ಕಾವ್ಯ ಸಂಗಾತಿ
ರತ್ನರಾಯ ಮಲ್ಲ
“ಗಜಲ್”


ಗುಲಾಬಿ ಪಲ್ಲಂಗದಲಿ ಮಲ್ಲಿಗೆಯ ಸುಮದ ಪಕಳೆ ನಿನಗಾಗಿ ಅರಳುತಿದೆ
ಬೆಳಗಿನ ಹನಿ ಸ್ಪರ್ಶದಂತೆ ನನ್ನೊಳಗೆ ಸುಕನಸು ಮರವಾಗಿ ಹೊನಲುತಿದೆ
ನಿನ್ನ ಆಲಿಂಗನದಿ ಹೂದಳದ ತೇವವು ಆಯಸ್ಕಾಂತದಂತೆ ಸೆಳೆಯುತಿದೆ
ಮಳೆ ಮಣ್ಣನು ಅಪ್ಪಿಕೊಳ್ಳುವ ಹೊತ್ತಲಿ ನಿನ್ನ ಸೇರುವ ಆಸೆ ಚಿಗುರುತಿದೆ
ಉಸಿರಿನೊಳಗಿನ ತಾಪದಲಿ ಹೃದಯದ ಅಡುಗೆಮನೆ ರಸಪಾಕ ನೀಡಿದೆ
ನಿನ್ನಿಂದ ಹೂ ಅರಳುವುದಕ್ಕೆ ಮುಂಚಿನ ಕಂಪನ ಮನದಲಿ ಹರಡುತಿದೆ
ತೆರೆದ ಹೂದೋಟದಂತಹ ಪ್ರೇಮಲೋಕದಲಿ ನಮಗೆ ವಯಸ್ಸು ತಾಗದು
ಮಧುಚಂದ್ರಕಾಗಿ ಹೂವಿನ ತೊಟ್ಟಿಲಲಿ ಸುಗಂಧದ ಹೊದಿಕೆ ಕಾಯುತಿದೆ
ನೀನು ಹೃದಯ ತಣಿಸುವ ರಮಣೀಯ ದೃಶ್ಯ ಕಾವ್ಯ ದಣಿಯುವ ಮಾತಿಲ್ಲ
ನಿನ್ನ ಮಡಿಲಲಿ ದೀಪ ದೀಪಕ್ಕೆ ಬೆಳಕು ನೀಡಲು ಮಲ್ಲಿ ಮನ ಮಿನುಗುತಿದೆ
ರತ್ನರಾಯಮಲ್ಲ



