ಮಹಿಳಾದಿನದ ವಿಶೇಷ
ಜಯಶ್ರೀ ಭ. ಭಂಡಾರಿ
ವಿಶ್ವ ಮಹಿಳಾ ದಿನಾಚರಣೆ
ವಿಶೇಷತೆ.


ನಾರಿ ಹಿ ಸಾರಿ ಕಿ ಹೈ.
ಸಾರಿ ಹಿ ನಾರಿ ಕಿ ಹೈ.
“ಎಲ್ಲವೂ ನಾರಿಯೇ.
ನಾರಿಯೇ ಎಲ್ಲಾ'”
ಮಾತೃದೇವೋ ಭವ ಪೂಜ್ಯತೆ ಪಡೆದವಳು.
ಎಲ್ಲ ಕಡೆ ತಾನಿರಲಾಗುವುದಿಲ್ಲವೆಂದೇ ಪ್ರತಿ ಮನೆಯಲಿ ಒಬ್ಬ ತಾಯಿಯನ್ನು ದೇವರು ಸೃಷ್ಟಿ ಮಾಡಿದನಂತೆ.
ತಾಯಿಯ ಎದೆ ಹಾಲೆಂಬ ಬಿಳಿ ಮಸಿ ಮಗುವಿನ ಭವಿಷ್ಯ ರೂಪಿಸುತ್ತದೆ. ಕಾರಣ ತಾಯಿ ಹಾಲೂಡಿಸುವಾಗ ” ಈ ನನ್ನ ಕಂದ ಜಗತ್ತನ್ನೇ ಗೆಲ್ಲುವ ಬಲಶಾಲಿಯಾಗಲಿ ” ಎಂದು ಮಮತೆ ತುಂಬಿ ಹಾರೈಸಿ ಹರಸುವಳು.
“ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ” ಎಂದರೆ ಹೆತ್ತ ತಾಯಿ,ಹೊತ್ತ ಭೂಮಿ ಇವೆರಡೂ ಸ್ವರ್ಗಕ್ಕಿಂತಲೂ ಮಿಗಿಲು.
ಇವರಿಬ್ಬರ ಋಣ ತೀರಿಸಲಾಗದು. ತಾಯಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ತಾಯಿಯೆಂಬ ಮಹಿಳೆಗೂ ಒಂದು ದಿನವಿದೆ. ಅದೆಂದರೆ ” ವಿಶ್ವ ಮಹಿಳಾ ದಿನಾಚರಣೆ”.
ವಿಶ್ವದೆಲ್ಲೆಡೆ ಸಂಭ್ರಮದಿಂದ. ಆಚರಿಸಲಾಗುತ್ತದೆ
1910ರ ಆಗಸ್ಟ್‌ನಲ್ಲಿ ಡೆನ್ಮಾರ್ಕ್‌ನ ಕೋಪೆನ್‌ಹೇಗನ್‌ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದರು. ಅಮೆರಿಕೆಯ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ಬಂದಿದ್ದರು. ಈ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್‌ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್‌ಕಿನ್ ಅಧ್ಯಕ್ಷೆಯಾಗಿದ್ದಳು. ಈ ಸಮ್ಮೇಳನದಲ್ಲಿ ಚರ್ಚಿತವಾದ ಎರಡು ವಿಷಯಗಳೆಂದರೆ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರ ಸೌಕರ್ಯಗಳು.
ಕ್ಲಾರಾ ಜೆಟ್‌ಕಿನ್ ಈ ಸಮ್ಮೇಳನದಲ್ಲಿ ಮಾರ್ಚ್ 8ನ್ನು ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು ೧೯೧೧ರಲ್ಲಿ ನಿರ್ಣಯ ಮಂಡಿಸಿದರು. ಅಲ್ಲಿ ನೆರೆದಿದ್ದ ವಿವಿಧ ರಾಷ್ಟ್ರಗಳ ಸದಸ್ಯ ಪ್ರತಿನಿಧಿಗಳು ಸರ್ವಾನುಮತದಿಂದ ಸಮ್ಮತಿಸಿದರು. ಈ ಸಮ್ಮೇಳನದಲ್ಲಿ ಫಿನ್ಲೆಂಡ್‌ನಲ್ಲಿ ಆಗಷ್ಟೇ ಚುನಾಯಿತರಾಗಿದ್ದ ಮೂವರು ಮಹಿಳೆಯರಿದ್ದು, ಅವರು ಜೆಟ್‌ಕಿನ್ ಸಲಹೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಹೀಗೆ ಅಂತರರಾಷ್ಟ್ರೀಯ ಮಹಿಳಾ ದಿನವೆನ್ನುವುದು ಪ್ರತಿಭಟನೆ ಮತ್ತು ರಾಜಕೀಯ ಕ್ರಿಯಾಶೀಲತೆಯ ದಿನವಾಗಿ ಅಸ್ತಿತ್ವಕ್ಕೆ ಬಂದಿತು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಥವಾ ವಿಶ್ವ ಮಹಿಳೆಯರ ದಿನ ಪ್ರತಿ ವರ್ಷ ಮಾರ್ಚ್ ೮ ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ. ತಮ್ಮ ಹಕ್ಕುಗಳನ್ನು
ಬೇಡಿಕೆಯಾಗಿಟ್ಟುಕೊಂಡು ಮೊದಲ ಬಾರಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಇದಕ್ಕೂ ಮೊದಲು 1903ರಲ್ಲಿ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಹೋರಾಟ ನಡೆಸಿದ್ದ ಮಹಿಳಾ ಕಾರ್ಮಿಕ ಸಂಘಟನೆಗಳು ‘ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್’ ಸ್ಥಾಪಿಸಿ ರಾಜಕೀಯ ಮತ್ತು ಆರ್ಥಿಕ ಕಲ್ಯಾಣವನ್ನು ತಮ್ಮ ಸಂಘಟನೆಯ ಮುಖ್ಯ ಧ್ಯೇಯವನ್ನಾಗಿಸಿಕೊಂಡವು.
1908ರ ಫೆಬ್ರುವರಿ ಕೊನೆಯ ಭಾನುವಾರ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಬೃಹತ್ ಪ್ರತಿಭಟನಾ ಪ್ರದರ್ಶನಗಳು ನಡೆದಿದ್ದವು. ನಂತರ 1909ರಲ್ಲಿ ಸಿದ್ಧ ಉಡುಪುಗಳ ಕಾರ್ಖಾನೆಗಳಲ್ಲಿ 20,000ದಿಂದ 30,000ದಷ್ಟು ಮಹಿಳೆಯರು ಚಳಿಗಾಲದಲ್ಲಿ 13 ವಾರಗಳ ಕಾಲ ಮುಷ್ಕರ ನಡೆಸಿ ದಸ್ತಗಿರಿಯಾದರು. ಮಹಿಳೆಯರ ಟ್ರೇಡ್ ಯೂನಿ ಯನ್ ಲೀಗ್‌ನವರು ಜಾಮೀನು ನೀಡಿ ಬಂಧಿತ ಕೆಲಸ ಗಾರರನ್ನು ಬಿಡಿಸಿಕೊಂಡರು. ಈ ಅಮೆರಿಕದ ಮಹಿಳೆಯರ ಹೋರಾಟದಿಂದ ಸ್ಫೂರ್ತಿಗೊಂಡ ಕ್ಲಾರಾ ಜೆಟ್‌ಕಿನ್ ಸೋಷಿಯಲಿಸ್ಟ್ ಮಹಿಳೆಯರ ಸಮ್ಮೇಳನದಲ್ಲಿ ವರ್ಷಕ್ಕೊಮ್ಮೆ ದಿನವನ್ನು ನಿಗದಿಪಡಿಸಿ ಮಹಿಳೆಯರು ತಮ್ಮ ಬೇಡಿಕೆಗಳನ್ನು ಒತ್ತಾಯಿಸಲು ಅನುವಾಗುವಂತಹ ವ್ಯವಸ್ಥೆಗಾಗಿ ಸಲಹೆ ನೀಡಿ ಕಾರ್ಯರೂಪಕ್ಕೆ ತರಲು ಶ್ರಮಿಸಿದಳು.
ಸಬಲತೆ ಅಥವಾ ಸಶಕ್ತತೆ ಎಂಬ ಪರಿಕಲ್ಪನೆಯು ಅಧಿಕಾರ ಹೊಂದುವುದು ಮತ್ತು ಶಕ್ತಿಯುತರಾಗುವುದುನ್ನು ಸೂಚಿಸುತ್ತದೆ. ಸಬಲತೆ ಎನ್ನುವುದು ಸ್ತ್ರೀ-ಪುರುಷರಿಬ್ಬರಿಗೂ ಸಮಾಜದಲ್ಲಿ ಬದುಕಲು ಬೇಕಾದ ಶಕ್ತಿ. ಒಬ್ಬ ಮಹಿಳೆಯು ಶಕ್ತಿವಂತಳಾಗಿ, ಸ್ವತಂತ್ರವಾಗಿ ತನ್ನ ಇಚ್ಛೆಯಂತೆ ಸ್ವಾಲಂಬಿಯಾಗಿ ಬಾಳುವ ಸ್ಥಿಯನ್ನು ಸಾಮಾನ್ಯ ಅದನ್ನು ಸಬಲತೆ ಎನ್ನಬಹುದು. ಒಬ್ಬ ಮಹಿಳೆ ತನ್ನ ಜೀವನದ ಬಗ್ಗೆ ಪರಿಪೊರ್ಣ ಜ್ಞಾನವನ್ನು ಹೊಂದುವುದು, ತನ್ನ ಜೀವನದಬಗ್ಗೆ ನಿರ್ಣಯ ಹಾಗೂ ತೀರ್ಮಾನಗಳನ್ನು ಕೈಗೊಲಳ್ಳುವ ಸ್ವಾತಂತ್ರ್ಯ ಹೊಂದುವುದು, ಅಧಿಕಾರ ಹಾಗೂ ಸಂಪನ್ಮೂಲಗಳನ್ನು ಬಳಸಿಕೂಳ್ಳುವ ಅವಕಾಶಗಳನ್ನು ಹೊಂದುವುದು. ಯಾವುದೇರೀತಿಯ ಅಸಮಾನತೆ,ಶೋಷಣೆಗಳಿಗೆ ಒಳಗಾಗದೆ ಶಿಕಣ, ಉದ್ಯೋಗ, ವಿವಾಹ, ಜೀವನ, ಸಂತಾನೋತ್ಪತ್ತಿ ಆರೋಗ್ಯ ಮತ್ತು ಹಕ್ಕುಗಳನ್ನು ಹೊಂದುವುದು. ಸಾಮಾಜಿಕ ಚಾಲನೆ, ರಾಜಕೀಯ ಮತ್ತು ಆಡಳಿತದಲ್ಲಿ ಪಾಲ್ಗೋಳ್ಳುವಿಕೆ ಇಂತಹ ಅಂಶಗಳ ಬಗ್ಗೆ ಸ್ವತಂತ್ರ್ಯ ಹೊಂದಿ ಸ್ವಾಭಿಮಾನಿಯಾಗಿ ಅತ್ಮ ವಿಸ್ವಾಸದಿಂದ ಬಾಳುವಶಕ್ತಿಯೇ ಮಹಿಳಾ ಸಬಲತೆ. ಮಹಿಳಾ ಸಬಲತೆಯು ಮೂಲಭೂತವಾಗಿ ಮಹಿಳೆಯರ ಮಾನಸಿಕ ಸಬಲತೆಯೂಗಿದ್ದು ಅವರು ಪ್ರಜ್ನಾಪೂರ್ವಕವಾಗಿ ಶಕ್ತಿ ವಂತರಾಗುವ ಸ್ಥಿತಿ. ಮಹಿಳೆಯರ ಯೋಚನೆ, ಶಕ್ತಿ,ಸಾಮರ್ಥ್ಯ, ಅರಿವು, ಅಭಿವ್ಯಕ್ತಿ, ಆರೋಗ್ಯ, ನಿರ್ಣಯ, ಆತ್ಮವಿಶ್ವಾಸ,ಪಾಲ್ಗೊಳ್ಳುವಿಕೆ ಮತ್ತು ಸಾಮಾಜಿಕ ಚಾಲನೆಗಳಿಂದ ಹಂತ ಹಂತವಾಗಿ ಶಕ್ತಿವಂತಳಾಗಿ, ಸ್ವಾಲಂಬಿಯಾಗಿ ವಿಕಾಸವಾಗುವ ಕ್ರಿಯೆಯೇ ಸಬಲತೆ.
ಮಹಿಳಾ ಸಬಲತೆಯು ಬಹು ಆಯಾಮಗಳ ಪ್ರಕ್ರಿಯೆಯಾಗಿದ್ದು ವ್ಯಕ್ತಿಗತವಾಗಿ ಹಾಗೂ ಸಾಮಾಜಿಕ ಹಿನ್ನಲೆಯಲ್ಲಿ ಮೂಡಿಬರುವಂತಹದ್ದು. ವ್ಯಕ್ತಿತ್ವದೂದಿಂಗೆ ಮಹಿಳೆಯು ತನ್ನನ್ನು ಗುರುತಿಸಿಕೂಳ್ಳುವುದು, ತನ್ನ ಜೀವನದ ಬಗ್ಗೆ ಪೂರ್ಣ ಅಧಿಕಾರ ಹೊಂದುವ ಸ್ಥಿತಿ. ಪುರುಷರಿಗೆ ಸರಿಸಮಾನವಾಗಿ ಸ್ಥಾನ ಮಾನ, ವ್ಯಕ್ತಿಗೌರವ ಮತ್ತು ಘನತೆ ಹೊಂದುವುದು. ಸಾಮಾಜಿಕ ಚಾಲನೆ,ಆರ್ಥಿಕ ಸ್ವಾವಲಂಬನೆ, ಹಕ್ಕುಗಳ ಬಗ್ಗೆ ಅರಿವು, ಆರೋಗ್ಯಸೇವೆಗಳು ಮತ್ತು ಸಂಪನ್ಮೂಲಗಳ ಮೇಲಿನ ಒಡೆತನ, ಆರ್ಥಿಕ ಚಟುವಟಿಕೆಗಳು ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಆತ್ಮವಿಶ್ವಾಸದಿಂದ ಸಶಕ್ತವಾಗಿ ಬಾಳಬಹುದು.
ಮಹಿಳಾ ಸಬಲೀಕರಣದ ಉದ್ದೇಶಗಳು.
೧. ಸಮಾಜದಲ್ಲಿ ಆಚರಣೆಯಲ್ಲಿರುವ ಲಿಂಗ ತಾರತಮ್ಯವನ್ನು ತೊಡೆದುಹಾಕಿಮಹಿಳೆಯರ ಘನತೆ, ಗೌರವ ಹಾಗೂ ಸಾಮಾಜಿಕಸ್ಥಾನ ಮಾನಗಳನ್ನು ಉನ್ನತಿಗೊಳಿಸುವುದು. ೨. ಮಹಿಳೆಯರಲ್ಲಿ ಸುಪ್ತವಾಗಿರುವ ಅಪೂರ್ವ ಸಾಮರ್ಥ್ಯಗಳನ್ನು ಗುರ್ತಿಸಿ ವೃದ್ಥಿಗೂಳಿಸಿ ಅವರು ಬದಲಾವಣೆಯ ನಿಯೋಗಿಗಳಾಗಿ ರೂಪುಗೊಳ್ಳುವಂತೆ ಆತ್ಮವಿಶ್ವಾಸ ಮೂಡಿಸುವುದು. ೩. ಮಹಿಳೆಯರು ತಮ್ಮ್ ಅಭಿವೃದ್ಧಿಗೆ ಅವಕಾಶಗಳನ್ನು ಗುರುತಿಸಿಕೊಂಡು ಅಭಿವೃದ್ಧಿಯಾಗಲು ಪ್ರೋತ್ಸಾಹ ನೀಡುವುದು. ೪. ಮನೆ ಹಾಗು ಸಮುದಾಯದಲ್ಲಿ ಲಭ್ಯವಿರುವ ವಿವಿಧ ರೀತಿಯ ಸಂಪನ್ಮೂಲಗಳ ಮೇಲೆ ಅಧಿಕರ ಹೊಂದುವುದು ಹಾಗೂ ಅವುಗಳನ್ನು ಬಳಸಿಕೊಳ್ಳು ತಿಳಿವಳಿಕೆಮತ್ತು ತಂತ್ರಗಳನ್ನ್ನು ಬೆಳೆಸುವುದು. ೫. ಮಹಿಳೆಯರ ಸಂತಾನೋತ್ಪತಿ ಆರೋಗ್ಯ, ಶಿಶು ಜನನ ಮತ್ತು ಮಕ್ಕಳ ಪಾಲನೆಗಳ ಬಗ್ಗೆ ಅರಿವು ನೀಡುವುದು. ೬. ಅಸಮಾನತೆ, ಹಸಿವು, ಶೋಷಣೆ, ಹಿಂಸೆ ಹಾಗೂ ನಿಂದನೆಗಳ ವಿರುದ್ದ ಜಾಗೃತರಾಗಿ ಸಮಾನತೆಗಾಗಿ ಹಾಗೂ ಅಭಿವೃದ್ಧಿಗಾಗಿ ಸಂಘಟನಾತ್ಮಕ ಹೋರಾಟ ಮಾಡುವ ಆತ್ಮವಿಶ್ವಾಸ ಬೆಳೆಸುವುದು . ೭. ಹಕ್ಕುಗಳು ಹಾಗೂ ಅಭಿವೃದ್ಧಿಯ ಅವಕಾಶಗಳ ಬಗ್ಗೆ ಅರಿವು ಮೂಡಿಸುವುದು. ೮. ಮಹಿಳೆಯರಲ್ಲಿ ವ್ಯಕ್ತಿತ್ವ ವಿಕಾಸದೂಂದಿಗೆ ನಾಯಕತ್ವದ ಗುಣಗಳನ್ನು ಬೆಳೆಸುವುದು. ೯. ಮಹಿಳೆಯರಲ್ಲಿ ತನ್ನ ಹಾಗೂ ಕುಟುಂಬದ ಶೈಕ್ಷಣಿಕ, ಆರೋಗ್ಯ, ಆರ್ಥಿಕ ವಿಷಯಗಳಲ್ಲಿ ಸ್ವತಂತ್ರವಾಗಿ ಯೋಚಿಸುವ ಸಾಮರ್ಥ್ಯ, ಜವಾಬ್ದಾರಿ ಹೊರುವ ಹಾಗೂ ನಿರ್ಣಯ ತೆಗೆದುಕೊಳ್ಳುವ ಶಕ್ತಿಯನ್ನು ಬೆಳೆಸುವುದು.
ಆದರೆ ಇಂದು ಸಮಾಜದಲ್ಲಿ ಮಹಿಳೆಯ ಮೇಲಿನ ಅತ್ಯಾಚಾರ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಾ ಸಾಗಿವೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಯಾವ ದೇಶದಲ್ಲಿ ಸ್ತ್ರೀಯರಿಗೆ ಅತ್ಯುನ್ನತ ಸ್ಥಾನ,ಮಾನ ಗೌರವ ಇರುವುದೊ ಆ ದೇಶ ಮುಂದುವರಿದ ದೇಶವಾಗಿರುತ್ತದೆ.
“ಭೇಟಿ ಬಚಾವೋ ,ಭೇಟಿ ಪಡಾವೋ”ಸದಾ ಎಲ್ಲರ ಮನದಲ್ಲಿ ಅನುರಣಿಸಲಿ. ಜೋಗುಳ ಹಾಡಿ ಬೆಳೆಸಿದ ತಾಯಿಯನ್ನು ಸದಾ ಸ್ಮರಿಸೋಣ. ಇಳೆಯ ಕಳೆ ಹೆಚ್ಚಿಸುವ ಮಹಿಳೆ ಸದಾ ಸಂತಸದಿಂದ ಬದುಕಲಿ.
ಅವಳ ನೆರಳಿನಲ್ಲಿ ನಾವೆಲ್ಲ ಅನುಗಾಲ ಸುಖವಾಗಿರೋಣ.

ಜಯಶ್ರೀ ಭ. ಭಂಡಾರಿ



