ರಾಷ್ಟ್ರೀಯ ಸಂಗಾತಿ
ನಾಗರತ್ನ ಎಚ್ ಗಂಗಾವತಿ
“ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಿದ
ಸ್ವಾಮಿ ವಿವೇಕಾನಂದರು”


*ಏಳಿ ಎದ್ದೇಳಿ ಎಚ್ಚರಾಗಿ* ಎನ್ನುವ ಸಂದೇಶವನ್ನು ನೀಡಿದಂತಹ ಸ್ವಾಮಿ ವಿವೇಕಾನಂದರು ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳಿ ಎನ್ನುವ ಮಂತ್ರದೊಂದಿಗೆ ವ್ಯಕ್ತಿತ್ವ ಪ್ರಭಾವ ಪೂರ್ವ ಮತ್ತು ಉತ್ತಮ ಬರಹಗಳ ಮೂಲಕ ಉತ್ತಮ ಸಂದೇಶ ನೀಡಿದರು ಸ್ವಾಮೀ ವಿವೇಕಾನಂದರು.
ತಮ್ಮ ವಿಚಾರಗಳಿಗೆ ಅನುಗುಣವಾಗಿ ಭಾರತೀಯ ಸಮಾಜವನ್ನು ಬದಲಾವಣೆ ಮಾಡಲು ಬಯಸಿದರು ಹಾಗೂ ವೈಜ್ಞಾನಿಕ ಪ್ರಜಾಪ್ರಭುತ್ವ ಕಲ್ಪನೆಯಲ್ಲಿ ಜಾತಿ ಪದ್ಧತಿಯನ್ನು ಮುಕ್ತವಾದ ನವ ಭಾರತ ನಿರ್ಮಾಣದ ಕನಸನ್ನು ಕಂಡಿದ್ದರು.
ಸ್ವಾಮಿ ವಿವೇಕಾನಂದರು ಭಾರತೀಯ ದೇಶಭಕ್ತ ಸುಧಾರಕ ಹಾಗೂ ಸಂಘಟಕರು ಮಾತ್ರವಲ್ಲ ರಾಷ್ಟ್ರೀಯ ಪುನರಸ್ಥಾನದ ಶಕ್ತಿಗಳನ್ನು ಹೊಡೆದ ಆಂಗ್ಲ ಆಡಳಿತದ ಹೊಡೆತಕ್ಕೆ ತತ್ತರಿಸಿ ದಾಸ್ಯದಲ್ಲಿ ಮುಳುಗಿದ್ದ ನಮ್ಮ ನಾಡಿನ ರಾಷ್ಟ್ರೀಯ ಪುನರಸ್ಥಾನದ ಹಾದಿ ಯನ್ನು ಸುಗಮಗೊಳಿಸಿದ ಅಗ್ರಗಣ್ಯರು ಎನ್ನಬಹುದು. ಭಾರತದ ಬಡ ಜನರ ಪರವಾಗಿ ಅಷ್ಟೊಂದು ತೀವ್ರ ಮರುಕರಿಂದ ತಡೆಯಲಾರದ ನೋವಿನಿಂದ ಮಾತಾಡಿ ಅವರ ಪರವಾಗಿ ಹೋರಾಡಿದರು. ಹಾಗೂ ಆಧ್ಯಾತ್ಮಿಕ ವ್ಯಕ್ತಿ ದೇಶ ಕಂಡರಿಯದ ಅಪ್ರತಿಮ ಚಿಂತಕರು ಸ್ವಾಮಿ ವಿವೇಕಾನಂದರು ರಾಷ್ಟ್ರೀಯತೆಯ ಪ್ರತೀಕವಾದರು. ಬಡವರನ್ನ ಹಿಂಸಿಸಿ
ಸುಖ-ಸೌಕರ್ಯಗಳಲ್ಲಿ ತೇಲಾಡುವವರನು ವಿರೋಧಿಸಿದ್ದಾರೆ. ಅಷ್ಟೇ ಅಲ್ಲದೆ ಅಂತವರನ್ನು ದೇಶದ್ರೋಹಿ ಅಥವಾ ವಂಚಕರೆಂದು ಕರೆಯುತ್ತಾರೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ.
ಸ್ವಾಮಿ ವಿವೇಕಾನಂದರು ಜನವರಿ 12 1863ನೇ ಜನಿಸಿದರು ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರು ನಿರ್ಭಯತೆ ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿಸಿದ್ದಾರೆ ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ 12ರಂದು *ರಾಷ್ಟ್ರೀಯ ಯುವ ದಿನವೆಂದು* ಆಚರಿಸಲಾಗುತ್ತದೆ.
ಇವರ ಜನ್ಮನಾಮ ನರೇಂದ್ರನಾಥ ದತ್ತ
ಇವರ ತಾಯಿ ಭುವನೇಶ್ವರಿ ದೇವಿ ತಂದೆ ವಿಶ್ವನಾಥನತ್ತ.
ಉತ್ತಮ ವೇದಾಂತತ್ವಗಳನ್ನು ಅನುಸರಿಸಿದಂತ ಬಿಟ್ಟ ವ್ಯಕ್ತಿ ಹಾಗೂ ಇವರ ಗುರುಗಳು ರಾಮಕೃಷ್ಣ ಪರಮಹಂಸರು ಅಷ್ಟೇ ಇಲ್ಲದೆ ಹಲವಾರು ಪ್ರಮುಖ ಕೃತಿಗಳನ್ನು ಕೂಡ ರಚನೆ ಮಾಡಿದ್ದಾರೆ ಅವುಗಳೆಂದರೆ ರಾಜಯೋಗ ಕರ್ಮ ಯೋಗ ಭಕ್ತಿ ಯೋಗ ಮತ್ತು ಜ್ಞಾನ ಯೋಗ ವಿಶೇಷವಾಗಿ ರಚನೆ ಮಾಡಿದ್ದಾರೆ ಅಷ್ಟೇ ಅಲ್ಲದೆ. ನರೇಂದ್ರರು 5 ವರ್ಷಗಳ ಕಾಲ ಭಾರತವನ್ನು ಸಂಚರಿಸಿದರು. ಹಾಗೂ ಭಾರತದ ಪರ್ಯಟನೆಗೆ 1888 ರಲ್ಲಿ ಹೊರಟರು ಅವರು ಹೋಗುವಾಗ ಅವರ ಜೊತೆಯಲ್ಲಿ ಕಮಂಡಲು ದಂಡ ಮತ್ತು ಅವರಿಗೆ ಪ್ರಿಯವಾದ ಭಗವದ್ಗೀತೆಯನ್ನು ಒಯ್ಯುತ್ತಿದ್ದರು.
ವಿವೇಕಾನಂದರು ಭಾರತದ ತತ್ವ ಜ್ಞಾನ ಯೋಗ ವೇದಾಂತ ಇವೆಲ್ಲವನ್ನ ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರಚಾರ ಮಾಡಿದರು ಹಾಗೂ ತಮ್ಮ ಗುರುಗಳ ಒಳ್ಳೆಯ ಮನೋಭಾವದ ಕಡೆಗೆ ವಾಲಿದರು. ನಂತರ ಚಿಕಾಗೋ ಪ್ರವಾಸ ಕೈಗೊಂಡರು 1893ರಲ್ಲಿ ಹಾಗೂ ಸಮ್ಮೇಳನದಲ್ಲಿ ಭಾರತೀಯರ ಧಾರ್ಮಿಕತೆಯನ್ನು ಎತ್ತಿ ಹಿಡಿದರು. ದೇಶದ ಬಡ ಜನರಿಗಾಗಿ ಕೆಲಸ ಮಾಡಲು ಕರೆ ನೀಡಿದರು ಅಷ್ಟೇ ಅಲ್ಲದೆ ಹಿಂದೂ ಧರ್ಮದ ಮೂಲ ತತ್ವಗಳಾದ ವೇದಾಂತ ಮತ್ತು ಯೋಗವನ್ನು ಪಶ್ಚಿಮಾತ್ಯ ಜಗತ್ತಿಗೆ ಪರಿಚಯಿಸಿದರು. ಹಾಗೂ ಮಾನವರಲ್ಲಿ ದೈವತ್ವವನ್ನು ಕಂಡರು ಮತ್ತು ಆತ್ಮವಿಶ್ವಾಸ ಧೈರ್ಯ, ಶುದ್ಧತೆ, ತಾಳ್ಮೆ ಮತ್ತು ಏಕಾಗ್ರತೆಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸಬಹುದು ಎಂದು ತಿಳಿಸಿದರು.
ಅವರ ಮುಖ್ಯ ಸಂದೇಶವೆಂದರೆ ಆತ್ಮವಿಶ್ವಾಸ *ನಿನ್ನನ್ನು ನೀನು ನಂಬು ನೀನು ಅಸಾಧ್ಯವಾದನ್ನು ಸಾಧಿಸಬಲ್ಲೆ*
ಹಾಗೂ ಮಾನವನ ಕಲ್ಯಾಣ ಮತ್ತು ಆಧ್ಯಾತ್ಮಿಕತೆಯನ್ನು ಮುಖ್ಯ ಗುರಿಯಾಗಿಟ್ಟುಕೊಂಡು ರಾಮಕೃಷ್ಣ ಮಿಷನ್ 1897ರಲ್ಲಿ ಸ್ಥಾಪಿಸಿದರು.ಹಾಗೂ ವೇದಗಳ ಸಾರವನ್ನು ಆಧುನಿಕ ಸಾರ್ವತ್ರಿಕ ರೂಪದಲ್ಲಿ ಪ್ರಸ್ತುತಪಡಿಸಿದರು.ಎಲ್ಲಾ ಜೀವಗಳಲ್ಲಿ ದೇವರನ್ನು ಕಂಡು ಮಾನವ ಸೇವೆಯ ಮೂಲಕ ದೇವರನ್ನು ಪೂಜಿಸಬೇಕು ಎಂದು ಬೋಧಿಸಿದರು.
ಶಿಕ್ಷಣವೆಂದರೆ ಕೇವಲ ಮಾಹಿತಿ ತುಂಬುವುದಲ್ಲ ಅದು ವ್ಯಕ್ತಿತ್ವ ವಿಕಾಸನ ಮತ್ತು ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಇಂದಿಗೂ ಕೂಡ ಸ್ವಾಮಿ ವಿವೇಕಾನಂದ ಅವರ ಚಿಂತನೆಗಳು ಹಾಗೂ ಆದರ್ಶಗಳು ಜನರಿಗೆ ಉತ್ತಮ ಸ್ಪೂರ್ತಿದಾಯಕ ಸಂದೇಶಗಳಾಗಿವೆ.
ನಾಗರತ್ನ ಎಚ್ ಗಂಗಾವತಿ



