ಕಾವ್ಯ ಸಂಗಾತಿ
ಪರವಿನಬಾನು ಯಲಿಗಾರ
“ಬದುಕು”


ಬದುಕುವುದೆಂದರೆ ಕೆಲವರಿಗೆ
ನೀರಿನ ಪ್ರವಾಹದ ಜೊತೆ
ಹುಲು ಕಡ್ಡಿ ತೇಲಿದಷ್ಟೆ ಸರಳ….
ಬದುಕುವುದೆಂದರೆ ಕೆಲವರಿಗೆ
ಸಮರಕ್ಕೆ ಸಿದ್ಧರಾದಂತೆ
ಪ್ರತಿ ಕ್ಷಣವು ಸವಾಲುಗಳ ಜೊತೆ ಸೆಣಸಾಟ….
ಬದುಕುವುದೆಂದರೆ ಕೆಲವರಿಗೆ
ಕಾರ್ಕೋಟಕ ವಿಷದ ಹನಿ ಸೇವಿಸಿದ ಹಾಗೆ
ನಿಧಾನವಾಗಿ ನೀರ್ಜಿವವಾದಂತೆ……
ಬದುಕುವುದೆಂದರೆ ಕೆಲವರಿಗೆ
ಜೇನಿನ ಹನಿಗಳ ಸವಿದಂತೆ
ಕಹಿಯ ಪರಿಚಯವೇ ಇಲ್ಲದಂತೆ…..
ಬದುಕುವುದೆಂದರೆ ಕೆಲವರಿಗೆ
ಕೆಲವೊಮ್ಮೆ ಬದುಕುವುದೆ ಬೇಡ ಎನಿಸುವುದು
ಆದರೆ ಹೊಣೆಗಾರಿಕೆಗಾಗಿ ಬದುಕು ತೆವಳುವರು….
ಪರವಿನಬಾನು ಯಲಿಗಾರ.



