ಕಾವ್ಯ ಸಂಗಾತಿ
ಕಲ್ಪನಾ ಎಸ್ ಪಾಟೀಲ
“ಸಂಗಾತಿ”


ಸಂಗಾತಿ ನಿನ್ನ ನಗುವೇ ನನ್ನ ಬೆಳಗಿನ
ಸೂರ್ಯನು
ನಿನ್ನ ಮಾತುಗಳೆ ನನ್ನ ಹೃದಯಕೆ ನುಡಿಸಿದಂತೆ
ಸಪ್ತ ಸ್ವರಗಳನು
ಆ ನಿನ್ನ ಕಣ್ಣುಗಳಲ್ಲಿ ಅಡಗಿರುವ ಲೆಕ್ಕಕೆ
ಸಿಗದ ಕನಸುಗಳು
ಕತ್ತಲೆಯೆ ಕವಿದಿಹ ನನ್ನ ಬದುಕಿಗೆ ದಾರಿ
ದೀಪವಾಗಿವೆ
ನೀನು ಜೊತೆಯಾದ ಪ್ರತಿ ಕ್ಷಣವೂ
ಕಾಲವೂ ಮೌನವಾಗಿ ನಿಂತಿದೆ
ನಿನ್ನ ಸ್ಪರ್ಶದ ಹಿತದಲ್ಲಿ ಎಲ್ಲ ನೋವುಗಳು
ಕರಗಿ ಹೋಗಿವೆ
ಈ ಜನ್ಮವಷ್ಟೇ ಅಲ್ಲ ಎಲ್ಲಾ ಜನ್ಮಗಳಲ್ಲೂ
ನೀನೆ ಸಂಗಾತಿಯಾಗಿರು
ನನ್ನ ಪ್ರೀತಿಗೆ ಉಸಿರಾಗಿರು ಆ ಪ್ರೀತಿಯ
ಹೆಸರೆ ನೀನಾಗಿರು
ಕಲ್ಪನಾ ಎಸ್ ಪಾಟೀಲ



