನು ವಿಭಿನ್ನ ವಿಶಿಷ್ಟ ಎಂದು ಗುರುತಿಸಿಕೊಳ್ಳಲು ಹೇಳುವ ಎಲ್ಲ ಕೆಲಸಗಳನ್ನು ಒಪ್ಪಿಕೊಳ್ಳುವುದು.ಯಾವ ಕೆಲಸವನ್ನು ಪೂರ್ಣಗೊಳಿಸದೇ ಒದ್ದಾಡುವುದು.ಒಂದು ಸಂಗತಿ ನೆನ ಪಿರಲಿ ಎಲ್ಲವನ್ನೂ ಮಾಡಲು ಹೋದರೆ ಯಾವುದನ್ನೂ ಪೂರ್ಣ ಮಾಡಲಾಗುವುದಿಲ್ಲ. ಯಶಸ್ವಿ ವ್ಯಕ್ತಿ ಎಂದು ಕರೆಸಿಕೊಳ್ಳಲು ಪ್ರಯತ್ನಿಸಿ ಅಪ ಮಾನಕ್ಕೀಡಾಗುವ ಪ್ರಸಂಗಗಳೇ ಹೆಚ್ಚಾಗುವವು.ಇಂಥವ ರನ್ನು ಕಂಡೇ “ಯಶಸ್ವಿಯಾಗಲು ಪ್ರಯತ್ನಿಸಬೇಡಿ, ಅದಕ್ಕೆ ಬದಲು ಮೌಲ್ಯವುಳ್ಳ ಘನತೆ ವ್ಯಕ್ತಿಯಾಗಲು ಪ್ರಯತ್ನಿಸಿ.” ಎಂದು ಅಲ್ಬರ್ಟ್ ಐನ್ ಸ್ಟೀನ್ ಹೇಳಿರಬಹುದು.ನಯ ವಾಗಿ ನಿರಾಕರಿಸಿ.ನೀವು ನಿಗದಿತ ಸಮಯದಲ್ಲಿ ಮಾಡ ಲೇಬೇಕಾದ ಕಾರ್ಯದಲ್ಲಿ ಮಗ್ನರಾದಾಗ ಬೇರೆಯವರು ತಮ್ಮ ಯಾವುದೇ ಕೆಲಸ ಹೇಳಿದರೆ ನನ್ನಿಂದ ಈಗ ತಾವು ಹೇಳಿದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲವೆಂದು ನಯವಾಗಿ ನಿರಾಕರಿಸಿ. ಊಟ ತಿಂಡಿ ವಿಷಯಗಳಲ್ಲೂ ನಿಮಗೆ ಬಲವಂತ ಮಾಡಿ ಬಡಿಸುವಾಗ, ಮತ್ತಷ್ಟು ತಿನ್ನುವಂತೆ ಒತ್ತಾಯಿಸಿದಾಗ, ಹೊಟ್ಟೆ ತುಂಬಿದೆ ಸಾಕು ಎಂದು ನಿರಾಕರಿಸಿ.ಪಾರ್ಟಿಗಳಲ್ಲಿ ನಿಮ್ಮ ಗೆಳೆಯ/ತಿಯರು ನಿಮ್ಮ ಅಭಿರುಚಿಗೆ ಹೊಂದದ ಆಹಾರಗಳನ್ನು ಪೇಯಗಳನ್ನು ತಿನ್ನಲು ಆಗ್ರಹ ಪಡಿಸಿದರೆ ನಿರ್ಭಿಡೆಯಿಂದ ನಾನು ಒಲ್ಲೆ ಎಂದು ಹೇಳಿ.ನಿಮ್ಮತನವ ನ್ನು ಕಾಪಾಡಿಕೊಳ್ಳಿ.ಯಾರದೋ ಇಷ್ಟಕ್ಕೆ ನಿಮ್ಮ ಇಷ್ಟದ ವಿರುದ್ಧ ನಡೆದುಕೊಳ್ಳಬೇಡಿ.ನಿರ್ದಾಕ್ಷಿಣ್ಯವಾಗಿ ವರ್ತಿಸಿ. ನೇರ ಮಾತುಗಾರರಿಗೆ ಗೆಳೆಯರು ಕಡಿಮೆ. ನೇರವಾಗಿ ಮುಚ್ಚು ಮರೆಯಿಲ್ಲದೇ ಮಾತನಾಡುವವರಿಂದ ಬಹಳ ಜನ ದೂರವಿರಲು ಬಯಸುತ್ತಾರೆ.ಅವರೊಂದಿಗೆ ಇರುವು ದರಿಂದ ಯಾವಾಗ ಮಾನ ಹರಾಜು ಹಾಕುತ್ತಾರೋ ಎನ್ನುವ ಭಯ ಕಾಡುತ್ತದೆ. ಕಡ್ಡಿ ತುಂಡು ಮಾಡಿದಂತೆ ಮಾತನಾಡುವವರೊಂದಿಗೆ ಸ್ನೇಹದ ಹಸ್ತ ಚಾಚುವುದು ವಿರಳ.ನಿದಾಕ್ಷಿಣ್ಯವಾಗಿ ಮಾತ ನಾಡಿಯೂ ಸ್ನೇಹಿತರನ್ನು ಉಳಿಸಿಕೊಳ್ಳಬಹುದು ಗಳಿಸಿ ಕೊಳ್ಳಬಹುದು. ಅದು ನೀವು ಉಪಯೋಗಿಸುವ ಪದಗ ಳು ಮಾತನಾಡುವ ದಾಟಿ ಮತ್ತು ತೋರುವ ಕಾಳಜಿಯ ಮೇಲೆ ಅವಲಂಬಿತವಾಗಿರುತ್ತದೆ.ಇಲ್ಲಿ ಬಹಳ ಮುಖ್ಯವಾ ದ ವ್ಯತ್ಯಾಸವೆಂದರೆ ಭಾವನಾತ್ಮಕ ವ್ಯತ್ಯಾಸ. ವರ್ಚಸ್ಸು ಹೆಚ್ಚಿಸಿಕೊಳ್ಳಿ.ಬಂಧು ಬಾಂಧವರಲ್ಲಿ ಸಮಾಜದಲ್ಲಿ ನನ್ನ ವರ್ಚಸ್ಸು ತುಂಬಾ ಚೆನ್ನಾಗಿದೆ. ಯಾರೂ ಯಾವುದೂ ಸಹಾಯ ಕೇಳಿದರೂ ಇಲ್ಲ, ಆಗದು ಎಂದು ಹೇಳಿದರೆ ನನ್ನ ವರ್ಚಸ್ಸಿಗೆ ದಕ್ಕೆ ಬರುತ್ತದೆ. ಇಲ್ಲ ಎಂದು ಹೇಳಿದರೆ ಅವರಿಗೆಲ್ಲ ಅತೃಪ್ತಿಯಾಗುತ್ತದೆ. ಆಗಲ್ಲ ಎಂದರೆ ಅವರಿಗೆ ಕೋಪ ಬರುತ್ತದೆ ಎಂದೆಲ್ಲ ನೀವೇ ಭಾವಿಸಿ ನನ್ನಿಂದಾಗದು ಇಲ್ಲ ಎಂದು ಮನಸ್ಸು ಕೂಗಿ ಹೇಳಿದರೂ ಅದರ ಮಾತಿಗೆ ಸೊಪ್ಪು ಹಾಕದೇ ಸಂಕೋಚ ಪಟ್ಟು ಕೊಂಡು ಕೋಲೆತ್ತಿನ ತರಹ ಗೋಣು ಹಾಕಿ ಬಿಡುತ್ತೀರಿ. ನಂತರ ನಿನ್ನಿಂದ ಅವ ರಿಗೆಲ್ಲ ಸಂಪೂರ್ಣ ನೆರವು ಪೂರೈಸಲಾಗದೇ ಗೋಳಾಡು ವ ಪ್ರಸಂಗ ಎದುರಾಗುತ್ತದೆ. ಸಹಾಯ ನಿರೀಕ್ಷಿಸಿದವರಿಗೆ ನಿರಾಸೆ ಉಂಟಾಗಿ ನಿಮ್ಮನ್ನು ಹಾಡಿ ಹರಿಸುತ್ತಾರೆ. ಇದೆಲ್ಲ ಕ್ಕಿಂತ ಇಲ್ಲ- ಆಗದು- ನಾನು ಒಲ್ಲೆ ಎಂದು ನೇರವಾಗಿ ಹೇ ಳಿದರೆ ನಿಮ್ಮ ವ್ಯಕ್ತಿತ್ವದ ವರ್ಚಸ್ಸು ಇನ್ನಷ್ಟು ಹೆಚ್ಚಾಗುತ್ತದೆ. ನಿಸ್ಸಂಕೋಚವಾಗಿ ತಿಳಿಸಿ ಹತ್ತು ಜನರೊಂದಿಗಿದ್ದಾಗ ಅವ ರ ಹಾಗೆ ನಡೆದುಕೊಳ್ಳದಿದ್ದರೆ ಸಾಮರಸ್ಯತೆ ಇಲ್ಲ ಸಮನ್ವತೆ ಕೊರತೆ ಇದೆ ಎಂದುಕೊಳ್ಳುತ್ತಾರೆ ಎಂದು ಅವರ ಮುಲಾ ಜಿಗೆ ಒಳಗಾಗಿ ಕುಡಿಯುವುದು ತಿನ್ನುವುದು ಸೇದುವುದಕ್ಕೆ ಹೂಂ ಎನ್ನದಿರಿ. ಕೂಡಿ ನಡೆಯುವಾಗ ಬಾಳುವಾಗ ಸಾ ಮರಸ್ಯತೆ ಸಮನ್ವತೆ ಮುಖ್ಯ ನಿಜ. ಹಾಗಂತ ನಿಮ್ಮ ವ್ಯಕ್ತಿ ತ್ವಕ್ಕೆ ದಕ್ಕೆ ತರುವಂಥ ದುಷ್ಕೃತ್ಯಗಳಿಗೆ ಗಟ್ಟಿಯಾಗಿ ಒಲ್ಲೆ ಎಂದು ಹೇಳಿ. ಇಂಥ ಜನರಿಗೆ ತಪ್ಪು ಅಭಿಪ್ರಾಯಗಳಿಗೆ ಎಡೆ ಮಾಡಿಕೊಡದಂತೆ ಸ್ಪಷ್ಟವಾಗಿ ನಿಸ್ಸಂಕೋಚವಾಗಿ ತಿ ಳಿಸಿ ಬಿಡಿ. ಇದರಿಂದ ಬೇರೆಯವರೂ ತಮ್ಮ ತಪ್ಪನ್ನು ತಿದ್ದಿ ಕೊಳ್ಳುವ ಸಾಧ್ಯತೆ ಇದೆ.ಇತರರೊಂದಿಗೆ ಕೆಲಸ ಮಾಡುವಾ ಗ ಸ್ನೇಹ ಸ್ಪೂರ್ತಿ ಸಮನ್ವತೆಗಳಿಂದ ಸೇರಿಕೊಳ್ಳಿ.ನೀವು ಸ್ನೇಹಪರ ಭಾವನೆಗಳನ್ನು ವ್ಯಕ್ತ ಪಡಿಸುವ ರೀತಿಯಲ್ಲಿ ಎದುರಿಗಿನವರು ಅರ್ಥ ಮಾಡಿಕೊಳ್ಳುತ್ತಾರೆ. ಮನೆಯಲ್ಲಿ ನಿಮ್ಮ ಸಹೋದರ/ರಿಗೆ ಚಿಕ್ಕ ಮಕ್ಕಳಿಗೂ ಖಚಿತವಾಗಿ ನಿರ್ಧಿಷ್ಟವಾಗಿ ನಿರ್ದಾಕ್ಷಿಣ್ಯವಾಗಿ ಬೇಡ ಎಂದು ಹೇಳಲು ಕಲಿಸಿ ಮಾರ್ಗದರ್ಶನ ನೀಡಿ. ಹೀಗೆ ಕಲಿಸಿಕೊಡುವುದರಿಂ ದ ಮುಂದಾಗುವ ನೋವುಗಳು ತಪ್ಪುತ್ತವೆ. ಇಲ್ಲ ಆಗದು ನಾನು ಒಲ್ಲೆ ಎಂದು ಹೇಳದಿರುವುದು ಸಣ್ಣ ತಪ್ಪು ಎಂದು ನಿರ್ಲಕ್ಷಿಸಬೇಡಿ. ದೊಡ್ಡ ಹಡಗನ್ನು ಸಣ್ಣ ರಂಧ್ರವೇ ಮುಳುಗಿಸುತ್ತದೆ. ಬುದ್ಧಿವಂತಿಕೆಯಿದ್ದರೆ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ.ಇತರರು ನಿನಗೆ ಇಲ್ಲ-ಆಗದು ಎಂದು ಹೇಳಿದಾಗಲೂ ಒಪ್ಪಿಕೊಳ್ಳುವ ಗುಣ ಬೆಳೆಸಿಕೊಳ್ಳಿ. ಎಲ್ಲದಕ್ಕೂ ಇಲ್ಲ ಆಗದು ಎಂಬುದನ್ನು ಕಲಿಯಬೇಡಿ.ಇಲ್ಲ ಎಂದು ಹೇಳುವುದು ಮತ್ತು ನಕಾರಾತ್ಮಕವಾಗಿ ಸ್ಪಂದಿಸುವುದು ಎರಡೂ ಒಂದೇ ಅಲ್ಲ ಎಂಬುದು ನೆನಪಿನಲ್ಲಿರಲಿ.ಅಗತ್ಯತೆ ಬಿದ್ದಾಗ ಇತರರ ನೆರವಿಗೆ ಧಾವಿಸಿ. ಸಂಕಷ್ಟದಲ್ಲಿರುವವರ ಮೊರೆಗೆ ಕಿವಿಗೊಡುವುದನ್ನು ಮರೆಯದಿರಿ. ******************************** ಲೇಖಕರ ಬಗ್ಗೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು







