ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪಂಜಾಬ್ ನ ಮೊದಲ ಮಹಿಳಾ ಮುಖ್ಯಮಂತ್ರಿ ರಾಜೇಂದ್ರ ಕೌರ್ ಭಟ್ಟಾಲ್
(ಅಧಿಕಾರಾವಧಿ 21/11/1996 ರಿಂದ 12/02/1997, 83 ದಿನಗಳು)

ರಾಜೆಂದ್ರ ಕೌರ್ ಇವರು 30 ಸೆಪ್ಟೆಂಬರ್ 1945 ರಲ್ಲಿ ಪಂಜಾಬ್ ನ ಲಾಹೋರ್ನಲ್ಲಿ ಜನಿಸಿದರು. ಇವರ ತಂದೆ ಹೀರಾಸಿಂಗ್ ಭಟ್ಟಲ್.  ತಾಯಿ ಹರ್ನಾಮ ಕೌರ್. ಇವರು ಸಂಗ್ರೂರ ಜಿಲ್ಲೆಯ ಲೆಹಗ್ರಾ ಗ್ರಾಮದಲ್ಲಿ ಚಂಚಲಿ ವಾಲಾದ ಲಾಲ್ಸಿಂಗ್ ಸಿದ್ದು ಅವರನ್ನು ವಿವಾಹವಾದರು. ಇವರಿಗೆ ಒಂದು ಗಂಡು ಒಂದು ಹೆಣ್ಣು ಮಗು.

 ರಾಜೇಂದ್ರ ಕೌರ್ ಅವರು 1994ರಲ್ಲಿ  ಚಂಡಿಘಡದಲ್ಲಿ ರಾಜ್ಯ ಶಿಕ್ಷಣ ಸಚಿವರಾದರು. ಇವರು ಹರ್ಚರಣಸಿಂಗ್ ಅವರ ರಾಜೀನಾಮೆಯ ನಂತರ 21.11.1996 ರಂದು ಪಂಜಾಬ್ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಇವರು ಮುಖ್ಯಮಂತ್ರಿ ಆಗಿದ್ದಾಗ ಸಣ್ಣ ರೈತರಿಗೆ ಕೊಳವೆಬಾವಿ ನೀರಾವರಿಗೆ ಸಂಬಂಧಿಸಿದ ಉಚಿತ ವಿದ್ಯುತ್ ಅನುದಾನವನ್ನು ಒದಗಿಸುವ ಹಲವು ಯೋಜನೆಗಳನ್ನು ಜಾರಿಗೆ ತಂದರು. ಹಾಗೇಯೆ ಇವರು ತಮ್ಮ ಅಧಿಕಾರ ಅವಧಿಯಲ್ಲಿ ಜನಪರ ಹಲವಾರು ಯೋಜನೆಗಳನ್ನು ಜಾರಿಗೆ ತಂದರು.  1997ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸೋತಿದ್ದಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು. ನಂತರ ಮೇ ತಿಂಗಳಲ್ಲಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ನಂತರ ವಿಧಾನಸಭಾ ಶಾಸನಸಭೆಯಲ್ಲಿ ವಿರೋಧ ಪಕ್ಷದ ನಾಯಕಿಯಾಗಿ 12/02/ 1997 ರಿಂದ 10/10/1998 ವರೆಗೆ ಕಾರ್ಯನಿರ್ವಹಿಸಿದರು. ನಂತರ 6/01/2004 ರಿಂದ 1/03/ 2007 ರವರೆಗೆ ಪಂಜಾಬ್ ನ ಎರಡನೆಯ ಉಪಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿದರು. ಇವರು 1992 ರಿಂದ ಲೆಹ್ರಾ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಐದು ಬಾರಿ ಗೆದ್ದಿದ್ದಾರೆ.


About The Author

Leave a Reply

You cannot copy content of this page

Scroll to Top