ಕಾವ್ಯಸಂಗಾತಿ
ಹಮೀದ್ ಹಸನ್ ಮಾಡೂರು
“ಮೂರ್ಖರ ಯುದ್ದ”


ಯುದ್ಧ ರಣರಂಗದಲ್ಲಿ …
ಬೆಂಕಿಯುಂಡೆ ಹಾರಿತು ಅತ್ತಿತ್ತ,
ಪುಣ್ಯ ರಮಝಾನ್ ಮಾಸದಲ್ಲೂ
ಸೈತಾನನ ಬಿಚ್ಚಿ ಹೊರ ಬಿಟ್ಟರೇಕೆ?
ರಕ್ತದಾಹಕೆ ಮಕ್ಕಳ ಬಲಿ ಕೊಟ್ಟರೇಕೆ?
ರಕ್ತದಾಹಿ ದುಷ್ಟರವರು
ಜಗದೊಳು ಕಂಟಕ ದುರಾಂಕಾರಿಗಳು
ಮಾನವೀಯತೆಯ ನರರಹಿತ
ರಾಕ್ಷಸಪುತ್ರ ಅಧಿಕಾರಶಾಹಿಗಳವರು
ಕೆಣಕಿ ನೋಡ ಬಾರದಿತ್ತು ಶತ್ರುಗಳನು,!
ಕಂದಮ್ಮಗಳ ಸರಣಿ ಕೊಲೆ
ಅದೊಂದು ಅಮಾನವೀಯ ಕೃತ್ಯ
ಪಾಪಿಗಳು ಅನುಭವಿಸುತ್ತಿಹರು
ಪ್ರತಿಕಾರ ಪ್ರಾರಂಭ ಅವಕಾಶವೆಲ್ಲೊ?
ರಕ್ತದಾಹಿಗೆ ರಕ್ತದಿಂದ ಪ್ರತ್ಯೂತ್ತರವಷ್ಟೇ,!
ಯಾರ ಬೆವರಿನ ಬಂಗಲೆ,
ಯಾರದ್ದೊ ಬಾಂಬಿಗೆ ಉರುಳಲು
ಕನಸು ಹಲವರ ನುಚ್ಚುನೂರಾಗಲು
ಯುದ್ದವೆಂಬ ಭಯಾನಕತೆ ಕಾವೇರಿದೆ
ಸರ್ವನಾಶಕ್ಕೆ ಹೊಸ ಇತಿಹಾಸ ಬರೆಯಲಿದೆ,!
ಸೋತು ಹೋದರೇನು?
ಗೆದ್ದು ಪ್ರತಿಕಾರ ತೀರಿಸಿದರೇನು?,
ಈ ಸಾವು ನೋವಿಗೆ ಬಲಿಗಳಾರೊ,
ಬೆವರಿಳಿಸಿ ಕಟ್ಟಿಸಿದ ಬೆಚ್ಚನೆ ಆ ಮನೆಗಳು,
ಯುದ್ಧದ ಕಾರ್ಮೊಡಕೆ ಸಿಲುಕಿ ಮಣ್ಣಾಗಲು.!
ಹಮೀದ್ ಹಸನ್ ಮಾಡೂರು




ಬಹಳ ಚೆನ್ನಾಗಿದೆ ಯುದ್ಧ ಪ್ರಿಯರಿಗೆ ಚಾಟಿ ಏಟು