ಕಾವ್ಯ ಸಂಗಾತಿ
ಕೆ.ಬಿ.ವೀರಲಿಂಗನ ಗೌಡ್ರ
“ಗುಂಪಿಗರ್ಥವಾಗಲಿಲ್ಲ”


ಆ
ಒಬ್ಬಂಟಿಯನ್ನು
ತಂಗಾಳಿ ತಬ್ಬಿಕೊಂಡಾಗ
ನೆರಳು ನಾಚಿ ನೀರಾಯಿತು
ಆ
ಒಬ್ಬಂಟಿಯನ್ನು
ಪುಸ್ತಕ ನೆತ್ತಿನೇವರಿಸಿದಾಗ
ಬೆಳಕು ಕತ್ತಲೆಗೆ ಮುತ್ತಿಕ್ಕಿತು
ಆ
ಒಬ್ಬಂಟಿಯನ್ನು
ಕ್ಯಾಂಟೀನ್ ಉಣಿಸಿದಾಗ
ಇಂದಿರಮ್ಮನಾತ್ಮ ತಣಿಯಿತು
ಆ
ಒಬ್ಬಂಟಿಯನ್ನು
ಆಲಯ ನೋಡಿ ನಕ್ಕಾಗ
ಬಯಲು ಎದೆಗಾಣಿಸಿಕೊಂಡಿತು
ಆ
ಒಬ್ಬಂಟಿ
ಗುಂಪಿಗರ್ಥವಾಗಲಿಲ್ಲ
ಗಾಳಿ ಬೆಳಕು ನೆರಳಿಗರ್ಥವಾದ.
-ಕೆ.ಬಿ.ವೀರಲಿಂಗನಗೌಡ್ರ.



