ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭಾಗ- 10
ಜಯದೇವಿ ತಾಯಿಯವರ ಜೀವನ ವೃತ್ತಾಂತ

ಜಯದೇವಿತಾಯಿಯವರು *೧೯೩೪ರಲ್ಲಿ ವೀರಶೈವ ಸಾಹಿತ್ಯ ಸಭೆಯ ಅಧ್ಯಕ್ಷರಾಗಿ …….ಸ್ತ್ರೀ ಜಾಗೃತಿ ,ಮಹಿಳೆಯರ ಪ್ರಗತಿಯ ಕುರಿತು ಮಾತನಾಡುತ್ತ …….
“ಮಹಿಳೆಯರು ಮನೆ ಕೆಲಸದಲ್ಲಿ ಜೇಡರ ಹುಳುವಿನಂತೆ ಬಂಧಿಸಿಕೊಂಡಿದ್ದಾಳೆ….
ಓದು ಬರಹಗಳಿಗೆ ಸಮಯ ಉಳಿಸಿಕೊಳ್ಳದೆ ದುಡಿಯುತ್ತಿರುತಾಳೆ ….,ಅವಳಿಗೆ ದುಡಿಮೆ ಆರ್ಥಿಕ ಆದಾಯವಿಲ್ಲದ ಕಾರಣ ಅವಳು ಪರಾವಲಂಬನೆ ಆಗಿ ಬದುಕುತ್ತಿದ್ದಾಳೆ ಕೀಳರಮಿಯ ಭಾವನೆಯಲ್ಲಿ ಬಳಲುತ್ತಿದ್ದಾಳೆ…..!!!! ಇಂಥ ಅವಹೇಳನಕರ ಭಾವನೆಗಳು ಅಜ್ಞಾನದಿಂದ ಉಂಟಾದದ್ದು…. ಈ ತಾರತಮ್ಯದ ಅಜ್ಞಾನವನ್ನು ಅತ್ಯಅಮೂಲ್ಯವಾದಂಥ ವಚನ ಸಾಹಿತ್ಯದ ಅಭ್ಯಾಸದಿಂದ ವಚನಗಳ ಸತತ ಮನನ ಗೊಳಿಸಿಕೊಳ್ಳುವುದರಿಂದ ದಾಸ್ಯತ್ವಭಾವನೆಗಳಿಂದ ದೂರಗೊಳ್ಳಬಹುದಾಗಿದೆ… !!!

ಮಹಿಳೆಯರು ಶಿಕ್ಷಣ ಪಡೆದು ಸಾಹಿತ್ಯ ಬರವಣಿಗೆಯಲ್ಲಿ ತೊಡಗಿಕೊಂಡು ಸ್ವಾವಲಂಬನ ಬದುಕು ಸಾಗಿಸುವ ಮೂಲಕ ದಾಶ್ಯತ್ವದ ನೆಲೆಗಳ ಮಧ್ಯದಲ್ಲಿ ತನ್ನದೇ ಆದ ಬದುಕನ್ನು ಸ್ಥಾಪಿಸಬೇಕು .

ಮಹಿಳೆಯರಲ್ಲಿ ಜಾಗೃತಿ ಉಂಟು ಮಾಡುವುದೇ ನಮ್ಮ ಸಭೆಗಳ ಉದ್ದೇಶವಾಗಿರಬೇಕು ಅಂತ ಹೇಳಿದರು .
ಮಹಿಳೆಯರು ತಮ್ಮ ಗೌರವವನ್ನು …. ಕೇವಲ ಆಚರಣೆಗಳಿಗೆ ಸೀಮಿತ ಗೊಳಿಸಿಕೊಳ್ಳಬಾರದು ಸದಾ ತಮ್ಮ ಅಭಿವೃದ್ಧಿಗಾಗಿ ಕೆಲಸ ಮಾಡಬೇಕೆಂದು” ಜಯದೇವಿ ತಾಯಿಯವರು ಬಯಸುತ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಅಂದಿನ ಸಂಪ್ರದಾಯಿಕ ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳು ಪುರುಷ ಸಮಾಜದ ಸಮವಾಗಿ ಸಭೆ ಸಮಾರಂಭಗಳನ್ನು ಪಾಲ್ಗೊಳ್ಳುವುದೇ ವಿರಳವಾಗಿತ್ತು .ಹೆಣ್ಣು ಮಕ್ಕಳು ಶಿಕ್ಷಣ ಕಲಿತರೆ ಮನೆ ಕೆಲಸ ಮಾಡುವುದಿಲ್ಲ ಎಂದು ಅವಳನ್ನು ಹಿಂದಿಟ್ಟಿದ್ದರು. ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳನ್ನು ಸಾಮಾಜಿಕ ರಂಗದಿಂದ ಹಿಂದೆಸರಿಸುವ ಎಲ್ಲ ಗೊಡ್ಡು ಆಚರಣೆಗಳನ್ನು ಮೌಢ್ಯತೆಗಳನ್ನು ಹೇರಿ ಮಹಿಳೆಯರು ಭಯ ಬೀಳುವಂತೆ ಮಾಡುತ್ತಿದ್ದ ಕಾಲ ಅದಾಗಿತ್ತು..

ಶೈಕ್ಷಣಿಕವಾಗಿ ಎಷ್ಟೇ ಸಮಾನತೆಯನ್ನು ಒದಗಿಸಿತ್ತೇವೆ ಅಂತ ಬ್ರಿಟಿಷರು ಹೇಳುತ್ತಿದ್ದರು ಆಗಿನ ಕಾಲದಲ್ಲಿ ಹೆಣ್ಣು ಮಗಳು ನಾಲ್ಕು ಗೋಡೆಯ ಮಧ್ಯೆ ಅವಳ ಜೀವನವನ್ನು ನಡೆಸಬೇಕು ಕುಟುಂಬವನ್ನು ನಿಭಾಯಿಸಿಕೊಂಡು ಮಕ್ಕಳನ್ನು ಹೆತ್ತು ಬೆಳೆಸಬೇಕು ಅನ್ನುವ ಕಾಲ ಅದಾಗಿತ್ತು…. ಅಂತಹದರಲ್ಲಿ ತಾಯಿಯವರು ಹೆಣ್ಣು ಮಕ್ಕಳು ಜೇಡರ ಹುಳದಂತೆ ಬಲೆಯಲ್ಲಿ ಸಿಕ್ಕಿ ಬಿಳದೆ ಅದನ್ನು ಬಿಡಿಸಿ ಹೊರಗೆ ಬರಬೇಕು ಸಾಹಿತ್ಯವನ್ನು ಓದಬೇಕು.
ಬರವಣಿಗೆ ಮಾಡಬೇಕು ತನ್ನ ಸರ್ವತೋ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಬೇಕು ,ತನ್ನದೇ ಆದ ಜೀವನವನ್ನು ನಿರ್ಮಿಸಬೇಕು ಅನ್ನುವ ದೀರೋದ್ಯಾತ ಕರೆಯನ್ನು ಜಯದೇವಿತಾಯಿಯವರು ಹೆಣ್ಣು ಮಕ್ಕಳಿಗೆ ಕೊಡುತ್ತಿದ್ದರು.‌…ಆಗಿನ ದಿನಗಳಲ್ಲಿ,!!!

ಅವರು ತಮ್ಮ ಭಾಷಣಗಳಲ್ಲಿ ಹೆಣ್ಣು ಮಕ್ಕಳ ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸುವದಷ್ಟೇ ಅಲ್ಲದೆ
ಸ್ವಂತ ಸೊಲ್ಲಾಪುರದಲ್ಲಿ ವೃದ್ಧಾಶ್ರಮ ಅನಾಥ ಆಶ್ರಮಗಳನ್ನು ಕೇವಲ ಹೆಣ್ಣು ಮಕ್ಕಳಿಗಾಗಿ ತೆರೆದರು. ಅವರಿಗೆ ಪೂಜೆ ಭಜನೆ ಅನೇಕ ಸಮಾಜಪರ ಚಟುವಟಿಗಳಿಗಾಗಿ ಅನುಕೂಲಗಳನ್ನು ಮಾಡಿಕೊಟ್ಟರು. ವೃದ್ಧರು… ಅನಾಥ ಹೆಣ್ಣು ಮಕ್ಕಳ ಮನಸ್ಸಿನ ನೆಮ್ಮದಿಗಾಗಿ ವಚನ ಸ್ಪರ್ಧೆಗಳನ್ನು ಅನೇಕ ವಿವಿಧ ರೀತಿಯ ಚಟುವಟಿಕೆಗಳನ್ನು ಏರ್ಪಡಿಸುತಿದ್ದರು.

೧೯೩೫ರಲ್ಲಿ ಶಿಕ್ಷಣಕ್ಕಾಗಿ ಹರಡೇಕರ್ ಮಂಜಪ್ಪನವರು ” ಅಕ್ಕಮಹಾದೇವಿ ಜಯಂತಿ* ಬಸವ ಜಯಂತಿ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾರಾರಂಭಿಸಿದರು ಅಕ್ಕನ ಬೆಳಗನ್ನು ಅಲ್ಲಲ್ಲಿ ಸ್ಥಾಪಿಸಿದ್ದರು.

ಮಹಿಳೆಯರ ಪ್ರಚಲಿತ ವಿದ್ಯಮಾನಗಳನ್ನು ಅರಿತುಕೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲಿ ಅನ್ನುವ ಉದ್ದೇಶಕ್ಕಾಗಿ ಹರಡೇಕರ್ ಮಂಜಪ್ಪನವರ ಕನ್ನಡ ಪತ್ರಿಕೆಯನ್ನು ವೀರಶೈವ ಮಹಿಳಾ ಜ್ಞಾನ ಮಂದಿರಕ್ಕೆ ತರಿಸುತ್ತಿದ್ದರು. ಹೀಗಾಗಿ ತಾಯಿಯವರು ಕನ್ನಡಕ್ಕೆ ಚಿರಪಚಿತರಾಗಿದ್ದರು . ಹಾಗೆ ಹರಡೆಕರ ಮಂಜಪ್ಪನವರೊಂದಿಗೆ ಸ್ವಾತಂತ್ರದ ಹೋರಾಟ ಸ್ತ್ರೀ ವಿಮೋಚನೆಯ ಬಗ್ಗೆ ಅನೇಕ ಸಲ ಭೇಟಿ ಮಾಡಿದ್ದರು.

ಜಯದೇವಿ ತಾಯಿಯವರು ಸ್ವಾತಂತ್ರ ಹೋರಾಟ ಹಾಗೂ ಹೆಣ್ಣು ಮಕ್ಕಳ ಸ್ವಾತಂತ್ರ್ಯಕ್ಕಾಗಿ ಆಯೋಜಿಸಲಾಗುವ ಎಲ್ಲ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು .
*೨೪-೪-೧೯೩೯ *ರಂದು ವೀರಶೈವ ಮಹಾಸಭೆಯ ಮಹಿಳಾ ಪರಿಷತ್ತಿನ ಅಧ್ಯಕ್ಷ ಯಾದರು. ಸಭೆಯಲ್ಲಿ ಮಾತನಾಡುತ್ತಾ…
*ಎಲ್ಲ ಸ್ತ್ರೀ ಪುರುಷರು ಸಮಾನರು…… ಸ್ತ್ರೀಯು ಪತಿಯ ಅರ್ಧಾಂಗಿಣಿಯಾಗಿ ಮನೆ ಕೆಲಸವನ್ನೆಲ್ಲ ಮಾಡುವಂತೆ ಪತಿಯು ಸಹ ಅವಳಷ್ಟೇ ಜವಾಬ್ದಾರಿ ಹೊಂದಿರುತ್ತಾರೆ ಇಬ್ಬರು ಸರಿ ಹಂಚಿಕೊಂಡು ಕುಟುಂಬವನ್ನು ನಡೆಸಿಕೊಂಡು ಹೋದರೆ ಸ್ವರ್ಗವನ್ನೇ ಧರೆಗೆ ಇಳಿಸಬಹುದು.. ನಮ್ಮಹಿಂದಿನ ಸಂಸ್ಕೃತಿಯನ್ನು ಮರೆಯದೇ ಸಮಾನತೆ ಯೊಂದಿಗೆ ನಡೆಯಬೇಕು‌. ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರಿಗೆ ಶಿಕ್ಷಣದ ಅನುಕೂಲ ಸಾಕಷ್ಟು ಒದಗಿ ಬಂದಿದೆ ಅದನ್ನು ಸದುಪಯೋಗ ಪಡಿಸಿಕೊಂಡು ಶಿಕ್ಷಣ ಪಡೆದುಕೊಳ್ಳಬೇಕು ಎಂದು ಸಾರಿದರು.

  • ನಮ್ಮ ದೇಶದ ಸಂಸ್ಕೃತಿಯನ್ನು ನಾವು ಉಳಿಸಿಕೊಂಡರೆ ಬೇರೆಯವರ ಅನುಕರಣೆಯ ಅಗತ್ಯವಿರಲಾರದು ಹಾಗೆ ……ಎಲೆಗಳಿಗೆ ನೀರು ಉಣಿಸಿದರೆ ಸಾಲದು ಬೇರಿಗೆ ನೀರು ಹಾಕಬೇಕು ಒಬ್ಬ ಸ್ತ್ರೀಗೆ ಶಿಕ್ಷಣ ಕೊಟ್ಟರೆ ಇಡೀ ಕುಟುಂಬ ಸುಧಾರಿಸುತ್ತದೆ *
    ಎಂದು ಮಹಿಳೆಯರ ಶಿಕ್ಷಣವನ್ನು ಬೆಂಬಲಿಸಿ ಮಾತನಾಡಿದರು. 12ನೇ ಶತಮಾನದ ಸ್ತ್ರೀಯರ ಬಗ್ಗೆ ಅಭಿಮಾನ ಹೊಂದಿದ ಜಯದೇವಿ ತಾಯಿಯವರು ವಚನಗಳನ್ನು ಓದುವುದರಿಂದ ಅಜ್ಞಾನ ದೂರಮಾಡಿಕೊಂಡು ಸಹಬಾಳ್ವೆ ನಡೆಸುವದಕ್ಕೊಂದು ದಾರಿ ತೆರೆದುಕೊಳ್ಳುವುದು ಎಂದರು.

*೧೯೪೦ರಲ್ಲಿ * ಜಯದೇವಿ ತಾಯಿಯವರು ಸ್ವಂತ ಜಗವನ್ನು ಖರೀದಿಸಿ* ಜಯದೇವಿ ಕನ್ಯಾ ಶಾಲೆ*
ಅಥವಾ *ಕನ್ನಡ ಕನ್ಯಾ ಶಾಲೆ *ಎಂದು ಆ ಶಾಲೆಗೆ ಮರು ನಾಮಕರಣ ಮಾಡಿದರು .
ಮುಂದೆ ಮರಾಠಿ ಅಭಿಮಾನಿಗಳು ಕೆಲವರು ಈ ಶಾಲೆಯಲ್ಲಿ ಮರಾಠಿ ಕಲಿಸಲು ಇಚ್ಚಿಸಿದರು. ಕನ್ನಡ ಶಾಲೆ ತೆಗೆದು ಮರಾಠಿ ಆರಂಭಿಸುವುದಾದರೆ ನನ್ನ ಹೆಸರನ್ನು ತೆಗೆದು ಸಿದ್ದರಾಮನ ಹೆಸರು ಶಾಲೆಗೆ ಬರಲಿ ಎಂದು ಹೇಳುವ ಮೂಲಕ ಕನ್ನಡತನವನ್ನು ಎತ್ತಿ ಹಿಡಿಯುತ್ತಾರೆ. ಅಂತಯೇ ಅವರು ಕನ್ನಡದ ಮಾತೆ ಅಂತ ಕರೆಯಲಾಯಿತು.

*೧೯೪೦ ರಲ್ಲಿ *ಆಂಧ್ರದ ಸದಾಶಿವಪೇಠದಲ್ಲಿ ಜರುಗಿದ ಬಸವ ಜಯಂತಿ ಕಾರ್ಯಕ್ರಮಕ್ಕೆ ಹೋಗಿ ಬಸವ ಶರಣರು ಶರಣೀಯರಲ್ಲಿ ಇದ್ದ ಸಮಾನತೆಯ ಬಗ್ಗೆ ಭಾಷಣ ಮಾಡಿದರು .

*೧೯೪೧ರಲ್ಲಿ *ಉದುಗೀರದಲ್ಲಿ ನಡೆದ ಅಕ್ಕನ ಹುಣ್ಣಿಮೆಯ ಕಾರ್ಯಕ್ರಮಕ್ಕೆ ಹೋಗಿ ಮೂರು ದಿನ ಅಲ್ಲಿಯೇ ಉಳಿದು ಅಧ್ಯಕ್ಷತೆ ವಹಿಸಿ ಸ್ತ್ರೀ ಜಾಗೃತಿ, ಕಾರ್ಯಕ್ರಮ ಹಮ್ಮಿಕೊಂಡರು .ಅದೇ ಸಮಯದಲ್ಲಿ *ಪ್ರಭುರಾವ್ ಕಂಬಳಿ ಬಾಬಾ *ಅವರ ಪರಿಚಯ ಆಯಿತು. ಶರಣ ಸಂಸ್ಕೃತಿ ಮತ್ತು ಸಮಾಜಪರ ಕಾರ್ಯಗಳಲ್ಲಿ ಸಹಕಾರ ನೀಡುವವರಾಗಿದ್ದರು ಕಂಬಳಿಬಾಬಾರು.

೧೯೪೧ ರಲ್ಲಿ ಹೈದ್ರಾಬಾದಿನಲ್ಲಿ ನಡೆದ ನಾಲ್ಕನೇ *ವೀರಶೈವ ಮಹಾಸಭೆಯ ಪ್ರಾಂತೀಯ ಸಮ್ಮೇಳನದ *ಅಧ್ಯಕ್ಷತೆಯ ಸ್ಥಾನವನ್ನು ವಹಿಸಿದ್ದರು.

*ಹೆಣ್ಣು ಬಾಲ್ಯದಲ್ಲಿ ತಂದೆಯ ಆಶ್ರಯದಲ್ಲಿ ಯೌವನದಲ್ಲಿ ಗಂಡನ ಆಶ್ರಯದಲ್ಲಿ ವಯಸ್ಸಾದ ನಂತರ ಮಗನ ಆಶ್ರಯದಲ್ಲಿ ಕಳೆಯುತ್ತಾಳೆ. ತಂದೆ ಇಲ್ಲದವರ ,ಮದುವೆಯಾದರು ಮಕ್ಕಳಿಲ್ಲದ ಮಹಿಳೆಯರ ಸಮಸ್ಯೆಗೆ ಪರಿಹಾರವೇನು??!
ಹೆಣ್ಣಿಗೆ ಸೌರಕ್ಷಣೆ ಕೊಡುವುದು ಸಮಾಜದ ಹೊಣೆಯಲ್ಲವೇ….??!!!
ವೃದ್ಧೆಯಾಗಿ ಅನಾಥರಾದವರಿಗೂ ಸಂರಕ್ಷಣೆ ಕೊಡುವುದು ಸಮಾಜದ ಹೊಣೆಅಲ್ಲವೇ??!! ಅನಾಥ ವಿಧವೆ ಅಸಹಾಯಕರ ಬದುಕಿಗೆ ಒಂದು ನೆಲೆಯನ್ನು ಒದಗಿಸಲು ಯಾವ ವ್ಯವಸ್ಥೆಯನ್ನು ಮಾಡಲಿದ್ದೀರಿ” ಎಂದು ಸಮಾಜವನ್ನು ಪ್ರಶ್ನಿಸಿದರು.

೧೯೪೫ ಜಾಗತಿಕ ಮಹಿಳಾ ವರ್ಷವನ್ನು ಸಾರಿತ್ತು.೧೨-೯-೧೯೪೫ರಂದು
*ವಿಜಯಪುರದಲ್ಲಿ *ನಡೆದ ಮಹಿಳಾ ಪರಿಷತ್ತಿನ ಉದ್ಘಾಟನೆಯ ಭಾಷಣಕಾರ್ತಿಯಾಗಿ ಬಂದರು.

ಹೆಣ್ಣುಮಕ್ಕಳು ಸ್ವಾಭಾವಿಕವಾಗಿ ಭಾವುಕರು ಭಾವನೆಯೇ ಜೀವನವೆಂದು ನಂಬಿಕೊಂಡವರು ಅವರು ಜೀವನದ ವಿವಿಧ ಸನ್ನಿವೇಶಗಳಲ್ಲಿ ಹೊಂದಾಣಿಕೆ ಮನೋಭಾವವುಳ್ಳವರು ತಮಗೆ ಒದಗಿ ಬರುವ ಕಷ್ಟದ ಅನುಭವಗಳನ್ನು ಅಭಿವ್ಯಕ್ತಗೊಳಿಸಲು ಸ್ವಾತಂತ್ರ್ಯವನ್ನು ಪಡೆದುಕೊಳ್ಳಬೇಕು ಎಂದು ಹೇಳುತ್ತಾ …..ಸಮಾಜದ ಮಹಿಳೆಯರ ಅಸಹಾಯಕತೆ ಸ್ಥಾನಮಾನ ಹಾಗೂ ಆಕೆಯ ಭದ್ರತೆಯ ಕುರಿತು ಜನರನ್ನು ಎಚ್ಚರಿಸಿದ್ದರು.

ಆಗ ಧಾರವಾಡದಲ್ಲಿ ಕರ್ನಾಟಕ ಸಂಘದ ಆಚರಣೆ ಹಮ್ಮಿಕೊಂಡಾಗ…. ಮುಖ್ಯ ಅತಿಥಿಯಾಗಿ ಜಯದೇವಿ ತಾಯಿಯವರು ಪಾಲ್ಗೊಂಡಿದ್ದರು .

“ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರನ್ನು ಗೌರವದಿಂದ ಕಾಣುವುದರ ಜೊತೆಗೆ ಶೋಷಣೆ ಮಾಡುತ್ತಾ ಬಂದಿರುವುದು ವಾಸ್ತವ್ಯ ಸಂಗತಿ. ಸದಾ ಕಾಲ ಮಹಿಳೆಯರನ್ನು ಹೀನವಾಗಿ ಕಂಡು ಶೋಷಣೆಯ ಬಲಿಪಶು ಮಾಡುತ್ತಾರೆ .ಇಂಥ ಸಂಸ್ಕೃತಿಯ ನೆಲೆಯಲ್ಲಿ ಬೆಳೆದು ಬಂದ ಭಾರತೀಯ ಕುಟುಂಬಗಳು ಸಾಕಷ್ಟಿವೆ .
ಬ್ರಿಟಿಷರ ಶಿಕ್ಷಣ ಪ್ರಭಾವದ ಹಿನ್ನೆಲೆಯಲ್ಲಿ ವಿದ್ಯಾವಂತ ಹಾಗೂ ಶ್ರೀಮಂತ ವರ್ಗದ ಕುಟುಂಬದ ಸ್ತ್ರೀ ಪುರುಷರು ಶಿಕ್ಷಣವನ್ನು ಪಡೆದುಕೊಂಡು ಆಧುನಿಕ ಸಮಾಜದ ನಿರ್ಮಾಣಕ್ಕೆ ಕಾರಣರಾದವರು.
ಉನ್ನತ ಶಿಕ್ಷಣ ಪಡೆದ ಮಹಿಳೆಯರು ಹಲವು ಭಾಷೆಗಳನ್ನು ಬಲ್ಲವರಾಗಿರುತ್ತಾರೆ. ಅವರು ನಮ್ಮನಾಡಿನ ಉತ್ತಮವಾದ ಸಾಹಿತ್ಯವನ್ನು ಅನ್ಯ ಭಾಷಿಗರಿಗೆ ತಿಳಿಸಬೇಕು‌. ಸ್ತ್ರೀಯರು ಪುರುಷರಂತೆ ಲೌಕಿಕ ಅಲೌಕಿಕ ಎರಡನ್ನು ಸಾಧಿಸಲು ಸಾಧ್ಯ. ಮಾನವ ಕುಲದ ಮುನ್ನಡೆಗೆ ಕಾರಣರಾಗಲು ಸಾಧ್ಯವೆನ್ನುತಿದ್ದರು.

ಅದೇ ರೀತಿ ಪ್ರತಿಯೊಂದು ಹೆಣ್ಣು ಮಗಳು ಮುಂದೆ ಬಂದು ಸಮಾಜಕ್ಕಾಗಿ ಕೊಡುಗೆಯನ್ನು ಕೊಡಬೇಕು ಎಂದು ಕೇಳಿಕೊಂಡರು.

ಜಯದೇವಿ ತಾಯಿಯವರು* ಪಂಡರಪುರದ ವಿಶ್ವ ಹಿಂದೂ ಪರಿಷತ್ತಿನಲ್ಲಿ *ಭಾಗವಹಿಸಿದಾಗ ಒಬ್ಬ ಭಾಷಣಗಾರರು “ಘೋರ ಕುಂಬಾರ್ ಗಡಗಿ ಕೊಡಲಿ…. ತುಕಾರಾಂ ಕಾಳು ಕೊಡಲಿ…..” ಎಂದು ಹೇಳುತ್ತಾ ಎಲ್ಲ ಸಂತರನ್ನು ಅವರವರ ಗುಣ ಕಾಯದಿಂದ ನೆನೆಯುತ್ತ ಕೇವಲ ಶ್ರೇಷ್ಠ ಪುರುಷ ಸಂತರದಷ್ಟೇ ನೆನೆದರು.

ಆಗ ಜಯದೇವಿ ತಾಯಿಯವರು ತಮ್ಮ ಭಾಷಣದಲ್ಲಿ “ಸಕ್ಕೂಬಾಯಿಯನ್ನು ಕರೆಯಿರಿ ಕಾಳು ಬೀಸಿ ಕೊಡಲಿ….. ರುಕುಮಾಬಾಯಿಯನ್ನು ಕರೆಯಿರಿ ಟೊಂಕದ ಮೇಲೆ ಕೈ ಇಟ್ಟುಕೊಂಡು ಉಪಚಾರಗಳನ್ನು ನೋಡಿಕೊಳ್ಳಲಿ ……ಇಂಥ ಸಂತಿನಿಯರನ್ನು ನೀವು ಮರೆಯೋದೇಕೆ…??!!! ಎಂದು ಪ್ರಶ್ನಿಸಿದರು .
ಮಹಿಳೆಯರ ಸಾಧನೆಯನ್ನು ಸ್ಮರಿಸುತ್ತ ಸಮಾಜದ ವ್ಯವಸ್ಥೆಯನ್ನು ತಾವಿದ್ದ ಸ್ಥಳದಲ್ಲಿ ಟೀಕಿಸುತ್ತಿದ್ದರು. ‌ಸಂತಿಣೀಯರ ಸಾಧನೆಯನ್ನು ಗೌಣ್ಯ ಮಾಡಿ ಅವಳನ್ನು ಮನೆ ಕೆಲಸಕ್ಕೆ ಸೀಮಿತಗೊಳಿಸುತ್ತಿದ್ದ ವ್ಯವಸ್ಥೆಯನ್ನು ಸಹಿಸುತ್ತಿರಲಿಲ್ಲ …….!!

ಹರಸೀದೆ ನಿನದಾಟಿ ನಿನ್ಹಾಡಿ ತಾಯವ್ವ
ಬರದೇನ ಮನತುಂಬಿ ಪಾಡಿ ನಮವ್ವ
ಬರದೇನ ಮನೆ ತುಂಬಿ ನಿನ್ಹೆಸರಲೆ
ಕರೆದೇನ ತಾಯಿ ಪದವೆಂದು….

ಎಂದು ಹಾಡುತ್ತಾ ತಾಯಿಯಂದಿರಿಗಾಗಿ ಪದಗಳನು ಬರೆದ ತಾಯಿಯ ಪದಗಳ ಎಂಬ ಕವನ ಸಂಕಲನವು ಪ್ರಚಲಿತವಾಯಿತು .

ಹೆಣ್ಣು ಮಕ್ಕಳು ಹುಟ್ಟಿದರೆ ಮನೆಯಲ್ಲಿ ನಡುಗಂಬಗಳು ಸಹ ನಡುಗುತ್ತವೆ ……
ಅದೇ ಗಂಡು ಮಕ್ಕಳು ಹುಟ್ಟಿದಾಗ ಗಜಭೀಮ ಹುಟ್ಟಿದನೆಂದು ಬಾಗಿಲಿನ ಚಿಲಕ ಬೋಧಿಗಳೆಲ್ಲ ನಗುತ್ತವೆ……. ಅನ್ನುವುದನ್ನು ತಾಯಿಯವರು ಖಡಾ ಖಂಡಿತವಾಗಿ ವಿರೋಧಿಸುತ್ತಿದ್ದರು.

ಹೆಣ್ಣು ಮಕ್ಕಳು ಹುಟ್ಟಿದಾಗ ತಾಯಿ ಅಳಬಾರದು ನೊಂದುಕೊಳ್ಳಬಾರದು ಹೆಣ್ಣು ಜಗದ ಕಣ್ಣು ಎಂದು ತಮ್ಮ ಪದದಲ್ಲಿ ಹೇಳುತ್ತಾರೆ ‌.

ಹೆಣ್ಣು ಹುಟ್ಟಿತೆಂದು| ಕಣ್ಣೀರ ಕರಿಬ್ಯಾಡ ಸಣ್ಣಗಾಗಬ್ಯಾಡ ಮನದಾಗ -ತಾಯವ್ವ ಹೆಣ್ಣಿನ ಜಗದ ಕಣ್ಣ!!

ಅವರು ಹೋದ ಪ್ರತಿಯೊಂದು ಸಭೆಗಳಲ್ಲಿ
“ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲ
ಹೆಣ್ಣು ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ ನೋಡ” ಎಂದು ಶಿವಯೋಗಿ ಸಿದ್ದರಾಮೇಶ್ವರರು ಹೇಳುವ ಮಾತು ಹೇಳಲು ಎಂದು ಮರೆಯುತ್ತಿರಲಿಲ್ಲ.

ಶರಣ ಶ್ರೇಷ್ಠರಾದ ಸೊಲ್ಲಾಪುರದ ಶ್ರೀ ಸಿದ್ಧರಾಮರು ನುಡಿದ ಈ ವಚನದಲ್ಲಿ ಎರಡು ಮಾತುಗಳು ಎದ್ದು ಕಾಣುತ್ತವೆ ಹೆಣ್ಣಿನಲ್ಲಿದ್ದ ದೈವತ್ವವನ್ನು ಶರಣರು ಸ್ಪಷ್ಟಪಡಿಸಿದ್ದಾರೆ .ಅವಳ ಸತ್ಯ ಸೇವೆ ಪ್ರೇಮ ತ್ಯಾಗ ಅಹಿಂಸೆಗಳ ಸ್ವರೂಪ ಎಂದು ಸತ್ವ ಸಾಮರ್ಥ್ಯಗಳಿಂದಲೂ ಕ್ರಿಯಾಚಾರದಿಂದ ಕನ್ನಡ ನಾಡಿನಲ್ಲಿ ಪ್ರಸ್ತಾಪಿಸಿದ್ದಾಳೆ ಎಂದು ಈ ಪರಂಪರೆಯು ಜಾಗೃತಗೊಳ್ಳಬೇಕು. ಈ ತೇಜೋಮಯ ಬಲ ಮೈಮನದಲ್ಲೂ ಬೇರೂರಬೇಕು .ಈ ನಮ್ಮ ಶರಣ ಸಂಸ್ಕೃತಿಯು ಎಲ್ಲಡೆಯು ಹರಡಬೇಕೆಂದು ಪ್ರತಿಪಾದಿಸಿದರು.

ಹೆಣ್ಣಿನ ಕಳವಳ ಕೇಳಿ ತಾ ಕರಗ್ಯಾನ
ಅಣ್ಣ ಮಾಡ್ಯಾನ ಪಾವನ -ಹೆಣ್ಣಿನ
ಪುಣ್ಯ ಕಟಕೊಂಡ ಬಸವಣ್ಣ !!

ಹೆಣ್ಣು ಜೀವಕ ಅಕ್ಕ ಹೊಸಗಣ್ಣ ನೀ ಕೊಟ್ಟಿ
ಎಣ್ಣ್ಯಾಗಿ ಬತ್ತಿಯಾಗಿ ದೀಪಾಗಿ -ದೀಪ್ತಿಯಾಗಿ
ಅಣಿ ಮಾಡಿ ಕೊಟ್ಟೀನಿ ಕಿರು ನುಡಿ!!

ಅಂತ ಹೀಗೆ ಅನೇಕ ಪದಗಳನ್ನು ಹೆಣ್ಣಿನ ಬಗ್ಗೆ ಬರೆದರು.

ತಾಯಿಯವರು ಈಗಾಗಲೇ ತಮ್ಮ ನಿರ್ಗಳ ವಾಕ್ ವೈಖರಿಯಿಂದ ಮತ್ತು ನಿಷ್ಕಲ್ಮಶ ವ್ಯಕ್ತಿತ್ವದಿಂದ ನಾಡಿನ ಜನಮನದ ಮನೆಮಾತಾದರು.

ಅದೇ ರೀತಿ ಸೊಲ್ಲಾಪುರದಲಿ ವಚನ ಸಾಹಿತ್ಯ ಹಾಗೂ ಗಾಂಧಿ ಪ್ರಭಾವದಿಂದ ಸುಶಿಕ್ಷಿತ ಶ್ರೀಮಂತ ಕುಟುಂಬದಲ್ಲಿ ಬೆಳೆದು ಬಂದ ಜಯದೇವಿ ತಾಯಿಯವರು ದಲಿತ ಅಭಿವೃದ್ಧಿ ಮಹಿಳಾ ಸ್ವಾತಂತ್ರ ಸಮಾನತೆ ಸಾಕ್ಷರತೆಗಾಗಿ ಶ್ರಮಿಸಿದರು .


ಸವಿತಾ ದೇಶಮುಖ

About The Author

Leave a Reply

You cannot copy content of this page

Scroll to Top