ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್

ಅವರಿವರಿಗಾಗಿ ಅಳುವುದಿಲ್ಲವೆಂದು ಮಾತು ಕೊಟ್ಟಿದ್ದೇನೆ
ಅನ್ಯರನು ಮನ ಸೇರಿಸುವುದಿಲ್ಲವೆಂದು ಮಾತುಕೊಟ್ಟಿದ್ದೇನೆ
ಮನ ಸೇರಿದ ಮೇಲೆ ಬದಲಾಗಿಯೇ ಬಿಡುವ ಜನರಿವರು
ಎಲ್ಲರನೂ ಹಿತೈಷಿಗಳಂತೆ ಭಾವಿಸುವುದಿಲ್ಲವೆಂದು ಮಾತು ಕೊಟ್ಟಿದ್ದೇನೆ
ಸನಿಹ ಬರುವುದೇ ತಡ ಎದೆಗಿರಿಯಲು ಹುನ್ನಾರ ನಡೆಸುವರು
ಹೂವಂತೆ ಕಂಡಿದ್ದೆಲ್ಲವನ್ನು ಮುದ್ದಿಸುವುದಿಲ್ಲವೆಂದು ಮಾತು ಕೊಟ್ಟಿದ್ದೇನೆ
ಮುಂದೊಂದು ಹಿಂದೊಂದು ಮುಖವಾಡ ಧರಿಸುವರು ಎಲ್ಲರೂ
ಹುಸಿ ಮಾತುಗಳಿಗೆ ಸೋಲುವುದಿಲ್ಲವೆಂದು ಮಾತು ಕೊಟ್ಟಿದ್ದೇನೆ
ನಿನ್ನಷ್ಟಕ್ಕೆ ನೀನಿರುವುದೇ ಬಲು ಒಳ್ಳೆಯದು ವಾಣಿ
ನಗುವ ನೀಡಿ ಕಣ್ಣೀರಿನ ಕಾಣಿಕೆ ಪಡೆಯುವುದಿಲ್ಲವೆಂದು ಮಾತು ಕೊಟ್ಟಿದ್ದೇನೆ
̲——————————————————————————————————–
ವಾಣಿ ಯಡಹಳ್ಳಿಮಠ


Beautiful
Thank you