ಪ್ರಶಸ್ತಿ ಸಂಗಾತಿ
ಲೇಖಕಿ ಎನ್ .ಆರ್ .ರೂಪಶ್ರೀ
ಅವರಿಗೆ 2025 ನೇ ಸಾಲಿನ
“ಸಾಹಿತ್ಯ ಸುಗಂಧ” ಪ್ರಶಸ್ತಿ



ಮೈಸೂರಿನ ರೋಟರಿ ಸಭಾಂಗಣದಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಲೇಖಕಿ ಎನ್ .ಆರ್ .ರೂಪಶ್ರೀ ಅವರಿಗೆ 2025 ನೇ ಸಾಲಿನ “ಸಾಹಿತ್ಯ ಸುಗಂಧ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸೌಗಂಧಿಕಾ ಪ್ರಕಾಶನ ಮತ್ತು ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು . ಕಲ್ಬುರ್ಗಿ ಕಾಲೇಜಿನ ಪ್ರಾಧ್ಯಾಪಕರು ಖ್ಯಾತ ಗಜಲ್ ಕವಿಗಳಾದ ಮಲ್ಲಿನಾಥ್ ಎಸ್ ತಳವಾರ್ ಗಜಲ್ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕವಯತ್ರಿ ಹೇಮಗಂಗಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಬರಹಗಾರರಾದ ಎಂ.ಬಿ .ಸಂತೋಷ್ ಮಾಡಿದರು. ಮಂಗಳೂರಿನ ಗಣೇಶ್ ಪ್ರಸಾದ್ ಪಾಂಡೇಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕವಯತ್ರಿ ಸೌಗಂಧಿಕಾ ಜೋಯಿಸ್ ಅವರ ಗಜಲ್ ಸಂಕಲನ ಲೋಕಾರ್ಪಣೆಗೊಂಡಿತು.



