ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯ. ಕನ್ನಡ ಭಾಷೆ ಅಂದ್ರೆ ಬರಿ ಬೆಂಗಳೂರು ಕನ್ನಡ ಭಾಷೆ ಅಲ್ಲ.ಕರ್ನಾಟಕದ ಎಲ್ಲಾ ಜಿಲ್ಲೆಗಳ ವಿಧವಿಧ ಭಾಷೆಗಳಿಗೂ ಒಂದೇ ಪ್ರೀತಿ ಇರಲಿ.ಬೀದರನಿಂದ , ಚಾಮರಾಜನಗರದವರೆಗೆ ಕನ್ನಡದಲ್ಲಿ ಮಾತಾಡುವ ಅದೆಷ್ಟೋ ಕನ್ನಡ ಧಾಟಿಗಳು.

ಆ ನಿಟ್ಟಿನಲ್ಲಿ ನಮ್ಮ ಜಿಲ್ಲೆ ಕಲ್ಬುರ್ಗಿಯ ಭಾಷೆಯಲ್ಲಿ ಪ್ರತಿ ತಿಂಗಳು ಅಂಕಣ ಬರಹ ಬರೆಯುವ ಉದ್ದೇಶ ಮುಖ್ಯವಾಗಿ ಕನ್ನಡದಲ್ಲೆ ಆಡುವ ಮಾತಿನ ಧಾಟಿ , ಸೊಗಸಿನೊಂದಿಗೆ ಎಲ್ಲಾ ಜಿಲ್ಲೆಗಳ ಮಾತಿನ ಧಾಟಿಗೂ ಸಮಾನ ಗೌರವ ಸಿಗಲಿ ಎಂಬ ಉದ್ದೇಶ. ಉತ್ತರ ಕರ್ನಾಟಕ ಎಂಬುದು ದಕ್ಷಿಣ ಕರ್ನಾಟಕದವ್ರಿಗೆ ಅದಾವದೋ ಭಾಷೆ ಅನಿಸಬಾರದು.ಕರವಳಿ ಭಾಷೆ ಬೀದರನವರಿಗೆ ನಗೆಪಾಟಲಾಗಬಾರದು ಭಾಷೆ ವಿವಿಧ ಆದ್ರೂ ಅದರೊಳಗಿನ ಭಾವ ಒಂದೇ.
ಭಾಷೆ ಎಲ್ಲರನ್ನೂ ಬೆಸೆದಿಡಲಿ.

ಈ ಸಂದರ್ಭದ ಮುಖ್ಯ ವಿಷಯ ಅಂದ್ರ ಮಳಿ , ಬೆಳಿ.ನಮ್ಮ ಕಡಿ ಈ ವರ್ಷ ಮಳಿ ಪೂರಾ ಮುನಸಿಕೊಂಡು ಬಿಟ್ಟದ . ಹೊಲದಾಗ ಬಿತ್ತಿದ ಉದ್ದು , ಹೆಸರು , ಎಲ್ಲಾ ಬೆಳೆಗಳು ಮಳಿ ಇಲ್ದೆ ಮೊಳಕೆ ಭೂಮಿಯೊಳಗಿಂದ ಹೊರಗೆ ಬಂದಿಲ್ಲ.ಎರಡನೆ ಬೆಳೆ ತೊಗರಿ ಬ್ಯಾಳಿ , ಕಡ್ಲಿ ಬ್ಯಾಳಿ ಬೆಳೆಗಳು ಒಣಗಿ ಫಸಲು ಕೈಗೆ ಬರೊದು ಕನಸಾಗ್ಯಾದ.ಇನ್ನೂ ನಮ್ಮ ದಿನನಿತ್ಯದ ಊಟ ಜೋಳ ಅಂತೂ ಈ ವರ್ಷ ಬೆಳಿ ಬರೊದು ಕಷ್ಟನೆ.ನಮಗ ಅನ್ನ ಉಣ್ಣಲಿಲ್ಲ ಅಂದ್ರೂ ನಡಿತದ , ಎರಡೊತ್ತು ರೊಟ್ಟಿ ಬೇಕು.ಜೋಳ ಪಿರೆ ಆದುವಂದ್ರ ನಮ್ಮ ಉತ್ತರ ಕರ್ನಾಟಕ ದ ಜನ ಬಾಯಿ ಬಿಡಬೇಕು.ಈಗ ಪ್ರತಿ ವರ್ಷಕ್ಕಿಂತ ಎರಡ್ಮೂರು ಸಾವ್ರ ಹೆಚ್ಚು ರೇಟ್ ಆಗ್ಯಾದ ಜೋಳಕ್ಕ. ಎಲ್ಲಾ ಆಹಾರ ಧ್ಯಾನಗಳು , ಅಡುಗಿ ಎಣ್ಣಿ ಎಲ್ಲಾ ಪಿರೆ ಆಗಿಬಿಟ್ಟದ.

ಬರಗಾಲದ ಪರಿಣಾಮ ಈಗ ಹಿಂದಿನಂಗ ಭೀಕರ ಇರಲಾರದು. ನಲವತ್ತು , ಐವತ್ತು ವರ್ಷಗಳ ಹಿಂದೆ ಇದ್ದ ನೀರಿನ ಅಭಾವ , ಆಹಾರದ ಅಭಾವ ,ಹಣಕಾಸಿನ ಅಭಾವ ಈಗೀನ ಪೀಳಿಗೆ ನೋಡಿರಲಿಕ್ಕಿಲ್ಲ. ಝೆನ್‌ ಝಿ ಗಳಿಗಂತೂ ಯಾವುದೇ ತಾಪತ್ರಯ ಇಲ್ಲದಹಂಗ ಬದುಕ್ತಿದ್ದಾರ.ಮಳಿ ಇಲ್ದೆ ನೀರು ಇಲ್ದೆ ಹ್ಯಾಂಗ್ ಇರಬೇಕು ಅಂತ ನಾವು ತಲೆ ಕೆಡಿಸಿಕೊಂಡಷ್ಟು ಅವ್ರು ಚಿಂತಿ ಮಾಡಲ್ಲ ಬಿಡ್ರಿ.ಯಾಕಂದ್ರ ಅವ್ರಿಗಿ ಯಾವ ಚಿಂತೆ ಇಲ್ದೆ ಬೆಳಸಲಿಕ್ಕ ತಂದೆ ತಾಯಿ ಸತತ ಪ್ರಯತ್ನಿಸತಿರತಾರ.ಹಳ್ಳಿಗಳ ಕಡಿ ದೊಡ್ಡ ಮಕ್ಕಳು ನೀರು ಬಾವಿಯಿಂದ ಇಲ್ಲ ಬೊರ್ವೆಲ್ ನಿಂದ ಕೊಡದಲ್ಲಿ ತುಂಬಿಕೊಂಡು ಸೊಂಟದ ಮ್ಯಾಲ್ ಇಲ್ಲ ತಲಿಮ್ಯಾಲ್ ಹೊತ್ತುಕೊಂಡು ತರೋದು ನೊಡ್ತಿವಿ.ಸಿಟಿಯಲ್ಲಿರುವವರಿಗಿ ಒಂದು ನೀರಿನ ಕೊಡ ಕೂಡ ಎತ್ತಲಿಕ್ಕ ಬರಲ್ಲ.ಪಟ್ಟಣಗಳಲ್ಲಿ ಅವ್ರ ಮನ್ಯಾಗ್ ಎಲ್ಲೆಂದ್ರಲ್ಲಿ ನೀರಿನ ವ್ಯವಸ್ಥೆ ಇರತದ.ಒಂದು ಗ್ಲಾಸ್ ಕೂಡ ಎತ್ತುವ ಪರಿಸ್ಥಿತಿ ಇರಲ್ಲ.ಒಮ್ಮೆಲೆ ಇಡೀ ಪಟ್ಟಣದಲ್ಲಿ ನೀರಿನ ಬರಗಾಲ ಆವರಿಸಿದ್ರ ಅದರ ಪರಿಣಾಮ ಉಹಿಸಿಕೊಳ್ಳಕ್ಕೂ ಆಗಲ್ಲ.ಆವಾಗೆಲ್ಲ ನಾವು ನೀರನ್ನು ಸಂಪು (ನಮ್ಮ ಕಡಿ ಅದಕ್ಕ ಹೌದು ಅಂತಿವಿ ) ನಾಗ ಇಲ್ಲ ಬ್ಯಾರಲ್ ನಾಗ ತುಂಬತಿದ್ವಿ.ಈಗ ಮಾಳಿಗಿ ಮ್ಯಾಲ್ ಸಿಂಟೆಕ್ಸ ಇರತದ.ಅದರಿಂದ ಇಡೀ ಮನಿಗಿ ನೀರು ಸಪ್ಲೈ ಆಗತದ. ಒಂದು ವ್ಯಾಳೆ ಬೋರ್ವೆಲ್ , ಭಾವಿದಾಗ ನೀರು ಮುಗಿದ್ರ , ಹೊರಗಿನಿಂದ ನೀರು ತಂದು ಸಂಗ್ರಹಿಸಿಕೊಳ್ಳಬೆಕಂದ್ರ ಯಾರ ಮನಿಯಾಗೂ ಸಂಪು ಅಥವಾ ಬ್ಯಾರಲ್ ಅಥವಾ ದೊಡ್ಡ ದೊಡ್ಡ ಪಾತ್ರೆಗಳು ಇಲ್ಲ.

ಹೆಂಬತ್ತು, ಹೆಂಬತೈದರ ದಶಕಗಳಲ್ಲಿ ನೀರಿನ ಅಭಾವ ನಮ್ಮ ಕಡಿ ಭಾಳ ಇತ್ತು.ಊರಲ್ಲಿ ಅಲ್ಲೊಂದು ಇಲ್ಲೊಂದು ಭಾವಿಗಳು ಇದ್ವು.ಬೊರ್ವೆಲ್ ಗಳು ಶ್ರೀಮಂತ ರ ಮನ್ಯಾಗ ಮಾತ್ರ ಇರತಿದ್ದವು.ಬ್ಯಾಸಗಿ ಬಂದ್ರ ಭಾವಿಗಳ ನೀರು ಒಣಗಿ ಬತ್ತಿಹೋಗತಿದ್ವು.ನಮ್ಮೂರ ಹೊರಗೆ ಒಂದು ಭಾವಿ ಇತ್ತು .ನಸುಕಿನಾಗ ಎದ್ದು ಮನಿ ಹೆಂಗಸ್ರು ಗಂಡಸ್ರೆಲ್ ಕೊಡ ಹಿಡಕೊಂಡು ಭಾವಿ ಕಡಿ ಓಡತಿದ್ರು.ಅಷ್ಟರಲ್ಲಿ ಭಾವಿ ಒಳಗ ಒಂದಿಬ್ರು ಗಂಡಸ್ರು ಇಳಿದಿರತಿದ್ರು.ಹಗ್ಗದಿಂದ ಭಾವಿ ಒಳಗ ಬಿಡತಿದ್ದ ಕೊಡಗಳಲ್ಲಿ ಅವ್ರು ಒಂದು ಪಾತ್ರೆಯಿಂದ ನೀರು ಮೊಗೆದು ಕೊಡಗಳಲ್ಲಿ ತುಂಬುತಿದ್ರು.ಕೊಡ ಮುಳುಗುವಷ್ಟು ನೀರು ಇರತಿರಲಿಲ್ಲ ಭಾವಿಯಲ್ಲಿ.ಇದು ಮದ್ಯಾನ್ಹದ ವರೆಗೆ ನಡಿತಿತ್ತು.ನಾನು ಒಂದು ಚಿಕ್ಕ ಬಿಂದಿಗಿ ತಗೊಂಡು ಮನಿಗಿ ಭಾವಿಗಿ ಓಡಾಡತಿದ್ಧೆ.ಆಗ ನೀರು ತುಂಬುವದೆ ಒಂದು ದೊಡ್ಡ ಕೆಲಸ. ಹಬ್ಬ ಹರಿದಿನಗಳದಾಗ ಮನ್ಯಾಗ ಹೆಣ್ಣಮಕ್ಳಿಗಿ ಬಾಳ ಕೆಲಸ ಇದ್ರ ಗಂಡ ಮಕ್ಳು ಎತ್ತಿನ ಮ್ಯಾಲ ನೀರು ತರತಿದ್ರು..ಎತ್ತಿನ ಬೆನ್ನ ಮ್ಯಾಲ್ ಆಕಡಿ ಈ ಕಡಿ ಕೊಡ ಹಿಡಿಯುವಂತ ಕಬ್ಬಿಣದ ಗೊಲಾಕಾರದ ಸಾಚಾಗಳಲ್ಲಿ ಕೊಡ ಇಟ್ಟು ನೀರು ತರತಿದ್ರು.ಅದಕ್ಕ ಲಗಳಿ ಅಂತಿದ್ರು. ಬೆಳಗೆದ್ರೆ ಎಲ್ಲರ ಮನ್ಯಾಗೂ ಲಗಳಿ ಹೊಡೆಯುವ ಗಡಿಬಿಡಿ.ಒಂದೇ ಸಲ ಆ ಕಡೆ ಮೂರು , ಈ ಕಡೆ ಮೂರು ಒಟ್ಟು ಆರು ಕೊಡಗಳು ಎತ್ತು ಹೋರುತಿತ್ತು.  ಈಗ ನೆನಸಿಕೊಂಡ್ರ ಆಶ್ಚರ್ಯ ಆಗತದ.ಮನಿಮಂದಿಎಲ್ಲ ಸ್ವಲ್ಪ ನೀರಿನಾಗ ಅದ್ಯಾಂಗ್ ಸಂಭಾಳಿಸ್ತಿದ್ದೆವು ಅಂತ.ಎಲ್ಲರ ಸ್ನಾನ್ , ಬಟ್ಟಿ , ಭಾಂಡೆ , ಕುಡಿಯುವ ನೀರು ಎಲ್ಲಾ ಬಾವಿಯಿಂದ ತಂದು ತುಂಬಿದ್ದ ನೀರಿನಿಂದ ಆಗತಿತ್ತು.ಎರಡಕ್ಕ ಮಾತ್ರ ತಂಬಿಗಿ ತಗೊಂಡು ಹೊರಗ ಹೋಗಬೇಕಾಗ್ತಿತ್ತು.ಈಗ ಎಲ್ಲಕ್ಕಿಂತ ಹೆಚ್ಚಾಗಿ ಶೌಚಾಲಯದ ಸಲುವಾಗಿ ಹೆಚ್ಚು ನೀರು ಬೇಕು.

ಹೆಚ್ಚು ಕಮ್ಮಿ ನನ್ನ ಪಿಯುಸಿ ವಿದ್ಯಾಭ್ಯಾಸ ಮುಗಿಯುವ ವರೆಗೂ ನೀರಿನ ಗೋಳು ಇದ್ದೆ ಇತ್ತು.ಅದೇಷ್ಟು ಕೊಡ ನೀರು ಹೊತ್ತು ತರತಿದ್ದೆನೋ ಈಗ ನೆನಸಿಕೊಂಡ್ರೆ ಆಶ್ಚರ್ಯ ಆಗತದ.ಯಾಕಂದ್ರ ಈಗ ಒಂದು ಕೊಡ ಎತ್ತಿ ಸೊಂಟದ ಮ್ಯಾಲ ಇಟ್ಟಕೊಂಡ್ರ ಆನೆ ಭಾರ ಹೊತ್ತಂಗ ಆಗತದ. ಕೈ ತಿರುಗಿಸಿದ್ರ ನೀರು ಬರೊ ವ್ಯವಸ್ಥೆ ಇದ್ದ ಮ್ಯಾಕ್ ಕೊಡ ಹೊತ್ತುಕೊಳ್ಳೊ ಪ್ರಶ್ನೆನೆ ಬರಲ್ಲ.

ಈಗಿನ ಮಕ್ಳು ಒಂದು ತಂಬಿಗಿ ನೀರು ಎತ್ತಿ ರೂಢಿ ಇಲ್ದವ್ರು. ದೂರದ ಬಾವಿಯಿಂದ ಇಲ್ಲ ನಲ್ಲಿಯಿಂದ ನೀರು ತುಂಬಿಕೊಂಡು ಬರ್ರಿ ಅಂದ್ರ ಸ್ನಾನ್ ಮಾಡ್ಲಾರದೆ ಹಂಗೆ ಇರತಿವಿ , ನೀರು ಹೊತ್ತಕ್ಕೊಂಡು ಬರಲ್ಲ ಅಂತ ಹೆಳತಾರ.ಬರಗಾಲದ ಸಂದರ್ಭ ಅದ್ಯಾಂಗ್ ಎದುರಿಸ್ತಾರ..!
ನಮ್ಮ ಕಲ್ಬುರ್ಗಿ ಕಡಿ ಪ್ರತಿ ಸಲ ಫೆಬ್ರವರಿ ನಲ್ಲಿ ಶುರು ಆಗುವ ನಿರಿನ ಅಭಾವ ಈ ವರ್ಷ ಮಳಿ ಇಲ್ದಕ್ಕ ಸೆಪ್ಟೆಂಬರ್ ನಲ್ಲೆ ಶುರು ಆಗ್ಯಾದ. ಅಂತರ್ಜಲ ಮಟ್ಟ ಕುಸದು ಎಲ್ಲರ ಮನಿ ಬೊರ್ವೆಲ್ಲಗಳು ಒಣಗಿ ಬಿಟ್ಟಾವ.ಎಲ್ರೂ ಟ್ಯಾಂಕರ್ ನೀರಿಗಿ ಮೊರೆ ಹೊಗತಿದ್ದಾರ.ಕುಡಿಯುವ ನೀರು ಖರಿದಿ ತಗೊಬೇಕು.ಹಿಂದಿನ ಕಾಲ್ದಲ್ಲಿ ಒಂದನಾಲ್ಕು ಕೊಡದಾಗ ಎಲ್ಲಾ ಮನಿ ಕೆಲಸಗಳು ಆಗತಿದ್ವು ಅಂತ.ಈಗ ಮನ್ಯಾಗ್ ಇಬ್ರೆ ಇದ್ರು ಒಂದು ಸಿಂಟೆಕ್ಸ ಪೂರಾ ನೀರು ಬೇಕು.ಎನ್ ಮಾಡ್ತಿವಿ ನಮಗೆ ಗೊತ್ತಿಲ್ಲ.

ಬರಗಾಲ ಬಂದ್ರೂ ಆಹಾರ ತುಟ್ಟಿಯಾಗಬಹುದು, ಪೂರಾ ಸಿಗಲಾರದಂಗಂತೂ ಆಗಲ್ಲ.ಒಂದು ಕಡಿಯಿಂದ ಮತ್ತೊಂದು ಕಡಿಗಿ ಕಳಿಸೊದು , ತರಿಸಿಕೊಳ್ಳೊ ವ್ಯವಸ್ಥೆ ಇರತದ.ಆದ್ರ ಭೂಮಿದಾಗ ನೀರೆ ಮುಗಿದುವಂದ್ರ ಎನ್ ಮಾಡ್ಬೇಕು.ಎಷ್ಟು ದುಡ್ಡಕೊಟ್ರು ನೀರು ತರಿಸಲಿಕ್ಕ ಆಗಲ್ಲ.ಅದಕ್ಕ ಮಳಿನೆ ಬೇಕು.ಮಳಿ ಈ ವರ್ಷ ಜೀವಕುಲದ ಮ್ಯಾಲ ಬಾಳ ಮುನಸಿಕೊಂಡದ.ನಮ್ಮ ಅಕ್ಕ ಪಕ್ಕದ ರಾಜ್ಯಗಳಲ್ಲಿ ಪ್ರವಾಹ ಆಗತದ.ನಮ್ಮಲ್ಲಿ ಕುಡಿಯೋ ನೀರಿಗೂ ಗತಿ ಇಲ್ದಂಗ ಆಗ್ಯದ.ಪ್ರಕೃತಿನೆ ವಿಚಿತ್ರ. ಅಥವಾ ನಾವೇ ಪ್ರಕೃತಿ ಮುನಸಿಕೊಳ್ಳೊ ಹಂಗ ಮಾಡ್ತಿದ್ದೆವೋ.

ಮುಂದೆ ಒಮ್ಮೆ ಭೂಮಿ ನೀರಿನ ಅಭಾವ ಎದುರಿಸಬೇಕಾಗತದ.ವಾತಾವರಣದಾಗ ಎರತಿರೋ ತಾಪಮಾನ ಒಂದು ಕಾರಣ.ವಿಶ್ವ ದ ಮೂರು ಭಾಗ ನೀರೆ ಇದ್ರು ಅದು ನಿರುಪಯೋಗಿ.ಎಲ್ಲದಕ್ಕೂ ಸಿಹಿ ನೀರು ಮಾತ್ರ ಬೇಕು.ದಿನೆ ದಿನೆ ಮುಂದುವರಿತಾ ಇರೋ ತಂತ್ರಜ್ಞಾನ ಗಳು ಇನ್ನಷ್ಟು ಹೆಚ್ಚು ನೀರು ಬೇಡತಾವ.ತಂತ್ರಜ್ಞಾನ ದ ಡೇಟಾ ಸಂಗ್ರಹಣೆ ಗೆ ಬೇಕಾಗುವ ನೀರಿನ ಬಳಕೆ ಮುಂದಿನ ದಿನಗಳಲ್ಲಿ ಭೂಮಿ ಅದ್ಯಾಂಗ್ ಪೂರೈಸತದ ಅನ್ನುವದೆ ದೊಡ್ಡ ಚಿಂತೆ.

ಹಿಂದ ಬರಗಾಲದಾಗ ಜನ ಅದೇನೊ ಗಡ್ಡೆ ಗೆಣಸು ತಿಂದು ಬದುಕ್ತಿದ್ರು ಅಂತ ಓದಿರತಿವಿ.ಈಗ ಮಳಿ ಇಲ್ದೆ ಇದ್ರೂ ಉಣ್ಣಲಿಕ್ಕ ಅಷ್ಟೊಂದು ತ್ರಾಸ ಆಗ್ಲಿಕ್ಕಿಲ್ಲ.ಯಾಕಂದ್ರ ಸರ್ಕಾರ ಕೂಡ ಆ ನಿಟ್ಟಿನಾಗ ಪ್ರಯತ್ನಿಸತದ.ಎನಿದ್ರೂ ನಿರಿಂದೆ ಚಿಂತೆ.ಈಗಾಗ್ಲೆ ನಮ್ಮ ಕಡಿ ನೀರಿನ ಪೂರೈಕೆಗಾಗಿ ನೀರಿನ ಟ್ತಾಂಕರ್ ವ್ಯವಸ್ಥೆ ಮಾಡ್ತಿದ್ದಾರ. ನೀರು ಶೇಖರಿಸಿ ಇಡೊದು ಒಂದು ಸಾಹಸ.ಅಂತ ಜನ ಕಡೆ ಜಗಳಗಳು ಸಾಮನ್ಯ.ಒಂದೊಂದು ಸಾರಿ ನೀರು ಹೊಡಪೆಟ್ಟಿಗೂ ಕಾರಣ ಆಗತದ.ಮನಿಯೋಳಗ ಶೋ ಕ್ಕಾಗಿ ಬೆಳೆಸಿದ ಗಿಡಗಳು ಒಣಗೋದು ನೋಡ್ಲಿಕ್ಕಾಗಲ್ಲ. ಈಗ ಎನಿದ್ರು ನೀರಿಗಾಗಿ ಪ್ರಾರ್ಥನೆ ಮಾಡಬೇಕು ಅಷ್ಟೆ ಮತ್ತು ಬಳಕೆ ಮಾಡುವ ಕಡೆ ನಿಗಾ ಇರಬೇಕು .ವ್ಯರ್ಥ ಬಳಸಲಾರದಂಗ ನಮಗ ನಾವೆ ಶಪಥ ಮಾಡೋಣ.

ಈ ಲೇಖನ ಬರೆಯುತ್ತಿರುವಾಗ ಮಳೆ ಬರತಿತ್ತು.ಮಳೆಗಾಲ ಮುಗಿತಾ ಬಂದ್ರೂ ಮಳಿ ಕಾಣದೆ ಅದೇಷ್ಟೋ ತಿಂಗಳಾಗಿದ್ವು.ಈಗ ಬರತಿದ್ದ ಮಳಿಯೂ ಅದ್ಯಾವದೋ ಚಂಡ ಮಾರುತದ ಪರಿಣಾಮ ಅಂತೆ.ಹೊಲದಲ್ಲಿರುವ ತೊಗರಿ ಪೈರು ,ಕಬ್ಬು , ಜೋಳಕ್ಕ ಈಗ ಸುರಿಯುತ್ತಿರೊ ಮಳಿ ಸಂಜೀವಿನಿ ಆಗ್ಲಿ.

ಜ್ಯೋತಿ ,ಡಿ .ಬೊಮ್ಮಾ.

About The Author

Leave a Reply

You cannot copy content of this page

Scroll to Top