ಕಾವ್ಯ ಸಂಗಾತಿ
ಡಾ. ರೇಣುಕ ಹಾಗರಗುಂಡಗಿ
ʼಅತಂತ್ರ ನೀನಾದೆ ಮಗಳೇʼ


ತಮ್ಮ ದಾಹಕ್ಕಾಗಿ ನಿನ್ನ
ಬಲಿ ಪಡೆದರು ನೋಡು ಕಂದ
ಅವರ ಹೀನ ಕೃತ್ಯ ನೋಡಿ
ಯಾರಿಗಿಲ್ಲ ಸಮಾಧಾನ
ಬದುಕೋ ಅರ್ಹತೆ ಇಲ್ಲ ಅವರಿಗೆ
ಬದುಕಿ ಮಾಡೋದೇನಿದೆ
ಎದೆಗೆ ಗುಂಡು ಹಾಕಿಬಿಡಲಿ
ಪಾಪ ತಾಗಧ್ಯಾರಿಗೆ
ನೀನು ಹೋದೆ ಎಲ್ಲ ಬಿಟ್ಟು
ಕನಸಿಗಳಿಗೆ ಕೊಳ್ಳೆ ಇಟ್ಟು
ಹೆಣ್ಣಾಗಿ ಹುಟ್ಟಿ ಬಂದೆ
ಎಂಬ ಕಾರಣದಿಂದಲೆ
ಹೆಣ್ಣು ಜನ್ಮವೆ ಬೇಡವೆಂದು
ಬೃಣಹತ್ತೆ ಒಂದೆಡೆ
ಅಲ್ಲಿ ಬದುಕಿಬಂದ ಜೀವದ
ಅಂತ್ಯ ಇಲ್ಲಿ ಆಯಿತೇ
ಶಾಪಗ್ರಸ್ಥಳಲ್ಲ ಮಗಳೇ
ನೀನು ಜನ್ಮದಾತೆಯು
ನಿನ್ನ ಒಡಲಿಗೆ ಬೆಂಕಿ ಇಟ್ಟು
ನಗುವ ವಿಕೃತ ಮನಗಳು
ಬೇಕು ರಕ್ಷಣೆ ನಿನಗೆ ಮಗಳೇ
ಎಲ್ಲಿ ಹೋಗಿ ಹುಡುಕುವೆ ?
ತಾಯಿ ಗರ್ಭದಿ ಇಲ್ಲನೆಮ್ಮದಿ
ಎಷ್ಟು ಅತಂತ್ರ ನೀನಾಗಿ ಬಿಟ್ಟೆ
——————
ಡಾ. ರೇಣುಕ ಹಾಗರಗುಂಡಗಿ



